ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ?
ಗೆಳೆಯರೆ,
ಇಂಪಾದ ಹಾಡುಗಳು ಯಾರಿಗೆ ತಾನೇ ತಂಪನೆರೆಯುವುದಿಲ್ಲ. ಈ ಗವನವಾಗಿ ಕೆಲವು ಮಾತುಗಳನ್ನು ಚರ್ಚಿಸೋಣ ಎಂಬ ಹಂಬಲದಿಂದಾಗಿ ಈ ಎಳೆಯನ್ನು ಪ್ರಾರಂಭಿಸುತ್ತಿದ್ದೇನೆ.
ನಮ್ಮ ದೇಶದಲ್ಲಿ ಅದೆಷ್ಟು ಗಾಯಕರು ಇದ್ದಾರೆ. ಇದು ಒಂದು ರೀತಿ ಹೆಮ್ಮೆ ಪಡುವಂತಹ ವಿಷಯವೇ ಹೌದು. ಮುಂದುವರಿಯುತ್ತಾ ಕನ್ನಡ ಸಿನಿಮಾದ ಮಟ್ಟಿಗೆ ಯಾರು ಹೆಚ್ಚು ಸೂಕ್ತ ಎಂಬುದರ ಕುರಿತು ಚರ್ಚಿಸೋಣವೇ. ಇಲ್ಲಿ ಇಷ್ಟವೆಂದು ಹೇಳುವಾಗ ಕೆಲವು ವಿಷಯವನ್ನು ಗಮನದಲ್ಲಿಟ್ಟುಕೊಳ್ಳೋಣ.
೧. ಗಾಯಕರು ಕನ್ನಡ ಮಾತೃಭಾಷೆಯವರೇ ಆಗಿರಬೇಕೆಂದೇನೂ ಇಲ್ಲ, ಆದರೆ ಕನ್ನಡ ಮಾತನಾಡಲು ಅರ್ಥಮಾಡಿಕೊಳ್ಳಲು ಬಂದು, ಕನ್ನಡನಾಡಿನಲ್ಲೇ ಒಂದಾಗಿ ಹೋಗಿರುವವರು.
೨. ಗಾಯಕರಿಗೆ ಕನ್ನಡ ಮಾತನಾಡಲು ಬರದಿದ್ದರೂ, ಕನ್ನಡದ ಸೊಗಡನ್ನು ಅರ್ಥಮಾಡಿಕೊಳ್ಳವರಾಗಿರಬೇಕು. ಅಂದರೆ, ಅ, ಹ, ಲ, ಳ, ಡ, ರ, ನ ಮತ್ತು ಣ ಇವುಗಳ ಸ್ಪಷ್ಟ ಉಚ್ಛಾರವಿರಬೇಕು. ಅಂದರೆ ಚಪ್ಪಾಳೆ ಎನ್ನುವುದಕ್ಕೆ ಚಪ್ಪಾಲೆ ಎನ್ನಬಾರದು.
ಸರಿ ಈಗ ಗಾಯಕರ ಪಟ್ಟಿ ಮಾಡುತ್ತಾ ಹೋಗೋಣ, ಕನ್ನಡದಲ್ಲಿ ಎಷ್ಟು ಗಾಯಕರು ಹಾಡಿದ್ದಾರೆ.
ಹೇಮಂತ್, ಸಿ.ಅಶ್ವತ್ಥ್, ರಾಜೇಶ್ ಕೃಷ್ಣನ್, ಗುರುಕಿರಣ್, ಶಂಕರ್ ಮಹಾದೇವನ್, ಹರಿಹರನ್, ಸೋನು ನಿಗಮ್, ಉದಿತ್ ನಾರಾಯಣ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಯೇಸುದಾಸ್, ಕುನಾಲ್ ಗಾಂಜಾವಾಲಾ ...ಮುಂತಾದವರು. ನಿಮಗೆ ತಿಳಿದಿರುವ ಗಾಯಕರು ಪಟ್ಟಿಯನ್ನೂ ಸೇರಿಸಿರಿ.
ವೈವಕ್ತಿಕವಾಗಿ ಕನ್ನಡದ ಮಟ್ಟಿಗೆ ಉದಿತ್ ನಾರಾಯಣ್ ಹಾಡುವುದು ಅಷ್ಟು ಇಷ್ಟವಾಗುವುದಿಲ್ಲ. ಹಾಗೆಯೇ ಹರಿಹರನ್ ಕೂಡ ಕನ್ನಡಕ್ಕೆ ಅಷ್ಟು ಸರಿಹೊಂದುವುದಿಲ್ಲ ಎಂಬುದು ನನ್ನ ವೈವಕ್ತಿಕ ಅನಿಸಿಕೆ. ಬಹುಶಃ ಹಿಂದೂಸ್ತಾನಿ ಹಿನ್ನೆಲೆಯಿಂದ ಹಾಡುವುದರಿಂದ ಇರಬಹುದು. ಆದರೆ ಅವರು ಹಾಡಿದ, ಎಲ್ಲಿ ಹೋದೆ, ಎಲ್ಲಿ ಹೋದೆ ಎಲ್ಲಿ ಹೋದೆ, ಒ ರಾಗ ವಿರಹದ...ಎಂಬ ಹಾಡು ತುಂಬಾ ಇಷ್ಟವಾಗಿತ್ತು. ಅದು ಬಿಟ್ಟರೆ ಅವರು ಹಾಡಿರುವ ಬೇರೆ ಹಾಡುಗಳು ನೆನಪಿಗೆ ತಕ್ಷಣ ಬರುವುದಿಲ್ಲ. ಗಂಡುಗಲಿ ಕುಮಾರರಾಮ ಚಿತ್ರದಲ್ಲಿರುವ, ಸರಸಕೆ ಬಾರೆS ಸರಸರನೆ... ಹಾಡು ಕೇಳಿದರೆ, ಯಪ್ಪಾ ಹೋಗ್ಲಿ ಬಿಡಿ ನೋ ಕಾಮೆಂಟ್ಸ್.
ಕನ್ನಡದ ಸೊಗಡಿನ ಮಟ್ಟಿಗೆ ಹೇಳುವುದಾದರೆ ನನಗೆ ಹೇಮಂತ್ ಮತ್ತು ಸಿ.ಅಶ್ವತ್ಥ್ ಹಾಡುವುದು ತುಂಬಾ ಇಷ್ಟವಾಗುತ್ತದೆ. ಇಲ್ಲಿ ಹಾಡುವುದು ಎಂದರೆ ಅವರ ಕಂಠ ಕನ್ನಡಕ್ಕೆ ಹೊಂದುವ ರೀತಿಯಲ್ಲಿ.
ಗಾಯಕಿಯರ ಪ್ರಸ್ತಾಪವನ್ನೂ ಮಾಡಬೇಕೆಂದಿದ್ದೆ, ಆದರೆ ಹುಡುಗಿಯರೇ ಏಕೆ ಅದನ್ನು ಮಾಡಬಾರದು ಅಂತ ಸುಮ್ಮನಾದೆ.

- Login or register to post comments
- 774 hits
- Email this forum





RSS:
Re: ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ?
ನನಗೆ ಬಹಳ ಇಷ್ಟ ಆಗೋದು ಸಿ.ಅಶ್ವತ್ಥ್ ಅವರು. ಹಾಡಿಗಿಂತ ಹೆಚ್ಚಾಗಿ ಅವರು ಸಾಹಿತ್ಯಕ್ಕೆ ತುಂಬುವ ಭಾವ ಇದೆಯಲ್ಲ ಅದು ಅವರೊಬ್ಬರಿಗೇ ಸರಿಯೇನೋ? ಪದಗಳಿಗೆ ಭಾವದುಂಬಿ, ಆಯಾ ಸನ್ನಿವೇಶಕ್ಕೆ ತಕ್ಕಂತೆ ಹಿಂಜಿ, ಲಂಬಿಸಿ, ಮೊಟಕಾಗಿಸಿ, ಒತ್ತನ್ನಿತ್ತು ಅವರು ಹಾಡುವ ಪರಿ ಅನನ್ಯ ಅಂತ ನನ್ನನಿಸಿಕೆ. ಉದಾಹರಣೆಗೆ "ಸೋರುತಿಹುದು ಮನೆಯ ಮಾಳಿಗಿ..." ಹಾಡಿನಲ್ಲಿ "ಸೋರುತಿಹುದು" ಪದಕ್ಕೆ ಇತ್ತ ಒತ್ತು, ಅದರ ಭಾವನೆ ಒಮ್ಮೆ ನೆನಪಿಸಿಕೊಳ್ಳಿ.
ಅವರ ನಂತರ ಕನ್ನಡವನ್ನು ಚೆಂದಗೆಡಿಸದೇ ಹಾಡುವವರು, ನನ್ನ ಮಟ್ಟಿಗೆ, ಎಸ್.ಪಿ.ಬಿ ಮತ್ತು ರಾಜೇಶ್ ಕೃಷ್ಣನ್. ಕೆಲವೊಂದು ಭಾವಗೀತೆಗಳಿಗೆ (ಎಲ್ಲದಕ್ಕೂ ಅಲ್ಲ) ರಾಜು ಅನಂತಸ್ವಾಮಿ ಅವರ ಕಂಠ ಕೂಡಾ ಒಪ್ಪುತ್ತೆ.
ಉದಿತ್ ನಾರಾಯಣ್, ಕುನಾಲ್ ಇವರೆಲ್ಲರ ಕನ್ನಡ ಹಾಡುಗಳು ದೇವರಾಣೆಗೂ ನನಗಂತೂ ರೇಜಿಗೆ ಹುಟ್ಟಿಸುತ್ತವೆ. "ನೀನೆ ನೀನೆ..ನನಗೆಲ್ಲಾ ನೀನೇ.." ಎಂಬ ಸುಂದರ ಹಾಡಿನಲ್ಲಿ ಕನ್ನಡ ನಲುಗಿರುವ ಪರಿಯನ್ನು ಕೇಳಿಯೇ ಅನುಭವಿಸಬೇಕು (ಅಂತ ನನ್ನ ಅನಿಸಿಕೆ)! ಆದರೆ ಹರಿಹರನ್ ಇದ್ದಿದ್ದರಲ್ಲಿ ವಾಸಿ (ಕನ್ನಡಕ್ಕೆ) ಅಂತನ್ನಿಸುತ್ತೆ.
ವೈಯಕ್ತಿಕವಾಗಿ ನನಗೆ ನಾರಾಯಣ ಮತ್ತು ಶಿವಮೊಗ್ಗ ಸುಬ್ಬಣ್ಣ ಅವರು ಕೂಡ ಇಷ್ಟ ಆಗುತ್ತಾರೆ. ನಾರಾಯಣ ಅವರನ್ನು ಸದಾ ನೆನಪಿನಲ್ಲಿಟ್ಟುಕೊಳ್ಳೋದಕ್ಕೆ ಅವರ "ಕೇಳೇ ಶುಕಭಾಷಿಣಿ.." ಹಾಡೊಂದೇ ಸಾಕು ಅಲ್ಲವಾ? ಅವರು ಮತ್ತು ಶಿವಮೊಗ್ಗ ಸುಬ್ಬಣ್ನ ಈಗೀಗ ಹೆಚ್ಚು ಹಾಡುತ್ತಿಲ್ಲ ಅನ್ನುವುದು ನಮ್ಮ ದೌರ್ಭಾಗ್ಯ.
ಇನ್ನು ಗಾಯಕಿಯರ ಪಟ್ಟಿ ಹುಡುಗಿಯರೇ ಮಾಡಲಿ ಅಂತ ಸುನೀಲ್ ಸುಮ್ಮನಾಗಿರುವಾಗ, ಸುಮ್ಮನಿರಲಾರದೆ ಪಟ್ಟಿ ಮಾಡಿ ನಾನೇಕೆ ನಿಷ್ಠೂರವಾಗಲಿ?
- ಶ್ಯಾಮ್ ಕಿಶೋರ್
ಉ: Re: ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ?
ಕನ್ನಡದಲ್ಲಿ ಕನ್ನಡಿಗರಲ್ಲದ ಗಾಯಕರು ಹಾಡುವುದರಲ್ಲಿ ತಪ್ಪು ಮಾಡಬಹುದು ಆದರೆ ಅವರ ಪ್ರಯತ್ನಕ್ಕೆ ನಾವು ಮೆಚ್ಚಲೇಬೇಕು.
ಕನ್ನಡಿಗರಿಗೆ ಸ೦ಪೂರ್ಣವಾಗಿ ಕನ್ನಡ ಬ೦ದರು ತಪ್ಪು ಮಾಡದಿದ್ದರು ಭಾವದಲ್ಲಿ ನೂನ್ಯತೆ ಇದೆ ಅ೦ತಾ ನನ್ನ ಅನ್ಸಿಸಿಕೆ.
ಮು೦ರಾರು ಮಳೆ ಸೋನು "ಅನಿಸುತಿದೆ" ಇನ್ನು ಮರೆತಿಲ್ಲ
ಸೋನು ಸ್ವತಹ ಎ ಹಾಡನ್ನು ಮೆಚ್ಚಿ ಹಿ೦ದಿಗೆ ಅನುವಾದ ಮಾಡಿ ಒ೦ದು ಶೊ ದಲ್ಲಿ ಹಾಡಿದ್ದಾರೆ.
ನಿಮಗೆ ಈ ಹಾಡು ಬೇಕಿದ್ದರೆ ನನಗೆ ಮೇಲ್ ಮಾಡಿ anantshayan@gmail.com
ಸೋನು ಒಳ್ಳೆಯ ಗಾಯಕ. ಕುನಾಲ ಇಗ ಕನ್ನಡಕ್ಕೆ ಬೇಕಾಗಿರುವ ಗಾಯಕ.
ಕನ್ನಡಿಗರು ಮು೦ದೆ ಬರುವ ದಿನಗಳಲ್ಲಿ ನಿಜವಾಗಿಯು ಬರಲ್ಲಿದ್ದರೆ.
Re: ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ?
ನನಗೆ ಕನ್ನಡದಲ್ಲಿ brayn adams, britney, enrique, ಇವರೂ ಹಾಡಲಿ ಅಂತ ಆಸೆ. ಹೊರಗಿನವರಲ್ಲಿ ನನಗೆ ಕುನಾಲ್ ಗಾಂಜಾವಾಲ ಕೊರಲು ಇಷ್ಟ. ನಾಡಿನವರೇ ಆದ, ಎಂ.ಡಿ.ಪಲ್ಲವಿ, ಅಶ್ವತ್, ಹೇಮಂತ್, ರತ್ನಮಾಲ,ಶಿವಮೊಗ್ಗ ಸುಬ್ಬಣ್ಣ, ರಮೇಶ್ ಚಂದ್ರ, ರಾಜೇಶ್ ಇವರ ಕೊರಲು ಇಷ್ಟ.
Re: ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ?
ಎನಗಿಂತ ಕಿರಿಯರಿಲ್ಲ
Re: ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ?
ಇತ್ತೇಚೆಗೆ ಹೊರಗಿನಿಂದ ಬಂದವರಲ್ಲಿ ಕುನಾಲ್ ಗಾಂಜಾವಾಲ ಪರ್ವಾಗಿಲ್ಲ..ಅವರ ಉಚ್ಛಾರಣೆಯಲ್ಲಿ ತಪ್ಪಿರಬಹುದು..ಆದರೆ ಅವರ ಧ್ವನಿ(sound) ಕನ್ನಡಕ್ಕೆ ಹೊಸತು..ಕುಮಾರ್ ಶಾನು ಮತ್ತು ಉದಿತ್ ನಾರಾಯಣ್ ಹಿಂದಿಯಲ್ಲೇ ಇಷ್ಟವಾಗೊಲ್ಲ..ಇನ್ನು ಕನ್ನಡದಲ್ಲಿ ಬಿಡಿ, ಹೇಳದಿರುವುದೇ ವಾಸಿ!
ರಾಜೇಶ್ ಕೃಷ್ಣನ್ ಒಬ್ಬ ಒಳ್ಳೆಯ ಗಾಯಕ.. ಸಿ ಆಶ್ವಥ್ ಹೇಗೂ ಇದ್ದಾರೆ..
ಉ: ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ?
ಈಗಿನ ಗಾಯಕಿಯರಲ್ಲಿ ನನಗೆ ಮೊದಲು ಚಿತ್ರ ಇಷ್ಟ. ಮಲಯಾಳಿ ಅಥವ ತಮಿಳಿನವರಿರಬಹುದು. ಆದರೆ ಎಂತಹ ಸಿಹಿ ಕನ್ನಡ ಉಚ್ಚಾರಣೆ! ಗಾಳಿಪಟ ಚಿತ್ರದ ನಧೀಂ ಧಿಂ ತನ ಹಾಡು ಕೇಳಿದರೆ ಸಾಕು ಮೈ ನವಿರೇಳುತ್ತೆ.
ಸುಪ್ರಿಯ ಆಚಾರ್ಯ ಪಕ್ಕಾ ಕನ್ನಡಾಭಿಮಾನಿ ಮತ್ತು ಸೊಗಸಾದ ಹಾಡುಗಾರ್ತಿ. ನೀ ಅಮೃತಧಾರೆ ಕೇಳಿರಬಹುದು. ಅದರಲ್ಲಿ ಹರೀಶ್ ಸರಳವಾಗಿ ಹಾಡಿದರೆ, ಸುಪ್ರಿಯ ಬಹಳಷ್ಟು variations ಕೊಟ್ಟು ಹಾಡಿದ್ದಾರೆ.
ಶ್ರೇಯ ಘೋಷಲ್ ದಿನೇ ದಿನೇ ಕನ್ನಡದಲ್ಲಿ improvement ತೋರಿಸುತ್ತಿದ್ದಾರೆ. ಅವರ ಅರಳುತಿರುಗಿಂತ, ಮಳೆ ನಿಂತು ಹೋದ ಮೇಲೆಯಲ್ಲಿ ಒಳ್ಳೆಯ ಉಚ್ಚಾರಣೆ ಇದೆ.
