ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

firefox tab, keyboard tabಗಳಿಗೆ ಕನ್ನಡ ಪದಗಳು

December 12, 2006 - 6:05pm — Sunil Jayaprakash

veereshraya ಅವರು ಕಳೆದ ವಾರ ಅನುವಾದದ ಬಗ್ಗೆ ಅಭಿಪ್ರಾಯಗಳು ಎಂಬುದರ ಬಗ್ಗೆ ಬ್ಲಾಗಿದ್ದರು. ಅಲ್ಲಿ ನಾನು firefox, EditPlus, Mozilla, IE ಇಂತಹ ಸಾಫ್ಟವೇರ್ಗಳಲ್ಲಿ ಬರುವ tabಗೆ ಸಮನಾಗಿ, ಕನ್ನಡದಲ್ಲಿ (ಹಾಗು ತುಳುವಿನಲ್ಲೂ ಕೂಡ) ತಿಣಿ, ತುಣುಕು, ಅಥವಾ ಅಂಕಣ ಎಂದು ಕರೆಯಬಹುದು ಎಂದು ಹೇಳಿದ್ದೆ. ಆದರೆ ಅಲ್ಲಿ ಒಂದು ವಿಷಯದ ಕುರಿತು ನಾವು ಚರ್ಚಿಸಲೇ ಇಲ್ಲ. Keyboard tabಗೆ ಕನ್ನಡದಲ್ಲಿ ಏನು ಹೇಳುವುದು ಎಂಬುದಾಗಿ.

Keyboard tabಗೆ ನಿರ್ದಿಷ್ಟಾಂತರ ಎಂದು ಈಗ ಬಳಸುತ್ತಿದ್ದೇವೆ. ಆದರೆ ಇದಕ್ಕಿಂತ ಸರಳವಾದ ಕನ್ನಡ ಪದವಿದ್ದರೆ ಚೆನ್ನ ಎಂದು ನಮಗೆ ಅನಿಸುದೇ ಇರುವುದಿಲ್ಲ. ಈ ಹುಡುಕಾಟದಲ್ಲಿದ್ದಾಗ ನನಗೊಂದು ವಿಚಾರ ಹೊಳೆಯಿತು. ನನ್ನ ವಿಚಾರವನ್ನು ಓದಿ, ಎಲ್ಲರಿಗೂ ಒಪ್ಪಿಗೆಯಾಗುವುದಾದರೆ ಅದನ್ನು ಹಾಗೆ ಕರೆಯಬಹುದು. keyboard tabಗೆ ಸರಳವಾಗಿ ಕನ್ನಡದ್ದೇ ಪದವನ್ನು ಹೇಳಬಹುದು.

ನೋಡಿ ಕನ್ನಡದಲ್ಲಿ ತಿಣಿ ಎಂಬ ಪದವಿದೆ.

ತಿಣಿ ಎಂದರೆ Ka. tiṇi to be united or mixed together, be crowded or closely packed, be full or filled;
----------
Source - Dravidian Etymology - http://dsal.uchicago.edu/dictionaries/burrow/

ಆದರೆ ತಿಣಿ ಎಂಬುದು ನಮಗೆ ದೂರವಾದ(ಗೊತ್ತಿಲ್ಲದ) ಪದವಾಗಿ ಕಾಣುತ್ತದೆ. ಆದರೆ ನೋಡಿ, ಕನ್ನಡದಲ್ಲಿ ಣ ಮತ್ತು ಳ ಅಕ್ಷರಗಳು ಬಳಕೆಯಲ್ಲಿ ಅದಲು ಬದಲಾಗಿವೆ. ನಾವು ಇಂದು ಬಳಸುವ ನಾಣ್ಣುಡಿ ಕವಿರಾಜ ಮಾರ್ಗದಲ್ಲಿ ನಾಳ್ನುಡಿ ಎಂದಿದೆ. ಅಂದರೆ ತಿಣಿ ಎಂಬುದನ್ನು ತಿಳಿ ಎಂದು ಹೇಳಬಹುದೇ ?.

ತಿಣಿಯನ್ನು ತಿಳಿ ಎಂದು ಬಳಸಲು ಮನಸ್ಸು ಒಪ್ಪದಿದ್ದರೆ ಪರವಾಗಿಲ್ಲ. ಕನ್ನಡದಲ್ಲಿ ತಿಳಿ ಎಂಬ ಪದಕ್ಕೆ ಅನೇಕ ಅರ್ಥಗಳಿವೆ. ಸದ್ಯಕ್ಕೆ ನಾವು ನಾಮಪದ ತಿಳಿಯನ್ನು ಗಣನೆಗೆ ತೆಗೆದುಕೊಳ್ಳೋಣ. ಇವುಗಳನ್ನು ನೆನಪಿಗೆ ತಂದುಕೊಳ್ಳಿ.

