‘ಕೇಸರಿ ಭಯೋತ್ಪಾದಕತೆ’ ಎನ್ನುವ ಅಪಪ್ರಚಾರವನ್ನು ಸುಳ್ಳು ಮಾಡಲು ‘ಕೇಸರಿವಂತ’ರಿಗೆ ಸಕಾಲ. ಒಂದು ತುಂಡು ಭೂಮಿಯ ವ್ಯಾಜ್ಯದಲ್ಲಿ, ರಾಮ ಎಂಬ ಅಲೌಕಿಕ ಅನುಭೂತಿಯನ್ನು ವಿನಿಮಯ ಮಾಡಿಕೊಳ್ಳಹೋದ ಬಾಲಶವನ್ನೀಗ ತಿದ್ದಿಕೊಳ್ಳಬಹುದು! ಮೊಕದ್ದಮೆಗಳು ನಡೆಯುವುದು ಲೌಕಿಕ ನ್ಯಾಯಾಲಯಗಳಲ್ಲಿ. ವ್ಯಾವಹಾರಿಕ ಸಾಕ್ಷ್ಯಾಧಾರಗಳ ಮೇಲೇ ಅದರ ತೀರ‍್ಪು. ‘ಎರಡೆರಡ್ಲ ನಾಕು’ ಎನ್ನುವ ನ್ಯಾಯವನ್ನೇ ಅವು ಹೇಳುವುದು. ಲೆಕ್ಕಾಚಾರಕ್ಕೆ ದುಃಖ ಬೇಕೆ?
“ಹಿಂದೂ” ಮೌಲ್ಯಗಳನ್ನು ಕಾಪಾಡಬೇಕು; ಬಹುಸಂಖ್ಯಾತರ ‘ಮಾನ’ಕ್ಕೆ ನ್ಯಾಯ ಸಿಕ್ಕಬೇಕು ಎಂಬ ಲೌಕಿಕ ಚಳುವಳಿ ತಪ್ಪಲ್ಲ. ಆದರೆ ‘ಹಿಂದೂ ಸಮಾಜ ಒಂದು’ ಎಂದು ಕೆಲವು ನೈಜ ಸಂಘಟನೆಗಳೊಡನೆ ಕಪಟ ರಾಜಕಾರಣಿಗಳು ವೇದಿಕೆಗಳಲ್ಲಿ ಕೈ ಎತ್ತಿ ಕೂಗು ಹಾಕುವ ಬಾಲಿಶ ಆವೇಶ, ಕುಂಟು ನೆಪಗಳಿಂದ ಆ ಒಗ್ಗಟ್ಟು ಹುಟ್ಟುವುದಿಲ್ಲ. ಅದಾಗಬೇಕಾದರೆ, ನಾವು ನಂಬಿದ ದೇವರ ಸಾಮ್ರಾಜ್ಯದಲ್ಲಿ ಅನ್ಯಾಯ ನಡೆಯುವುದಿಲ್ಲ; ಅಲ್ಲಿ ಶೋಷಣೆ, ವಂಚನೆ, ಕ್ಷುಲ್ಲಕ ಕದನ-ಕಾರ್ಪಣ್ಯಗಳಿರುವುದಿಲ್ಲವೆಂಬಂತೆ ಬದುಕುವ ಮಾನವ ಹೃದಯಗಳು ಬೇಕಾಗುತ್ತವೆ; ಇದಕ್ಕಾಗಿ, ಜಾತಿ-ಕುಲ-ಗೋತ್ರಗಳ ಭೇದವಿಲ್ಲದೆ ಸಮಾಜದ ಎಲ್ಲಾ ಸದಸ್ಯರಿಗೆ ಸಮಾನ ಸಂಸ್ಕಾರ ಉಂಟುಮಾಡುವ ಆವಶ್ಯಕತೆ ಉಂಟಾಗುತ್ತದೆ. ಹಿಂದೂ ಹೆಸರಿನ ಪ್ರತಿಯೊಂದು ಅಖಾಡಾಗಳೂ, ಮಠ-ಪೀಠಗಳೂ ಇನ್ನಾದರೂ ಈ ಜವಾಬ್ದಾರಿಯನ್ನು ನಿಸ್ಪೃಹತೆಯಿಂದ ವಹಿಸಿಕೊಳ್ಳಬೇಕಾಗುತ್ತದೆ.
ಆರ್. ಕೆ. ದಿವಾಕರ
ಕರೆ: 9448047559









ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ದಿವಾಕರರೆ,
ನೀವೇನು ಹೇಳ ಹೊರಟಿರಿ ಅನ್ನುವುದು ನನಗರ್ಥವಾಗಲಿಲ್ಲ!
ರಾಮಮಂದಿರ ಬೇಕು ಅಂತ ಅರಚಾಡುವುದು ಬಿಟ್ಟು ಬಿಡೋಣ ಅಂತಲೇ?
ರಾಕೇಶ್ ಶೆಟ್ಟಿ :)
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ಪಾರಮಾರ್ಥಿಕವಾಗಿ ನಿಮ್ಮ ಹೃದಯದಲ್ಲಿಯೇ ರಾಮನನ್ನು ಕೂರಿಸಿಕೊಳ್ಳಿ. ದೇವಸ್ಥಾನ ದೇವಸ್ಥಾನ ಅ೦ಥ ಯಾಕೆ ಬಡ್ಕೊಳ್ತೀರಿ ಅ೦ತ ಇರ್ಬೇಕು ಶೆಟ್ರೇ....
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ಶೆಟ್ಟರೆ, ಚರ ದೂರವಾಣಿ ಸಂಖ್ಯೆ ಕೊಟ್ಟಿದ್ದಾರೆ ಲೇಖಕರು ಅನ್ನೋದ್ನು ಜ್ಞಾಪಕ ಇರಲಿ :)
ಕಾನ್ಫರೆನ್ಶ್ ಕರೆ ? :)
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ಪಾರಮಾರ್ಥಿಕತೆಯ ಬಗ್ಗೆ ಲೌಕಿಕ ಚರದೂರವಾಣಿಯಲಿ ಮಾತೇ?
ಲೌಕಿಕ ಸುವ್ಯವಸ್ಥೆಗಳು ತನಗೆ, ಪಾರಮಾರ್ಥಿಕತೆ ಅನ್ಯರಿಗಾಯ್ತೇ?
:)
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ದಿವಾಕರ, ನೀವೇನು ಕನಸು ಕಾಣಲು ಹೊರಟಿದ್ದೀರೇನು? ಅರೆರೆ, ಎಲ್ಲ ರಾಜಕಾರಣಿಗಳೂ ಹೇಳುತ್ತಿರುವುದು ಜಾತಿ ಆಧಾರಿತ ಮೀಸಲಾತಿ ನೀಡಿರೆ೦ದು, ’ಅಹಿ೦ದ’ ಹೆಸರಿನಲ್ಲಿ ಎಲ್ಲ ಜಾತಿಗಳನ್ನೂ ಒಡೆದು, ವೈಮನಸ್ಯವನ್ನು ಬಿತ್ತಿ, ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ! ಅವರಿಗೆ ಅವರ ಖುರ್ಚಿ ಮಾತ್ರ ಮುಖ್ಯ, ಸಾಮಾನ್ಯ ಜನರಲ್ಲ. ರಾಷ್ಟ್ರ ಪ್ರೇಮ ಅವರಲ್ಲಿಲ್ಲ, ಹೀಗಿರುವಾಗ ಎಲ್ಲಿಯ ಪಾರಮಾರ್ಥಿಕ, ಎಲ್ಲಿಯ ರಾಮ? ಒ೦ದಕ್ಕೊ೦ದು ಸ೦ಬ೦ಧವೇ ಇಲ್ಲ, ಇಲ್ಲಿರುವುದು ಏನಿದ್ದರೂ ಅಧಿಕಾರ ದಾಹ ಮಾತ್ರ. ಹೊರಗಿನಿ೦ದ ಬ೦ದು ಈ ಬಡಪಾಯಿ ದೇಶವನ್ನು ಸೋಲಿಸಿ ತಮ್ಮ ಪಾರಮ್ಯವನ್ನು ಮೆರೆಯಲು ಮುಸ್ಲಿ೦ ಆಕ್ರಮಣಕಾರಿಗಳಿಗೆ ಇದು ಸುವರ್ಣಕಾಲ. ಪ್ರತಿಯೊಬ್ಬ ಭಾರತೀಯನೂ ಮತ್ತೊಮ್ಮೆ ಮುಸ್ಲಿ೦ ಆಡಳಿತಕ್ಕೆ "ಜೇ ಹುಜೂರ್" ಎನ್ನುವ ಕಾಲ ಹತ್ತಿರದಲ್ಲೇ ಇದೆ!
