~
ರಾಷ್ಟ್ರಪತಿಗಳಾಗಿ ಕಲಾಂ ಮುಂದುವರಿಯಲಿ
ಯಶಸ್ವಿ ರಾಷ್ಟ್ರಪತಿಗಳಾಗಿ ಗೌರವಾನ್ಚಿತ ಅಬ್ದುಲ್ ಕಲಾಂ ಅವರ ಕೆಲಸದ ಅವಧಿ ಜುಲೈ 2007ರಲ್ಲಿ ಕೊನೆಗೊಳ್ಳಲಿದೆ.
ನಮ್ಮ ದೇಶಕ್ಕೆ ಕಲಾಂ ಅವರಂತಹ ದೂರ ನೋಟವುಳ್ಳವರ ಸೇವೆ ಬೇಕಾಗಿದೆ.
ಇಲ್ಲಿ ಈಗಾಗಲೇ 67,500 ಕ್ಕೂ ಹೆಚ್ಚು ಮಂದಿ ಕಲಾಂ ಅವರು ಇನ್ನೊಂದು ಅವಧಿಗೆ ಮುಂದುವರಿಯಲಿ ಎಂದು ಸಹಿ ಮಾಡಿದ್ದಾರೆ. ನೀವೂ ಇದರಲ್ಲಿ ಪಾಲ್ಗೊಳ್ಳಿ.
2020ರ ಕನಸನ್ನು ನನಸಾಗಿಸಲು ಮುಂದೆ ಬನ್ನಿ.

- Login or register to post comments
- 886 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ

RSS:
Re: ರಾಷ್ಟ್ರಪತಿಗಳಾಗಿ ಕಲಾಂ ಮುಂದುವರಿಯಲಿ
ಅಯ್ಯೋ ಇದು ಸರಿಯಾದ ಲಿಂಕು
http://www.petitiononline.com/apj/petition.html
Re: ರಾಷ್ಟ್ರಪತಿಗಳಾಗಿ ಕಲಾಂ ಮುಂದುವರಿಯಲಿ
ಈ ಆನ್ಲೈನ್ ಪೆಟಿಶನ್ನುಗಳು ಏನಾದರೂ ಮಾಡುತ್ತವೆ ಎಂಬುದರಲ್ಲಿ ನನಗೆ ನಂಬಿಕೆಯಿಲ್ಲ.
ಬಹುಶಃ ನಿಮ್ಮ ನಿಮ್ಮ ಶಾಸಕರಿಗೆ ಒಂದೊಂದು ಪತ್ರ ಬರೆಯುವುದು ಕೆಲಸ ಮಾಡಬಹುದು... ಅದೂ ಕಸದ ಬುಟ್ಟಿ ಸೇರದಿದ್ದರೆ.
ಬಹುಶಃ ಈಗಿನಂತೆ ಪತ್ರಿಕೆಗಳು, ಅಥವ ಟಿ ವಿ ಚ್ಯಾನಲ್ಲುಗಳು ಇಂತಹ ಕ್ಯಾಂಪೇಯ್ನುಗಳಿಗೆ ಒಳ್ಳೆಯ ಮೀಡಿಯ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ನಮಗೆ ಕಲಾಂ ಕನಸಿನ, ಯುವ ಪೀಳಿಗೆಯ ಪ್ರತಿಭಾವಂತ ರಾಷ್ಟ್ರಪತಿ ಬೇಕು !
ಕಲಾಂ ರವರು ಯಾರಿಗೆ ಬೇಡ ? ಅಂತಹವರು ಅಪರೂಪವಾಗಿ ರಾಷ್ಟ್ರಕ್ಕೆ ಸಿಗುತ್ತಾರೆ ! ಅವರೇ ಬರಲಿ ಎನ್ನುವುದು ಅತ್ಯಂತ ಸೂಕ್ತವಾದ ಸಲಹೆ. ಎಲ್ಲ ಬುದ್ಧಿಜೀವಿಗಳಷ್ಟೇ ಅಲ್ಲ, ಜನ ಸಾಮಾನ್ಯರೂ ಹೇಳುವ ಮಾತು !
ಆದರೆ,
೧ ಬಿಲಿಯನ್ ಗಿಂತಲೂ ಹೆಚ್ಚು ಜನಸಂಖ್ಯೆಇರುವ ನಮ್ಮ ವಿಶಾಲ ದೇಶದಲ್ಲಿ ಸಾವಿರಾರು ಹೊಸ ಮನಸ್ಸುಗಳು, ಪ್ರತಿಭೆಗಳು , ಹೊಸ ಕನಸುಗಳನ್ನು ಬಿತ್ತಲು ತಯಾರಾಗಿವೆ. ನಮ್ಮ ದೇಶದ ಈ 'ಜನಸಂಖ್ಯಾ ಸ್ಫೋಟ'ವನ್ನು ಮಾನ್ಯ ಕಲಾಂ ರವರೆ ಸೊಗಸಾಗಿ ವಿವರಿಸಿದ್ದಾರೆ. ಅದು ಒಂದು ಶಾಪವಲ್ಲ; ಬದಲು ಸಂಪತ್ತು !!
೨೮- ರಿಂದ ೪೦ ರವರೆಗೆ ನಮ್ಮ ಭಾರತದಲ್ಲಿ ಮಿಲಿಯಗಟ್ಟಲೆ ಬಲಿಷ್ಟ, ಹಾಗೂ ಜಾಣ ಯುವ ಶಕ್ತಿ ಇದೆ. ಇದನ್ನು ಅರಿಯೋಣ !
ಅದನ್ನು ಬಳಸುವ 'ಪರಿ'ಯನ್ನು ನಾವು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ಮಧ್ಯವಯಸ್ಸಿನ ರಾಷ್ಟ್ರಪತಿಯನ್ನು ನಾವು ಏಕೆ ಅಧಿಕಾರಕ್ಕೆ ತರಬಾರದು ? ವಯಸ್ಸಾದವರೇ ಏಕೆ ? ಈ ನಿಟ್ಟಿನಲ್ಲಿ ಯೋಚಿಸೋಣ !
ಈಗಾಗಲೇ 'ಕಲಾಂ ಮೇಷ್ಟ್ರು' ಅನ್ನುವ ಚೆಂದದ ಪುಸ್ತಕವನ್ನು ಓದಿ ನಾವೆಲ್ಲಾ ಪ್ರಭಾವಿತ ರಾಗಿದ್ದೇವೆ. ನಿಜಕ್ಕೂ ಕಲಾಂರವರು ತಮ್ಮ ಉತ್ತಮ ಜ್ಞಾನಕ್ಕೆ ಹಾಗೂ ಅದನ್ನು ಅನುಸರಣೆಗೆ ತರುವಲ್ಲಿ ಅವರು ತೋರಿಸಿದ ಅವರ ಪ್ರಯತ್ನಶೀಲತೆಗೆ ಹೆಸರಾಗಿದ್ದಾರೆ. ಪುಸ್ತಕದಲ್ಲಿ ಬರುವ ಒಂದು ಮಾತನ್ನು ಇಲ್ಲಿ ಉದ್ಧರಿಸುವುದು ಮುಖ್ಯ. ಆಲ್ಬರ್ಟ್ ಐನ್ಸ್ಟೈನ್ ಹೇಳುವಂತೆ, "ಜಯ ಸಾಧಿಸಿದ ಮನುಷ್ಯನಾಗಲು ಮಾತ್ರ ಶ್ರಮಿಸದಿರಿ. ಬದಲಿಗೆ ಮೌಲ್ಯಾಧಾರಿತ ವ್ಯಕ್ತಿಯಾಗಲು ಶ್ರಮಿಸಿ' ಇಂತಹ ಆಶೋತ್ತರಗಳ ಮೂರ್ತರೂಪವೇ ಶ್ರೀ. ಅಬ್ದುಲ್ ಕಲಾಂ !
ಪ್ರೊಫೆಸರ್ ಶ್ರೀ.ರಾಮಕೃಷ್ಣರಾಯರು ತಮ್ಮ ಪುಸ್ತಕದಲ್ಲಿ ಇದನ್ನು ಸೊಗಸಾಗಿ ದಾಖಲಿಸಿದ್ದಾರೆ !
"ಹೊಸ ದಿಗಂತದ ಹೊನ್ನಿನ ಕಿರಣಗಳನ್ನು ಹೊಸದಿನದ ನೇಸರಿನಲ್ಲಿ ಶೋಧಿಸೋಣ" !
Re: ರಾಷ್ಟ್ರಪತಿಗಳಾಗಿ ಕಲಾಂ ಮುಂದುವರಿಯಲಿ, ಅನ್ನೋದು ಸರಿನೇ - ಆದರೆ ?
೬೭೫೦೧ ನೆ ಪ್ರತಿಕ್ರಿಯೆ ಹೀಗ್ಯಾಕಿರಬಾರದು ? ಅತಿಯಾದ ವ್ಯಕ್ತಿಪೂಜೆ ಯೇಕೆ ? ಈಗಾಗಲೇ ಒಂದು ಟರ್ಮ್ ಚೆನ್ನಾಗಿ ನಿರ್ವಹಿಸಿದ್ದಾರೆ ಅವರು ! ಸ್ವಲ್ಪ ತಮ್ಮ ಉಪಾಧ್ಯಾಯ ವೃತ್ತಿಯಲ್ಲಿ ಹೊಸ ತನಗಳನ್ನು ಹುಟ್ಟುಹಾಕಲಿ ! ಹೊಸ ಹೊಸ ಶೋಧಗಳಿಲ್ಲದಿದ್ದರೆ ಇಂದು ನಾವು ಒಂದು ಮನೆಗಾತ್ರದ ಗಣಕಯಂತ್ರದ ಮೊರೆಹೋಗಬೇಕಾಗಿತ್ತು ! ಅಲ್ಲವೆ ?
ನಿಮಗೆ ಲ್ಯಾಪ್ ಟಾಪ್ ಬೇಡವೆ ?
ನೆಹರೂರವರೇ ಇಂದಿಗೂ ಮುಂದುವರೆಯಲಿ ಎನ್ನುವ ಮಾತು ಎಷ್ಟು ದಿಟ ?
ಹೊಸ -ದಿನ, ಹೊಸ -ತನ, ಯುವಶಕ್ತಿಯಲ್ಲಿ ಅಡಗಿದೆ. ತೆಂದುಲ್ಕರ್ ಗಂಗೂಲಿಗಳು ಹೊರಗುಳಿದು ಕೇಸರಿ, ಮದನಕೇಸರಿ, ಅರಿಕೇಸರಿಯಂತಹವರಿಗೆ ಜಾಗ ಮಾಡಿಕೊಡದಿದ್ದರೆ ಪ್ರಪಂಚ ಮುಂದುವರಿಯುವುದು ಹೇಗೆ ಸ್ವಾಮಿ ?
ಕೇವಲ ಗಂಗೂಲಿ, ತೆಂದುಲ್ಕರ್ ಗಳೇ ನಮ್ಮ ದೇಶದ ಕ್ರಿಕೆಟ್ ನ 'ಶಿರೋಭಾರ' ಹೊತ್ತಿರುವ ರುವಾರಿಗಳಲ್ಲ ! ನಮ್ಮ ಶ್ರೀನಾಥ್ , ಶೇನ್ ವಾರ್ನ್, ಮ್ಯಾಕ್ಗ್ರಾ ಗಳಂತೆ ಆರೋಗ್ಯಕರವಾಗಿ ಯೋಚಿಸುವುದು ಒಳ್ಳೆಯದಲ್ಲವೆ !
ಧನಾತ್ಮಕವಾಗಿ ಯೋಚಿಸಿ ಸಾರ್ !!! !!!!!!!
Re: ರಾಷ್ಟ್ರಪತಿಗಳಾಗಿ ಕಲಾಂ ಮುಂದುವರಿಯಲಿ, ಅನ್ನೋದು ಸರಿನೇ - ಆದರೆ ?
ರಾಷ್ಟ್ರಪತಿ ಆಗುವ ಅರ್ಹತೆ ಉಳ್ಳವರು ಅನೇಕರು ಇರಬಹುದಾದರೂ ಈಗ ಆ ಹುದ್ದೆಯ ರೇಸಿನಲ್ಲಿರುವಂತೆ ತೋರುವುದು- ಸುಶೀಲಕುಮಾರ ಶಿಂಧೆ ಅವರಂತಹ ರಾಜಕಾರಣಿಗಳು. ನಮ್ಮ ಹಣೆಬರಹ ಚೆನ್ನಾಗಿರುವುದಕ್ಕೋ ಇಲ್ಲದಿರುವುದಕ್ಕೋ ದೇವೇಗೌಡರೂ ಈ ರೇಸಿಗೆ ಧುಮುಕಬಹುದು!! ನಾರಾಯಣ ಮೂರ್ತಿ ಅವರು ತಾವು ಈ ಹುದ್ದೆಯ ಆಕಾಂಕ್ಷಿ ಅಲ್ಲ ಎಂದು ಹೇಳಿಕೊಂಡಿದ್ದಾರೆ.
ರಾಷ್ಟ್ರಪತಿಗಳಾಗಿ ಯಾರ್ನ ತರ್ತಾರೊ ದ್ಯಾವ್ರೆ ಬಲ್ಲ ! !
ಓಹ್ ಕೇಸರಿಯವರೆ,
ದೇಶದ ಬಗ್ಗೆ ನಿಮ್ಮ ಕಾಳಜಿ ಈಗ ಅರ್ಥವಾಯ್ತು ನೋಡಿ. ದ್ಯಾವೇಗೌಡೃ ಮತ್ತು ಸುಶೀಲ್ ಕುಮಾರ್ ರೇಸಿನಲ್ಲಿ ಇದಾರೆ ಎಂದು ತಿಳಿದಿದ್ದೇನೆ. ಸರಿ. ಗೌಡೃ, ಕರ್ನಾಟಕದ ರಾಜಕಾರಣದಲ್ಲೇ 'ಬಿಸಿ'ಯಾಗಿದ್ದಾರಲ್ಲಪ್ಪ ! ಸಿದ್ರಾಮಪ್ಪನವರನ್ನು ಬೇರೆ ಅವರು ಕಂಟ್ರೋಲ್ ನಲ್ಲಿ ಮಡ್ಕೋಬೇಕು ! ಮಕ್ಕಳ ಯೇಗಕ್ಸೇಮದ್ದು ಬಲು ಎಚ್ಚಿನ್ ಜವಾಬ್ದಾರಿ ಬಂದೋಗದೆ ! ಒಂದು ಉಪ್ಕಾರ ನಮ್ರೈತ್ರಿಗೆ ಅಂದ್ರೆ, ರಾಗಿ ಬೆಳ್ಯೋರೆಲ್ಲಾ ೫ ವರ್ಷದಲ್ಲಿ ಚೆನ್ನಾಗ್ ಅಣ ಮಾಡ್ತಾರೆ. ರಾಗಿ ಮುದ್ದೆ " International Brand " ಆಗಿ ಅದು ಎಲ್ಲಾ ರಾಜ್ಯದಲ್ಲೂ 'ಎಸರ್ವಾಸಿ' ಆಗೋದ್ ಕಂಡಿತ ! ರಾಗಿ ಮುದ್ದೆ, ರಾಗಿ ಮಾಲ್ಟ್, ರಾಗಿ ರೊಟ್ಟಿ, ಏನೇಳ್ತೀರ- ನಮ್ಗೂ ಒಂತರ ನೆಮ್ದಿ. ನಮ್ಗವ್ಡೃ ಅಲ್ಲಿ ಡೆಲ್ಲೀನಾಗ್ ರಾ.ಭ.ದಲ್ ಕುಂತವ್ರೆ ಅಲ್ವ್ರಾ ? ಒಂದ್ ದಿಟ ನುಡ್ದೇ ಬಿದ್ತೀನಿ, ಅವ್ರು ನಿದ್ದೇ ಮ್ಯಾಲೇನಾದ್ರು ಕಂಟ್ರೋಲ್ ಮಡಿಕ್ಕೊಳ್ಲೇ ಬೇಕು. ವಿದಿ ಇಲ್ದೆ ಇದನ್ ಏಳ್ಲೇ ಬೇಕಾಗ್ ಬಂತು ನೋಡಿ !
ಏನೇ ಇರಲಿ, ನೋಡಿ, ನಮ್ಮ ಪ್ರಜಾಪ್ರಭುತ್ವದಲ್ಲಿನ ರಾಜಕಾರಣದಲ್ಲಿ ರಾಷ್ಟ್ರಪತಿ ಹುದ್ದೆ ಒಂದು 'ಡಮ್ಮಿ' ತರಹ ಅನ್ನೋದನ್ನ ಹೆಚ್ಚು ವಿವರಿಸಿ ಹೇಳಬೇಕಾಗಿಲ್ಲ ! ಕಲಾಂ ಒಬ್ರು ಇದಕ್ಕೆ ಅಪವಾದ ! ಅವರ ಹುದ್ದೆಯ ಗರಿಮೆಯನ್ನು ಇನ್ನೂ ಉಳಿಸಿಕೊಂಡಿದಾರೆ.
ಸದ್ಯ ನಾರಾಯಣ್ಮೂರ್ತಿಗಳ್ನ ಈ 'ಗಜಾಗೊಂಡ್ಲ'ನಲ್ಲಿ ನೂಕೋದ್ ಬೇಡ ಕಣ್ರಿ. ಏನನ್ತೀರ ! ಏನೂ ಮಾಡಕ್ಕಾಗಲ್ಲ ! ಬಡ್ ಬಗ್ರಿಗೆ ಕೆಲ್ಸ ಕೊಡ್ಸಿ ಉಪ್ಕರ ಮಾಡ್ತಾ ಅವ್ರೆ. ಅದನ್ನೆ ಒಸಿ ಜಾಸ್ತಿ ಮಾಡ್ಕೊಂಡ್ ಬೆಂಗ್ಳೂರ್ನಲ್ಲೇ ಇರ್ಲಿ ಬಿಡಿ.
ಇನ್ನು ಕೆಲವು ವಿಷಯಗಳನ್ನು ಕಲಾಂ ಕೂಡ ಬಗೆಹರಿಸಿಲ್ಲ ! ನಮ್ಮ ಮುಂಬೈ ಸರಣಿ ಸ್ಫೋಟದ 'ಕೇಡಿ'ಗೆ ಮತ್ತು ಪಾರ್ಲಿಮೆಂಟ್ ಧ್ವಂಸ ಮಾಡಕ್ಕೆ ಪ್ರಯತ್ನಿಸದ್ನಲ್ಲಪ್ಪ, ಆ ತರಲೆ, ಅವನಿಗೆ ಏನು ಶಿಕ್ಷೆ ಆಗಿದೆ ? ಯಾರು ಬಂದರೂ ಅಷ್ಟೆ. ಎಲ್ಲಾ 'humbug' ! ಅದನ್ನು ನಿರ್ಧರಿಸುವರು ಬೇರೆ. ನೋಡಿ ನಿಜವಾದ ಬಣ್ಣ ಬಯಲಾಗಬೆಕಾದ್ರೆ ಇಂಥ ಸಂದಿಗ್ದ ಸಮಯದಲ್ಲಿ ಇವರುಗಳು ಹೇಗ್ನಡ್ಕೊತಾರೆ, ಏನು ತೀರ್ಪ್ ಕೊಡ್ತಾರೆ ಅನ್ನೋದ್ರಮೇಲೆ ಅವ್ರು ಎಥವೃ ಅನ್ನೋದ್ ಗೊತ್ತಾಗ್ ಹೊಗುತ್ತೆ. ಅಲ್ವೆ ? ನಿಮಗೆ ಏಕೆ ರಕ್ತದೊತ್ತಡ !
ಇನ್ನೂ ಪ್ರಧಾನಿ ಹುದ್ದೆ ಬಹಳ ಮುಖ್ಯ ನೋಡಿ. ಹೆದರ್ಬೇಡಿ ಎಲ್ಲಾ ಸರಿಹೋಗುತ್ತೆ. ಒಬ್ಬರ ಪ್ರಕಾರ "ನಮ್ಮ ದೇಶನಾ ಯಾರೂ ಅಳ್ತಿಲ್ಲ. ಎಲ್ಲಾ ಆ ಪರಮೇಶ್ವರನ ಇಚ್ಛೆ "!
ಹರಿ ಓಂ ತತ್ಸತ್....ರಾಮ ರಾಮ......Oh Lord, save our country !!
ದನಿ: ರಾಮ್ ರಾಮಾ ಅಲ್ಲ ರಾಮ್ ನಾಮಾ
ಹೇSSS ರಾಮ್, This is India ಎನ್ನುವ ಹಾಡನ್ನು ಒಮ್ಮೆ ಕೇಳಿ ನೋಡಿ. ಈ ಚರ್ಚೆಗೆ ಒಳ್ಳೆಯ ದನಿ ನೀಡುತ್ತದೆ ಆ ಹಾಡು.
Re: ದನಿ: ರಾಮ್ ರಾಮಾ ಅಲ್ಲ ರಾಮ್ ನಾಮಾ
ಕೇಳಿದೆ. ಧನ್ಯವಾದ.