ಎಲ್ಲಿ ಮಂಥನ ನಡೆಯುವುದೋ ಅಲ್ಲಿ ಉಚ್ಚ ಮಟ್ಟದ ಸತ್ಯ ಕೈಗೂಡದಿದ್ದರೂ ಕೆಳಮಟ್ಟದ ಸತ್ಯ ಕೈಗೆ ಹತ್ತುವುದೇ ಹೊರತು ಅಸತ್ಯ ಯಾವಾಗಲೂ ಕೈಗೆ ಬರದು.

— ವಿನೋಬಾ ಭಾವೆ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ರಾಜ್ಯಪಾಲರ ಸಂವಿಧಾನಿಕ ನಿರ್ಧಾರ ಹಾಗೂ ಸರ್ಕಾರದ ರಾಜಕೀಯ ಧೋರಣೆ

ಮೇಲ್ಮನೆ ನಾಮಕರಣಕ್ಕಾಗಿ ಕಳುಹಿಸಿದ್ದ ಮೂರು ಹೆಸರುಗಳಲ್ಲಿ ಶ್ರೀ ಸೋಮಣ್ಣ ಅವರ ಹೆಸರನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಸರ್ಕಾರ ಹಾಗೂ ಬಿ.ಜೆ.ಪಿ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದ್ದರೆ, ವಿರೋಧಪಕ್ಷಗಳಿ ಖುಷಿಯಾಗಿದೆ.


ಈ ತರದ ಪರಿಸ್ಥಿತಿ ಇದೇ ಮೊದಲೇ?


ಇಲ್ಲ. ಹಿಂದೆ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಗಳಾಗಿದ್ದಾಗ ಒಬ್ಬರ ಹೆಸರನ್ನು ಆಗಿನ ರಾಜ್ಯಪಾಲರು ತಿರಸ್ಕರಿಸಿದ್ದರು. ಆದರೆ ಅದಕ್ಕೆ ವಿರೋಧ ವ್ಯಕ್ತಪಡಿಸದ ಕೃಷ್ಣ ಅವರು ತಿರಸ್ಕೃತರ ಬದಲಿಗೆ ಶ್ರೀ ಚಂದ್ರಶೇಖರ ಕಂಬಾರ ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದರು. ಅಲ್ಲಿ ಸಂವಿಧಾನಕ್ಕೆ ಗೆಲುವಾಗಿತ್ತು.


ಆದರೆ ಈಗ ಸ್ವತಃ ಎಡಿಯೂರಪ್ಪನವರೇ ರಾಜ್ಯಪಾಲರನ್ನು ಭೇಟಿಯಾಗಿ ಸೋಮಣ್ಣ ಅವರ ಹೆಸರನ್ನು ಒಪ್ಪಿಕೊಳ್ಳುವಂತೆ ಕೋರಿದ್ದಾರೆ ಎನ್ನಲಾಗಿದೆ. ರಾಜ್ಯಪಾಲರು ಒಪ್ಪದಿರುವುದರಿಂದ ಮತ್ತೆ ಎರಡನೇ ಬಾರಿಗೂ ಸೋಮಣ್ಣ ಅವರ ಹೆಸರನ್ನೇ ಶಿಫಾರಸ್ಸು ಮಾಡಿ ರಾಜ್ಯಪಾಲರ ಮೇಲೆಯೇ ಒತ್ತಡ ಹೇರುವ ತಂತ್ರವನ್ನು ಅನುಸರಿಸುವ ಮಾತುಗಳು ಕೇಳಿಬಂದಿವೆ. ಆಗಲೂ ತಿರಸ್ಕರಿಸಿದರೆ, ಕಾನೂನು ಹೋರಾಟಕ್ಕೆ ಇಳಿಯುವ ಮಾತುಗಳು ಬಿ.ಜೆ.ಪಿ.ವಲಯದಲ್ಲಿವ್ಯಕ್ತವಾಗಿವೆ.


ಸಂವಿಧಾನ ಚೌಕಟ್ಟಿನಲ್ಲಿ ರಾಜ್ಯಪಾಲರ ಪರಮಾಧಿಕಾರವನ್ನು ಗೌರವಿಸಬೇಕೆ? ಅಥವಾ ಸರ್ಕಾರದ ರಾಜಕೀಯ ಧೊರಣೆಯನ್ನು ಮನ್ನಿಸಬೇಕೆ?

Your rating: None Average: 5 (1 vote)

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

"ಸಂ"-ವಿಧಾನ ಬೇಕು ಉಳಿದಿರಲು ಅಧಿಕಾರದಲ್ಲಿ!!!

asuhegde's picture

>>.......ಅಲ್ಲಿ ಸಂವಿಧಾನಕ್ಕೆ ಗೆಲುವಾಗಿತ್ತು.<<

ಆಗ ಸಂವಿಧಾನದ ಮೇಲೆ ಸ್ವಲ್ಪವಾದರೂ ಒಲವಿತ್ತು
ಈಗ ಹಾಗಲ್ಲ ಸಂವಿಧಾನದ ಬದಲು ಸಂಘದ್ದೇ ಒತ್ತು

ಸಂವಿಧಾನದ ಚಿಂತೆ ಯಾರಿಗೂ ಇಲ್ಲ ಈ ಕಾಲದಲ್ಲಿ
"ಸಂ"-ವಿಧಾನ ಬೇಕು ಉಳಿದಿರಲು ಅಧಿಕಾರದಲ್ಲಿ!!!

:)

ಉ: "ಸಂ"-ವಿಧಾನ ಬೇಕು ಉಳಿದಿರಲು ಅಧಿಕಾರದಲ್ಲಿ!!!

praveena saya's picture

ಹೌದು ಹಾಗಗ್ಬರ್ದು .

ಉ: ರಾಜ್ಯಪಾಲರ ಸಂವಿಧಾನಿಕ ನಿರ್ಧಾರ ಹಾಗೂ ಸರ್ಕಾರದ ರಾಜಕೀಯ ಧೋರಣೆ

prasca's picture

<<ಸಂವಿಧಾನ ಚೌಕಟ್ಟಿನಲ್ಲಿ ರಾಜ್ಯಪಾಲರ ಪರಮಾಧಿಕಾರವನ್ನು ಗೌರವಿಸಬೇಕೆ? ಅಥವಾ ಸರ್ಕಾರದ ರಾಜಕೀಯ ಧೊರಣೆಯನ್ನು ಮನ್ನಿಸಬೇಕೆ?>>

ಈಗಿರುವುದು ಬಿಜೆಪಿ ಪಕ್ಷ ರಚಿಸಿರುವ ಸರ್‍ಖಾರವಾದ್ದರಿಂದ ರಾಜ್ಯಪಾಲರ ಪರಮಾಧಿಕಾರವನ್ನೆ ಗೌರವಿಸಬೇಕು. ಬಿಜೇಪಿಯೇತರ ಪಕ್ಷದ್ದಾಗಿದ್ದರೆ ಸರ್ಕಾರದ ರಾಜಕೀಯ ಧೋರಣೆಯನ್ನು ಮನ್ನಿಸಬೇಕಿತ್ತು.

ಉ: ರಾಜ್ಯಪಾಲರ ಸಂವಿಧಾನಿಕ ನಿರ್ಧಾರ ಹಾಗೂ ಸರ್ಕಾರದ ರಾಜಕೀಯ ಧೋರಣೆ

praveena saya's picture

ಹೌದು ಅಕ್ಷರಶ ಹೇಳಿದ್ದೀರ . ಆದರೆ ನಾವು ಏನಾದ್ರು ಸ್ವಲ್ಪ ಸಪೋರ್ಟ್ ಮಾಡಿದ್ರು ಕೋಮು ವಾದ ಅನ್ನೋದು ಕೇಳಿ ವ್ಯಥೆ ಆಗುತ್ತೆ . ದೇಶದ ಸೆಕ್ಯೂರಿಟಿ ಗೆ ಭಾಜಪ ಸರ್ಕಾರ ಮಾಡಿದಸ್ತು ಉಳಿದ ಸರ್ಕಾರ ಗಳು ಮಾಡಿಲ್ಲ ಅನ್ನೋ ಸತ್ಯ ಹೊರಗಡೆ ಹೇಳಿದ್ರೆ ಕೋಮುವಾದ ( ದಯವಿಟ್ಟು ಈ ವಾಕ್ಯ ದಮೇಲೆ ವಾದ ಬೇಡ :) ) . ಬಿಡಿ ಇದನ್ನ....

ಹಾಗೆ ಸಂ ವಿಧಾನ ಕೂಡ ಸತ್ಯ ಅಸು ಅವ್ರೆ....

ಉ: ರಾಜ್ಯಪಾಲರ ಸಂವಿಧಾನಿಕ ನಿರ್ಧಾರ ಹಾಗೂ ಸರ್ಕಾರದ ರಾಜಕೀಯ ಧೋರಣೆ

prasca's picture

<<ಹೌದು ಅಕ್ಷರಶ ಹೇಳಿದ್ದೀರ . ಆದರೆ ನಾವು ಏನಾದ್ರು ಸ್ವಲ್ಪ ಸಪೋರ್ಟ್ ಮಾಡಿದ್ರು ಕೋಮು ವಾದ ಅನ್ನೋದು ಕೇಳಿ ವ್ಯಥೆ ಆಗುತ್ತೆ >>
ವ್ಯಥೆ ಪಟ್ಕೋಬೇಡಿ, ನಾನಂತೂ ಪ್ರಜಾವಾಣಿಯವನೂ ಅಲ್ಲ, ವಿಜಯ ಕರ್ನಾಟಕದವನೂ ಅಲ್ಲ, ನಂದು ಕನ್ನಡಪ್ರಭ ಶೈಲಿ ;). ನಂಗಂತೂ ಇವ್ರನ್ನೆಲ್ಲಾ ನೋಡ್ತಿದ್ರೆ ಮಜಾ ಬರುತ್ತೆ. ಸೆಕ್ಯುಲರ್ ಅಂತ ಹೇಳ್ಕೊಂಡು ಒಂದು ಪಕ್ಷದ ಬೆಂಬಲಕ್ಕೆ ನಿಲ್ಲುವ ಕೆಲವರಂತೂ ಮುಂಚೆ ಸಂಪದದಲ್ಲಿ ಒಂದು ಪಕ್ಷದ ವಕ್ತಾರರಂತೆ ಸಂಪದದಲ್ಲೂ ಆ ಪಕ್ಷಕ್ಕೆ ಮತ ಕೊಡುವುದು ಬೇಡ ಈ ಪಕ್ಷಕ್ಕೆ ಕೊಡಿ ಎಂದು ಚುನಾವಣಾ ಪ್ರಚಾರ ಕೈಗೊಂಡವರೂ ಇದ್ದಾರೆ.

ಇನ್ನೂ ರಾಜಕೀಯ ಅನಾಚಾರಗಳ ಬಗ್ಗೆ ಚರ್ಚೆ ನಡೆಯುವುದಿದ್ದರೆ, ಅದರಲ್ಲೂ ಬೀಜೇಪಿಯ ಅನಾಚಾರಗಳ ಬಗ್ಗೆ ಮಾತ್ರ ತೆಗೆದು ಕೊಳ್ಳೋಣವೆಂದರೆ, ಪಾಪ ಕಾಂಗ್ರೆಸ್ಸಿಗರು ಅವರಿಗೆ ಯಾವ ಅವಕಾಶಗಳನ್ನು ಉಳಿಸೇ ಇಲ್ಲ. ಕಾಂಗ್ರೆಸ್ಸೇತರರು ಪ್ರಪ್ರಥಮವಾಗಿ ರಾಜಕೀಯ ಅನಾಚಾರವೆಸಗಲು ಅವಕಾಶವೀಯಲೇ ಇಲ್ಲ. ರಾಜಕೀಯ ಅನಾಚಾರಗಳನ್ನು ಸಂ ವಿಧಾನಗಳನ್ನು ಅವರು ಯಾರಿಗೂ ಬಿಟ್ಟು ಕೊಡುವುದೇ ಇಲ್ಲ.
ಒಮ್ಮೆ ಅಡ್ವಾಣಿ ಹೇಳಿದ್ರು, ನಾವು ನೀತಿ ತತ್ವ ಸಿದ್ದಾಂತ ಅಂತ ಕೂತಿದ್ದಕೆ ನಾವು ಗೆದ್ದದ್ದು ಕೇವಲ ೨ ಸ್ಥಾನಗಳು. ಅದೇ ಎಲ್ಲ ಬಿಟ್ಟು ಬೀದಿಗಿಳಿದ್ವಿ ನೋಡಿ, ಅಧಿಕಾರವೂ ಬಂತು. ಅಂದ್ರೆ ಅದಕ್ಕೆ ಮುಂಚೆ ಅಧಿಕಾರಕ್ಕೆ ಬರುವುದಕ್ಕೆ ಮಾನ()ದಂಡ ಹಾಕಿಕೊಟ್ಟವರ್ಯಾರು? ಭಾಜಪದ ಹೇಸರೇ ಕೇಳದಿದ್ದ ಕಾಲ್ದಲ್ಲೂ ಹಣ ಹೆಂಡ ಹಂಚಿದ್ದನ್ನು ಕಣ್ಣಾರೆ ಕಂಡಿದ್ದೇನೆ, ಅದೂ ವಿರೋಧ ಪಕ್ಷಗಳ ತ್ರಾಣವೇ ಇಲ್ಲದಿದ್ದಾಗಲೂ. ಆದ್ರೆ ಇಂದು ಬೊಬ್ಬೆ ಹೊಡಿತರೆ ಹಣ ಹೆಂಡ ತೋಳ್ಬಲದಿಂದ ಅಧಿಕಾರಕ್ಕೆ ಬಂದ್ರು ಅಂತ. ನಾವು ಆ ಮಾರ್ಗದಲ್ಲಿ ಬರಬಹುದು ನೀವ್ ಬರ್ಬಾರ್ದು, ನಾವ್ ಮಾಡಿದ್ರೆ ಸರಿ ನೀವ್ ಮಾಡಿದ್ರೆ ತಪ್ಪು ಅನ್ನುವ ಧೋರಣೆ ಸಕತ್ ಮಜ ತರ್ಸುತ್ತೆ.

ರಾಜ್ಯಪಾಲರಿಗೆ ಪರಮಾಧಿಕಾರವಿದೆಯೆ?

ಉಉನಾಶೆ's picture

ಈ ನಾಮಕರಣದ ವಿಷಯದಲ್ಲಿ ರಾಜ್ಯಪಾಲರಿಗೆ ಪರಮಾಧಿಕಾರವಿದೆಯೆ?
ಅಥವಾ ಬೇರೆ ಕೆಲವು ವಿಚಾರದಲ್ಲಿ ಇರುವಂತೆ, "ಸರಕಾರ ಮತ್ತೆ ಕಳುಹಿಸಿದರೆ" ಅವ್ರು ಒಪ್ಪಿಕೊಳ್ಳಬೇಕಾಗುತ್ತದೆಯೆ?
ಅಥವಾ ಕೆಲ ವಿಷಯದಲ್ಲಿ ಇರುವಂತೆ ಇಬ್ಬರೂ (ರಾಜ್ಯಪಾಲ ಮತ್ತು ಸರಕಾರ) ಇಬ್ಬರೂ ಒಪ್ಪಿಕೊಳ್ಳಬೇಕಾಗುತ್ತದೆಯೆ?
ರಾಜ್ಯಪಾಲರಿಗೆ ಪರಮಾಧಿಕಾರವಿಲ್ಲವಾದರೆ, ಈ ಕಸರತ್ತು ಬೇಕಾಗಿರಲಿಲ್ಲ.
ಇದ್ದರೆ, ಈ ಪದ್ಧತಿ ಎಲ್ಲೆಡೆ ಬರಲಿ. ಇದು "ಉದಾಹರಣೆ" ಆಗಲಿ.