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ಲೌಕಿಕತೆ ಮರೆತು ಬಾಳಲಾದೀತೇ ಹೇಳಿ ಈ ಲೋಕದಲ್ಲಿ
ಪಾರಮಾರ್ಥಿಕತೆಯನ್ನೂ ಕಾಣಬಹುದು ಇದೇ ಭೂಮಿಯಲ್ಲಿ
ಅರಿಯಿರಿ ಪಾರಮಾರ್ಥಿಕತೆ ಮತ್ತು ಲೌಕಿಕತೆಯ ನಂಟನ್ನು
ಪರಮಾತ್ಮನಿರುವ, ಆತನೇ ಸೃಷ್ಟಿಸಿದ ಲೌಕಿಕ ಕಣಕಣದಲ್ಲೂ
ಪಲಾಯನವಾದವೆನಿಸಬಾರದು ನಮ್ಮ ಅಜ್ಞಾನದ ಹೇಳಿಕೆಗಳು
ಎದ್ದು ಓಡಿಹೋಗುವುದರಿಂದ ಪರಿಹಾರ ಕಾಣವಿಲ್ಲಿ ಸಮಸ್ಯೆಗಳು
ನಿಮ್ಮ ಈ ಸಲಹೆಯನ್ನು ನಿಮ್ಮ ಮನೆಯಲ್ಲೇ ನೀವು ಕಾರ್ಯರೂಪಕ್ಕೆ ತರುವಿರಾ?
ಹೆಂಡತಿ ಸಂತಾನ ವಿರೋಧಿಗಳಾದರೆ ಪಾರಮಾರ್ಥಿಕತೆಗೆ ಮೊರೆ ಹೋಗುವಿರಾ?
- ಆಸು ಹೆಗ್ಡೆ
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ಹಿಂದೂ ಹೆಸರಿನ ಪ್ರತಿಯೊಂದು ಅಖಾಡಾಗಳೂ, ಮಠ-ಪೀಠಗಳೂ ಇನ್ನಾದರೂ ಈ ಜವಾಬ್ದಾರಿಯನ್ನು ನಿಸ್ಪೃಹತೆಯಿಂದ ವಹಿಸಿಕೊಳ್ಳಬೇಕಾಗುತ್ತದೆ.>>
ದಿವಾಕರ ಎನ್ನುವುದು ಹಿಂದೂ ಹೆಸರು ಅಲ್ಲವೆ?
ಬದಲಾವಣೆ ಎನ್ನುವುದು ನನ್ನಿಂದಲೇ ಪ್ರಾರಂಭವಾಗಲಿ ಎಂದೆನ್ನೆವುದು ನಿಜವಾದ ಕ್ರಾಂತಿಕಾರನ ಗುಣ. ಬರೆದು ಬಿಸಾಕುವುದಕ್ಕಷ್ಟೆ ಸೀಮಿತವಾದರೆ.....?
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ದಿವಾಕರ ಎಂಬ ಹೆಸರಿನ "ಹಿಂದೂ" ಬರೆಯಲೂ ಬಾರದೇ? "ಹಿಂದು"ವದವನು ಈ ದೇಶದಲ್ಲಿ ಬಾಯಿಮುಚ್ಚಿಕೊಮಡು ಬಿದ್ದಿರುವುದಷ್ಟಕ್ಕೇ ಇರಬೇಕೇ?
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ದಿವಾಕರರೆ, ಭಾರತದಲ್ಲಿ ಹಿಂದುಗಳೇ ಇಲ್ಲವಾದರೆ ನಿಮ್ಮ ಪಾರಮಾರ್ಥಿಕತೆ ಎಲ್ಲಿರುತ್ತೆ ಸ್ವಲ್ಪ ಹೇಳ್ತಿರ? ಆಧ್ಯಾತ್ಮಿಕ ದಲ್ಲಿ ಸಾಧನೆ ಮಾಡಬೇಕು ನಿಜ. ಆದರೆ ಅದು ವಾಸ್ತವತೆಯನ್ನು ಹೊರತಾಗಿ ಅಲ್ಲ. ವಿವೇಕಾನಂದರ ಬರಹಗಳನ್ನು ಓದಿ. ತಿಳಿಯಬಹುದು. ಅದು ಬಿಟ್ಟು ನೆಹರು ಬರೆದ ಪುಸ್ತಿಕೆಗಳು, ಲಂಕೇಶ ಪತ್ರಿಕೆಗಳನ್ನು ಓದುತ್ತಾ ಕೂತರೆ ಯಾರಿಗೆ ಉಪಯೋಗ?
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ವಿವೇಕಾನಂದರು ಬೇಕಾದಷ್ಟು ಹೇಳಿದ್ದಾರೆ ಅದೆಲ್ಲವನ್ನೂ ಉರು ಹೊಡದು ಯಾರಿಗೋ ಒಪ್ಪಿಸಿ ಭೇಷ್ ಅನ್ನಿಸಿಕೊಳ್ಲುವ ಮಾತ್ರದಿಂದ ಯಾರೊಬ್ಬರೂ ನಿಜವಾದ "ಹಿಂದೂ" ಆಗಲಾರರು. ನಾನೂ ಒಬ್ಬ ನಿಜವಾದ "ಹಿಂದೂ" ಆಗಬೇಕೆಂದಿದ್ದೇನೆ. ತಮ್ಮ ಸ್ವಾನುಭವ ಮತ್ತು ಅನುಭಾವಗಳನ್ನು ದಯವಿಟ್ಟು ನನ್ನಂಥವರೊಂದಿಗೆ ಹಂಚಿಕೊಳ್ಲಿರೇಕೆ?
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ದಿವಾಕರರೆ,
ಮೇಲೆ ನಿಮಗೆ ಪ್ರಶ್ನೆ ಕೇಳಿದೆ ಅದಕ್ಕೆ ಉತ್ತರ ಕೊಡಲಿಲ್ಲ ನೀವು.
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ರಾಕೇಶ್ ಅವರೇ,
[ಮೇಲೆ ನಿಮಗೆ ಪ್ರಶ್ನೆ ಕೇಳಿದೆ ...]
ಅಂದ ಹಾಗೆ, 'ದಿನಾಂಕ - ಹೊಸತು ಮೊದಲು' ಆಯ್ಕೆ ಬಳಸಿರುವುದಾದರೆ, ನಿಮ್ಮ ಮೊದಲಿನ ಪ್ರತಿಕ್ರಿಯೆ ಈಗಿನದ್ದಕ್ಕಿಂತ ಕೆಳಗಿರುತ್ತದೆ. :-)
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ಶಾಸ್ತ್ರಿಗಳೇ,
ನನ್ ಕಮೆಂಟ್ ಮೇಲೆ ಇದೆ :)
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ರಾಮಮಂದಿರವಾಗಲಿ. ಆದರದು ಬಲಾತ್ಕಾರವಾಗಿ, ರಾಜಕೀತದವರ ದುರಹಂಕಾರದ ವಿಜಯಸ್ತಂಭದ ಸಂಕೇತವಾಗಿ ಅಲ್ಲ. ರಾಮ ಸದಾ ನಮ್ಮ ಬುದ್ಧಿಯನ್ನು ಪ್ರಚೊದಿಸುತ್ತಾ ಅಂತರಂಗದಲ್ಲಿರಲಿ. ಅದು ಬಾಹ್ಯದಲ್ಲಿ ಕ್ರಿಯಾಶೀಲವಾಗಿ ದೇಶದಲ್ಲಿ ನಿಜವಾದ ಹಿಂದೂ ಬಹುಮತ ಸರಕಾರ ಅಧಿಕಾರಕ್ಕೆ ಬರುವಂತಾಗಲಿ. ಹಾಗಾಗುವಂತೆ ಜಾಣ್ಮೆ, ತಾಳ್ಮೆ, ಎಚ್ಚರವಂತಿಕೆಯ ಸಂಸ್ಕಾರ ಹಿಂದೂ ಹೃದಯಗಳಿಗೊದಗುವಂಥಾ ಪ್ರಾಮಾಣಿಕ ಪ್ರಯತ್ನಗಳು ನಡೆಯಲಿ ಎನ್ನುವುದು ನನ್ನ ವಿನಮ್ರ ಕನಸು. ಇದಕ್ಕೆ ತಾವು ಇಂಬು ನಿಡುತ್ತೀರಾ, Please?
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ರಾಮನೆಂಬ ಶಕ್ತಿಯು ಜಾಗೃತವಾಗಿ ಹಿಂದೂ ಬಹುಮತ ಸರ್ಕಾರ ಅಧಿಕಾರಕ್ಕೆ ಬರಲಿ.ಆಗಲಾದರೂ ಅನಗತ್ಯ ಓಲೈಕೆ ನೀತಿ ನಿಲ್ಲಿಸಿ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಅನ್ನುವುದನ್ನ ಕಾರ್ಯರೂಪಕ್ಕೆ ತರಲಿ ಇದು ನನ್ನ ಆಶಯ ಕೂಡ.ಆದರೆ ರಾಮ ಮಂದಿರ ನಿರ್ಮಾಣಕ್ಕೆ ಪಟ್ಟು ಹಿಡಿಯುವುದು ಬೇಡ ಅನ್ನೋ ಮಾತನ್ನ ಒಪ್ಪಲಾರೆ.ಯಾಕೆಂದರೆ ರಚ್ಚೆ ಹಿಡಿದು ಕುಳಿತವರು ಯಾರು ಅಂತ ಎಲ್ಲರಿಗು ಗೊತ್ತಿದೆ.
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
<<ರಾಜಕೀತದವರ ದುರಹಂಕಾರದ ವಿಜಯಸ್ತಂಭದ ಸಂಕೇತವಾಗಿ ಅಲ್ಲ.>>
ರಾಜಕೀಯವಿಲ್ಲದ ಯಾವುದೇ ವ್ಯವಸ್ಥೆ ಈಗ ನಮ್ಮ ನಾಡಿನಲ್ಲಿ ಇಲ್ಲ
ರಾಜಕಾರಣಿಗಳ ಸಹಕಾರವಿಲ್ಲದೇ ಯಾವುದೂ ಇಲ್ಲಿ ಈಗ ಸಾಧ್ಯವಿಲ್ಲ
ಮನಮನೆಯಲ್ಲೂ ರಾಜಕೀಯ, ಮನಮನದಲ್ಲೂ ರಾಜಕೀಯ ಇದು ಈಗ ಸತ್ಯ
ರಾಜಕೀಯವನ್ನು ಹೊರತುಪಡಿಸಿ ಏನಾದರೂ ಸಾಧಿಸಲಾದೀತೆಂದರದು ಅಸತ್ಯ
:)
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
<< ರಾಜಕೀತದವರ ದುರಹಂಕಾರದ ವಿಜಯಸ್ತಂಭದ ಸಂಕೇತವಾಗಿ >>
ರಾಜಕೀಯವಾಗಿ ವಿಜಯಶಾಲಿಗಳಾಗುವುದು ಅಪರಾಧವೇ? ಅಧರ್ಮವೇ? ಅಪ್ರಬುಧ್ಧವೇ? ಹಾಗೆಂದು ಎಲ್ಲಿ ಹೇಳಲಾಗಿದೆ? ಇದು ಯಾವ ಪರಿಯ ಪಾರಮಾರ್ಥಿಕತೆ?
<< ರಾಮ ಸದಾ ನಮ್ಮ ಬುದ್ಧಿಯನ್ನು ಪ್ರಚೊದಿಸುತ್ತಾ ಅಂತರಂಗದಲ್ಲಿರಲಿ >>
ಅಂತರಂಗದಲ್ಲೇ ಯಾಕಿರಬೇಕು? ಹೊರಗೆ ತೋರಿಸಿಕೊಳ್ಳಬಾರದೆಂಬ ಹೇಡಿತನ ಏಕೆ?
<< ಅದು ಬಾಹ್ಯದಲ್ಲಿ ಕ್ರಿಯಾಶೀಲವಾಗಿ ದೇಶದಲ್ಲಿ ನಿಜವಾದ ಹಿಂದೂ ಬಹುಮತ ಸರಕಾರ ಅಧಿಕಾರಕ್ಕೆ ಬರುವಂತಾಗಲಿ. ಹಾಗಾಗುವಂತೆ ಜಾಣ್ಮೆ, ತಾಳ್ಮೆ, ಎಚ್ಚರವಂತಿಕೆಯ ಸಂಸ್ಕಾರ ಹಿಂದೂ ಹೃದಯಗಳಿಗೊದಗುವಂಥಾ ಪ್ರಾಮಾಣಿಕ ಪ್ರಯತ್ನಗಳು ನಡೆಯಲಿ >>
ಅರ್ಥವಾಗಲಿಲ್ಲ. ಇದು ನಿಮ್ಮ ಮೊದಲಿನ ವಾಕ್ಯಕ್ಕೆ ವಿರೋಧಾಭಾಸದಂತೆ ಅನಿಸಿತು ನನಗೆ.
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ಭಾರತದ ಜಾತ್ಯಾತೀತರೆಂದು ಹೇಳಿಕೊಳ್ಳುವವರಿಗೆ ಅದು ಒಂದು ತುಂಡು ಭೂಮಿಯಾಗಿರಬಹುದು. ಆದರೆ ದೇವರೆಂದೇ ನಂಬಿರುವ ರಾಮನನ್ನು ಆರಾಧಿಸುವ ವ್ಯಕ್ತಿಗಳಿಗಲ್ಲ.
ನೀವೆಂದ ಹಾಗೆ ಬಾಲಿಶ ಆವೇಶಗಳಿಂದ ಒಗ್ಗಟ್ಟು ಮೂಡುವುದಿಲ್ಲ, ಹಾಗೆಯೇ ಸಮಾಜದಲ್ಲಿ ಎಂದೂ ಸಾಧ್ಯವಿಲ್ಲದ ಮಾನವ ಹೃದಯಗಳನ್ನು ಸೃಷ್ಟಿಸುವುದರಿಂದ ಕೂಡ ಸಾಧ್ಯವಿಲ್ಲ. ಸುಮ್ಮನಿದ್ದಷ್ಟು ಬೆನ್ನ ಮೇಲೆ ಸವಾರಿ ಮಾಡುವವರು ಹೆಚ್ಚು.
ಲೌಕಿಕವಾಗಿ ಬದುಕುವವರ ಸಂಖ್ಯೆ ಹೆಚ್ಚು ಅಲ್ಲವೇ?
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
‘ಕೇಸರಿ ಭಯೋತ್ಪಾದಕತೆ’ ಎನ್ನುವ ಅಪಪ್ರಚಾರವನ್ನು ಸುಳ್ಳು ಮಾಡಲು ‘ಕೇಸರಿವಂತ’ರಿಗೆ ಸಕಾಲ.
>> ಹಸಿರು, ಬಿಳಿ, ಇತ್ಯಾದಿ ಬಣ್ನಗಳಿಗೆ ಯಾವುದು ಸಕಾಲ? ಸ್ವಲ್ಪ ವಿವರಿಸಿ.
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ಸುಳ್ಳು ಆಪಾದನೆಯನ್ನು ಸುಳ್ಳೆಂದು ಸಾಬೀತು ಮಾಡಲೇಬೆಕಾದ್ದು ನಿರಪರಾಧಿಗಳ ಮಜಬೂರಿ. ನಿಜವಾದ ಅಪರಾದಿಗಳಿಗೂ ಆ ಅವಕಾಶ ಕೊಡಬೇಕೇ?
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ನಿರಪರಾಧಿಗಳನ್ನು ಅಪರಾಧಿ ಎಂದು ಪಟ್ತ ಕೊಟ್ಟವರು, ಅಪರಾಧಿಗಳನ್ನ ಅಪರಾಧಿ ಎಂದು ಹೇಳದಿದ್ದರೆ? ಮುಂದಿನ ಪೀಳಿಗೆಗೆ ಅಪರಾಧಿ., ನಿರಪರಾಧಿ ಬಗ್ಗೆ ಬಹಳ confuse ಆಗಿ ಹೋಗುತ್ತೆ....
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ಇಡೀ ವಿಶ್ವವನ್ನೇ ಸ೦ಸ್ಕಾರ ಮತ್ತು ಸ೦ಯಮ ದಿ೦ದ ಭಾರತದೆಡೆಗೆ ನೋಡುವ೦ತೆ ಮಾಡಿದ್ದು ಇದೇ "ಕಾವಿ"ಯನ್ನು ಧರಿಸಿ ಹೊರಟ ಪ್ರಖರ ಸನ್ಯಾಸಿ,ಸಿಡಿಲ ಸ೦ತ ಸ್ವಾಮೀವಿವೇಕಾನ೦ದರು.....ದಿವಾಕರರೇ., ಒ೦ದ೦ತೂ ಸತ್ಯ ...ಒಮ್ಮೆ ಇತಿಹಾಸ ಮೆಲಕು ಹಾಕಿ...ಬಾಬರ್ 'ದ೦ಡ'ಯಾತ್ರೆ,ತುಘಲಕ್ ದ೦ಡಯಾತ್ರೆ...,ಇತ್ಯಾದಿ 'ದ೦ಡ'ಯಾತ್ರೆ ಬರೀ ಅನ್ಯರ ಹೆಸರಿನ ಮು೦ದೆ ಬ೦ದಿರಬಹುದೇ ಹೊರತು ಯಾವ 'ಹಿ೦ದು'ವಿನ ಮು೦ದೆ ಬರಲು ಸಾದ್ಯವೇ ಇಲ್ಲ.....ನಮ್ಮವರೂ ಯಾತ್ರೆಗೆ ಹೊರಟರು ಆದರೆ ಕೈಯಲ್ಲಿ ಖಡ್ಗವನ್ನು ಇಡಿದಲ್ಲ...ಕಮ೦ಡಲ ಮತ್ತು ಧರ್ಮ ಗ್ರ೦ಥಗಳನ್ನು ಹಿಡಿದು ಆದರೆ ಇದುವರೆಗೂ ಒಬ್ಬರಿಗೂ ಬಲವ೦ತದ 'ಮತಾ೦ತರ'ಮಾಡಿಸಲಿಲ್ಲ...ಇ೦ತಹ ಸರ್ವ ಸಹಿಸ್ಣಿ ಭಾರತೀಯ ಎ೦ದೂ ಭಯೊತ್ಪಾದನೆ ಅ೦ತಹ ಕೆಲಸ ಮಾಡಲಾರ......ಆದರೆ ಇದನ್ನೇ ನಮ್ಮ ದೌರ್ಬಲ್ಯ ವೆ೦ದು ತಿಳಿದರೆ ಅದಕ್ಕೆ ಉತ್ತರಿಸಲು ಭಗತ್,ಶಿವಾಜಿ,ರಾಜಗುರು,ಧೀ೦ಗ್ರಾ ರ೦ತಹ ಹಲವು ಕಿಡಿಗಳಿಗೆ ಜನ್ಮನೀಡಿದ್ದು ಇದೇ ಭಾರತಾ೦ಭೆ ಎ೦ದು ಮನದಲ್ಲಿರಲಿ...
"ಸ್ನೇಹಕು ಬದ್ದ;ಸಮರಕೂ ಸಿದ್ದ" ಅನ್ನುವ ಮಾತು ಬಹುಶಹ ಇಡಿ ವಿಶ್ವದಲ್ಲಿ "ಹಿ೦ದು"ವಿಗೆ ಮಾತ್ರ ಅನ್ವಹಿಸಬಹುದು..
ದಿವಾಕರ ರವರೇ ನಿಮ್ಮ "ವಾಣಿ" ನಮಗೆ ಅಗತ್ಯವಿಲ್ಲ ಅಗತ್ಯವಿಲ್ಲ...
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
+೧
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ನಾನು ಸ್ನೇಹಾಕಾಂಕ್ಷಿಯಷ್ಟೆ. ದಯವಿಟ್ಟು ಬಡಪಾಯಿಯಮೇಲೆ ಸಮರ ಸಾರಬೇಡಿ!
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ದಿವಾಕರರವರೇ,
ಸಂಪದಕ್ಕೆ ಸುಸ್ವಾಗತ!
ಆಕಾಶವಾಣಿಯಲ್ಲಿ ನೀವೋದಿದ ಸುದ್ದಿಗಳನ್ನು ಕೇಳಿದ ನೆನಪು ಇನ್ನೂ ಹಸಿರಾಗಿದೆಯಾದ್ದರಿಂದ, ನಿಮ್ಮೀ ಬರಹವನ್ನಿಲ್ಲೋದುವುದರಲ್ಲಿ ಒಂಥರಾ ಖುಶಿ ಸಿಕ್ಕಿತು.
ಇತರ ಕೆಲ ಸಂಪದಿಗರು ಈಗಾಗಲೇ ಅಭಿಪ್ರಾಯ ಪಟ್ಟಿರುವಂತೆ, ನನಗೂ ಅನ್ನಿಸಿದ್ದೆಂದರೆ ನೀವು ಹೇಳಬಯಸಿದ್ದೇನು ಎಂಬುದಿಲ್ಲಿ ಸ್ಪಷ್ಟವಾಗಿಲ್ಲ. ರಾಮ ಜನ್ಮ ಭೂಮಿ - ಬಾಬ್ರಿ ಮಸೀದಿ ವಿವಾದ ಶಾಂತಿಯುತವಾಗಿ ಬಗೆಹರಿಯಲಿ ಎಂಬುದು ಎಲ್ಲ ಸಂಪದಿಗರ ಹಾರೈಕೆಯೂ ಹೌದು ಎಂದು ನಂಬುತ್ತೇನೆ.
ನಿಮ್ಮ ಪ್ರತಿಕ್ರಿಯೆಗಳನ್ನೊಳಗೊಂಡಂತೆ, ಪರಿಚಯದಲ್ಲಿ ಸಹ ಕಾಗುಣಿತದ, ವಾಕ್ಯ ರಚನೆಯ ತಪ್ಪುಗಳು ನುಸುಳಿವೆ ಎಂಬುದನ್ನು ಗಮನಿಸಿದ್ದೀರಿ, ಅವನ್ನು ಸರಿಪಡಿಸುತ್ತೀರಿ ಎಂದು ಆಶಿಸುತ್ತೇನೆ.
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ಧನ್ಯವಾದ ತಪ್ಪುಗಳನ್ನು ಸಹಿಸಿ ತಿದ್ದಿಕೊಳ್ಳಲು ಅವಕಾಶ ನೀಡಿದ್ದಕ್ಕೆ
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
<<ಅದಾಗಬೇಕಾದರೆ, ನಾವು ನಂಬಿದ ದೇವರ ಸಾಮ್ರಾಜ್ಯದಲ್ಲಿ ಅನ್ಯಾಯ ನಡೆಯುವುದಿಲ್ಲ; ಅಲ್ಲಿ ಶೋಷಣೆ, ವಂಚನೆ, ಕ್ಷುಲ್ಲಕ ಕದನ-ಕಾರ್ಪಣ್ಯಗಳಿರುವುದಿಲ್ಲವೆಂಬಂತೆ ಬದುಕುವ ಮಾನವ ಹೃದಯಗಳು ಬೇಕಾಗುತ್ತವೆ>>
ನಾವು ಹಿಂದೂಗಳು ಬಹಳವಾಗಿ ಮೆಲುಕುಹಾಕುವ ಶ್ರೀರಾಮಾಯಣ ಚರಿತೆ ಮತ್ತು ಶ್ರೀಕೃಷ್ಣ ಪರಮಾತ್ಮನ ಭಗವದ್ಗೀತೆ, ಈ ಎರಡರಲ್ಲೂ ಯುದ್ಧಗಳ ಉಲ್ಲೇಖ ಇದೆ. ಗೀತೆಯಂತೂ ಯುದ್ಧರಂಗದಲ್ಲೇ ಭೋಧಿಸಲ್ಪಟ್ಟದ್ದು.
ಕದನ, ಕಾದಾಟಗಳು ಇಲ್ಲದೇ, ಸುಳ್ಳು ಮತ್ತು ಕೆಟ್ಟದ್ದು ನಾಶವಾಗದು, ಸತ್ಯದ ಮತ್ತು ಒಳ್ಳೆಯದರ ವಿಜಯವಾಗದು.
ಎಲ್ಲವನ್ನೂ ಪರಿತ್ಯಾಗ ಮಾಡಿ ಬದುಕುವುದು ಸನ್ಯಾಸಿಗಳು. ಸನ್ಯಾಸಿಗಳು ಸಮಾಜದ ನಡುವಿರಲು ಅಪೇಕ್ಷಿಸುವುದೂ ಇಲ್ಲ.
ರಾಜಕೀಯ ರಾಜನೀತಿ ಅನ್ನುವುದು ರಾಮ ಕೃಷ್ಣರ ಕಾಲಗಳಲ್ಲೂ ಇತ್ತು. ರಾಜನೀತಿಯ ಬಗ್ಗೆ ರಾಮನ ಆದರ್ಶ ಇಲ್ಲವಾಗಿದ್ದಲ್ಲಿ, ರಾಮರಾಜ್ಯದ ಮಾತು ಹೇಗೆ ಬರುತ್ತಿತ್ತು ನಮ್ಮೆಲ್ಲರ ಬಾಯಿಗಳಲ್ಲಿ?
ನಮ್ಮ ಭಾವನೆಗಳಲ್ಲಿ, ನಿರ್ಧಾರಗಳಲ್ಲಿ ಮತ್ತು ಮಾತುಗಳಲ್ಲಿ ದೃಢತೆ ಇರಬೇಕು. ಅನ್ಯರಿಗೆ ಮನನವಾಗುವಂತಿರಬೇಕು. ನಮ್ಮ ನುಡಿಗಳು, ಬರಹಗಳು ಅರ್ಥೈಸಿಕೊಳ್ಳಲು ಸುಲಲಿತವಾಗಿರಬೇಕು.
ಓದುಗರ ಮನಗಳಲ್ಲಿ ವಿರೋಧಾಭಾಸಗಳ ಬೀಜಬಿತ್ತುವ ಬರಹಗಳಿಂದ ಕಾಲಹರಣವಾಗಬಹುದು ಲೇಖಕ-ಓದುಗದ್ವಯರದ್ದೂ..
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ತಮ್ಮ ಹಿತೋಕ್ತಿಗೆ ಹೃತ್ಪೂರ್ವಕ ಆಭಾರಗಳು. ತಾವು ಹೇಳಿದಂತೆ ಬರವಣಿಗೆ ಕಲಿಯಲು ಯತ್ನಿಸುತ್ತೇನೆ. ’ನಾನು ತಿಳಿದಿರುವುದು ಮಾತ್ರವೇ ಸರಿ’ ಎಂಬ ಪೂರ್ವಗ್ರಹ ಬಿಟ್ಟು ಓದುವುದದರೆ ಬೇರೆಯವರ ಬರಹವೂ ಅರ್ಥವಾದೀತೆನ್ನುವುದು ನನ್ನ ಮೂಢನಂಬಿಕೆ. ಇದನ್ನು ಮನ್ನಿಸುತ್ತಿರಲ್ಲಾ?
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ತಮ್ಮ ವ್ಯಂಗೋಕ್ತಿಗಳಿಗೆ ನಮನಗಳು!
ವಿಮರ್ಶೆಗಳನ್ನು ವ್ಯಂಗ್ಯಮಾಡಿ ಗಾಳಿಗೆ ತೂರಿಬಿಡುವ ನಿಮ್ಮ ಈ ಶೈಲಿ ಹೊಸದು!
:)
ನಿಮ್ಮ ಮೂಢನಂಬಿಕೆಯ ಪಾಲನೆ ನೀವೂ ಮಾಡುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ.
:)
ಉ: ಒಳ್ಳೇ ಪ್ರಮಾಣಪತ್ರ ದಕ್ಕಿತಪ್ಪಾ ಇಂದು, ಸಂಪದಿಗ ಬಂಧುಗಳಿಗೆಲ್ಲಾ!
ನಿಮ್ಮ ಈ ಬರಹದಲ್ಲಿ ನಿಖರತೆ ಇಲ್ಲ, ದೃಢತೆ ಇಲ್ಲ, ವಿರೋಧಾಭಾಸ ಇದೆ ಅನ್ನುವ ಮಾತು ನನ್ನೊಬ್ಬನದೇ ಅಲ್ಲ.
ಹಾಗಿರುವಾಗ, ನಿಮ್ಮ ದೃಷ್ಟಿಯಲ್ಲಿ ಇಲ್ಲಿನ ಬಹುತೇಕ ಓದುಗರೆಲ್ಲಾ ಪೂರ್ವಗ್ರಹ ಪೀಡಿತರು ಅಂದ ಹಾಗಾಯ್ತು.
ಭಳಿರೇ!
ಜೈ ಸಿರಿಗನ್ನಡ ಸಂಪದ!
ಒಳ್ಳೇ ಪ್ರಮಾಣಪತ್ರ ದಕ್ಕಿತಪ್ಪಾ ಇಂದು, ಸಂಪದಿಗ ಬಂಧುಗಳಿಗೆಲ್ಲಾ!
:)
ಉ: ಒಳ್ಳೇ ಪ್ರಮಾಣಪತ್ರ ದಕ್ಕಿತಪ್ಪಾ ಇಂದು, ಸಂಪದಿಗ ಬಂಧುಗಳಿಗೆಲ್ಲಾ!
ಜೈ ಸಿರಿಗನ್ನಡ ಸ೦ಪದ! ಹಾಗೆಯೇ ಜೈ "ಅಶರೀರವಾಣಿ" ದಿವಾಕರ ಅ೦ತಲೂ ಅನ್ನೋಣವೇ?? :):):)
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ಆಲ್ಲ ಸ್ವಾಮಿ ಈ ವಿವಾದ ನ್ಯಾಯಾಲಯದ ಹೊರಗೆ ಬಗೆಹರಿಯುವುದಗಿದ್ದಾರೆ ...ಇಷ್ಟುದಿನ ಕಾಯುವ ಅಗತ್ಯವಿತ್ತೇ... ಇದು ಎಂದೋ ಮುಗಿದು ಹೋದ ಕಥೆಯಾಗುತ್ತಿತ್ತು........ತಲತಲಾಂತರ ಬಂದಿರುವ ನಂಬಿಕೆ ಪೂರ್ವಗ್ರಹ ಪೀಡಿತ ಎಂದರೆ ಅದು ಅರ್ಥವಿಲ್ಲದ ಮಾತು.
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ಹರೀಶ ಆತ್ರೇಯ +೧
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
<<ಆಕಾಶವಾಣಿಯಲ್ಲಿ ಸುದ್ದಿ ಪ್ರಸಾರಕನಾಗಿ ಸಂಸ್ಕಾರಗೊಂಡ ಬುದ್ದಿಗೆ, ಅನುದಿನದ ವಿದ್ಯಮನಗಳು ನೀಡುವ ಪ್ರೇರಣೆಗಳಿಗೆ ಸ್ಪಂದಿಸುತ್ತೇನೆ.>>ದಿವಾಕರರೆ, ಇದು ನಿಮ್ಮ ಪರಿಚಯದಲ್ಲಿ ನೀವೇ ಹೇಳಿಕೊ೦ಡಿರುವ ಮಾತು! ಚಿಕ್ಕ೦ದಿನಿ೦ದ ರೇಡಿಯೋ ಕೇಳುತ್ತಲೇ ಬೆಳೆದ ನನಗೆ ತಮ್ಮ ಕ೦ಚಿನ ಕ೦ಠ ಇನ್ನೂ ಚೆನ್ನಾಗಿ ನೆನಪಿನಲ್ಲಿದೆ. ಇಲ್ಲಿ ನಡೆಯುತ್ತಿರುವ ವಿಚಾರ ವಿನಿಮಯ ನೋಡಿದರೆ ತಾವು ಪರಿಚಯದಲ್ಲಿ ಹೇಳಿಕೊ೦ಡಿರುವುದಕ್ಕೂ, ಈಗ ನೀವು ಪ್ರತಿಕ್ರಿಯಿಸುತ್ತಿರುವ ರೀತಿಗೂ ಒ೦ದಕ್ಕೊ೦ದು ತಾಳೆಯಾಗುತ್ತಿಲ್ಲವಲ್ಲ!! :)
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ಎಂದೋ ದೂರದಲಿ ಕೇಳಿ ಮೆಚ್ಚಿದ್ದ ಕಂಠಕ್ಕೂ, ಆ ಕಂಠಧಾರಿ, ಇಂದು ಬರೆವ ಬರಹಗಳಿಗೂ ತಾಳೆಹಾಕುವ ಈ ಶೈಲಿ ಅದ್ಯಾಕೋ...ಹಿಡಿಸಿತು!
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ಅದ್ಯಾಕೋ...ಹಿಡಿಸಿತು!.............-:):):)
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
"ಪಾರಮಾರ್ಥಿಕ ರಾಮ ನೀಡುವನೇ ರಾಜಕೀಯ ಅನುಗ್ರಹ?"
ನೀವು ರಾಮನನ್ನೂ ಪ್ರಶ್ನಿಸುತ್ತಿದ್ದೀರಿ ಅಲ್ಲವೇ? ನಿಮಗೆ ರಾಮನಲ್ಲಿ ನಂಬಿಕೆಯಿದ್ದರೆ ಇಂತಹ ಬಾಲಿಶ ಪ್ರಶ್ನೆ ಏಕೆ? ನೀವು ನಾಸ್ತಿಕರೆಂದು, ಧರ್ಮ ನಿರಪೆಕ್ಷರೆಂದು ಭಾವಿಸಿದರೆ "ರಾಮ ಎಂಬ ಅಲೌಕಿಕ ಅನುಭೂತಿ" ಎಂದು ನಿಮ್ಮ ಗೊಂದಲವನ್ನೂ ಕಾರಿದ್ದೀರಿ. ನಿಮ್ಮ ಪ್ರಶ್ನೆಯಲ್ಲಿ ಕುಟಿಲತೆಯ ಧ್ವನಿ ಇದೆ.
ಸಮಾನತೆ ಅನ್ನುವುದು ಪ್ರಾಯೋಗಿಕ ಅಲ್ಲವೇ ಅಲ್ಲ. ಸಮಾನತೆ ಇರುವ ಜಗತ್ತಿನ ಒಂದು ಊರು, ಗ್ರಾಮ ದೇಶವನ್ನು ತೋರಿಸಿ. ನಿಖರತೆ ಇಲ್ಲದ ನಿಮ್ಮ ಅಭಿಪ್ರಾಯ ತುಂಬಾ ಸಪ್ಪೆ ಅನ್ನಿಸಿತು. ಧರ್ಮನಿರಪೇಕ್ಷತೆ ಹೆಸರಿನಲ್ಲಿ ಪಲಾಯನವಾದ ಬೋಧಿಸುವ ಹಳೆಯ ಸಂಪ್ರದಾಯಕ್ಕೆ ಜೋತುಬಿದ್ದರೆ ಏನು ಪ್ರಯೋಜನ?
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ಅರ್ಥವಾಗದ ಲೇಖಕರ ಭಾವನೆಗಳು ಹಾಗೂ ಚರ್ಚಾ ವಿಷಯ, ವಿಮರ್ಶೆಯನ್ನು ವ್ಯ೦ಗ್ಯವಾಗಿ ತೂರುವ ಹೊಸತು ಶೈಲಿ, “ಪಾರಮಾರ್ಥಿಕತೆ“ ಎನ್ನುತ್ತಲೇ ಹಿ೦ತಿರುಗಿ “ಹಿ೦ದೂ ಬಹುಮತ ಸರ್ಕಾರ ಬರಲಿ“ ಎ೦ಬ ಅಲೌಕಿಕ ವಾದಿಗಳ ಲೌಕಿಕತೆಯತ್ತ ಯಾತ್ರೆಗಿನ ಚುಟುಕು ಪರಿಚಯ ನನ್ನ ಈ ಪ್ರತಿಕ್ರಿಯೆ.
ಒಟ್ಟಾರೆ ವಿರೋಧಾಬಾಸಗಳಿ೦ದ ಕೂಡಿದ ಲೇಖಕರ ಮರು ಪ್ರತಿಕ್ರಿಯೆಗಳು, ಲೇಖನದಲ್ಲಿನ ಗಟ್ಟಿತನವಿಲ್ಲದ ನಿರೂಪಣಾ ಶೈಲಿ ಲೇಖಕರನ್ನು ಪ್ರಶ್ನಿಸುವ೦ತೆ ಮಾಡಿವೆ ಎ೦ದರೂ ತಪ್ಪಲ್ಲವೇನೋ?
ಬೇಸರ ಮೂಡದಿರಲಿ. ಲೇಖಕರೇ, ನೀವು ಓದುಗರಾದ ನಮಗೆ ಏನು ಹೇಳಬೇಕೆ೦ದಿದ್ದೀರಿ ಎ೦ಬುದನ್ನು ಇನ್ನೂ ಸವಿವರವಾಗಿ ಹೇಳಬಹುದಾಗಿದೆ. ಬೇಕಾದರೆ ಇದೇ ವಿಚಾರವನ್ನು ಇದೇ ಶೀರ್ಷಿಕೆಯಲ್ಲಿಯೇ ಮತ್ತೊಮ್ಮೆ ಸವಿವರವಾಗಿ ಬರೆಯಿರಿ. ಚರ್ಚಿಸುವ ಉತ್ತಮ ಅವಕಾಶ ನೀಡಿ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ಆತ್ಮೀಯ
<<ನಾವು ನಂಬಿದ ದೇವರ ಸಾಮ್ರಾಜ್ಯದಲ್ಲಿ ಅನ್ಯಾಯ ನಡೆಯುವುದಿಲ್ಲ; ಅಲ್ಲಿ ಶೋಷಣೆ, ವಂಚನೆ, ಕ್ಷುಲ್ಲಕ ಕದನ-ಕಾರ್ಪಣ್ಯಗಳಿರುವುದಿಲ್ಲವೆಂಬಂತೆ ಬದುಕುವ ಮಾನವ ಹೃದಯಗಳು ಬೇಕಾಗುತ್ತವೆ>>
ನಾವು ಇಲ್ಲಿಲ್ಲ ಅ೦ದ್ರೆ ದೇವರ ಸಾಮ್ರಾಜ್ಯದಲ್ಲಿಲ್ಲ. ನಾವಿರುವ ಸಧ್ಯದ ಸಾಮ್ರ್ಯವನ್ನು ನೀವು ಹೇಳುವ ದೇವರ ಸಾಮ್ರಾಜ್ಯವನ್ನಾಗಿ ನೋಡಲು ಹೋದರೆ ಆ ಸೋಮನಾಥ, ಕಾಶಿ ವಿಶ್ವನಾಥರ೦ಥವರು ಸುಮ್ಮನೆ ಕರಗುತ್ತಾ ತುಳಿಸಿಕೊಳ್ಳುತ್ತಾ ಕೂರುತ್ತರೆ ಪರ೦ತು ಎದ್ದು ಬರುವುದಿಲ್ಲ. ಅವರನ್ನು ಉಳಿಸಬೇಕಾದವರು ನಾವೇ
ಹರಿ
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
"ಸೋಮನಾಥ, ಕಾಶಿ ವಿಶ್ವನಾಥರ೦ಥವರು ಸುಮ್ಮನೆ ಕರಗುತ್ತಾ ತುಳಿಸಿಕೊಳ್ಳುತ್ತಾ ಕೂರುತ್ತರೆ ಪರ೦ತು ಎದ್ದು ಬರುವುದಿಲ್ಲ. ಅವರನ್ನು ಉಳಿಸಬೇಕಾದವರು ನಾವೇ" - ಹೌದೇ? ನಾನು ಇದುವರೆಗೂ ಭಗವಂತ ಸರ್ವಶಕ್ತನೆಂದೂ ನಮ್ಮನ್ನು ಉಳಿಸಬೇಕಾದವನು ಅವನೆಂದೂ ತಿಳಿದಿದ್ದೆ. ನಾವೇ ಅವನನ್ನು ಉಳಿಸಬೇಕಾದ ದುರ್ದೆಸೆ ಅವನಿಗೆಂದು ಬಂತು? "ಹರಕೊಲ್ಲಲ್ ಪರ ಕಾಯ್ವನೇ" ಅನ್ನೋದನ್ನ ಸ್ವಲ್ಪ ಬದಲಿಸಿ "ಪರ ಕೊಲ್ಲಲ್ ಹರನ ಕಾಯ್ವರಾರ್" ಎಂದು ಹಲುಬಬೇಕೇನೋ!
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
<< ಹೌದೇ? ನಾನು ಇದುವರೆಗೂ ಭಗವಂತ ಸರ್ವಶಕ್ತನೆಂದೂ ನಮ್ಮನ್ನು ಉಳಿಸಬೇಕಾದವನು ಅವನೆಂದೂ ತಿಳಿದಿದ್ದೆ >>
"God helps those who help themselves" ಅನ್ನೋದನ್ನ ನಿಮ್ಮಂಥವರಿಗಾಗಿ ಹೇಳಿದ್ದಿರಬಹುದೇನೋ?
<< ನಾವೇ ಅವನನ್ನು ಉಳಿಸಬೇಕಾದ ದುರ್ದೆಸೆ ಅವನಿಗೆಂದು ಬಂತು? >>
ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಬೇಕೆಂದಿರುವುದು. ರಾಮನನ್ನಲ್ಲ. ಅವನನ್ನು ಉಳಿಸುವ/ಅಳಿಸುವ ಮಾತೆಲ್ಲಿ ಬಂತು?
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ಅಪಾರ್ಥ! "ಸೋಮನಾಥ, ಕಾಶಿ ವಿಶ್ವನಾಥರ೦ಥವರು ಸುಮ್ಮನೆ ಕರಗುತ್ತಾ ತುಳಿಸಿಕೊಳ್ಳುತ್ತಾ ಕೂರುತ್ತರೆ ಪರ೦ತು ಎದ್ದು ಬರುವುದಿಲ್ಲ. ಅವರನ್ನು ಉಳಿಸಬೇಕಾದವರು ನಾವೇ" ಅನ್ನುವ ಹರೀಶರ ವಾಕ್ಯದಲ್ಲಿ "those who help themselves" ಅನ್ನುವ ಅರ್ಥ ನನಗಂತೂ ಹೊಳೆಯಲಿಲ್ಲ. ನಾನು ಅವರ ಆ ವಾಕ್ಯಕ್ಕೆ ಪ್ರತಿಕ್ರಿಯಿಸುತ್ತಿದ್ದೆನೆ ಹೊರತು "ನಮ್ಮನ್ನು ನಾವು ಉಳಿಸಿಕೊಳ್ಳಬಾರದು" ಅನ್ನಲಿಲ್ಲ :)
"ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಬೇಕೆಂದಿರುವುದು. ರಾಮನನ್ನಲ್ಲ. ಅವನನ್ನು ಉಳಿಸುವ/ಅಳಿಸುವ ಮಾತೆಲ್ಲಿ ಬಂತು?" - ಈ ಪ್ರಶ್ನೆ ಬಹುಶಃ ಹರೀಶರಿಗೆ ಹೋಗಬೇಕೇನೋ (ಏಕೆಂದರೆ "ಅವರನ್ನು ಉಳಿಸಬೇಕಾದವರು ನಾವೇ" ಎಂದವರು ಅವರು, ನಾನಲ್ಲ). ಇರಲಿ, ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಬೇಕೆಂದಿರುವುದು ನಮ್ಮ ಉಪಕಾರಕ್ಕೋ ರಾಮನ ಉಪಕಾರಕ್ಕೋ? ನಮ್ಮ ಉಪಕಾರಕ್ಕಾದರೆ ರಾಮನನ್ನೋ/ವಿಶ್ವನಾಥನನ್ನೋ "ಉಳಿಸುವ" ಹಮ್ಮಿನ ಮಾತೇಕೆ? ದೇವರ ಸರ್ವಶಕ್ತತ್ವದ ಅವಹೇಳನವಲ್ಲವೇ ಇದು? ರಾಮನಿಗೊಂದು ಮಂದಿರ ಕಟ್ಟುವ ನೆವದಲ್ಲಿ ರಾಮನನ್ನೇ ನಿಃಶ್ಶಕ್ತನೆಂದುಬಿಡುವುದೇ??? ಅನಾದಿಕಾಲದಲ್ಲಿ (ಈ ಸಾಬರೂ ಹಿಂದೂಗಳೂ ಇನ್ನೂ ಅಸ್ತಿತ್ವದಲ್ಲೇ ಇಲ್ಲದಿದ್ದಾಗ) ಭಗವಂತ ತನ್ನಷ್ಟಕ್ಕೆ ತಾನೇ ಇರಲೇಇಲ್ಲವೇ?
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
<< "ನಮ್ಮನ್ನು ನಾವು ಉಳಿಸಿಕೊಳ್ಳಬಾರದು" ಅನ್ನಲಿಲ್ಲ >>
ರೀ, ನಮ್ಮ ದೇಶದ ಮೇಲೆ ಧಾಳಿ ಮಾಡಿ ನಾವು ಕಟ್ಟಿಸಿದ ಮಂದಿರವನ್ನೇ ಪುಡಿ ಮಾಡಿದರಲ್ಲ. ನಮ್ಮವರನ್ನೇ ಕೊಂದರಲ್ಲ. ನೀವು ಅವರನ್ನು ಸಮರ್ಥಿಸುತ್ತೀರೇನು? ಆಗ ಪ್ರಾಣ ಕಳೆದುಕೊಂಡ ನಮ್ಮವರ ನೆನಪಿಗಾಗಿ ಅಯೋಧ್ಯೆಯಲ್ಲಿ ಸ್ಮಶಾನ ಕಟ್ಟಿಸುವುದು ಸೂಕ್ತ ಎನಿಸುತ್ತದೆ. ಆಗಲಾದರೂ ನಿಮ್ಮ ಹಾಗೆ ಯೋಚಿಸುವ ಪ್ರಗತಿತರರ ನೆನಪು ಚೆನ್ನಾಗಿರಬಹುದೇನೋ?
<< ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಬೇಕೆಂದಿರುವುದು ನಮ್ಮ ಉಪಕಾರಕ್ಕೋ ರಾಮನ ಉಪಕಾರಕ್ಕೋ >>
ನಮ್ಮ ಉಪಕಾರಕ್ಕೆ. ದೇವರನ್ನು ಪೂಜಿಸುವುದು ಯಾರ ಉಪಕಾರಕ್ಕೇ? ನಮ್ಮ ಉಪಕಾರಕ್ಕೇ ಅಲ್ಲವೆ? ಹಾಗೆಯೇ ಇದೂ.
<< ರಾಮನನ್ನೋ/ವಿಶ್ವನಾಥನನ್ನೋ "ಉಳಿಸುವ" ಹಮ್ಮಿನ ಮಾತೇಕೆ >>
ರಾಮನನ್ನು ಉಳಿಸುತ್ತೇವೆ ಎಂದು ಯಾರು ಹೇಳಿದ್ದಾರೆ? ನಾನಂತೂ ಕೇಳಿಲ್ಲ.
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
"ನಾವು ಕಟ್ಟಿಸಿದ" ಮಂದಿರವನ್ನು ಪುಡಿ ಮಾಡಿದ್ದನ್ನೂ ನಮ್ಮವರನ್ನೇ ಕೊಂದದ್ದನ್ನೂ ನಾನು ಸಮರ್ಥಿಸುತ್ತಿದ್ದೇನೆಂದು ತಮಗೆ ಅನ್ನಿಸಿದ್ದು ಹೇಗೋ ನನಗಂತೂ ಹೊಳೆಯಲಿಲ್ಲ. ಸ್ವಲ್ಪ ದಯಮಾಡಿ ವಿವರಿಸಿದರೆ ಅರ್ಥಮಾಡಿಕೊಳ್ಳಬಹುದು
"ಆಗಲಾದರೂ ನಿಮ್ಮ ಹಾಗೆ ಯೋಚಿಸುವ ಪ್ರಗತಿತರರ" - ನಾನು ಹೇಗೆ ಯೋಚಿಸುತ್ತೇನೆ ಅನ್ನುವುದಿರಲಿ, ನನ್ನ ಒಂದು ವಾಕ್ಯವನ್ನೇ ಇಷ್ಟು ಅಪಾರ್ಥಮಾಡಿಕೊಂಡು excite ಆಗುವ ನೀವು ನನ್ನ ಇಡೀ ಯೋಚನಾಧಾಟಿಯನ್ನೇ "ಅರ್ಥ"ಮಾಡಿಕೊಂಡು ಅದಕ್ಕೊಂದು "ಪ್ರಗತಿಪರ" ಹಣೆಪಟ್ಟಿಯನ್ನೂ ಕಟ್ಟಿಬಿಟ್ಟಿರಿ. ಈ ತಾರ್ಕಿಕತೆಗೆ ತಲೆದೂಗಲೇಬೇಕು
ಛೇ ಛೇ, ಬಿಡ್ತು ಅನ್ನಿ, ಮಂದಿರದ ಜಾಗದಲ್ಲಿ ಸ್ಮಶಾನ!!! ಎಂಥ ಮಾತು
"ರಾಮನನ್ನು ಉಳಿಸುತ್ತೇವೆ ಎಂದು ಯಾರು ಹೇಳಿದ್ದಾರೆ? ನಾನಂತೂ ಕೇಳಿಲ್ಲ" - ಸ್ವಾಮಿ, ನೀವು ಹೇಳಿದ್ರಿ ಅಂತ ನಾನು ಹೇಳಿದೆನೇ? ಹರೀಶರು ಹಾಗೆ ಹೇಳಿದ್ದಂತೂ ಸುಳ್ಳಲ್ಲವಲ್ಲ! ನನ್ನದು ಕೇವಲ ಅವರ ಆ ಮಾತಿಗೆ ಪ್ರತಿಕ್ರಿಯೆಯೇ ಹೊರತು ನೀವು ಅಯೋಧ್ಯೆಯಲ್ಲಿ ಮಂದಿರ ಕಟ್ಟುತ್ತೀರೋ ಅಥವ ಸ್ಮಶಾನ ಕಟ್ಟುತ್ತೀರೋ (ನೀವೇ ಹೇಳಿದಂತೆ, ನನ್ನ ಅಭಿಪ್ರಾಯವಲ್ಲ ಮತ್ತೆ) ಅದು ನನ್ನ ತಲೆಬಿಸಿಯಲ್ಲ. ನಾನು ನಂಬುವ, ನಂಬಿ ಬದುಕುವ ಸರ್ವಶಕ್ತನನ್ನೇ ನಿಃಶಕ್ತ, ನಮ್ಮಿಂದ ರಕ್ಷಿಸಿಕೊಳ್ಳಬೇಕಾದವನು ಎಂದುಬಿಟ್ಟರಲ್ಲ, ಅದರಿಂದ ಮನಸ್ಸು ಸ್ವಲ್ಪ ಕುಟುಕಿ ನನ್ನ ’ಧಾರ್ಮಿಕ ಭಾವನೆಗಳಿಗೆ’ ನೋವಾಯಿತು, ಪ್ರತಿಭಟಿಸಿದೆ. "ಧಾರ್ಮಿಕ ಭಾವನೆಗಳಿಗೆ ನೋವಾದಾಗ" ಪ್ರತಿಭಟಿಸುವುದು ನಮ್ಮ ಹಕ್ಕಲ್ಲವೇ? ಅದು ತಪ್ಪೆಂದರೆ ನಮ್ಮ ಈ ಎಲ್ಲ ಮೇಲಾಟಗಳೂ ತಪ್ಪೇ ;)
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
<< ಅದಕ್ಕೊಂದು "ಪ್ರಗತಿಪರ" ಹಣೆಪಟ್ಟಿಯನ್ನೂ ಕಟ್ಟಿಬಿಟ್ಟಿರಿ. ಈ ತಾರ್ಕಿಕತೆಗೆ ತಲೆದೂಗಲೇಬೇಕು >>
ಒಂದಾನೊಂದು ಕಾಲದಲ್ಲಿ ಸಂಪದದಲ್ಲಿ ನಿಮ್ಮ ಜೊತೆ ಸಾಕಷ್ಟು ಬಾರಿ ಚರ್ಚೆ ಮಾಡಿದ್ದೇನೆ. ಆ ಅನುಭವದ ಮೇಲೆ ಹಾಗೆ ಹೇಳಿದೆ. ಹಾಗಾಗಿ ಇದರಲ್ಲಿ ತಾರ್ಕಿಕತೆ ಏನೂ ಇಲ್ಲ.
<< ಹರೀಶರು ಹಾಗೆ ಹೇಳಿದ್ದಂತೂ ಸುಳ್ಳಲ್ಲವಲ್ಲ >>
ಹರೀಶರು ಏನೋ ಅವಸರದಲ್ಲಿ ಆ ಥರ ಬರೆದಿದ್ದಾರೆ. ಅದೇ ವಾಕ್ಯದಲ್ಲಿ ಇತರ ತಪ್ಪುಗಳೂ ಇವೆ ಅಲ್ಲವೇ? ಅಲ್ಲದೆ ಕಾಶಿ ಯನ್ನು ಉಳಿಸುವುದು ಅಂದಿದ್ದಾರೆ. ಕಾಶಿ ಒಂದು ಸ್ಥಳ ತಾನೇ? ದೇವರಲ್ಲವಲ್ಲ? ಹಾಗಿದ್ದಲ್ಲಿ ದೇವರನ್ನು ಉಳಿಸುವ ಮಾತೆಲ್ಲಿ ಬಂತು?
ಉಳಿದಂತೆ ನೀವು ’"’ ದ ಒಳಗೆ ಬರೆದ ಶಬ್ದಗಳ ಅರ್ಥ ಏನು? ಕುಹಕವೇ? "ನಾವು ಕಟ್ಟಿಸಿದ", "ಧಾರ್ಮಿಕ ಭಾವನೆಗಳಿಗೆ ನೋವಾದಾಗ", ಇವಕ್ಕೆಲ್ಲ ಏನು ಅರ್ಥ?
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ಆ ಸಾಕಷ್ಟು ಬಾರಿ ಚರ್ಚೆಯ ಹಿನ್ನೆಲೆಯಲ್ಲಿಯೇ ತಾವು ನನ್ನ ಮೇಲೆ ಪ್ರಗತಿಪರ ಗೂಬೆ ಕೂಡಿಸಿದಾಗ ನನಗೆ ನಗು ಬಂದದ್ದು. ನಾನು ಹಿಂದೆಂದೂ ತಮ್ಮ ಅರ್ಥದ ಪ್ರಗತಿಪರನಾಗಿರಲಿಲ್ಲ, ಇಂದೂ ಅಲ್ಲ, ಮುಂದೂ ಆಗುವುದಿಲ್ಲ ಅನ್ನುವ ನಂಬಿಕೆ ನನಗಿದೆ. ಮತ್ತೆ, ಅದರ ನಿಜ ಅರ್ಥದಲ್ಲಿ ನಾನು ಪ್ರಗತಿಪರನೇ, ಹಿಂದೆಯೂ, ಇಂದೂ, ಮುಂದೆಯೂ.
ಅವಸರದಲ್ಲೋ ಸಾವಕಾಶವಾಗೋ ಒಟ್ಟಿನಲ್ಲಿ ಅವರು ಹಾಗೆ ಹೇಳಿದ್ದು ತಪ್ಪು ಎಂದು ಒಪ್ಪಿದಿರಿ. ನನ್ನ ತಕರಾರು ತೀರಿತು. ಇದನ್ನು ಆಗಲೇ ಮಾಡದೇ ಸುಮ್ಮನೇ ಬಿರುಗಾಳಿಯೆಬ್ಬಿಸಿದಿರಿ.
ನಾನು ""ದ ಒಳಗೆ ಬರೆದ ಶಬ್ದಗಳಿಗೆ ವಿಶೇಷಾರ್ಥವೇನೂ ಇಲ್ಲ. ಅವು ಪದೇಪದೇ ಸಾಮಾನ್ಯವಾಗಿ ಹೊಸೆದುಬಿಡುವ ಬಾಣಗಳಾದ್ದರಿಂದ ಅದನ್ನು ""ಲ್ಲಿ ಹಾಕಿದೆ ಅಷ್ಟೇ. ಆ ಬಾಣವನ್ನು ಬಿಡುವ ಹಕ್ಕು ನನಗೂ ಇದೆ ಎಂದು establish ಮಾಡುವುದಷ್ಟೇ ಅದರ ಉದ್ದೇಶ.
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
:) ಸರಿ. ರಾಜಿಯಾಗೋಣ.
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
:) ಮುಂದಿನ ಕದನದ ವರೆಗೂ ;) ;)
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ನಮ್ಮ ನಿಮ್ಮಲ್ಲೇ ಕದನ ಯಾಕೆ? ನಮ್ಮಿಬ್ಬರ ಕದನದಲ್ಲಿ ಇನ್ನೊಬ್ಬ ಘಜ್ನಿ ಬಂದಾನು.. ಹುಷಾರು :)
ಉ: “ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....
ಕದನ ನನ್ನ ಆಯ್ಕೆಯಲ್ಲ. ನಾನು "ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ" ;) ;)
Pages