ಒ೦ದೇ ಜನ್ಮದಿ ಬಹು ಜನ್ಮ೦ಗಳ
ಚೆ೦ದವಗಾಣಿಸುವಮಳ ಕಲೆ
ಮ೦ದಿಗೆ ದೇವರ ವರವಲೆ ಅದುವೇ
ಮು೦ದಿನ ಬಿಡುಹುಕು ಹಾನಿಯಲೆ.

— ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಜಾತಿಯು ಧರ್ಮಾಧಾರಿತವೇ, ಸಾಮಾಜಿಕವೇ.

ಇಂದಿನ (೪ನೇ , ಡಿಸಂಬರ್ ೨೦೦೬) ಪ್ರಜಾವಾಣಿ ಪತ್ರಿಕೆಯಲ್ಲಿ ನಾವೆಲ್ಲರೂ ಗವನದಿಂದ ಚರ್ಚಿಸಬೇಕಾದ ಒಂದು ಮಾತು ಬಂದಿದೆ.

ಪ್ರಜಾವಾಣಿಯ ಸುದ್ಧಿಯನ್ನು, ಬರಹದಲ್ಲಿ ಓದಲು ಇಲ್ಲಿ ತಾಗಿಕೊಳ್ಳಿ. ಇಲ್ಲವೇ, ಸುಲಭವಾಗಿ ಇ-ಪೇಪರ್ ಆಗಿ ಸುದ್ಧಿಯನ್ನು ಓದಬೇಕಾದರೆ ಈ ಚಿತ್ರವನ್ನು ನೋಡಿ.

ದಲಿತ ಕ್ರೈಸ್ತರಿಗೂ ಅಸ್ಪೃಶ್ಯತೆ ಹಣೆಪಟ್ಟಿ
ನಾವು ಸಮಾನತೆಯ ಹರಿಕಾರರು ಎಂದು ಚರ್ಚಗಳಲ್ಲಿನ ಮಂದಿ ಹೇಳುವುದಕ್ಕೂ ವಾಸ್ತವಕ್ಕೂ ಅಜಗಜ ಅಂತರವಿದೆ. ಸಮಾನತೆ ಸಿಕ್ಕುವ ಭರವಸೆಯಲ್ಲಿ ಕ್ರೈಸ್ತ ಧರ್ಮವನ್ನು ಅಪ್ಪಿಕೊಂಡ ಹಿಂದೂ ದಲಿತರಿಗೆ ಆಗುತ್ತಿರುವ ಅನುಭವಗಳೇ ಇದಕ್ಕೆ ಸಾಕ್ಷಿಯಾಗಿವೆ.
-----------------------------
ಕೃಪೆ. ಇಂದಿನ ಪ್ರಜಾವಾಣಿಯ ಒಂದು ಸುದ್ಧಿ,ಪುಟ೭.

ನಾನು ಕೆಲವು ತಿಂಗಳ ಹಿಂದೆ, ಇದೇ ಧಾಟಿಯಲ್ಲಿ ವಿಜಯ ಕರ್ನಾಟಕದಲ್ಲೂ ಒಂದು ಲೇಖನ ಓದಿದ್ದೆ. ಅಲ್ಲಿ "ದಲಿತ ಕ್ರೈಸ್ತರಿಗೂ ಮೀಸಲಾತಿ"ಯ ವಿಚಾರವಾಗಿ ಒಂದು ಸುದ್ಧಿ ಪ್ರಕಟವಾಗಿತ್ತು.

ಈ ಚರ್ಚಾ ಕೊಂಡಿಯ ವಿಷಯ, ಕ್ರೈಸ್ತರ ಮತಾಂತರ ಅಥವಾ ಹಿಂದು, ಇಸ್ಲಾಂ ಮುಂತಾಗಿ ಧರ್ಮದ ಕುರಿತಾದದ್ದಲ್ಲ. ಬದಲಾಗಿ ನಮ್ಮ ಸಮಾಜದ ಜಾತಿ ವ್ಯವಸ್ಥೆಯ ಕುರಿತಾದದ್ದು.

