ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.

— ಹಿತೋಪದೇಶ, ಸುಹೃದ್ಭೇದ

ಗೆಳೆಯರೆ,

ನಿಮಗೆಲ್ಲ ತಿಳಿದಿರುವಂತೆ, ಐ.ಬಿ.ಎನ್ ಲೈವ್ ಎಂಬ ಒಂದು ಸುದ್ಧಿ ಮಾಧ್ಯಮವಿದೆ. ಇಂದು ಅದರಿಂದ ನನ್ನ ಮೈಲ್ ಬಾಕ್ಸಿನಲ್ಲಿ ಒಂದು ಸಮಾಚಾರ ಬಂದಿತ್ತು.

ಲೇಖನ ಶೀರ್ಷಿಕೆಯನ್ನು ನೋಡಿದೊಡನೆಯೇ ತಿಳಿಯಿತು, ಎಷ್ಟು ಕೆಟ್ಟ ಮಟ್ಟಕ್ಕೆ ಇಳಿದಿದೆ ನಮ್ಮ ಸುದ್ಧಿ ಮಾಧ್ಯಮ ಎಂದು. ಬಹಳ ವ್ಯಥೆಯಾಯಿತು.

ನೋಡಿ, ಅದರಲ್ಲಿದ್ದ ಸುದ್ಧಿ.

War of words between K'taka, AP
Prachi Jatania
CNN-IBN

There's a war of words between Andhra Pradesh and Karnataka - and its all got to do with linguistic status.

ಅಲ್ಲ ನೀವೇ ಹೇಳಿ, ಕನ್ನಡಿಗರು ಮತ್ತು ತೆಲುಗರು ಎಂದಾದರು ಭಾಷೆಯ ವಿಚಾರವಾಗಿ ಹೊಡೆದಾಡಿದ್ದಾರೆಯೇ. ಕರ್ಣಾಟಾಂಧ್ರ ಪ್ರಜೆಗಳು ಸಾಂಸ್ಕೃತಿಕವಾಗಿ ಎಂದೆಂದಿಗೂ ಒಟ್ಟಾಗಿದ್ದಾರೆ.

ಅದಾಗಿಯೂ ಇದರಲ್ಲಿದ್ದ ಸುದ್ಧಿ ಏನೆಂದರೆ, ತೆಲುಗು ವಿದ್ವಾಂಸರು ತೆಲುಗಿಗೂ ಶಾಸ್ತ್ರೀ ಪಟ್ಟ ಸಿಗಲಿ ಎಂದು ಹೇಳಿರುವುದು. ಸರಿ, ತೆಲುಗಿನ ವಿದ್ವಾಂಸರು ಮಾಡಬೇಕಾದ್ದೇ. ಆದರೆ ಅದಕ್ಕೂ, ಕನ್ನಡಿಗರು ಮತ್ತು ತೆಲುಗರು ಪರಸ್ಪರ ಬಡಿದಾಡುತ್ತಿದ್ದಾರೆ ಎಂದರೆ ಏನರ್ಥ.

ಇದಕ್ಕೆ ಸಂಬಂಧಪಟ್ಟಂತೆ, ಮೇಯ್ಲ್ ಕಳುಹಿಸಿದ ತಕ್ಷಣ ಅವರು ಅದರ ಶೀರ್ಷಿಕೆಯನ್ನು, ಮೊದಲು

After Karnataka, AP lobbies for classical language status.

ಮತ್ತೂ ಕೆಲವು ಕ್ಷಣಗಳ ನಂತರ

Now, AP wants linguistic status

ಅಂತ ಬದಲಾಯಿಸಿದರು.

ಇದನ್ನು ನೋಡಿ, ನಮ್ಮ ಸುದ್ಧಿ ಮಾಧ್ಯಮಗಳು ಎಂಥ ಕೆಳ ಮಟ್ಟಕ್ಕೆ ಇಳಿಯಲೂ ಸಿದ್ಧರಿರುತ್ತಾರೆ ಎಂಬುದು ತಿಳಿಯಿತು.

ನಾನು ಹಾಕಿದ ಕಾಮೆಂಟನ್ನು ಅವರು ಪ್ರಕಟಿಸಲೇ ಇಲ್ಲ. ಅವರಿಗೆ ಅವಮಾನವಾಗುತ್ತಲ್ಲ ಅದಕ್ಕೆ. ನಾನು ಹೇಳುತ್ತಿರುವ ವಿಷಯವನ್ನು ಇಲ್ಲಿ ಓದಬಹುದು.

0

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಐ ಬಿ ಎನ್ ಲೈವ್

hpn's picture

ಐ ಬಿ ಎನ್ ಲೈವ್ ನಲ್ಲಿ ಈ ತರಹ ಸಾಕಷ್ಟು ನಡೆದಿರುವುದನ್ನು ನೋಡಿದ್ದೇನೆ. ಸಂಸ್ಥೆ ದೊಡ್ಡದಾಗುತ್ತಿದ್ದಂತೆ ಇಂಥಹವು ಸೋಜಿಗ ತರುವಂತವೇನಲ್ಲ.
--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

Syndicate content