ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
Shreekar
ಪರಿಚಯ
ಸಂಪದಿಗರ ಸಂಗವದು ಹೆಜ್ಜೇನು ಸವಿದಂತೆ - ಒಬ್ಬ ಒಳ್ಳೆಯ ಸಂಪದಿಗನಾಗಿ ಕನ್ನಡದ, ಕನ್ನಡಿಗರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಆಸೆ.
ಮಾನವನ ನಿಜ ವಿಕಾಸ ಎತ್ತ ಸಾಗಿದೆ?? - ಡಾ| ಜ್ಞಾನ ದೇವರ ಪ್ರಶ್ನೆ
ಹಿರಿಯ ಸಂಪದಿಗ ಡಾ| ಜ್ಞಾನ ದೇವರ ಈ ಪ್ರಶ್ನೆ ಸಮಯೋಚಿತವಾಗಿದೆ ಹಾಗೂ ಆರೋಗ್ಯಕರ ಚರ್ಚೆಗೆ ಅರ್ಹವಾಗಿದೆ.
ಯುನಿಕ್ಸುಪ್ರಿಯವರ "ವಿಕಾಸಕ್ಕೆ ನಾನಾ ಕವಲುಗಳು" ಎಂಬ ಚಿಂತನಾರ್ಹ ಬರಹದಲ್ಲಿ ದೇವರು ಕೇಳಿದ ಪ್ರಶ್ನೆ ಇದು.
ಮೂಲ ಬರಹ ಜೈವಿಕ ವಿಕಾಸದ ಕುರಿತಾಗಿದ್ದು, ದೇವರ ಪ್ರಶ್ನೆ ಬೌದ್ಧಿಕ ಮತ್ತು ಅಧ್ಯಾತ್ಮಿಕ ( ಈ ಶಬ್ದದ ಸರಿಯಾದ ಅರ್ಥ ಸ್ಪಷ್ಟನೆಯ ಅಗತ್ಯವಿದೆ.) ವಿಕಾಸಗಳ ಕುರಿತಾಗಿರುವದರಿಂದ ಇದನ್ನು ಬೇರೆಯೇ ಚರ್ಚೆಯ ವಿಷಯವಾಗಿ ಎತ್ತಿಕೊಂಡಿದ್ದೇನೆ.
ಮೂಲ ಲೇಖನದ ಪ್ರತಿಕ್ರಿಯೆಯೊಂದರಲ್ಲಿ ದೇವರು ಹೀಗೆನ್ನುತ್ತಾರೆ:
http://sampada.net/article/24259#comment-93134
<< "ಮನುಷ್ಯನ ಅವಿವೇಕ ಸೊಕ್ಕು ದುಷ್ಟತೆ ಎಲ್ಲ ಕಾಲದಲ್ಲೂ ಇದ್ದವು. ಅದರೆ ಅವು ಯಾವ ಪ್ರಮಾಣದಲ್ಲಿದ್ದವು? ಹಾಗೆಯೇ ಅವುಗಳ ಪ್ರಾಕಾರ ಹಿನ್ನೆಲೆ ಎ೦ಥ ಸ್ವರೂಪದ್ದಾಗಿದ್ದವು ಎ೦ಬುದು ನಮಗೆ ಪ್ರಸ್ತುತವಾಗಿರಬೇಕು. ನೂರು ವರ್ಷಗಳ ಹಿ೦ದೆಯೂ ಈ ಜಗತ್ತಿನಲ್ಲಿ ದುಷ್ಟತನ ಕ್ರೌರ್ಯವಿತ್ತು. ಆದರೆ ನೂರು ವರ್ಷಗಳ ನ೦ತರ ಈಗಿನ ಪರಿಸ್ಥಿತಿಯಲ್ಲಿ ಈ ದುಷ್ಟತನ ಕ್ರೌರ್ಯದ ಪ್ರಮಾಣ ತೂಗಿ ನೋಡಿ. ಆಗ ನನ್ನ ಅಭಿಪ್ರಾಯದ ಸೂಕ್ಷ್ಮತೆ ನಿಮಗೆ ಹೊಳೆಯಬಹುದು. ನೂರು ವರ್ಷದ ಹಿ೦ದಿನ ದಿನ ಪತ್ರಿಕೆಯನ್ನೂ ಈವತ್ತಿನ ದಿನಪತ್ರಿಕೆಯನ್ನೂ ಓದಿ.. Just watch the colossal difference!
ಮಾನವನ ನಿಜ ವಿಕಾಸ ಎತ್ತ ಸಾಗಿದೆ??" >>
ಸಂಪದಿಗರೇ, ನಿಮ್ಮ ಅನಿಸಿಕೆಗಳೇನು?
- Login or register to post comments
- 614 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಉ: ಮಾನವನ ನಿಜ ವಿಕಾಸ ಎತ್ತ ಸಾಗಿದೆ?? - ಮಾನವ ಮಂಗನಾಗುತ್ತಿದ್ದಾನೆಯೇ?
ಡಾರ್ವಿನ್ನನ ವಿಕಾಸವಾದ - ಸುಪ್ರೀತ್ ಮತ್ತು ಡಾ| ಜ್ಞಾನ ದೇವರ ಎರಡು ಭಿನ್ನ ದ್ರಷ್ಟಿಕೋನಗಳು
ಸಾಮಾನ್ಯ ತಿಳುವಳಿಕೆಯಂತೆ ಮಂಗನಿಂದ ಮಾನವನಾದ ಎಂದು ಡಾರ್ವಿನ್ ಪ್ರತಿಪಾದಿಸಿದ. ಇದನ್ನು ಡಾ ಕಿನ್ಸ್ ಮತ್ತು ಸುಪ್ರೀತರು ಬೆಂಬಲಿಸಿದ್ದಾರೆ.
ಇದರ ತದ್ವಿರುದ್ಧವಾದ ವಾದ ಎಂದರೆ ಹಳೆಯ ಗಾದೆಮಾತಿನಂತೆ ಬರಬರುತ್ತಾ ರಾಯರ ಕುದುರೆ ಕತ್ತೆಯಾಯಿತು ಎಂದಂತೆ, ವಿಕಾಸದ ಪ್ರಕ್ರಿಯೆ ವಿಪರೀತ ಹೆಚ್ಚಾಗಿ ತಿರುಗುಮುರುಗು ಆಗುತ್ತಿದೆ -- ಮಾನವ ಮಂಗನಾಗ ಹೊರಟಿದ್ದಾನೆ ಎಂದು ಡಾ| ಜ್ಞಾನ ದೇವರು ಹೇಳುತ್ತಾರೆ.
ಚರ್ಚೆ ಕುತೂಹಲಕಾರಿಯಾಗಿದೆ, ಮುಂದುವರಿಯಲಿ!
ಉ: ಮಾನವನ ನಿಜ ವಿಕಾಸ ಎತ್ತ ಸಾಗಿದೆ?? - ಮಾನವ ಮಂಗನಾಗುತ್ತಿದ್ದಾನೆಯೇ?
ಎಲ್ಲ ಪೂರ್ವಾಗ್ರಹಗಳನ್ನು ನಾವೆಲ್ಲಾ ಬದಿಗಿರಿಸಿ ಮುಕ್ತವಾಗಿ ಸ್ನೇಹದ, ಅರಿವಿನ ಅ೦ಗಳದಲ್ಲಿ ಚರ್ಚಿಸಲೇಬೇಕಾದ ವಿಚಾರ. ಶ್ರೀಕರ್ ನನ್ನ ಒ೦ದು ಪ್ರತಿಕ್ರಿಯೆಯನ್ನೇ ಚರ್ಚೆಗೆ ವಿಷಯವನ್ನಾಗಿ ಮಾಡಿಕೊ೦ಡಿದ್ದಾರೆ ಸ೦ತೋಶ. ಆದರೆ ಈ ಸಾಮಾನ್ಯ ಜ್ಞಾನದೇವನನ್ನು ದೇವರು ಎ೦ದು ಕರೆದಿದ್ದೀರಲ್ಲಾ :) :) ....
ಎಲ್ಲ ಪ್ರಜ್ಞಾವ೦ತ ಸ೦ಪದಿಗರು ತಮ್ಮ ತಮ್ಮ ಅರಿವಿಗೆ ಬ೦ದ ಅನಿಸಿಕೆಗಳನ್ನು ಹ೦ಚಿಕೊ೦ಡು ಈ ಎಲ್ಲ ಚರ್ಚೆಯನ್ನು ಒ೦ದು ಪುಸ್ತಕ ರೂಪದಲ್ಲಿ ಏಕೆ ತರಬಾರದು.. ಸ೦ಪದಿಗರು ಯೋಚಿಸಲಿ..
ಉ: ಮಾನವನ ನಿಜ ವಿಕಾಸ ಎತ್ತ ಸಾಗಿದೆ?? - ಡಾ| ಜ್ಞಾನ ದೇವರ ಪ್ರಶ್ನೆ
ಜ್ಙಾನದೇವರು ಹೇಳಿದ್ದು ಸರಿ ಅನಿಸುತ್ತಿದೆ.
