Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ತತ್ವಜ್ಞಾನ

ಈ ವಚನದ ಅರ್ಥ ಹೇಳಿ ನೋಡೋಣ

January 8, 2007 - 10:11pm — kesari

ಈ ವಚನದ ಭಾವಾರ್ಥ ಹೇಳಿ ನೋಡೋಣWink

ಕರೆಯದೆ ಬರುವವನ
ಬರಿಗಾಲಲ್ಲಿ ನಡೆಯುವವನ
ಬರೆಯದೆ ಓದುವವನ
ಕರೆತಂದು ಕೆರದಲ್ಲಿ ಹೊಡೆಯೆಂದ ಸರ್ವಜ್ಞ

(ಇದನ್ನು ನಾನು ನೆನಪಿನಿಂದ ಬರೆಯುತ್ತಿರುವುದರಿಂದ ಕೆಲವು ಪದಗಳು ಬೇರೆಯಾಗಿರಬಹುದು)

‹ ಸಂನ್ಯಾಸಿಯೊಂದಿಗೆ ಸಂವಾದ ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್ ›
  • ತತ್ವಜ್ಞಾನ
Ornamental seperator
  • Login or register to post comments
  • 737 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 9, 2007 - 12:01am — Shyam Kishore

ಉತ್ತರ: ಅರ್ಥ: ಈ ವಚನದ ಅರ್ಥ ಹೇಳಿ ನೋಡೋಣ

Shyam Kishore's picture

ನನಗೆ ತಿಳಿದಂತೆ ಇದರ ಅರ್ಥ:

ಬರಿಗಾಲಲ್ಲಿ ನಡೆಯುದು ಆರೋಗ್ಯದ ದೃಷ್ಟಿಯಿಂದ ಹೇಗೆ ಒಳ್ಳೆಯದಲ್ಲವೋ ಹಾಗೆಯೇ ದಾರಿದ್ರ್ಯದ ಸಂಕೇತ ಕೂಡಾ.

ಹತ್ತು ಬಾರಿ ಓದುವುದಕ್ಕಿಂತ ಒಮ್ಮೆ ಬರೆದರೆ ಸಾಕು ಅದು ಮನಸ್ಸಿನಲ್ಲಿ ಗಟ್ಟಿಯಾಗಿ ಊರುತ್ತದೆ. ಹಾಗೆ ಮಾಡದೇ ಬರಿದೆ ಓದುವುದು (ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು) ವ್ಯರ್ಥ.

ಕರೆಯದೇ ಬರುವವನ ಬಗ್ಗೆ ಹಲವು ಜಿಜ್ಞಾಸೆಗಳಿವೆ ಅಂತ ಓದಿದ ನೆನಪು. ಇದು ನೇರವಾಗಿ ಅಭ್ಯಾಗತರನ್ನು ಕುರಿತು ಹೇಳಿದ್ದಲ್ಲ. ಕರೆಯದೇ ಮಧ್ಯೆ ಮೂಗು ತೂರಿಸುವವನು ಎಂದೂ ಅರ್ಥೈಸಬಹುದು.

ಇಂಥವರನ್ನು (ಮೇಲಿನ ಮೂರೂ ಗುಂಪಿನ ಜನರನ್ನು) "ಕರೆದು ಕೆರದಲ್ಲಿ ಹೊಡೆ" ಎಂದರೆ ಅಕ್ಷರಶಃ ಕೆರದಲ್ಲಿ ಹೊಡೆಯುವುದು ಅನ್ನುವುದಕ್ಕಿಂತ ಅವಮಾನಿಸು ಎಂಬರ್ಥದಲ್ಲಿ ತೆಗೆದುಕೊಳ್ಳಬಹುದು.

- ಶ್ಯಾಮ್ ಕಿಶೋರ್

  • Login or register to post comments
  • link
  • Email this ಪ್ರತಿಕ್ರಿಯೆ
September 21, 2007 - 1:52pm — ಶ್ರೀನಿವಾಸ ವೀ. ಬ೦ಗೋಡಿ

ಉ: ಉತ್ತರ: ಅರ್ಥ: ಈ ವಚನದ ಅರ್ಥ ಹೇಳಿ ನೋಡೋಣ

ಶ್ರೀನಿವಾಸ ವೀ. ಬ೦ಗೋಡಿ's picture

Shyam Kishore wrote:
ಬರಿಗಾಲಲ್ಲಿ ನಡೆಯುವವನ - ಬರಿಗಾಲಲ್ಲಿ ನಡೆಯುದು ಆರೋಗ್ಯದ ದೃಷ್ಟಿಯಿಂದ ಹೇಗೆ ಒಳ್ಳೆಯದಲ್ಲವೋ ಹಾಗೆಯೇ ದಾರಿದ್ರ್ಯದ ಸಂಕೇತ ಕೂಡಾ

ಇದು ಏಕೋ ನನಗೆ ಸರಿಯೆನ್ನಿಸುತ್ತಿಲ್ಲ. ನಮ್ಮಲ್ಲಿ ಎಷ್ಟೋ ಜನ ಬರಿಗಾಲಲ್ಲಿಯೇ ನಡೆಯುತ್ತಾರೆ. ಕೆಲವು ಸನ್ಯಾಸಿಗಳು, ಜೈನ ಮುನಿಗಳು ಬರಿಗಾಲಲ್ಲಿಯೇ ನಡೆಯುತ್ತಾರೆ. ಇದಕ್ಕೆ ಒಳಾರ್ಥ ಬೇರೆ ಏನಾದರೂ ಇದೆಯೆ?

  • Login or register to post comments
  • link
  • Email this ಪ್ರತಿಕ್ರಿಯೆ
January 10, 2007 - 7:03pm — kesari

Re: ಈ ವಚನದ ಅರ್ಥ ಹೇಳಿ ನೋಡೋಣ

kesari's picture

ಈ ವಚನದ ಮುಖ್ಯ ಭಾಗ "ಬರೆಯದೆ ಓದುವವನ ಕರೆತಂದು ಕೆರದಲ್ಲಿ ಹೊಡೆ" ಎಂಬುದು.

ನನಗೆ ಜ್ಞಾನೋದಯವಾದಂತೆ ಇದರ ಅರ್ಥ ಹೀಗಿದೆ:

ವಾಲ್ಮೀಕಿ ರಾಮಾಯಣವು ರಾಮನು ಅಯೋಧ್ಯೆಗೆ ಮರಳುವುದರೊಂದಿಗೆ ಮುಗಿಯುತ್ತದೆ. ಉತ್ತರ ಕಾಂಡವನ್ನು ನಂತರ ಸೇರಿಸಲಾಗಿದೆ. ಶಬರಿಯ ಕೈಯಿಂದ ಹಣ್ಣು ತಿನ್ನುವ ರಾಮನೆಲ್ಲಿ, ಶೂದ್ರ ತಪಸ್ವಿಯನ್ನು ಕೊಲ್ಲುವ ರಾಮನೆಲ್ಲಿ. ಅನೇಕ ಧರ್ಮ ಗ್ರಂಥಗಳನ್ನು ಕೆಲವು ಕಪ್ಪುತಲೆಯ ಪುರೋಹಿತಶಾಹಿಗಳು ತಿದ್ದಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದರು. ಆದ್ದರಿಂದ ಸರ್ವಜ್ಞನು ಧರ್ಮ ಗ್ರಂಥಗಳಲ್ಲಿ ಬರೆಯದೆ ಇರುವುದನ್ನು ಪಠಿಸಿ ಮಡಿ ಮೈಲಿಗೆ ಎಂದೆಲ್ಲ ಕತೆಕಟ್ಟಿ ಹೇಳುವವರನ್ನು ಅವಮಾನಿಸಿ/ ಶಿಕ್ಷಿಸಿ ಎಂದು ಹೇಳಿದ್ದಾನೆ. ಮನುಸ್ಮೃತಿಗೂ ಇದು ಅನ್ವಯವಾಗುತ್ತದೆ.

ಸರ್ವಜ್ಞನ ಕಾಲದಲ್ಲೇ ಅವನ ಮಾತನ್ನು ಕೇಳಿದ್ದರೆ ಇಂದು ತಥಾಕಥಿತ ಬುದ್ಧಿಜೀವಿಗಳ ಮತ್ತು ಆಧ್ಯಾತ್ಮಿಕತೆ ಕಡಿಮೆ ರಾಜಕೀಯವೇ ಹೆಚ್ಚಾಗಿರುವ ಮತಗಳ ದಾಳಿಯನ್ನು ಸನಾತನ ಧರ್ಮ ಎದುರಿಸಬೇಕಾಗಿರಲಿಲ್ಲ.

-----

hinduwisdom

ನನ್ನ ಬ್ಲಾಗ್

  • Login or register to post comments
  • link
  • Email this ಪ್ರತಿಕ್ರಿಯೆ
January 10, 2007 - 9:01pm — venkatesh

Re: ಈ ವಚನದ ಅರ್ಥ ಹೇಳಿ ನೋಡೋಣ

venkatesh's picture

ಸರ್ವಜ್ಞನ ಎಲ್ಲಾ ಹೇಳಿಕೆಗಳೂ ಸರಿಯೆಂದು ಯಾರು ಹೇಳಿದರು ?

'ಎಲ್ಲರಿಂದ ಒಂದೊಂದು ನುಡಿಗಲಿತು ವಿದ್ಯೆಯ ಪರ್ವತವೆ ಆದ ಸರ್ವಜ್ಞ '!

ಅವನ ನಿಲವು , ಉದಾ : ಸ್ತ್ರೀಯರ ಬಗ್ಗೆ, ನಿಜವಾಗಿಯೂ ಚರ್ಚಾಸ್ಪದಕ್ಕೆ ದಾರಿ ಮಾಡಿಕೊಟ್ಟಿದೆ. ಏನೊ ಆಗಿನ ಕಾಲಕ್ಕೆ, ವಿದ್ಯಾ ಪ್ರಸಾರದ ಪರಿಕರಗಳಿಲ್ಲದ ಒಂದು ಕಾಲದಲ್ಲಿ, ಸ್ಮೃತಿಯಿಂದಲೇ ಬಹುತೇಕ ಕಾವ್ಯರಚನೆಗಳು ಆಯಿತು ! ಸರ್ವಜ್ಞ, ಆ ತರಹದ ಕಾಲದ ಒಬ್ಬ ದಾರ್ಶನಿಕ ! ಕೆಲವು ಅವನ ಅಭಿಪ್ರಾಯಗಳು ಸಾರ್ವತ್ರಿಕ ವಾಗಬೇಕಾಗಿಲ್ಲ. ಕೆಲವು ಆಗಿವೆ. ಬಹುಪಾಲು ಒಳ್ಳೆಯ ಅನುಭವದ ನುಡಿಗಳಿವೆ; ಅವನ ಬತ್ತಳಿಕೆಯಲ್ಲಿ- ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ ! ಅಷ್ಟೆ !

'ಸಂಪದ' ದಲ್ಲಿ ನಾನು ಸರ್ವಜ್ಞ ನ ಮೇಲೆ ಒಂದು ಲೇಖನ ಸಂಗ್ರಹಿಸಿ ಬರೆದಿದ್ದೆ. ಅದರಲ್ಲಿ ಕೆಲವು ಅಂತಹ ಹೇಳಿಕೆಗಳನ್ನು ಪಟ್ಟಿ ಮಾಡಿದ್ದೇನೆ. ನೋಡಿ.

  • Login or register to post comments
  • link
  • Email this ಪ್ರತಿಕ್ರಿಯೆ
January 10, 2007 - 10:18pm — kesari

Re: ಈ ವಚನದ ಅರ್ಥ ಹೇಳಿ ನೋಡೋಣ

kesari's picture

ನಿಮ್ಮ ಬರಹ ಓದಿದ ಮೇಲೆ ಕೊನೆಯ ಎರಡು ಸಾಲು ಕಟ್!!

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • Apple macbook
  • ಕನ್ನಡದ ಒಂದು rocking ಹಾಡು
  • ನಾನು ಒಬ್ಬ ಹೊಸ ಸಧಸ್ಯನಾಗಿದ್ದೇನೆ
  • ಸುಮ್ನೆ ನಗೋದಕ್ಕೆ: ಹಾಲಿವುಡ್ ಸಿನೆಮಾಗಳ ಕನ್ನಡ ಅವತರಣಿಕೆಗಳು
  • ಅ೦ತರ
Syndicate content

ಲೇಖಕರು

kesari's picture

ಪರಿಚಯ

ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯ

ಇವ ನಮ್ಮವ, ಇವ ನಮ್ಮವ, ಇವನಮ್ಮವನೆಂದೆನಿಸಯ್ಯ

ಕೂಡಲಸಂಗಮದೇವಯ್ಯ ನಿಮ್ಮ ಮನೆಯ ಮಗನೆಂದೆನಿಸಯ್ಯ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ ಅಥವಾ ಭಯ ಪಡುವ ಕಾರಣವಿಲ್ಲ. ಅದು ನಿನ್ನ ಗುಲಾಮ. ನಿನ್ನ ಆಜ್ಞೆಯಂತೆ ನಡೆಯುತ್ತದೆ. ನೀನು ನಿಂತರೆ ಅದೂ ನಿಲ್ಲುವುದು, ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು.

— --- ವಿನೋಬಾ ಭಾವೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator