ಮೌನ ಆಚರಿಸಿದಿರಾ?
ಮೋಹನಚಂದ್ ಕರಮ್‌ದಾಸ್ ಗಾಂಧಿ ಬಗ್ಗೆ ಅಭಿಪ್ರಾಯ ಏನೇ ಇರಲಿ, ನಾನಿಂದು ಬೆಳಗ್ಗೆ ಹನ್ನೊಂದು ಗಂಟೆಗೆ ಎದ್ದುನಿಂತು ಎರಡು ನಿಮಿಷ ಮೌನ ಆಚರಿಸಿದೆ. ನೀವು ಆಚರಿಸಿದಿರಾ? ಆಚರಿಸಲಿಲ್ಲವಾದರೆ ಏಕೆ?
- Login or register to post comments
- 1083 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಉ: ಮೌನ ಆಚರಿಸಿದಿರಾ?
ನಾನು ಆಚರಿಸಲಿಲ್ಲ.
ಕಾರಣ, ನನಗೆ ಇದರ ಬಗ್ಗೆ ನೆನಪಾಗಲಿಲ್ಲ.
ಉ: ಮೌನ ಆಚರಿಸಿದಿರಾ?
ನಮ್ಮಾಫೀಸಲ್ಲಿ - ಒಂದು ಸರಕಾರೀ ಬ್ಯಾಂಕು - ಯಾವಾಗ್ಲೂ ಮೌನಾಚರಣೆ ಮಾಡೋರು. ಈ ಸಲ ಮಾಡ್ಲಿಲ್ಲ ಅಂತ ಕಾಣಿಸುತ್ತದೆ. ನನಗೆ ನೆನಪೂ ಆಗ್ಲಿಲ್ಲ, ನೀವು ಕೇಳಿದಾಗಲೇ ನೆನಪಾದದ್ದು :(
ಉ: ಮೌನ ಆಚರಿಸಿದಿರಾ?
ಹೌದು, ನಮ್ಮ ಕಾಲೇಜಿನಲ್ಲಿ ಆಚರಿಸಿದೆ.
ಉ: ಮೌನ ಆಚರಿಸಿದಿರಾ?
ಹೌದು
ಉ: ಮೌನ ಆಚರಿಸಿದಿರಾ?
ಮೌನ ಆಚರಿಸಿ ಏನು ಆಗಬೆಕಾಗಿಲ್ಲ ಅಂತ ನನ್ನ ಅನಿಸಿಕೆ .. ನಾನು ಹೆಚ್ಹಾಗಿ ಕೆಲಸದಲ್ಲಿ ಇರುವಾಗ ಮೌನವಾಗೆ ಇರ್ತೀನಿ ಗಂಟೆಗಟ್ಟಲೆ ಮೊನ್ನೆನು ಹಾಗೆ ಇದ್ದೆ..
ಉ: ಮೌನ ಆಚರಿಸಿದಿರಾ?
ನೀವು ಹೇಳುತ್ತಿರುವುದು ನಿಜ.
ಒಂದು ರೀತಿಯಲ್ಲಿ ಈ ಪ್ರಶ್ನೆಯ ನೇರ ಭಾವನೆಯೇ ತಪ್ಪು.
ನೀವು ಅನ್ನುವಂತೆ ಮೌನ ಆಚರಿಸಿ ಏನೂ ಆಗಬೇಕಾಗಿಲ್ಲ. ಆಗುವುದೂ ಇಲ್ಲ. ನಾವೆಲ್ಲರೂ ಕೆಲಸದಲ್ಲಿ ಮಗ್ನರಾಗಿರುವಾಗ ಮೌನವಾಗಿರುವ ಸಮಯವೇ ಜಾಸ್ತಿ.
ಈ ಪ್ರಶ್ನೆ, ನಮ್ಮನ್ನು ಪರೋಕ್ಷವಾಗಿ, ಮೌನ ಆಚರಿಸಿ, ಹುತಾತ್ಮರನ್ನು ನೆನೆದು, ಅವರಂತೆ ನಾವುಗಳೂ ಈ ದೇಶಕ್ಕಾಗಿ ಏನಾದರೂ ಮಾಡುತ್ತೇವೆ ಅನ್ನುವ ದೀಕ್ಷೆ ತೊಟ್ಟಿರಾ ಅಂತ ಕೇಳುತ್ತಿದೆಯಾದರೆ, ಅದು ಸಮಂಜಸ ಎನಿಸುತ್ತದೆ.
ಉ: ಮೌನ ಆಚರಿಸಿದಿರಾ?
ಯಾಕೋ ಗೊತ್ತಿಲ್ಲ , ಇದು ವಿಷಯನ್ಥರ ಆಗುತ್ತೆ ಅಂತ ಗೊತ್ತಿದ್ದೇ ನಾನು ಕರಣ ಕೊಟ್ಟಿರಲಿಲ್ಲ . ಗಾಂಧೀ ತಾತ ಒಳ್ಳೆಯವರೇ . ಇಲ್ಲ ಅಂದಿಲ್ಲ . ಆದರೆ ಸ್ವಲ್ಪ ಅವರು ತೋರಿದ ಅಲ್ಪ ಸಂಖ್ಯಾತರ ಒಲವು ಆಗಸ್ಟ್ ೧೪ ರ ಮಾರಣ ಹೋಮಕ್ಕೆ ಕಾರಣ ಆಯಿತು . ಅದು ತಪ್ಪು ಅಂದಿದ್ದು .
ಉ: ಮೌನ ಆಚರಿಸಿದಿರಾ?
