ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ -- ಮಂಕುತಿಮ್ಮ ।।

— -ಡಿ.ವಿ.ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ನಾವು ದಿನಾಲೂ ವಿಮಾನ ಹಾರಾಟವನ್ನು ನೋಡುತ್ತೇವೆ ಆದರೆ ಎಲ್ಲಾ ದಿನವೂ ವಿಮಾನ ಹೋದಾಗ ಅದರ ಬಾಲದಂತಹ ಉದ್ದನೇ ಬಿಳಿ ಗೆರೆ ಇರುವುದಿಲ್ಲ. ಒಮ್ಮೊಮ್ಮೆ ಮಾತ್ರಾ ಕಾಣುತ್ತವೆ.  ಇದು ಅತಿ ಎತ್ತರದಲ್ಲಿ ಗಾಳಿ ಒತ್ತಡ ಕಡಿಮೆ ಇರುವಲ್ಲಿ ವಿಮಾನ ಹಾರಿದಾಗ ಅದರ ಹೊಗೆ ಚದುರದೇ ಈ ಒಂದು ಗೆರೆ ಮೂಡುತ್ತದೆ ಇದಕ್ಕೆ ಸೂರ್ಯನ ಬೆಳಕು ಬಿದ್ದಾಗ ಬೇರೆ ಬೇರೆ ಬಣ್ಣ (ಹೆಚ್ಚಾಗಿ ಬಿಳಿ ಮತ್ತು ಕೇಸರಿ) ಗಳಲ್ಲಿ ಕಾಣುತ್ತದೆ ಎಂಬುದು ನನ್ನ ಕಲ್ಪನೆ . ಮೊನ್ನೆ ಬೇರೊಬ್ಬರು ಬೇರೊಂದು ಅಭಿಪ್ರಾಯ ವ್ಯಕ್ತ ಪಡಿಸಿದರು ಇದು ನನಗೆ ಒಪ್ಪಿಗೆ ಆಗಿರಲಿಲ್ಲ ತಿಳಿದವರಿದ್ದರೆ ಸರಿಯಾದ ಮಾಹಿತಿ ನೀಡಿ.

ವಂದನೆಗಳೊಂದಿಗೆ.

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ವಿಮಾನ

sb1966's picture

ಇದು ವಿಮಾನದಿಂದ ಬರುವ ಹೊಗೆಯಲ್ಲ. ವಾತಾವರಣದಲ್ಲಿನ ನೀರಿನಂಶ ಇದ್ದಾಗ ವಿಮಾನದ ಇಂಜಿನಿಂದ ಹೊರಬಂದ ಬಿಸಿಗಾಳಿಯು ನೀರಿನಂಶವನ್ನು ಘನೀಕರಣಗೊಳಿಸುತ್ತದೆ. 35 ಸಾವಿರ ಅಡಿ ಎತ್ತರದಲ್ಲಿ ವಾತಾವರಣವು -20 ರಿಂದ -40ಡಿ.C ತಾಪಮಾನ ಹೊಂದಿರುತ್ತದೆ. ವಾತಾವರಣದಲ್ಲಿನ ನೀರಿನಂಶವು ಸಣ್ಣ ಸಣ್ಣ ಹಿಮದ ಪುಡಿಯಾಗಿ ಕಣ್ಣಿಗೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ವೇಪರ್ ಟ್ರೇಲ್ (Vapor Trail) ಅಥವಾ ಕಂಡೆನ್ಸೇಶನ್ ಟ್ರೇಲ್ (condensation trails) ಎನ್ನುತ್ತಾರೆ. ವಾತಾವರಣದಲ್ಲಿ ನೀರಿನಂಶ ಇಲ್ಲದಿದ್ದಾಗ ಇವು ಕಾಣಿಸುವುದಿಲ್ಲ.

ವಿವರಗಳಿಗೆ ಈ ಕೊಂಡಿಯನ್ನು ನೋಡಿ. http://en.wikipedia....

ಉ: ವಿಮಾನ

devaru.rbhat's picture

ತಿಳುವಳಿಕೆ ನೀಡಿದ ತಮಗೆ ಧನ್ಯವಾದಗಳು