೧. ತಿಳಿಯಾದ ನೋಟ.
೨. ತಿಳಿಯಾದ ಸಾರು.
೩. ತಿಳಿ ಮೋಡ (ತಿಳಿ ಮುಗಿಲ ತೊಟ್ಟಿಲಲ್ಲಿ....ಅಂತ ಯಾವುದೋ ಕವನ ಓದದ ನೆನಪು, ಸರಿಯಾಗಿ ನೆನಪಿಲ್ಲ)
೪. ತಿಳಿನೀಲಿ ಕಣ್ಣುಗಳು.
೫. ತಿಳಿಯಾದ ಪ್ರಪಂಚ
೬. ತಿಳಿಯಾದ ಮನಸ್ಸು
೭. ತಿಳಿಯಾದ ಹಾಸ್ಯ.

ಇವೆಲ್ಲವುಗಳನ್ನೂ ಗಮನಿಸಿ ನೋಡಿ. ತಿಳಿ ಎಂಬ ನಾಮಪದಕ್ಕೆ ಹಲವು ಅರ್ಥಗಳಿವೆ. ಅಂದರೆ ಅದರ ಅರ್ಥ ಸೀಮಿತವಾಗಿಲ್ಲ.

ಈಗ ನಾವು keyboard tab ಬಳಸುವುದು ಏಕೆ ಎಂಬುದರ ಕುರಿತು ಚರ್ಚಿಸೋಣ, ಅಕ್ಷರಗಳ ನಡುವೆ spaceಗಳು ಮೂಡಲಿ ಎಂದು ತಾನೆ. ಈ spaceಗಳು ಏಕೆ ಬೇಕು ? ಎಂದು ಪ್ರಶ್ನೆಗೆ ಉತ್ತರ ಕಂಡುಕೊಳ್ಳೋಣ. ನಮ್ಮ ಕಡತದಲ್ಲಿರುವ, ಹಾಗೆಯೇ ಸ್ಕ್ರೀನ್ ನಲ್ಲಿ ಕಾಣುವ ಅಕ್ಷರಗಳು ತಿಳಿಯಾಗಿ ಮೂಡಲಿ ಎಂಬ ಕಾರಣಕ್ಕಾಗಿ, ನಾವು tab ಬಳಸುತ್ತೇವೆ, ಅಲ್ಲವೇ. ಅಂದರೆ ಅಕ್ಷರಗಳನ್ನು ತಿಳಿಯಾಗಿ (ಕ್ರಿಯಾಪದ) ಮೂಡಿಸಲು ನಾವು tab ಬಳಸುತ್ತೇವೆ. ಹಾಗಾಗಿ ಈ ತಿಳಿಯಾಗಿಸುವ(ಕ್ರಿಯಾಪದ) ಬಟನ್ನಿಗೆ(ಗುಂಡಿಗೆ) ತಿಳಿ(ನಾಮಪದ) ಎಂದೇಕೆ ನಾವು ಕರೆಯಬಾರದು. ಹಾಗೆ ಮಾಡಿದರೆ ತಿಳಿ ಪದದ ಅರ್ಥವ್ಯಾಪ್ತಿಯೂ ದೊಡ್ಡದಾಗುತ್ತದೆ.

ಕೆಲವು ವೇಳೆ ನನಗೆ ಅನಿಸುತ್ತೆ, ನಾವು ಕನ್ನಡ ಪದಗಳ ಅರ್ಥವನ್ನು ಸೀಮಿತಗೊಳಿಸುವತ್ತ ಹೆಜ್ಜೆ ಹಾಕಿದ್ದೇವೆಯೇ ? ಎಂದು. ಆದರೆ ಸಂಸ್ಕೃತದ ವ್ಯಾಪ್ತಿಯನ್ನು ಮಾತ್ರ ಸೀಮಿತಗೊಳಿಸುವುದಿಲ್ಲ. ಬೇಕಿದ್ದರೆ ಅಂತರ ಪದವನ್ನು ತೆಗೆದುಕೊಳ್ಳಿ. ಅಂತರ್ಜಲಕ್ಕೂ ಸೈ(water table), ಅಂತರ್ಜಾಲಕ್ಕೂ(internet) ಸೈ, ನುಡವೆ ಅಂತರವಿರಲಿ ಎನ್ನುವುದಕ್ಕೂ ಸೈ.

tabಗೆ ನಿರ್ದಿಷ್ಟಾಂತರ ಎಂದೇನೋ ಕರೆಯಬಹುದು, ಆದರೆ ಅದು ತಿಳಿ ಎಂಬುದಕ್ಕಿಂತ ಕಷ್ಟ ಅಲ್ಲವೇ.

ಪರದೆಯ ಮೇಲೆ ಅಕ್ಷರಗಳನ್ನು ತಿಳಿಯಾಗಿ ಮೂಡಿಸಲು ನಾವು ತಿಳಿಯನ್ನು ಬಳಸಬಹುದೇ ? ಎಂಬುದು ನಾನು ನಿಮ್ಮೆಲ್ಲರ ಮುಂದಿಡುವ ಪ್ರಶ್ನೆ. ಉತ್ತರವನ್ನು ಯೋಚಿಸಿ ಹೇಳಿರಿ. tab ಎನ್ನುವುದಕ್ಕೆ ನಿರ್ದಿಷ್ಟಾಂತರದ ಬದಲಾಗಿ ಸರಳವಾಗಿರುವ ತಿಳಿ ಬಳಸಲು ಸಾಧ್ಯವೇ ?

‹ ಬೀರು ( ಎಳ್ಳು ಬೀರು ) ಅಂದರೇನು? ಇವು ಏನು ಹೇಳಿರಿ ( ಕನ್ನಡದ ಒರೆಗಳು ) - ೩ ›
  • ಸಾಹಿತ್ಯ, ಭಾಷೆ
~.~
  • Login or register to post comments
  • 1375 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 13, 2006 - 2:06am — veereshraya

Re: firefox tab, keyboard tabಗಳಿಗೆ ಕನ್ನಡ ಪದಗಳು

veereshraya's picture

ಸುನೀಲವರೆ,

ನಾವು "ಅಂಕಣ" ವನ್ನೆ ಎರೆಡೂ ಉದ್ದೇಶಗಳಿಗೆ ಯಾಕೆ ಬಳಸಬಾರದು?
ಉತ್ತರ ಕರ್ನಾಟಕದ ಆಡುಮಾತಿನಲ್ಲಿ ಮತ್ತೆ Dravidian Etymological Dictionaryಯ ಪ್ರಕಾರ ಮನೆಯಲ್ಲಿ ಕಂಬಗಳ ನಡುವಿನ ಅಂತರ ಎನ್ನುವ ಅರ್ಥದಲ್ಲಿ ಈ ಪದವನ್ನು ಬಳಸುತ್ತೇವೆ. ಇಲ್ಲಿ ನಾವು ಅದನ್ನೆ ಗಣಕದ Editorನ ಒಂದು ಪದದ ಉದ್ದ ಎನ್ನಲು ಬಳಸಬಹುದಲ್ಲವೆ?

ವೀರೇಶ ರಾಯ ಚನ್ನಪ್ಪಗೋಳ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 13, 2006 - 11:35am — shreekant.mishrikoti

Re: kannada word for tab in 'tabbed pages'- Any suggestions?

shreekant.mishrikoti's picture

Kannada word for the tabbed pages ....

Often we have tabbed interface .

I looked up Cambridge dictionary on the net for the word tab.
It says
' a small piece of paper, metal, etc. that is fixed to something larger and is used for giving information, fastening, opening, etc'

it denotes the title of pages so that user can click on the tab , he will go to that page .

Any suggestions for the 'tab' in this context?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 13, 2006 - 11:09am — shreekant.mishrikoti

Re: keyboard tab- solpa/swalpa/solupa/khaali-jaaga

shreekant.mishrikoti's picture

why cant we use

solpa-jaaga/swalpa-jaaga/solupa-jaaga/khaali-jaaga

for tab key?

it will be simple to understand and use . more natural , meaningful compared to tiNi/tiLi/aMkaNa/nirdiShTaamtara .

Isn't it?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 15, 2006 - 9:05am — keshavamurali

Re: keyboard tab- solpa/swalpa/solupa/khaali-jaaga

keshavamurali's picture

ನಮಸ್ಕಾರ,
Tab ಎಂಬುದು tabulation ಪದದ ಸಂಕ್ಷಿಪ್ತ ರೂಪ ಎಂದು ಎಲ್ಲೋ ಓದಿದ ನೆನಪು. ಯಾಕೆಂದರೆ tab ಕೀಲಿಯನ್ನು ಹೆಚ್ಚಾಗಿ ಶಬ್ದಗಳನ್ನು ಸರಿಯಾಗಿ ಹೊಂದಿಸಲು ಬಳಸುತ್ತಿದ್ದರು.
tabulation ಗೆ ಸಮಾನಾರ್ಥಕ ಕನ್ನಡ ಪದ ಹುಡುಕಿದರೆ ಅದನ್ನು ಬಳಸಬಹುದು.

ಧನ್ಯವಾದ,
ಕೇಶವ ಮುರಳಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 15, 2006 - 3:52pm — Sunil Jayaprakash

ಪ್ರಶ್ನೆಗಳಿಗೆ ಉತ್ತರಗಳ: firefox tab, keyboard tabಗಳಿಗೆ ಕನ್ನಡ ಪದಗಳು

Sunil Jayaprakash's picture

ಗೆಳೆಯರೆ,
ಕ್ಷಮಿಸಿ, ಉತ್ತರ ನೀಡಲಾಗಿರಲಿಲ್ಲ. ಎಲ್ಲರ ಪ್ರಶ್ನೆಗಳಿಗ ಉತ್ತರವನ್ನೀಯುವ ಜತುನಗೈದಿದ್ದೇನೆ.

tabulation - arragementಗೆ ಕನ್ನಡ ಪದಗಳನ್ನು ಹುಡುಕುವಾಗ ಸಿಕ್ಕ ಕನ್ನಡದ ಪಲುಕುಗಳು. ಪದಗಳನ್ನು ಒತ್ತಿದರೆ, ನೇರ ಅದರ ಅರ್ಥ ತಿಳಿಸುವ ಪುಟಕ್ಕೆ ಕರೆದೊಯ್ಯುತ್ತದೆ.

1. ಒಯ್ಕ - ಇದು ಅಚ್ಚ ಕನ್ನಡದ ಪದ.
Ka. oykane orderly, properly, exactly, clearly. - ಇದು ಅಷ್ಟಾಗಿ ಬಳಕೆಯಲ್ಲಿಲ್ಲದ ಕಾರಣ, ಇದನ್ನು ಬೇಡವೆನ್ನಬಹುದು..

2. ಸೇರ್ - ಸೇರು -
Ka. sēr (sērd-) to become or be close or near, go to, approach, reach, come, belong to, enter, be included, be connected with, join, side with, assemble, be collected, agree, concur, suit, agree, be agreeable;

3. ನೆರಿಗೆ -
Ka. neṟi, niṟi orderly arrangement, beauty, fineness, elegance; niṟi, niṟu to be properly arranged or prepared, be ready; niṟate, nīṟate properness, beauty, charm, prettiness, elegance; niṟisu to arrange, adjust, prepare; n. arrangement, display; niṟige, niṟuge arrangement, properness; nīṟa a fine, handsome man, beau; fem. nīṟe.

ಇವೆರಡರಲ್ಲಿ, ಸೇರು ಮತ್ತು ನೆ(ನಿ)ರಿಗೆ ಇನ್ನೂ ಬಳಕೆಯಲ್ಲಿವೆ. ಹಾಗೆಯೇ ವೀರೇಶ್ ರಾಯ ಅವರು ಅಂಕಣವನ್ನೇ ಬಳಸೋಣ ಎಂದು ಹೇಳಿದ್ದರು.

ಅಂಕಣದ ಅರ್ಥ ಈ ರೀತಿಯಿದೆ.

Ka. ಅಂಕಣ space either between any two posts or pillars in a wall that supports the roof, or between any two beams. ಎರಡರ ನಡುವಿನ ಜಾಗ. ಇದೂ ಕೂಡ ಸರಿಯಾಗಿ ಹೊಂದುತ್ತದೆ.

ಈಗ ನಮ್ಮ ಮುಂದೆ ಈಗ ಮೂರು ಆಯ್ಕೆಗಳಿವೆ.(firefox tab ಮತ್ತು keyboard tab ಎರಡಕ್ಕೂ ಅನ್ವಯಿಸುವುದು).

೧. ಸೇರು - ಬೇಗ ಹೇಳುವಾಗ ಇದನ್ನು ಸೇರ್ ಎಂತಲೇ ಬಳಸುತ್ತೇವೆ. ಒಂದು ಸೇರ್ ಸಾಕು, ಎರಡು ಸೇರ್ ಪುರಿಗೆ ಎಷ್ಟು ದುಡ್ಡು.
೨. ನೆರಿಗೆ
೩. ಅಂಕಣ

ಈ ಮೂರೂ ಪದಗಳು ಇನ್ನೂ ನಮ್ಮ ಬಾಯಲ್ಲಿ ಇವೆ. ಶ್ರೀಕಾಂತ ಮಿಶ್ರಿಕೋಟಿಗಳು ಸ್ವಲ್ಪ ಜಾಗ, ಸೊಲ್ಪ ಜಾಗ, ಸೊಲುಪ ಜಾಗ, ಖಾಲಿ ಜಾಗ ಬಳಸಬಹುದೇ ಉನ್ನಿಸಬೇಕು ಎಂದಿದ್ದರು. ಈ ಪದಗಳು, ನಾಮಪದದ ರೂಪವನ್ನು(ಬಹುಶಃ ಸ್ವಲ್ಪ ಎಂಬುದನ್ನು ಸ್ವತಂತ್ರವಾಗಿ ಬಳಸುವುದಿಲ್ಲವಲ್ಲ, ಅದಕ್ಕಿರಬಹುದು) ಅಷ್ಟು ಬಲವಾಗಿ ಹೇಳುತ್ತಿಲ್ಲ ಎಂಬುದು ಒಂದು ಅನಿಸಿಕೆಯಾದರೂ, ಅದರಲ್ಲಿರುವ ಯಾವ ಪದಗಳೂ ಕನ್ನಡವಲ್ಲದ ಕಾರಣ ಅದನ್ನು ಬಿಟ್ಟುಬಡೋಣ ಎಂದು ನಾನು ಹೇಳುವೆ. Eye-wink

ನಿಮ್ಮೆಲ್ಲರ ಅನಿಸಿಕೆಗಳನ್ನೂ ಎಲ್ಲರೊಡನೆ ಹಂಚಿಕೊಳ್ಳಿರಿ.

ಅಂದಹಾಗೆ, ಇವುಗಳನ್ನು ಹುಡುಕುವಾಗ ಸಿಕ್ಕ ಮತ್ತೊಂದು ಕನ್ನಡ ಪದ.
ನೋಟಕ - ಸಾಕ್ಷಿ, ಪ್ರೇಕ್ಷಕ

------All sources taken from Dravidian Etymology-------

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 15, 2006 - 9:28pm — ಶಶಾಂಕ

Re: Tab = ನೆರಿಗೆ

ಶಶಾಂಕ's picture

ಟ್ಯಾಬ್‌ಗೆ 'ನೆರಿಗೆ' ಸರಿಯಾದ ಪದ ಅನ್ನಿಸುತ್ತೆ. ಇನ್ನ್ಯಾವುದೇ ಪದ ನನ್ನನ್ನ ಇಷ್ಟು ಕನ್ವಿನ್ಸ್‌ ಮಾಡಿಲ್ಲ. ಇನ್ಮೇಲಿಂದ ಟ್ಯಾಬ್‌ಗೆ ನೆರಿಗೆನ ಉಪಯೋಗಸ್ತೀನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 15, 2006 - 10:07pm — veereshraya

Re: Tab = ನೆರಿಗೆ

veereshraya's picture

ಚಿಂತನ-ಮಂಥನ ಸಾಗುವ ದಿಸೆ ನೊಡಿದರೆ ನಿಜವಾಗಿಯೂ ಖುಶಿಯಾಗ್ತಿದೆ. ಕನ್ನಡದಲ್ಲಿ ಪದಗಳೇ ಸಿಗುವದಿಲ್ಲ ಅನ್ನುವದು ಜಡ್ಡು ಹತ್ತಿದ ಮೆದುಳುಗಳ ನೆಪವೆನ್ನಿಸುತ್ತೆ.
ನನಗಂತೂ ಅಂಕಣ ಮತ್ತು ನೆರಿಗೆ ಎರೆಡೂ ಇಷ್ಟವಾದವು.
ತಮಾಷೆಗೆ ಕೇಳ್ತಿದೀನಿ, ಹೀಗಾದ್ರೆ ಹೇಗೆ ಭಾರ ಘಟಕಗಳಿಗೆ (heavy weight components like java awt)ಅಂಕಣ ಮತ್ತು ಹಗುರ ಘಟಕಗಳಿಗೆ (light weight components like java swing) ನೆರಿಗೆ ಅಂದರೆ ಹೇಗೆ? Smiling

ವೀರೇಶ ರಾಯ ಚನ್ನಪ್ಪಗೋಳ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 16, 2006 - 9:15am — Sunil Jayaprakash

ಸವಿ : ಕಾವ್ಯಗಳಲ್ಲಿ ನೆರಿಗೆ

Sunil Jayaprakash's picture

ಸರಿ, ಗೆಳೆಯರೆ ಇನ್ನು ಮುಂದೆ firefox tab ಮತ್ತು Keyboard tabಗಳಿಗೆ ಸಮನಾಗಿ ನೆರಿಗೆ ಎಂತಲೇ ಬಳಸೋಣ. ಚರ್ಚೆಯಲ್ಲಿ ಭಾಗವಹಿಸಿದವರೆಲ್ಲರಿಗೂ ಸವಿಯೊದಗು ಮತ್ತು ಸವಿನೆರವು.

ಹಾಗೆಯೇ ಮತ್ತೊಂದು ಮಾತು, ಕನ್ನಡ ಕಾವ್ಯಗಳಲ್ಲಿ ಈ ನೀರೆ, ನಿರಿ, ನೆರಿಗೆ, ನಿರಿಗೆ, ನೀರ(ನೀರಾ ಅಲ್ಲ) ಇವುಗಳನ್ನು ಹೇಗೆ ಬಳಸಿದ್ದಾರೆ ಎಂದು ನೋಡಬೇಕು. ನಮ್ಮ ಪದಕ್ಕೆ ಇನ್ನೂ ಹೆಚ್ಚಿನ ಬಲ ಬರಬಹುದು, ಅಥವಾ ಕಡಿಮೆಯೂ ಆಗಬಹುದು Eye-wink.

ಯಾರಿಗಾದರು ಹೆಚ್ಚು ತಿಳಿದಿದ್ದರೆ, ಎಲ್ಲರೊಡನೆ ಹಂಚಿಕೊಳ್ಳಿ. ನನಗೆ ಸದ್ಯಕ್ಕೆ ಜೊತೆ ಜೊತೆಯಲಿ ಚಿತ್ರದ ಸುಮ್ಮನೆ, ಸುಮ್ಮನೆ ಇದ್ದರೂ ಸುಮ್ಮನೆ ಹಾಡು ನೆನಪಿಗೆ ಬರುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 17, 2006 - 6:22pm — ಸಂಗನಗೌಡ

Re: firefox tab, keyboard tabಗಳಿಗೆ ಕನ್ನಡ ಪದಗಳು

ಸಂಗನಗೌಡ's picture

ಸುನಿಲರೇ, ತಿಣಿ ಮತ್ತು ತಿಳಿಗಳ ಬಗ್ಗೆ ನೀವು ಕೊಟ್ಟಿರುವ ಬಿಡಿಕೆಗೆ ಶರಣು.

ಅಂಕಣ ಮತ್ತು ನೆರಿಗೆಗಳಲ್ಲಿ, ಅಂಕಣ ಸರಿಯಾಗಿ ಹೊಂದಿಕೆಯಾಗುವ ಒರೆ(ಪದ)ಯಾಗಿ ನನಗೆ ತೋರುವದು.
ನೆರಿಗೆ ಅಂದರೆ ಮುರುಗಿ ಮುರುಗಿಯಾದುದೇ ನನ್ನ ಕಣ್ಣ ಮುಂದೆ ಸುಳಿಯುತ್ತದೆ.
ಇದಕ್ಕೆ ಮಾದರಿಗಳು:-
ವಯಸ್ಸು ಹಿಚ್ಚಿದಂತೆ mooತಿಯ ಮೇಲೆ ನೆರಿಗೆಗಳು mooಡುತ್ತವೆ.
ಬಟ್ಟೆಯನ್ನು ಇಸ್ತ್ರೀ ಮಾಡಿದಾಗ ನೆರಿಗೆಗಳು ಮಾಯವಾಗುತ್ತವೆ.
ಸೀರೆಯ ನೆರಿಗೆಗಳು.

ಆದರೆ ಅಂಕಣ ಎಂಬ ಒರೆ, ಪತ್ತಿಗೆಗಳಲ್ಲಿ ಆಗಲೇ ಬಳಕೆಯಲ್ಲಿದೆ.
ಮತ್ತು ಎರಡು ಕಂಬಗಳ ನಡುವಿನ ನೆಲೆಯನ್ನು ಅಂಕಣ ಎನ್ನುತ್ತಾರೆ.

ಬರಹದ ಒರೆಕಣಜhttp://www.baraha.com/nighantu/index.phpದಲ್ಲಿ ನೋಡಿದಾಗಲೂ ಈ ಎರಡೂ ಒರೆಗಳಲ್ಲಿ 'ಅಂಕಣ' ವೇ tab ಎಂಬುದಕ್ಕೆ ಹೆಚ್ಚು ಹತ್ತಿರವಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 18, 2006 - 9:49am — Dhruva

Re: firefox tab, keyboard tabಗಳಿಗೆ ಕನ್ನಡ ಪದಗಳು

Dhruva's picture

ನಮಸ್ತೆ,

ಚರ್ಚೆ ಬಿಸಿಯಾಗಿದೆ. ನೆರಿಗೆ ಪದದ ಅರ್ಥ tab ಪದಕ್ಕೆ ಸಮನಾದ ಅರ್ಥ ಕೊಡಬಹುದೇನೋ ಸರಿ. ಆದರೆ ಆ ಪದ ಕೇಳಿದ ತಕ್ಷಣ ಆ ಅರ್ಥ ಹೊಳೆಯದೆ ಬೇರೆ ಬೇರೆ ಅರ್ಥಗಳೇ ತಕ್ಷಣ ನೆನಪಾಗುವುದರಿಂದ(ಉದಾ:ಸುಕ್ಕು, ತುದಿ)tabಗೆ ಆ ಪದದ ಬಳಕೆ ಬೇಡ ಎನ್ನಿಸುತ್ತೆ. ಯಾಕೆಂದರೆ ಪ್ರತಿಯೊಬ್ಬರೂ ನಿಘಂಟು ತೆಗೆದು(ಅದು ಹೇಗೆ tabಗೆ ನೆರಿಗೆ ಪದ ಬರುತ್ತೆ ಎಂಬಂತೆ) ಅರ್ಥ ಹುಡುಕುವ ಕೆಲಸವಾಗಬಾರದಲ್ವಾ? ನಾವು ಬಳಸುವ ಕನ್ನಡ ಸರಳವಾಗಿರಬೇಕು ಮತ್ತು ಪ್ರತಿಯೊಬ್ಬರಿಗೂ ತಕ್ಷಣ ಅರ್ಥವಾಗಬೇಕು. ಹಾಗೆ ಯೋಚಿಸಿದರೆ ಅಂಕಣ ಪದ ಕೊಡುವ ಅರ್ಥಗಳು tab ಗೆ ಹೊಂದುವಂತಿವೆ. ಅಂಕಣ ಅಂದರೆ ನಿರ್ದಿಷ್ಟ ಸ್ಥಳ. ಅಂಕಣ ಅಂದರೆ ವಿಂಗಡಣೆ(ಗ್ರೂಪ್ಸ್(ನಮ್ಮ ಬಸ್ ಸ್ಟಾಪ್ ಗಳಲ್ಲಿ ೧ನೇ ಅಂಕಣ ೨ನೇ ಅಂಕಣ ಅಂತ ಬಳಸುತ್ತಾರಲ್ವಾ ಹಾಗೆ). ಹಾಗಾಗಿ tab ಗೆ ಸೂಕ್ತ ಕನ್ನಡ ಪದವಾಗಿ ಅಂಕಣವನ್ನೇ ಬಳಸುವುದು ಸೂಕ್ತ ಎಂದು ನನ್ನ ಅನಿಸಿಕೆ. ನೀವೆಲ್ಲ ಏನ್ ಹೇಳ್ತೀರ?

-ಧ್ರುವ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 18, 2006 - 9:40pm — ಶಶಾಂಕ

Re: firefox tab, keyboard tabಗಳಿಗೆ ಕನ್ನಡ ಪದಗಳು

ಶಶಾಂಕ's picture

ಹ್ಮ್ಮ್ಮ್... ಟ್ಯಾಬ್‌ಗೆ ನೆರಿಗೇನೆ ಸರಿ ಅನ್ನೋದು ಮನದಟ್ಟು ಆಗ್ಬಿಟಿದೆ. ಯಾರ್‌ ಏನ್ಬೇಕಾದ್ರೋ ಅನ್ನಿ, ನನಗಂತು ಅದು ನೆರಿಗೇನೆ. Eye-wink

ಆದ್ರೆ ಕೀಲಿಮಣೆಯ ಟ್ಯಾಬ್‌ಗೆ ನೆರಿಗೆ ಸರಿ ಅನ್ನಿಸ್ತಾ ಇಲ್ಲ. ಬೇರೆ ಏನಾದ್ರು ಹೊಳದ್ರೆ ತಿಳಿಸಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 18, 2006 - 10:12pm — Sunil Jayaprakash

ಉ: firefox tab, keyboard tabಗಳಿಗೆ ಕನ್ನಡ ಪದಗಳು

Sunil Jayaprakash's picture

ಶಶಾಂಕ wrote:
ಆದ್ರೆ ಕೀಲಿಮಣೆಯ ಟ್ಯಾಬ್‌ಗೆ ನೆರಿಗೆ ಸರಿ ಅನ್ನಿಸ್ತಾ ಇಲ್ಲ. ಬೇರೆ ಏನಾದ್ರು ಹೊಳದ್ರೆ ತಿಳಿಸಿ.

ಅಯ್ಯೋ, back to square one(ಮತ್ತೆ ಮೊದಲಿಂದ. ರೆಡ್ಡಿ ವಚ್ಚಾಡು, ಮೊದ್ಲೆತ್ಕೋ Eye-wink ), ರೀತಿಯಾಯಿತು ನಮ್ಮ ಕತೆ. ಇರಲಿ ಅಂಕಣದ ಅರ್ಥವನ್ನು ನೋಡಿ. ಎರಡರ ನಡುವಿನ ಖಾಲಿ ಜಾಗ.
Ka. aṅkaṇa space either between any two posts or pillars in a wall that supports the roof, or between any two beams.

ನಾನು ಹಿಂದೆಯೇ ಹೇಳಿದ ಹಾಗೆ, ಪದಗಳ ಅರ್ಥ ಸೀಮಿತವಾಗಬಾರದು. ಸಂಸ್ಕೃತದ ಅಂತರವನ್ನು ಅಂತರ್ಜಾಲದಲ್ಲೂ ಬಳಸುತ್ತೇವೆ, ಅಂತರ್ಜಲದಲ್ಲೂ ಬಳಸುತ್ತೇವೆ. ಪದಗಳೇ ತಾನೇ ಭಾಷೆಯ pillar'ಉ, wall'ಉ, roof'ಉ, beam'u ಎಲ್ಲಾ. ಈ ಭಾಷೆಯ pillar'ಉಗಳಾದ ಎರಡು ಪದಗಳ ನಡುವಿನ ಜಾಗಕ್ಕೂ ಅಂಕಣ ಎನ್ನಬಹುದು. ಹಾಗೆಯೇ ಅಂಕಣ ಎಲ್ಲರಿಗೂ ತಿಳಿದಿರುವಂಥದ್ದು. ಅಲ್ಲದೆ, ಅಂಕಣವೆಂಬುದು ಉತ್ತರ ಕರ್ನಾಟಕದಲ್ಲಿ beam ಎಂಬ ಇನ್ನೂ ಬಳಕೆಯಲ್ಲಿರುವುದರಿಂದ ಅಂಕಣವನ್ನು ಬಳಸುವುದು ಸರಿ.

ಹಾ! ಅಂದಹಾಗೆ ಈ ನೆರಿಗೆ ಪದದ ಬಗ್ಗೆ ಚರ್ಚಿಸಲು ನನಗೆ ಮತ್ತೊಂದು ವಸ್ತು ಸಿಕ್ಕಿದೆ. ಸದ್ಯದಲ್ಲೇ ನಿರೀಕ್ಷಿಸಿ. ನೆರಿಗೆ ಪದವನ್ನು ನಾವು ಇನ್ನೂ ಎಷ್ಟು ಒಳ್ಳೆಯ ರೀತಿಯಲ್ಲಿ ಬಳಸಬಹುದು ಎಂದು ತೋರಿಸುತ್ತೇನೆ.