ಭಾರತದ ಜಾತಿವ್ಯವಸ್ಥೆಯು ಸಾಮಾಜಿಕ ವ್ಯವಸ್ಥೆಯಾಗಿ ಬೇರೂರಿ ನಮ್ಮನ್ನು ಒಂದು ಕತ್ತಿಯ ಅಲಗಿಗೆ ಓಯ್ದಿದೆ ಎಂದರೆ ತಪ್ಪೇನು ಆಗಲಾರದು. ಹಿಂದು ಧರ್ಮದಲ್ಲಿ ನಾಲ್ಕು ವರ್ಣಗಳ ವಿವರಣೆಯಿದೆಯಾದರೂ (ಪುರುಷಸೂಕ್ತದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ, ಈ ನಾಲ್ಕು ವರ್ಣಗಳ ವಿವರಣೆಯಿದೆ) ಭಾರತದಲ್ಲಿ ಇಂದು ಕಾಣಸಿಗುವ ಜಾತಿವ್ಯವಸ್ಥೆಯು (ಮಾದಿಗೆ, ಹೊಲೆಯ, ದೊಂಬರ, ಲಂಬಾಣಿ..ಮುಂತಾದವು) ಖಂಡಿತವಾಗಿ ಧರ್ಮಾಧಾರಿತವಾಗಿಲ್ಲ.

ನನ್ನ ಅನುಭವದಲ್ಲಿ ಹೇಳಬೇಕಾದರೆ, ನಾನು ಒಮ್ಮೆ ಶಾಂತಿನಗರದ ಬಳಿಯಿದ್ದ ನಮ್ಮ ಕಛೇರಿಗೆ ಆಟೋದಲ್ಲಿ ಹೋಗಬೇಕಿತ್ತು.

ಒಬ್ಬ ಆಟೋದವನನ್ನು ಕರೆದೆ, ಆತನು ತನ್ನ ಹೆಸರು, ವಿಳಾಸ ಮುಂತಾದವುಗಳನ್ನು ತಿಳಿಸುವ ಬೋರ್ಡ್ ಹಾಕಿರಲಿಲ್ಲ. ಅವನಿಗೆ ಈ ವಿಚಾರವನ್ನು ಹೇಳಿ, ನಾನು ಆ ಆಟೋವನ್ನು ಹತ್ತಲಿಲ್ಲ. ಕಿಡಿಕಿಡಿಯಾಗಿ ಅವನು ಮುಂದೆ ನಡೆದ.
(ನಾವು ಸುಮ್ಮನೆ ಸರಕಾರವನ್ನು ಎಲ್ಲದಕ್ಕೂ ಬಯ್ಯುತ್ತೇವೆ. ಆದರೆ ನಿಜವಾಗಿ ನಾವು ಆಳ್ವಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆಯೇ ಯೋಚಿಸುವುದಿಲ್ಲ. ಟ್ಹಾಕ್ಸ್ ಕಟ್ಟಿದ ಮಾತ್ರಕ್ಕೆ ನಮ್ಮ ದೇಶಸೇವೆ ಆಗುವುದಿಲ್ಲ ಎಂಬ ಮಾತನ್ನು ನಾನು ಒಪ್ಪುತ್ತೇನೆ. ಹಾಗೆಂದ ಮಾತ್ರಕ್ಕೆ ಸರಕಾರವು ಮಾಡುವ ಎಲ್ಲವೂ ಸರಿಯಾದದ್ದು ಎಂಬ ಮೆದ್ದು ಇಲ್ಲ. ಆದರೆ ಸರಕಾರ ಕೆಟ್ಟದ್ದು ಎನ್ನುವ ಹುಂಬತನವಿಲ್ಲ, ಅಷ್ಟೇ).

ಬೇರೆ ಆಟೋದವನನ್ನು ಕರೆದೆ, ಹತ್ತುವಾಗ ಈತನ ಹೆಸರು ನೋಡಿದೆ. "----- JALAGAR" (ಮೊದಲ ಹೆಸರು ಮರೆತುಹೋಗಿದೆ) ಎಂದು ಬರೆದಿತ್ತು.

ಹೋಗುತ್ತಿರವಾಗ ದಾರಿಯಲ್ಲಿ ಅದು ಇದು ಮಾತನಾಡುತ್ತಾ ಕೇಳಿದೆ,

"ಏನಿದು J-A-L-A-G-A-R (ಜಲಗರ್)", ಎಂದು.
"ಅದು ನಮ್ಮ surname ಸಾರ್", ಬಂತು ಉತ್ತರ.
"ನಿಮ್ಮ ಮೇಷ್ಟ್ರ ಹೆಸರಾ",
"ಅಲ್ಲಾ ಸಾಆಆಆಆರ್(ನಗುತ್ತಾ), ಅದು ನಮ್ಮ surname'ಉ, ನಮ್ಮ ಜಾತೀದು" ಎಂದ.

ಓಹ್. ನಿಮ್ಮ ಜಾತಿಯ ಹೆಸರು ಜಾಲ್ಗಾರ್ ಎಂತಲೇ ಎಂದು ಕೇಳಿದೆ. ಇಲ್ಲ, ಇಲ್ಲ, ಜಾಲ್ಗಾರ್ ಎಂದರೆ ಮುಸ್ಲಿಮರು, ನಾವು hindu's ಅದಕ್ಕೆ ನಮ್ದು, ಜಲ್ಗಾರ್ ಎಂದ. ಹೌದಾ ! ಎಂದು ಮತ್ತೊಮ್ಮೆ ಕೇಳಿದೆ. ಹೌದು ಎಂಬ ಉತ್ತರಬಂದ ಮೇಲೆ ಮತ್ತಷ್ಟು ಆಶ್ಚರ್ಯವಾಯಿತು. ಜಾಲ್ ಗಾರ್ ಎಂದರೆ ಮುಸ್ಲಿಮರು, ಜಲ್ಗಾರ್ ಎಂದರೆ ಹಿಂದುಗಳು.

"ಮತ್ತೆ ಅವ್ರೇನು ಮಾಡ್ತಾರೆ" ಎಂದು ಕೇಳಿದೆ.
"ನಮ್ಮ friends'ಎ ಸಾರ್ ಅವ್ರೂ ಎಲ್ಲಾ. ಕೆಲವ್ರು ಆಟೋ ಓಡುಸ್ತಾರೆ, ಕೆಲವ್ರು ಮೆಕ್ಹಾನಿಕ್ ಆಗಿದ್ದಾರೆ" ಎಂದ.

ಜಾಲ್ ಗಾರ್ ಎಂದರೆ ಮುಸ್ಲಿಮರು, ಜಲ್ಗಾರ್ ಎಂದರೆ ಹಿಂದುಗಳು - ಆಶ್ಚರ್ಯವೆನಿಸುವುದಿಲ್ಲವೇ. ಜಾತಿ ಒಂದೇ, ಆದರೆ ಧರ್ಮ ಬೇರೆ.

ಇಂತಹ ಎಷ್ಟೋ ವಿಷಯಗಳನ್ನು ಗಣನೆಗೆ ತೆಗೆದುಕೊಂಡರೆ, ಜಾತಿ ವ್ಯವಸ್ಥೆಯು ಧರ್ಮಧಾರಿತವಾಗಿ ಖಂಡಿತ ಇಲ್ಲ, ಅದೊಂದು ಸಾಮಾಜಿಕ ವ್ಯವಸ್ಥೆಯಾಗಿ ನಮ್ಮ ಕಣ್ಣ ಮುಂದೆ ಉಳಿದಿದೆ ಎನಿಸದೇ ಇರದು.

ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಬೇಕಾದಾಗ, ನಾವು ಇಂದಿನ ಭಾರತೀಯ ಸಾಮಾಜಿಕ ವ್ಯವಸ್ಥೆಯನ್ನು ಮುಂದಿಟ್ಟುಕೊಂಡು ಹೋರಾಡಬೇಕೇ ಹೊರತು ಅದನ್ನು ಧರ್ಮಾಧಾರಿತವಾಗಿ ನೋಡುವುದು ಸರಿಯೆನಿಸುವುದಿಲ್ಲ.

