Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವಿಜ್ಞಾನ ಸಾಹಿತ್ಯ

ನೆರಿಗೆಗಳು

December 22, 2006 - 11:48am — Sunil Jayaprakash

ಗೆಳೆಯರೆ ನಾವು ಕಳೆದ ವಾರ ಚರ್ಚಿಸುತ್ತಾ ನೆರಿಗೆ ಪದದ ಸುತ್ತಾ ಗಿರಕಿ ಹಾಕುತ್ತಿದ್ದೆವು. ನಾನು ಇಲ್ಲಿ, ತಾಂತ್ರಿಕ ಮಂದಿಯಾದ ನಾವು ನೆರಿಗೆ ಪದವನ್ನು ಇನ್ನೂ ಎಷ್ಟು ಚೆನ್ನಾಗಿ ಬಳಸಿಕೊಳ್ಳಬಹುದು ತಿಳಿಸುತ್ತೇನೆ ಎಂದು ಹೇಳಿದ್ದೆ. ಅದರ ಮುಂದುವರಿದ ಕಂತಿದು.

ಈಗ ನಾವುಗಳು firfox ಮತ್ತು ಎಷ್ಟೊ ವೆಬ್‌ಸೈಟುಗಳಲ್ಲಿ, My settings, Options, Preferences ಎಂಬಂತಹ ಪದಗಳನ್ನು ಬಳಸುತ್ತಿದ್ದೇವೆ.
Options ಎನ್ನುವುದಕ್ಕೆ ಆಯ್ಕೆಗಳು ಎಂದು ಬಳಸುತ್ತಿದ್ದೇವೆ. ಅದು ಸರಿಯಾದ ಬಳಕೆಯೇ ಹೌದು. ಆದರೆ Options ಎನ್ನುವುದು ಬಹುತೇಕ Radio Buttons ಇರುವ ಕಡೆ ಬಳಸುತ್ತಿದ್ದೇವೆ. ಅಂದರೆ ಒಬ್ಬ ಬಳಕೆದಾರ, ಒಂದನ್ನು ಆಯ್ಕೆ ಮಾಡಿಕೊಳ್ಳಲೇ ಬೇಕು(ಇದಕ್ಕೆ ಅಪವಾದಗಳೂ ಇವೆ) Optionsಗಳಲ್ಲಿ ಒಂದು ಹೆಚ್ಚು, ಮತ್ತೊಂದು ಕಮ್ಮಿ ಎನ್ನುವುದಕ್ಕಾಗುವುದಿಲ್ಲ. ಯಾವುದೋ ಒಂದನ್ನು ಬಳಸಲೇಬೇಕು.

ಆದರೆ Preferences ಹಾಗಲ್ಲ, ಬಳಕೆದಾರ, ತನಗೆ ಇಷ್ಟವಾಗುವ ರೀತಿಯಲ್ಲಿ, ವೆಬ್‌ಸೈಟನ್ನು ಅಥವಾ, ತಂತ್ರಾಂಶವನ್ನು ಬಳಸಿಕೊಳ್ಳುವ ರೀತಿಯಲ್ಲಿ ಬಳಸುವಂತಾದ್ದು. ಒಂದೊಮ್ಮೆ ಬಳಕೆದಾರ ಇವುಗಳನ್ನು ಬಳಸಿದಿದ್ದರೂ, functionality change ಆಗುವುದಿಲ್ಲ.

ಉದಾ - ವೆಬ್‌ಸೈಟಿನ ಬಣ್ಣ, ಥೀಮ್, ಇವುಗಳನ್ನು Preferences ಎನ್ನುವ ಅರ್ಥದಲ್ಲಿ ಬಳಸಬಹುದು.

ಈ Preferencesಗಳಿಗೆ ನಾವು ನಿ(ನೆ)ರಿಗೆಗಳು ಎನ್ನಲು ಸಾಧ್ಯವೇ ?
ನೆರಿ, ನಿರಿ, ನಿರಟೆ, ನಿರು, ನೀರಟೆ, ನಿರಿಗೆ, ನಿರುಗೆ - orderly arrangement, beauty, fineness, elegance;
ಒಟ್ಟಿನಲ್ಲಿ ಚೆನ್ನಾಗಿ ಕಾಣುವಂಥದ್ದು, ಸರಿಯಾಗಿ ಜೋಡಿಸಿಟ್ಟದ್ದು, ಒಪ್ಪ ಓರಣವಾಗಿರುವಂಥದ್ದು ಎಂದರ್ಥ.

Applying preferences would be ನಿರಿಸು. niṟisu to arrange, adjust, prepare; n. arrangement, display

Apply ಎನ್ನುವುದಕ್ಕೆ ಸರಿಯಾದ ಕನ್ನಡ ಪದ ನಿರಿಸು. ಇದಕ್ಕೆ ಎರಡು ಮಾತೇ ಇಲ್ಲ. ಇದನ್ನು ತಿಳಿಯದಿದ್ದರಿಂದ ನಾನು ಇಲ್ಲಿಯ ತನಕ, ಉಳಿವು, ಸೇರಿಸು ಈ ರೀತಿಯಾದ ಪದಗಳನ್ನು ಬಳಸುತ್ತಿದ್ದೆ. ಇದನ್ನು ತಿಳಿದ ಮೇಲಂತೂ, ನಾನು ಇನ್ನು ಮುಂದೆ, Apply ಎನ್ನುವುದಕ್ಕೆ ನಿರಿಸು ಎಂದು ಹೇಳುತ್ತೇನೆ.

ನೆರಿಗೆ(ನಿರಿಗೆ) - Preferences, My settings (ಮಾತನಾಡುವಾಗ ನೆರ್ಗೆ, ಪ್ರಿಫರೆನ್ಸಸ್ ಎನ್ನುವುದಕ್ಕಿಂತ ತುಂಬಾ ತುಂಬಾ ಸುಲಭ).
ನಿರಿಸು - Apply (ಮಾತನಾಡುವಾಗ ಇದನ್ನು ನಿರ್ಸು ಎಂದು ಹೇಳುತ್ತೇವೆ. ನಿರ್ಸು ಎನ್ನುವುದು ಅಪ್ಲಯ್ ಎನ್ನುವುದಕ್ಕಿಂತ ಸುಲಭವಾಗಿದೆ)
ಆಯ್ಕೆ - Options (ಆಪ್ಶನ್ಸ್ ಎನ್ನುವುದಕ್ಕಿಂತ ಸುಲಭ)

ಹೀಗೆ "ನ" ಯಿಂದ ಪ್ರಾರಂಭವಾಗುವ ಅನೇಕ ಕನ್ನಡ ಪದಗಳಿವೆ.
ನೆರವು - ಸಹಾಯ.
ನೆರಗು - ಸಂಸ್ಕರಿಸು(??)
ನಿರಟೆ - ಸಂಸ್ಕರಣೆ(??)

‹ ಭಾರತದಲ್ಲಿ W3C ಕಾರ್ಯಾಲಯ ಎದೆಹಾಲು ಮಕ್ಕಳ ಐ.ಕ್ಯು ಹೆಚ್ಚಿಸುವದಂತೆ. ›
  • ವಿಜ್ಞಾನ ಸಾಹಿತ್ಯ
Ornamental seperator
  • Login or register to post comments
  • 484 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 1, 2007 - 9:24am — ಸಂಗನಗೌಡ

Re: ನೆರಿಗೆಗಳು

ಸಂಗನಗೌಡ's picture

Quote:
ನೆರಿಗೆ(ನಿರಿಗೆ) - Preferences, My settings (ಮಾತನಾಡುವಾಗ ನೆರ್ಗೆ, ಪ್ರಿಫರೆನ್ಸಸ್ ಎನ್ನುವುದಕ್ಕಿಂತ ತುಂಬಾ ತುಂಬಾ ಸುಲಭ).

ಆದರೆ, preferences ಅಂದರೆ 'ಆದ್ಯತೆ' ಎಂದು ಅರ್ಥ. ಆದ್ಯತೆ ಅಂದರೆ ಇಲ್ಲಿ ಬಳಕೆದಾರ ಯಾವುದು ತನಗೆ best ಎಂದು ತೋರುವದೋ ಅದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ, ಹಾಗಾಗಿ ಅದಕ್ಕೆ preference ಎನ್ನಲಾಗಿದೆ. ನೆರಿಗೆ ಅಂದರೆ 'ಒಪ್ಪವಾಗಿ ಜೋಡಿಸಿಟ್ಟಿರುವದು' ಎಂಬ ನಿಮ್ಮ ತಿಳಿವೇನೋ ಸರಿ, ಆದರೆ ಅದನ್ನು preferences ಎಂಬುದಕ್ಕೆ ಬಳಸಲು ಬಾರದು ಎಂದೇ ನನ್ನ ಅಲುಗದ ನಿಲುವು.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • firefox tab, keyboard tabಗಳಿಗೆ ಕನ್ನಡ ಪದಗಳು
  • ಕನ್ನಡದಿಂದ ಸಕ್ಕದಕ್ಕೆ ಒರೆಗಳು
  • Minimize and Maximize
  • ಕನ್ನಡದ ಆಪು ಮತ್ತು ಇಂಗ್ಲೀಸ off ಎರಡು ಒಂದೇ
  • ಅಚ್ಚಕನ್ನಡದ ನೆಚ್ಚನ ಒರೆಗಳು
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
  • ಮಧುವನ ಕರೆದರೇ, ತನುಮನ ಸೆಳೆದರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
ಇನ್ನಷ್ಟು

ಮಾಡುವುದರಿಂದಲೇ ಏನಾದರೂ ಆಗುತ್ತದೆ. ಆದುದರಿಂದ ಕರ್ಮ ಮಾಡಲೇಬೇಕು. ಪ್ರಯತ್ನವನ್ನೇ ಪರಮೇಶ್ವರನೆಂದು ತಿಳಿಯಬೇಕು.

— ಸಮರ್ಥ ರಾಮದಾಸ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator