ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ಅನುಭವವಾಗಿದೆಯೇ?
ದೇವರಿಗೆ ನಾಮಗಳು ಹಲವು. ದೆವ್ವಗಳಿಗೂ ಸಹ. ಪಿಶಾಚಿ, ಮೋಹಿನಿ, ಗಾಳಿ, ಭೂತ, ಜಿನ್ ( ಕುಡಿಯುವ ಜಿನ್ ಅಲ್ಲ), ಸೈತಾನ್, ghost, apparition....ಇನ್ನೂ ಏನೇನೋ. ನನಗಂತೂ ಅದರ ಅನುಭವ ನೇರವಾಗಿ ಆಗಿಲ್ಲದಿದ್ದರೂ ಆಗಾಗ ಯಾರೋ ಬಂದು ಹಿಂದೆ ನಿಂತ ಹಾಗೆ, ಅಥವಾ ದೂರದಲ್ಲಿ ನಡೆದಾಡುವ ಹಾಗೆ ತೋರುತ್ತದೆ. ಚಿಕ್ಕಂದಿನಿಂದ ನನ್ನ ತುಂಟಾಟಕ್ಕೆ ಕಡಿವಾಣ ಹಾಕಲು ಚಿಕ್ಕಮ್ಮಂದಿರು ಈ ದೆವ್ವದ ಭಯ ಕೂರಿಸಿ ಬದುಕಿನುದ್ದಕ್ಕೂ ನರಳುವಂತೆ ಮಾಡಿದ್ದಾರೆ. ನನ್ನ ಭಯ ಒಂದು ರೀತಿಯ claustrophobic ( ಅಂದರೆ ಕೋಣೆಯಲ್ಲೋ, ಮನೆಯಲ್ಲೋ ಇದ್ದಾಗ ಮಾತ್ರ ತೋರುವ ಭಯ) ಎನ್ನಬಹುದು. ಹೊರಹೋದರೆ, ರಾತ್ರಿ ಎಷ್ಟೇ ಹೊತ್ತಾದರೂ, ನನಗೇನೂ ಅನ್ನಿಸುವುದಿಲ್ಲ. ಮನೆಯೊಳಕ್ಕೆ ಹೊಕ್ಕ ಕೂಡಲೇ ಆವರಿಸುತ್ತದೆ "ಗಾಳಿ". ಅಥವಾ ಗಾಳಿಯ ಭಯ.
omme nanna ಪತ್ನಿಯನ್ನು ಕರೆತರಲು ಕಾರಿನಲ್ಲಿ ಹೊರಟೆ. ತಮ್ಮನಿಗೆ ಏನೋ ಕೆಲಸವಿದ್ದುದರಿಂದ ನೀನೆ ಡ್ರೈವ್ ಮಾಡ್ ಕೊಂಡು ಹೋಗು ಎಂದು ಹೇಳಿದ. ಭಾರತದಲ್ಲಿ ನಾನು ಡ್ರೈವ್ ಮಾಡಿರೋದು ಕಡಿಮೆಯೇ. ಕುಡಿದೋ, ನಿರ್ಲಕ್ಷ್ಯದಿಂದಲೋ ವಾಹನ ಚಲಾಯಿಸುವವರ ಗಾಡಿಗೆ ಸಿಕ್ಕಿ sandwich ಆಗೋದು ನನಗಷ್ಟು ಇಷ್ಟವಿಲ್ಲ. ಸರಿ ಸಂಜೆಗೆ ಹೊರಟೆ. ನಮ್ಮ ಮನೆಯಿಂದ ಸುಮಾರು ೧೦೦ ಕಿ. ಮೀ ಅತ್ತೆಯ ಮನೆ. ಘಾಟಿ ಸಹ ಸಿಗುತ್ತದೆ. ಆದ್ರೆ ಬಹು ಸುಂದರವಾದ ದಾರಿ. ಮರಳು ನೋಡಿ ನೋಡಿ ಬೇಸತ್ತ ನನಗೆ ಸಿಗುವ ಪ್ರಕೃತಿಯ ಸೊಬಗು. ಸ್ವಲ್ಪ ದೂರ ಹೋದ ಕೂಡಲೇ ಸೂರ್ಯಾಸ್ತದ ಪ್ರಾರ್ಥನೆಯ ಸಮಯ ಆದ್ದರಿಂದ ರಸ್ತೆಯಲ್ಲಿ ಸಿಕ್ಕ ಮಸೀದಿಗೆ ಹೋಗಿ ಪ್ರಾರ್ಥನೆ ಮುಗಿಸಿ ಸ್ವಲ್ಪ ದೂರ ಹೋಗುತ್ತಲೇ ಯಾರೋ ಮಾತಾಡುತ್ತಿರುವ ಶಬ್ದ. ಹಿಂದಿನ ಸೀಟಿನಿಂದ. ಅಮ್ಮಾ, ಅಯ್ಯೋ, ಗಂಟಲು ಒಣಗಿ ಹೃದಯ ಬಾಯಿಗೆ. ಎಲ್ಲಿಂದ ಹತ್ತಿರಬೇಕು ಮೋಹಿನಿ. ಹೌದು ಮಸೀದಿಯ ಹತ್ತಿರ ನಿಲ್ಲಿಸಿದ್ದೆನಲ್ಲ, ಅಲ್ಲೇ ಹತ್ತಿರಬೇಕು. ಆದರೆ ಮಸೀದಿಯ ಹತ್ತಿರ ಮೋಹಿನಿ ಇರೋಲ್ಲ. ಜಿನ್ ಗಳಿರುತ್ತವಂತೆ. ಚಿಕ್ಕಮ್ಮಂದಿರು ದೆವ್ವದ ಭಯದ ಜೊತೆ ಭಾಗ್ಯಕ್ಕೆ ಒಂದಿಷ್ಟು ಮಂತ್ರಗಳನ್ನೂ ಹೇಳಿಕೊಟ್ಟಿದ್ದರು. ಅವನ್ನು ಪಠಿಸುತ್ತಾ ಇದ್ದಾಗ ಮತ್ತೊಮ್ಮೆ ಶಬ್ದ. ಈಗ ತಿಳಿಯಿತು ಈ ಸ್ವರಗಳ ಗುಟ್ಟು. FM radio ಆನ್ ಮಾಡಿ ಇಟ್ಟಿದ್ದರಿಂದ ಎಲ್ಲಿನದೋ ಸ್ಟೇಶನ್ ಆಗಾಗ ಈ ಶಬ್ದಗಳನ್ನು ಬಿತ್ತರಿಸುತ್ತಿತ್ತು. ಬದುಕಿದೆಯಾ ಬಡಜೀವವೇ ಎನ್ನುತ್ತಾ ವೇಗವಾಗಿ ಕಾರನ್ನು ಚಲಾಯಿಸಿ ನನ್ನ ಅತ್ತೆ ಮನೆ ಸೇರಿಕೊಂಡೆ.
ಭೂತದ ವಿಷಯ ಬಂದಾಗ ಹಲವರು ವಿವಿಧ "ಭೂತಮಯ" ವರದಿಗಳನ್ನು ನೀಡುತ್ತಾರೆ. ಬೀದಿಯಲ್ಲಿ ಯಾವುದೋ ಮಗು ಅಳುತ್ತಿರುವ ಸದ್ದು, ಇದ್ದಕ್ಕಿದ್ದಂತೆ ರೇಡಿಯೋ ಆನ್ ಆಗೋದು, ಹೊಳೆ ಸಾಲಿನಿಂದ ಬಿಳಿ ಸೀರೆ ಉಟ್ಟು, ಒದ್ದೆಯಾದ ಉದ್ದದ ಕೂದಲನ್ನು ಇಳಿಬಿಟ್ಟು ನಡೆಯುತ್ತಿದ್ದ ವಿಷಯ, ಹೀಗೆ ಹತ್ತು ಹಲವು ಕುತೂಹಲಕರ ಸುದ್ದಿಗಳು ಕೇಳಲು ಸಿಗುತ್ತವೆ.
- Login or register to post comments
- 2008 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ಇದುವರೆಗೂ ನನಗೆ ಅನುಭವ ಆಗಿಲ್ಲ ಮತ್ತು ಆಗುವುದೂ ಇಲ್ಲ. ಊರಿಲ್ಲಿ ಇದ್ದಾಗ ಅಮವಾಸ್ಯೆಯೋ, ಹುಣ್ಣಿಮೆಯೋ ಎನ್ನದೆ ಬ೦ದೂಕು ಹಿಡಿದು ಹಲವಾರು ರಾತ್ರಿ ಓಡಾಡಿದ್ದೇನೆ. ಸ್ಮಶಾನ ಹತ್ತಿರ ಭಯವಾಗಿದ್ದೂ ಉ೦ಟು, ಅದರೆ ಯಾವುದೇ ದೆವ್ವ, ಭೂತದ ಪರಿಚಯವಿಲ್ಲ. ಸಾಮಾನ್ಯವಾಗಿ ನಮ್ಮೂರಿನ ಕಡೆ ಹೊಲ ಗದ್ದೆಗಳಿಗೆ ನೀರನ್ನು ಹಾಯಿಸಲು ಹೋಗುತ್ತಿದ್ದೆವು, ಅರೆಕಲ್ಲಿನ ಜಾಗಗಳಲ್ಲಿ ಬೆ೦ಕಿ ಕಾಯಿಸುತ್ತ, ಹರಟುತ್ತಲೋ, ಸರದಿಯ ಪ್ರಕಾರ ಪುಟ್ಟ ಲ್ಯಾಟಿನ್ ಹಿಡಿದು ಗದ್ದೆಯ ಬದುವುನಲ್ಲಿ ಸಾಗಿ ನೀರವ ರಾತ್ರಿಯಲ್ಲಿ ನೀರನ್ನು ಹಾಯಿಸುತ್ತ ಒಬ್ಬರ ಗದ್ದೆಯ ನ೦ತರ ಇನ್ನೊಬ್ಬರ ಗದ್ದೆ. ಹೀಗೆ ಸಾಗಿತ್ತಿತ್ತು ನಮ್ಮ ಹಳ್ಳಿಯ ಜೀವನ. ನಮ್ಮ ಗೆಳೆಯರ ಬಳಗ ಕೂಡ ನ೦ಬುತ್ತಿರಲಿಲ್ಲ. ಭಯ ಇದ್ದುದು ಮಾತ್ರ ಹಾವುಗೆಳಿಗೆ ಅಸ್ಟೆಯ. ಇದು ಚಿಕ್ಕ ಮಕ್ಕಳನ್ನು ನಿಯ೦ತ್ರಿಸಲೋ ಅಥವ ಜ್ಯೋತಿಷಿ ಎನಿಸಿಕೊ೦ಡವರು ತಮ್ಮ ಬೇಳೆ ಬೇಯಿಸಿಕೊಳ್ಳಲೋ ಅಥವ ಇನ್ಯಾರನ್ನೋ ಭಯಪಡಿಸಲು ಬಳಸುವ ತ೦ತ್ರ ಎನ್ನಬಹುದು.
ಹಳ್ಳಿ ರಾತ್ರಿಗಳ ಹೆಚ್ಚಿನ ಮಾಹಿತಿಗೆ "ಶಿಕಾರಿಯ ದಿನಗಳು" ಲೇಖನ ಓದಿ.
http://sampada.net/a...
http://sampada.net/a...
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ದೇವರನ್ನು ನಂಬುವವರಿಗೆ, ದೆವ್ವವನ್ನು, ಸೈತಾನನನ್ನು ನಂಬದ ಬೇರೆ ದಾರಿಯಿಲ್ಲ. ಏಕೆಂದರೆ ಒಳ್ಳೆಯದೆಲ್ಲದರ ಸಾಕಾರ ದೇವರಾದರೆ, ಕೆಟ್ಟದ್ದನ್ನು ಪ್ರತಿನಿಧಿಸುವುದಕ್ಕೆ ಸೈತಾನ ಬೇಕೇ ಬೇಕು.
ದೇವರನ್ನು ನಂಬದ ನನ್ನ ಮೇಲೆ ದೆವ್ವಗಳಿಗೂ ಆಸಕ್ತಿಯಿಲ್ಲವೇನೋ!
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ಹು.. ದಯ್ಯ, ದೆವ್ಚ ಇವೆಲ್ಲ ದೇವರಷ್ಟೇ ಸತ್ಯ!
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ಯುನೀಕ್, ಯಾರಿಗಾದರೂ ಭೂತ ಬಡಿಯುವುದಿದ್ದರೆ ಅದು ತಮಗೆ ಬಡಿಯಲಿ ಅನ್ನೋ ಇಚ್ಛೆ ನನ್ನದು. ಆಗಲಾದರೂ ಆ ಪರಮಾತ್ಮನಲ್ಲಿ ಬರಬಹುದು ನಂಬಿಕೆ ತಮಗೆ, ಏನಂತೀರಿ? :-)
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ಪರಮಾತ್ಮನಿಗೆ ಹೋಲಿಸಿದರೆ ಈ ದೆವ್ವಗಳೇ ಇಂಟರೆಸ್ಟಿಂಗ್! ದರ್ಶನವಾಗುವುದಿದ್ದರೆ ದೆವ್ವದ್ದೇ ಆಗಲಿ! ದೇವರ ಮೇಲೆ ನಂಬಿಕೆ ಸೆಕಂಡರಿ ದೆವ್ವ ಒಮ್ಮೆ ಕಂಡು ಬಿಟ್ಟರೆ ನಾನು ಆ ದೆವ್ವದ ಪರಮ ಭಕ್ತನಾಗಿಬಿಡುವೆ! ನಿಮ್ಮ ಹಾರೈಕೆಗೆ ಧನ್ಯವಾದ.
ಅಂದಹಾಗೆ ದೆವ್ವ ನೋಡಬೇಕೆಂಬ ನನ್ನ ಬಯಕೆ ಕೇಳಿದ ಗೆಳೆಯ “ನೋಡುತ್ತಿ... ನೋಡುತ್ತಿ.. ಮದುವೆಯಾಗ್ತೀಯಲ್ಲ ಹೇಗೂ” ಅಂದಿದ್ದ! ನೀವು ಭಗವಂತನನ್ನು ನಂಬುತ್ತೀನಿ ಎಂದಿರಿ, ದೆವ್ವವನ್ನೂ ನಂಬುವಿರಾ?
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ನಿಜವಾಗ್ಲೂ ಇವೆ..........
ನಮ್ಮೆಲ್ಲರ ಮನಗಳಲ್ಲಿ. ಅನುಭವಂತೂ ಆಗುತ್ತಲೇ ಇರುತ್ತದೆ. ;)
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ಎಲ್ಲೋ ಕೇಳಿದ ಅಥವ ನೋಡಿದ ನೆನಪು "ಇಲ್ಲ ಎ೦ದುಕೊಳ್ಳ ಬೇಡಿ, ಇದೆ ಎ೦ದುಕೊಳ್ಳಿ"
:)
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
>>"ಇಲ್ಲ ಎ೦ದುಕೊಳ್ಳ ಬೇಡಿ, ಇದೆ ಎ೦ದುಕೊಳ್ಳಿ"
ಡಾ. ರಾಜ್ ಅಭಿನಯದ 'ಭಾಗ್ಯದ ಲಕ್ಷ್ಮಿ ಬಾರಮ್ಮ' ಚಿತ್ರದಲ್ಲಿ..
-ಅನಿಲ್
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ಗೊತ್ತಾಯ್ತು
:)
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ಪ್ರಿಯ ಅಬ್ದುಲ್,
ನಮ್ಮ ಊರಲ್ಲಿ, ಅದರಲ್ಲೂ ನಮ್ಮ ತಂದೆಯವರ ಹತ್ತಿರ ದೆವ್ವ ಭೂತಗಳ ಹಲವಾರು ಸ್ವಾರಸ್ಯಕರ ಕತೆಗಳಿವೆ. ನಾನು ಅವುಗಳನ್ನು ಆನಂದಿಸಿದ್ದೇನೆ ಹೊರತು ನಂಬಿಲ್ಲ.
ದೆಹಲಿಯಲ್ಲಿ ಒಮ್ಮೆ ನನ್ನ ಸಹೋದ್ಯೋಗಿ ರಾತ್ರಿ ಹೊತ್ತು ಲ್ಯಾಬ್ ನಲ್ಲಿ ಕೆಲಸ ಮಾಡುತ್ತಿದ್ದ. ಅವನಿಗೆ ಪಕ್ಕದ ಬೀಗ ಹಾಕಿರುವ ಲ್ಯಾಬ್ ನ ಒಳಗೆ ಒಬ್ಬ ಹುಡುಗಿ ಕುಳಿತಿದ್ದಾಳೆ ಎಂಬಂತೆ ಭಾಸವಾಯಿತಂತೆ. ಒಬ್ಬಳು ಹುಡುಗಿ ಅದೇ ಕಟ್ಟಡದಲ್ಲಿ ಕೆಲ ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂಬ ವಿಷಯ ಕೇಳಿದ್ದ ಅವನು ತಾನು ಮಾಡುತ್ತಿದ್ದ ಕೆಲಸವನ್ನು ಅಷ್ಟಕ್ಕೇ ಬಿಟ್ಟು ಅಲ್ಲಿಂದ ಪಲಾಯನಗೈದಿದ್ದ.
ಮರುದಿನ ರಾತ್ರಿ ನಾನು ಬಹಳ ಹೊತ್ತು ಕಾಯ್ದರೂ (ರಾತ್ರಿ ಸುಮಾರು ೯ ರಿಂದ ೪ ರವರೆಗೆ ಎಂದು ನೆನಪು; ನಂತರ ನಿದ್ದೆ ತಡೆದುಕೊಳ್ಳಲು ಆಗದೆ ಹಾಸ್ಟೆಲಿಗೆ ಹಿಂತುರಿಗಿದ್ದೆ) ನನಗೆ ಯಾವ ಹುಡುಗಿಯ ದೆವ್ವವಾಗಲೀ, ಹುಡುಗಿಯಾಗಲೀ, ಕಾಣಿಸಲಿಲ್ಲ. ಮಧ್ಯದಲ್ಲೊಮ್ಮೆ,
ಗ್ರೌಂಡ್ ಫ್ಲೋರ್ನಿಂದ ಒಮ್ಮೆಲೇ ಶೀಟಿಯ ಶಬ್ದ ಕೇಳಿದಾಗ ಕೊಂಚ ಗಾಬರಿಗೊಂಡಿದ್ದು ನಿಜ. ಅಲ್ಲಿಗೆ ಹೋಗಿ, 'ಶೀಟಿ ಓದಿದ್ದು ಸೆಕ್ಯೂರಿಟಿ ಗಾರ್ಡ್' ಎಂದು ದೃಢಪಡಿಸಿಕೊಂಡ ಮೇಲೆ ಸಮಾಧಾನವಾಗಿತ್ತು. ಅದರ ನಂತರವೂ ಎಷ್ಟೋ ರಾತ್ರಿಗಳನ್ನು ನಾನೂ ನನ್ನ ಬೇರೆ ಸಹೋದ್ಯೋಗಿಗಳೂ ಅಲ್ಲೇ ಕಳೆದಿದ್ದಿದೆ. ಯಾರಿಗೂ ದೆವ್ವ ಕಾಣಿಸಿಲ್ಲ.
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ನನ್ನ ಭೂತಮಯ ಪ್ರಬಂಧ ಪ್ರಕಟಿಸಿ ಹಲವು ದಿನಗಳಾದರೂ ಯಾವ ಪ್ರತಿಕ್ರಿಯೆಯೂ ಕಾಣದಾದಾಗ ನಾನಂದುಕೊಂಡೆ, ಪುಕ್ಕಲ ನಾನು ಮಾತ್ರ ಅಲ್ಲ, ಸಂಪದಿಗರೂ ಸಹ ಅಂತ. ಏಕಾಏಕಿ ಭೂತದಂತೆ ಬಂದೆರಗಿದವು ಪ್ರತಿಕ್ರಿಯೆಗಳು. ಎಲ್ಲರಿಗೂ ಸವಿನಯ ವಂದನೆಗಳು.
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ಇದ್ದ ಬದ್ದ ದೆವ್ವಗಳೆಲ್ಲಾ ಮನುಷ್ಗ್ಯರ ವರ್ತನೆಗಳೆಲ್ಲಾ ತಮಗಿಂತ ಕ್ರೂರವಾದುದೂ ಹಾಗು ವಿಚಿತ್ರ ವಾದುದೂ ಆಗಿರುವುದನ್ನು ನೋಡಿ ಕಂಬಿ ಕಿತ್ತಿವೆ. ಹಾಗಾಗಿ ದೆವ್ವವೂ ಇಲ್ಲ ಭೂತ ಪ್ರೇತಗಳೂ ಇಲ್ಲ
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
>>> ದೆವ್ವವೂ ಇಲ್ಲ ಭೂತ ಪ್ರೇತಗಳೂ ಇಲ್ಲ
ಇಲ್ಲವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಗೆ ಹೇಳುವಿರಿ?
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ನಿಮ್ಮದೇ ಥಿಯರಿ. ದೇವರ ಬಗೆಗಿನದು
ಕಾಣಿಸದಿದ್ದಲ್ಲಿ ಅನುಭವಿಸದಿದ್ದಲ್ಲಿ ಅದು ಇಲ್ಲ. ನಿಮ್ಮಿಂದ ಕಲಿತದ್ದು .
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
selective applicationನ್ನಾ? ನನ್ನ ಥಿಯರಿಯನ್ನು ದೆವ್ವದ ಬಗೆಗೆ ಒಪ್ಪಿದಿರಿ, ಓಕೆ. ದೆವ್ವ ಪದವನ್ನು ತೆಗೆದು ‘ದೇವರು’ ಹಾಕಿಕೊಳ್ಳಿ...
ಕಾಣಿಸದಿದ್ದಲ್ಲಿ ಅನುಭವಿಸದಿದ್ದಲ್ಲಿ ಅದು ಇಲ್ಲ!
ಅಸಲಿಗೆ ನನ್ನದು ಯಾವ ಥಿಯರಿಯೂ ಇಲ್ಲ. ರಸ್ತೆಯ ಕೊನೆಯಲ್ಲಿ ದೋಸೆ ಕ್ಯಾಂಪ್ ಇದೆ ಎಂದು ಗೆಳೆಯ ಹೇಳಿದರೆ ಬಾ ತೋರಿಸು ಎನ್ನುವೆ. ಕ್ಯಾಂಪ್ ಇದೆ ಎನ್ನುವವನು ಅದನ್ನು ಕಂಡಿದ್ದಾನೆ ಎಂದರ್ಥ, ಅದನ್ನು ತೋರಿಸಬೇಕಾದ್ದು, ಅದು ಇದೆ ಎಂದು ಸಾಬೀತು ಮಾಡಬೇಕಾದ್ದು ಆತನ ಜವಾಬ್ದಾರಿ. ಹಾಗೆಯೇ, ನನಗೆ ಚಿಕ್ಕಂದಿನಿಂದ ದೇವರು ಇದ್ದಾನೆ ಅಂತ ಹೇಳಿದರು. ಕೇಳಿಕೊಂಡೆ ಬೆಳೆದೆ. ಈಗ ದೇವರಿದ್ದಾನೆ ಎನ್ನುವುದಕ್ಕೆ ನನಗೆ ಯಾವ ಆಧಾರವೂ, ಯಾರ ತರ್ಕವೂ ಸಮರ್ಪಕವಾಗಿ ಕಂಡಿಲ್ಲ. ಹೀಗಾಗಿ ನನಗದರಲ್ಲಿ ನಂಬಿಕೆಯಿಲ್ಲ. ನಾನಾಗಿ ಕಂಡುಕೊಳ್ಳುವವರೆಗೆ ನಾನದನ್ನು ನಂಬಬೇಕಿಲ್ಲ.
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ಸುಪ್ರೀತ್, ನಿಮಗೊಬ್ಬ ಪ್ರಾಣ ಸ್ನೇಹಿತ ಇದ್ದಾನೆಯೇ? ಆಕಸ್ಮಾತ್ ಇದ್ದರೆ ಅವನಿಗೆ ನಿಮ್ಮ ಮೂಗು ಬಾಯಿಗಳನ್ನು ಬಲವಾಗಿ ಐದು ನಿಮಿಷಗಳವರೆಗೆ ಅದುಮಿ ಹಿಡಿಯಲು ಹೇಳಿ! ಆ ಐದು ನಿಮಿಷಗಳಾದ ನಂತರ ನಿಮ್ಮ ದೆವ್ವ-ದೇವರ ಬಗೆಗಿನ ಭಾವನೆಗಳು ಬದಲಾಗಬಹುದು!!
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ಒಕೆ, ಎಷ್ಟು ಸಮಯದವರೆಗೆ ಹಾಗೆ ಉಸಿರುಕಟ್ಟಿಕೊಳ್ಳಬೇಕು? (ಈ ಪ್ರಯೋಗ ಮಾಡಲು ತುದಿಗಾಲಲ್ಲಿ ನಿಲ್ಲುವ ಅನೇಕ ಮಂದಿ ಪ್ರಾಣಗೆಳೆಯರು ನನಗಿದ್ದಾರೆ :) )
ಏಕೆಂದರೆ ಮೆದುಳಿಗೆ ಆಮ್ಲಜನಕದ ಸಪ್ಲೈ ಕುಂಠಿತವಾದಾಗ hallucinationಗಳು ಉಂಟಾಗುತ್ತವೆ. ಇದನ್ನು ಲ್ಯಾಬಿನಲ್ಲೇ ಮಾಡಿ ತೋರಿಸಬಹುದು. ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ಹಲವರು ‘ದೇವರ’ನ್ನು ಕಂಡದ್ದಕ್ಕೆ ಅಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆ ಇದ್ದದ್ದೇ ಕಾರಣ.
ಒಮ್ಮೆ ನೀವು ಹೇಳಿದ ಪ್ರಯೋಗ ಮಾಡಿದರೆ ಏನು ತಿಳಿಯುತ್ತದೆ? ದೇವರನ್ನು ನಂಬದವನು ದೇವರನ್ನು ನಂಬಲು ಶುರು ಮಾಡುವನೇ? ಕ್ರಿಶ್ಚಿಯನ್ ಕ್ರಿಸ್ತನೊಬ್ಬನೇ ದೇವರು ಎಂದು ನಂಬುವನೇ? ಮುಸಲ್ಮಾನ ಆಕಾರವಿಲ್ಲದ ಅಲ್ಲಾಹುವೊಬ್ಬನೇ ದೇವರು ಎಂದು ನಂಬುವನೇ? ಹಿಂದೂ ಇರುವ ಮುಕ್ಕೋಟಿ ದೇವರಲ್ಲಿ ಯಾರನ್ನು ನಂಬುವನು? ತನ್ನ conditioning ತಕ್ಕಂತೆ ಆತ ನಂಬುವನಾದರೆ ಪ್ರಯೋಗದ ತಾತ್ಪರ್ಯವೇನು?
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
:D
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ಹಾಗಾದಲ್ಲಿ, ನೀವು ವಿಲವಿಲ ಒದ್ದಾಡುವವರೆಗೂ ನಿಮ್ಮನ್ನು ಉಸಿರುಗಟ್ಟಿಸಿದ ನಿಮ್ಮ ಆ ಪ್ರಾಣ ಸ್ನೇಹಿತನೇ ದೆವ್ವ! ಹಾಗೆ ಉಸಿರುಗಟ್ಟಿದ ನಂತರ ನೀವು ಒಳಗೆಳೆದುಕೊಳ್ಳಲು, ಮತ್ತೆ ಜೀವಂತವಾಗಲು ನಿಮಗೆ ಸಿಕ್ಕ ಗಾಳಿಯೇ ದೇವರು!! ಇದು ತುಂಬಾ ಸಿಂಪಲ್ ಥಿಯರಿ, ಜಾಸ್ತಿ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಒಮ್ಮೆ ಪರೀಕ್ಷಿಸಿ ನೋಡಿ, ನಿಮಗೇ ತಿಳಿಯುತ್ತದೆ.
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
>>> ಹಾಗೆ ಉಸಿರುಗಟ್ಟಿದ ನಂತರ ನೀವು ಒಳಗೆಳೆದುಕೊಳ್ಳಲು, ಮತ್ತೆ ಜೀವಂತವಾಗಲು ನಿಮಗೆ ಸಿಕ್ಕ ಗಾಳಿಯೇ ದೇವರು!!
ಹೌದೇ? ಇಷ್ಟೇನಾ ದೇವರು, ದೆವ್ವವೆಂದರೆ?
ಪಾಪ ಈ ಆಸ್ತಿಕರು ಅದೆಷ್ಟು ಕಷ್ಟ ಪಡುತ್ತಿದ್ದರಲ್ಲವೇ?
ನಾನು ಜೀವಂತವಾಗಿರಲಲು ಒಳೆಗೆಳೆದುಕೊಳ್ಳುವುದು ಗಾಳಿಯಾಗಿರುವಾಗ ಅದನ್ನು ಗಾಳಿ ಎಂದರೆ ಸಾಕಲ್ಲವೇ? ದೇವರು ಅಂದ ತಕ್ಷಣ ಅದರಲ್ಲೇನಾದರೂ ಬದಲಾವಣೆಯಾಗುತ್ತದೆಯೇ? ಅಲ್ಲದೆ ಇದರಲ್ಲಿ ನಂಬುವಂಥದ್ದೇನಿದೆ? ದೇವರನ್ನು ನಂಬದ ನಾನು ಗಾಳಿಯನ್ನು ಎಳೆದುಕೊಂಡರೂ ಬದುಕುವೆ, ದೇವರನ್ನು ನಂಬುವ ನೀವು ಎಳೆದುಕೊಂಡರೂ ಬದುಕುವಿರಿ!
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ನೀವು ಗಾಳಿಯನ್ನು ಎಳೆದುಕೊಳ್ಳಲು ಆಗದಿದ್ದಾಗ ಏನಾಗುತ್ತದೆ? ಅದನ್ನೊಮ್ಮೆ ಪರೀಕ್ಷಿಸಿ ನೋಡಿ, ನಂತರ ತಮ್ಮ ಕೀಲಿಮಣೆಯನ್ನು ಕುಟ್ಟಿರಲ್ಲಾ! ಇದು ನನ್ನ ಅತ್ಯಂತ ಸವಿನಯ ಪ್ರಾರ್ಥನೆ ತಮ್ಮಲ್ಲಿ ಸುಪ್ರೀತ್!!
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ಒಕೆ ಎಷ್ಟು ಸಮಯ ಉಸಿರು ಒತ್ತಿ ಹಿಡಿಯ ಬೇಕು ಹೇಳಿ. ನನ್ನನ್ನು ಸಾಯಿಸುವ ಉದ್ದೇಶವಿರದಿದ್ದರೆ ನಿಮ್ಮ ಈ ಪ್ರಯೋಗ ಮಾಡಲು ನಾನು ಸಿದ್ಧ.
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ಸುಪ್ರೀತ್..
ತವುಡು ಕುಟ್ಟುತ್ತಿದ್ದೀಯ.. Suggestion
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
:)
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ಎಷ್ಟು ಸಮಯ ಎಂದು ನಾನು ಹೇಗೆ ಹೇಳಲಾಗುತ್ತದೆ? ಅದೆಷ್ಟು ಸಮಯ ನಿಮ್ಮೊಳಗಿರುವ "ದೇವರು" ನಿಮಗೆ ಉಸಿರು ಕಟ್ಟಿ ಬದುಕಲು ಅವಕಾಶ ನೀಡುವನೋ ಅಷ್ಟು ಸಮಯ ! ಒಳ್ಳೆಯ, ಪ್ರಾಮಾಣಿಕನಾದ ’ಆಪ್ತ ಮಿತ್ರ’ ನನ್ನು ಆಯ್ಕೆ ಮಾಡಿ. ಏಕೆಂದರೆ ಇದು ನಿಮ್ಮ ಸಾವು ಬದುಕಿನ ಪ್ರಶ್ನೆ. ಹಾಗೆಯೇ ನಿಮ್ಮ "ದೇವರಿಲ್ಲ" ಅನ್ನುವ ನಂಬಿಕೆಯನ್ನೇ ಬುಡಮೇಲು ಮಾಡುವಂಥ ಸಂಕ್ರಮಣ ಕಾಲ. ಬಹುಶ: ಆ ಒಂದು ನಿರ್ದಿಷ್ಟ ಸಮಯವನ್ನು ನೀವು ದಾಟಿದ ನಂತರ ನಾವು "ಹೊಸ" ಸುಪ್ರೀತರನ್ನು ಕಾಣಬಹುದೇನೋ!
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
>>Waterboarding is considered a form of torture by legal experts,[3][4] politicians, war veterans,[5][6] medical experts in the treatment of torture victims,[7][8] intelligence officials,[9] military judges[10] and human rights organizations.
ಈ ರೀತಿ ಟಾರ್ಚರ್ ಮಾಡಿದರೆ ಒಬ್ಬ ವ್ಯಕ್ತಿ ಬೇಕಿದ್ದರೆ ತನ್ನ ಮಕ್ಕಳನ್ನೂ ಸಹ ಅವರು ನನ್ನವರು ಅಲ್ಲ ಎಂದು ಒಪ್ಪಿಕೊಳ್ಳಬಲ್ಲ!
ನೀವು ಇಂತಹ ಪ್ರಯೋಗಕ್ಕೆ ಒಳಗಾಗಲು ತಯಾರಾ?
ದೊಡ್ಡ ನಮಸ್ಕಾರ!
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ದೇವರಿದ್ದಾನೋ ಇಲ್ಲವೋ ಎಂಬ ಗೋಜಲಿಗಿಂತ ನಮ್ಮನ್ನು ಮೀರಿದ ಯಾವುದೋ ಶಕ್ತಿ ಇದೆ ಎಂಬ ನಂಬಿಕೆ ಬಲವಾಗಿದೆ. ಆ ಶಕ್ತಿಯನ್ನು ನಾನು ಅನುಭವಿಸಿದ್ದೇನೆ ಹಾಗೆಯೇ ಆ ಶಕ್ತಿಯನ್ನು ನಂಬುತ್ತೇನೆ . ನನಗೆ ಒಳ್ಳೆಯದನ್ನು ಮಾಡುವ ಆ ಶಕ್ತಿಗೆ ದೇವರು ಎಂದು ಕರೆಯುತ್ತೇನೆ
ಹಾಗೆಯೇ ದೆವ್ವದ ಶಕ್ತಿಯನ್ನು ನೋಡಿಲ್ಲ ಅನುಭವಿಸಿಲ್ಲ . ಮುಂದೆಂದಾದರೂ ಅನುಭವಿಸಿದರೆ ಅಥವ ನೋಡಿದರೆ ನನಗೆ ಕೆಟ್ಟದ್ದೇನಾದರೂ ಆದರೆ ಅದನ್ನು ದೆವ್ವ ಎಂದು ಕರೆದು ನಂಬುತ್ತೇನೆ. ಅದರಿಂದಲೂ ಒಳ್ಳೆಯದೆ ಆದರೇ ಅದನ್ನೂ ದೇವರೆಂದೇ ಕರೆಯುತ್ತೇನೆ.
>>ನಾನಾಗಿ ಕಂಡುಕೊಳ್ಳುವವರೆಗೆ ನಾನದನ್ನು ನಂಬಬೇಕಿಲ್ಲ.
ತುಂಬಾ ಒಳ್ಳೆಯ ಮಾತು. ಕಂಡುಕೊಂಡ ಮೇಲೆ ಇಲ್ಲಿ ಖಂಡಿತಾ ಬರೆಯುತ್ತೀರಾ ಎಂದು ನಂಬಿದ್ದೇನೆ ಆದರೆ ಅದು ಏಪ್ರಿಲ್ ಒಂದನೆಯ ತಾರೀಖಾಗಲಿ ಅಥವ ಸ್ವಘಟ್ಟಿಯ ಬಗ್ಗೆಗಾಗಲಿ ಆಗದಿರಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ.
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
:)
>>> ದೇವರಿದ್ದಾನೋ ಇಲ್ಲವೋ ಎಂಬ ಗೋಜಲಿಗಿಂತ ನಮ್ಮನ್ನು ಮೀರಿದ ಯಾವುದೋ ಶಕ್ತಿ ಇದೆ ಎಂಬ ನಂಬಿಕೆ ಬಲವಾಗಿದೆ.
ನಮ್ಮನ್ನು ಮೀರಿದ ಅಂದರೆ?
ಜಲಾಶಯದಲ್ಲಿರುವ ನೀರು ನಮ್ಮನ್ನು ಮೀರಿದ ಶಕ್ತಿಯೇ. ವೈರಿನಲ್ಲಿ ಹರಿಯುವ ವಿದ್ಯುತ್ ಶಕ್ತಿಗೆ ನಾವು ಯಾವ ರೀತಿಯಲ್ಲೂ ಸಮಾನರಲ್ಲ. ಕೆಲಸ ಮಾಡುವ ಸಾಮರ್ಥ್ಯಕ್ಕೆ ಶಕ್ತಿ ಎನ್ನುತ್ತಾರೆ. ಬುದ್ಧಿ ಶಕ್ತಿ, ಮಾನಸಿಕ ಶಕ್ತಿ, ಆತ್ಮಶಕ್ತಿ ಎಲ್ಲಕ್ಕೂ ಇದು ಅನ್ವಯಿಸುತ್ತದೆ. ಆದರೆ ಈ ನಮ್ಮನ್ನು ಮೀರಿದ ಶಕ್ತಿ ಎಂದರೇನು?
>>> ಆ ಶಕ್ತಿಯನ್ನು ನಾನು ಅನುಭವಿಸಿದ್ದೇನೆ ಹಾಗೆಯೇ ಆ ಶಕ್ತಿಯನ್ನು ನಂಬುತ್ತೇನೆ . ನನಗೆ ಒಳ್ಳೆಯದನ್ನು ಮಾಡುವ ಆ ಶಕ್ತಿಗೆ ದೇವರು ಎಂದು ಕರೆಯುತ್ತೇನೆ
ಆ ಶಕ್ತಿಯ ಸ್ವರೂಪ ಎಂಥದ್ದು? ಶಾಸ್ತ್ರಗಳು ಹೇಳುವ ದೇವರಿಗೂ, ಧರ್ಮಗಳ ದೇವರಿಗೂ ನಿಮ್ಮ ‘ಶಕ್ತಿ’ಗೂ ವ್ಯತ್ಯಾಸವಿದೆಯೇ?
>> ಕಂಡುಕೊಂಡ ಮೇಲೆ ಇಲ್ಲಿ ಖಂಡಿತಾ ಬರೆಯುತ್ತೀರಾ ಎಂದು ನಂಬಿದ್ದೇನೆ ಆದರೆ ಅದು ಏಪ್ರಿಲ್ ಒಂದನೆಯ ತಾರೀಖಾಗಲಿ ಅಥವ ಸ್ವಘಟ್ಟಿಯ ಬಗ್ಗೆಗಾಗಲಿ ಆಗದಿರಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ.
ಕಂಡುಕೊಳ್ಳುವುದು ಎನ್ನುವುದು ನಿಜಕ್ಕೂ ಗೊಂದಲದ ವಿಷಯ. ಏಕೆಂದರೆ ನಾನು ಯಾರದೋ ಕಲ್ಪನೆಯ ಯಾವುದೋ ಶಕ್ತಿ ಇದೆ ಎಂದು ನಂಬುವುದಿಲ್ಲ. ದೇವರು ಇಂಥವನು, ಆತ ಹೀಗಿರುವನು ಎಂದು ಹೇಳಿದರೆ, ಅದಕ್ಕೆ ಸಾಕ್ಷಿ ಸಿಕ್ಕ ದಿನ ಖಂಡಿತವಾಗಿಯೂ ಆ ವಿವರಣೆಯ ದೇವರು ಇದ್ದಾನೆ ಎಂದು ಒಪ್ಪುವೆ. ಹೈಸ್ಕೂಲಿಗೆ ಬರುವವರೆಗೆ atom ಎಂದರೆ that which is indivisible ಎಂದು ತಿಳಿದು ನಂಬಿದ್ದೆ. ಅನಂತರ ಹೆಚ್ಚು ತಿಳಿದಾಗ atom can be divided ಎಂದು ತಿಳಿಯಿತು. ನನ್ನ ಹಿಂದಿನ ನಂಬಿಕೆ ಅದು ವ್ಯತಿರಿಕ್ತವಾಗಿತ್ತು. nuclear fusion, fission ಗಳಿಂದ atom divisible ಅನ್ನೋ ಹೊಸ ವಿಚಾರಕ್ಕೆ ಸಾಕ್ಷಿ ಸಿಕ್ಕಿತು. ನನ್ನ ನಂಬಿಕೆ ಬದಲಾಯ್ತು. ಹೀಗೆ ಆದರೆ ಖಂಡಿತವಾಗಿ ನಾನು ದೇವರನ್ನು ಒಪ್ಪುವೆ.
>>> ನನಗೆ ಒಳ್ಳೆಯದನ್ನು ಮಾಡುವ ಆ ಶಕ್ತಿಗೆ ದೇವರು ಎಂದು ಕರೆಯುತ್ತೇನೆ
ನಿಮಗೆ ಇದುವರೆಗೂ ಏನೂ ಕೆಡುಕು ಸಂಭವಿಸಿಲ್ಲವೇ? ಸಂಭವಿಸಿದ್ದರೆ ಆ ಕೆಡುಕಿಗೆ ಏನು ಕಾರಣ ಎಂದು ವಿಶ್ಲೇಷಿಸುವಿರಿ?
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
>>ಜಲಾಶಯದಲ್ಲಿರುವ ನೀರು ನಮ್ಮನ್ನು ಮೀರಿದ ಶಕ್ತಿಯೇ. ವೈರಿನಲ್ಲಿ ಹರಿಯುವ ವಿದ್ಯುತ್ ಶಕ್ತಿಗೆ ನಾವು ಯಾವ ರೀತಿಯಲ್ಲೂ ಸಮಾನರಲ್ಲ. ಕೆಲಸ ಮಾಡುವ ಸಾಮರ್ಥ್ಯಕ್ಕೆ ಶಕ್ತಿ ಎನ್ನುತ್ತಾರೆ. ಬುದ್ಧಿ ಶಕ್ತಿ, ಮಾನಸಿಕ ಶಕ್ತಿ, ಆತ್ಮಶಕ್ತಿ ಎಲ್ಲಕ್ಕೂ ಇದು ಅನ್ವಯಿಸುತ್ತದೆ. ಆದರೆ ಈ ನಮ್ಮನ್ನು ಮೀರಿದ ಶಕ್ತಿ ಎಂದರೇನು?."
ನಾನು ಬಿಸಿಯನ್ನು ಅನುಭವಿಸಿದೆ ಎಂದರೆ ಎಷ್ಟು ಬಿಸಿ ಎಂಬುದನ್ನು ’ತುಂಬಾ’ ಅಥವ ಇಷ್ಟು ಎಂಬುದಾಗಿ ಹೇಳಬಹುದು. ಆದರೆ ಆ ಅನುಭವವನ್ನು ಬೇರೆಯವರಿಗೆ ದಾಟಿಸುವಂತಹ ಶಕ್ತಿ ನನಗಿಲ್ಲ. ಹಾಗೆಯೇ ನನ್ನ ಅನುಭವಕ್ಕೆ ಬಂದಂತಹ ಶಕ್ತಿಯ ಸ್ವರೂಪವನ್ನು ಇತರರಿಗೆ ಕಾಣಿಸುವಂತಹ ಶಕ್ತಿಯೂ ನನಗಿಲ್ಲ ಆ ಹಂತವೇ ಬೇರೆ .
ಆದರೂ ನನ್ನ ನಂಬಿಕೆ ಸುಳ್ಳು ಎನ್ನುವ ಒಂದೇ ಒಂದು ಸಾಕ್ಷ್ಯಕ್ಕೂ ನಾನು ದೇವರಿಲ್ಲ ಎಂದು ಒಪ್ಪಿ ತಲೆ ತಗ್ಗಿಸುತ್ತೇನೆ
ಆದರೆ ಹಾಗೆ ಪ್ರೂವ್ ಮಾಡಲು ಸಾಧ್ಯವಾಗಿಲ್ಲದಿರುವುದರಿಂದಲೇ ಈ ಎಲ್ಲಾ ಚರ್ಚೆಗಳು ಇಲ್ಲಿ ನಡೆಯುತ್ತಿರುವುದು.
ನೀವು ದೇವರನ್ನು ವೈಜ್ನಾನಿಕವಾಗಿ ಕಂಡುಕೊಳ್ಳುವ ಆ ಕಾಲ ಬೇಗ ಬರಲಿ ಎಂದು ಆ "ದೇವರಲ್ಲಿ" ಬೇಡಿಕೊಳ್ಳುತ್ತೇನೆ.
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ನಿಮಗೆ ಸಾಕ್ಷಿ... ಆಧಾರ..ಗಳ ಬಗ್ಗೆ ನಾನು ಹೇಳಿದ್ದು ತಿಳಿಯಲಿಲ್ಲ ಅನ್ನಿಸುತ್ತೆ.
>>>ಆದರೆ ಹಾಗೆ ಪ್ರೂವ್ ಮಾಡಲು ಸಾಧ್ಯವಾಗಿಲ್ಲದಿರುವುದರಿಂದಲೇ ಈ ಎಲ್ಲಾ ಚರ್ಚೆಗಳು ಇಲ್ಲಿ ನಡೆಯುತ್ತಿರುವುದು.
ನಾನು ಸ್ವಘಟ್ಟಿ ಇದ್ದಾನೆ ಎಂದು ಹೇಳಿದರೆ. ಜಗತ್ತಿನ ಯಾವ ವಿಜ್ಞಾನಿಯ ಕೈಲೂ ಅದನ್ನು ಸುಳ್ಳೆಂದು ಸಾಬೀತು ಮಾಡಲು ಸಾಧ್ಯವಿಲ್ಲ.
ಯಾವುದೇ ಕಾಲ್ಪನಿಕ ಸಂಗತಿಯನ್ನು, ಭ್ರಮೆಯನ್ನು ಸುಳ್ಳು ಎಂದು ಸಾಬೀತು ಮಾಡುವುದಕ್ಕೆ ಆಗುವುದಿಲ್ಲ.
ಇಲ್ಲಿ burden of proof ಇರುವುದು ದೇವರಿದ್ದಾನೆ ಎನ್ನುವವರ ಮೇಲೆ.
ನನ್ನ ಕಡೆಯ ಪ್ರಶ್ನೆಗೆ ಉತ್ತರಕ್ಕಾಗಿ ಕಾದಿದ್ದೆ.
ನಿಮಗೆ ಇದುವರೆಗೂ ಕೆಡುಕು ಆಗಿಲ್ಲವೇ?
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
:D
( to ಸುಪ್ರೀತ್ )
ಭೂಮಿ ಚಪ್ಪಟೆಯಾಗಿಲ್ಲ ಅದು ಗುಂಡಗಿದೆ ಎಂದು ಪ್ರೂವ್ ಮಾಡಿದ ನಂತರವಷ್ಟೇ ಅದು ಒಪ್ಪಿಗೆಯಾಯ್ತು
ಹಾಗೆಯೇ ದೇವರಿಲ್ಲ ಎಂಬ ವಿಷಯವನ್ನು ನೀವು ಆಧಾರ ಸಹಿತ ಸಾಧಿಸಿದರೆ ನಿಮ್ಮ ಈ ಅನ್ವೇಷಣೆಗೆ ಒಂದು ಅರ್ಥ ಬಂದೀತು. ಯಾವುದೇ ಆಧಾರವಿಲ್ಲದೆ ಮತ್ತೊಬ್ಬರು ದೇವರ ವಿಶಯವನ್ನು ಎತ್ತಿದಾಗಲೆಲ್ಲಾ ಇಲ್ಲಾ ಇಲ್ಲಾ ಎಂದು ಹೇಳುವುದರಲ್ಲಿ ಯಾವ ಸಾಧನೆಯೂ ಇಲ್ಲ ಅಲ್ಲವೇ?
ನೀವು ಗಾಜಿನ ಮನೆಯಲ್ಲಿದ್ದುಕೊಂಡು ಗಾಳಿಯೇ ಇಲ್ಲಾ ಎಂಬ ಭ್ರಮೆಗೆ ಬರುವುದಕ್ಕಿಂತ ನಿಮ್ಮ ಸುತ್ತಾ ಕಟ್ಟುಕೊಂಡುರುವ ಭ್ರಮೆಎಂಬ ಗಾಜಿನ ಮನೆಯನ್ನ್ ಒಡೆದು ಹೊರಗಿನ ಪ್ರಪಂಚಕ್ಕೆ ಬನ್ನಿ ಗಾಳಿಯ ಅನುಭವ ಆಗಲೇ ಆಗುತ್ತದೆ. ದೇವರಿಲ್ಲ ಎಂದುಕೊಂಡು ಆತನನ್ನು ಕಂಡುಕೊಳ್ಳುವ ಪ್ರಯತ್ನ ವ್ಯರ್ಥ. ಆಧ್ಯಾತ್ಮಿಕ ಪ್ರಪಂಚಕ್ಕೆ ಕಾಲಿರಿಸಿ. ಆಗಲೆ ದೇವರ ಇರುವಿಕೆಯ ಅನುಭವ ಖಂಡಿತಾ ಆಗುತ್ತದೆ.
ಗಾಳಿಯನ್ನು ತೋರಿಸಬೇಕಿಲ್ಲ. ಅದನ್ನು ಅನುಭವಿಸಬೇಕು. ಹಾಗೆಯೇ ದೇವರೂ ಸಹಾ.
ದೇವರ ನಿಜವಾದ ಅನುಭವ ಆಗುವುದು ನೀವು ತಾಳದಂತಹ ಕಷ್ಟ ಬಂದಾಗಲೇ. ಸುಖಿಯಾಗಿದ್ದು ತಿಂದುಂಡು ಆರಾಮಾವಾಗಿರುವಾಗ ದೇವರೇಕೆ ತಂದೆ ತಾಯಿಯೂ ಬೇಡ ಎನ್ನುವ ತೀರ್ಮಾನಕ್ಕೆ ಬಂದಿರುತ್ತೀರಾ. ಇನ್ನೆನು ಬಾಳಿನ ಕೆಟ್ಟಕಾಲ ತನ್ನ ಪರಾಕಾಷ್ಟೇ ಮುಟ್ಟಿದೆ ಎಂದಾಗ ನೀವು ಖಂಡಿತಾ ದೇವರ ಧ್ಯಾನ ಮಾಡಲೇ ಬೇಕು .
ನಿಮಗೊಂದು ಚಾಲೆಂಜ್.
ನಿಮ್ಮ ಓದು ಸರ್ಟಿಫಿಕೇಟ್ಸ್ ಎಲ್ಲವನ್ನು ಮರೆತುಬಿಡಿ . ನಿಮ್ಮ ಬಾಳಿನ ಗ್ರಾಫ್ ಅನ್ನು ಅದರ ಆರಿಜಿನ್( ಜೀರೋ ,ಜೀರೋ)ಇಂದ ನಡೆಸಿ. ಸಹಾಯಕ್ಕೆ ತಂದೆಯಾಗಲಿ ತಾಯಿಯಾಗಲಿ ಬಂಧುವಾಗಲಿ ಯಾರ ಸಹಾಯವನ್ನು ಪಡೆಯಬೇಡಿ . ನಿಮ್ಮ ಅನ್ನವನ್ನು ನೀಎ ಪಡೇದುಕೊಳ್ಳಿ . ಎರೆಡು ವರ್ಷ ಹೀಗೆ ಮುಂದುವರೆಸಿ. ಒಮ್ಮೆ ಕಷ್ಟದ ಕೂಪಕ್ಕೆ ಬಿದ್ದಾಗ ದೇವರೋ ಅಥವ ಅಂತಹ ಯಾವುದೋ ಶಕ್ತಿಯೋ ಖಂಡಿತಾ ನಿಮ್ಮನ್ನು ಮೇಲೆತ್ತುತ್ತದೆ .
ನಾನಾಗಲಿ ದೇವರನ್ನು ನಂಬುವ ಇತರರಾಗಲಿ ಹೀಗೆ ಸೊನ್ನೆಯಿಂದ ಮೇಲೆ ಬಂದವರು ಅಥವ ಈ ಒಂದು ಕಷ್ಟಕ್ಕೆ ಈಡದವರು . ಹಾಗೆಯೇ ಅರಿವಿಗೆ ಬಾರದ ಶಕ್ತಿಯೊಂದು ನಮಗೆ ದಾರಿ ತೋರಿದೆ .
ನಿಮಗೆ ಆ ಅನುಭವವಾದಾಗ ಇದೇ ಸಂಪದದಲ್ಲಿ ಈ ಜಗತ್ತಿನಲ್ಲಿ ನಮ್ಮನ್ನು ಮೀರಿದ ಶಕ್ತಿ ಒಂದಿದೆ ಎಂಬ ಲೇಖನ ಖಂಡಿತಾ ಬರೆಯುತ್ತೀರಾ.
ಈ ಚಾಲೆಂಜಿಗೆ ನೀವು ಒಪ್ಪುತ್ತೀರಾ?
ಕೊನೆಯದಾಗಿ
ಯಾರಿಗೂ ತೊಂದರೆಯಾಗದ ಮತ್ತೊಬ್ಬರಿಗೆ ಅನಾಹುತವಾಗದ ಅವರಿಗೆ ಅನುಕೂಲವಾಗುವ ನೆಮ್ಮದಿಯನ್ನೀಯುವ ನಂಬಿಕೆಯನ್ನು ಸುಳ್ಳೆಂದೇಕೆ ತೀರ್ಮಾನ ಮಾಡಬೇಕು.
(ಸುಪ್ರೀತ್ . ಶನಿವಾರ ಮನೆಗೆ ಹೋಗುವ ಕಾತುರವಿದ್ದುದ್ದರಿಂದ ಹೆಚ್ಚು ಬರೆಯಲಾಗಲಿಲ್ಲ ಆದರೂ ಚರ್ಚೆ ಅಪೂರ್ಣ ಎನಿಸಿದ್ದುದರಿಂದ ಮತ್ತೆ ಆರಂಭಿಸಿದ್ದೇನೆ. ನಿಮ್ಮ ಪ್ರತಿಕ್ರಿಯೆ ಬರೆಯಿರಿ .ಸಂಜೆ ಬಂದು ಉತ್ತರಿಸುತ್ತೇನೆ ಚರ್ಚೆ ಆರೋಗ್ಯಕರವಾಗಿರಲಿ .)
ಉ: ( to ಸುಪ್ರೀತ್ )
ಧನ್ಯವಾದ. ನಿಮ್ಮ ಮಾತುಗಳಲ್ಲಿರುವ ತಿರುಳು ನನಗರ್ಥವಾಯಿತು ನಾನದನ್ನು ಅಲ್ಲಗಳೆಯುವುದಿಲ್ಲ.
ಮಾನಸಿಕ ನೆಮ್ಮದಿಗೆ, ಸೈಕಾಲಜಿಕಲ್ ಸಪೋರ್ಟ್‌ಗಾಗಿ ಒಂದು ಸಂಗತಿಯನ್ನು ನಂಬುವುದರ ಬಗ್ಗೆ ನನಗೆ ಯಾವ ತಕರಾರೂ ಇಲ್ಲ. ನಾನು ನಿಮಗ ಸಾಂತ್ವನ ನೀಡಿದ, ನಿಮ್ಮ ಕಷ್ಟದಲ್ಲಿ ಧೈರ್ಯ ತುಂಬಿದ ಯಾವ ನಂಬಿಕೆಯೂ ಬೇಡ ಎನ್ನುವುದಿಲ್ಲ.
ನನ್ನ ವಿಚಾರ ಇಷ್ಟೇ: ಸ್ಥಾಪಿತದ ಧರ್ಮಗಳು, ಮಠಗಳು, ಶಾಸ್ತ್ರಗಳು ಹೇಳುವ ಜಗತ್ತನ್ನು ನಿಯಂತ್ರಿಸುವ, ಪ್ರಾರ್ಥನೆಗೆ ಉತ್ತರಿಸುವ ದೇವರು ಇದ್ದಾನೆನ್ನುವುದಕ್ಕೆ ಯಾವ ಆಧಾರವೂ ಇಲ್ಲದ ಕಾರಣ ನಾನು ಆಧಾರ ಕೇಳುವೆನಷ್ಟೇ.
>>> ಗಾಳಿಯನ್ನು ತೋರಿಸಬೇಕಿಲ್ಲ. ಅದನ್ನು ಅನುಭವಿಸಬೇಕು. ಹಾಗೆಯೇ ದೇವರೂ ಸಹಾ.
ಗಾಳಿಯ ಪ್ರಭಾವವನ್ನು ಪ್ರಯೋಗದ ಮೂಲಕ ತೋರಿಸಬಹುದು. ಗಾಳಿ ಇದೆ ಎನ್ನುವ ನಂಬಿಕೆಯಿಂದ ಪರಿಣಾಮದಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ. ಈ ಉದಾಹರಣೆ ನಿಮ್ಮ point of viewನ್ನು ಸಮರ್ಥಿಸುವುದಿಲ್ಲ.
>>> ಹಾಗೆಯೇ ದೇವರಿಲ್ಲ ಎಂಬ ವಿಷಯವನ್ನು ನೀವು ಆಧಾರ ಸಹಿತ ಸಾಧಿಸಿದರೆ ನಿಮ್ಮ ಈ ಅನ್ವೇಷಣೆಗೆ ಒಂದು ಅರ್ಥ ಬಂದೀತು.
ಯಾವ ಕಾಲ್ಪನಿಕ ಸಂಗತಿಯನ್ನೂ ಇಲ್ಲ ಎಂದು ಸಾಬೀತು ಮಾಡುವುದು ಅಸಾಧ್ಯ.
ಸ್ವಘಟ್ಟಿ ಇಲ್ಲ ಎಂದು ನಿಮಗೆ ಸಾಬೀತು ಮಾಡಲು ಸಾಧ್ಯವಿದೆಯೇ?
>>> ಯಾರಿಗೂ ತೊಂದರೆಯಾಗದ ಮತ್ತೊಬ್ಬರಿಗೆ ಅನಾಹುತವಾಗದ ಅವರಿಗೆ ಅನುಕೂಲವಾಗುವ ನೆಮ್ಮದಿಯನ್ನೀಯುವ ನಂಬಿಕೆಯನ್ನು ಸುಳ್ಳೆಂದೇಕೆ ತೀರ್ಮಾನ ಮಾಡಬೇಕು.
ಯಾರಿಗೋ ನೆಮ್ಮದಿ ನೀಡಿದ ತಕ್ಷಣ ಕಾಲ್ಪನಿಕ ಸಂಗತಿ ಸತ್ಯವಾಗದು.
ನೀವು ನೆಮ್ಮದಿ, ಧೈರ್ಯ ನೀಡಿದ ಸಂಗತಿ ಎನ್ನುವುದನ್ನು ನಾನು ಆತ್ಮವಿಶ್ವಾಸ ಎನ್ನುವೆ. ಹಾಗೂ ಆ ಆತ್ಮವಿಶ್ವಾಸ ಇದೆಯೇ ಇಲ್ಲವೋ ಎಂದು ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅದು ಇದೆ ಎಂದರೆ ‘ನನಗೆ’ ಇದೆ ಇಲ್ಲ ಅಂದರೆ ಇಲ್ಲ. ಆದರೆ ನಾನು ಆತ್ಮವಿಶ್ವಾಸವನ್ನು ಪೂಜಿಸುವುದಿಲ್ಲ. ಅದು ಇದೆ ನಂಬು ಎಂದು ಯಾರನ್ನೂ ಕೇಳಿಕೊಳ್ಳುವುದಿಲ್ಲ. ನನ್ನ ಮಕ್ಕಳಿಗೆ ನನ್ನ ‘ಆತ್ಮವಿಶ್ವಾಸ’ವನ್ನು ಪೂಜಿಸು ಎಂದು ಹೇಳಿಕೊಡುವುದಿಲ್ಲ. ಆತ್ಮವಿಶ್ವಾಸಕ್ಕೆ ಹರಕೆ ಹೊರುವ, ದಕ್ಷಿಣೆ ಹಾಕುವ ಕೇಂದ್ರಗಳಾದ ದೇವಸ್ಥಾನಗಳನ್ನು ಕಟ್ಟುವುದಿಲ್ಲ.
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
>>ನಿಮಗೆ ಇದುವರೆಗೂ ಏನೂ ಕೆಡುಕು ಸಂಭವಿಸಿಲ್ಲವೇ? ಸಂಭವಿಸಿದ್ದರೆ ಆ ಕೆಡುಕಿಗೆ ಏನು ಕಾರಣ ಎಂದು ವಿಶ್ಲೇಷಿಸುವಿರಿ?
ಕೆಡುಕಿಗೆ ಎರಡು ಕಾರಣಗಳು
ಒಂದು ನನ್ನ ಕಾರ್ಯಕ್ಷಮತೆಯಲ್ಲಿ ಕೊರತೆ. ಮತ್ತೊಮ್ಮೆ ಹೀಗಾಗದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತೇನೆ
ಹಾಗಿಲ್ಲದಿದ್ದಲ್ಲಿ ಹೀಗೇ ಆಗಬೇಕೆಂಬ ವಿಧಿ ಲಿಖಿತ. ನಾನು ತಡೆಯಲು ಸಾಧ್ಯವಿರದ್ದು. ಬಂದಂತೆ ಸ್ವೀಕರಿಸುತ್ತೇನೆ. ಅಳುತ್ತೇನೆ. ಅತ್ತು ಸುಮ್ಮನಾಗುತ್ತೇನೆ .
ಅಷ್ಟೇ
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
>>> ಕೆಡುಕಿಗೆ ಎರಡು ಕಾರಣಗಳು
ಒಂದು ನನ್ನ ಕಾರ್ಯಕ್ಷಮತೆಯಲ್ಲಿ ಕೊರತೆ. ಮತ್ತೊಮ್ಮೆ ಹೀಗಾಗದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತೇನೆ
ಹಾಗಿಲ್ಲದಿದ್ದಲ್ಲಿ ಹೀಗೇ ಆಗಬೇಕೆಂಬ ವಿಧಿ ಲಿಖಿತ. ನಾನು ತಡೆಯಲು ಸಾಧ್ಯವಿರದ್ದು. ಬಂದಂತೆ ಸ್ವೀಕರಿಸುತ್ತೇನೆ. ಅಳುತ್ತೇನೆ. ಅತ್ತು ಸುಮ್ಮನಾಗುತ್ತೇನೆ .
ಅಷ್ಟೇ
ಹೀಗಾಗಿ ನೀವು ದೆವ್ವವನ್ನು ನಂಬುವುದಿಲ್ಲ.
ಒಳ್ಳೆಯದಾಗಿರುವುದಕ್ಕೂ ನಿಮ್ಮ ಕಾರ್ಯಕ್ಷಮತೆ ಕಾರಣವಾಗಿರಬಹುದಲ್ಲವೇ? ಆ ಕಾರ್ಯಕ್ಷಮತೆ ಉಳಿಸಿಕೊಳ್ಳಲು ನೀವು ಪ್ರಯತ್ನಿಸಬಹುದಲ್ಲವೇ?
ಪಯತ್ನವಿಲ್ಲದೆಯೂ ಒಳ್ಳೆಯದಾದರೆ ಅದು ವಿಧಿ ಲಿಖಿತ. ನೀವು ತಡೆಯಲು ಸಾಧ್ಯವಿರದ್ದು. ಬಂದಂತೆ ಸ್ವೀಕರಿಸುವುದು, ನಕ್ಕು ಸುಮ್ಮನಾಗುವುದು
ಅಷ್ಟೇ...
ಆಗಬೇಕಿದ್ದ ಸಂಗತಿ ನಮ್ಮನ್ನು ಮೀರಿದ ಶಕ್ತಿ, ‘ದೇವರು’, ‘ಅನುಭವ’ ಏನೇನೆಲ್ಲಾ ಆಗಿದೆಯಲ್ಲ!
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ಆಯ್ತು ನೀವು ಹೇಳಿದ ಹಾಗೆಯೇ ಆಗಲಿ ನೋಡೋಣ ಕಾರ್ಯಗತ ಮಾಡಲು ಯತ್ನಿಸುವ ಪ್ರಯತ್ನಮಾಡುತ್ತೇನೆ.
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ನಾನು ಹೇಳಿದಂತೆ ಮಾಡಬೇಡಿ. ನಿಮಗೆ ಸರಿ ಕಂಡಂತೆ ಮಾಡಿ.
ನೀವು ದೇವರ ಹಾಗೂ ದೆವ್ವದ ಬಗೆಗಿನ ನಿಮ್ಮ ತಾರ್ಕಿಕ ಅಭಿಪ್ರಾಯವನ್ನು ಹೇಳಿದಿರಿ. ನಾನು ಆ ತರ್ಕದಲ್ಲಿರುವ ಅಸಂಬದ್ಧತೆಯನ್ನು ತೋರಿಸಿಕೊಟ್ಟೆ. ಆ ಅಸಂಬದ್ಧತೆ ನಿಮಗೇನನ್ನು ತೋರುವುದೋ ಅದನ್ನು ಮಾಡಿ.
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ನನ್ನ ನಂಬಿಕೆಯನ್ನು ಹೋಗಲಾಡಿಸಲು ನೀವು ಪಡುತ್ತಿರುವ ಶ್ರಮಕ್ಕೆ ಧನ್ಯವಾದಗಳು
ನಿಮ್ಮ ಕಾಳಜಿ ಹೀಗೆ ಇರಲಿ
ಈಗ ಹೊರಡಬೇಕು.
ಸಂಕ್ರಾಂತಿಯ ಶುಭಾಶಯಗಳು ತಡವಾಗಿ
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ಡಿಟೊ ಡಿಟೋ..
ಹಿಂದೆಯೂ ಹಿಂಗೆ
ಇವರ ಪಕ್ಕದ ಮನೆಯವರ ಮನೆಯವರು ದಿಟವಾಗಲು ದೆವ್ವದಲ್ಲಿ ನಂಬುವರು. :)
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ಯಾರ್ರಿ ಅದು ಪಕ್ಕದ ಮನೆಯವರ ಮನೆಯವರು?
ನಮ್ಮ ಪಕ್ಕದ ಮನೆ ಮೂರು ತಿಂಗಳಿಂದ ಖಾಲಿ ಇದೆ.
ನಿಮ್ಮ ಕಾಮೆಂಟ ನೋಡಿ ಹುಚ್ಚು ದೆವ್ವ ಇದೆ ಅಂತ ಮಾತ್ರ ನಂಬಿಕೆ ಬರ್ತಾ ಇದೆ. ಅರ್ಥವಿಲ್ಲದ್ದು.
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ನಿಮ್ ಪಕ್ಕದ ಮನೆ ಯಾಕೆ ಖಾಲಿ ಆಯ್ತು ಅಂತ ನಾನು ಅರ್ಥ ಮಾಡಿಕೊಳ್ಳಬಲ್ಲೆ.. ಪಾಪ!
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
>>> ನನ್ನ ನಂಬಿಕೆಯನ್ನು ಹೋಗಲಾಡಿಸಲು ನೀವು ಪಡುತ್ತಿರುವ ಶ್ರಮಕ್ಕೆ ಧನ್ಯವಾದಗಳು
ನಿಮ್ಮ ಧನ್ಯವಾದಗಳನ್ನು ಹಿಂದಕ್ಕೆ ಪಡೆಯಿರಿ. ನಾನು ಮಾಡದ ಕೆಲಸಕ್ಕಾಗಿ ಕಾಂಪ್ಲಿಮೆಂಟ್ ಪಡೆಯುವುದಿಲ್ಲ. ನಿಮ್ಮದರಲಿ, ಗುಮ್ಮವಿದೆ ಎಂದು ಹೆದರುವ, ಶಕ್ತಿಮಾನ್ ನನ್ನನ್ನು ಕಾಪಾಡುತ್ತಾನೆ ಎಂದು ಆತನ ಕಾಸ್ಟ್ಯೂಮ್ ಚೂರನ್ನು ದಿಂಬಿನ ಕೆಳಗಿಟ್ಟು ಮಲಗುವ ಮಗುವಿನ ನಂಬಿಕೆಯನ್ನು ಹೊಗಲಾಡಿಸಲೂ ನಾನು ಪ್ರಯತ್ನಿಸುವುದಿಲ್ಲ. ನಾನು ನನ್ನ ಅಭಿಪ್ರಾಯಗಳನ್ನು ಹೇಳಿದ್ದೀನಷ್ಟೇ.
>>> ನಿಮ್ಮ ಕಾಳಜಿ ಹೀಗೆ ಇರಲಿ
ಆರ್ಥಿಕವಾಗಿ ಸ್ವತಂತ್ರನಾಗಿಲ್ಲದ, ವಯಸ್ಸಿನಲ್ಲಿ ನಿಮಗಿಂತ ತುಂಬಾ ಚಿಕ್ಕವನಾಗಿರುವ, ವಯಕ್ತಿಕವಾಗಿ ನಿಮ್ಮ ಪರಿಚಯವೇ ಇರದು ನಾನು ನಿಮ್ಮ ಕಾಳಜಿ ಹೇಗೆ ಮಾಡಲು ಸಾಧ್ಯ? ನನ್ನ ಕಾಳಜಿ ನಾನು ಮಾಡಿಕೊಂಡರೆ ಸಾಕು.
>>> ಸಂಕ್ರಾಂತಿಯ ಶುಭಾಶಯಗಳು ತಡವಾಗಿ
ನಿಮಗೂ ಶುಭಾಶಯಗಳು. ಹಾಗೇ ಹ್ಯಾಪಿ ವೀಕೆಂಡ್ :)
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
" ಆಗಬೇಕೆಂಬ ವಿಧಿ ಲಿಖಿತ"
ಏನು ಹೀಗಂದರೆ? ಆ ಲಿಖಿತ ಯಾವ ನುಡಿಯಲ್ಲಿ ಇರುತ್ತೆ? ಇಲ್ಲವೇ ಇದೊಂದು poetic expressionಅ?
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ನನ್ನದಲ್ಲ ಆ expression. ರೂಪಾರವರು ಕೆಡುಕಿಗೆ ನೀಡಿದ ತಾರ್ಕಿಕ ವಿವರಣೆಯಲ್ಲಿದ್ದದ್ದು. ಅದನ್ನು ಹಾಗೇ ಎತ್ತಿಕೊಂಡು ದೇವರ ಬಗೆಗಿನ ತಾರ್ಕಿಕ ವಿವರಣೆಗೆ ಬಳಸಿದೆ.
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ರೂಪಾ ಅವರದ.. ಬಿಡಿ!!
ನನಗೇ ಇದೇನಿ ಈವಯ್ಯ ಬೆಳಗ್ಗೆಲ್ಲ ಸಯಿನ್ಸು ಎಂದು ಈಗ ವಿಧಿಗಿದಿ ಅಂತಾನೆ ಅಂತ ದಿಗಿಲಾಗಿತ್ತು.
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ರೂಪಾ,
ಸಕತ್ತಾಗಿ ಹೇಳಿದಿರಿ.
ಕಥೆಯೊಂದನ್ನು ಕೇಳಿ. ಹುಣಿಸೇ ಮರವೊಂದರಲ್ಲಿ ದೆವ್ವವಿದೆ ಎಂಬ ಮಾತು ಹಳ್ಳಿಯಲ್ಲಿ ಚಾಲ್ತಿಯಲ್ಲಿತ್ತು. ಇಬ್ಬರು ಹೀಗೇ ಚರ್ಚೆಗೆ ಇಳಿದರು.
ಒಬ್ಬ-" ರಾತ್ರಿ ೧೨ ಗಂಟೆಯಲ್ಲಿ ನೀನೊಬ್ಬನೇ ಹೋಗಿ ಈ ಮೊಳೆಯನ್ನು ಹುಣಿಸೇ ಮರಕ್ಕೆ ಹೊಡೆದು ಬಾ. ನಿನಗೆ ೧೦೦ ರೂ ಬಹುಮಾನ."
ಪುಕ್ಕಲುತನವಿದ್ದರೂ ಹೊರಗೆ ನಾಟಕವಾಡುತ್ತಿದ್ದ ಇನ್ನೊಬ್ಬ ತನ್ನ ಮರ್ಯಾದೆ ಉಳಿಸಿಕೊಳ್ಳಬೇಕಲ್ಲಾ! ಒಪ್ಪಿದ. ಅಮಾಸ್ಯೆ ರಾತ್ರಿ ೧೨ ಗಂಟೆ. ಇವನಿಗೆ ಹೆದರಿಕೆಇದ್ದರೂ ಸ್ವಾಭಿಮಾನಕ್ಕೆ ಅಂಜಿ ಮೊಳೆ ಹಾಗೂ ಸುತ್ತಿಗೆ ತೆಗೆದುಕೊಂಡು ಹೋದ. ಹುಣಿಸೇ ಮರದ ಸ್ವಲ್ಪ ದೂರದಲ್ಲಿ ಒಬ್ಬ ನಿಂತ. ಇನ್ನೊಬ್ಬ ಮರದ ಹತ್ತಿರ ಮೆಲ್ಲ ಮೆಲ್ಲಗೆ ಹೋದ ಕೈ ನಡುಗುತ್ತಿದ್ದರೂ ಮೊಳೆ ಹೊಡೆದು ಹೊಂದಿರುಗಿ ಹೊರಡಲು ಹೆಜ್ಜೆ ಇಡುತ್ತಾನೆ. ಇವನ ಪಂಚೆ ಹಿಡಿದು ದೆವ್ವ ಎಳೆಯುತ್ತಿದೆ.....ಕಿಟಾರನೆ ಕಿರಚಿಕೊಳ್ಳುತ್ತಾನೆ. ದೂರದಲ್ಲಿ ನಿಂತಿದ್ದವ ಟಾರ್ಚ್ ಹಿಡಿದು ಹತ್ತಿರ ಧಾವಿಸುತ್ತಾನೆ. ಇವನ ಮಿತ್ರ ನಡುಗುತ್ತಾ ಬಿದ್ದಿದ್ದಾನೆ. ಏನಾಗಿತ್ತಪ್ಪ ಅಂದ್ರೆ ಹೆದರಿಕೆಯಲ್ಲಿ ಅವನ ಪಂಚೆಯನ್ನೂ ಸೇರಿಸಿ ಮೊಳೆ ಹೊಡೆದಿದ್ದ.
ಇದು ತಮಾಶೆಗಾಗಿ ಕಥೆ.
ಈಗ ನಿನ್ನೆ ತಾನೆ ಕಂಡ ಒಬ್ಬ ಮನೋ ರೋಗಿಯ ವಿಷಯ ಕೇಳಿ. ನಾನು ಯಾವ ನಿರ್ಧಾರಕ್ಕೂ ಬಂದಿಲ್ಲ. ನೀವು ಯಾವ ನಿರ್ಧಾರಕ್ಕಾದರೂ ಬರಬಹುದು. ಬೆಂಗಳೂರಿನ ಪ್ರಖ್ಯಾತ ಆಯುರ್ವೇದ ವೈದ್ಯರೊಡನೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಕಥೆ ಕೇಳಿ. ಅನೇಕ ರೋಗಿಗಳಿಗೆ ಯೋಗ ಚಿಕಿತ್ಸೆ ಕೊಡುತ್ತಿದ್ದವರ ಪಜೀತಿ ಇದು.ಕಳೆದ ಆರು ತಿಂಗಳಿನಿಂದ ಏನೋ ಭೀತಿ. ಮಂಕಾಗಿ ಕೆಲಸಕ್ಕೂ ಹೋಗುತ್ತಿರಲಿಲ್ಲವಂತೆ .ಈಗ ಒಂದು ವಾರದ ಮುಂಚೆ ತೌರು ಮನೆಗೆ ಕರೆದುಕೊಂಡು ಬಂದಿದ್ದಾರೆ. ಆಕೆಯಾಡಿದ ಮಾತು " ..........ನ್ನು ತೆಗೆದು ಕೊಂಡಾಯ್ತು, ..........ನ್ನು ತೆಗೆದು ಕೊಂಡಾಯ್ತು,...............ನ್ನು ತೆಗೆದು ಕೊಂಡಾಯ್ತು,ಇವಳನ್ನೂ ತೆಗೆದುಕೊಳ್ಳದೆ ಬಿಡುವುದಿಲ್ಲ.ಪಾಪ! ಆ ಮಹಿಳೆ ನಲುಗಿ ಹೋಗಿದ್ದಾಳೆ. ಮಾನಸಿಕ ಚಿಕಿತ್ಸೆ ಎಲ್ಲಾ ಕೊಡಿಸಿಯಾಗಿದೆ.ಅವರ ಸೋದರತ್ತೆ ಒಬ್ಬರ ಪ್ರೇತ ಹಾಗೆ ಮಾಡುತ್ತಿದೆ. ಎಂದು ಅವರ ಮನೆಯಲ್ಲಿ ಕಂಗಾಲಾಗಿದ್ದಾರೆ.
ನನ್ನ ಕಿವಿಗೆ ಬಿದ್ದಿದ್ದನ್ನು ತಿಳಿಸುವ ಪೋಸ್ಟ್ ಮನ್ ಕೆಲಸವನ್ನಷ್ಟೇ ನಾನು ಮಾಡಿರುವೆ. ಕಾರಣ ಆಕೆಯ ಜೀವದ ವಿಚಾರ! ನಾನು ಸಲಹೆಕೊಡುವಂತಿಲ್ಲ.ಪಾಪ! ಆಕೆಯನ್ನು ನೋಡಿದರೆ ಸಂಕಟವಾಗುತ್ತೆ. ಮುಗ್ಧವ್ಯಕ್ತಿಯೇನಲ್ಲಾ. ಪ್ರಖ್ಯಾತ ವೈದ್ಯರೊಡನೆ ಗೌರವಯುತವಾಗಿ ಸಹಾಯಕರಾಗಿ ಕೆಲಸ ಮಾಡಿಕೊಂಡಿದ್ದವರು. ಈ ಘಟನೆ ಬಗ್ಗೆ ನನಗೆ ಯಾವ ಪ್ರಿಜುಡೀಸ್ ಇಲ್ಲ. ಈ ಘಟನೆ ಹೇಳಿದ ತಕ್ಷಣ " ನೀವು ನಂಬುತ್ತೀರಾ? ಅನ್ನೋ ಪ್ರಶ್ನೆ ಬರುತ್ತೆ. ನಾನು ನಂಬಿಲ್ಲ. ಆದರೆ ಆಕೆಯ ಪರಿಸ್ಥಿತಿ ನೋಡಿದಾಗ ಅಯ್ಯೋ ಎನಿಸುತ್ತೆ.ಈ ಘಟನೆ ಬರೆಯ ಬಾರದೆಂದು ಕೊಂಡಿದ್ದೆ. ಕಾರಣ ಇನ್ನು ಚರ್ಚೆ ಶುರುವಾಗುತ್ತೆ. ನಾನೇನೂ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಆದರೆ ಆ ತಾಯಿಯ ಜೀವ ಉಳಿದರೆ ಸಾಕು.
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ಅಬ್ದುಲ್, ಒಂದು ಒಳ್ಳೆಯ ಚರ್ಚೆಯನ್ನೇ ಹುಟ್ಟು ಹಾಕಿದ್ದೀರಿ. ಇದುವರೆಗೂ ಲಘುವಾಗಿ ಸುಪ್ರೀತ್ ಜೊತೆ ಚರ್ಚಿಸುತ್ತಿದ್ದೆ. ಈಗ ಸೀದಾ ವಿಷಯಕ್ಕೆ ಬರೋಣ. ಒಮ್ಮೆ ಹೀಗಾಯ್ತು. ನಾನು ನಂದಿ ಬೆಟ್ಟದ ತಪ್ಪಲಿನಲ್ಲಿದ್ದ ಒಂದು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿದ್ದ ದೊಡ್ಡದೊಂದು ಬಂಡೆಕಲ್ಲಿನ ಹತ್ತಿರ ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನಗಳಲ್ಲಿ, ಹತ್ತಿರ ಯಾರೂ ಸುಳಿಯುತ್ತಿರಲಿಲ್ಲ. ಸುಮಾರು ಇಪ್ಪತ್ತಕ್ಕಿಂತಲೂ ಹೆಚ್ಚು ನೌಕರರು, ಅಪ್ಪಿ ತಪ್ಪಿ ಆ ಕಡೆ ಹೋದವರು ಚಳಿ ಜ್ವರ ಹಿಡಿದು ಮಲಗಿದ್ದರು. ಅವರ ಪ್ರಕಾರ ಆ ಬಂಡೆಕಲ್ಲಿನ ಮೇಲೆ ಒಬ್ಬ ಯುವತಿ, ತಲೆಯಿಲ್ಲದವಳು, ಕುಳಿತು ಅಳುತ್ತಿರುವುದು ಅವರ ಅನುಭವಕ್ಕೆ ಬಂದಿತ್ತಂತೆ. ಅದನ್ನು ಪರೀಕ್ಷಿಸಲು ಒಂದು ಅಮಾವಾಸ್ಯೆಯ ರಾತ್ರಿಯಲ್ಲಿ ನಾನು ನನ್ನ ಜೊತೆಗೆ ಮೂರು ನಾಯಿಗಳ ಜೊತೆ ಹೋದಾಗ ಆ ನಾಯಿಗಳು ಆ ಕಲ್ಲು ಬಂಡೆಯ ಹತ್ತಿರ ಬರುತ್ತಿದ್ದಂತೆ ಜೋರಾಗಿ ಬೊಗಳ ತೊಡಗಿ ನನ್ನನ್ನು ಮುಂದೆ ಹೋಗದಂತೆ ತಡೆದಿದ್ದವು. ಆದರೂ ಭಂಡ ಧೈರ್ಯದಿಂದ ಹೋಗಿ ಆ ಕಲ್ಲನ್ನು ಮುಟ್ಟಿ ಪರೀಕ್ಷಿಸಿದರೆ, ಆ ನೌಕರರು ಹೇಳಿದ ಜಾಗದಲ್ಲಿ ತಣ್ಣಗೆ ಕೊರೆಯುತ್ತಿತ್ತು. ಬೇರೆಲ್ಲಾ ಭಾಗವೂ ಮಾಮೂಲಿನಂತಿತ್ತು. ಒಮ್ಮೆ ಹೀಗೇ ಕಾರ್ಖಾನೆಗೆ ಬಂದ ಚಿಕ್ಕಬಳ್ಳಾಪುರದ ಪೊಲೀಸ್ ಇನ್ಸ್ಪೆಕ್ಟರ್ ಜೊತೆ ಮಾತಾಡುವಾಗ ಅವರು ಹೇಳಿದ್ದು, ಆ ಬಂಡೆಕಲ್ಲಿನ ಮೇಲೆ, ಆ ಕಾರ್ಖಾನೆ ಪ್ರಾರಂಭವಾಗುವುದಕ್ಕಿಂತಲೂ ಮುಂಚೆ, ಒಬ್ಬ ಯುವತಿಯನ್ನು ಬಲಾತ್ಕಾರ ಮಾಡಿ, ತಲೆಯ ಮೇಲೆ ದೊಡ್ಡ ಕಲ್ಲನ್ನು ಎತ್ತಿ ಹಾಕಿ ಕೊಂದಿದ್ದರಂತೆ. ಗುರುತು ಸಿಕ್ಕದ ಆ ಯುವತಿಯ ಕೊಲೆ ಕೇಸು "ಗುರುತಿಸಲಾಗದ, ವಾರಸುದಾರರಿಲ್ಲದ ಕೇಸು" ಎಂದು ಮುಕ್ತಾಯವಾಗಿತ್ತು. ಇದು ಅಲ್ಲಿ ನನಗಾದ ಅನುಭವ. ಇಂತಹ ಇನ್ನೂ ಸಾಕಷ್ಟಿವೆ. ನನ್ನ "ಕಣಿವೆಪುರದ ಕಥೆಗಳು" ಮಾಲಿಕೆಯಲ್ಲಿ ಅದನ್ನು ಮುಂದುವರಿಸುತ್ತೇನೆ. ನನ್ನ ಪ್ರಕಾರ ದೇವರು ಇದ್ದಾನೆ ಎಂದನ್ನುವುದಾದರೆ ದೆವ್ವಗಳೂ ಇವೆ.
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
ಮಂಜು, ವಂದನೆಗಳು. ಹುಟ್ಟು ಹಾಕಿದ್ದೀರಿ ಅಲ್ಲ, ಹುಟ್ಟುಹಾಕಿದ್ದೀರಿ. :-)
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
>>> ಇದುವರೆಗೂ ಲಘುವಾಗಿ ಸುಪ್ರೀತ್ ಜೊತೆ ಚರ್ಚಿಸುತ್ತಿದ್ದೆ.
ಘನವಾದದ್ದೇನೂ ಹೇಳಿಲ್ಲ ಹಾಗಾದರೆ ನೀವು. ಆ ಉಸಿರುಗಟ್ಟುವಿಕೆ ಪ್ರಯೋಗ ಬೊಗಳೆಯಾ ಹಾಗಾದರೆ?
>>> ಅವರ ಪ್ರಕಾರ ಆ ಬಂಡೆಕಲ್ಲಿನ ಮೇಲೆ ಒಬ್ಬ ಯುವತಿ, ತಲೆಯಿಲ್ಲದವಳು, ಕುಳಿತು ಅಳುತ್ತಿರುವುದು ಅವರ ಅನುಭವಕ್ಕೆ ಬಂದಿತ್ತಂತೆ
ತಲೆಯಿಲ್ಲದ ಯುವತಿ ಅಳುತ್ತಿದ್ದಳೇ? ಕೈಗಳಿಂದಲೇ?
ಯುವತಿ ಬಹುಶಃ ಒದ್ದೆ ಬಟ್ಟೆ ಹಾಕಿದ್ದಳೆಂದು ಕಾಣುತ್ತೆ. ಬಂಡೆ ತಣ್ಣಗಿತ್ತಲ್ಲವಾ? ಬಹುಶಃ ರಾತ್ರಿಯೆಲ್ಲ ಎದ್ದಿದ್ದು ‘ದರ್ಶನ’ಕೊಟ್ಟು ಹಗಲು ನಿದ್ದೆ ಮಾಡಿರಬೇಕು. ಹೀಗಾಗಿ ಮುಸ್ಸಂಜೆ ಹೊತ್ತಲ್ಲ ಬಟ್ಟೆ ಒಗೆದುಕೊಂಡಿದ್ದಳೆಂದು ಕಾಣುತ್ತೆ. ಹೀಗಾಗಿ ರಾತ್ರಿ ಅದು ಒಣಗಿರಲಿಕ್ಕಿಲ್ಲ!
ನಿಮಗಾದ ಅನುಭವ ಏನು?
೧. ಬಂಡೆಯೊಂದರ ಬಳಿ ನಿಗೂಢವಾದದ್ದೇನೋ ಇದೆ. ಅದು ದೆವ್ವ ಎಂದು ಹಲವರು ಹೇಳಿದರು.
೨. ಬಂಡೆ ಒಂದು ಸ್ಥಳದಲ್ಲಿ ಮಾತ್ರ ತಣ್ಣಗಿತ್ತು. ನಿಮ್ಮ ನಾಯಿಗಳು ಬಂಡೆಯ ಬಳಿ ಬೊಗಳಿದವು.
೩. ಆ ಬಂಡೆಯ ಬಳಿ ನಡೆದಿದ್ದ ಕೊಲೆಯೊಂದರ ಬಗ್ಗೆ ಮಾಹಿತಿ ಸಿಕ್ಕಿದ್ದು.
ಇವಿಷ್ಟರಿಂದ ಪಡೆದ ಅನುಭವ: ದೆವ್ವವಿದೆ- ಇದು ನನ್ನ ಅನುಭವ!
ಈಗೊಂದು ಅನಾಲಜಿ ಹೇಳುವೆ.
೧. ಹೋಟೆಲೊಂದರಲ್ಲಿ ಜಾಮೂನು ಬಲು ರುಚಿಯಾಗಿರುತ್ತೆ. ಅದು ಬಲು ರುಚಿ ಎಂದು ಹಲವರು ಹೇಳಿದರು.
೨. ಹೊಟೇಲಿನಲ್ಲಿ ಹಲವು ಮಂದಿ ಜಾಮೂನು ತಿನ್ನುತ್ತಿದ್ದರು. ನಿಮ್ಮ ಮೂಗಿಗೆ ಅದರ ಸುವಾಸನೆ ಬಂದಿತು.
೩. ಪರಿಚಿತನೊಬ್ಬ ಹೇಳಿದ. ಹೊಟೇಲ್ ಮಾಣಿ ಭಾರಿ ಒಳ್ಳೆ ಕುಕ್ಕು. ಅವನ ಜಾಮೂನು ಬಲು ರುಚಿ.
ಕನ್ ಕ್ಲೂಷನ್: ನಾನು ಜಾಮೂನು ತಿಂದ ಅನುಭವ!
ಉ: ದೆವ್ವ, ಪ್ರೇತಗಳು ನಿಜವಾಗಿ ಇವೆಯೆಯೇ? ನಿಮಗೇನಾದರೂ ಅದರ ...
Subjective!