ಈಗಿನ ನಮ್ಮ ಸಮಾಜದಲ್ಲಿ ಮುಖ್ಯವಾಗಿ ಇರುವುದು, ಜಾತಿ ವ್ಯವಸ್ಥೆಯಲ್ಲ,

Division-Of-Labour. ಹೆಚ್ಚು ಕಡಿಮೆ ಈ Division-Of-Labour ಎಲ್ಲ ದೇಶಗಳಲ್ಲೂ ಇದ್ದದ್ದೇ. ಕೆಲವೆಡೆ(ಕೆಲವು ಸಮಾಜ ಎಂದು ತಿಳಿಯಿರಿ, ಕೆಲವು ಧರ್ಮವಲ್ಲ) ಇದನ್ನು ಅರಿತು, Division-Of-Labourಅನ್ನು Feudalism ಹಾಗು
Feudal Society ಎಂದು ಕರೆದು ತಮ್ಮಲ್ಲಿದ್ದ ಅಸಮಾನತೆಯನ್ನು ದೂರಮಾಡಿಕೊಂಡರು. ಆದರೆ ನಾವು ಈ Division-Of-Labourಗೆ ಜಾತಿ ವ್ಯವಸ್ಥೆ ಎಂದು ಹೆಸರಿಟ್ಟು ಅದಕ್ಕೆ ಹಿಂದು ಧರ್ಮದ ಲೇಪ ಹಚ್ಚಿ, ಅದರಿಂದ ಹೊರಬರಲಾಗದೆ ಒದ್ದಾಡುತ್ತಿದ್ದೇವೆ.

ನಮ್ಮ ಸಮಾಜದ ವೈಶಿಷ್ಟ್ಯವೆಂದರೆ(ಅಥವಾ ದೌರ್ಭಾಗ್ಯವೆಂದರೆ) ಒಬ್ಬರು ಮಾಡುವ ಕೆಲಸದ ಮೇಲೆ ಮತ್ತೊಬ್ಬರಿಗೆ ತಿರಸ್ಕಾರ, ಜಿಗುಪ್ಸೆ, ಉಡಾಫೆ ಮತ್ತು jealousyಯನ್ನು ಹುಟ್ಟು ಹಾಕುತ್ತದೆ. ಇದೇ Division of Labour ಮನಸ್ಥಿತಿ, ನಮ್ಮನ್ನು ಜಾತಿಯೆಡೆಗೆ ಕರೆದೊಯ್ಯುತ್ತದೆ(ತ್ತಿದೆ, ತ್ತಿತ್ತು. - ಕರೆದೊಯ್ಯಲಿದೆ ಬರೆಯುವುದು ಬೇಡ ಎಂದು ಆಶಿಸೋಣ).

ಹಿಂದು ಧರ್ಮವನ್ನು ಮುಂದಿಟ್ಟುಕೊಂಡು ಜಾತಿಯ ಬಗ್ಗೆ ಭಾಷಣ ಬಿಗಿದರೆ, ಅದೊಂದು ಗಟ್ಟಿಯಾದ ತಳಪಾಯವಿಲ್ಲದ ಕಟ್ಟಡದಂತಾಗುತ್ತದೆಯೇ ಎಂಬುದು ನನ್ನ ಸಂಶಯ.

ಜಾತಿ ಪದ್ಧತಿ ಹಿಂದು ಧರ್ಮದ ಹೊರತಾಗಿಯೂ ಭಾರತದಲ್ಲಿರುವ Division Of Labour. ಅದೊಂದು ಕೆಲಸಗಾರರಲ್ಲಿರುವ ಅಸಮಾನತೆ, ತಿರಸ್ಕಾರ.

ಮೇಲಿನ ಪ್ರಜಾವಾಣಿ ಸುದ್ಧಿಯ ಜೊತೆಗೆ ನಿಮ್ಮ ಸುತ್ತಲೇ ನಡೆಯುವ ಕೆಲವು ಸೂಕ್ಷ್ಮ ಸನ್ನಿವೇಶಗಳನ್ನು ಗಮನಿಸಿ ನೋಡಿ (ನಾನು ಗಮನಿಸಿದ ಆಟೋ ಚಾಲಕನಂತೆ). ಚಪ್ಪಲಿ ಹೊಲಿಯುವವರನ್ನು, ಹೂ ಕಟ್ಟುವವರನ್ನು, ಟೈರಿಗೆ ಗಾಳಿ ತುಂಬುವವನನ್ನು, ಹೀಗೆ ಎಷ್ಟೋ ಜನರನ್ನು ದೇವಸ್ಥಾನಗಳಿಗೆ ಬರಗೊಡದಿರುವುದು, ಇವುಗಳು ಹಿಂದು ಧರ್ಮದಲ್ಲಿ ಮಾತ್ರವೇ ಅಲ್ಲ ಬೇರೆ ಬೇರೆ ರೂಪದಲ್ಲಿ ಭಾರತದ ಎಲ್ಲ ಧರ್ಮದಲ್ಲೂ ಇದೆ. ಅದು ನಮ್ಮ (ಹಿಂದು ಧರ್ಮದ ಹೊರತಾಗಿರುವ ಸಮಾಜದ) ಮನಸ್ಥಿತಿಯಾಗಿ ಬೆಳೆದಿದೆ. ಮೂಲ ಕಾರಣ, ಬೇರೆಯವರ ಕೆಲಸದ ಮೇಲೆ ನಮಗಿರುವ ತಿರಸ್ಕಾರ ಮತ್ತು ಉಡಾಫೆ. ಸಾಬರ ಯುವಕನೊಬ್ಬನು ಟೈರಿಗೆ ಪಂಚರ್ ಹಾಕುವುದನ್ನು ಕೀಳಾಗಿ ಕಾಣುವವನು, ತಾನು ಜಾತಿ ವ್ಯವಸ್ಥೆಯ ವಿರುದ್ಧ ಎಂದು ಎಷ್ಟು ಕೂಗಿದರೂ ಅದು ಬಂಡ್ವಾಳಿಲ್ಲದ ಬಡಾಯಿಯಂತೆ.

Division-Of-Labour ಅನ್ನು ತೊಡೆದು ಹಾಕದ ಹೊರತು ಜಾತಿವ್ಯವಸ್ಥೆಯನ್ನು ಹೊರಗಿಡಲು ಸಾಧ್ಯವೇ ಇಲ್ಲ. ಅದಕ್ಕಾಗಿ, ಹಿಂದು ಧರ್ಮವನ್ನು ದೂಷಿಸಿ ಪ್ರಯೋಜನವಿಲ್ಲ. ಎಂದು ನಾವುಗಳು ೧. ಆಟೋ ಓಡಿಸುವವರು, ೨. ಸೈಕಲ್ ಗೆ ಗಾಳಿ ತುಂಬುವವನು, ೩. ಕುರಿ, ಕೋಳಿ, ಹಂದಿಗಳನ್ನು ಸಾಕಿ ಅವುಗಳನ್ನು ಮಾರಿ ಬದುಕುವವರು ಮುಂತಾದವರನ್ನು ನಮ್ಮಂತೆಯೇ ಕೆಲಸಗಾರರು ಎಂದು ಉಂಕಿಸುತ್ತೇವೆಯೋ, ಅಂದು ಸಮಾನತೆ ಮೂಡುತ್ತದೆಯೇ ಹೊರತು ಯಾವುದೇ ಒಂದು ಧರ್ಮದ ಆಧಾರದಲ್ಲಿ ಸಮಸ್ಯೆಯನ್ನು ಬಗೆಹರಿಸಲು ಜತುನಗೈದರೆ ದಿಟವಾಗಿಯೂ ಜಾತಿ ಪದ್ಧತಿಯನ್ನು ಹೊರಗಿಡಲಾಗದು.

ನಿಮ್ಮಲ್ಲಿ ಅಸಮಾನತೆಯಿದೆ, ಸಮಾನತೆಗಾಗಿ ನಮ್ಮೆಡೆಗೆ ಬನ್ನಿ ಎಂದು ಕರೆ ನೀಡಿದ ಒಂದು ಧರ್ಮ, ಗಟ್ಟಿಯಾದ ರಾಜಾಶ್ರಯ ಇದ್ದಾಗಿಯೂ, ತಾನು ಹುಟ್ಟಿದ ನೆಲದಿಂದಲೇ ದೂರಸರಿಯಿತು. ಬೌದ್ಧ ಧರ್ಮ ಭಾರತದಿಂದ ದೂರವಾಗುವುದಕ್ಕೆ ಅನೇಕ ಐತಿಹಾಸಿಕ, ಧಾರ್ಮಿಕ ಕಾರಣಗಳಿವೆಯಾದರೂ, ನಾವು ಇಲ್ಲಿ ಸಾಮಾಜಿಕ ಕಾರಣವನ್ನೂ ಗಮನಿಸಬೇಕು. ಒಬ್ಬ ಹಿಂದು ಬಡಗಿ, ಬೌದ್ಧ ಧರ್ಮವನ್ನು ಅಪ್ಪಿಕೊಂಡ ಮೇಲೂ ಆತ ಬಡಗಿಯಾಗಿಯೇ ಮುಂದುವರಿಯುತ್ತಿದ್ದ. ಬೌದ್ಧನಾದ ಮೇಲೆಯೂ ಕೂಡ ಸಾಮಾಜಿಕವಾಗಿ ಆತನ ಗೌರವವು ಹಿಂದೆ ಎಷ್ಟಿತ್ತೋ ಅಷ್ಟೇ ಇರುತ್ತಿತ್ತು.

ನಾವು ದೂರಮಾಡಬೇಕಿರುವುದು, ಜಾತಿ ವ್ಯವಸ್ಥೆಯನ್ನಲ್ಲ, ಜಾತಿ ಜಾತಿ ಎಂದು ಮುಸುಕು ಹಾಕಿಕೊಂಡು ಮಲಗಿರುವ(ಅಥವಾ ಮಲಗಿಸಿರುವ) Division-Of-Labour ಅನ್ನು. ಈ Division-Of-Labourಅನ್ನು ಕಿತ್ತುಹಾಕಿ ನೋಡಿ, ಜಾತಿ ಎಂಬ ವಿಚಾರವೇ ಇರುವುದಿಲ್ಲ. ಅಂತರ್ಜಾತಿ ಎಂಬ ವಿಚಾರವೂ ಬರುವುದಿಲ್ಲ.

ಒಬ್ಬಳು ಮೀನುಗಾರ್ತಿ, ಸೊಪ್ಪು ಮಾರುವವನನ್ನು ಮದುವೆಯಾಗಬೇಕಾದಾಗ ಅಡ್ಡಪಡಿಸಲು ಯಾರೂ ಇರುವುದಿಲ್ಲ. ಆದರೆ ಗಮನಿಸಬೇಕಾದದ್ದು,

೧. ಮೀನುಗಾರ್ತಿಗೆ ಸೊಪ್ಪು ಮಾರುವವನು ಇಷ್ಟವಾಗುತ್ತಾನೆಯೇ, ಆತನ ಕೆಲಸ ಈಕೆಗೆ ಹಿಡಿಸುತ್ತದೆಯೇ.
೨. ಸೊಪ್ಪು ಮಾರುವವನಿಗೆ ಮೀನುಗಾರ್ತಿ ಇಷ್ಟವಾಗುತ್ತಾಳೆಯೇ, ಆಕೆಯ ಕೆಲಸ ಈತನಿಗೆ ಮೆಚ್ಚುಗೆಯಾಗುತ್ತದೆಯೇ.

ಅಂದರೆ, ಈ ರೀತಿಯ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದಾಗ, "ನಾವು ಮುಖ್ಯವಾಗಿ ಕೆಲಸದ ಬಗ್ಗೆ ಮಾತನಾಡುತ್ತಿರುತ್ತೇವೆಯೇ ಹೊರತು ಜಾತಿಯ ಬಗ್ಗೆ ಮಾತನಾಡುತ್ತಿಲ್ಲ" ಎಂಬ ಅರಿವು ಬರುತ್ತದೆ. ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಾವು ಮಾಡುವ ಕೆಲಸಗಳು ಮುಖ್ಯವಾಗುತ್ತವೆಯೇ ಹೊರತು ನಿಜವಾಗಿ ನೋಡಿದರೆ ಜಾತಿಯಲ್ಲ.

ಧಿಕ್ಕಾರವಿರಲಿ ನಮ್ಮನ್ನು ದೂರಮಾಡಿರುವ ಈ Division-Of-Labour ಗೆ, ಅದಕ್ಕೆ ಹೆಗಲು ನೀಡುವ ಪಟ್ಟಭದ್ರ ಹಿತಾಸಕ್ತಿಗಳಿಗೆ.

ಈ ಲೇಖನದಲ್ಲಿ ನಾನು ಚರ್ಚಿಸಬಯಸಿದ್ದು, ಜಾತಿಯ ಕುರಿತಾಗಿ. ಹಾಗಾಗಿ ಅಂತರ್ಧರ್ಮೀಯ ಮದುವೆಗೂ ಇದೇ ಪರಿಹಾರ ಸೂಚಿಸೋಣವೇ ಎಂದು ನೀವು ಕೇಳಿದರೆ, ಜತುನಗೈದು ನೋಡಬಹುದಲ್ಲವೇ ಎಂಬುದೇ ನನ್ನ ಉತ್ತರ.

ಜಾತಿ ವ್ಯವಸ್ಥೆಯು ಧರ್ಮಾಧಾರಿತವೇ, ಅಥವಾ ಸಾಮಾಜಿಕವೇ ಎಂಬುದೇ ನಮ್ಮ ಮುಂದಿರುವ ಪ್ರಶ್ನೆ. ಜಾತಿಯನ್ನು ಹಳಿಯಲು ಹಿಂದು ಧರ್ಮವನ್ನು ಬಳಸುವುದು ಸರಿಯೇ. ನನ್ನ ದೃಷ್ಟಿಯಲ್ಲಿ ಜಾತಿಯು ಸಾಮಾಜಿಕ. ಯಾವುದೇ ಒಂದು ಧರ್ಮ ಇದಕ್ಕೆ ಹೊಣೆಯಲ್ಲ.

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

Re: ಜಾತಿಯು ಧರ್ಮಾಧಾರಿತವೇ, ಸಾಮಾಜಿಕವೇ.

kesari's picture

http://en.wikipedia....

ಈ ಲಿಂಕ್ ಓದಿ.
ಇಸ್ಲಾಮಿಕ್ ರಾಷ್ಟ್ರವಾದ ಯೆಮನ್ ದಲ್ಲಿ ಜಾತಿ ಪದ್ಧತಿ ಇದೆ.
ಜಪಾನ್ ನಲ್ಲಿ ಜಾತಿ ಪದ್ಧತಿ ಇದೆ.
ಆಫ್ರಿಕಾ, ಲ್ಯಾಟಿನ್ ಅಮೆರಿಕ, ಜಗತ್ತಿನ ಬಹುತೇಕ ಭಾಗಗಳಲ್ಲಿದೆ.

ಆದರೆ ಭಾರತದ್ದೇ ಯಾಕೋ ಸ್ವಲ್ಪ ಅತಿರೇಕಕ್ಕೆ ಹೋಗಿದೆ. ಇಷ್ಟು ದೊಡ್ಡ ನಾಗರಿಕತೆ ಹೊಂದಿದ ದೇಶದಲ್ಲಿ ಅಸ್ಪೃಶ್ಯತೆ ಅಂದರೆ ನಾಚಿಕೆಗೇಡು.

http://koenraadelst....
-
ಇಲ್ಲಿ ಕೊನೆ ಪ್ಯಾರಾ ಓದಿ

...but a near-universal phenomenon especially pronounced among Indo-Pacific societies including most non-Aryan populations.