ಜನವರಿ ೩೦ ಹುತಾತ್ಮರ ದಿನ.
ಗಾಂಧೀಜಿಯವರನ್ನಷ್ಟೇ ನೆನೆಯುವ ದಿನ ಅಲ್ಲ.
ಗಾಂಧೀಜಿ ಅಲ್ಲಿ ನೆಪ ಮಾತ್ರಾ.
ಹುತಾತ್ಮರನ್ನು ನೆನೆದು ಮೌನಾಚರಣೆ ಮಾಡುವುದು ರೂಢಿ.
ಉ: ಮೌನ ಆಚರಿಸಿದಿರಾ?
ನಿನ್ನೆ ನಡೆದ ಚರ್ಚೆಯನ್ನು ಇಲ್ಲಿಂದ ಕಿತ್ತು ಹಾಕಿದ್ದು ಯಾಕೆ?
ಕೆಲವರ ಇತಿಹಾಸ ಪ್ರಜ್ಞೆ ಮತ್ತು ದೇಶಭಕ್ತಿ ಎಷ್ಟು ಢೋಂಗಿ ಎಂದು ಎಲ್ಲರಿಗೂ ತಿಳಿಯಬೇಕಿತ್ತು.
ಇಂಡಿಯಾಕ್ಕೂ ಹಿಂದುಸ್ತಾನಕ್ಕೂ ಇರುವ ವ್ಯತ್ಯಾಸವನ್ನು ಎಲ್ಲರೂ ಅರಿಯಬೇಕಿತ್ತು!
ಉ: ಮೌನ ಆಚರಿಸಿದಿರಾ?
naanu kittu hakiddalla ! naanu adakke uttarisalende bandava !! howdu nanagu kelavu vishayagaliddavu ... bidi ..gaandhi ya hesaralli kittadodu tappu... dodda manushya avaru ...
ಉ: ಮೌನ ಆಚರಿಸಿದಿರಾ?
ಮನ್ನಿಸಿ. ನಾನು ಪ್ರಶ್ನೆ ಕೇಳಿದ್ದು ತಮಗಲ್ಲ. ಕಿತ್ತು ಹಾಕಿದವರಿಗೆ!
ತಮಗೆ ಕಮೆಂಟನ್ನು ಕಿತ್ತುಹಾಕುವ ಅಧಿಕಾರಗಳಿಲ್ಲ ಎಂಬುದು ನನಗೆ ಗೊತ್ತು!
ಉ: ಮೌನ ಆಚರಿಸಿದಿರಾ?
ಹೌದು, ಸರಿಯಾದ ಇತಿಹಾಸ ಗೊತ್ತಿಲ್ಲದವರ ಜಾತ್ಯತೀತ ಸೋಗಲಾಡಿತನ ಹೊರಗೆ ಬರಬೇಕಿತ್ತು.
ಉ: ಮೌನ ಆಚರಿಸಿದಿರಾ?
so called ದೇಶಭಕ್ತರ ಯೋಗ್ಯತೆ ಮತ್ತು ಇತಿಹಾಸ ಜ್ಞಾನ ಎಲ್ಲರಿಗೂ ಗೊತ್ತಾಗಲಿ ಎಂದು ಮತ್ತೆ ಹಾಕುತ್ತಿದ್ದೇನೆ.
ನಮ್ಮ ಭೂಭಾಗವನ್ನು ಇಂಡಿಯಾ ಎಂದು ಅಲೆಕ್ಸಾಂಡರನ ಕಾಲದಲ್ಲೇ ಕರೆಯಲಾಗುತ್ತಿತ್ತು. ಇದು ನಮ್ಮ ಐದನೆಯ ಮತ್ತು ಎಂಟನೆಯ ತರಗತಿಯ ಇತಿಹಾಸದ ಪಠ್ಯಪುಸ್ತಕದಲ್ಲಿತ್ತು.
ಇನ್ನೊಮ್ಮೆ ತಿರುವಿ ಹಾಕಿ.
ಇನ್ನು ಹಿಂದುಸ್ತಾನ ಎಂದು ಮೊದಲು ಕರೆದಿದ್ದರ ಬಗ್ಗೆ ಇಲ್ಲಿದೆ : http://en.wikipedia....
ಹಿಂದುಸ್ತಾನ ಮತ್ತು ಇಂಡಿಯಾ ಸಮಾನ ಗೌರವವುಳ್ಳ ಪದಗಳು. ಯಾಕೆಂದರೆ ಎರಡನ್ನೂ ವಿದೇಶಿಯರು ಕೊಟ್ಟಿದ್ದು. (ಹಿಂದುಸ್ತಾನ ಎಂಬ ಹೆಸರು ಕೊಟ್ಟಾಗ ಮುಸ್ಲಿಮರು ಭಾರತದ ಭಾಗವಾಗಿರಲಿಲ್ಲ ಎಂದು ನೆನಪಿರಲಿ)
"ಇಂಡಿಯಾ" ಎಂಬ ಪದಕ್ಕೆ ಮಾತ್ರ ಮಡಿವಂತಿಕೆ ಏಕೆ? "ಹಿಂದು" ಎಂಬ ಹೆಸರೂ ನಾಲಗೆ ಹೊರಳದ ವಿದೇಶಿಯನಿಂದಲೇ ಬಂದದ್ದು "ಇಂಡಿಯಾ" ನೂ ಅಷ್ಟೇ!
