ಮುಂಗಾರು ಮಳೆ
ನಾನು ಇತ್ತೀಚೆಗೆ ನೋಡಿದ ಚಿತ್ರಗಳಲ್ಲಿ ತುಂಬಾ ಹಿಡಿಸಿದ ಚಿತ್ರ ಮುಂಗಾರು ಮಳೆ. ಒಂದು ಸಣ್ಣ ಪ್ರೀತಿಯ ಎಳೆಯನ್ನು ಹಿಡಿದು ಎಂಥ ಸೊಗಸಾದ ದೃಶ್ಯಕಾವ್ಯವನ್ನು ಸೃಷ್ಟಿಸಿದ್ದಾರೆ ನಮ್ಮ ಯೋಗರಾಜಭಟ್ಟರು.
ಚಿತ್ರಕಥೆ,ಹಾಡು,ನಟನೆ,ಛಾಯಾಗ್ರಹಣ ಎಲ್ಲವೂ ಅದ್ಭುತ.ಗಣೇಶ್ ಅಷ್ಟು ಚೆನ್ನಾಗಿ ನಟಿಸಬಲ್ಲರೆಂದು ನಾನು ನಿರೀಕ್ಷಿಸಿರಲಿಲ್ಲ.ಆದರೆ ಮುಂಗಾರು ಮಳೆ ಅವರ ಪ್ರತಿಭೆಗೆ ಸಾಕ್ಷಿ.
ಇದರಲ್ಲಿ ಜೋಗದ ತುದಿಯಲ್ಲಿ ಒಂದು ಸನ್ನಿವೇಶವಿದೆ.ಬಹುಶಃ ಇದುವರೆಗೆ ಯಾರೂ ಜೋಗದ ಸಿರಿಯನ್ನು ಆ ಕೋನದಿಂದ ಚಿತ್ರೀಕರಿಸಿರಲಿಕ್ಕಿಲ್ಲ.ಅಷ್ಟು ಅದ್ಭುತವಾಗಿದೆ ಕ್ಯಾಮರ ಕೈಚಳಕ.
ನೀವೊಬ್ಬ ನಿಸರ್ಗ ಪ್ರೇಮಿಯಾಗಿದ್ದಲ್ಲಿ, ಪ್ರೇಮ ಕಥೆಗಳನ್ನು ಇಷ್ಟ ಪಡುವಂಥವರಾದರೆ ಖಂಡಿತ ಮುಂಗಾರು ಮಳೆ ನೋಡಿ. ನಿಮಗೆ ನಿರಾಶೆಯಾಗದು.

- Login or register to post comments
- 1052 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಮುಂಗಾರು ಮಳೆ
ಸೋನು ನಿಗಮ್ ಹೇಳಿರುವ ಹಾಡುಗಳು ಎರಡೂ ಚೆನ್ನಾಗಿವೆ. ಆದರೆ ಸುನಿಧಿ ಚೌಹಾನ್ ಧ್ವನಿ ಸೇರಿಸಿರೋ ಈ ಹಾಡು ಕೇಳಿ ನಕ್ಕೂ ನಕ್ಕೂ ಸುಸ್ತಾಯ್ತು! (ಸ್ವಲ್ಪ ಗಾಬರಿಯೂ ಆಯ್ತು)
ಆ Lyrics ಸುನಿಧಿ ಚೌಹಾನ್ ಬಾಯಲ್ಲಿ ಹೀಗೆ ಸಾಗುತ್ತದೆ:
(ಗಮನಿಸಿ: ಸ್ಪೆಲ್ಲಿಂಗ್ ಮಿಸ್ಟೇಕ್ ಅಲ್ಲ - ಅವಳು ಹೇಳೋದು ಹಾಗೆಯೇ, ಕೇಳಿ ನೋಡಿ - 0:56 ಗೆ ಸರಿಯಾಗಿ ಫಾರ್ವರ್ಡ್ ಮಾಡಿ ಕೇಳಿ)
*******
ಕನ್ನಡತಿಯರಾದ ಗಾಯಕಿ ವಸುಂಧರಾ ದಾಸ್ ಮತ್ತಿತರು ಕನ್ನಡದ ಹಾಡುಗಳನ್ನು ಸುಂದರವಾಗಿ ಹೇಳುತ್ತಾರೆ - ಅವರುಗಳನ್ನೇ ಉಪಯೋಗಿಸಿಕೊಳ್ಳಬಹುದು ನಮ್ಮ ಕನ್ನಡದ ಸಿನಿಮಾದವರು ಅಂದುಕೊಳ್ಳುತ್ತೇನೆ
ಇಂದು ಡಿಸ್ಕವರಿ ಟ್ರಾವೆಲ್ and ಲಿವಿಂಗ್ ನಲ್ಲಿ ವಸುಂಧರಾ ದಾಸ್ anchor ಮಾಡಿದ ಒಂದು ಕಾರ್ಯಕ್ರಮ ಬರುತ್ತಿತ್ತು. ಅದರಲ್ಲಿ ವಸುಂಧರಾರವರು ಕನ್ನಡದ ಹೆಸರುಗಳಾದ "ಹೆಸರು ಘಟ್ಟ" "ಮಾವಳ್ಳಿ" ಇವುಗಳನ್ನೆಲ್ಲ ಸ್ವಚ್ಚವಾಗಿ ಉಚ್ಚರಿಸಿದ್ದು ಕೇಳಿ ಖುಷಿಯಾಯ್ತು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಗುಡುಗು ದನಿ: ಮುಂಗಾರು ಮಳೆ
ಉಗಿರಿ ಮಕ್ಕೆ.