ಸುನೀಧಿ ಚೌಹಾನ್ ಹಿಂದಿಯಲ್ಲೇ ಇದ್ದರೆ ಉತ್ತಮ. ನಮ್ಮ ಚೈತ್ರ ಅವಳಿಗಿಂತ ಬೊಂಬಾಟಾಗಿ item song ಹಾಡ್ತಾಳೆ.
ನಂದಿತಾ ನನಗೇನು ಅಷ್ಟು ಇಷ್ಟವಿಲ್ಲ, ಒಂಥರ ಕಳ್ಳ ಧ್ವನಿಯಲ್ಲಿ ಉಲಿದ ಹಾಗನ್ನಿಸತ್ತೆ.
ಇನ್ನೂ ತುಂಬ ಗಾಯಕಿಯರು ಇದ್ದಾರೆ ಗೊತ್ತು, ಆದರೆ ನನಗೆ ಅವರ ಬಗ್ಗೆ ಬರೆಯಬೇಕೆನಿಸುತ್ತಿಲ್ಲ
ಉ: ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ?
ಕಲ್ಪನಾರವರೆ... ಅಂತೂ ನೀವು ಮಹಿಳಾಮಣಿಗಳ ಇರುವಿಕೆಯನ್ನು ಇಲ್ಲೂ ತೋರ್ಪಡಿಸಿರೋದಕ್ಕೆ ತುಂಬಾ ದನ್ಯವಾದಗಳು..
ನನ್ನ ಪ್ರಕಾರ.. ಮಹಿಳೆಯರು-ಗಾಯಕರ ಬಗ್ಗೆ ಬರೆಯಬೇಕು ಹಾಗೂ ನಾವು ಗಂಡುಗಲಿಗಳು-ಗಾಯಕಿಯರ ಬಗ್ಗೆ... ಏನಂತೀರಾ..
ಗಾಯಕಿಯರಲ್ಲಿ...ನನಗೆ ಇಷ್ಟ ಆಗೋರು...ಸಂಗೀತಾ ಕಟ್ಟಿ, ಚಿತ್ರ,ಶ್ರೇಯಾ..ಕೆಲವೊಂದು ಭಾವಗೀತೆಗಳಲ್ಲಿ.. ಛಾಯಾ ಹಾಗೂ ರತ್ನಮಾಲಾ ಪ್ರಕಾಶ್ ಕೂಡ ಇಷ್ಟ ಆಗ್ತಾರೆ
ಮೈಸೂರು ಮಲ್ಲಿಗೆಯ ರಾಯರು ಬಂದರು ಮಾವನ ಮನೆಗೆ ಹಾಡನ್ನ ಹ್ಯಾಗ್ ಮರೆಯೊಕಾಗತ್ರೀ..
ಗಾಯಕರು..ಬಾಲು ತುಂಬಾ ಇಷ್ಟ. ಭಾವನೆಗಳನ್ನ ತುಂಬೊದ್ರಲ್ಲಿ ನಮ್ಮ ಅಣ್ಣಾವ್ರು ಏನ್ ಕಮ್ಮಿ ಇಲ್ಲ.
ಇವರ್ನೆಲ್ಲಾ ಬಿಟ್ರೆ...............
ನಾನೆ
ಚಿ.ರಂ.ಶಿ.
------------------------------------------------------
ನೀನು ಅವನ ಸ್ಥಾನದಲ್ಲಿ ಯೋಚಿಸಿದರೆ, ಜಗಳಕ್ಕೆಲ್ಲಿದೆ ಜಾಗ???
ಉ: ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ?
ಬರೀ ಸಿನಿಮ ಹಾಡುಗಾರೇ ಹಾಡುಗಾರೇ?
ಸಿನಿಮ ಬಿಟ್ಟು ನೋಡಿ, ನಾವ್ ಕಂನಡದೋರು ಮಸ್ತ ಹಾಡ್ತೀವಿ...
ಕನ್ನಡ ಮಂದಿಗ್ ಸಿನಿಮ ಅಂದ್ರೆ ಅಶ್ಟಕ್ಕಶ್ಟೆ!! ನಮಗೇನ್ ಅಂತ್ಹಾ ಪರಿ ಸಿನಿ-ಹುಚ್ಚಿಲ್ಲ..!!!
=====================================
ಮಾಯ್ಸ!