ಎಲ್ಲ ರೀತಿಯ ಕೆಚ್ಚೆದೆಯ ಎದೆಗಾರಿಕೆಯು ಆತಂಕದ ಮುಖವಾಡವಾಗಿರುತ್ತದೆ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಇಂತಹ ಪದ-ಜೋಡಿಗಳನ್ನು ಮಾಡಬಲ್ಲಿರಾ?

ಈ ಎರಡಕ್ಷರದ ಪದಗಳ ಜೋಡಿಗಳನ್ನು ಗಮನಿಸಿ...


ಗಿಡ --- ಗಿಡ್ಡ


ಮಗ --- ಮಗ್ಗ


ಕೆನೆ --- ಕೆನ್ನೆ


ಗಲ --- ಗಲ್ಲ


ಪುಟ --- ಪುಟ್ಟ


ಮೊದಲನೆಯ ಪದದ ಕೊನೆಯ ಅಕ್ಷರವನ್ನು ದ್ವಿತ್ವಗೊಳಿಸಿದಾಗ ಎರಡನೆಯ ಪದ ಸಿಗುತ್ತದೆ. ಇಂತಹ ಹಲವಾರು ಜೋಡಿಗಳನ್ನು ಮಾಡಬಹುದು. ಸುಮಾರು ಮೂವತ್ತು ಜೋಡಿಗಳು ಆಗಿವೆ. ಸಂಪದಿಗರಿಗೆ ಇನ್ನೂ ಹೆಚ್ಚು ಸಿಗಬಹುದು...


ಆದಷ್ಟೂ ಕನ್ನಡಪದಗಳ ಜೋಡಿಯನ್ನೇ ಮಾಡಲು ಪ್ರಯತ್ನಿಸಿ. ಉದಾ:


೧. ಚಿತ --- ಚಿತ್ತ : ಈ ಜೋಡಿ ಸಂಸ್ಕೃತ, ಸಂಸ್ಕೃತ ಆಯ್ತು


೨. ಸುತ --- ಸುತ್ತ : ಈ ಜೋಡಿ ಸಂಸ್ಕೃತ, ಕನ್ನಡ ಆಯ್ತು.


೩. ಬಸು --- ಬಸ್ಸು : ಇದು ಕೊಂಚ ‘ಎಡ’ವಟ್ಟಾಯ್ತು ;-)


ಪ್ರಭು


 

Your rating: None Average: 5 (1 vote)

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಇಂತಹ ಪದ-ಜೋಡಿಗಳನ್ನು ಮಾಡಬಲ್ಲಿರಾ?

shivaram_shastri's picture

ಅಡಿ ಅಡ್ಡಿ
ಅದು ಅದ್ದು
ಇದು ಇದ್ದು
ಇಲಿ ಇಲ್ಲಿ
ಎಣೆ ಎಣ್ಣೆ
ಎದೆ ಎದ್ದೆ
ಎಲೆ ಎಲ್ಲೆ
ಒದೆ ಒದ್ದೆ
ಒಲೆ ಒಲ್ಲೆ
ಕಟು ಕಟ್ಟು
ಕಡಿ ಕಡ್ಡಿ
ಕತೆ ಕತ್ತೆ
ಕಳಿ ಕಳ್ಳಿ
ಕೊಳ ಕೊಳ್ಳ
ಕೊಳೆ ಕೊಳ್ಳೆ
ಗದೆ ಗದ್ದೆ
ಗಿಡಿ ಗಿಡ್ಡಿ
ಘಟ ಘಟ್ಟ
ಚಟ ಚಟ್ಟ ...
ಒಹ್ ...ಸದ್ಯಕ್ಕೆ ಸಾಕನ್ಸುತ್ತೆ ...
ಸಂಸ್ಕೃತದ್ದು ಯಾವ್ದಾದ್ರೂ ಬಂತೇ? ಸರಿಯಾಗಿ ಗೊತ್ತಾಗ್ತಿಲ್ಲ.

ಉ: ಇಂತಹ ಪದ-ಜೋಡಿಗಳನ್ನು ಮಾಡಬಲ್ಲಿರಾ?

sandhya.darshini's picture

ಸಕ್ಕತ್ :)

ಉ: ಇಂತಹ ಪದ-ಜೋಡಿಗಳನ್ನು ಮಾಡಬಲ್ಲಿರಾ?

Prabhu Murthy's picture

ಹೌದು... ಶಾಸ್ತ್ರಿಗಳು ಸಖತ್ :-)

ಉ: ಇಂತಹ ಪದ-ಜೋಡಿಗಳನ್ನು ಮಾಡಬಲ್ಲಿರಾ?

Prabhu Murthy's picture

ಶಿವರಾಮ್ ಅವರೆ ನನಗೆ ಹೊಳೆಯದಿದ್ದ ಹಲವಾರು ಜೋಡಿಗಳನ್ನು (ಎಲೆ ಎಲ್ಲೆ, ಗಿಡಿ ಗಿಡ್ಡಿ, ...) ನೀವು ಬರೆದಿದ್ದೀರ. ತುಂಬಾ ಚೆನ್ನಾಗಿದೆ. ಸ್ವರಗಳಿಂದ ಶುರುವಾಗುವುವುಗಳನ್ನು ಬಹುಪಾಲು ಮುಗಿಸಿದ್ದೀರ ಎನಿಸುತ್ತದೆ. ವ್ಯಂಜನಾದಿಗಳನ್ನು ಮುಂದುವರಿಸಿ :-)

"ಘಟ ಘಟ್ಟ" ಸಂಸ್ಕೃತದ್ದು ಅನಿಸುತ್ತದೆ.

ನನಗೆ ಸಿಕ್ಕ ಕೆಲವು ವ್ಯಂಜನಾದಿಗಳು:
ಕೆನೆ ಕೆನ್ನೆ
ಕುಳ ಕುಳ್ಳ
ಗಲ ಗಲ್ಲ
ಗುಳ ಗುಳ್ಳ
ತಳಿ ತಳ್ಳಿ
ದಿಟ ದಿಟ್ಟ
ಪಟ ಪಟ್ಟ
ಪುಟ ಪುಟ್ಟ
ಬಡಿ ಬಡ್ಡಿ
ಬಣ ಬಣ್ಣ
ಬೆಣೆ ಬೆಣ್ಣೆ
ಬಗೆ ಬಗ್ಗೆ
ಮಗ ಮಗ್ಗ
ಮಡಿ ಮಡ್ಡಿ
ಲತೆ ಲತ್ತೆ
ಹಳ ಹಳ್ಳ
ಹುಲು ಹುಲ್ಲು
ಹುಗಿ ಹುಗ್ಗಿ

ಎರಡಕ್ಷರಕ್ಕಿಂತ ಹೆಚ್ಚಿನವು ಜಾಸ್ತಿ ಸಿಕ್ಕಿಲ್ಲ...
ಘಟಿಸು ಘಟ್ಟಿಸು
ಬಳಿಗೆ ಬಳ್ಳಿಗೆ*
ಬಗಲು ಬಗ್ಗಲು
ಸುಳಿಗೆ ಸುಳ್ಳಿಗೆ*
...

ಪ್ರಭು