ಈ ಳ->ಲ ಯಪ್ಪಾ ಎಲ್ಲಾ ಹಾಡುಗಳಲ್ಲೂ ಗಬ್ಬುನಾತ ಬೀರುತ್ತಲೇ ಇದೆ.
ಸೋನೂ ನಿಗಮ್ ಕೂಡ ಹೀಗೆಯೇ ಆದರೆ ಸ್ವಲ್ಪ ಪರವಾಗಿಲ್ಲ ಅಷ್ಟೇ. ನಿನ್ನ ಮುಗಿಲ ಸಾಲೇ, ಧರೆಯ ಕೊರಳ ಪ್ರೇಮದ ಮಾಲೆ, ಸುರಿವ ಒಲುಮೆಯಾಜಡಿ ಮಲೆಗೆ ಪ್ರೀತಿ ಓಡಿದೆ..
ಆದರೆ ಒಂದು ಮಾತು ಹೇಳಲೇ ಬೇಕು, ಚಿತ್ರದ ಸಂಗೀತ ತುಂಬಾ ಇಂಪಾಗಿದೆ. ಮನೋ ಮೂರ್ತಿಯದು.
ಇಷ್ಟೇ ಅಲ್ಲ, ಶಂಕ್ರು(ಶಂಕರ್ ಮಹಾದೇವನ್) ಕೂಡ ಹಣತೆಯ ಅಡಿಯಲ್ಲೇ ಹಾಡಿನಲ್ಲಿ ಹೀಗೆ ಕಲ್ಲರಲೀ ಹೂವಾಗಿ ಅಂತ ಕೆಟ್ಟದಾಗಿ ಹಾಡಿದ್ದಾರೆ(ಸಮಯ ೦:೨೫ರ ಹತ್ತಿರ).
ಉ: ಗುಡುಗು ದನಿ: ಮುಂಗಾರು ಮಳೆ
ಓಹ್, ತಮಿಳಲ್ಲೂ ಳ ಇಲ್ವಾ?
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಉ: ಗುಡುಗು ದನಿ: ಮುಂಗಾರು ಮಳೆ
ಅಯ್ಯೋ ಹರಿ, ತಮಿಳಿನಲ್ಲಿ 'ಳ'ನೂ ಇದೆ, ದೊಡ್ಡ 'ಳ'ನೂ ಇದೆ, 'ಲ'ನೂ ಇದೆ. ಆದರೆ ಕನ್ನಡದಲ್ಲಿ ಏನಪ್ಪಾ ಅಂದರೆ ದೊಡ್ಡ 'ಳ' ಯಾವಾತ್ತೋ ಕಿತ್ತು ಹೋಯಿತು, ಚಿಕ್ಕ 'ಳ' ಮತ್ತು 'ಲ' ಉಳಿದುಕೊಂಡಿದೆ. ಈಗೀಗ ನಾವುಗಳು 'ಳ'ವನ್ನು 'ಲ'ವಾಗಿ ಹೇಳುತ್ತಿದ್ದೇವೆ. ಸಂಪದದಲ್ಲೇ ದೊಡ್ಡ ಚರ್ಚೆ ನಡೆದಿತ್ತಲ್ಲ. ಗುಲಾಬಿ - ಗುಳಾಬಿ - ಕನ್ನಡ - ತುಳು - ಯಾಜಮಾನ್ಯ ಹೀಗೆ
.
ಈ ಳ->ಲ ಒಳ್ಳೆಯದೋ ಕೆಟ್ಟದ್ದೋ ಹೇಳುವುದು ಕಷ್ಟ. ಏಕೆಂದರೆ ಈಗ ನಾವು ಮಾತನಾಡುವ ಕನ್ನಡವೂ ಈ ಬದಲಾವಣೆಗೆ ಹೊರತಲ್ಲ. ಹಿಂದೆ ಳ ಆಗಿ ಬಳಸುತ್ತಿದ್ದ ಎಷ್ಟೋ ಪದಗಳನ್ನು ಈಗ ನಾವು ಲ ಆಗಿ ಬಳಸುತ್ತಿದ್ದೇವೆ.
ನಾನೇನು ಪಂಡಿತನಲ್ಲ, ಆದರೆ ನಾನು ಓದಿದ್ದನ್ನು ಹೇಳುತ್ತಿದ್ದೇನೆ, ಕವಿರಾಜಮಾರ್ಗದಲ್ಲಿ ಮಾರ್ಗಕಾರನು ಕಲೆಯನ್ನು ಕಳಾ ಆಗಿಯೂ ಆಲಾಪವನ್ನು ಆಳಾಪವಾಗಿಯೂ ಬಳಸಿದ್ದಾನೆ . ಇಂತಹ ಎಷ್ಟೋ ಬಳಕೆಗಳು ಕವಿರಾಜಮಾರ್ಗದಲ್ಲಿಯೇ ಸಿಗುತ್ತವೆ.
ಬಹುಶಃ ಒಂದು ಕಾಲಘಟ್ಟದಲ್ಲಿ ಕೆಲವರು ಆಳಾಪವನ್ನು ಆಲಾಪ ಎಂದಾಗ, ಆಗಿನವರು ಅಯ್ಯೋ ಅದು ಲ ಅಲ್ಲ ಳ ಅಂತ ವ್ಯಥೆ ಪಟ್ಟುಕೊಳ್ಳುತ್ತಿದ್ದರು ಅಂತ ಕಾಣತ್ತೆ.
Re: ಉ: ಗುಡುಗು ದನಿ: ಮುಂಗಾರು ಮಳೆ
ನಾನು ಬರೆದದ್ದು ತಮಾಷೆಗೆ. ಶಂಕರ್ ಮಹಾದೇವನ್ ಳ ಸರಿಯಾಗಿ ಉಚ್ಚರಿಸುವುದಿಲ್ಲ ಎಂದು ಕೇಳಿ ಆಶ್ಚರ್ಯವಾಯ್ತು. "ಶ" ಸರಿಯಾಗಿ ಉಚ್ಚರಿಸುವುದಿಲ್ಲ ಎಂದರೆ ಅರ್ಥ ಮಾಡಿಕೊಳ್ಳಬಹುದು. ತಮಿಳುನಾಡಿನಲ್ಲಿ ವಿಜಯದಶಮಿಗೆ 'ವಿಜಯದಸಮಿ', ಶಶಿ ಅನ್ನೋಕೆ 'ಸಸಿ' ಅಂತೆಲ್ಲಾ ಹೇಳ್ತಾರೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಉ: ಗುಡುಗು ದನಿ: ಮುಂಗಾರು ಮಳೆ
ಅಯ್ಯೋ ಬಿಡಿ.ನಮ್ಮ ಕನ್ನಡ ಸಿನಿಮಾ ನಿರ್ದೇಶಕರು ಏಳೇಳು ಜನುಮಕ್ಕೂ ಬುದ್ಧಿ ಕಲಿಯುವುದಿಲ್ಲ.ಎಸ್‍ಪಿಬಿ,ರಾಜೇಶ್,ಹೇಮಂತ್ ಮುಂತಾದ ಸ್ಪಷ್ಟ ಕನ್ನಡ ಉಚ್ಚಾರಣೆಯ ಗಾಯಕರನ್ನು ಬಿಟ್ಟು ಕೆಟ್ಟದಾಗಿ ಹಾಡುವ ಹಿಂದಿ ಗಾಯಕರಿಗೆ ಮಣೆ ಹಾಕುತ್ತಾರೆ.
Re: ಗುಡುಗು ದನಿ: ಮುಂಗಾರು ಮಳೆ
ಏನೋಪ್ಪಾ, ನಾನ್ ಕೇಳೋವಾಗ ಸೋನು ನಿಗಮ್ 'ಳ' ನ 'ಳ' ನೇ ಅಂತಾನೆ. ಅವನ ದನಿಯಲ್ಲೇನೋ ಮಾದಕತೆ ಇದೆ,
ಭಾವವನ್ನ ಅವ ತುಂಬಿ ಹಾಡೋ ಬಗೆ ಯಾರಿಗೂ ಬರೊಲ್ಲಾ ಬಿಡಿ. ಹಾಡೋ ನೆಪದಲ್ಲಾದರೂ ಈ ನಾರ್ಥಿಗಳು ಕನ್ನಡ ಕಲೀಲಿ ಬಿಡಿ.