ಹಿಂದೂ ಎಂಬ ಪದ ನಮ್ಮ ಪ್ರಾಚೀನ ಗ್ರಂಥಗಳಲ್ಲೆಲ್ಲೂ ಉಲ್ಲೇಖ ಆಗಿಲ್ಲ ಎಂಬುದೂ ಗೊತ್ತಿಲ್ಲದ ದೊಡ್ಡಮನುಷ್ಯರು ಜಗತ್ತಿಗೆ ಇತಿಹಾಸ ಪಾಠ ಹೇಳಿಕೊಡುತ್ತಿದ್ದಾರೆ. ಹಿಂದೂ ಎಂದರೆ ಮಾತ್ರ ದೇಶಾಭಿಮಾನ ಇಂಡಿಯಾ ಎಂದರೆ ಢೋಂಗಿತನ! ಚೆನ್ನಾಗಿದೆ.
ನಮ್ಮ ಜನರಲ್ಲಿನ ಇತಿಹಾಸ ಪ್ರಜ್ಞೆಯ ಕೊರತೆಯ ಬಗ್ಗೆ ನನಗೆ ಮರುಕವೆನಿಸುತ್ತದೆ. ಇದು ಭಾರತ ಎಂಬ ದೇಶದ ದೌರ್ಭಾಗ್ಯ.
ಉ: ಮೌನ ಆಚರಿಸಿದಿರಾ?
'ಇಂಡಿಯಾ' ಅನ್ನೋ ಹೆಸರು ತೆಗೆದು 'ಹಿಂದೂಸ್ತಾನ' ಅಂತ ಮಾಡೋದ್ರಿಂದ ಏನಾದ್ರೂ ಮಿರಾಕಲ್ ಆಗುತ್ತಾ!?
ಉ: ಮೌನ ಆಚರಿಸಿದಿರಾ?
ಅದು ಗೊತ್ತಿಲ್ಲ. "ಇಂಡಿಯಾ" ಎಂದು ಕರೆದರೆ "ಅವಮಾನ", "ಹಿಂದುಸ್ತಾನ" ಎಂದು ಕರೆದರೆ "ಸನ್ಮಾನ" ಎಂದುಕೊಂಡಿರುವ ದೇಶಭಕ್ತ ಇತಿಹಾಸ ತಜ್ಞರನ್ನೇ ಕೇಳಬೇಕು.
ಉ: ಮೌನ ಆಚರಿಸಿದಿರಾ?
ಎರಡೂ ಬೇಡ, "ಭಾರತ" ಅನ್ನಬಾರದೇಕೆ?
ನಾವು ಭಾರತೀಯರು ತಾನೇ?
ಉ: ಮೌನ ಆಚರಿಸಿದಿರಾ?
>>ಹಿಂದೂ ಎಂದರೆ ಮಾತ್ರ ದೇಶಾಭಿಮಾನ ಇಂಡಿಯಾ ಎಂದರೆ ಢೋಂಗಿತನ! ಚೆನ್ನಾಗಿದೆ.<<
ಅಭಿಮಾನ ದೇಶದ ಮೇಲಿದೆಯೋ ...ಆ ಹೆಸರಿನ ಮೇಲಿದೆಯೋ...?
ನಿಜವಗಿಯೂ ಅಭಿಮಾನ ಇದೆಯೋ...?
:)
ಉ: ಮೌನ ಆಚರಿಸಿದಿರಾ?
:)
<<
ಅಭಿಮಾನ ದೇಶದ ಮೇಲಿದೆಯೋ ...ಆ ಹೆಸರಿನ ಮೇಲಿದೆಯೋ...?
ನಿಜವಗಿಯೂ ಅಭಿಮಾನ ಇದೆಯೋ...? >>
ಕರೆಕ್ಟ್ ಆಗಿ ಹೇಳಿದ್ರಿ ಸರ್ !
ಈರೆಗ್ ನೂದೆಕ್ಕು ನೋಡು ಮಾರ್ಕು ತೂಲೆ !!( ನಿಮಿಗೆ ನೂರರಲ್ಲಿ ನೂರು ಮಾರ್ಕು ನೋಡಿ !!)
ವಂದನೆಗಳು
ಪ್ರವೀಣ ಸಾಯ
ಉ: ಮೌನ ಆಚರಿಸಿದಿರಾ?
ಹರ್ಷ ಅವರೇ,
"ಪಾಕಿಸ್ತಾನ" ಪಾಕಿಸ್ತಾನ ಆಗ್ಬೋದು ಅಂದ್ರೆ ಭಾರತವನ್ನು "ಭಾರತ " ಅಂತ ಕರ್ಯೋದು ತಪ್ಪಾ..ಹಿಂದೂ ಸ್ಥಾನ ಅಂದ್ರೆ ಹಿಂದೂಗಳು ಮಾತ್ರ ಇರೋ ಊರು ಎಂದಲ್ಲ .
ಬಾಂಗ್ಲಾ ದೇಶ ,ಪಾಕಿಸ್ಥನ ಹಾಗೇ ನೆ ನಮ್ಮದ್ದು ಭಾರತ . ಕರ್ನಾಟಕ ನ "yellow flag area " ಅಂದ್ರೆ ಬೇಜಾರಗಲ್ವ ನಮಗೆ .ಹಂಗೆ ನೆ ಇದು.. ಕೋಮುವಾದ ಇಲ್ಲ ಇದರಲ್ಲಿ.
""Historical term, usually applied to the Ganges Plain of North India, between the Himalayas in the north and the Deccan plateau in the south. Used variably throughout Indian history—generally in contradistinction to the Deccan of peninsular India—it gradually came to mean the whole of N India from the Punjab to Assam. The term Hindustan has also been applied to the whole Indian subcontinent.
