September 3, 2010 - 1:02pm
ದೇವೆಗೌಡರು, ನಕ್ಸಲರೂ ಸಹ ಮಣ್ಣಿನ ಮಕ್ಕಳು, ಅವರು ಆಯಧ ಹಿಡಿದರೆ ತಪ್ಪೇನು ಎಂದಿದ್ದಾರೆ!! ಮನೆ ಕಳೆದು ಕೊಂಡವರು ಆಯು ಹಿಡಿದರೆ ತಪ್ಪೆನು ಅನ್ನುವುದು ಇವರ ಹೇಳಿಕೆ!! ದೇಶ ಕಾಯುವ ಸೈನಿಕ, ಪೋಲಿಸರು ಯರ ಮಕ್ಕಳು ದೇವೆಗೌಡರೆ? yOdhara ಮಕ್ಕಳೂ ಈಗ ಆಯಧ ಹಿಡಿಯಬೇಕೆ? ಅವರಿಗೆ ಅನ್ಯಾಯ ಆಗಿಲ್ಲವೇ? ಒಬ್ಬ ಮಾಜಿ PM ಈ ರೀತಿ ಹೇಳಿಕೆ ಕೊಟ್ಟರೆ ಜನಕ್ಕೆ ಯಾವ ಸಂದೇಶ ತಲುಪುತ್ತೆ?
ಕಾಶ್ಮೀರದಲ್ಲಿ ಮನೆ ಕಳೆದು ಕೊಂಡು ನಿರ್ಗತಿಕರಾಗಿ ದೆಹಲಿಯಲ್ಲಿರುವ ಪಂಡಿತರ ಬಗ್ಗೆ ಈ ಮಾಜಿ PM ಗೆ ಕರುಣೆಯೆ ಇಲ್ಲವೆ? ಅವರು ಮಣ್ಣಿನ ಮಕ್ಕಳಲ್ಲವೇ?
ರಾಜಕೀಯ ಲಾಕ್ಕಾಗಿ ಇಂತಹ ಹೇಳಿಕೆ ಕೊಡುವ ಪೊಳ್ಳು ರಾಜಕಾರಣಿಗಳಿಂದಲೇ ವ್ಯವಸ್ೆ ಈ ಮಟ್ಟಕ್ಕೆ ಹದಗೆಟ್ಟಿದೆ.. ಮುಂದೆ ಇನ್ನೇನು ಕಾದಿದೆಯೋ!
Forums:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಉ: ನಕ್ಸಲರು ಮಣ್ಣಿನ ಮಕ್ಕಳು
ಯಾಕ್ರೀ ಏನೇನೋ ಬರೀತೀರಾ? ಪಾಪ ಅವರು ಮುಂದಿನಸಾರಿ "ಕುಮಾರ"ಕಂಠೀರವ ಪ್ರಧಾನಿಯಾಗುವುದನ್ನು ನೋಡಬೇಕೆಂಬ ಹಂಬಲದಲ್ಲಿದ್ದಾರೆ. ಅದಕ್ಕಾಗಿ ಅವರು ಏನು ಬೇಕಾದರೂ ಮಾಡ್ತಾರೆ... ಮುಂದಿನಸಾರಿ ಏನಾಗಿ ಹುಟ್ಟಬೇಕು ಅಂತಾನೂ plan ಮಾಡಿ ಆಗಿದೆ.. ಅಂಥದರಲ್ಲಿ ಇದೇನು ಮಹಾ?
ಉ: ನಕ್ಸಲರು ಮಣ್ಣಿನ ಮಕ್ಕಳು
ಯರ‍್ಯಾರು ಯಾರ ಮಕ್ಕಳು?
ದೇವೇಗೌಡರು ಮತ್ತು ನಕ್ಸಲರು - ಮಣ್ಣಿನ ಮಕ್ಕಳು.
ಕುಮಾರಸ್ವಾಮಿ - ಮಣ್ಣಿನ ಮೊಮ್ಮಕ್ಕಳು.
ಚೆನ್ನಮ್ಮನವರು- ಮಣ್ಣಿನ ಸೊಸೆ
ಸಾಪ್ಟ್ ವೇರಿಗರು - ಕಾಂಕ್ರೀಟಿನ ಮಕ್ಕಳು.
ಮಾರ್ಬಲ್ ಮಾರುವ ಮಾರವಾಡಿಗಳು- ಕಲ್ಲಿನ ಮಕ್ಕಳು.
ಪೈಲಟ್ ಗಳು- ಆಕಾಶದ ಮಕ್ಕಳು.
ಮೀನುಗಾರರು-ನೀರಿನ ಮಕ್ಕಳು.
ಐಸಿಐಸಿಐ -ಬಡ್ಡಿ ಮಕ್ಕಳು.
ಉ: ನಕ್ಸಲರು ಮಣ್ಣಿನ ಮಕ್ಕಳು
>> ಐಸಿಐಸಿಐ -ಬಡ್ಡಿ ಮಕ್ಕಳು.
ಹಾ ಹಾ ಹಾ ಹಾ ಹಾ.. ಸೂಪರ್ ರೀ...
ಉ: ನಕ್ಸಲರು ಮಣ್ಣಿನ ಮಕ್ಕಳು
ಕರ್ಮಕಾಂಡ..
ಇನ್ನು ಏನೆನು ಕೇಳ್ಬೇಕಾಗುತ್ತೊ ಗೊತ್ತಿಲ್ಲ.
--
ರಂಗನಾಥ