ಉ: ಮಾನವನ ನಿಜ ವಿಕಾಸ ಎತ್ತ ಸಾಗಿದೆ?? - ಡಾ| ಜ್ಞಾನ ದೇವರ ಪ್ರಶ್ನೆ
ಸರ್,
ವಿಕಾಸವಾದ ಎನ್ನುವುದು ಒಂದು ವೈಜ್ಞಾನಿಕ ಥಿಯರಿ. ಇದು ಜೀವ ವಿಕಾಸವನ್ನು, ಜೀವಿಗಳ ವೈವಿಧ್ಯತೆಯನ್ನು, ಸಸ್ಯ, ಪಶು, ಪಕ್ಷಿಗಳ ವರ್ತನೆಯನ್ನು ವಿವರಿಸುವ ಸಿದ್ಧಾಂತ. ಈ ಥಿಯರಿ ಕೊಡುವ ವಿವರಣೆ ತರ್ಕ ಬದ್ಧವಾದದ್ದು. ಸರಳತೆಯಿಂದ ಶುರುವಾದ ಜೀವ ವಿಕಾಸ ಹೆಚ್ಚು ಸಂಕೀರ್ಣವಾಗುತ್ತಾ, ಹೆಚ್ಚು ಪ್ರಭಾವಶಾಲಿಯಾಗುತ್ತ, ತನ್ನ ಪರಿಸರಕ್ಕೆ ಹೊಂದಿಕೊಳ್ಳುವಲ್ಲಿ ಹೆಚ್ಚು ಬುದ್ಧಿವಂತಿಕೆಯಿಂದ ಪ್ರತಿಸ್ಪಂದಿಸುತ್ತಾ ಬೆಳೆದು ಬಂದಿದೆ ಎನ್ನುವುದು ಇದರ ತಿರುಳು. ಸಾವಿರಾರು ಪಳೆಯುಳಿಕೆಗಳು ಈ ಸಿದ್ಧಾಂತವನ್ನು ಬೆಂಬಲಿಸುತ್ತವೆ. ಉದಾಹರಣೆಗೆ: ಡೈನಾಸರ್ ಗಳು ಜೀವಿಸಿದ್ದ ಕಾಲದಲ್ಲಿ ಮನುಷ್ಯ, ಪಕ್ಷಿಗಳು ವಿಕಾಸ ಹೊಂದಿರಲಿಲ್ಲ ಎನ್ನುತ್ತದೆ ಥಿಯರಿ. ಸಿಕ್ಕಿರುವ ಪಳೆಯುಳಿಕೆಗಳನ್ನು ಪರೀಕ್ಷಿಸಿದಾಗ ಡೈನಾಸರ್ ಗಳಿಗಿಂತ ಹಳೆಯ ಪಳೆಯುಳಿಕೆಗಳು ಎಲ್ಲೂ ಸಿಕ್ಕಿಲ್ಲ. ಇಂತಹ ಸಾಕ್ಷಿಗಳು ಲಕ್ಷಾಂತರ ಇವೆ.
ಕಣ್ಣು, ಕಿವಿ, ಮೆದುಳು ಮೊದಲಾದ ಅತಿ ಸೂಕ್ಷ್ಮವಾದ ಅವಯವಗಳು ಹೇಗೆ ವಿಕಾಸವಾಗುತ್ತಾ ಬಂದವು ಎನ್ನುವುದನ್ನು ಸಹ ವಿಕಾಸವಾದ ಸಮರ್ಥವಾಗಿ ವಿವರಿಸುತ್ತದೆ. ಒಟ್ಟಿನಲ್ಲಿ ಯಾವ ಅತಿಮಾನುಷ ಶಕ್ತಿಯ ಹಸ್ತಕ್ಷೇಪವಿಲ್ಲದೆ ಕೇವಲ genetic variations in each generation ಹಾಗೂ natural selection ನಿಂದಾಗಿ ಈ ಜೀವ ಜಗತ್ತು ಈಗಿರುವಂತಿದೆ ಎನ್ನುತ್ತದೆ ವಿಕಾಸವಾದ.
ವಿಕಾಸವಾದಕ್ಕೆ ವಿರುದ್ಧವಾಗಿ Intelligent design ಎಂಬ ಥಿಯರಿಯನ್ನು ಮಂಡಿಸಲಾಗುತ್ತದೆ. ದೇವರು ಎನ್ನುವ ಅತಿಮಾನುಷ ಶಕ್ತಿ ಸೃಷ್ಟಿಯನ್ನು ಮಾಡಿತು ಎನ್ನಲಾಗುತ್ತದೆ. ಈ ಥಿಯರಿಗಳು ತಮ್ಮ ವಾದವನ್ನು ಬೆಂಬಲಿಸಲು ಯಾವ ಸಮರ್ಥವಾದ ಸಾಕ್ಷಿಯನ್ನೂ ಒದಗಿಸುವುದಿಲ್ಲ. ಇವುಗಳ ಬಗೆಗಿಲ್ಲ ವ್ಯಾಪಕ ಚರ್ಚೆಯಾಗಿ ಅವೆಲ್ಲ ಕೇವಲ ಕಾಲಕ್ಷೇಪದ ಸಿದ್ಧಾಂತಗಳೆಂಬ ತೀರ್ಮಾನಕ್ಕೆ ವೈಜ್ಞಾನಿಕ ಜಗತ್ತು ಬಂದಿದೆ.
ತಾವು ಒಳ್ಳೆಯದು ಎಂದು ಭಾವಿಸಿದ್ದನ್ನೆಲ್ಲಾ 'ಅಧ್ಯಾತ್ಮ' ಎಂದು ಹೇಳಿ ಜಗತ್ತಿನಲ್ಲಿ ನಡೆದಿರುವ ಪಾತಕವನ್ನೆಲ್ಲಾ ಮನುಷ್ಯನ ಮೇಲೆ ಹೊರಿಸಿ ಮಾತನಾಡುವುದು suicidal tendency ಇರುವ ಧಾರ್ಮಿಕರ ಪದ್ಧತಿ. ಜಗತ್ತು ನಾಶವಾಗಿ ಕ್ರೈಸ್ತನ ಎರಡನೆಯ ಉದಯವಾಗುತ್ತದೆ (http://en.wikipedia....) ಆತ ತನ್ನ flock of sheepನ್ನು ಉಳಿದವರಿಂದ ಬೇರ್ಪಡಿಸಿ ಸ್ವರ್ಗಕ್ಕೆ ಕಳುಹಿಸುತ್ತಾನೆ ಎನ್ನುವವರಿದ್ದಾರೆ. ಇವರು ಅಣು ಬಾಂಬುಗಳ ಮೂಲಕ ನಡೆಯಬಹುದಾದ ಜಾಗತಿಕ ಯುದ್ಧವನ್ನು ಎದುರು ನೋಡುತ್ತಾ, ಅದು ಪಾಪದಿಂದ ಕೂಡಿದ ಈ ಮನುಕುಲವನ್ನು ನಾಶ ಮಾಡಲಿದೆ ಎನ್ನುತ್ತಾರೆ. ಇನ್ನು ಕಲಿಯುಗವನ್ನು ಕೊನೆಗಾಣಿಸಲು ಬರುವ ಕಲ್ಕಿ(http://en.wikipedia....)ಯ ಕಲ್ಪನೆಯಲ್ಲೂ ಜಗತ್ತು ನಾಶವಾಗಲಿದೆ ಎನ್ನುವ ನಂಬಿಕೆಯಿದೆ. ಅಧ್ಯಾತ್ಮವಾದಿಗಳೆಲ್ಲ ಎಂದಿಗೂ ಭೌತಿಕ ಜಗತ್ತಿನ ಬಗ್ಗೆ ತಾತ್ಸಾರವನ್ನೇ ತಾಳಿದ್ದವರು. ಶಂಕರರ ಕಾಲದಿಂದ ಇಂದಿನವರೆಗೂ ಪ್ರಪಂಚ ಮಾಯೆ, ಲೋಕ ಪಾಪದಿಂದ ಕೂಡಿದ್ದು(ಪಾಪದ ಕಲ್ಪನೆ ಕ್ರೈಸ್ತ್ ರಲ್ಲಿ ಗರಿಷ್ಟ ಪ್ರಮಾಣದ್ದು) ಎನ್ನುವ ತಾತ್ಸಾರ ಕಂಡುಬರುತ್ತದೆ.
ಇತಿಹಾಸವನ್ನು ಅಧ್ಯಯನ ಮಾಡಿದವರಿಗೆ ಅಲೆಕ್ಸಾಂಡರ್, ಚೆಂಗೀಸ್ ಖಾನ್,ಕುಂಟ ತೈಮೂರ್, ಮಂಗೋಲಿಯನ್ ಹತ್ಯಾಕಾಂಡಗಳು, ಅಶೋಕನ ಯುದ್ಧ ಮುಂತಾದವುಗಳ ಪರಿಚಯವಿರುತ್ತದೆ. ಆಗಿನ ನಾಗರೀಕತೆ, ಜನಜೀವನಗಳ ಬಗ್ಗೆ ಅಧ್ಯಯನ ಮಾಡಿದರೆ ಅವರೇನು ನಮಗಿಂತ ಭಿನ್ನರಾಗಿದ್ದಂತೆ ತೋರುವುದಿಲ್ಲ. ಆಗಿನ ಕಾಲದ ವಯೋವೃದ್ಧರೂ ಸಹ ಕಾಲ ಕೆಡುತ್ತಿದೆ ಎಂದೇ ಗೊಣಗಾಡುತ್ತಿದ್ದರು. ನೂರು ಇನ್ನೂರು ವರ್ಷಗಳ ಹಿಂದಿನ ಸಾಹಿತ್ಯವನ್ನು ಗಮನಿಸಿ,ಪ್ರತಿ ಹಳೆಯ ಜನರ್ಷನ್ನಿಗೂ ಮುಂದಿನವರು ಕೆಟ್ಟಂತೆ, ಕುಲಗೆಟ್ಟಂತೆ ತೋರುತ್ತಾರೆ.
ನನಗೆ ವಿಕಾಸವಾದದ ಬಗ್ಗೆ ಇಲ್ಲಿ ಇನ್ನಷ್ಟು ಚರ್ಚಿಸುವ ಆಸಕ್ತಿಯಿಲ್ಲ. ಚರ್ಚೆ ನಡೆಸಲು ಬರುವವರು ಡಾರ್ವಿನ್ನನ ವಿಕಾಸವಾದದ ಬಗ್ಗೆ ಕನಿಷ್ಟ ಪಕ್ಷ ಒಂಭತ್ತು ಹತ್ತನೆಯ ತರಗತಿಯ ಜೀವಶಾಸ್ತ್ರ ಪಠ್ಯಪುಸ್ತಕದಲ್ಲಿರುವಷ್ಟು ಮಾಹಿತಿಯನ್ನಾದರೂ ತಿಳಿದು ಬಂದರೆ ಚರ್ಚಿಸಲು ಸಾಧ್ಯ. ಒಬ್ಬರು ಮಂಗನಿಂದ ಮಾನವ ಅನ್ನೋದಾದ್ರೆ ಯಾಕೆ ಇನ್ನೂ ಮಂಗಗಳು ಹಾಗೇ ಇವೆ? ಇದೂವರೆಗೂ ಒಂದೇ ಒಂದು ಮಂಗ ಮಾನವನಿಗೆ ಜನ್ಮ ನೀಡಿಲ್ಲ ಎಂದು ಪೆದ್ದಾಗಿ ಕೇಳುತ್ತಾರೆ. ಇನ್ನೊಬ್ಬರು ಡೈನಾಸರುಗಳು ಡಾಮಿನೇಟ್ ಮಾಡುತ್ತಾ ನಿಸರ್ಗದ ಮೇಲೆ ದುರಾಕ್ರಮಣ ಮಾಡಿದ್ದರಿಂದ ಅವು ನಾಶವಾದವು ಎಂದು ಉಪನ್ಯಾಸ ಕೊಡುತ್ತಾರೆ.
ವಿಕಾಸವಾದವನ್ನು ಖಂಡಿಸುವ, ಒಪ್ಪದ ಮಂದಿಗೆ ಬದಲಿ ಸಿದ್ಧಾಂತವನ್ನು ಮುಂದಿಡಿ ಎಂಬ ಸವಾಲು ಹಾಕಿದ್ದೆ. ಆ ಸಿದ್ಧಾಂತದಿಂದ ಇದುವರೆಗೆ ಸಿಕ್ಕಿರುವ ಪಳೆಯುಳಿಕೆಗಳು, ಈಗಿರುವ ಪ್ರಾಣಿಗಳ ಅವಯವಗಳ ರಚನೆ, ವರ್ತನೆ, ಬ್ಯಾಕ್ಟೀರಿಯಾಗಳಲ್ಲಿ ಕಾಣುವ evolution, ವರ್ಷ ಕಳೆದಂತೆ DDTಗೆ ಪ್ರತಿರೋಧ ಬೆಳೆಸಿಕೊಂಡ ಸೊಳ್ಳೆ, ಇರುವೆಗಳು, ಕೈಗಾರಿಕರಣ ಶುರುವಾದಾಗ ಇಂಗ್ಲೆಂಡಿನಲ್ಲಿ ಬಿಳಿಯ ಬಣ್ಣದ ಚಿಟ್ಟೆ(moth)ಗಳ ರೆಕ್ಕೆಯ ಬಳ್ಳದಲ್ಲಾದ ಬದಲಾವಣೆ- ಇವನ್ನೆಲ್ಲಾ ವಿವರಿಸಲಿ. ವಿಕಾಸವಾದ ಈಗಾಗಲೇ ಉತ್ತರಿಸಿರುವ, ಬಿಡಿಸಿರುವ ಸಮಸ್ಯೆಗಳನ್ನು ಅವರಿಗೆ ಒಡ್ಡುತ್ತೇನೆ, ಅವಕ್ಕೆ ಸಮರ್ಪಕವಾದ ಉತ್ತರ ಕೊಡಲಿ- ಎಂದಿದ್ದೆ ಅದಕ್ಕೆ ಪ್ರತಿಕ್ರಿಯೆ ಬರಲಿಲ್ಲ.
ಉ: ಮಾನವನ ನಿಜ ವಿಕಾಸ ಸರಿಯಾದ ದಾರಿಯಲ್ಲೇ ಇದೆ!
ಡಾ| ಜ್ಞಾನದೇವರೇ
<< "ಆದರೆ ನೂರು ವರ್ಷಗಳ ನ೦ತರ ಈಗಿನ ಪರಿಸ್ಥಿತಿಯಲ್ಲಿ ಈ ದುಷ್ಟತನ ಕ್ರೌರ್ಯದ ಪ್ರಮಾಣ ತೂಗಿ ನೋಡಿ. ಆಗ ನನ್ನ ಅಭಿಪ್ರಾಯದ ಸೂಕ್ಷ್ಮತೆ ನಿಮಗೆ ಹೊಳೆಯಬಹುದು. ನೂರು ವರ್ಷದ ಹಿ೦ದಿನ ದಿನ ಪತ್ರಿಕೆಯನ್ನೂ ಈವತ್ತಿನ ದಿನಪತ್ರಿಕೆಯನ್ನೂ ಓದಿ.. Just watch the colossal difference!" >>
ನೀವು ಹೇಳಿದ್ದರ ಬಗ್ಗೆ ನನ್ನ ಎರಡು ಕಾಸುಗಳ ಅಭಿಪ್ರಾಯ ಹೀಗಿದೆ :
1. ನೂರು ವರ್ಷಗಳ ಹಿಂದೆ ಜನಸಂಖ್ಯೆ, ಸಾಂದ್ರತೆ ಬಹಳ ಕಡಿಮೆ ಇದ್ದವು.
2. ನೂರು ವರ್ಷಗಳ ಹಿಂದೆ ಸಂಪರ್ಕ ಸಾಧನಗಳು ಇಂದಿನ ಹಾಗೆ ಮುಂದುವರಿದಿರಲಿಲ್ಲವಾದ್ದರಿಂದ ಸುದ್ದಿ ಸಮಾಚಾರಗಳ ನಿಖರವಾದ
ಶೇಖರಣೆ ಮತ್ತು ಪ್ರಸಾರ ಸುಲಭವಾಗಿರಲಿಲ್ಲ. ಸಹಜವಾಗಿ ಸುದ್ದಿಗಳ ವಿಸ್ತಾರ, ಸಂಗ್ರಹಗಳು ಅತಿಯಾದ ಮಿತಿಯಲ್ಲಿ ಇದ್ದವು.
ಆದ್ದರಿಂದ ಆಗಿನ ಮತ್ತು ಈಗಿನ ಪತ್ರಿಕೆಗಳನ್ನು ಹೋಲಿಸಿ ನೋಡುವುದರಿಂದ ಯಾವ ಒಂದು ನಿರ್ಧಾರಕ್ಕೂ ಬರಲಾಗದು. ಇಂದಿನ ಜನಸಂಖ್ಯಾಸ್ಫೋಟದಿಂದ ದುಷ್ಟತನ, ಕ್ರೌರ್ಯಗಳಲ್ಲಿ ತೊಡಗಿರುವವರ ಪ್ರಮಾಣವೂ ಜನಸಂಖ್ಯಾ ಹೆಚ್ಚಳದ ಪ್ರಮಾಣದಲ್ಲೇ ಹೆಚ್ಚಿರುವದರಿಂದ ನಮಗೆ ದುಷ್ಟತನ, ಕ್ರೌರ್ಯಗಳೇ ಎಲ್ಲೆಲ್ಲೂ ಕಾಣಿಸುತ್ತಿರಬಹುದೇ? ಅಥವಾ ಇಂಥದ್ದೊಂದು preconceived notion ಇಟ್ಟುಕೊಂಡದ್ದರಿಂದ ಬರೀ ಅವುಗಳೇ ನಮಗೆ ಹೆಚ್ಚಾಗಿದೆ ಎಂದು ಕಾಣಿಸುತ್ತಿವೆಯೇ?
ಒಳ್ಳೆಯದರ ಪ್ರಮಾಣ ಹುಡುಕ ಹೋದರೆ ಅದು ಕೂಡ ಸಾಕಷ್ಟು ಸಿಗಬಹುದು ಎನ್ನುವ ನಂಬಿಕೆ ನನಗಿದೆ. ಉದಾಹರಣೆಗಾಗಿ, ನಿನ್ನೆ ಮಹಿಳಾ ಮೀಸಲಾತಿ ಮಸೂದೆ ಅಂಗೀಕ್ರತವಾಯಿತು - ಇದರಷ್ಟು ಒಳ್ಳೆಯ ಬೆಳವಣಿಗೆ ಹಿಂದಿನ ಎಷ್ಟೋ ಸಾವಿರ ವರ್ಷಗಳಲ್ಲಿ ಒಮ್ಮೆಯಾದರೂ ಆದದ್ದು ಉಂಟೆ? ಬಾಯಲ್ಲಿ ಮಾತ್ರ ನಾವು ಸಂಸ್ಕ್ರತ ಸು-ಭಾಷಿತ ಮುತ್ತುಗಳನ್ನು ಉದುರಿಸುತ್ತೇವೆ - ಯತ್ರ ನಾರ್ಯಸ್ತು ಪೂಜ್ಯಂತೆ..... ಎಂದು. ಆಚರಣೆಯ ಮಾತು ಬಂದಾಗ ಮಾತ್ರ ಫಣಿಯಮ್ಮಂದಿರನ್ನು ನಮ್ಮ ಮನೆಯೊಳಗೇ ಇರಿಸಿ ಅವರ ಜೀವನವನ್ನು ನರಕಸದ್ರಶರಾಗಿಸುತ್ತೇವೆ - at least until recently.
ಮೊನ್ನೆಯಷ್ಟೇ ಗ್ರೆಗ್ ಮೊರ್ಟೆನ್ ಸನ್ ಬರೆದ Three Cups Of Tea ಪುಸ್ತಕವನ್ನು ಓದಿ ಹರುಷ ಪಟ್ಟೆ. ಅಮೇರಿಕದ ಮೊರ್ಟೆನ್ ಸನ್ ಜಗತ್ತಿನ ಅತ್ಯಂತ ಅಪಾಯಕಾರಿ ಪ್ರದೇಶವಾದ ವಜೇರಿಸ್ತಾನ್, ನಾರ್ತ್ ವೆಸ್ಟ್ ಫ್ರಾಂಟಿಯರ್ ಪ್ರಾವಿನ್ಸ್, ಕಾರಾಕೊರಂ ಪ್ರದೇಶಗಳಲ್ಲಿ ಕಳೆದ 16 ವರ್ಷಗಳಲ್ಲಿ ೧೩೧ ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸಿ ಅವು ಚೆನ್ನಾಗಿ ನಡೆಯುವಂತೆ ನೋಡಿಕೊಂಡಿದ್ದಾನೆ. ತನ್ನ ಮೇಲೆ ಎರಡು ಫಾತ್ವಾಗಳಿದ್ದರೂ ಕೂಡ ಆ ಪ್ರದೇಶಗಳ ಹೆಣ್ಣುಮಕ್ಕಳು ಕೂಡಾ ಶಾಲೆಗೆ ಬಂದು ವಿದ್ಯೆಪಡೆಯುವಂತೆ ಮಾಡಲು ಸಫಲನಾಗಿದ್ದಾನೆ. ಇದು ನಡೆದದ್ದು ಭಯೋತ್ಪಾದಕರ ತವರುಮನೆ ಎನಿಸಿದ ಮುಸ್ಲಿಂ ರಾಷ್ಟ್ರದಲ್ಲಿ.
ಮೊರ್ತೆನ್ಸನ್ ನಿಗೆ ಚೆನ್ನಾಗಿ ಗೊತ್ತಿದೆ - ಯುದ್ಧದಿಂದ ಪ್ರದೇಶವೊಂದನ್ನು ಗೆಲ್ಲಬಹುದಾದರೂ ಜನಮನ ಗೆಲ್ಲಲು ಯುದ್ಧದಿಂದ ಸಾಧ್ಯವಿಲ್ಲ. ಅದು ವಿದ್ಯೆಯಿಂದ, ಪ್ರೀತಿಯಿಂದ ಮಾತ್ರ ಸಾಧ್ಯ.
ನಮ್ಮಲ್ಲಿ ಕೇವಲ 3-4 ತಲೆಮಾರು ಹಿಂದಿನತನಕ ನಮ್ಮ ಮುತ್ತಜ್ಜಿಯರ ಕಾಲದಲ್ಲಿ ಸ್ತ್ರೀಯರು ಅನಕ್ಷರಸ್ಥರಾಗಿದ್ದರು.
ಯುದ್ಧಗಳ ಮಾತಿನಿಂದ ನಾನು ಈ ಚರ್ಚೆಗೆ ಬಂದೆ. ಕಳೆದ 200-300 ವರುಷಗಳಲ್ಲಿ ದೇಶದ ನಮ್ಮೀ ಭಾಗದಲ್ಲಿ ಟಿಪ್ಪು ಮಡಿದ ಬಳಿಕ ಯಾವುದಾದರೂ ಯುದ್ಧವಾಗಿದೆಯೇ? ಇದೇ ಪ್ರದೇಶದಲ್ಲಿ ಪರಿಸ್ಥಿತಿ 500 - 1000 ವರ್ಷ ಹಿಂದೆ ಹೇಗಿತ್ತು? ದಲಿತರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿತ್ತು? ತಲೆಮೇಲೆ ಮಲ ಹೊರುವ ಅನಾದಿಕಾಲದ ಪದ್ಧತಿ ಈಗ ಯಾಕಿಲ್ಲ?
ನಿಮ್ಮದೇ ಮೆಚ್ಚಿನ ಕೈಂಕರ್ಯವಾದ (?) ಆರೋಗ್ಯಕ್ಷೇತ್ರದಲ್ಲಿ ಎಷ್ಟೆಲ್ಲಾ ಆವಿಷ್ಕಾರಗಳು ಆಗಿಲ್ಲ! ಇಂದಿನವರ ಸರಾಸರಿ ವಯೋಮಾನ ಎಷ್ಟೊಂದು ಹೆಚ್ಚಾಗಿಲ್ಲ!
ಇಂದು ನೀವು ನಾವು ಇಷ್ಟೊಂದು ಸುಲಭವಾಗಿ, ಸುಲಲಿತವಾಗಿ ನಮ್ಮ ಅಭಿಪ್ರಾಯಗಳನ್ನು, ಅಭಿಪ್ರಾಯ ಭೇದಗಳನ್ನು ಹಂಚಿಕೊಳ್ಳುತ್ತಿದ್ದರೆ ಅದಕ್ಕೆ ಕಾರಣ ಸಂಪರ್ಕಕ್ರಾಂತಿಯಿಂದಾದ ವಿಕಾಸ. ಇಂಟರ್ ನೆಟ್ ಅನ್ನು ಮೊದಲು ಆವಿಷ್ಕಾರ ಮಾಡಿದ್ದು ಅಮೆರಿಕೆಯ ರಕ್ಷಣಾ ವಿಭಾಗದ ಪ್ರಯೋಗಾಲಯದಲ್ಲಂತೆ - ನೋಡಿ ಯುದ್ಧಭಯದಿಂದಾದ ವಿಕಾಸ.
ಅಮ್ರತ ಮಂಥನ ದ ಕತೆಯಲ್ಲಿ ( ಇದು ನೀವಂದಂತೆ ಸುಳ್ಳಿರಬಹುದು, ಆದರೆ ಈ ಕತೆಯ ನೀತಿಪಾಠವೆಂದರೆ: ಒಂದು ಒಳ್ಳೆಯ ವಸ್ತು ಸಿಗಬೇಕಾದರೆ ನೂರೆಂಟು ತ್ಯಾಜ್ಯವಸ್ತುಗಳು, ವಿಷ ಇತ್ಯಾದಿ byproducts ಗಳು ಉಂಟಾಗುತ್ತವೆ. ಅವುಗಳ ವಿಲೇವಾರಿಗೆ ದೇವರು ನೀಲಕಂಟನ ರೂಪದಲ್ಲಿ ಉದ್ಭವನಾಗುತ್ತಾನೆ.
ಆದ್ದರಿಂದ ನನ್ನ ಸೀಮಿತ ತಿಳುವಳಿಕೆಯಂತೆ ವಿಕಾಸ ಸರಿಯಾದ ದಾರಿಯಲ್ಲೇ ಸಾಗುತ್ತಿದೆ.
ಇದಿಷ್ಟು ಮಾತ್ರದಿಂದ ನಿಮ್ಮ ನಂಬಿಕೆ ಅಲುಗಾಡದಿರಬಹುದು. Let us agree to disagree.
ಉ: ಮಾನವನ ನಿಜ ವಿಕಾಸ ಸರಿಯಾದ ದಾರಿಯಲ್ಲೇ ಇದೆ!
ಗ್ಲೋಬಲ್ ವಾರ್ಮಿ೦ಗ್, ಭಯೋತ್ಪಾದನೆ, ಪರಿಸರ ನಾಶ, ಉಲ್ಬಣಿಸುತ್ತಿರುವ ಮನೋರೋಗಗಳು, ದಲಿತ ಶೋಷಣೆಯ ಜಾಗದಲ್ಲಿ ರಾಜಕೀಯ ಭ್ರಷ್ಠತೆ ಶೋಷಣೆ, ನೀಚತನ, ಹಗರಣಗಳು, ಹೆಚ್ಚುತ್ತಿರುವ ಋತುವೈಕಲ್ಯಗಳು, ತ೦ತ್ರಜ್ಞಾನದ ಜೊತೆ ಜೊತೆ ಹೆಚ್ಚುತ್ತಿರುವ ಕ್ರೈಮ್ ಗಳು ಅಪಘಾತಗಳು ಇವೂ ನಮ್ಮ ಇ೦ದಿನ ಆಧುನಿಕ ತಲ್ಲಣಗಳು. ಹಿ೦ದಿನವರ ವಿವೇಕ ಅವಿವೇಕದ ಜೊತೆ ಇ೦ದಿನ ವಿವೇಕ ಅವಿವೇಕಗಳನ್ನೂ ತುಲನೆ ಮಾಡಿ ನಿಶ್ಝ್ಪಕ್ಷಪಾತವಾಗಿ ಮನುಷ್ಯ ವಿವೇಕದ ಹಾದಿ ತುಳಿಯದಿದ್ದರೆ ಮಾನವನ ವಿನಾಶ ಕಟ್ಟಿಟ್ಟ ಬುತ್ತಿ. ನಾನು ಎಲ್ಲೂ ವಿಜ್ಞಾನವನ್ನು ಹೀಗಳೆದಿಲ್ಲ. ಆದರೆ ವಿಜ್ಞಾನದ ಅವಿಷ್ಕಾರಗಳನ್ನು ವಿವೇಕದಿ೦ದ ಬಳಸುವ ಅಗತ್ಯವಿದೆ ಎ೦ದು ಹೇಳಿದ್ದೇನೆ. ದಯೆಮಾಡಿ ನನ್ನ ಪ್ರತಿಕ್ರಿಯೆಗಳನ್ನು ಮರುಪರಿಶೀಲಿಸಿ. ವಿಜ್ಞಾನ ವಿವೇಕದ ಸಮ್ಮಿಳನವಿದ್ದರೆ ಬದುಕು ಸಾರ್ಥಕ ಎನ್ನುವ ಸದಾಶಯವನ್ನು ಒತ್ತಿ ಒತ್ತಿ ಹೇಳಿದ್ದರೂ ಅಲ್ಲಿ ಅಪಾರ್ಥವಾಗುತ್ತಿದೆ. ಇನ್ನು ನೂರೆ೦ಟು ವಾದಗಳನ್ನು ಮ೦ಡಿಸಿದರೂ ನನ್ನ ಒ೦ದೇ ಉತ್ತರ ಐನ್ ಸ್ಟೀನ್ ನ ತಲೆ, ಬುದ್ಧನ ಹೃದಯವಿರಲಿ. ನಮ್ಮ ಚರ್ಚೆ, ಬರೀ ನಮ್ಮ ಬೌದ್ಧಿಕತೆಯ ಇಗೋ ತೋರಿಸದಿರಲಿ.
ಇದೂ ನಿಮಗೆ ಅಪಥ್ಯವಾಗಿದ್ದರೆ Then, let us agree to disagree
ಉ: Global Warming A Big Hoax - ತಲ್ಲಣಿಸದಿರು ಕಂಡ್ಯ...
ಡಾ| ಜ್ಞಾನದೇವರೆ,
<< "ಗ್ಲೋಬಲ್ ವಾರ್ಮಿ೦ಗ್, ....ಹೆಚ್ಚುತ್ತಿರುವ ಋತುವೈಕಲ್ಯಗಳು ಇವೂ ನಮ್ಮ ಇ೦ದಿನ ಆಧುನಿಕ ತಲ್ಲಣಗಳು." >>
ನಿಮ್ಮ ಹಾಗೆಯೇ ನಾನು ಕೂಡಾ ಗ್ಲೋಬಲ್ ವಾರ್ಮಿಂಗ್ ಬಗ್ಗೆ ತಲೆ ಕೆಡಿಸಿಕೊಂಡು ಅಲ್ ಗೋರ್ ನ ಡಿವಿಡಿ ಮತ್ತು ಪುಸ್ತಕ (An Inconvenient Truth) ಗಳನ್ನೂ ತರಿಸಿದ್ದು ಮಾತ್ರವಲ್ಲ, ಈ ತಲ್ಲಣದ ( ತಲ್ಲಣ - ನನಗೆ ಹೊಸ ಶಬ್ದ, ಚೆನ್ನಾಗಿದೆ; ಧನ್ಯವಾದಗಳು.) ಬಗ್ಗೆ ಒಂದೆರಡು ಭಿತ್ತಿ ಪತ್ರಗಳನ್ನು ತಯಾರಿಸಿ ಗೋಡೆಗಳ ಮೇಲೆ ಅಂಟಿಸ ಹೊರಟಿದ್ದೆ. ಅಷ್ಟರಲ್ಲಿ ನನಗಿಂತ ಹೆಚ್ಚು ತಿಳಿದ ಹೆಣ್ಣು ಒಬ್ಬರು ನನಗೆ ಶಾಕ್ ಇತ್ತರು. ಇದೆಲ್ಲ ಒಂದು ದೊಡ್ಡ ಮೋಸ, ಟಿವಿಯಲ್ಲಿ ಬಂದಿದೆ, ಸರಿಯಾಗಿ ತಿಳಿದುಕೊಂಡು ಮುಂದುವರಿಯಿರಿ ಎಂದರು.
ಅಲ್ ಗೋರ್ ಗೆ ಗ್ಲೋಬಲ್ ವಾರ್ಮಿಂಗ್ ವಿಷಯ ಪ್ರಸಾರ ದಿಂದ ಎಷ್ಟೋ ಕೋಟಿ ರೂಪಾಯಿಗಳು ಬರುತ್ತವೆ ಹಾಗೂ ಇದರಲ್ಲಿ ಅವನ vested interestsಗಳು ಇವೆ ಎಂದು ತಿಳಿಸಿದರು. "ಅಲ್ ಗೋರ್ fraud" ಎಂದು ಗೂಗಲಿಸಿದರೆ ಅನೇಕ ಸಯಿಟುಗಳು ಕಂಡವು.
ಮನುಷ್ಯಕ್ರತ ಪಾಪಗಳು ಗ್ಲೋಬಲ್ ವಾರ್ಮಿಂಗ್ ಗೆ ಸ್ವಲ್ಪ ಮಟ್ಟಿಗೆ ಮತ್ತು ಪರಿಸರ ನಾಶಕ್ಕೆ ಬಹಳಷ್ಟು ಮಟ್ಟಿಗೆ ಕಾರಣವಾಗಿರುವುದು ನಿಜವಾದರೂ, ಗ್ಲೋಬಲ್ ವಾರ್ಮಿಂಗ್ ನಿಜವಾಗಿಯೂ ಹೆಚ್ಚುತ್ತಿರುವುದು ಸೂರ್ಯನಲ್ಲಿ ನಡೆಯುತ್ತಿರುವ, ಹೆಚ್ಚುತ್ತಿರುವ ಚಟುವಟಿಕೆಗಳಿಂದಾಗಿ. ನೋಡಿ: ನಾಸಾ, ಅಮೇರಿಕನ್ ಸರಕಾರದ website. http://earthobservat...
ಇನ್ನು ಅಲ್ ಗೋರ್ ನ ಭಾರತೀಯ ಪಾಲುದಾರ (ನೋಬಲ್ ಪ್ರಶಸ್ತಿಯಲ್ಲಿ ಪಾಲುದಾರ) RK ಪಚೌರಿ ಕೂಡಾ ತಮ್ಮ ಲೆಕ್ಕಾಚಾರಗಳಲ್ಲಿ ತಪ್ಪು ಇರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು.
ನೀವು ಪರಿಚಯಿಸಿದ ತಲ್ಲಣ ಪದದಿಂದ ನೆನಪಾದ ಕನಕದಾಸರ ಪದ್ಯದ ಮೊದಲ ಸಾಲು ಹೀಗಿದೆ: "ತಲ್ಲಣಿಸದಿರು ಕಂಡ್ಯ ತಾಳು ಮನವೇ...."
ಉ: Global Warming A Big Hoax - ತಲ್ಲಣಿಸದಿರು ಕಂಡ್ಯ...
<<ನೀವು ಪರಿಚಯಿಸಿದ ತಲ್ಲಣ ಪದದಿಂದ ನೆನಪಾದ ಕನಕದಾಸರ ಪದ್ಯದ ಮೊದಲ ಸಾಲು ಹೀಗಿದೆ: "ತಲ್ಲಣಿಸದಿರು ಕಂಡ್ಯ ತಾಳು ಮನವೇ....">> ಹೌದು ಇ೦ಥಾ ತಲ್ಲಣಗಳಿರುವಾಗಲೇ ನನಗೆ ನೆನಪಾಗುವುದು ಆ ಸ೦ತರ ವಿವೇಕ ವಾಣಿ "ತಲ್ಲಣಿಸದಿರು ಕ೦ಡ್ಯ್ ತಾಳು ಮನವೇ". ಕೊನೆಗೆ ನೀವು ಈ ವಾಣಿಯನ್ನೇ ಅಶ್ರಯಿಸಿದ್ದು ಒ೦ದು ಸ೦ತಸದ ವಿಚಾರ. ಇರಲಿ ನೀವು Global warming ಒ೦ದು Hoax ಎ೦ದು ಕರೆದು ನೆಮ್ಮದಿಯ ನಿರಾಳತೆಯನ್ನು ಅನುಭವಿಸುತ್ತಿರಬಹುದು. ಇಲ್ಲಿ ನಾನು ಕೆಳಗೆ ಉಲ್ಲೇಖಿಸಿರುವ ಸಾಲುಗಳನ್ನೂ ನಿಧಾನವಾಗಿ ಓದಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.
Global warming is the increase in the average temperature of Earth's near-surface air and oceans since the mid-20th century and its projected continuation. Global surface temperature increased 0.74 ± 0.18 °C (1.33 ± 0.32 °F) between the start and the end of the 20th century.[3][A] The Intergovernmental Panel on Climate Change (IPCC) concludes that most of the observed temperature increase since the middle of the 20th century was very likely caused by increasing concentrations of greenhouse gases resulting from human activity such as fossil fuel burning and deforestation.[3] The IPCC also concludes that variations in natural phenomena such as solar radiation and volcanic eruptions had a small cooling effect after 1950.[4][5] These basic conclusions have been endorsed by more than 40 scientific societies and academies of science,[B] including all of the national academies of science of the major industrialized countries.
Fossil fuels are non-renewable resources because they take millions of years to form, and reserves are being depleted much faster than new ones are being formed. The production and use of fossil fuels raise environmental concerns. A global movement toward the generation of renewable energy is therefore under way to help meet increased energy needs.
The burning of fossil fuels produces around 21.3 billion tonnes (21.3 gigatonnes) of carbon dioxide per year, but it is estimated that natural processes can only absorb about half of that amount, so there is a net increase of 10.65 billion tonnes of atmospheric carbon dioxide per year (one tonne of atmospheric carbon is equivalent to 44/12 or 3.7 tonnes of carbon dioxide).[6] Carbon dioxide is one of the greenhouse gases that enhances radiative forcing and contributes to global warming, causing the average surface temperature of the Earth to rise in response, which climate scientists agree will cause major adverse effects.
All these facts lead scientists to infer that the global warming we now experience is not a natural occurrence and that it is not brought on by natural causes. Man is responsible, they say. What did we do? Read more about the man-made causes and impacts of global warming in the following articles.
But while we are still far from seeing major concentrations of CO2 in our atmosphere, slight changes already alter the way our celestial heating system works. Measurements of carbon dioxide amounts from Mauna Loa Observatory in Hawaii show that CO2 has increased from about 313 ppm in 1960 to about 375 ppm in 2005.
That means for every million particles in our atmosphere, there are now 62 CO2-particles more than in 1960. Even if this does not seem like much, scientists say this increase – most probably caused by human activities – is mainly responsible for rising global temperatures throughout the last decades.
Methane is number two among the man-made climate warmers worldwide. Its concentration in the atmosphere has increased threefold since the industrial revolution. But with more warming, the worst could still be to come.
Methane, the second most important greenhouse gas after carbon dioxide and the primary component of natural gas, is virtually omnipresent. The odorless, colorless gas leaks from the Earth’s mantle through volcanoes, vents from the stomachs of millions of livestock, rises from wetlands, marshes, and coal mines, and bubbles up from all things decaying.
For the last decade, however, methane emissions had somehow stabilized and even decreased slightly, while carbon dioxide levels increased rapidly. Scientists finally figured out that this was due to the fact that many wetlands were being drained for agricultural use, the increased capture of methane from landfills, and reduced emissions from the production of natural gas. But methane emissions have started to rise again due to increased consumption of fossil fuels in Asia. And an even bigger time bomb is ticking.
A lot of methane is trapped in permafrost soils and under the world’s oceans. Scientists fear that these deposits could be freed by further global warming. This would cause more warming and, in a vicious cycle, the release of even more methane thereby triggering runaway climate change.
Permafrost soil in Siberia has started to melt for the first time since it formed 11,000 years ago at the end of the last ice age. It now threatens to release billions of tons of methane. According to Larry Smith, a hydrologist at the University of California, the west Siberian peat bog alone could hold some 70 billion tons of methane, a quarter of all of the methane stored in the ground around the world.
More methane could come from melting methane deposits in ocean seabeds if water temperatures rise sufficiently. Scientists speculate that large, sudden releases of methane have in the past resulted in periods of rapid global warming and mass extinction events.
This benevolent cycle went on for millions of years until chemists and farmers realized that nitrogen fertilizers greatly increase crop yields. Since then, more and more nitrogen has been added to the cycle. Farmers around the globe use more than 70 million tons of nitrogen fertilizers annually. According to a study conducted by Nobel prize-winning chemist Paul Crutzen in 2007, some 3 to 5 percent of this nitrogen is converted directly into nitrous oxide, twice the amount previously thought
Today, fertilizers are often washed away by rain into lakes and seas where algae feed on them, bloom uncontrollably, and starve the water of oxygen. Every summer, nitrogen-rich river flow from the Mississippi River creates a “dead zone” in the Gulf of Mexico the size of Massachusetts
Mankind’s binge on fertilizers and fossil fuels, another source of the gas, has increased nitrous oxide levels in the atmosphere by about 18 percent since 1750. Fortunately, nitrous oxide appears only in scarce quantities; it is about a thousand times rarer than carbon dioxide. But its long atmospheric lifetime of about 150 years and its strong warming potential, more than 300 times stronger than CO2, make it an effective agent of global warming.
Man-induced increase
Since the beginning of the industrial revolution, the average amount of carbon dioxide in the atmosphere has increased by nearly 40 percent from an estimated 280 to more than 380 ppmv percent. This increase in CO2’s share of the atmosphere is mostly due to anthropogenic (man-induced) factors, such as burning fossil fuels, deforestation and industrial production.
In total, humans emit around 32 gigatons of carbon dioxide each year. Half of this stays in the atmosphere; the rest is absorbed by oceans and vegetation. With sharp increases in man-made CO2 emissions, the natural CO2 cycle gets thrown out of balance: vegetation can no longer transform the increased amount of CO2 into oxygen, and oceans are steadily reaching saturation level. The result of the increasing amount of carbon dioxide in the atmosphere is an enhanced greenhouse effect and, subsequently, climate change. While CO2 is only responsible for 20 percent of the natural greenhouse effect, it accounts for about 60 percent of the anthropogenic greenhouse effect that is causing the latest wave of global warming.
Besides these fundamental natural processes, there are a number of artificial uses of carbon dioxide. Dry ice, for example, used for cooling devices, is nothing but deep-frozen, super-cold carbon dioxide. CO2 can also be found in fire extinguishers and, as the food additive E 290, adds the fizz to soft drinks and sparkling water.
ಆಧಾರ: ವಿಕಿಪೀಡಿಯ
http://www.globalwar...
http://knowledge.all...
ಉ: ಏರುತ್ತಿರುವ ಜಾಗತಿಕ, ಹಾಗೆಯೇ ಸಂಪದಚರ್ಚೆಗಳಲ್ಲಿ ತಾಪಮಾನ.
ಉ: ಏರುತ್ತಿರುವ ಜಾಗತಿಕ, ಹಾಗೆಯೇ ಸಂಪದಚರ್ಚೆಗಳಲ್ಲಿ ತಾಪಮಾನ - ಸ್ವಲ್ಪ ಕೂಲ್ ಆಗಿ ಯೋಚಿಸಿ; ಪ್ರತಿಕ್ರಿಯಿಸಿ. :-)
ಡಾ| ಜ್ಞಾನದೇವ್ ರೆ,
"ಉಲ್ಲೇಖಿಸಿರುವ ಸಾಲುಗಳನ್ನೂ ನಿಧಾನವಾಗಿ ಓದಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ." ಎಂದು ಕೋರಿದ್ದೀರಿ.
ನಿಮ್ಮ ಈ ಪ್ರತಿಕ್ರಿಯೆ ಬರುವ ಮೊದಲೇ, ನಾನು ನಿಮಗೆ ಬರೆದಿದ್ದೆ:
"ಮನುಷ್ಯಕ್ರತ ಪಾಪಗಳು ಗ್ಲೋಬಲ್ ವಾರ್ಮಿಂಗ್ ಗೆ ಸ್ವಲ್ಪ ಮಟ್ಟಿಗೆ ಮತ್ತು ಪರಿಸರ ನಾಶಕ್ಕೆ ಬಹಳಷ್ಟು ಮಟ್ಟಿಗೆ ಕಾರಣವಾಗಿರುವುದು ನಿಜವಾದರೂ...." ಎಂದಿದ್ದೇನೆ. ನೂರು ಇಂಗ್ಲೀಶ್ ಸಾಲುಗಳಲ್ಲಿರುವುದನ್ನು, ಬರೀ ಅರೆ ವಾಕ್ಯವೊಂದರಲ್ಲೇ ಒಪ್ಪಿಕೊಂಡಿದ್ದೇನೆ.
ಸಮಸ್ಯೆ ಅದಲ್ಲವೇ ಅಲ್ಲ. ಬಹುಷಃ ಈ ಕೆಳಗಿನ ಕೊಂಡಿಯಲ್ಲಿ ಬರೆದಿರುವದು ನಿಜವಾಗಿದ್ದಲ್ಲಿ, ಮನುಷ್ಯಕೃತ ಗ್ಲೋಬಲ್ ವಾರ್ಮಿಂಗ್ ಎಷ್ಟು ಅಸಂಗತ, minuscule ಎಂದು ಗೊತ್ತಾಗುತ್ತದೆ.
http://www.geocraft....
ಈ ಗಹನವಾದ ವಿಷಯ ನಮ್ಮಿಬ್ಬರ ಅಳವಿಗೂ ಮೀರಿದ್ದು. ಅಂತರ್ಜಾಲದಲ್ಲಿ ಬರುತ್ತಿರುವುದೆಲ್ಲವೂ ನೂರಕ್ಕೆ ನೂರು ನಿಜ ಎನ್ನುವ ಹಾಗೂ ಇಲ್ಲ.
ಗ್ಲೋಬಲ್ ವಾರ್ಮಿಂಗ್ ನಂಥ ಗ್ಲೋಬಲ್ ಗಾತ್ರದಲ್ಲಿ ಕೋಟ್ಯಾಂತರ ಜನರನ್ನು ಮೋಸಗೊಳಿಸುವುದು ಸಾಧ್ಯವಾದರೆ, ಈ ಮೋಸಗಾರರು ಪುಕ್ಕಟೆ ಸಿಕ್ಕಿದ ಅಂತರ್ಜಾಲದಲ್ಲಿ ಮಾಹಿತಿ ತಿರುಚಿ ತಂತಮ್ಮ ಗುರಿ ಸಾಧಿಸಲಾರರೆ!
ಆದಾಗ್ಯೂ, ಅಂತರ್ಜಾಲದಿಂದ ಮಾಹಿತಿಯನ್ನು ನಮ್ಮ ನಮ್ಮ ಅನುಕೂಲಕ್ಕೆ ತಕ್ಕಂತೆ ನಾವಿಬ್ಬರೂ ಇಲ್ಲಿ ಉಲ್ಲೇಖಿಸಿದ್ದೇವೆ. ನಮಗೆ ಬೇಕಾದುದನ್ನು ಬೇಕಾದಂತೆ ಅರ್ಥೈಸಿ ನಂಬಿಕೆಯೊಂದನ್ನು ನಮ್ಮಲ್ಲಿ ಹುಟ್ಟಿಸಿಕೊಂಡಿದ್ದೇವೆ. ಇದರ ನಿಜ ಸುಳ್ಳುಗಳನ್ನೂ ಪರೀಕ್ಷಿಸುವಷ್ಟು ಪರಿಣತಿ ನಮಗಿಲ್ಲ. ಆ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯೂ ನಮ್ಮಿಬ್ಬರಿಗೂ ಇಲ್ಲ. ಅಂತರ್ಜಾಲದಲ್ಲಿ ಬರುತ್ತಿರುವುದೆಲ್ಲವೂ ನೂರಕ್ಕೆ ನೂರು ನಿಜ ಎನ್ನುವ ಹಾಗೂ ಇಲ್ಲ. ಒಂದುವೇಳೆ ನಿಜವಿದ್ದರೂ ವಿಜ್ನಾನಿಗಳೆಲ್ಲರಲ್ಲೂ ಒಮ್ಮತದ ಅಭಿಪ್ರಾಯವಿದೆ ಎನ್ನಲಾಗದು. ಆದರೆ ನನ್ನ ವೈಯಕ್ತಿಕ ನಂಬಿಕೆ ಎಂದರೆ, it is confusion that ultimately leads us to clarity. ಚರ್ಚಿಸುವುದು ಆರೋಗ್ಯಕ್ಕೆ, ಮಿದುಳಿಗೆ ಒಳ್ಳೆಯದು ಎಂದು ನಂಬಿದ್ದೇನೆ.
ಮೇಲೆ ಕೊಟ್ಟ ಕೊಂಡಿಯಲ್ಲಿ ನನಗೆ ಹಿಡಿಸಿದ 3 quote ಗಳನ್ನು ಗಮನಿಸಿ:
1.
Scientists who want to attract attention to themselves, who want to attract great funding to themselves, have to (find a) way to scare the public . . . and this you can achieve only by making things bigger and more dangerous than they really are."
(-- Petr Chylek, Prof. of Physics & Atmospheric Science, Dalhousie University, Nova Scotia)
2.
Researchers pound the global-warming drum because they know there is politics and, therefore, money behind it. . . I've been critical of global warming and am persona non grata." ( -- Dr. William Gray, Prof. of Atmospheric Sciences at Colorado State University, & leading expert of hurricane predictions).
3.
ಕೊನೆಯದಾಗಿ ಈ ಇಡೀ ನಾಟಕದ ಹೀರೋ ಆದ ಅಲ್ ಗೋರ್ ಹೇಳಿದ್ದು:
Nobody is interested in solutions if they don't think there's a problem. Given that starting point, I believe it is appropriate to have an over-representation of factual presentations on how dangerous (global warming) is, as a predicate for opening up the audience to listen to what the solutions are... ( -- Al Gore, former Vice President and now Chairman and co-founder of Generation Investment Management -- a London-based business that sells carbon credits.)
<>
ಉ: ಮಾನವನ ನಿಜ ವಿಕಾಸ ಎತ್ತ ಸಾಗಿದೆ?? - ಡಾ| ಜ್ಞಾನ ದೇವರ ಪ್ರಶ್ನೆ
<< ತಾವು ಒಳ್ಳೆಯದು ಎಂದು ಭಾವಿಸಿದ್ದನ್ನೆಲ್ಲಾ 'ಅಧ್ಯಾತ್ಮ' ಎಂದು ಹೇಳಿ ಜಗತ್ತಿನಲ್ಲಿ ನಡೆದಿರುವ ಪಾತಕವನ್ನೆಲ್ಲಾ ಮನುಷ್ಯನ ಮೇಲೆ ಹೊರಿಸಿ ಮಾತನಾಡುವುದು suicidal tendency ಇರುವ ಧಾರ್ಮಿಕರ ಪದ್ಧತಿ >>
ವಿಕಾಸವಾದ ದ ಬಗ್ಗೆ ಮಾತಾಡುವವರು ಒಂಭತ್ತನೆಯ ಕ್ಲಾಸಿನಷ್ಟು ವಿಕಾಸವಾದ ಓದಿರಬೇಕೆಂದವರು ಆಧ್ಯಾತ್ಮಿಕತೆಯ ಬಗ್ಗೆ ಮಾತಾಡುವಾಗ ಅದನ್ನು ಮರೆತುಬಿಡುತ್ತಾರೆ. ಈ ಥರ sweeping statements ಕೊಟ್ಟುಬಿಡುತ್ತಾರೆ. Great going.. carry on.. ಡಯಿನೋಸರ್ ಗಳ ಬಗ್ಗೆ ನನ್ನ ಕಮೆಂಟ್ ಹಿಂತೆಗೆದುಕೊLLಉತ್ತೇನೆ. ಆದರೆ ಉಳಿದ ನನ್ನ ನಿಲುವುಗಳಿಗೆ ಇನ್ನೂ ಬಧ್ಧನಾಗಿದ್ದೇನೆ. ನೀವು ಆಧ್ಯಾತ್ಮದ ಬಗ್ಗೆ ಮಾತಾಡುವುದನ್ನು ನಿಲ್ಲಿಸಿ. ವಿಜ್ನಾನ ಏನು ಹೇಳುತ್ತೆ ಅಷ್ಟು ಹೇಳಿ, ಸಾಕು. ಎಲ್ಲರಿಗೂ ಒಳಿತಾಗಲಿ.
ಉ: ಮಾನವನ ನಿಜ ವಿಕಾಸ ಎತ್ತ ಸಾಗಿದೆ?? - ಡಾ| ಜ್ಞಾನ ದೇವರ ಪ್ರಶ್ನೆ
ಡೈನಾಸರ್ ಉದಾಹರಣೆಯಲ್ಲಿನ ಲೋಪವನ್ನು ಒಪ್ಪಿದ್ದಕ್ಕೆ ಮೆಚ್ಚುಗೆ. ವಾದದಲ್ಲಿನ ಅತಾರ್ಕಿಕತೆಯನ್ನು ತೋರಿದಾಗ ಅದನ್ನು ಒಪ್ಪಿಕೊಳ್ಳುವುದೇ ಒಳ್ಳೆಯ ಜಿಜ್ಞಾಸುವಿನ ಲಕ್ಷಣವಲ್ಲವೇ?
ಇನ್ನು ವಿಕಾಸವಾದಕ್ಕೆ ಪರ್ಯಾಯವಾದ ಸಿದ್ಧಾಂತವನ್ನು ಮಂಡಿಸಿ ಎಂದು ಹೇಳಿರುವೆ. ಅತ್ತ ಗಮನ ಹರಿಸಿ ಒಮ್ಮೆ.
>>> ಆದರೆ ಉಳಿದ ನನ್ನ ನಿಲುವುಗಳಿಗೆ ಇನ್ನೂ ಬಧ್ಧನಾಗಿದ್ದೇನೆ. ನೀವು ಆಧ್ಯಾತ್ಮದ ಬಗ್ಗೆ ಮಾತಾಡುವುದನ್ನು ನಿಲ್ಲಿಸಿ.
ಫತ್ವಾ ಜಾರಿ ಮಾಡುವುದನ್ನು ಒಬ್ಬರಿಂದೊಬ್ಬರು ಕಲಿಯಲು ಶುರು ಮಾಡಿದ್ದಾರೆ!
ಅಧ್ಯಾತ್ಮದ ಬಗ್ಗೆ ಓದಿನಿಂದ ಏನೂ ತಿಳಿಯುವುದಿಲ್ಲ್ ಅದು ಸಿಹಿಯನ್ನು, ಸೌಂದರ್ಯವನ್ನು, ಅನುಭವವನ್ನು ವರ್ಣಿಸಿದ ಹಾಗೆ. ಪ್ರತ್ಯಕ್ಷ ತಿಳಿದರಷ್ಟೇ ಅನುಭವಕ್ಕೆ ಸಿಕ್ಕುವುದು ಎಂದು ವೈದ್ಯ ಪ್ರಸನ್ನರವರು ಹೇಳಿದ್ದರು. ನೀವು ಅದರ ಬಗ್ಗೆ ಒಂಭತ್ತನೆಯ ಕ್ಲಾಸಿನಷ್ಟು, ಹತ್ತನೆಯ ಕ್ಲಾಸಿನಷ್ಟು ಓದಿರಬೇಕು ಎನ್ನುವಿರಿ. ಮೇಲಾಗಿ ಓದಬೇಕು ಎಂದು ಹೇಳುವುದು ತತ್ವಜ್ಞಾನ, ಫಿಲಾಸಫಿ. ಅದೂ ಕೂಡ ತರ್ಕ ಆಧಾರಿತವಾದದ್ದೇ. ಶಂಕರಾಚಾರ್ಯರು, ಮಾಧ್ವರು, ರಾಮಾನುಜರು ಇನ್ನೂ ಅನೇಕರು ವಾದಗಳನ್ನು ಮಾಡಿ ಸಿದ್ಧಾಂತಗಳನ್ನು ಮಂಡಿಸುತ್ತಿದ್ದರು. ಅದು ಅಧ್ಯಾತ್ಮ ಅಲ್ಲ ಎಂದು ಜ್ಞಾನದೇವರು ಹೇಳಿದ್ದಾರೆ. ನೀವು ಅದನ್ನು ಓದಿಕೊಳ್ಳಬೇಕು ಎನ್ನುವಿರಿ, ಇಲ್ಲಿರುವ ಮೂರು ಮಂದಿಯಲ್ಲೇ 'ಅಧ್ಯಾತ್ಮ' ಕುರಿತು ಇಷ್ಟು ಅಭಿಪ್ರಾಯ ಬೇಧವಿರುವಾಗ ಇನ್ನೊಬ್ಬನಿಗೆ ಇಂಥದ್ದನ್ನು ಓದಿ ಚರ್ಚೆಗೆ ಬಾ ಎಂದು ಸೂಚಿಸುವುದಕ್ಕೆ ಹೇಗೆ ಸಾಧ್ಯ?
ಉ: ಮಾನವನ ನಿಜ ವಿಕಾಸ ಎತ್ತ ಸಾಗಿದೆ?? - ಡಾ| ಜ್ಞಾನ ದೇವರ ಪ್ರಶ್ನೆ
ನೀವು ಆಧ್ಯಾತ್ಮವನ್ನು ಪುಸ್ತಕದಲ್ಲೇ 'ಓದಬೇಕೆಂದು' ನಾನು ಎಲ್ಲಿ ಹೇಳಿದೆ? ಸಾಂದರ್ಭಿಕವಾಗಿ ವಾಕ್ಯಗಳನ್ನು ಅರ್ಥ ಮಾಡಿಕೊಳ್ಳದಷ್ಟು ನೀವು ಅಮಾಯಕರೆಂದು ನಾನು ಭಾವಿಸಿಲ್ಲ. ಇರಲಿ, ಆಧ್ಯಾತ್ಮದ ಬಗ್ಗೆ ಅವರಿವರು ಏನು ಹೇಳುವುದಕ್ಕೂ ನೀವು ತಿಳಿದುಕೊಳ್ಳುವುದಕ್ಕೂ ಏನು ಸಂಬಂಧ? ಬೇರೆಯವರು ಹೇಳಿ ತಿಳಿಯುವಂತಿದ್ದರೆ ನಿಮಗಾಗಲೇ ತಿಳಿದಿರುತ್ತಿತ್ತಲ್ಲವೇ? ವಾದದಲ್ಲಿ ಸೋತಾಗ ಹೀಗೆಲ್ಲ ಹೇಳುವುದೇ? ನನಗೆ ತಿಳಿಯುತ್ತಿಲ್ಲ.
ಉ: ಮಾನವನ ನಿಜ ವಿಕಾಸ ಎತ್ತ ಸಾಗಿದೆ?? - ಡಾ| ಜ್ಞಾನ ದೇವರ ಪ್ರಶ್ನೆ
ಇಷ್ಟು ಡಿಫೆನ್ಸೀವ್ ಆಗಬೇಡಿ. ವಾದದಲ್ಲಿ ಗೆದ್ದಿರೆಂಬ ಜಯ ಪತ್ರ ಬೇಕೇ? ಇ-ಮೇಲ್ ಮಾಡುವೆ ಪ್ರಿಂಟು ಮಾಡಿಸಿಕೊಳ್ಳಿ. :)
>>>ವಿಕಾಸವಾದ ದ ಬಗ್ಗೆ ಮಾತಾಡುವವರು ಒಂಭತ್ತನೆಯ ಕ್ಲಾಸಿನಷ್ಟು ವಿಕಾಸವಾದ ಓದಿರಬೇಕೆಂದವರು ಆಧ್ಯಾತ್ಮಿಕತೆಯ ಬಗ್ಗೆ ಮಾತಾಡುವಾಗ ಅದನ್ನು ಮರೆತುಬಿಡುತ್ತಾರೆ.
ಇದನ್ನು ನೀವೇ ಅಲ್ಲವೇ ಹೇಳಿದ್ದು? ಈಗಲೂ ಹೇಳುವೆ ವಿಕಾಸವಾದದ ಚರ್ಚೆಗೆ ಅಷ್ಟೇ ನಾನು ಸೀಮಿತವಾಗಿ ಇಲ್ಲಿ ಪ್ರತಿಕ್ರಿಯಿಸುವೆ. ದಯವಿಟ್ಟು ಒಂಭತ್ತನೆಯ ತರಗತಿಯ ಜೀವಶಾಸ್ತ್ರದ ಪಠ್ಯವನ್ನಾದರೂ ಓದಿ ತಯಾರಾಗಿ ಬನ್ನಿ ಚರ್ಚಿಸೋಣ.
ನಿಮ್ಮದೇ ವ್ಯಾಖ್ಯಾನದ ಪ್ರಕಾರ ಚರ್ಚಿಸಲಾಗದ, ಇನ್ನೊಬ್ಬರು ತಿಳಿಸಲಾಗದ ಅಧ್ಯಾತ್ಮದ ಬಗ್ಗೆಯೇಕೆ ಸಮಯ ವ್ಯರ್ಥವಾಗಿ ಕಳೆಯುವುದು?
ಉ: ಮಾನವನ ನಿಜ ವಿಕಾಸ ಎತ್ತ ಸಾಗಿದೆ?? - ಡಾ| ಜ್ಞಾನ ದೇವರ ಪ್ರಶ್ನೆ
ಜನರೇಶನ್ ಗ್ಯಾಪ್ ಇದ್ದಿದ್ದೇ!
ನನ್ನ ಅಪ್ಪ ಜೀನ್ಸ ಹಾಕಿದ್ದಕ್ಕೆ ನನಗೆ ಬೈಯುತ್ತಾರೆ, ನಮ್ಮ ಅಪ್ಪ ಪ್ಯಾಂಟ್ ಹಾಕಿಕೊಂಡಾಗ ಅಜ್ಜ ಬೈದಿರಬಹುದು, ಅಜ್ಜ ಕೋಟ್ ಹಾಕಿಕೊಂಡಾಗ ಮುತ್ತಜ್ಜ ಬೈದಿರಬಹುದು, ಪಡಗದ ಬದಲು ಟೋಪಿ ಧರಿಸಿದಾರ ಮತ್ತಜ್ಜನ ಅಪ್ಪ ಮುತ್ತಜ್ಜನಿಗೆ ಬೈದಿರಬಹುದು.
ಪ್ರತೀ ಬಾರಿಯೂ ಹಿರಿಯರಿಗೆ ತಮ್ಮ ಮುಂದಿನ ಜನರೇಶನ್ನು ನೈತಿಕ ಅದಃಪತನದತ್ತ ಹೊಗುತ್ತಿದೆ ಎನ್ನಿಸಬಹುದು.
ಒಂದು ಗಮನಿಸಬೆಕು ನಾವು. ಐರೊಪ್ಯ ದೇಶಗಳಲ್ಲಿ ನಮಗಿಂತ ಪ್ರಾಮಾಣಿಕರಿದ್ದಾರೆ. ಹೊದ ಶತಮಾನಕ್ಕಿಂತ ಅಲ್ಲಿ ಪ್ರಾಮಾಣಿಕತೆಯ ಪ್ರಮಾಣ ಹೆಚ್ಚಿದೆ. ಯುದ್ಧದ ಪ್ರಮಾಣ ತಗ್ಗಿದೆ. ಈಗ ಮಾನವ ಹಕ್ಕು ಆಯೋಗಗಳಿವೆ. ಹಿಂದೊಮ್ಮೆ ನಡೆಯುತ್ತಿದ್ದ ಮಾರಣಹೊಮಗಳ ಲೆಕ್ಕ ಇಟ್ಟವರಾರು? ಈಗ ಜನರ ಜೀವಕ್ಕೆ ಬೆಲೆಯಿದೆ. ಕೇಸು ದರ್ಜಾಗುತ್ತದೆ. ಹಿಂದೆ ಯಾವಾಗ ಕೇಸು ದರ್ಜಾಗುತ್ತಿತು?
ಮಹಾಭಾರತದ ಯುದ್ಧದ ನಂತರ ಪಾಪ ತೊಳೆದುಕೊಳ್ಳಲು ಧರ್ಮರಾಯ ಅಶ್ವಮೇಧ ಯಾಗ ಮಾಡುತ್ತಾನೆ. ಮೊದಲು ನಡೆಸಿದ ಮಾರಣಹೋಮದ ಪ್ರಾಯಶ್ಚಿತ್ತವಾಗಿ ಮತ್ತೊಂದಿಷ್ಟು ಮಾರಣಹೋಮ! ಇದು ನೈತಿಕತೆ ಅಂತ ನನಗನ್ನಿಸುವುದಿಲ್ಲ.
ಅನೈತಿಕತೆ ಮೊದಲೂ ಇತ್ತು ಈಗಲೂ ಇದೆ. ರೂಪ ಬೇರೆಬೇರೆಯಾಗಿದೆ ಅಷ್ಟೇ! ಹಿಂದೆ ಪೌರೋಹಿತ್ಯ, ಅಸ್ಪೃಷ್ಯತೆ, ವಿಧವೆಯರ ಶೋಷಣೆ ಇತ್ಯಾದಿ ಇತ್ತು ಈಗ ಬ್ರಷ್ಟಾಚಾರ, ವಂಚನೆ ಇತ್ಯಾದಿಗಳಿವೆ ಅಷ್ಟೇ!
ಉ: ಮಾನವನ ನಿಜ ವಿಕಾಸ ಎತ್ತ ಸಾಗಿದೆ?? - ಡಾ| ಜ್ಞಾನ ದೇವರ ಪ್ರಶ್ನೆ
<< ಮೊದಲು ನಡೆಸಿದ ಮಾರಣಹೋಮದ ಪ್ರಾಯಶ್ಚಿತ್ತವಾಗಿ ಮತ್ತೊಂದಿಷ್ಟು ಮಾರಣಹೋಮ! >>
ಅಶ್ವಮೇಧ ಯಾಗ ಅಂದರೆ ಏನು ಎಂದು ಅಂದಿನ ಸಂದರ್ಭದಲ್ಲಿ ತಿಳಿದುಕೊಳ್ಳಿ. ಮೊದಲನೆಯದಾಗಿ ಇವುಗಳನ್ನು ಕಲಿಗಾಲದಲ್ಲಿ ಮಾಡಬಾರದೆಂದು ಹೇಳಿದೆ. ಯಾಕೆಂದರೆ ತ್ರೇತಾಯುಗ ಇದ್ದಂತೆ ಕಲಿಯುಗ ಇರುವುದಿಲ್ಲ. ಈ ಅಶ್ವಮೇಧ ಯಾಗದಲ್ಲಿ ರಾಜರೂ ರಿಶಿಗಳೂ ಸೇರಿ ಅಷ್ವಗಳನ್ನು ಬಲಿಕೊಟ್ಟು ಅವರ ಆತ್ಮಗಳನ್ನು ಉನ್ನತಿಗೇರಿಸುತ್ತಿದ್ದರು. ಅವರ ಮುಂದೆ ಗಂಧರ್ವರಾಗುತ್ತಾರೆಂದು ಲೆಕ್ಕ. ಹೀಗೆ ಮಾಡುವುದರಿಂದ ಅವುಗಳಿಗೆ ಪ್ರಾಣಿ ಜನ್ಮದಿಂದ ಮುಕ್ತಿ ದೊರಕಿ ಉನ್ನತ ಜನ್ಮ ದೊರಕುತ್ತದೆ! ಇದಕ್ಕಾಗಿ ರಾಜರು, ಬ್ರಾಹ್ಮಣರು ತಮ್ಮ ತಪ:ಶಕ್ತಿ ವವ್ಯಯಿಸಬೇಕು. ಇದೂ ಒಂದು ರೀತಿಯ ತ್ಯಾಗ! (ತಪ ಶಕ್ತಿಯ ದಾನ/ತ್ಯಾಗ). ಇವುಗಳನ್ನು ಇಂದಿನ ಭೌತಿಕ ಪ್ರಪಂಚಕ್ಕೆ ಆದೇಶಿಸುವುದರಲ್ಲಿ ಅರ್ಥವಿಲ್ಲ. ರಾಮ ಒಂದೇ ಬಾಣದಲ್ಲಿ 7 ತಾಳೆ ಮರಗಳನ್ನು ಉರುಳಿಸಿದ ಎಂದರೆ ನಂಬುತ್ತೇವೆಯೇ ನಾವು? ಹಾಗಿದ್ದಲ್ಲಿ ಅಶ್ವಮೇಧ ಯಾಗ ಮಾಡಿ ಅದರ ಮಾಂಸ ತಿಂದರು ಅಥವಾ ಪ್ರಾಣಿ ಹತ್ಯೆ ಮಾಡಿದರು ಎಂದರೆ ಅದನ್ನು ಅಕ್ಷರಶಹ ಏಕೆ ಅರ್ಥೈಸಿಕೊಳ್ಳಬೇಕು?
ಉ: ಮಾನವನ ನಿಜ ವಿಕಾಸ ಎತ್ತ ಸಾಗಿದೆ?? - ಡಾ| ಜ್ಞಾನ ದೇವರ ಪ್ರಶ್ನೆ
ಒಂದು ಸಂಗತಿ ಅರಿವಾಗುತ್ತಿಲ್ಲ.
ಅಶ್ವಮೇಧ ಎಂದರೆ ಬರಿಯ ಪ್ರಾಣಿಗಳನ್ನು ಬಲಿಕೊಟ್ಟು ತಿನ್ನುವುದಲ್ಲ. ಅದರ ನಂತರ ಕುದುರೆಯನ್ನು ಹಿಂಬಾಲಿಸಿ ಅದು ಎಲ್ಲೆಲ್ಲಿ ಹೋಗುತ್ತಿತ್ತೋ ಅಲ್ಲಿ ಯುದ್ಧಗಳಾಗುತ್ತಿದ್ದವು. ಅಪಾರ ಸಾವು ನೋವುಗಳಾಗುತ್ತಿದ್ದವು. ಯಾಗದ ಕಾಳಗದಲ್ಲಿ ಸತ್ತವರೆಲ್ಲಾ ಸಗ್ಗಕ್ಕೆ ಹೋಗುತ್ತಿದ್ದರೆ? ಮುಕ್ತಿ ಪಡೆಯುತ್ತಿದ್ದರೇ? ಇವರನ್ನೆಲ್ಲ ಸ್ವರ್ಗಕ್ಕೆ ಕಳಿಸಲು ಕ್ಷತ್ರಿಯರಿಗೆ ಯಾರು ಅಧಿಕಾರ ಕೊಟ್ಟರು?
ಜೈಮಿನಿ ಭಾರತದಲ್ಲಿ ಸೇನೆ ಮುನ್ನಡೆದ ಬಗ್ಗೆ ಸೇನೆಯು ಇನ್ನೊಂದು ಸೇನೆಯನ್ನು ಕೊಚ್ಚಿ ಕತ್ತರಿಸಿದ ಬಗೆ, ಅರ್ಜುನನು ರಾಜರನ್ನು ಕೊಂದ ಬಗ್ಗೆ ಎಲ್ಲವನ್ನೂ ವಿವರಿಸಲಾಗಿದೆ. ಹೀಗಾ ಪಾಪವನ್ನು ಕಳೆದುಕೊಳ್ಳುವುದು? ಇದರಲ್ಲಿ ತ್ಯಾಗ ಏನು ಬಂತು? ಇಷ್ಟು ಪಾತಕಗಳನ್ನು ಮಾಡಿ ಎಷ್ಟು ತಪಶ್ಯಕ್ತಿ ತ್ಯಾಗ ಮಾಡಿದರೇನು?
ಅಂದ ಹಾಗೆ ರಾಮ ಏಳು ತಾಳೆಯ ಮರಗಳನ್ನು ಉರುಳಿಸಿದ, ಹನುಮಂತ ಸಮುದ್ರವನ್ನು ಹಾರಿದ ಎಂಬುದನ್ನು ನಾನು ನಂಬುತ್ತೇನೆ!