– The Columbia Encyclopedia, Sixth Edition Copyright© 2004, Columbia University Press. "
ಬದಲಿಗೆ ಮೊದಲು ಈದೇಶದಲ್ಲಿ ಹಿಂದೂಗಳು ಜಾಸ್ತಿ ಇದ್ರೂ ಅಂತ . ಅದುಕ್ಕು ಮೊದಲು ಹಿಂದೂಗಳು ಮಾತ್ರ ಇದ್ದರು ಅಂತ.
ತಾವು ಹೇಳಿದ ಪ್ರಕಾರ ತಾವು ಮೊದ್ಲು ಆ TAX ವಿಷ್ಯ ಬಾರೋ ಮೊದ್ಲು ಭಾರತ ಪ್ರೇಮಿ ಆಗಿದ್ರಿ . ಈಗ ದೇಶ ನ ಚೂರು ಚೂರು ಮಾಡಿದ್ರೆ ಚೆನ್ನಾಗಿರುತ್ತೆ ಅಂದ್ರಿ ತಾವೇ . ಅವಾಗ ತಮ್ಮನ್ನು ಹರ್ಷ ಅಂತ ಕರಿತಿದ್ದು ಆಮೇಲೆ ತಾವು ಚೇಂಜ್ ಅದ್ರಿ ಅಂತ ತಮ್ಮ ಹೆಸರು ಬೇರೆ ಹಿಡಿದು ಕರೆದರೆ ಬೇಜಾರಗಲ್ವ ತಮಗೆ ..?
ಹಾಗೆ ನೆ ಇದು ಕೂಡ . ದೇಶ ದ ಮೂಲ ಹೆಸರು ನ ಬದಲಾವಣೆ ಮಾಡಿದ್ರೆ ಮನಸ್ಸು ಮುದುಡುತ್ತೆ .
ಸದ್ದಾಂ ಹುಸೇನ್ ,ಲಾಡೆನ್ ಅಂಥವರನ್ನೇ ಹೆಸರು ಬದಲಿಸಿಲ್ಲ, ಚೇಂಜ್ ಅದ್ರು ಅಂತ ! ಇನ್ನು ಪಾಪ ನಮ್ಮ ಮಾತೆ ಅವ್ಳು ...ಅವ್ಳು ಹೆಸರು ಚೇಂಜ್ ಮಾಡಿದ್ರೆ ಬೇಜಾರಾಗುತ್ತೆ
ಬೇಜಾರು ಇಂಡಿಯಾ ಅಂತ ಕರೆದಿದ್ದಕ್ಕೆ ಅಲ್ಲ . ಅಮ್ಮನ ಹೆಸರು ಚೇಂಜ್ ಮಾಡಿದ್ದಕ್ಕೆ .
ಉ: ಮೌನ ಆಚರಿಸಿದಿರಾ?
ಪದೇ ಪದೇ ಅದನ್ನೇ ಹೇಳುತ್ತೀರಲ್ರೀ.
ನನಗೆ ಈ ದೇಶವನ್ನು ಹಿಂದುಸ್ತಾನ, ಭಾರತ, ಇಂಡಿಯಾ ಯಾವ ಹೆಸರಲ್ಲಿ ಕರೆದರೂ ಬೇಜಾರಿಲ್ಲ, ತಕರಾರಿಲ್ಲ
"ಇಂಡಿಯಾ" ಎಂಬ ಹೆಸರು ಹಿಂದುಸ್ತಾನ ಎಂಬ ಹೆಸರಿಗಿಂತ ಮೊದಲು ಬಂತು ಎಂದು ಹೇಳುವುದಷ್ಟೇ ನನ್ನ ಉದ್ದೇಶ! ಅದಕ್ಕೆ ತಕ್ಕ ದಾಖಲೆ ಗಳನ್ನು ಕೊಟ್ಟೆ ಅಷ್ಟೇ! ಇದನ್ನ ಹೇಳಿದ ಮಾತ್ರಕ್ಕೆ ನನಗೆ ಹಣೆಪಟ್ಟಿ ಬಿರುದುಗಳನ್ನು ಕೊಡುವ ಅವಶ್ಯಕತೆಯಿಲ್ಲ.
ಈ ದೇಶದ ಮೂಲ ಹೆಸರು ಹಿಂದುಸ್ತಾನ ಅಲ್ಲ. ಅದು ಬಂದದ್ದು ಹನ್ನೊಂದನೆಯ ಶತಮಾನದ ನಂತರ. ಹಾಗೆಯೇ ನಮ್ಮ ಧರ್ಮದ ಹೆಸರು "ಹಿಂದೂ" ಎಂದೂ ಅಲ್ಲ, ಅದು ಬೇರೆಯವರು ನಮ್ಮ ಧರ್ಮಕ್ಕೆ ಕೊಟ್ಟ ಹೆಸರು! ಹಾಗಂತ ನನ್ನನ್ನು ಹಿಂದೂ ವಿರೋಧಿ ಎನ್ನುವ ಅವಶ್ಯಕತೆಯಿಲ್ಲ. ಹಿಂದೂ ಮತ್ತು ಹಿಂದುಸ್ತಾನ ಎಂಬ ಹೆಸರು ಬಂದದ್ದು ಹನ್ನೊಂದನೆಯ ಶತಮಾನದಿಂದೀಚೆಗೆ!
ನಮ್ಮ ದೇಶದ ಮೂಲ ಹೆಸರು ತೆಂಕಣದ ಕಡೆ ಆರ್ಯಾವರ್ತ ಬಡಗಣದ ಕಡೆ ಗೋಂಡವನ(ನಂತರ ಅದನ್ನು ದ್ರವಿಡ, ಕನ್ನ, ಕರ್ಣಾಟ ಇತ್ಯಾದಿಗಳಾಗಿ ಕರೆಯಲಾಯಿತು). ಇದನ್ನೇ ಕರೆಯುವುದಾದರೂ ನನಗೆ ಅಭ್ಯಂತರವಿಲ್ಲ.
ನಾನು ಹೇಳುತ್ತಿರುವುದು ಸತ್ಯ. ಇದಕ್ಕೆ ದಾಖಲೆಗಳನ್ನೂ ಒದಗಿಸಿದ್ದೇನೆ! ಇದರ ಮೇಲೆ ನಿಮ್ಮಿಷ್ಟ. ಮತ್ತೆ ಹೇಳುತ್ತಿದ್ದೇನೆ- ನಾನು ಇಲ್ಲಿ ಹೆಸರನ್ನು ಬದಲಿಸಿಲ್ಲ. ಇದ್ದ ಹೆಸರು ಹೇಗೆ ಬಂದವು ಎಂದು ಹೇಳಿದ್ದೇನೆ ಅಷ್ಟೇ! ಹಿಂದುಸ್ತಾನ ಎಂಬ ಹೆಸರು ನಮ್ಮ ದೇಶದ ಮೂಲ ಹೆಸರಲ್ಲ. ಹಾಗೆಯೇ ಇಂಡಿಯಾ ನೂ ಅಲ್ಲ.
ಸಿಂದೂ ನದಿಯ ಆಚೆಗಿನ ಭೂಮಿ ಹಿಂದುಸ್ತಾನ, ಸಿಂಧು ನದಿಯಾಚೆ ಇರುವವರು ಹಿಂದೂಗಳು ಇಷ್ಟೇ Basic Definiton! ಯುರೋಪಿಯನ್ನರಿಗೆ ಇಂಡಿಯಾ ಮತ್ತು ಇಂಡಿಯನ್ಸ್ ಅಷ್ಟೇ! ಇಂಡಿಯಾ ಎಂಬ ಹೆಸರು ಹಿಂದುಸ್ತಾನ ಎಂಬ ಹೆಸರಿಗಿಂತ ಹಳೆಯದು ಇದೂ ಸತ್ಯ. ನೀವು ಈ ದೇಶವನ್ನು ಯಾವ ಹೆಸರಿನಿಂದ ಬೇಕಿದ್ದರೂ ಕರೆಯಬಹುದು. ಹಿಂದುಸ್ತಾನ, ಭಾರತ ಏನಾದರೂ...ನನ್ನ ಆಕ್ಷೇಪಣೆಯಿಲ್ಲ.
ಉ: ಮೌನ ಆಚರಿಸಿದಿರಾ?
:)
ಪರವಾಗಿಲ್ಲ . ತಾವು ಹೇಳಿದ ವಿಷ್ಯ ಸರಿ ಇದೆ... ಆದರೆ ಭಾವ ಸರಿ ಅನ್ನಿಸದೆ ಹೇಳಿದ್ದು ರೀ ...
ದೇಶ ಪ್ರೇಮ ಅಂತ ನಾನೇನು ಬರೆದರು ತಮಗೆ ಅದು ಗೊಡ್ಡು ಪೊಳ್ಳು ಅನ್ನಿಸುತ್ತೆ . ಹಾಗಾಗಿ ಈ ವಿಷಯದಲ್ಲಿ ಜಾಸ್ತಿ ತಕರಾರು ಯಾಕೆ ಅನ್ನಿಸಿದೆ . "ಇಂಡಿಯಾ ಇಸ್ ಮೈ ಕಂಟ್ರಿ " ಭಾರತ ವು ನಮ್ಮ ದೇಶ . ಆದ್ರೆ ಈಗಲೂ ಅದೇ ಯುರೋಪಲ್ಲಿ ಇರೋ ಅಸ್ಥು ಜನ ಭಾರತೀಯರು ( ಅಲ್ಲಿ ಪಾಕಿ ಗಳು , ಬಾಂಗ್ಲಾ ದೇಶ ದ ಹಾಗು ಭಾರತೀಯರು ) ಎಲ್ಲರು ಒಟ್ಟಾಗಿ ತಮ್ಮನ್ನು ತಾವು ಹಿಂದುಸ್ತಾನಿ ಗಳು ಅಂತಾರೆ . ಬಿಡಿ ವಿಷಯಾಂತರ ಯಾಕೆ . ಎಲ್ಲ ದಾಖಲೆಗಳಿಂದ ಲೇ ಆಗೋದಲ್ಲ. ಕೆಲವೊಂದು ಭಾವನೆಗಳಿನ್ದಾನು !
ಪ್ರವೀಣ ಸಾಯ
ಉ: ಮೌನ ಆಚರಿಸಿದಿರಾ?
<<ಎಲ್ಲ ದಾಖಲೆಗಳಿಂದ ಲೇ ಆಗೋದಲ್ಲ. ಕೆಲವೊಂದು ಭಾವನೆಗಳಿನ್ದಾನು ! >>
ಏನು ಭಾವನೆಗಳು? ಎಂತಹ ಭಾವನೆಗಳು? ಭಾವನೆಗಳ ಹೆಸರಿನಲ್ಲಿ ಸತ್ಯವನ್ನು ಮುಚ್ಚಿಹಾಕಬೇಕೆ? ಸತ್ಯ ಹೇಳಿದ ಮಾತ್ರಕ್ಕೆ ಕೆಟ್ಟದಾಗಿ ಬೈಸಿಕೊಳ್ಳಬೇಕೆ? ಹಣೆಪಟ್ಟಿಗಳನ್ನು ಪಡೆಯಬೇಕೇ?
ಭಾವನೆಗಳು ಸತ್ಯಕ್ಕೆ ವಿರುದ್ಧವಾಗಿದ್ದರೂ ನಡೆಯುತ್ತಾ? ಕೆಲ ಜನರನ್ನು ಮುಟ್ಟಿದರೆ ಅಪವಿತ್ರ ಎಂಬುದು ಕೆಲವರ "ಭಾವನೆ". ಆ ಭಾವನೆ ಸರಿನಾ? ಅದಕ್ಕೆ ಬೆಲೆ ಕೊಡಬೇಕಾ?
ಭಾವನೆಗಾಗಿ ಸತ್ಯವನ್ನು ತುಳಿಯುವುದಾದರೆ ದಿಟವ ನುಡಿದ ಗೆಲಿಲಿಯೋನನ್ನು ದಂಡಿಸಿದ ಯುರೋಪಿಯನ್ ಚರ್ಚಿಗೂ ನಿಮಗೂ ಏನು ವ್ಯತ್ಯಾಸ?
ಸತ್ಯ ಹೇಳುವವನು ನಿರ್ವಿಕಾರನಾಗಿರಬೇಕು ಎಂದು ನನ್ನ ಅನಿಸಿಕೆ! ಅದಕ್ಕೆ ಸಾಕ್ಷಿಪ್ರಜ್ಞೆ ಎನ್ನುತ್ತಾರೆ. ಅದನ್ನೇ ನಾನು ಮಾಡಿದ್ದು. ಅದಕ್ಕಾಗಿ ಇಷ್ಟೆಲ್ಲ ತೆಗಳುವುದು ಬೇಕಿರಲಿಲ್ಲ.
ಉ: ಮೌನ ಆಚರಿಸಿದಿರಾ?
<<ಏನು ಭಾವನೆಗಳು? ಎಂತಹ ಭಾವನೆಗಳು? >>
ದೇಶಾಭಿಮಾನ ಅನ್ನುವ ಭಾವನೆ .ಎಂಥಹ ಭಾವನೆ ಅಂದರೆ ಅದು ಮನಸನ್ನು ಪುಳಕ ಗೊಳಿಸುವ ಭಾವನೆ !
ನಾನು ದಿನಕ್ಕೆ ಒಂದು ಅರ್ಟಿಕಾಲ್ ಆದರು ಓದೇ ಓದ್ತೀನಿ . ಹೇಗೆ ಭಾರತ ಜಗತ್ತಲ್ಲಿ ತನ್ನ ಫೂಟ್ ಪ್ರಿಂಟ್ಸ್ ಅನ್ನು ಮೂಡಿಸ್ಥಾ ಇದೆ ಅಂತ . ಓದಿ ಮುಗಿಸಿ ಮನಸ್ಸು ಒಮ್ಮೆ ತುಂಬಿ ಬಂದು ನೀಲಾಕಾಶ ನೋಡ್ತೇನೆ .. ಅಲ್ಲೆಲ್ಲೋ ದೂರದಲ್ಲಿ ನನ್ನ ದೇಶ ಇರಬೋದೇನೋ ಅನ್ನಿಸುತ್ತೆ ! ಇಂಥಹ ಭಾವನೆ ! !
"ನನ್ನ ದೇಶ " ಭಾರತ , ಅಂತ ಹೇಳುವಾಗ ಹುಟ್ಟುವ ಭಾವನೆ . ಮನಸ್ಸು ತುಂಬಿ ಬರುವ ಭಾವನೆ . ನಾನು ನನ್ನ ಅಪ್ಪ ಅಮ್ಮನನ್ನು ತುಂಬಾ ಕಾಲ ಕಳ್ದು ನೋಡ್ತ್ಹಿನಲ್ವ , ಆಗ ಮನಸ್ಸು ಒಂದು ತುಮ್ಬುತ್ತಲ್ವ . ಅದೇ ಥರದ ಭಾವನೆ .
<<ಭಾವನೆಗಳ ಹೆಸರಿನಲ್ಲಿ ಸತ್ಯವನ್ನು ಮುಚ್ಚಿಹಾಕಬೇಕೆ?
ಬೇಡ . ನನ್ನ ಪ್ರತಿಕ್ರಿಯೆ ಇನ್ನೊಮ್ಮೆ ಓದಿ . "ಇಂಡಿಯಾ ಇಸ್ ಮೈ ಕಂಟ್ರಿ , ಭಾರತವು ನನ್ನ ದೇಶ " ಅಂದಿದ್ದು . ಅಂದರೆ ಎರಡು ಕೂಡ ನಮ್ಮ ದೇಶ ದ ಬಗ್ಗೆ ಅನ್ನುವ ಸ್ಥೂಲಾರ್ಥ ದಲ್ಲಿ !
<<ಸತ್ಯ ಹೇಳಿದ ಮಾತ್ರಕ್ಕೆ ಕೆಟ್ಟದಾಗಿ ಬೈಸಿಕೊಳ್ಳಬೇಕೆ? ಹಣೆಪಟ್ಟಿಗಳನ್ನು ಪಡೆಯಬೇಕೇ?
ನಾನೆಲ್ರಿ ಬೈದೆ ತಮ್ಮನ್ನ .. ಏನ್ರಿ ಹಣೆ ಪಟ್ಟಿ ಕೊಟ್ಟೆ ತಮಗೆ :) ಬಿಡಿಸಿ ಹೇಳಿ . ದೇಶ ಹಿಂದುಸ್ತಾನ ಆಗಿತ್ತು, ಭಾರತ ಅಂತ ಕರೀತಿದ್ರು , ಭಾರತ ಖಂಡ ಅನ್ನೋರಿದ್ರು , ಈಗ ೫೦ ವರ್ಷ ಹಿಂದೆ ೧೦೦ ವರ್ಷ ನಮ್ಮನ್ನು use ಮಾಡಿ ಹೋದ ಬಿಳಿಯರು ಹೇಳಿದ್ದೆ ವೇದ ವಾಕ್ಯ ಅನೋದನ್ನ ಖಂಡಿಸಿ , ಭಾರತ ಅನ್ನೋದು ನಮ್ಮ ಮೂಲ ನಾಮ , ಇಂದು ಹಿಂದುಸ್ತಾನ ( ಅಂದರೆ ಕೋಮು ಅಲ್ಲ ಸರ್ ! ಹೆಸರು ಮಾತ್ರ ! ) ಇಲ್ಲಿ ಹಿಂದೂಗಳು ಬಹುಸಂಖ್ಯಾತರು , ಇಲ್ಲಿ ಹಿಂದುಗಳಿಗೆ ಸ್ವಲ್ಪ ಮನ್ನಣೆ ಕೊಟ್ಟು ನಮ್ಮ ಸಂಸ್ಕೃತಿಯನ್ನು ಬೆಳೆಸಿದರೆ ಚೆನ್ನಾಗಿರ್ತಿತ್ತು ಅಂದೇ ಅಸ್ತೆ !!
<<ಕೆಲ ಜನರನ್ನು ಮುಟ್ಟಿದರೆ ಅಪವಿತ್ರ ಎಂಬುದು ಕೆಲವರ "ಭಾವನೆ". ಆ ಭಾವನೆ ಸರಿನಾ? ಅದಕ್ಕೆ ಬೆಲೆ ಕೊಡಬೇಕಾ?
ಇದೆಲ್ಲಿಂದ ಬಂತು ಮಧ್ಯದಲ್ಲಿ ! ಯಾರನ್ನ ಮುಟ್ಟಿದರೆ ಅಪವಿತ್ರ ಅಂದೇ ನಾನು !!! :) ಒಬ್ಬರು ಬೆಳಗ್ಗೆ ಎದ್ದು ನಿನ್ನೆಯ ಬೇಡದ ಪದಾರ್ಥಗಳ ತ್ಯಾಜ್ಯವನ್ನು ( !!) ಮುಟ್ಟುವುದು ಅಪವಿತ್ರ !
ತಾವು ಶುಕ್ರವಾರ ಸಂಜೆ ನೆ ಹೀಗೆ ಮಾತಾಡಿದ್ರೆ ಇನ್ನು ನಾವು ರಾತ್ರೆ ಏನಂಥ ಮಾತಾಡಿಸ್ಲಿ :)
<<ಭಾವನೆಗಾಗಿ ಸತ್ಯವನ್ನು ತುಳಿಯುವುದಾದರೆ ದಿಟವ ನುಡಿದ ಗೆಲಿಲಿಯೋನನ್ನು ದಂಡಿಸಿದ ಯುರೋಪಿಯನ್ ಚರ್ಚಿಗೂ ನಿಮಗೂ ಏನು ವ್ಯತ್ಯಾಸ?
ಮತ್ತೆ ಗೆಲಿಲಿಯೋ ಬೇರೆ ಬಂದ್ರಪ್ಪಾ ನೋಡಿ !! ಅವ್ರು ಆರಾಮದಲ್ಲಿ ಸ್ವರ್ಗ ಲೋಕದಲ್ಲಿ ಇದ್ದಾರೆ ! ಅವರನ್ನ ಯಾಕ ತಂದ್ರಿ ಈಗ :)
ನಾನು "ಇಂಡಿಯಾ ಇಸ್ ಮೈ ಕಂಟ್ರಿ , ಭಾರತವು ನನ್ನ ದೇಶ " ಅಂತ ಬರಿದಿದ್ದನ್ನ ಪುನಃ ಓದಿ ಇನ್ನೊಮ್ಮೆ !! :)
ಆಂಗ್ಲರ ಮೇಲೆ ಕೋಪ ರೀ ತಮ್ಮ ಮೇಲೆ ಅಲ್ಲ :) ತಾವು ನಮ್ಮ ಕರ್ನಾಟಕದೋರು ....ನಮ್ಮ ಮಣ್ಣಿನ ಮಗ ( 'ಇಂಡಿಯಾ' ದೊರು ತಾವು ಅಂದ್ರೆ ತಮಗೆ ಆಗ ಬರಲ್ಲ !! ಬಿಹಾರ MP ಗೆ ಲಿಂಕ್ ಕೊಡ್ತಿರಾ ಆಮೇಲೆ ! ) .. ತಮ್ಮ ಮೇಲೆ ನಾನು ಯಾಕೆ ಕೋಪ ಮಾಡ್ಲಿ ರೀ .....
<<ಸತ್ಯ ಹೇಳುವವನು ನಿರ್ವಿಕಾರನಾಗಿರಬೇಕು ಎಂದು ನನ್ನ ಅನಿಸಿಕೆ! ಅದಕ್ಕೆ ಸಾಕ್ಷಿಪ್ರಜ್ಞೆ ಎನ್ನುತ್ತಾರೆ. ಅದನ್ನೇ ನಾನು ಮಾಡಿದ್ದು. ಅದಕ್ಕಾಗಿ ಇಷ್ಟೆಲ್ಲ ತೆಗಳುವುದು ಬೇಕಿರಲಿಲ್ಲ.
ತಮ್ಮ ಎಲ್ಲ ರಿಪ್ಲೈ ಗಳನ್ನೂ ಮತ್ತೊಮ್ಮೆ ಓದಿ , ತುಂಬಾ ಅಗ್ಗ್ರೆಸ್ಸಿವ್ ತಾವು :) ನಾನು ನಿಮ್ಮನ್ನ personal ಗ್ರೌಂಡ್ ಮೇಲೆ ಬೈದಿಲ್ಲ ರೀ ....
ದೇಶ ದ ಬಗ್ಗೆ ಮಾತಾಡಿದ್ರೆ ಗೆಲಿಲಿಯೋ ಥರ ನಂಗೆ ಶಿಕ್ಷೆ ಗೆ ರೆಡಿ ಮಾಡ್ತ್ಹಿದ್ದಿರಲ್ವ ತಾವು :)
ಪ್ರೀತಿ ಇಂದ :)
ಪ್ರವೀಣ ಸಾಯ
ಉ: ಮೌನ ಆಚರಿಸಿದಿರಾ?
quote "ತಾವು ನಮ್ಮ ಕರ್ನಾಟಕದೋರು ....ನಮ್ಮ ಮಣ್ಣಿನ ಮಗ "
ದೇವೇಗೌಡರು ಓದಿದ್ದ್ರೆ ಇದನ್ನ ಕೋಪ ಮಾಡ್ಕೊತಾರೆ ಪಾಪ...
ಉ: ಮೌನ ಆಚರಿಸಿದಿರಾ?
ಒಂದೊಂದು ವಾಕ್ಯಕ್ಕೆ ನಾಲ್ಕು ವಾಕ್ಯಗಳನ್ನು ಕೊರೆದರೆ ಏನು ಹೇಳಲು ಸಾಧ್ಯ?
ತಾರ್ಕಿಕ ಹಿನ್ನೆಲೆಯೇ ಇಲ್ಲದ ಮಾತುಗಳಿಗೆ ಎಲ್ಲೂ ಬೆಲೆ ಇಲ್ಲ.
ಅದೇನು ಹೇಳಬೇಕೆಂದಿದ್ದೀರೋ ಮೊದಲು ನೀವೇ ಅರ್ಥ ಮಾಡಿಕೊಳ್ಳಿ. I am not interested.
ಉ: ಮೌನ ಆಚರಿಸಿದಿರಾ?
ಒಂದೊಂದು ವಾಕ್ಯಕ್ಕೆ ನಾಲ್ಕು ವಾಕ್ಯಗಳನ್ನು ಕೊರೆದರೆ ಏನು ಹೇಳಲು ಸಾಧ್ಯ?
ತಾರ್ಕಿಕ ಹಿನ್ನೆಲೆಯೇ ಇಲ್ಲದ ಮಾತುಗಳಿಗೆ ಎಲ್ಲೂ ಬೆಲೆ ಇಲ್ಲ.
ಅದೇನು ಹೇಳಬೇಕೆಂದಿದ್ದೀರೋ ಮೊದಲು ನೀವೇ ಅರ್ಥ ಮಾಡಿಕೊಳ್ಳಿ. I am not interested.
ಉ: ಮೌನ ಆಚರಿಸಿದಿರಾ?
<<ಒಂದೊಂದು ವಾಕ್ಯಕ್ಕೆ ನಾಲ್ಕು ವಾಕ್ಯಗಳನ್ನು ಕೊರೆದರೆ ಏನು ಹೇಳಲು ಸಾಧ್ಯ?
ತಾರ್ಕಿಕ ಹಿನ್ನೆಲೆಯೇ ಇಲ್ಲದ ಮಾತುಗಳಿಗೆ ಎಲ್ಲೂ ಬೆಲೆ ಇಲ್ಲ.
:)
ಇನ್ನೊಮ್ಮೆ ಓದಿ , ಯಾವುದು ತಾರ್ಕಿಕ ಅಲ್ಲ ಅಂದ್ರೆ ಒಂದೇ ವಾಕ್ಯದಲ್ಲಿ ಹೇಳೋಣ :)
ಉ: ಮೌನ ಆಚರಿಸಿದಿರಾ?
>>ಮೋಹನಚಂದ್ ಕರಮ್‌ದಾಸ್ ಗಾಂಧಿ
ಯಾರಿವರು? ಇವರ ಹೆಸರನ್ನೇ ನಾನು ಕೇಳಿಲ್ಲ.
ಜನವರಿ ೩೦ ಹುತಾತ್ಮರ ದಿನ.
ಅಂದರೆ, ಗಾಂಧೀಜಿ (ಮೋಹನದಾಸ್ ಕರಮಚಂದ್ ಗಾಂಧಿ) ಅವರನ್ನಷ್ಟೇ ನೆನೆಯುವ ದಿನ ಅಲ್ಲ.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರನ್ನು ನೆನೆದು ಮೌನಾಚರಣೆ ಮಾಡುವುದು.
-ಅನಿಲ್
ಉ: ಒಳ್ಳೆ 'observation' ಅನಿಲ್ ಅವ್ರೆ :)
ಒಳ್ಳೆ 'observation' ಅನಿಲ್ ಅವ್ರೆ :)