ಇದೆಲ್ಲದರ ನಡುವೆ, ನಾನು ಮೊದಲೇ ಹೇಳಿದ ಹಾಗೆ, ಈ ನೆರಿಗೆ, ನಿರಿಗೆ, ನಿರಿ, ನೀರೆ, ನೀರ(ನೀರಾ ಅಲ್ಲ), ಅಂಕಣ ಈ ಪದಗಳು ಕನ್ನಡ ಕಾವ್ಯಗಳಲ್ಲಿ ಯಾವ ರೀತಿ ಪ್ರಯೋಗವಾಗಿವೆ ಎಂಬುದನ್ನು ನೋಡಬೇಕು. ನಮ್ಮ ನಮ್ಮ ಇಷ್ಟ, ಕಷ್ಟಗಳಿಗೆ(ಒಪ್ಪ, ಓರಣಗಳಿಗೆ) ಮತ್ತಷ್ಟು ಪುಷ್ಟಿ ಸಿಗುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 19, 2006 - 1:07am — ಶಶಾಂಕ

Re: ಉ: firefox tab, keyboard tabಗಳಿಗೆ ಕನ್ನಡ ಪದಗಳು

ಶಶಾಂಕ's picture

ವಿಂಡೋಗಳಲ್ಲಿ ಇರುವ ಟ್ಯಾಬ್‌ಗಳಿಗೆ ನೆರಿಗೆ ಸರಿ ಇದೆ. ಅದನ್ನ ಬದಲಾಯಿಸೋದು ಬೇಡ. ಆದರೆ ಕೀಲೀಮಣೆಯ ಟ್ಯಾಬಿಗೆ ಬೇರೆಯೇ ಪದಬೇಕು.

Quote:
Sunil Jayaprakash - Keyboard tabಗೆ ನಿರ್ದಿಷ್ಟಾಂತರ ಎಂದು ಈಗ ಬಳಸುತ್ತಿದ್ದೇವೆ. ಆದರೆ ಇದಕ್ಕಿಂತ ಸರಳವಾದ ಕನ್ನಡ ಪದವಿದ್ದರೆ ಚೆನ್ನ ಎಂದು ನಮಗೆ ಅನಿಸುದೇ ಇರುವುದಿಲ್ಲ

ನಿರ್ದಿಷ್ಟಾಂತರ ಕೀಲಿಮಣೆಯ ಟ್ಯಾಬಿಗೆ ಸರಿಯಾದ ಅರ್ಥವೇ (ಪದವೇ). ಆದರೆ, ನೀವು ಹೇಳಿದ ಹಾಗೆ ಇನ್ನೊಂದು ಸುಲಭ, ಸರಳ ಪದಬೇಕು.

ಹ್ಞಾ, ತಜುರ್ಮೆ ಮಾಡಿದ ಮೇಲೆ ಈ ಪದಗಳು ಎಲ್ಲಿ ಹೋಗ್ತಾ ಇವೆ? ಪೈರ್‌ಪಾಕ್ಸ್‌ಗೆ ಅಲ್ಲದೇ ಬೇರೆಲ್ಲಾರೂ ಲಿಸ್ಟ್‌ ಮಾಡ್ತಾ ಇದಾರ ಯಾರಾದ್ರೂ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದಿಂದ ಸಕ್ಕದಕ್ಕೆ ಒರೆಗಳು
  • ಕನ್ನಡದ ಆಪು ಮತ್ತು ಇಂಗ್ಲೀಸ off ಎರಡು ಒಂದೇ
  • ಆ ಅಕೋ, ಅಗೋ, ಅದೋ
  • ಅಚ್ಚಕನ್ನಡದ ನೆಚ್ಚನ ಒರೆಗಳು
  • Gelಗೆ ಕನ್ನಡದಾಗೇನು?
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
  • ಬೆಂಗಳೂರು ಸುಧಾರಿಸಲು ಸಹಾಯ ಮಾಡಿ
  • ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
  • ಮುಕ್ತ...ಮುಕ್ತ...ಸಾಹಿತ್ಯ ಬೇಕು...
  • ಕನ್ನಡ ಕಸ್ತೂರಿ
  • Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
  • ಜಿಮೇಲ್ ಕನ್ನಡ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ವೈದ್ಯನಾರಾಯಣಕಥೆ
    July 6, 2008 - 8:09pm
  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:03pm
  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:01pm
  • ಗಣೇಶ
    ಉ: ಶಾಸಕರ ರಾಜೀನಾಮೆ ರಾಜಕೀಯ
    July 6, 2008 - 7:54pm
  • venkatesh
    ಉ: ಬ್ರಹ್ಮ ಕಮಲ
    July 6, 2008 - 7:44pm
  • Chamaraj
    ಉ: ಕನಸಿನ ಕನ್ಯ
    July 6, 2008 - 5:57pm
  • rameshbalaganchi
    ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
    July 6, 2008 - 4:56pm
  • Chamaraj
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 6, 2008 - 4:32pm
  • makrumanju
    ಉ: ಕನ್ನಡ ಕಸ್ತೂರಿ
    July 6, 2008 - 12:06pm
  • hamsanandi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 6, 2008 - 11:33am
ಇನ್ನಷ್ಟು


ಶೋಧನ ಭೋಧನ ಮೋಧನ ಮಾರ್ಗದಿ
ಓದುಗ ಮನದಾರಾಧನಕೆ
ಪ್ರಾದುರ್ ಭವಿಸುತ ಕವಿವಾಕ್ ನಡೆವುದು
ನಾದ ಬ್ರಹ್ಮ ನಿಕೇತನಕೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator