19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಬರಲಿರುವ ನನ್ನ ಸಂಪಾದಿತ 'ಹಿಂದೂ' ಹಾಗೆಂದರೇನು. . . . ? ಕೃತಿಯಲ್ಲಿನ ವಾದಗಳ ಒಂದು ನೋಟ,

October 28, 2010 - 10:46am
Kiran.M

ಬರಲಿರುವ ನನ್ನ ಸಂಪಾದಿತ 'ಹಿಂದೂ' ಹಾಗೆಂದರೇನು. . . . ? ಕೃತಿಯಲ್ಲಿನ ವಾದಗಳ ಒಂದು ನೋಟ,


ಭಾರತದ 80 ವರ್ಷಗಳ ಇತಿಹಾಸದಲ್ಲೇ 'ದೇಶಭಕ್ತರು' ಎಂಬ ಪಟ್ಟವನ್ನು ಆರೆಸ್ಸೆಸ್ ಯಾರಿಗೂ
ಬಿಟ್ಟುಕೊಟ್ಟಿಲ್ಲ. ದೇಶ, ದೇಶಪ್ರೇಮ ಎಂಬ ಪರಿಭಾಷೆಗೆ ಏನೇ ಸೈದ್ಧಾಂತಿಕ ವಿಶ್ಲೇಷಣೆ
ಕೊಟ್ಟರೂ, ಸಾಮಾನ್ಯ ಜನರ ಕಣ್ಣಲ್ಲಿ ಆರೆಸ್ಸೆಸ್ ರೂಢಿಸಿರುವ 'ಪರದೇಶ ವಿರೋಧಿ' ಭಾರತ
ಪ್ರೇಮ ಆಳವಾಗಿ ಬೇರುಬಿಟ್ಟಿದೆ. ಆ ರೀ ತಿಯ ಸಂಘಟನಾ ಚಾತುರ್ಯದ ಅಭಾವವೇ ಭಾರತದ ಉಳಿದ
ಜನಸಮುದಾಯ ಮತ್ತು ಸಂಘಟನೆಗಳ ಸಮಸ್ಯೆ ಎನ್ನಿಸಿಬಿಡುತ್ತದೆ . . ..
ಬರಲಿರುವ ನನ್ನ ಸಂಪಾದಿತ 'ಹಿಂದೂ' ಹಾಗೆಂದರೇನು. . . . ? ಕೃತಿಯಲ್ಲಿನ ವಾದಗಳ ಒಂದು ನೋಟ,


ಕಥೆಗಳನ್ನು ಆಚರಣೆಗಳನ್ನು ಹಿಸ್ಟಾರಿಸೈಸೇಶನ್ ಮಾಡುವುದರಿಂದ ಉಂಟಾಗುವ ಮೊದಲ
ಸಮಸ್ಯೆಯೆ 'ಸತ್ಯ'ದ ಪ್ರತಿಪಾದನೆ ಇತಿಹಾಸವು ಘಟನೆಗಳನ್ನು ಸತ್ಯ ಅಥವಾ ಸುಳ್ಳುಗಳ
ಪಾತಳಿಗಳಲ್ಲಿ ಮಾತ್ರ ಕಲೆಹಾಕುವ ಧೋರಣೆಯನ್ನು ಮುಂದೊಡ್ಡುತ್ತದೆ. ಇದರಿಂದಾಗಿ, ತಮ್ಮ ಗತ
ಹಾಗೂ ಆಚರಣೆಗಳ ಸತ್ಯಾಸತ್ಯತೆಗಳ ಗೋಜಿಗೆ ಹೋಗ...ದ ಭಾರತದಂತಹ ದೇಶದ ಜನರಿಗೆ ಇತಿಹಾಸವು ಗೊಂದಲವನ್ನುಂಟು
ಮಾಡುತ್ತದೆ.


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (4 votes)
To prevent automated spam submissions leave this field empty.

Submitted by prasannasp on

ಸರಿಯಾಗಿ ಅರ್ಥ ಆಗಲಿಲ್ಲ, ಇನ್ನೊಂದು ಸ್ವಲ್ಪ ವಿವರಣೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು.
ಫಾಂಟ್ ಸಣ್ಣಗೆ, ಕಪ್ಪು ಬಣ್ಣದಲ್ಲಿದ್ದರೇ ಚೆಂದ.

Submitted by Kiran.M on

ಪ್ರಸನ್ನ ಅವರೇ ಇದು ಸದ್ಯದಲ್ಲೇ ಬಿಡುಗಡೆ ಗೊಳ್ಳಲಿರುವ ನನ್ನ ಸಂಪಾದಿತ 'ಹಿಂದೂ' ಹಾಗೆಂದರೇನು. . . . ?ಕೃತಿಯಲ್ಲಿನ ೨ ಪ್ರಮುಖ ವಾದಗಳನ್ನು ನೀಡಿದ್ದೇನೆ.

1) ಭಾರತದ 80 ವರ್ಷಗಳ ಇತಿಹಾಸದಲ್ಲೇ 'ದೇಶಭಕ್ತರು' ಎಂಬ ಪಟ್ಟವನ್ನು ಆರೆಸ್ಸೆಸ್ ಯಾರಿಗೂ
ಬಿಟ್ಟುಕೊಟ್ಟಿಲ್ಲ. ದೇಶ, ದೇಶಪ್ರೇಮ ಎಂಬ ಪರಿಭಾಷೆಗೆ ಏನೇ ಸೈದ್ಧಾಂತಿಕ ವಿಶ್ಲೇಷಣೆ
ಕೊಟ್ಟರೂ, ಸಾಮಾನ್ಯ ಜನರ ಕಣ್ಣಲ್ಲಿ ಆರೆಸ್ಸೆಸ್ ರೂಢಿಸಿರುವ 'ಪರದೇಶ ವಿರೋಧಿ' ಭಾರತ
ಪ್ರೇಮ ಆಳವಾಗಿ ಬೇರುಬಿಟ್ಟಿದೆ. ಆ ರೀತಿಯ ಸಂಘಟನಾ ಚಾತುರ್ಯದ ಅಭಾವವೇ ಭಾರತದ ಉಳಿದ ಜನಸಮುದಾಯ ಮತ್ತು ಸಂಘಟನೆಗಳ ಸಮಸ್ಯೆ ಎನ್ನಿಸಿಬಿಡುತ್ತದೆ .

2) ಕಥೆಗಳನ್ನು ಆಚರಣೆಗಳನ್ನು ಹಿಸ್ಟಾರಿಸೈಸೇಶನ್ ಮಾಡುವುದರಿಂದ ಉಂಟಾಗುವ ಮೊದಲ
ಸಮಸ್ಯೆಯೆ 'ಸತ್ಯ'ದ ಪ್ರತಿಪಾದನೆ. ..ಇತಿಹಾಸವು ಘಟನೆಗಳನ್ನು ಸತ್ಯ ಅಥವಾ ಸುಳ್ಳುಗಳ
ಪಾತಳಿಗಳಲ್ಲಿ ಮಾತ್ರ ಕಲೆಹಾಕುವ ಧೋರಣೆಯನ್ನು ಮುಂದೊಡ್ಡುತ್ತದೆ. ಇದರಿಂದಾಗಿ, ತಮ್ಮ ಗತ
ಹಾಗೂ ಆಚರಣೆಗಳ ಸತ್ಯಾಸತ್ಯತೆಗಳ ಗೋಜಿಗೆ ಹೋಗ...ದ ಭಾರತದಂತಹ ದೇಶದ ಜನರಿಗೆ ಇತಿಹಾಸವು ಗೊಂದಲವನ್ನುಂಟು ಮಾಡುತ್ತದೆ.

Submitted by raghusp on

<<ಭಾರತದ 80 ವರ್ಷಗಳ ಇತಿಹಾಸದಲ್ಲೇ 'ದೇಶಭಕ್ತರು' ಎಂಬ ಪಟ್ಟವನ್ನು ಆರೆಸ್ಸೆಸ್ ಯಾರಿಗೂ
ಬಿಟ್ಟುಕೊಟ್ಟಿಲ್ಲ. ದೇಶ, ದೇಶಪ್ರೇಮ ಎಂಬ ಪರಿಭಾಷೆಗೆ ಏನೇ ಸೈದ್ಧಾಂತಿಕ ವಿಶ್ಲೇಷಣೆ
ಕೊಟ್ಟರೂ, ಸಾಮಾನ್ಯ ಜನರ ಕಣ್ಣಲ್ಲಿ ಆರೆಸ್ಸೆಸ್ ರೂಢಿಸಿರುವ 'ಪರದೇಶ ವಿರೋಧಿ' ಭಾರತ
ಪ್ರೇಮ ಆಳವಾಗಿ ಬೇರುಬಿಟ್ಟಿದೆ. ಆ ರೀತಿಯ ಸಂಘಟನಾ ಚಾತುರ್ಯದ ಅಭಾವವೇ ಭಾರತದ ಉಳಿದ ಜನಸಮುದಾಯ ಮತ್ತು ಸಂಘಟನೆಗಳ ಸಮಸ್ಯೆ ಎನ್ನಿಸಿಬಿಡುತ್ತದೆ .>>

ಅವರು ಬಿಟ್ಟುಕೊಟ್ಟಿಲ್ಲ ಅಂತ ಯಾಕನ್ನಬೇಕು , ಬೇರೆ ಸಂಘಟನೆಗಳು ಅವರ ಮಟ್ಟಕ್ಕೆ ಏರಲು ಸಾಧ್ಯವಾಗಿಲ್ಲ ಎಂದು ನನ್ನ ಅನಿಸಿಕೆ

Submitted by ssnkumar on

> ಸಾಮಾನ್ಯ ಜನರ ಕಣ್ಣಲ್ಲಿ ಆರೆಸ್ಸೆಸ್ ರೂಢಿಸಿರುವ 'ಪರದೇಶ ವಿರೋಧಿ' ಭಾರತ ಪ್ರೇಮ ಆಳವಾಗಿ ಬೇರುಬಿಟ್ಟಿದೆ.
ಆರೆಸ್ಸೆಸ್ ಪರದೇಶ ವಿರೋಧಿ ಎಂದು ಯಾರು ಹೇಳಿದರು?
ಆರೆಸ್ಸೆಸ್ಸಿಗರ ಯಾವ ಭಾಷಣದಲ್ಲಿ, ಯಾವ ಪುಸ್ತಕ/ಬರಹಗಳಲ್ಲಿ ಈ ವಿಚಾರ ಮೂಡಿ ಬಂದಿದೆ.
ಹಾಗೆ ನೋಡಿದರೆ, ಆರೆಸ್ಸೆಸ್ ನಲ್ಲಿ ಜಪಾನ್, ಇಸ್ರೇಲ್ ಮುಂತಾದ ದೇಶಗಳ ಉದಾಹರಣೆ ನೀಡುತ್ತಲೇ ಇರುತ್ತಾರೆ.
ನಮ್ಮ ದೇಶವೂ ಹಾಗಾಗಬೇಕೆಂದು, ಮೇಲೇಳಬೇಕೆಂದು ಬಯಸುತ್ತಾರೆ.
ಆದರೆ, ನಮ್ಮ ಮೇಲೆ ಆಕ್ರಮಣ ನಡೆಸಿದವರ ಕುರಿತಾಗಿ ಅವರು ತಿಳಿಸಿಕೊಡುತ್ತಾರೆ.
ದೇಶದ ಮೇಲೆ ಆಕ್ರಮಣ ನಡೆಸುವವರ ವಿಚಾರ ತಿಳಿಸುವುದೇ "ಪರದೇಶ ವಿರೋಧಿ" ಎಂದು ನೀವು ತಿಳಿಯುವುದಾದರೆ......!!

Submitted by ssnkumar on

ದೇಶಭಕ್ತಿ ಎಂದ ಕೂಡಲೇ ಆರೆಸ್ಸೆಸ್ ಹೆಸರೇ ಮೊದಲು ನೆನಪಿಗೆ ಬರುತ್ತದೆ ಎನ್ನುವುದು ನಿಮ್ಮ ಮಾತಿನ ಅರ್ಥ.
ಆದರೆ, ದೇಶಭಕ್ತಿಯನ್ನು ಯಾರೂ ಗುತ್ತಿಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎನ್ನುವುದು ನನ್ನ ಅನಿಸಿಕೆ.
ದೇಶಭಕ್ತಿ ಎಂದಾಗ ಆರೆಸ್ಸೆಸ್ ನೆನಪಾಗುತ್ತದೆ ಎಂದರೆ, ಅದು ಆರೆಸ್ಸೆಸ್ ಅವರ ತಪ್ಪಲ್ಲ ಅಲ್ಲವೇ?
ಹಾಗೆ ನೋಡಿದರೆ, ಅದು ಆರೆಸ್ಸೆಸ್ಸಿನ ಸಾಧನೆಯನ್ನೇ ತೋರಿಸುತ್ತದೆ - ೮೫ ವರ್ಷಗಳ ನಂತರವೂ ತನ್ನ ಲಕ್ಷ್ಯದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ,
ತನ್ನ ಸಿದ್ಧ್ಹಾಂತಗಳಲ್ಲಿ ರಾಜಿ ಮಾಡಿಕೊಳ್ಳದೆ, ಸತತವಾಗಿ ಅದು ದೇಶಭಕ್ತರನ್ನು ತಯಾರಿಸುತ್ತಿದೆ. ಇದು ಸಂತೋಷದ ಸಂಗತಿಯೂ ಹೌದು.

ಆದರೆ, ಇದಕ್ಕೆ ದುಃಖದ ಮಗ್ಗುಲೂ ಇದೆ - ಆರೆಸ್ಸೆಸ್ ಬಿಟ್ಟು ಮತ್ಯಾರೂ ದೇಶಭಕ್ತರನ್ನು ತಯಾರು ಮಾಡುತ್ತಿಲ್ಲವಲ್ಲಾ?
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟದ್ದೆಂದು ಹೇಳುವ ಕಾಂಗ್ರೆಸ್, ಸ್ವಾತಂತ್ರ್ಯಪೂರ್ವದಲ್ಲಿ ದೇಶಭಕ್ತಿಗೆ ಹೆಸರಾಗಿದ್ದುದು ನಮಗೆಲ್ಲಾ ತಿಳಿದೇ ಇದೆ.
ಆದರೆ, ಇಂದು ಕಾಂಗ್ರೆಸ್ ಎಂದರೆ ನೆನಪಾಗುವ ಸಂಗತಿಗಳೇ ಬೇರೆ - ದೇಶಭಕ್ತಿ ಬಿಟ್ಟು ಉಳಿದಿದ್ದೆಲ್ಲಾ ನೆನಪಾಗುತ್ತದೆ.

ಮತ್ಯಾರೂ ಮಾಡದ ಕೆಲಸವನ್ನು ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ, ದೇಶದ ಎಲ್ಲರೂ ಮಾಡಬೇಕಾದ ಕೆಲಸವನ್ನು, ಸಹಜವಾಗಿ ಆಗಬೇಕಾದ್ದನ್ನು
ಆರೆಸ್ಸೆಸ್ ಮಾಡುತ್ತಿದ್ದರೆ ಅದಕ್ಕೇಕೆ ದುಃಖಾ?
ಯಾರೂ ಮಾಡದಿರುವುದನ್ನು ಅವರೇಕೆ ಮಾಡಬೇಕು ಎನ್ನುವುದು ನಿಮ್ಮ ಅಂಬೋಣವೇ?

Submitted by Kiran.M on

ಗೆಳೆಯರೇ ಮೇಲಿನ ಬಹುಪಾಲು ಪ್ರತಿಕ್ರೀಯೇಗಳಿಗೆ ಪುಸ್ತಕದಲ್ಲಿನ ವಾದದ ಇನ್ನೂಂದು ಮಗ್ಗುಲು ಉತ್ತರವಾಗಬಹುದೇನೊ ನೋಡಿ
ಇಂದು ನಮ್ಮೆದುರು ಎರಡು ಬಗೆಯ ದೇಶಭಕ್ತಿಗಳಿವೆ. ಒಂದು ಬಗೆಯ ದೇಶಭಕ್ತಿಯ ಪ್ರಕಾರ ದೇಶವನ್ನು ಧಾರ್ಮಿಕ ದೇವತೆಯನ್ನಾಗಿ ಮಾಡಿ, ಅದಕ್ಕೆ ಧರ್ಮದ ಹಣೆಪಟ್ಟಿಯನ್ನು ಹಚ್ಚಿದೆ. ಇಲ್ಲಿ ಧರ್ಮ ಎಂದರೆ ವಿವೇಕಾನಂದರು ಹೇಳಿದ್ದ ಪರಮತ ಸಹಿಷ್ಣು ಧರ್ಮವಲ್ಲ. ಬದಲಿಗೆ ಪರಮತ ದ್ವೇಷವನ್ನೇ ಉದ್ಧೇಶ ಮಾಡಿಕೊಂಡ ಗೋಲ್ವಾಲ್ಕರ್ ಧರ್ಮ. ಇದರಲ್ಲಿ ನೆರೆ ದೇಶದವರನ್ನು, ಪರ ಧರ್ಮದವರನ್ನು ದ್ವೇಷಿಸುವುದೇ ದೇಶಪ್ರೇಮ ಎಂದು ಭ್ರಮಿಸುತ್ತಾ, ಅದೇ ಭ್ರಮೆಯಲ್ಲಿ ಕೇಕೆ ಹಾಕುತ್ತಾ ಅವರ ಮೇಲೆ ವಿಷ ಕಾರುತ್ತಾ ನಾವೂ ದೇಶಪ್ರೇಮಿಗಳಾಗಿದ್ದೇವೆ ಎಂದುಕೊಳ್ಳುವುದು. ಅದೇ ಹೊತ್ತಿಗೆ ನಮ್ಮನ್ನು ಆಳುವವರು ದೇಶವನ್ನು ವಿದೇಶಿಯರ ಪದತಲದಲ್ಲಿ ಒಪ್ಪಿಸುವುದಕ್ಕೆ ತಲೆ ಅಲ್ಲಾಡಿಸುತ್ತಾ ಇರುವುದು. ಇನ್ನೊಂದು ದೇಶಭಕ್ತಿಯ ಪ್ರಕಾರ ದೇಶವೆಂದರೆ ಮಣ್ಣಲ್ಲ, ಮನುಷ್ಯರು ಎಂದರಿತು ಸಧ್ಯ ದೇಶವನ್ನು ಶಾಶ್ವತ ದಾಸ್ಯದ ನೊಗಕ್ಕೆ ಸಿಲುಕಿಸುತ್ತಿರುವ ವಿದೇಶಿ ರಾಜಕೀಯ ಅರ್ಥಿಕ ಆಕ್ರಮಣಕಾರರನ್ನು, ಸ್ವದೇಶಿ ದಲ್ಲಾಳಿಗಳ ವಿರುದ್ಧ ಸಾಂಘಿಕ ಸಮರ ಸಾರುವುದು. ಜಾಗತೀಕರಣದ ಶಕ್ತಿಗಳೆದುರು ಹರಾಜಾಗುತ್ತಿರುವ ನಮ್ಮ ದೇಶದ ಸಾರ್ವಭೌಮತೆಯನ್ನು ರಕ್ಷಿಸಲು ಕಾರ್ಯೋನ್ಮುಖವಾಗುವುದು . ಮನುಷ್ಯ ಮನುಷ್ಯರ ನಡುವಿನ ಬದುಕನ್ನು ಹೆಚ್ಚು ಸಹನೀಯಗೊಳಿಸುತ್ತಾ, ಸುಂದರಗೊಳಿಸುವುದು. ಮಾನವ ಪ್ರೇಮವನ್ನೇ ದೇಶಪ್ರೇಮದ ಮೂಲ ಆಸರೆಯನ್ನಾಗಿ ಮಾಡಿಕೊಂಡು ದೇಶಭಾಷೆಗಳ ಗಡಿಗಳನ್ನು ಮೀರಿ ವಿಶ್ವ ಮಾನವತೆಯೆಡೆಗೆ ನಮ್ಮನ್ನು ನಾವು ಕೊಂಡೊಯ್ಯುವುದು.
ಈ ಎರಡರಲ್ಲಿ ನೀವು ಯಾವ ಬಗೆಯ ದೇಶಪ್ರೇಮಿಗಳು? ಆಯ್ಕೆ ನಿಮ್ಮದೇ.

Submitted by mpneerkaje on

ನೀವು ಹೇಳಿದ ಮೊದಲನೇ ದೇಶಭಕ್ತಿ ಕಮ್ಯುನಿಸ್ಟರ ಪಾರ್ಟಿ ಗ್ರಂಥಗಳಲ್ಲಿರಬಹುದೇ ಹೊರತು ನಿಜ ಜಗತ್ತಿನಲ್ಲಿಲ್ಲ. ನೀವು ಹೇಳಿದ ಎರಡೂ ಬಗೆಯ ಕಾಲ್ಪನಿಕ ದೇಶಭಕ್ತಿಗಳಲ್ಲಿ ನನಗೆ ಯಾವುದೂ ಬೇಡ. :)

Submitted by mpneerkaje on

ವಿವೇಕಾನಂದ ಮತ್ತು ಗೋಲ್ವಾಲ್ಕರ್ ಅನ್ನು ಪರಸ್ಪರ ವಿರುಧ್ಧವಾಗಿ ಎತ್ತಿಕಟ್ಟುವ ನಿಮ್ಮ ಮಾತುಗಳನ್ನು ಕೇಳಿದರೆ ನಗು ಬರುತ್ತಿದೆ.. ಸಂಘ ಪರಿವಾರದೊಳಗೆ ವಿವೇಕಾನಂದ ಒಬ್ಬ ಆದರ್ಶ ವ್ಯಕ್ತಿ.. ಹಾಗೆಯೇ ಸಿಸ್ಟರ್ ನಿವೇದಿತಾ, ದಯಾನಂದ ಸರಸ್ವತಿ, ಅರವಿಂದೋ ಇವರೆಲ್ಲರೂ.

ದಿನನಿತ್ಯದ ಶಾಖೆಗಳಲ್ಲಿ ಆರೆಸ್ಸೆಸ್ ಪಠಿಸುವ "ಏಕಾತ್ಮತಾ ಸ್ತೋತ್ರ" ದಲ್ಲಿ ಆರೆಸ್ಸೆಸ್ ಆದರ್ಶ ಎಂದು ಪರಿಗಣಿಸುವ ಎಲ್ಲಾ ಜನರನ್ನೂ, ವಿಷಯಗಳನ್ನೂ ಪಟ್ಟಿ ಮಾಡಲಾಗಿದೆ. ಇದನ್ನು ಇಲ್ಲಿ ಓದಬಹುದು :
http://www.geetganga...
ಈ ಶ್ಲೋಕದಲ್ಲಿ ಗಾಂಧಿ, ವಿವೇಕಾನಂದರ ಹೆಸರು ಕೂಡ ಇದೆ. ಆಶ್ಚರ್ಯವೇ? ಕಮ್ಯುನಿಸ್ಟ್ ಪಾಠಗಳಿಗೂ ನಿಜ ಸಂಗತಿಗಳಿಗೂ ವ್ಯತ್ಯಾಸಗಳಿವೆ ಕಿರಣ್ ಅವರೇ...

Submitted by bhasip on

"ಗೋಲ್ವಾಲ್ಕರ್ ಧರ್ಮ. ಇದರಲ್ಲಿ ನೆರೆ ದೇಶದವರನ್ನು, ಪರ ಧರ್ಮದವರನ್ನು ದ್ವೇಷಿಸುವುದೇ ದೇಶಪ್ರೇಮ ಎಂದು ಭ್ರಮಿಸುತ್ತಾ, ಅದೇ ಭ್ರಮೆಯಲ್ಲಿ ಕೇಕೆ ಹಾಕುತ್ತಾ ಅವರ ಮೇಲೆ ವಿಷ ಕಾರುತ್ತಾ ನಾವೂ ದೇಶಪ್ರೇಮಿಗಳಾಗಿದ್ದೇವೆ ಎಂದುಕೊಳ್ಳುವುದು. "

ಹ ಹ !!!! ಎಂಥಾ ಹಾಸ್ಯ ಓದಿಸಿದಿರಿ ಸ್ವಾಮಿ!! ಸಧ್ಯ!! ಪುಸ್ತಕ ಓದುವ ತೋಂದರೆಯಿಂದ ನನನ್ನು ಮುಕ್ತಗೊಳಿಸಿದ್ದಕ್ಕೆ ಧನ್ಯವಾದಗಳು!!
ಅಂದ ಹಾಗೆ ಅದು ಯಾವ ನೆರೆ ದೇಶ ಅಂತನೂ ಹೇಳಿ ಪುಣ್ಯ ಕಟ್ಟಿಕೊಂಡುಬಿಡಿ....

ದೇಶಪ್ರೇಮಕ್ಕೂ, ದೇಶಭಕ್ತಿಗೂ ಬಹಳ ವ್ಯತ್ಯಾಸ ಇದೆ... ಒಮ್ಮೆ ವಿದ್ಯಾನಂದರ ಶಣೈ ಅವರ ಭಾರತ ದರ್ಶನ ಕೇಳಿ ಇಲ್ಲವೆ ಪುಸ್ತಕ ಓದಿ....

Submitted by bhasip on

ತಾವು ಬೆಂಗಳೂರಿನಲ್ಲೆ ಇದ್ದರೆ ತಿಳಿಸಿ ಪುಸ್ತಕ ತಲುಪಿಸುವೆ. ರಾಷ್ಟ್ರೋತ್ತಾನ ಪರಿಷತ್ತಿನ ಎಲ್ಲ ಶಾಖೆಗಳಲ್ಲಿ ಇದು ಲಭ್ಯ. ಇಲ್ಲವೆ ನಿಮ್ಮ ವಿಳಾಸವನ್ನು bhasidotmysoreatgmaildotcom ಗೆ ಕಳ್ಸಿ . ಪುಸ್ತಕ ತಲುಪಿಸುವ ವ್ಯವಸ್ಥೆ ಮಾಡುವೆ.

Submitted by Kiran.M on

ಗೆಳೆಯ ಭಾಸ್ಕರ್ ಅವರೇ ಇದನ್ನು ಸ್ವಲ್ಪ ಓದಿ "ಆರೆಸ್ಸೆಸ್ ಮೇಲ್ಜಾತಿಯವರ ಸಂಘಟನೆ ಎಂಬುದು ಹಳೆಯ ಅಪಾದನೆ. ಇವತ್ತು ದಲಿತ ಕೇರಿಗಳಿಂದ ಹಿಡಿದು ಆದಿವಾಸಿ ಹಾಡಿಗಳವರೆಗೆ ಆರೆಸ್ಸೆಸ್ನ 'ಕಲ್ಯಾಣ್ ಕಾರ್ಯಕ್ರಮ'ಗಳು ಹರಡಿವೆ. ಜಾತಿ ವ್ಯವಸ್ಥೆಯಿಂದ ನಲುಗಿರುವ ವರ್ಗವನ್ನು ಕೇಸರಿ ಶಾಖೆಗಳು ತಲುಪಿವೆ. ಹಿಂದುತ್ವ ಸನಾತನವಾದುದು ಹಾಗೂ ಮನುವಿನ ಮನುಷ್ಯವಿರೋಧಿ ಸಿದ್ಧಾಂತದ ಮುಂದುವರಿಕೆ ಈ ಹಿಂದುತ್ವವಾದ ಎಂದು ಹೇಳಲಾಗುತ್ತಿದೆ. ಆದರೆ ಆರೆಸ್ಸೆಸ್ ಯಾವತ್ತೂ ಆಧುನಿಕತೆಗೆ ಎದುರಾಗಲಿಲ್ಲ. ಬದಲಿಗೆ ಆರೆಸ್ಸೆಸ್ ಆಧುನಿಕತೆಯ ಪ್ರತಿಫಲನದಂತೆ ಕಾಣುತ್ತಿದೆ. ಹಿಂದೆ ನಾವು (ಹಿಂದೂಗಳು) ಹಾಗೂ ಅವರು (ಮುಸ್ಲಿಂರು) ಎಂದು ಕಾರ್ಯತಂತ್ರ ರೂಪಿಸುತ್ತಿದ್ದ ಆರೆಸ್ಸೆಸ್ ಇಂದು ನಾವು ಹಾಗೂ ಉಳಿದವರು (ಕ್ರಿಶ್ಚಿಯನ್ನರು, ಬುದ್ಧಿಜೀವಿಗಳು) ಎಂಬ ರಣತಂತ್ರ ಹೊಸೆಯುತ್ತಿದೆ."

ಇದಕ್ಕೆ ಉದಾಹರಣೆ ತಾವೇ ಬರೆದ (ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ )ಲೇಖನದ ಸಾಲುಗಳು ಒಮ್ಮೆ ಓದಿ
ದೇಶದಲ್ಲಿ ಎಲ್ಲೇ ಅಲ್ಪಸಂಖ್ಯಾತರ ಮೇಲೆ ಹಲ್ಲೆ, ದಾಳಿ, ಹಿಂಸೆ ನಡೆದಲ್ಲಿ, ಅದರ ಪೂರ್ವಪರ ತಿಳಿಯದೆ, ಗಡ್ಡ [ಇದ್ದಲ್ಲಿ] ಟ್ರಿಮ್ ಮಾಡಿಕೊಂದು ಮುಖ ತೊಳೆದು ಪತ್ರಿಕೆ, ಟಿವಿಗಳಿಗೆ ಮನ ಬಂದಂತೆ ಹೇಳಿಕೆ ಕೊಡುವ ಬುದ್ದಿ(?)ಜೀವಿಗಳೆ, ಈಗ ಎಲ್ಲಿದ್ದೀರ? ೩-೪ ವಾರದ ಹಿಂದೆ, ಅಲ್ಪಸಂಖ್ಯಾತರ ವಕ್ತಾರರಂತೆ ವಿಶ್ವವಿದ್ಯಾನಿಲಯ ಒಂದರಲ್ಲಿ ಭಾಷಣ ಮಾಡಿದ ಅನಂತಮೂರ್ತಿಗಳೇ ಈಗೇಕೆ ತಾವು ಇನ್ನು ಬಾಯಿ ಬಿಟ್ಟಿಲ್ಲ?ನಕ್ಸಲರ ನಾಯಕ, ಸಾಕೇತ್ ರಾಜನ್ ಸತ್ತಾಗ, CIP [citizen initiative for Peace] ಅನ್ನೋ ಸಂಘಟನೆ ಕಟ್ಟಿ ಮುಖ್ಯಮಂತ್ರಿಗಳ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದಿರಲ್ಲ, ಪ್ರಗತಿ(?)ಪರರೆ, ಈಗ ಯಾಕೆ ಮೌನಿ? ಇಲ್ಲಿ ನಿಮಗೆ ಶಾಂತಿ ಬೇಡವೆ? ಅಥವಾ ನಿಮ್ಮ ಚಟುವಟಿಕೆಗಳು ನಕ್ಸಲರಿಗೆ ಮಾತ್ರ ಸಂಭಂದಿಸಿದ್ದೆ? ಈಗಲೂ ಪ್ರತಿಭಟಿಸಿ, ನೋಡೋಣ. ಮಾಲೆಗಾಂವ್ ಘಟನೆಯಿಂದ ಹೊಸ ಪದ ಹುಟ್ಟು ಹಾಕಿ , ಮನ ಬಂದಂತೆ ಬರೆದು, ತಮ ಹಿಂದು ವಿರೋಧಿ ನಾಲಿಗೆಯ ಚಪಲ ತೀರಿಸಿ ಕೊಂಡ "ಇಸಂ" ವಾದಿಗಳೆ, ನಿಮ್ಮ "ಇಸಂ"ಗಳು ಒಂದು ಸಮುದಾಯ ನಡೆಸಿದ ಘಟನೆಯನ್ನು ಖಂಡಿಸಿ ಅಂತ ಹೇಳಿಲ್ಲವೆ? ಕೇವಲ ಮಾಲೆಗಾಂವ್ ಘಟನೆಯಿಂದ ಸಂಘಪರಿವಾರ, ಬಿಜೆಪಿ ಎಲ್ಲವನ್ನು ತೆಗಳಿದ ತಾವು, ಈಗ ಯಾಕೆ ಮೌನಿಗಳಾಗಿದ್ದೀರ?

Submitted by bhasip on

ಸ್ವಲ್ಪ ವಿವರಿಸಿ ದೇವ್ರು.. ಯಾಕೋ ರಾತ್ರಿ ನಿದ್ದೆ ಸರಿ ಇಲ್ಲ ಅನ್ನಿಸುತ್ತೆ.. ನಾನು ಬರೆದ ಆ ಭಯೋತ್ಪಾದನೆಯ ವಿಷಯದ ಲೇಖನದ ೧ ಪ್ಯಾರ ಇಲ್ಲಿ ಯಾಕೆ ಬಂತು. ಅದಕ್ಕೂ ಸಂಘ ಅಧುನಿಕತೆಗೆ ಎದುರಗದಿದ್ದಕ್ಕೂ ಎನು ಸಂಬಂಧ ಅಂತ....

Submitted by praveena saya on

ಕಿರಣ್ ,ಇದ್ಯಾಕೋ 'ಹೆಸರು ಕೇಳಿದ್ರೆ ಮುಂಡಾಸು ಮೂವತ್ತು ಮಳ' ಅಂದಂಗಿದೆ ! RSS ಬದಲಾಗುತ್ತಿದೆ ಅನ್ನುವುದಕ್ಕೆ , ಭಾಸ್ಕರ್ ಪ್ರತಿಕ್ರೆಯೆ ನಿದರ್ಶನ ಅನ್ನುತ್ತಿದೀರ ?
ಸ್ವಲ್ಪ ಬಿಡಿಸಿ ಹೇಳಿ .

Submitted by ssnkumar on

ಕಿರಣ್,
RSS ಬದಲಾಗುತ್ತಿದೆ ಅನ್ನುವ ನಿಮ್ಮ ಮಾತು ನಿಜವೇ ಆಗಿದ್ದಲ್ಲಿ, ಒಂದೆರಡು ಉದಾಹರಣೆಗಳನ್ನು ನೀಡಬಹುದೇ?

ನೀವು ನಿಮ್ಮ ಉದಾಹರಣೆಗಳಿಗೆ ಈ ಕೆಳಗಿನ ಮಾನದಂಡವನ್ನು ಉಪಯೋಗಿಸಿದರೆ, ಎಲ್ಲರಿಗೂ ಚೆನ್ನಾಗಿ ಅರ್ಥವಾಗುತ್ತದೆ. ಮತ್ತು RSSನ ಕುರಿತಾಗಿಯೂ ’ಸತ್ಯದರ್ಶನ’ವಾಗುತ್ತದೆ.
"RSSನ ಸಿದ್ಧಾಂತ ಹೀಗಿತ್ತು - ಈ ರೀತಿಯ ಅದರ ಸಾಹಿತ್ಯದಲ್ಲಿ, ಅದರ ನಾಯಕರ ಮಾತುಗಳಲ್ಲಿ ಹೇಳಲಾಗಿತ್ತು.
ಮತ್ತು ಇಂದು ಅದರ ಸಾಹಿತ್ಯದಲ್ಲಿ ಮತ್ತು ಅದರ ನಾಯಕರ ಮಾತುಗಳಲ್ಲಿ ಆ ಬದಲಾವಣೆಗಳನ್ನು ಹೀಗೆ ಕಾಣಬಹುದು."

ನೀವು ಉದಾಹರಣೆ ಸಹಿತ ವಿವರಿಸಲಾಗದಿದ್ದಲ್ಲಿ ಅಥವಾ ಉತ್ತರವನ್ನೇ ನೀಡುವ ಪ್ರಯತ್ನ ಮಾಡದಿದ್ದಲ್ಲಿ, ನಿಮ್ಮ ಮಾತುಗಳಲ್ಲಿನ "ಸತ್ಯಾಂಶ" ಎಲ್ಲರಿಗೂ ತಿಳಿಯುತ್ತದೆ.

Submitted by Kiran.M on

ನೋಡಿ ಸರ್ ನನ್ನ ಬರವಣಿಗೆಯಲ್ಲಿ ನಾನು ಯಾವ ಸಂಘಟನೆಯನ್ನು ದೊಷಿಸಿಲ್ಲ ಪುಸ್ತಕ ಓದಿದರೆ ಅದು ನಿಮ್ಮ ಗಮನಕ್ಕೆ ಬರುತ್ತದೆ ಇ ಇಡಿ ಪುಸ್ತಕದ ಉದ್ದೇಶ ನಮ್ಮ ಸಮಾಜವನ್ನು ಈಗ ನಾವು (ಅದು ಬುದ್ದಿಜಿವಿಯಗಿರಲಿ ಅಥವಾ ಸಂಘಟನೆಗಲಾಗಿರಲಿ) ನೋಡುತ್ತಿರುವ ನೋಟದಿಂದ ಆಗುತ್ತಿರುವ ಗೊಂದಲಗಳೇ ಹೆಚ್ಹು ಎಂಬುದನ್ನು ಕೆಂದ್ರಿಕರಿಸುತ್ತದೆ. ಏಕೆಂದರೆ ಇಂದು ನಮ್ಮ ಸಮಾಜದ ಕುರಿತಾದ ಸಿದ್ದಾಂತಗಳು ಪಾಶ್ಚಾತ್ಯ ಚಿಂತನಾ ಮಾದರಿಯಿಂದ ಪ್ರೆರೆಪಿತವಾಗಿವೆ,(ಉದಾ, ಜಾತಿ , ಸೆಕ್ಯುಲರಿಸಂ, ಆಧುನಿಕತೆ ಸಿದ್ದಾಂತಗಳು) ಒಂದು ಸಂಶೋಧನಾ ಬರವಣಿಗೆ ಸಮಾಜದ ಕುರಿತಾಗಿನ ಅಸ್ತೆಯಿಂದ ಬರೆಯಬೇಕು. ಅಂದರೆ ಅದು ಸಮಾಜದ ವಾಸ್ತವಗಳನ್ನು ತೋರಿಸಬೇಕು. ನನ್ನ ಪರಿಮಿತಿಯಲ್ಲಿ ಹೇಳುವುದಾದರೆ ಭಾರತ ಸಮಾಜದ ಕುರಿತಾದ ಒಟ್ಟು ಜ್ಞಾನವೇ ಪಾಶ್ಚಾತ್ಯ ಚಿಂತನಾ ಮಾದರಿಯಿಂದ ರೋಪಿತವಗಿರುವುದರಿಂದ , ಮತ್ತು ಇ ಜ್ಞಾನ ನಮ್ಮ ಜನರ ಅನುಭವಾತ್ಮಕ ನೆಲೆಯಿಂದ ದೊರ ಇರುವುದರಿಂದ ಅವು ನಮ್ಮ ಸಮಾಜವನ್ನು ಪ್ರತಿನಿಧಿಸುತ್ತಿಲ್ಲ ಆದ್ರೆ ನಮ್ಮ ಅಳುವ ವರ್ಗ ಇ ಸಿದ್ದಾಂತಗಳ ಆಧಾರದ ಮೇಲೆ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುತ್ತಿವೆ. ಪ್ರಜಾಪ್ರಭುತ್ವದಲ್ಲಿ ಅವು ಅವು ಜನರಿಗೆ ತಲುಪುತ್ತಿಲ್ಲ ಮೇಲಾಗಿ ಅರ್ಥವಾಗುತ್ತಿಲ್ಲ. (ನಾವು ಅವ್ರು ಅವಿದ್ಯಾವಂತರು ಅಂದುಕೊಳ್ಳುತ್ತೇವೆ) ಸಾಮಾಜಿಕ ಸಂಘಟನೆಗಳು ಇದೆ ಜ್ಞಾನದ ಆಧಾರದ ಮೇಲೆ ಸಮಜಿಕ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುತ್ತಿವೆ ಅದ್ರೆ ಇದರಿಂದಾದ ಪಲಿತಾಂಶ ಮಾತ್ರ ಸೊನ್ನೆ ಸ್ವತಂತ್ರ ಬಂದು ೬೦ ವರ್ಷಗಳ ಅನುಭವ ನಮಗಿದನ್ನು ತೋರಿಸಿದೆ. ಇದಕ್ಕಿರುವ ಪರಿಹಾರವೆಂದರೆ ನಮ್ಮ ಸಮಾಜದ ಕುರಿತಾಗಿನ ನಮ್ಮದೇ ಆದಂತಹ ಜ್ಞಾನದ ಶಾಖೆಗಳನ್ನು ಕಟ್ಟುವುದು. ಇಲ್ಲಿ ಉದಾಹರಣೆಗಾಗಿ ರಿಲಿಜಿಯನ್, ಜಾತಿ ವಿಷಯಗಳ ಪ್ರಸ್ತಾಪವಾಗಿದೆ ಅಸ್ಟೆ ಆದರೆ ನಾನು ಸಾಗಬೇಕಾದ ದಾರಿ ತುಂಬಾ ದೊರ ಇದೆ ಅನ್ನುವುದು ನನಗೆ ಗೊತ್ತಿದೆ. ಒಂದು ತಿಳಿದುಕೊಳ್ಳಿ ಯಾವತ್ತು ಓದಿನಿಂದ ಬಂದ ಆಲೋಚನೆಯೇ ಜ್ಞಾನವಲ್ಲ,(ಬಹಳ ಜನ ಹಾಗೆ ಭಾವಿಸುತ್ತಾರೆ) ಅ ಜ್ಞಾನ ನಮ್ಮ ಅನುಭವವನ್ನು ಪ್ರತಿನಿಧಿಸಬೇಕು ಅ ನಿಟ್ಟಿನಲ್ಲಿ ನಾವು ಯೋಚಿಸಿದರೆ ನಮ್ಮ ಸಾಮಾಜಿಕ ಸಮಸ್ಯೆಗಳ ಪರಿಹಾರದ ದಾರಿ ಸುಲಭವಾಗಬಹುದು. ಇ ನೆಲೆಯಲ್ಲಿ RSS ಮತ್ತು ದಲಿತ್ ಸಂಘಟನೆಗಳು ಸಂಘಟನೆಗಳು ಪ್ರಮುಖವಾಗುತ್ತವೆ ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಜನತೆಯ ಭಾಗವಹಿಸುವಿಕೆ ಬಹಳ ಮುಖ್ಯ ಭಾರತದಂಥಹ ದೇಶದಲ್ಲಿ ಜನತೆಯ ಅಬಿಪ್ರಾಯವನ್ನು ನಿರೋಪಿಸುತ್ತಿರುವುದು ವಿವಿಧ ಸಂಘಟನೆಗಳೇ (ಬಹುಪಾಲು ಇಂದು ರಾಜಕಿಕರಣಗೊಂಡಿವೆ ಅದು ಬೇರೆ ವಿಷಯ) ಅದರಲ್ಲಿ RSS ಮತ್ತು ದಲಿತ್ ಸಂಘಟನೆಗಳು ಬಹಳ ಮುಖ್ಯ ಇವೆರಡು ಒಂದರಿಂದ ಒಂದು ಕಲಿಯುವುದು ಹಂಚಿಕೊಳ್ಳುವುದು ಬಹಳ ಇದೆ. ಆದರೆ ಭಾರತ ಸಮಾಜ, ಸಂಸ್ಕೃತಿ, ಇತಿಹಾಸ ಕುರಿತಂತೆ ಇ ಎರಡು ಸಂಘಟನೆಗಳು ಸಮಾನವಾದ ಅಬಿಪ್ರಾಯವನ್ನು ಹೊಂದಿವೆ (ಪರವಿರೋಧ ಅಭಿಪ್ರಾಯಗಲಿದ್ದಗಿಯು ) ಮತ್ತು ಅ ಅಭಿಪ್ರಾಯ ಪಾಶ್ಚಾತ್ಯ ಚಿಂತನಾ ಮಾದರಿಯಿಂದ ಪ್ರೆರೆಪಿತವಾಗಿವೆ ಅದ್ದರಿಂದ ಅದು ತಪ್ಪದುದಗಿದೆ ಎಂಬ ಅಂಶ ನನ್ನ ಪುಸ್ತಕದ ಪ್ರಮುಖ ಅಂಶವಾಗಿದೆ. ಇ ಸಂಘಟನೆಗಳು ಸಿದ್ದಾಂತಿಕ ಮಟ್ಟದ ಇ ಸಮಸ್ಯೆಗಳನ್ನು ಬಗೆಹರಿಸಿಕೊಲ್ಲದಿದ್ದರೆ ಎಷ್ಟೇ ಸಮಾಜಪರ ಜನಪರ ಕೆಲಸ ಮಾಡಿದ್ರು ಪ್ರಯೋಜನವಿಲ್ಲ ಇ ಹಿನ್ನೆಲೆಯಲ್ಲಿ RSS ಮತ್ತು ದಲಿತ್ ಸಂಘಟನೆಗಳನ್ನು ವಿಮರ್ಶಿಸಲಾಗಿದೆ ಅಷ್ಟೇ ಎಕೆಂದರೆ ಎರಡು ಸಂಘಟನೆಗಳ ಸಾಮಾಜಿಕ ಕಾಳಜಿಯ ಕುರಿತು ಸಮಾನ ಆಸಕ್ತಿ, ಆಶ್ಚರ್ಯ ಹೊಂದಿರುವವನು ನಾನು

Submitted by ssnkumar on

ನಿಮ್ಮ ಮಾತುಗಳಲ್ಲಿ ವಿರೋಧಾಭಾಸಗಳೇ ಕಂಡು ಬರುತ್ತಿವೆ.
ನೀವು ಹಿಂದಿನ ಉತ್ತರಗಳಲ್ಲಿ ಹೀಗೆ ಹೇಳಿರುವಿರಿ:
೧. "ಆರೆಸ್ಸೆಸ್ ಮೇಲ್ಜಾತಿಯವರ ಸಂಘಟನೆ ಎಂಬುದು ಹಳೆಯ ಅಪಾದನೆ. ಇವತ್ತು ದಲಿತ ಕೇರಿಗಳಿಂದ ಹಿಡಿದು ಆದಿವಾಸಿ ಹಾಡಿಗಳವರೆಗೆ ಆರೆಸ್ಸೆಸ್ನ 'ಕಲ್ಯಾಣ್ ಕಾರ್ಯಕ್ರಮ'ಗಳು ಹರಡಿವೆ. ಜಾತಿ
ವ್ಯವಸ್ಥೆಯಿಂದ ನಲುಗಿರುವ ವರ್ಗವನ್ನು ಕೇಸರಿ ಶಾಖೆಗಳು ತಲುಪಿವೆ. ಹಿಂದುತ್ವ ಸನಾತನವಾದುದು ಹಾಗೂ ಮನುವಿನ ಮನುಷ್ಯವಿರೋಧಿ ಸಿದ್ಧಾಂತದ ಮುಂದುವರಿಕೆ ಈ ಹಿಂದುತ್ವವಾದ ಎಂದು
ಹೇಳಲಾಗುತ್ತಿದೆ. ಆದರೆ ಆರೆಸ್ಸೆಸ್ ಯಾವತ್ತೂ ಆಧುನಿಕತೆಗೆ ಎದುರಾಗಲಿಲ್ಲ. ಬದಲಿಗೆ ಆರೆಸ್ಸೆಸ್ ಆಧುನಿಕತೆಯ ಪ್ರತಿಫಲನದಂತೆ ಕಾಣುತ್ತಿದೆ. ಹಿಂದೆ ನಾವು (ಹಿಂದೂಗಳು) ಹಾಗೂ ಅವರು
(ಮುಸ್ಲಿಂರು) ಎಂದು ಕಾರ್ಯತಂತ್ರ ರೂಪಿಸುತ್ತಿದ್ದ ಆರೆಸ್ಸೆಸ್ ಇಂದು ನಾವು ಹಾಗೂ ಉಳಿದವರು (ಕ್ರಿಶ್ಚಿಯನ್ನರು, ಬುದ್ಧಿಜೀವಿಗಳು) ಎಂಬ ರಣತಂತ್ರ ಹೊಸೆಯುತ್ತಿದೆ."
೨. ಇಲ್ಲಿ ಧರ್ಮ ಎಂದರೆ ವಿವೇಕಾನಂದರು ಹೇಳಿದ್ದ ಪರಮತ ಸಹಿಷ್ಣು ಧರ್ಮವಲ್ಲ. ಬದಲಿಗೆ ಪರಮತ ದ್ವೇಷವನ್ನೇ ಉದ್ಧೇಶ ಮಾಡಿಕೊಂಡ ಗೋಲ್ವಾಲ್ಕರ್ ಧರ್ಮ.

ಈ ಮೇಲಿನ ಮಾತುಗಳಲ್ಲಿ ನೀವು ಯಾರನ್ನು ತೆಗಳುತ್ತಿರುವಿರಿ ಎನ್ನುವುದನ್ನು ನಿಮಗೆ ನಾನು ವಿವರಿಸುವ ಅಗತ್ಯವಿಲ್ಲವೆನಿಸುತ್ತದೆ.

ಇದೀಗ ಹೀಗೆ ಹೇಳುತ್ತಿರುವಿರಿ:
> ನೋಡಿ ಸರ್ ನನ್ನ ಬರವಣಿಗೆಯಲ್ಲಿ ನಾನು ಯಾವ ಸಂಘಟನೆಯನ್ನು ದೊಷಿಸಿಲ್ಲ.

ನೀವು ಯಾವುದೇ ಸಂಘಟನೆಯನ್ನು ಧೂಷಿಸದಿದ್ದರೆ, "ಗೋಳ್ವಲ್ಕರ್ ಧರ್ಮ", "ಆರೆಸ್ಸೆಸ್ ಇಂದು ನಾವು ಹಾಗೂ ಉಳಿದವರು (ಕ್ರಿಶ್ಚಿಯನ್ನರು, ಬುದ್ಧಿಜೀವಿಗಳು) ಎಂಬ ರಣತಂತ್ರ ಹೊಸೆಯುತ್ತಿದೆ",
ಇತ್ಯಾದಿಗಳೆಲ್ಲಾ ಸಂಘಟನೆಯನ್ನು ತಟಸ್ಥನಾಗಿ ನಿಂತು ವಿಮರ್ಶಿಸುವ ಪರಿಯೇನು!?

Submitted by Kiran.M on

"ಆರೆಸ್ಸೆಸ್ ಮೇಲ್ಜಾತಿಯವರ ಸಂಘಟನೆ ಎಂಬುದು ಹಳೆಯ ಅಪಾದನೆ. ಇವತ್ತು ದಲಿತ ಕೇರಿಗಳಿಂದ ಹಿಡಿದು ಆದಿವಾಸಿ ಹಾಡಿಗಳವರೆಗೆ ಆರೆಸ್ಸೆಸ್ನ 'ಕಲ್ಯಾಣ್ ಕಾರ್ಯಕ್ರಮ'ಗಳು ಹರಡಿವೆ. ಜಾತಿ ವ್ಯವಸ್ಥೆಯಿಂದ ನಲುಗಿರುವ ವರ್ಗವನ್ನು ಕೇಸರಿ ಶಾಖೆಗಳು ತಲುಪಿವೆ. ಹಿಂದುತ್ವ ಸನಾತನವಾದುದು ಹಾಗೂ ಮನುವಿನ ಮನುಷ್ಯವಿರೋಧಿ ಸಿದ್ಧಾಂತದ ಮುಂದುವರಿಕೆ ಈ ಹಿಂದುತ್ವವಾದ ಎಂದು ಹೇಳಲಾಗುತ್ತಿದೆ.

ಮೇಲಿನ ಸಾಲುಗಳನ್ನು ಒಮ್ಮೆ ಓದಿ ಇದು ನನ್ನ ಆರೋಪವಲ್ಲ ಬದಲಾಗಿ RSS ಕುರಿತಂತೆ ಇಂದು ಸಮಾಜದ ಒಂದು ವರ್ಗ ಮಾಡಿಟ್ಟಿರುವ ಆರೋಪ ಇ ವರ್ಗ RSS ಕುರಿತು ಮೇಲಿನ ಅಭಿಪ್ರಾಯವನ್ನು ಹೊಂದಿದೆ. ಮತ್ತೆ ವಿಮರ್ಶೆಗು ತೆಗಳುವಿಕೆಗು ವ್ಯತ್ಯಾಸವಿದೆ ನಾನು ನನ್ನ ಕಾಲದ ಮಾಹಿತಿಗಳ ಆಧಾರದ ಮೇಲೆ ನಾನು RSS ಅನ್ನು ವಿಮರ್ಶಿಸುತ್ತಿದ್ದೆನೆಯೇ ಹೊರತು ತೆಗಳುತ್ತಿಲ್ಲ. ಇಂದು ಸೋನಿಯಾ ಅವರು RSS ಅನ್ನು ಭಯೋತ್ಪಾದಕ ಸಂಘಟನೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಅದಕ್ಕೆ ಅವರದೇ ಅದ ಆಧಾರಗಲಿರುತ್ತವೆ ಅಲ್ಲವೇ

Submitted by shanmukha24 on

ಸೋನಿಯಾರಿ (ರಾಜಕಾರಣಿ)ಗೂ ನಿಮ (ಸಂಶೋಧಕ)ಗೂ ವ್ಯತ್ಯಾಸವಿಲ್ಲವೇ ಕಿರಣ್???, ಮೇಲೆ ನೀವೇ ಮಾಡಿದ ಉಲ್ಲೇಖದ ಸಾಲು ಇದು
<<<ಯಾವತ್ತು ಓದಿನಿಂದ ಬಂದ ಆಲೋಚನೆಯೇ ಜ್ಞಾನವಲ್ಲ,(ಬಹಳ ಜನ ಹಾಗೆ ಭಾವಿಸುತ್ತಾರೆ) ಅ ಜ್ಞಾನ ನಮ್ಮ ಅನುಭವವನ್ನು ಪ್ರತಿನಿಧಿಸಬೇಕು>>>
ಆದರೆ ತಮ್ಮ ವಿಮರ್ಶೆ ಇದಕ್ಕೆ ತದ್ವಿರುದ್ದವಾಗಿದೆ. ಆರ್.ಎಸ್.ಎಸ್. ಕುರಿತ ಯಾವ್ಯಾವುದೋ ಗುಂಪಿನ ನಿಲುವುಗಳಿಗೆ ನೀವೇಕೆ ಇಲ್ಲಿ ಧ್ವನಿ ನೀಡುತ್ತಿದ್ದೀರಿ? ಬೇರೆ ಬೇರೆ ಗುಂಪುಗಳ ನಿಲುವುಗಳನ್ನು ಉಲ್ಲೇಖಿಸುತ್ತಿದ್ದರೇ ಅದೇ ವಿಮರ್ಶೆಯೇ? ಸಾಧ್ಯವಾದಷ್ಟು ನಿಮ್ಮ ನಿಲುವು ಮತ್ತು ವಿವರಣೆ ನಿಖರ ಮತ್ತು ನಿರ್ಧಿಷ್ಟವಾಗಿದ್ದರೆ ನಿಮ್ಮ ಚಿಂತನೆಯ ಆಳ- ಅಗಲಗಳ ಪರಿಚಯ ಮತ್ತು ಅದರ ಮೇಲೆ ಉತ್ತಮ ಚರ್ಚೆ ಆಗಬಹುದೇನೋ. ಈ ಪುಸ್ತಕದಲ್ಲಿ ನನ್ನದೂ ಒಂದು ಲೇಖನವಿರುವುದರಿಂದ ಈ ಪುಸ್ತಕದ ಬಗ್ಗೆ ಬಿಡುಗಡೆಗೆ ಮುನ್ನವೇ ಇಲ್ಲದ ಗುಮಾನಿ ಹುಟ್ಟುವುದು ಬೇಡ ಎಂಬ ಕಾರಣಕ್ಕೆ ನನ್ನ ಈ ಕೋರಿಕೆ.
ಷಣ್ಮುಖ

Submitted by bhasip on

"ಇಂದು ಸೋನಿಯಾ ಅವರು RSS ಅನ್ನು ಭಯೋತ್ಪಾದಕ ಸಂಘಟನೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಅದಕ್ಕೆ ಅವರದೇ ಅದ ಆಧಾರಗಲಿರುತ್ತವೆ ಅಲ್ಲವೇ"

ಸಾರ್, ಸೋನಿಯ ಮೌತ್ ಕಾ ಸೌದಾಗರ್ ಅಂದಾಗಲೂ ಆಧಾರ ಇತ್ತು ಅಂತೀರ? ಒಬ್ಬ ರಾಜಕಾರಣಿ, ಅದು ಇನ್ನೊಬ್ಬರು ಬರೆದುಕೊಡುವ ಭಾಷಣ ಓದುವ ವಿದೇಶಿ ಮಹಿಳೆಯನ್ನು ತಾವು ಉದಾಹರಣೆಗೆ ತೆಗೆದುಕೊಳ್ಳುವುದಾದರೆ, ಇದೇ ವೇದಿಕೆಯಲ್ಲೆ ಆಧರವಿಲ್ಲದೆಯೆ ಆಧಾರಸಹಿತ ವಾದಿಸುವವರು ಕೆಲವರು ಸಿಕುತ್ತಾರೆ, ಕಡೆ ಪಕ್ಷ ಅವರನ್ನ ಉದಾಹರಣೆಗೆ ತೆಗೆದುಕೊಂಡರೆ ಒಳಿತಲ್ಲವೆ....

ಇನ್ನು ನಿಮ್ಮ ಲೇಖನ ಮತ್ತು ವಾದ ಸರಣಿ ಮುಂದುವರೆದ ಬಗ್ಗೆ.. ತಾವು ಲೇಖನದ ಮೊದಲಲ್ಲಿ ತಾವು ಇದನ್ನು ವಿಮರ್ಶಾತ್ಮಕ ಲೇಖನ ಎಂದು ಹೇಳಿಲ್ಲ ಅಥವಾ RSS ಬಗ್ಗೆ ತಾವು ಏನು ಮಾಡುತ್ತಿದ್ದೀರಿ ಅನ್ನುವುದನ್ನೂ ಹೇಳೀಲ್ಲ. ಬದಲಿಗೆ "ಭಾರತದ 80 ವರ್ಷಗಳ ಇತಿಹಾಸದಲ್ಲೇ 'ದೇಶಭಕ್ತರು' ಎಂಬ ಪಟ್ಟವನ್ನು ಆರೆಸ್ಸೆಸ್ ಯಾರಿಗೂ ಬಿಟ್ಟುಕೊಟ್ಟಿಲ್ಲ. ದೇಶ, ದೇಶಪ್ರೇಮ ಎಂಬ ಪರಿಭಾಷೆಗೆ ಏನೇ ಸೈದ್ಧಾಂತಿಕ ವಿಶ್ಲೇಷಣೆ ಕೊಟ್ಟರೂ, ಸಾಮಾನ್ಯ ಜನರ ಕಣ್ಣಲ್ಲಿ ಆರೆಸ್ಸೆಸ್ ರೂಢಿಸಿರುವ 'ಪರದೇಶ ವಿರೋಧಿ' ಭಾರತ ಪ್ರೇಮ ಆಳವಾಗಿ ಬೇರುಬಿಟ್ಟಿದೆ." ಅನ್ನುವ ನೇರ ಆರೋಪ ಹೊರೆಸಿದ್ದೀರಿ ಅಲ್ಲವೆ? ಆನಂತರ ಚರ್ಚೆ ಎಲ್ಲೆಲ್ಲೊ ಸಾಗಿ ಬೇರೆ ಎಲ್ಲಿಂದಲೂ ಸರಕು ತಂದು ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆದಿದೆ ಅನ್ನಿಸುತ್ತಿಲ್ಲವೆ?

Submitted by Kiran.M on

ಪ್ರೀತಿಯ ಭಾಸ್ಕರ್ ಅವರೇ ೧೫೦ ಪುಟಗಳ ಒಂದು ಪುಸ್ತಕದ ಪರಿಚಯ ( ಅದು ೨೦ ಲೇಖನಗಳ ಸಂಗ್ರಹ ) ಕೇವಲ ೩-೪ ಸಾಲುಗಳಲ್ಲಿ ಮಾಡಿಕೊಡಲು ಸಾದ್ಯವಿಲ್ಲ ನನ್ನ ಮುಖ್ಯ ಉದ್ದೇಶ ಪುಸ್ತಕದ ಕೊಂಚ ನೆರವಾದ ಸಾಲುಗಳಿಗೆ ಪ್ರತಿಕ್ರಿಯೆ ಪಡೆಯುವುದಾಗಿತ್ತು ಚರ್ಚೆಯ ಕಾರಣಕ್ಕಾಗಿ ಅ ಮಾದರಿಯ ಸಾಲುಗಳನ್ನು ನೀಡಿದ್ದೆ ಮತ್ತು ಅಂತರ್ಜಾಲದ ಓದುಗ ಬಳಗದಿಂದ ಬರಬಹುದಾದ ಪ್ರತಿಕ್ರಿಯೆಗಳ ನಿರೀಕ್ಷೆ ನನಗು ಮತ್ತು RSS ಕುರಿತ ಲೇಖನದ ಲೇಖಕ ಪ್ರಶಾಂತ್ ಅವರಿಗೂ ಇತ್ತು ಅಂಡ್ ವಿ got ಇಟ್
ಇನ್ನು ಷಣ್ಮುಖ ಅವ್ರೆ ವಿಜ್ಞಾದಲ್ಲಿ ಒಂದು ಪ್ರಮುಖ ಸೂತ್ರವಿದೆ ಅದು ಯಾವುದೆಂದರೆ ನಿರ್ವತದಿಂದ ನಾವು ಏನನ್ನು ಪಡೆಯಲು ಸಾದ್ಯವಿಲ್ಲ ಎಂಬುದು. ಆರ್.ಎಸ್.ಎಸ್. ಕುರಿತಂತೆ ಬೇರೆ ಗುಂಪುಗಳ ನಿಲುವುಗಳನ್ನು ಉಲ್ಲೇಖಿಸದೆ ಅದರ ಕುರಿತು ಒಂದು ಅಭಿಪ್ರಾಯ ಬರೆಯಲು ಅಥವಾ ನೀಡಲು ಹೇಗೆ ಸಾದ್ಯ ಎಂಬುದು ನನಗೆ ಅರ್ಥವಾಗಲಿಲ್ಲ. ದಯವಿಟ್ಟು ವಿವರಿಸಿ ನನ್ನ ಪ್ರಕಾರ ಒಂದು ವಾದ ಮಂಡಿಸುವ ಮುನ್ನ ಇ ಕುರಿತು ಈಗಾಗಲೇ ಆಗಿರುವ ಚರ್ಚೆಗಳು ಗಮನಿಸಿಯೇ ಮುಂದುವರೆಯಬೇಕಾಗುತ್ತದೆ. ಮತ್ತು ಲೇಖನದ ಲೇಖಕ ಪ್ರಶಾಂತ್ ಅವರು ಅದನ್ನೇ ಮಾಡಿದ್ದರೆ ಎಂಬುದು ನನ್ನ ಅಭಿಪ್ರಾಯ

Submitted by mpneerkaje on

<< ಆರ್.ಎಸ್.ಎಸ್. ಕುರಿತಂತೆ ಬೇರೆ ಗುಂಪುಗಳ ನಿಲುವುಗಳನ್ನು ಉಲ್ಲೇಖಿಸದೆ ಅದರ ಕುರಿತು ಒಂದು ಅಭಿಪ್ರಾಯ ಬರೆಯಲು ಅಥವಾ ನೀಡಲು ಹೇಗೆ ಸಾದ್ಯ ಎಂಬುದು ನನಗೆ ಅರ್ಥವಾಗಲಿಲ್ಲ >>
ಹು.. ಅಲ್ಲೇ ಇರೋದು ಸಮಸ್ಯೆ. ನೀವು ಬೇರೆ ಗುಂಪುಗಳ ನಿಲುವುಗಳನ್ನೇ ಉಲ್ಲೇಖಿಸುವುದಾದರೆ ನಿಮಗೂ ಅವುಗಳಿಗೂ ಏನು ವ್ಯತ್ಯಾಸ? ನೀವೇ ಆರೆಸ್ಸೆಸ್ ನ ಕಾರ್ಯಗಳನ್ನು ನೋಡಿ ಮತ್ತು ಅದರ ಸಾಹಿತ್ಯಗಳನ್ನು (ಜೊತೆಗೆ ಬೇರೆ ಗುಂಪುಗಳ ಸಾಹಿತ್ಯಗಳನ್ನೂ) ಓದಿ ಆಮೇಲೇ ಆರೆಸ್ಸೆಸ್ ಬಗ್ಗೆ ನಿಮ್ಮ ಟಿಪ್ಪಣಿ ಕೊಟ್ಟಾಗ ಅದಕ್ಕೆ ಬೆಲೆ ಬರುತ್ತದೆ.

Submitted by shanmukha24 on

ತಮ್ಮ ವಿಜ್ಞಾನದ ಪಾಠಕ್ಕೆ ಧನ್ಯವಾದಗಳು, ಮಿ.ಕಿರಣ್. ಆದರೆ ಆ ವಿಜ್ಞಾನದ ಸೂತ್ರ ಏನು ಹೇಳುತ್ತದೆ ಎಂಬುದನ್ನು ಸರಿಯಾಗಿ ತಿಳಿದುಕೊಂಡು ನಂತರ ನಿಮ್ಮ ಗುರುವಿಗೆ ಆ ಕುರಿತು ಪಾಠಮಾಡಿ. ಇಲ್ಲವಾದರೆ ಸೂತ್ರಸಂಬಂದಗಳಿಲ್ಲದ 'ಕೆತ್ತುಮೆತ್ತುಗಳೇ' ವಿಮರ್ಶೆಯೆಂಬ ಹೊಸ ಶಾಖೆಗೆ ಕತೃವಾದವೆಂಬ ಹೆಗ್ಗಳಿಕೆ ನಮಗೆ ಸಿಗಬಹುದು ಮತ್ತು ಅದು ವಿಜ್ಞಾನದ ಒಂದು ಸೂತ್ರವೆಂಬ ವ್ಯಾಖ್ಯಾನವೂ ಸಮರ್ಥನೆಯಾಗಿ ಹೊಂದಬಹುದು. ತಮಗೆ ಬಿಡುವಾದಾಗ ತಿಳಿಸಿ. ಆ ಪಾಠಕ್ಕಾಗಿ ಕುತೂಹಲದಿಂದ ಕಾಯುತ್ತೇನೆ.

Submitted by bhasip on

ಸಾರ್,

"ಆರ್.ಎಸ್.ಎಸ್. ಕುರಿತಂತೆ ಬೇರೆ ಗುಂಪುಗಳ ನಿಲುವುಗಳನ್ನು ಉಲ್ಲೇಖಿಸದೆ ಅದರ ಕುರಿತು ಒಂದು ಅಭಿಪ್ರಾಯ ಬರೆಯಲು ಅಥವಾ ನೀಡಲು ಹೇಗೆ ಸಾದ್ಯ ಎಂಬುದು ನನಗೆ ಅರ್ಥವಾಗಲಿಲ್ಲ. "

ಒಂದು ಸಂಘಟನೆ ಬಗ್ಗೆ ಅಭಿಪ್ರಾಯ ಪಡೆಯಲು ಕೇವಲ ಬೇರೆ ಬೇರೆ ಗುಂಪುಗಳ ನಿಲುವು ಉಲ್ಲೇಖಿಸಿದರೆ ಸಾಕೆ? ಅಥಾವ ಅದೆ Source ಆಗಬೇಕಿಲ್ಲ ಅಲ್ಲವೆ.
ಅಲ್ಲದೆ , ಆ "ಗುಂಪು"ಗಳ ಹೇಳಿರುವುದನ್ನು ಸಂಘಟನೆಯ ಕಾರ್ಯ ಚಟುವಟಿಕೆಗಳಿಗೆ ಹೋಲಿಸಿ ವಿಮರ್ಶಿಸಬಹುದಲ್ಲವೆ? ಚಿಕ್ಕ ಉದಾಹರಣೆ ತೆಗೆದುಕೊಳ್ಳೋಣ, ಇಟಲಿ ಮಹಿಳೆ ನಿನ್ನೆ AICC ಸಭೆಯಲ್ಲಿ ಹೇಳಿದ್ದು, ಯಾವ ನ್ಯಾಯಾಲಯದಲ್ಲಿ RSS ನ ಕಾರ್ಯರ್ತರಿಗೆ ಭಯೋತ್ಪಾದನೆ ಬಗ್ಗೆ ತೀರ್ಪು ಕೊಟ್ಟಿದೆ? ಎಲ್ಲರೂ ಇನ್ನು Under trials or suspect ತಾನೆ? ಅಲ್ಲದೆ ಸಂಘ ಮಾಡಿರುವ ಕೆಲ್ಸಗಳನ್ನು, ನಡೆಸುತ್ತಿರುವ ವಿದ್ಯಾಸಂಸ್ಥೆಗಳು, ಕಷ್ಟದ ಸಂಧರ್ಬದಲ್ಲಿ ದೇಶಕ್ಕೆ ಸಲ್ಲಿಸಿದ್ದ ಸೇವೆ , ಇದೆಲ್ಲ ಒಮ್ಮೆ ಹೋಲಿಸಬೇಕಲ್ಲವೆ? ಇದೇ RSS ಅನ್ನು, ಒಮ್ಮೆ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಅಂದಿನ ಪ್ರಧಾನಿ ಅಹ್ವಾನಿಸಿದ್ದು ಈ ಇಟಲಿ ಮಹಿಳೆಗೆ ಅಥವಾ ಆಕೆಯ ಸುಪುತ್ರನಿಗೆ ಗೊತ್ತೆ? ಸಿಮಿ ಗೆ ಹೋಲಿಸಿದ ಆತ, ಅದೆ ಸಿಮಿಯನ್ನ ಯಾವ ಸಂಚಲನಕ್ಕೆ ಆಹ್ವಾನಿಸಿದ್ದಾರೆ? ಅವರ ದೇಶಕ್ಕೆ ಕೊಡುಗೆ ಏನು ಎಂದು ಆತ ಹೋಲಿಸಿದ್ದಾನೊ? ಅಥವಾ ಅದನ್ನ ಉಲ್ಲೇಖಿಸುವ "ಶಾಂತಿ"ಪ್ರಿಯರು ಆ ಕೆಲ್ಸ ಮಾಡಿದ್ದಾರೊ? big Question mark ಅಷ್ಟೆ.....

ಒಂದು ಪುಸ್ತಕದ ಪರಿಚಯ ೪-೫ ಸಾಲಿನಲ್ಲಿ ಮಾಡಿಕೊಡಲು ಸಾಧ್ಯವಿಲ್ಲ ನಿಜ. ಆದರೆ ಬರೆದ ೪-೫ ಸಾಲುಗಳು ಅನಗತ್ಯ ಗೊಂದಲಕ್ಕೆ ಈಡುಮಾಡಬರದಲ್ಲವೆ?

Submitted by ssnkumar on

ಕಿರಣ್,

ನಿಮಗೆ ಬೇಕಾದ ವರ್ಗದವರ ಮಾತುಗಳನ್ನಷ್ಟೇ ತೆಗೆದುಕೊಂಡು, ಬೇಡವಾದದ್ದನ್ನು ಬಿಟ್ಟರೆ, ಅದು ವಿಮರ್ಶೆ ಹೇಗಾದೀತು?
RSS ಕುರಿತಾಗಿ ಮಹಾತ್ಮಾ ಗಾಂಧಿ, ಡಾ|| ಅಂಬೇಡ್ಕರ್, ಡಾ|| ಎ.ಪಿ.ಜೆ. ಅಬ್ದುಲ್ ಕಲಂ, ಸರ್ದಾರ್ ಪಟೇಲ್, ಡಾ|| ಜಾಕಿರ್ ಹುಸೇನ್, ಜಯಪ್ರಕಾಶ್ ನಾರಾಯಣ್, ಸರ್ದಾರ್ ಖುಶ್ವಂತ್ ಸಿಂಗ್, ಮುಂತಾದವರು ಏನು ಹೇಳಿದ್ದಾರೆ ಎಂಬುದನ್ನು ಸಹ ಪರಿಗಣಿಸಿರುವಿರೇ? ಅಥವಾ ಇವರ ಮಾತುಗಳಿಗೆ ಬೆಲೆ ಇಲ್ಲವೇ?

ಅವರುಗಳು ಏನು ಹೇಳಿದ್ದಾರೆಂಬುದನ್ನು ಇಲ್ಲಿ ಕೆಳಗೆ ಸೇರಿಸುವೆ (ನನ್ನ ಆಧಾರಗಳು ಆಂಗ್ಲ ಭಾಷೆಯಲ್ಲಿರುವುದರಿಂದ, ಅವನ್ನು ಅದೇ ರೀತಿ ನೀಡುತ್ತಿರುವೆ - ಕ್ಷಮೆ ಇರಲಿ):

WHAT THEY SAID

When I visited the RSS camp, I was very much impressed by your discipline and the complete absence of untouchability.
- Mahatma Gandhi at the RSS rally, Delhi 16.9.1947

In the Congress those who are in power feel that by virtue of authority they will be able to crush the R.S.S. By "danda" you cannot suppress an organization. Moreover "danda" is meant for thieves and "dakus". Using of "danda" will not help much. After all, R.S.S. men are not thieves and dacoits. They are patriots. They love their country.
- Sardar Vallabhbhai Patel in a public meeting, Lucknow 6.1.1948

I am surprised to find the Swayamsevaks moving about in absolute equality and brotherhood without even caring to know the caste of the others.
- Babasaheb Ambedkar at Pune Camp, May 1939

The allegations against RSS of violence and hatred against Muslims are wholly false. Muslims should learn the lesson of mutual love, co-operation and organization from RSS.
- Dr. Zakir Hussain

Yours is a revolutionary organization in the forefront of social transformation taking place today. You alone have the capacity to end casteism and wipe the tears from the eyes of the poor.
- Jayaprakash Narayan at RSS public function, Patna 3.11.1977

The name of RSS is a household word for selfless service all over the country.

- Koka Subba Rao, Rtd. Chief Justice of Bharat, 25.8.1968

RSS has played an honourable role in maintaining Hindu-Sikh unity before and after the murder of Indira Gandhi in Punjab, Delhi and other places.

- Sardar Khushwant Singh in Sunday Column

These days it is a fashion amongst the Congress and other secular leaders to speak ill about the RSS and the Sangh Parivar. They accuse the RSS of preaching hatred, creating communal tension and dividing the society on the basis of caste and of killing Mahatma Gandhi. Some of them have even called the RSS a snake which should be killed and not fed with milk.

Before spewing venom against one of the most respected organizations in India, these secular leaders should have a deeper perspective of our history. They must know that the court of law had categorically stated in the Mahatma Gandhi murder case that it was the act of an individual and that no organization was associated with it. They must know how their own idols and icons had come to respect the RSS and had praised it.

In 1934, when Gandhiji visited a 1500-strong Swayamsevaks camp at Wardha, he was pleasantly surprised to find that the Swayamsevaks were not even aware of the castes of one another, not to speak of any ideas of untouchability. The visit had left such a deep impression on Gandhiji’s mind that he referred to it full thirteen years later. In his address to the workers of Sangh in Bhangi Colony at Delhi on 16th September 1947, he said, “I visited the RSS camp years ago, when the founder Shri Hedgewar was alive. I was very much impressed by your discipline, the complete absence of untouchability and the rigorous simplicity. Since then the Sangh has grown. I am convinced that any organization which is inspired by the high ideal of service and self-sacrifice is bound to grow in strength.” (The Hindu: 17th September 1947)

When Dr. Babasaheb Ambedkar visited Sangh Shiksha Varga in Pune in 1939, he was surprised to find the Swayamsevaks moving about in absolute equality and brotherhood without even caring to know the caste of the others. When Dr. Ambedkar asked Dr. Hedgewar whether there were any untouchables in the camp, the latter replied that there were neither touchables nor untouchables, but only Hindus.

After partition, when the Maharaja of Kashmir was harbouring the idea of retaining Kashmir as an independent kingdom, it was Guru Golwalkar of the RSS whom Sardar Vallabhbhai Patel had sent to convince the Maharaja to join India. Shri Guruji flew to Srinagar on 17th October 1947. After discussions with Shri Guruji, the Maharaja finally expressed his readiness to sign the Instrument of Accession to Bharat. Shri Guruji returned to New Delhi on 19th October, and reported to Sardar Patel about the Maharaja’s readiness to accede to Bharat.

After partition, Delhi was in the throes of violence and intrigues by the Muslim Leaguers. When later on Dr. Bhagwan Das, the great savant and a recipient of the Bharat Ratna award, came to know the details of the role of RSS in those crucial days, he wrote on 16th October 1948:

"I have been reliably informed that a number of youths of RSS were able to inform Sardar Patel and Nehruji in the very nick of time of the Leaguer`s intended coup on September 10, 1947, whereby they had planned to assassinate all members of Government and all Hindu officials and thousands of Hindu citizens on that day and plant the flag of Pakistan on the Red Fort and then seize all Hindusthan."

He added:
"Why have I said all this? Because if those high-spirited and self-sacrificing boys had not given the very timely information to Nehruji and Patelji, there would have been no Government of India today, the whole country would have changed its name into `Pakistan`, tens of millions of Hindus would have been slaughtered and all the rest converted to Islam or reduced to stark slavery. Well, what is the net result of all this long story? Simply this - that our Government should utilise, and not sterlise, the patriotic energies of the lakhs of RSS youths."

During the China war in 1962, the Swayamsevaks of the RSS swung into action mobilising support to the governmental measures in general and to the jawans in particular. Pandit Nehru was so impressed that he invited a Sangh contingent to take part in the Republic Day Parade of 26th January 1963. At a mere two days’ notice, over 3000 Swayamsevaks turned up at the parade in full Sangh uniform. Their massive march became the major highlight of the programme. When, later on, some Congressmen raised their eyebrows over the invitation to Sangh, Pandit Nehru brushed aside the objections saying that all patriotic citizens had been invited to join the parade.

Submitted by ssnkumar on

ಇದರ ಮೂಲ: "How Others Look at the RSS by K.R.Malkani".
ಆ ಪುಸ್ತಕದಲ್ಲಿ ಸಾಕಷ್ಟು ವಿವರಗಳನ್ನು ಓದಬಹುದು.
ಅಂಬೇಡ್ಕರ್ ಹಾಗೂ ಗಾಂಧೀಜಿಯವರು ಆರೆಸ್ಸೆಸ್ ಶಿಬಿರ/ಶಾಖೆಗಳಿಗೆ ಭೇಟಿ ನೀಡಿದ್ದು ಅನೇಕ ಕಡೆಗಳಲ್ಲಿ ಉಲ್ಲೇಖಗೊಂಡಿದೆ.
ಗಾಂಧೀಜಿಯವರ ಮೊದಲ ಭೇಟಿ ಸಂಘ ಸ್ಥಾಪಕ ಡಾ|| ಹೆಡಗೇವಾರ್ ಅವರು ಬದುಕಿದ್ದಾಗಲೇ ಆದರೆ, ಮುಂದಿನ ಭೇಟಿ ಅವರ ಅವಸಾನದ ನಂತರದಲ್ಲಿ ಆಯಿತು.
ಎರಡನೇ ಭೇಟಿ ಸ್ವಾತಂತ್ರ್ಯ ಬಂದ ನಂತರದಲ್ಲಿ ಆಯಿತು.
ಜಯಪ್ರಕಾಶ್ ನಾರಾಯಣ್ ಅವರು ಬಹುಕಾಲದವರೆಗೆ ಆರೆಸ್ಸೆಸ್ ವಿರೋಧಿಯೇ ಆಗಿದ್ದರು.
೧೯೭೫-೭೭ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹತಾಶ ಸ್ಥಿತಿಗೆ ತಲುಪಿದ್ದ ಜಯಪ್ರಕಾಶರು ಆರೆಸ್ಸೆಸ್ಸಿನ ಸಂಪರ್ಕಕ್ಕೆ ಬಂದರು.
ಆ ನಂತರದಲ್ಲಿ ಅವರಿಗೆ ತಾವು ಅಲ್ಲಿಯವರೆಗೆ ತಿಳಿದದ್ದು ತಪ್ಪೆಂಬ ಅರಿವುಂಟಾಯಿತು.

ನಾನು ಮೇಲೆ ನೀಡಿದ ಆಂಗ್ಲ ಲೇಖನವನ್ನು ಈ ಕೊಂಡಿಯಲ್ಲಿ ನೋಡಬಹುದು: http://www.ivarta.co...

ನೆಹರೂ ಅವರು ಸಹ ಸಂಘದ ಕಟ್ಟಾ ವಿರೋಧಿಯಾಗಿದ್ದರು.
"ಈ ದೇಶದ ಒಂದಿಂಚು ನೆಲದಲ್ಲೂ ಭಗವಾಧ್ವಜ ಹಾರಾಡಲು ಬಿಡುವುದಿಲ್ಲ" ಎಂದು ಗುಡುಗಿದ್ದರವರು.
ಗಾಂಧಿ ಕೊಲೆ ಆರೋಪವನ್ನು "ಬಳಸಿ"ಕೊಂಡು ಸಂಘವನ್ನು ನಿಶೇಧಿಸಿ ಸಂಘದ ಸರಸಂಘಚಾಲಕರಾಗಿದ್ದ ಗುರೂಜಿಯವರನ್ನು ಸೆರೆಮನೆಗೆ ತಳ್ಳಿಬಿಟ್ಟರು.
ಇಷ್ಟಾಗಿಯೂ, ಸಂಘವು ಹಿಂಸಾಚಾರಕ್ಕೆ ಇಳಿಯಲಿಲ್ಲ. ಅದು ಅಹಿಂಸಾತ್ಮಕ ಚಳುವಳಿಯನ್ನು ನಡೆಸಿತು.
ಆ ಸಂದರ್ಭದಲ್ಲಿ ನಡೆದ ಐತಿಹಾಸಿಕ ಚಳುವಳಿಯಲ್ಲಿ ಜೈಲಿಗೆ ಸೇರಿದ ಒಟ್ಟು ಸ್ವಯಂಸೇವಕರ ಸಂಖ್ಯೆ, ೧೯೨೧ರ ಅಸಹಕಾರ ಆಂದೋಲನ, ೧೯೩೦ರ ದಂಡಿ ಯಾತ್ರೆ, ೧೯೪೨ ಛಲೇಜಾವ್ - ಈ ಎಲ್ಲದರ ಒಟ್ಟು ಸಂಖ್ಯೆಗಿಂತ ಹೆಚ್ಚಿತ್ತು ಎನ್ನುವುದು ಗಮನಾರ್ಹ ಸಂಗತಿ.
ನ್ಯಾಯಾಲಯ ಮತ್ತು ಸರಕಾರವೇ ನೇಮಿಸಿದ್ದ ಸಮಿತಿಗಳು "ಸಂಘಕ್ಕೂ ಗಾಂಧಿ ಕೊಲೆಗೂ ಸಂಬಂಧವಿಲ್ಲ; ಎಲ್ಲ ಆರೋಪಗಳೂ ನಿರಾಧಾರ ಮತ್ತು ಸತ್ಯದೂರ" ಎಂದು ತೀರ್ಪಿತ್ತ ನಂತರವೂ ನೆಹರೂ ಅವರು ಸಂಘದ ನಿಶೇಧವನ್ನು ಮುಂದುವರೆಸಿದರು - ಹಾಗಿತ್ತು ಅವರ ಸಂಘವಿರೋಧಿ ನಿಲುವು.
ಈ ರೀತಿಯಿದ್ದ ನೆಹರೂ ಅವರು, ೧೯೬೨ರ ಚೈನಾ ಯುದ್ಧದ ಸಂದರ್ಭದಲ್ಲಿ ಗಡಿ ಪ್ರದೇಶಗಳಲ್ಲಿ ಸಂಘದ ಸ್ವಯಂಸೇವಕರು ನಡೆಸಿದ ಕಾರ್ಯಗಳನ್ನು (ಸೈನಿಕರೂ ಹೆದರುತ್ತಿದ್ದ ಸ್ಥಳಗಳಿಗೆ ಸ್ವಯಂಸೇವಕರು ಹೋಗಿ ಬಂದರು) ತಿಳಿದ ನಂತರ, ತಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡರು.
೧೯೬೩ ಜನವರಿ ೨೬ರ ದೆಹಲಿಯ ಗಣರಾಜ್ಯೋತ್ಸವ ಪೆರೇಡಿಗೆ ಸಂಘಕ್ಕೂ ಆಮಂತ್ರಣ ಹೋಯಿತು.
ಕೇವಲ ಒಂದು ವಾರದ ಸಮಯದಲ್ಲಿ ಬಂದ ಆಮಂತ್ರಣಕ್ಕೆ ಓಗೊಟ್ಟು, ೩೦೦೦ ಗಣವೇಶಧಾರಿ ಸ್ವಯಂಸೇವಕರು ಅದರಲ್ಲಿ ಪಾಲ್ಗೊಂಡರು.
ಹೀಗೆ ಸಂಘದ ಸಂಪರ್ಕಕ್ಕೆ ಬಂದವರೆಲ್ಲರಿಗೂ ನಿಧಾನವಾಗಿಯಾದರೂ ಸತ್ಯದರ್ಶನವಾಗಿದೆ.

ಸಂಘದ ಕುರಿತಾಗಿ ತಿಳಿಯಬೇಕೆಂಬ, ವಿಮರ್ಶೆ ಮಾಡಬೇಕೆಂದ ಪ್ರಾಮಾಣಿಕ ಆಸಕ್ತಿ ಇದ್ದವರೆಲ್ಲರೂ ಓದಲೇಬೇಕಾದ ಪುಸ್ತಕವೆಂದರೆ "RSS - A vision in action by H.V.Sheshadri".

ಸತ್ಯ ತಿಳಿಯುವ ಆಸಕ್ತಿ ಇಲ್ಲದವರು ಹೆಚ್ಚೇನೂ ಮಾಡಬೇಕಾಗಿಲ್ಲ - ಕಣ್ಮುಚ್ಚಿ ಕುಳಿತರೆ ಸಾಕು.

Submitted by ssnkumar on

ಕೇವಲ ಇಂಟರ‍್ನೆಟ್ ಅನ್ನೇ ನಂಬಿಕೊಂಡು ಹುಡುಕಿದರೆ ಇಷ್ಟೇ ಆಗುವುದು.
ಇಂಟರ‍್ನೆಟ್‍ನಲ್ಲಿ ಇರುವುದಕ್ಕಿಂತ ಹಲವು ಪಟ್ಟು ಹೆಚ್ಚು ಸಾಹಿತ್ಯ ಅದರ ಹೊರಗಿದೆ.

> ನೆನೆಪಿಡಿ ಮೇಲಿನ ಎಲ್ಲ ವಿಮರ್ಶೆಗಳು ಸಮಕಾಲಿನ ಬುದ್ದಿಜಿವಿಗಳಿಂದ ಬಂದಿವೆ
ನೀವು ಅರಂಧತೀ ರಾಯ್ ಅವರನ್ನೂ ಬುದ್ಧಿಜೀವಿಗಳ ಸಾಲಿಗೆ ಸೇರಿಸುತ್ತಿರುವುದು ಕಂಡರೆ, ನಿಜವಾದ ಬುದ್ಧಿಜೀವಿಗಳಿಗೆ ಬೇರೆಯೇ ಹೆಸರು ಹುಡುಕ ಬೇಕಾಗುತ್ತದೆ ಎನಿಸುತ್ತದೆ.
ಮತ್ತು ನೀವು ಉಲ್ಲೇಖಿಸಿರುವ ಹೆಚ್ಚಿನ ಬುದ್ಧಿಜೀವಿಗಳು, ಒಂದು ಸಿದ್ಧಾಂತದ ಪರವಾಗಿ ಇರುವವರು ಎನ್ನುವುದನ್ನೂ ಮರೆಯಬಾರದು.
ಹುಡುಕುವಾಗ ವಿವಿಧ ಸಿದ್ಧಾಂತಗಳಿಗೆ ಸೇರಿದ ಬುದ್ಧಿಜೀವಿಗಳ ಅಭಿಪ್ರಾಯವನ್ನೂ ಪಡೆಯಬೇಕಾಗುತ್ತದೆ.

ಉದಾಹರಣೆಗೆ, ನೀವು ಆರೆಸ್ಸೆಸ್ಸಿನ ಕುರಿತಾಗಿ ಕೇವಲ ಗಿರೀಶ್ ಕಾರ್ನಾಡ್, ಯು.ಆರ್.ಅನಂತ ಮೂರ್ತಿ, ಚಂಪಾ ಅವರ ಹತ್ತಿರ ಮಾತ್ರ ಕೇಳಿದರೆ, ನಿಮಗೆ ಸಿಗುವ ಉತ್ತರ ಒಂದು ರೀತಿಯದ್ದಾಗಿರುತ್ತದೆ.
ಆದರೆ, ನಿಮ್ಮಂತಹ ವಿಮರ್ಶಕರು, ಎಲ್ಲಾ ದಿಕ್ಕುಗಳಿಂದಲೂ ಹುಡುಕುವವರಾಗಿದ್ದರಿಂದ, ನೀವು ಎಸ್.ಎಲ್.ಭೈರಪ್ಪ, ಚಿದಾನಂದ ಮೂರ್ತಿ, ಎಲ್.ಎಸ್.ಶೇಷಗಿರಿರಾವ್ ಅವರ ಹತ್ತಿರವೂ ಕುಳಿತು ಅಭಿಪ್ರಾಯಗಳನ್ನು ಕೂಡಿಹಾಕಬೇಕಾಗುತ್ತದೆ.

ಆಗ ಮಾತ್ರ, ನಿಮ್ಮ ವಿಮರ್ಶೆಯನ್ನು ತ್ರಯಸ್ಥವೆಂದು ಒಪ್ಪಬಹುದು.

Submitted by Kiran.M on

thanks for the valuable reply mr. kumar i am happy to know that you have a lot of interest towards RSS any how lets give me a time i will try to justify my views

ಒಟ್ಟಾರೆ ಮೇಲಿನ ಎಲ್ಲಾ ಚರ್ಚೆಗಳಿಗೆ ಉತ್ತರವಾಗಿ RSS ಕುರಿತು ಟಿಪ್ಪಣಿ ಎಂಬ ಲೇಖನದ ಪೂರ್ಣಪಾಠವನ್ನು ನೀಡುತ್ತಿದ್ದೆನೆ ಮೊದಲೇ ಹೇಳಿದಂತೆ ನಾನು RSS ಕುರಿತು ಅದರ ಬೇಳವಣಿಗೆಯ ವೇಗದ ಕುರಿತು ಆಸಕ್ತನಾಗಿದ್ದೇನೆ ನನ್ನ ಈ ಒಟ್ಟು ಪ್ರಯತ್ನದ ಉದ್ದೇಶ ಬದಲಾಗುತ್ತಿರುವ ಸಂಧರ್ಭಕ್ಕೆ ತಕ್ಕಂತೆ ಸಮಾಜದ ಕುರಿತಾದ ನಮ್ಮ ಗ್ರಹಿಕೆ (ಜ್ಞಾನ) ಯಲ್ಲಿ ಬದಲಾವಣೆಯಾಗಿತ್ತಿಲ್ಲ. ಇದು ನಮ್ಮ ಮುಂದಿರುವ ಬಹಳ ದೊಡ್ಡ ಸಮಸ್ಯಯಾಗಿದೆ. ಈ ಹಿನ್ನೇಲೆಯಲ್ಲಿ ಅದು RSS ಇರಲಿ ಯಾವುದೇ ಸಂಘಟನೆ ಇರಲಿ ನಮ್ಮ ಸಮಾಜದ ಕುರಿತಾದ ಚಿತ್ರಣಗಳನ್ನು ಗ್ರಹಿಸಿರುವ ಮಾದರಿ ಬದಲಾಗಬೇಕಿದೆ. ಎಕೆಂದರೇ ಒಂದು ಜನ ಸಂಘಟನೆಯ (RSS ಹಾಗೆ ಅಂದುಕೊಂಡಿದ್ದೇನೆ) ನಿಜವಾದ ಉದ್ದೇಶ ಸಮಾಜಮುಖಿ ಚಿಂತನೆ ಅದನ್ನು ಪ್ರಮಾಣಿಕವಾಗಿ ರಾಜಕೀಯ ರಹಿತವಾಗಿ ಮಾಡುವುದು. ಅದಕ್ಕೆ ಸಂಘಟನೆ ಅಗತ್ಯ ಅ ಸಂಘಟನ ಚಾತುರ್ಯವನ್ನು ಇತರೆ ಸಮುದಾಯಗಳು RSS ನಿಂದ ಕಲಿಯಲಿ ಎಂಬುದು ನನ್ನ ಉದ್ದೇಶ ( ಮುಕ್ಯವಾಗಿ ದಲಿತ ಸಂಘಟನೆಗಳು)

ಸಮಕಾಲೀನ ಸಂದರ್ಭದಲ್ಲಿ ಆರೆಸ್ಸೆಸ್ ಅಥವಾ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭಾರತದ ಅತಿ ದೊಡ್ಡ ರಾಜಕೀಯ(?) ಸಂಘಟನೆ. ಸಧ್ಯಕ್ಕೆ ಗಣನೀಯ ಪ್ರಮಾಣದ ವಿರೋಧವನ್ನು ಮತ್ತು ಅದೇ ಪ್ರಮಾಣದ ಸಂಘಟನಾ ಸಾಮಥ್ರ್ಯವನ್ನು ಆರೆಸ್ಸೆಸ್ ಕಟ್ಟಿಕೊಂಡಿದೆ. 'ಬ್ರಾಹ್ಮಣಶಾಹಿಗಳು', 'ಚಡ್ಡಿಗಳು', 'ಫ್ಯಾಸಿಸ್ಟರು' ಹೀಗೆ ಹಲವಾರು ಉಪಮೇಯಗಳು ಕಳೆದ 80 ವರ್ಷಗಳಲ್ಲಿ ಆರೆಸ್ಸೆಸ್ಗೆ ಅನ್ವರ್ಥವಾಗಿ ಹುಟ್ಟಿಕೊಂಡರು 'ದೇಶಭಕ್ತರು' ಎಂಬ ಪಟ್ಟವನ್ನು 'ಸಂಘ' ಯಾರಿಗೂ ಬಿಟ್ಟುಕೊಟ್ಟಿಲ್ಲ. ಇವತ್ತಿಗೆ ಆರೆಸ್ಸೆಸ್ ಕುರಿತು ಏಕಮುಖವಾದ ವಿರೋಧದ ಅಥವಾ ಕುರುಡು ಅಭಿಮಾನದ ಸಾಹಿತ್ಯಗಳು ಲಭ್ಯವಾಗುತ್ತವೆಯೇ ಹೊರತು ಆರೆಸ್ಸೆಸ್ನ 'ಸಂಘ'ಟನೆಯ ಆಳ, ಅದು ಬೆಳೆಯುತ್ತಿರುವ ವೇಗದ ಕುರಿತು ಗಂಭೀರ ಬರಹಗಳು ವಿರಳ. ಕೋಮುವಾದಕ್ಕೆ ಪರ್ಯಾಯವಾಗಬೇಕಿದ್ದ ಜಾತ್ಯಾತೀತವಾದ ಜನರಿಗೆ ಒಂದು ಕೋಮಿನ ಪರವಾದ ನಿಲುವು ಎಂಬತೆ ಕಾಣುತ್ತಿರುವುದಕ್ಕೆ ಇದು ಕಾರಣವಿರಬಹುದು.
1920ರ ಸುಮಾರಿಗೆ ಆರೆಸ್ಸೆಸ್ನ ಹಿಂದೂ ರಾಷ್ಟ್ರದ ಸಿದ್ಧಾಂತ ಭಾರತದ ರಾಜಕೀಯದಲ್ಲಿ ಯಾವುದೇ ಪ್ರಾಮುಖ್ಯತೆ ಹೊಂದಿರಲಿಲ್ಲ. ಹಿಂದುತ್ವದ ಪ್ರತಿಪಾದನೆಗಾಗಿ 1925ರಲ್ಲಿ ಕೇಶವ ಬಲಿರಾಮ್ ಹೆಡ್ಗೆವಾರ್ ಎಂಬ ವ್ಯಕ್ತಿ ಆರೆಸ್ಸೆಸ್ ಹುಟ್ಟುಹಾಕಿದಾಗ ಯಾರೂ ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಅವತ್ತಿಗಿನ್ನೂ ಕಾಂಗ್ರೆಸ್ನ ಒಳಗೂ ಹೊರಗೂ ಒಡಾಡಿಕೊಂಡಿದ್ದ ಹೆಡ್ಗೆವಾರ್ ಸ್ಥಾಪಿಸಿದ ಸಂಘಟನೆಯನ್ನು ಖುದ್ದು ಹಿಂದೂಮಹಾಸಭಾದ ಮುಂದಾಳುಗಳೇ ಉಪೇಕ್ಷೆ ಮಾಡಿದ್ದರು.
ಕೇವಲ ಅಥವಾ ಎಂಭತ್ತು ವರ್ಷಗಳಲ್ಲಿ ಆರೆಸ್ಸೆಸ್ ತನ್ನ ಕಾರ್ಯಕ್ಷಮತೆಯಲ್ಲಿ ಗಣನೀಯ ಪ್ರಮಾಣದ ಬೆಳವಣಿಗೆ ಕಂಡಿದೆ. ಹೆಡ್ಗೆವಾರ್ ನೆಟ್ಟ ಹಿಂದುತ್ವದ ಬೀಜ ಇಂದು ಮರವಾಗಿ ದೇಶದ ರಾಜಕೀಯದ ಕೇಂದ್ರಸ್ಥಾನದವರೆಗೂ ತನ್ನ ಬೇರನ್ನು ಬಿಟ್ಟಿದೆ. ಇವತ್ತಿನ ಪರಿಸ್ಥಿತಿ ಎನಪ್ಪ ಅಂದ್ರೆ ಒಂದೋ ಆರೆಸ್ಸೆಸ್ನ ಹಿಂದುತ್ವ ಸಿದ್ಧಾಂತವನ್ನು ಅಪ್ಪಿಕೊಳ್ಳಬೇಕು ಇಲ್ಲವೇ ವಿರೋಧಿಸಬೇಕು. ಮೂರನೆ ತಟಸ್ಥ ನಿಲುವು ಅಸಾಧ್ಯ ಎಂಬಂತಾಗಿದೆ.
1931ರಲ್ಲಿ ಆರೆಸ್ಸೆಸ್ ನಡೆಸುತ್ತಿದ್ದ ಶಾಖೆಗಳ ಸಂಖ್ಯೆ ಕೇವಲ 60. 1936ರಲ್ಲಿ 200 ಶಾಖೆಗಳು ಹಾಗು 25000 ಸದಸ್ಯತ್ವವನ್ನು ಅದು ಹೊಂದಿತ್ತು. 1939ರಲ್ಲಿ 500 ಶಾಖೆಗಳು ಹಾಗು 40000 ಸದಸ್ಯರನ್ನು ಆರೆಸ್ಸೆಸ್ ನೋಂದಾಯಿಸಿಕೊಂಡಿತ್ತು. ಇದಾದ ಒಂದೇ ವರ್ಷದಲ್ಲಿ 700 ಶಾಖೆಗಳು ಹಾಗು 80000 ಸದಸ್ಯತ್ವ ಹೊಂದಿತು. ಅಲ್ಲಿಂದಾಚೆಗೆ ಆರೆಸ್ಸೆಸ್ ಸಂಘಟನಾತ್ಮಕವಾಗಿ ಅಲ್ಲದೆ ರಾಜಕೀಯವಾಗಿಯೂ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಬರುತ್ತಿದೆ. ಅಂದಾಜಿನ ಪ್ರಕಾರ 1979-89ರ ನಡುವೆ 10 ಲಕ್ಷದಷ್ಟಿದ್ದ ಆರೆಸ್ಸೆಸ್ನ ಸ್ವಯಂ ಸೇವಕರ (ನೆನಪಿಡಿ, ಜೀವನವನ್ನೇ ಅರ್ಪಿಸಿರುವ) ಸಂಖ್ಯೆ 19 ಲಕ್ಷಕ್ಕೇರಿತು ಮತ್ತು ದೇಶಾದ್ಯಂತ 18800 ನಗರ ಹಾಗು ಹಳ್ಳಿಗಳಲ್ಲಿ 2500 ಸಾವಿರ ಶಾಖೆಗಳನ್ನು ಅದು ನಡೆಸುತ್ತಿತ್ತು. ಇಂದು ಆರೆಸ್ಸೆಸ್ನ ನೇರ ಮಾರ್ಗದರ್ಶನದಲ್ಲಿ 38 ವಿವಿಧ ಸಂಘಟನೆಗಳು ಕಾರ್ಯನಿರ್ವಹಿಸುತ್ತಿದ್ದು, 50 ಲಕ್ಷದಷ್ಟು ಜನಸಮೂಹವನ್ನು ಅದು ತನ್ನ ಕಾರ್ಯಕ್ಷೇತ್ರದಲ್ಲಿ ಒಳಗೊಂಡಿದೆ ಎಂಬ ಅಂದಾಜಿದೆ.
ಆರೆಸ್ಸೆಸ್ನ ವಿರೋಧಕ್ಕಾಗಿ ಬಳಸುವ ಪದಪುಂಜಗಳು ಜನಸಾಮಾನ್ಯರವರೆಗೆ ತಲುಪುವುದಿಲ್ಲ, ತಲುಪಿದರೂ ಅದು ಅವರಿರೆ ಅರ್ಥವಾಗುವುದಿಲ್ಲ ಎಂಬಂತಾಗಿದೆ. ಆರೆಸ್ಸೆಸ್ ದಲಿತ ವಿರೋಧಿ, ಮೇಲ್ಜಾತಿ ಸಂಘ, ಪ್ರಜಾಪ್ರಭುತ್ವ ವಿರೋಧಿ, ಮನುವಾದಿ ಹೀಗೆ ಏನೇನೆಲ್ಲ ಬಡಿದುಕೊಂಡರು ಜನಸಾಮಾನ್ಯನಿಗೆ ಮೋದಿ ದೇವರಾಗಿ, 'ಬಿಜೆಪೆಯೇ ಪರಿಹಾರ'ವಾಗಿ ಕಾಣಿಸುತ್ತದೆ.
ಆರೆಸ್ಸೆಸ್ ಸಮಾಜವನ್ನು ಧರ್ಮದ ಆಧಾರದಲ್ಲಿ ಒಡೆಯುವ ಹಾಗು ಅದೇ ಸಂಧರ್ಭದಲ್ಲಿ ತನ್ನೊಳಗೆ ಕಟ್ಟುವ ಗುಣವನ್ನು ಹೊಂದಿದೆ. ತನ್ನ ಶಾಖೆಗಳಲ್ಲಿ ಜಾತೀಯತೆಗೆ ಅವಕಾಶವಿಲ್ಲ. ಪ್ರತಿಯೊಬ್ಬರು 'ಹಿಂದೂ' ಎಂಬ ಏಕಪ್ರಕಾರದ ಐಡೆಂಟಿಟಿಯಿಂದ ಗುರುತಿಸಲ್ಪಡುತ್ತಾರೆ. ಹಾಗಗಿಯೆ ಒಮ್ಮೆ ಆರೆಸ್ಸೆಸ್ ತೆಕ್ಕೆಗೆ ಬಂದ ಯಾವ ಕೆಳಜಾತಿಯ ಸದಸ್ಯನೂ ಇದನ್ನು ಮೇಲ್ಜಾತಿಯ ಸಂಘವೆಂದು ದೂರುವುದಿಲ್ಲ(ಎ.ಕೆ.ಸುಬ್ಬಯ್ಯರನ್ನು ಹೊರತುಪಡಿಸಿ). ಆರೆಸ್ಸೆಸ್ನ ಯಶಸ್ಸಿಗೆ ಜಾತ್ಯಾತೀತ ಮನಸ್ಸುಗಳ ಸೋಲೆ ಕಾರಣವೆಂಬ ಹಳೆಯ ವಿಮರ್ಷೆ ಸಾಮಾನ್ಯವಾದದ್ದು. ಆದರೆ ಆರೆಸ್ಸೆಸ್ನ ಸಂಘಟನಾತ್ಮಕ ಯಶಸ್ಸಿನ ಹಿಂದೆ ತನ್ನದೇ ಆದ ವಿಷೇಶ ಗುಣಗಳನ್ನು ಮೈಗೂಡಿಸಿಕೊಂಡಿದೆ. ಈ ಮಾದರಿಯ ಸಂಘಟನಾ ಸಾಮಥ್ರ್ಯದ ಅಭಾವವೇ ಉಳಿದ ಜನಸಮುದಾಯಗಳ ಸಮಸ್ಯಯಾಗಿ ಕಾಡುತ್ತದೆ.

Submitted by ssnkumar on

> ಮೊದಲೇ ಹೇಳಿದಂತೆ ನಾನು RSS ಕುರಿತು ಅದರ ಬೇಳವಣಿಗೆಯ ವೇಗದ ಕುರಿತು ಆಸಕ್ತನಾಗಿದ್ದೇನೆ
ಇದು ನಿಜವಾಗಿದ್ದಲ್ಲಿ, ನಾನು ಮೇಲೆ ತಿಳಿಸಿದ ಪುಸ್ತಕಗಳನ್ನು ನೀವು ಖಂಡಿತ ಓದಲೇಬೇಕು ಮತ್ತು ನಿಮ್ಮ ಪುಸ್ತಕದಲ್ಲಿ ಅದರ ಒಂದು ಅದ್ಯಾಯವನ್ನೂ ಸೇರಿಸಬೇಕು.

> ಎಕೆಂದರೇ ಒಂದು ಜನ ಸಂಘಟನೆಯ (RSS ಹಾಗೆ ಅಂದುಕೊಂಡಿದ್ದೇನೆ) ನಿಜವಾದ ಉದ್ದೇಶ ಸಮಾಜಮುಖಿ ಚಿಂತನೆ ಅದನ್ನು ಪ್ರಮಾಣಿಕವಾಗಿ ರಾಜಕೀಯ ರಹಿತವಾಗಿ ಮಾಡುವುದು.
> ಸಮಕಾಲೀನ ಸಂದರ್ಭದಲ್ಲಿ ಆರೆಸ್ಸೆಸ್ ಅಥವಾ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭಾರತದ ಅತಿ ದೊಡ್ಡ ರಾಜಕೀಯ(?) ಸಂಘಟನೆ.
ಇಲ್ಲಿ ನೀವು RSS ರಾಜಕೀಯ ಸಹಿತವಾಗಿದೆ ಎಂದು ತಿಳಿದಿರುವಿರೆನಿಸುತ್ತಿದೆ.
RSS ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೇರಿದ್ದಲ್ಲ.
ಇಲ್ಲಿ ಎಲ್ಲಾ ಪಕ್ಷದವರಿಗೂ ಸ್ವಾಗತವಿದೆ. ಚುನಾವಣೆಯ ಸಂದರ್ಭದಲ್ಲಿ ಹಿಂದು (ಅರ್ಥಾತ್ ರಾಷ್ಟ್ರೀಯ) ಹಿತಕ್ಕೆ ಅನುಗುಣವಾಗಿ ಅದು ಮತ ಚಲಾಯಿಸುವಂತೆ ಜನರಿಗೆ ತಿಳಿಸುತ್ತದೆ.

> ಸಧ್ಯಕ್ಕೆ ಗಣನೀಯ ಪ್ರಮಾಣದ ವಿರೋಧವನ್ನು ಮತ್ತು ಅದೇ ಪ್ರಮಾಣದ ಸಂಘಟನಾ ಸಾಮಥ್ರ್ಯವನ್ನು ಆರೆಸ್ಸೆಸ್ ಕಟ್ಟಿಕೊಂಡಿದೆ. 'ಬ್ರಾಹ್ಮಣಶಾಹಿಗಳು', 'ಚಡ್ಡಿಗಳು', 'ಫ್ಯಾಸಿಸ್ಟರು' ಹೀಗೆ ಹಲವಾರು ಉಪಮೇಯಗಳು
ಸ್ವಾತಂತ್ರ್ಯಪೂರ್ವದಲ್ಲಿ ಗಾಂಧೀಜಿಯವರನ್ನು ಬ್ರಿಟಿಷರು "ಕೋಮುವಾದಿ" ಎನ್ನುತ್ತಿದ್ದರು.
ಅಪಾದನೆ ಬಂದವೆಂದ ಮಾತ್ರಕ್ಕೆ ಅದು ನಿಜವಿರಬೇಕೆಂದೇನೂ ಇಲ್ಲವಲ್ಲ.

> ಇವತ್ತಿಗೆ ಆರೆಸ್ಸೆಸ್ ಕುರಿತು ಏಕಮುಖವಾದ ವಿರೋಧದ ಅಥವಾ ಕುರುಡು ಅಭಿಮಾನದ ಸಾಹಿತ್ಯಗಳು ಲಭ್ಯವಾಗುತ್ತವೆಯೇ ಹೊರತು ಆರೆಸ್ಸೆಸ್ನ 'ಸಂಘ'ಟನೆಯ ಆಳ, ಅದು ಬೆಳೆಯುತ್ತಿರುವ ವೇಗದ ಕುರಿತು ಗಂಭೀರ ಬರಹಗಳು ವಿರಳ.
ನೀವು ಹುಡುಕುತ್ತಿರುವ ಸ್ಥಳಗಳ ದೋಷವಿರಬೇಕಷ್ಟೇ!
ಆರೆಸ್ಸೆಸ್‍ನ ಕುರಿತಾಗಿ ತಿಳಿಸುವ ಸಹಸ್ರಾರು ಪುಸ್ತಕಗಳು ದೇಶದ ಎಲ್ಲಾ ಭಾಷೆಗಳಲ್ಲಿ ಲಭ್ಯವಿದೆ - ಹುಡುಕಿದರೆ ಸಿಗುತ್ತದೆ.
ಆಸಕ್ತಿ ಅಥವಾ ಕುತೂಹಲವಿದ್ದರೆ ಆರೆಸ್ಸೆಸ್ಸಿನ ಕಾರ್ಯಾಲಯಕ್ಕೆ ಹೋದರೆ ಎಲ್ಲಾ ಪುಸ್ತಕಗಳೂ ದೊರೆಯುತ್ತವೆ.

> 1920ರ ಸುಮಾರಿಗೆ ಆರೆಸ್ಸೆಸ್ನ ಹಿಂದೂ ರಾಷ್ಟ್ರದ ಸಿದ್ಧಾಂತ ಭಾರತದ ರಾಜಕೀಯದಲ್ಲಿ ಯಾವುದೇ ಪ್ರಾಮುಖ್ಯತೆ ಹೊಂದಿರಲಿಲ್ಲ.
ಆರೆಸ್ಸೆಸ್ ಪ್ರಚುರಪಡಿಸಿರುವ ಹಿಂದುತ್ವವನ್ನು ಮೊದಲಿಗೆ ತಿಳಿಸಿದವರು ಆರೆಸ್ಸೆಸ್ಸ್ನಿನವರೇನಲ್ಲ.
ಅದನ್ನೇ ಸಾಕಷ್ಟು ಮೊದಲೇ ಯೋಗಿ ಅರವಿಂದ, ಸ್ವಾಮಿ ವಿವೇಕಾನಂದ, ಸೋದರಿ ನಿವೇದಿತಾ ತಿಳಿಸಿದ್ದರು.
ಈ ಮಹನೀಯರು ಈ ದಿಕ್ಕಿನಲ್ಲಿ ಸಂಘಟನೆಗೂ ಪ್ರಯತ್ನಿಸಿದರು.
ಅವರುಗಳು ಮಾಡಿದ್ದನ್ನೇ ಆರೆಸ್ಸೆಸ್ ಮುಂದುವರೆಸಿದೆ.

> ಅವತ್ತಿಗಿನ್ನೂ ಕಾಂಗ್ರೆಸ್ನ ಒಳಗೂ ಹೊರಗೂ ಒಡಾಡಿಕೊಂಡಿದ್ದ ಹೆಡ್ಗೆವಾರ್
ಹೆಡಗೇವಾರರು ಕಾಂಗ್ರೆಸ್ಸಿನಲ್ಲಿ ಮಧ್ಯಪ್ರಾಂತದ ಸಹಕಾರ್ಯದರ್ಶಿಯಾಗಿದ್ದರು.
ಅವರೇನೂ ಕಾಂಗ್ರೆಸ್ಸಿನ ಒಳಗೆ-ಹೊರಗೆ ಓಡಾಡುತ್ತಿರಲಿಲ್ಲ.
೧೯೨೫ರಲ್ಲಿ ಸಂಘ ಪ್ರಾರಂಭವಾಯಿತು.
೧೯೩೦ರಲ್ಲಿ ನಡೆದ ದಂಡೀಯಾತ್ರೆಯಲ್ಲಿ ಭಾಗವಹಿಸಿದ ಹೆಡಗೇವಾರರು ಒಂದು ವರ್ಷದವರೆಗೆ ಕಠಿಣ ಸಜೆಗೆ ಒಳಗಾದರು.

> ಹೆಡ್ಗೆವಾರ್ ಸ್ಥಾಪಿಸಿದ ಸಂಘಟನೆಯನ್ನು ಖುದ್ದು ಹಿಂದೂಮಹಾಸಭಾದ ಮುಂದಾಳುಗಳೇ ಉಪೇಕ್ಷೆ ಮಾಡಿದ್ದರು.
ಆರೆಸ್ಸೆಸ್ ಮತ್ತು ಹಿಂದು ಮಹಾಸಭಾದ ಧ್ಯೇಯೋದ್ದೇಶಗಳು, ದಾರಿಗಳು ಭಿನ್ನವಾಗಿವೆ.
ಹೀಗಾಗಿ ಅವರಿಗೆ ಆರೆಸ್ಸೆಸ್ಸಿನಲ್ಲಿ ಆಸಕ್ತಿಯಿಲ್ಲದುದು ಆಶ್ಚರ್ಯವೇನಲ್ಲ.

> ಆರೆಸ್ಸೆಸ್ ದಲಿತ ವಿರೋಧಿ, ಮೇಲ್ಜಾತಿ ಸಂಘ, ಪ್ರಜಾಪ್ರಭುತ್ವ ವಿರೋಧಿ, ಮನುವಾದಿ ಹೀಗೆ ಏನೇನೆಲ್ಲ ಬಡಿದುಕೊಂಡರು ಜನಸಾಮಾನ್ಯನಿಗೆ ಮೋದಿ ದೇವರಾಗಿ, 'ಬಿಜೆಪೆಯೇ ಪರಿಹಾರ'ವಾಗಿ ಕಾಣಿಸುತ್ತದೆ.
ಆರೆಸ್ಸೆಸ್ ವಿರೋಧಕ್ಕೂ ಮೋದಿ-ಬಿಜೆಪಿಗೂ ಏನು ಸಂಬಂಧ ಎಂದು ತಿಳಿಯಲಿಲ್ಲ.
ಎರಡೂ ಕೆಲಸ ಮಾಡುತ್ತಿರುವ ಕ್ಷೇತ್ರಗಳೇ ಬೇರೆ, ಉದ್ದೇಶಗಳು ಬೇರೆ.

> ಆರೆಸ್ಸೆಸ್ ಸಮಾಜವನ್ನು ಧರ್ಮದ ಆಧಾರದಲ್ಲಿ ಒಡೆಯುವ ಹಾಗು ಅದೇ ಸಂಧರ್ಭದಲ್ಲಿ ತನ್ನೊಳಗೆ ಕಟ್ಟುವ ಗುಣವನ್ನು ಹೊಂದಿದೆ.
ಇದನ್ನು ಸ್ವಲ್ಪ ವಿವರಿಸುವಿರಾ? ಆರೆಸ್ಸೆಸ್ ಸಮಾಜವನ್ನು ಧರ್ಮದ ಆಧಾರದಲ್ಲಿ ಎಲ್ಲಿ ಒಡೆದಿದೆ?
ಪ್ರಾಯಶಃ ನಾವು ಇಲ್ಲಿ ಧರ್ಮದ ಕುರಿತಾಗಿಯೇ ಮೊದಲು ಚರ್ಚಿಸಬೇಕಾಗುತ್ತದೆ.

> ಈ ಮಾದರಿಯ ಸಂಘಟನಾ ಸಾಮಥ್ರ್ಯದ ಅಭಾವವೇ ಉಳಿದ ಜನಸಮುದಾಯಗಳ ಸಮಸ್ಯಯಾಗಿ ಕಾಡುತ್ತದೆ.
ಆರೆಸ್ಸೆಸ್ ಒಂದು ಸಮುದಾಯದ ಸಂಘಟನೆಯಲ್ಲ. ಅದು ಎಲ್ಲ ಸಮುದಾಯಗಳಿಗೂ ಸೇರಿದ್ದು.
ಹೀಗಾಗಿ "ಉಳಿದ ಸಮುದಾಯಗಳು" ಎನ್ನುವ ಪದ ಪ್ರಯೋಗವೇ ತಪ್ಪಾಗುತ್ತದೆ.

Submitted by Kiran.M on

" ಆರೆಸ್ಸೆಸ್ ಸಮಾಜವನ್ನು ಧರ್ಮದ ಆಧಾರದಲ್ಲಿ ಒಡೆಯುವ ಹಾಗು ಅದೇ ಸಂಧರ್ಭದಲ್ಲಿ ತನ್ನೊಳಗೆ ಕಟ್ಟುವ ಗುಣವನ್ನು ಹೊಂದಿದೆ.
ಇದನ್ನು ಸ್ವಲ್ಪ ವಿವರಿಸುವಿರಾ? ಆರೆಸ್ಸೆಸ್ ಸಮಾಜವನ್ನು ಧರ್ಮದ ಆಧಾರದಲ್ಲಿ ಎಲ್ಲಿ ಒಡೆದಿದೆ?
ಪ್ರಾಯಶಃ ನಾವು ಇಲ್ಲಿ ಧರ್ಮದ ಕುರಿತಾಗಿಯೇ ಮೊದಲು ಚರ್ಚಿಸಬೇಕಾಗುತ್ತದೆ. "
RSS ಧರ್ಮವನ್ನು ಯಾವ ಮಾದರಿ ಗ್ರಹಿಸುತ್ತದೆ ವಿವರಿಸಿ ಆಗ ಒಂದು ನಿರ್ದಿಷ್ಟ ಚರ್ಚೆ ಸದ್ಯವಗಬಹುದು

"ಚುನಾವಣೆಯ ಸಂದರ್ಭದಲ್ಲಿ ಹಿಂದು (ಅರ್ಥಾತ್ ರಾಷ್ಟ್ರೀಯ) ಹಿತಕ್ಕೆ ಅನುಗುಣವಾಗಿ ಅದು ಮತ ಚಲಾಯಿಸುವಂತೆ ಜನರಿಗೆ ತಿಳಿಸುತ್ತದೆ."
ಹಿಂದು (ಅರ್ಥಾತ್ ರಾಷ್ಟ್ರೀಯ) ಎಂದರೆ ಏನು? ಹಿಂದೂಗಳ ಅಥವಾ ರಾಷ್ಟ್ರೀಯ ಹಿತ ಚಿಂತಿಸುವ ಹಿಂದೂ, ಮುಸ್ಲಿಂ(ಭಾರತದಲ್ಲಿ ಇರುವ ಎಲ್ಲ ಸಮುದಾಯ) ಎಲ್ಲರು ಹಿಂದೂಗಳ? ಒಂದು ವೇಳೆ ಹಾಗಾದರೆ ಇದನ್ನು ಮುಸ್ಲಿಮರು ಹೇಗೆ ಸ್ವೀಕರಿಸುತ್ತಾರೆ ರಾಷ್ಟ್ರೀಯ ಹಿತ ಚಿಂತಿಸುವ ಎಲ್ಲರು ಮುಸ್ಲಿಮರೆ (ಹಿಂದುಗಳನ್ನು ಒಳಗೊಂಡಂತೆ) ಎಂಬ ವಾದವನ್ನು ಅವರು ಮುಂದಿಟ್ಟರೆ ಅದಕ್ಕೆ ತಮ್ಮ ( RSS ) ಅಭಿಪ್ರಾಯವೇನು

Submitted by ssnkumar on

> ಹಿಂದು (ಅರ್ಥಾತ್ ರಾಷ್ಟ್ರೀಯ) ಎಂದರೆ ಏನು?
ಪ್ರತಿಯೊಂದು ರಾಷ್ಟ್ರಕ್ಕೂ ಒಂದು ರಾಷ್ಟ್ರೀಯತೆ ಇರುತ್ತದೆ. ಅದು ಅಲ್ಲಿರುವ ಎಲ್ಲಾ ಮತ, ಸಂಪ್ರದಾಯ, ಪಂಗಡಗಳಿಗೂ ಸಮಾನವಾಗಿರುತ್ತದೆ.
ಹೀಗೆ ನಮ್ಮ ದೇಶದ ರಾಷ್ಟ್ರೀಯತೆ ಯಾವುದು?
ಈ ದೇಶಕ್ಕೆ "ಹಿಂದುಸ್ಥಾನ" ಎಂದೂ ಕರೆಯುತ್ತಾರೆ ಅಲ್ಲವೆ - ಏಕೆ? ಹಾಗಿದ್ದರೆ ಇಲ್ಲಿ ಮುಸಲ್ಮಾನರಿಗೆ ಸ್ಥಾನವಿಲ್ಲವೇ?
ಇದೆಲ್ಲಾ ಸಮಸ್ಯೆ ಬರುವುದು, ಮುಸಲ್ಮಾನ ಅಲ್ಲದ, ಕ್ರೈಸ್ತ ಅಲ್ಲದ, ಇತ್ಯಾದಿ "ಅಲ್ಲದವರನ್ನೆಲ್ಲಾ" ಬಿಟ್ಟವರು ಹಿಂದುಗಳು ಎಂದು ಅರ್ಥೈಸಿದಾಗ.
ಇಲ್ಲಿ ಹಿಂದು ಅನ್ನುವುದು ಯಾವುದೋ ಒಂದು ಪೂಜಾ ಪದ್ಧತಿಗೆ ಸೀಮಿತವಾಗಿದ್ದಲ್ಲ.
ದೇವರನ್ನೇ ಒಪ್ಪದ ಚಾರ್ವಾಕರೂ ಹಿಂದುಗಳೇ. ಹೀಗಾಗಿ ಈ ದೇಶದಲ್ಲಿ ವಾಸಿಸುವ ಮುಸಲ್ಮಾನರೂ ಹಿಂದು ರಾಷ್ಟ್ರೀಯರೇ.
ನೀವು ಭಾರತೀಯ ಎಂದು ಯಾವುದನ್ನು ಕರೆಯುತ್ತೀರೋ ಅದೇ ಅರ್ಥ ಹಿಂದು ಎನ್ನುವುದಕ್ಕೂ ಇದೆ.

> ಒಂದು ವೇಳೆ ಹಾಗಾದರೆ ಇದನ್ನು ಮುಸ್ಲಿಮರು ಹೇಗೆ ಸ್ವೀಕರಿಸುತ್ತಾರೆ
ಅನೇಕ ಮುಸಲ್ಮಾನರಿಗೆ ಇದರ ಕುರಿತಾಗಿ ತಕರಾರಿಲ್ಲ.
ಮೆಕ್ಕಾಗೆ ಹೋದಾಗ, ಅಲ್ಲಿ ಅವರು ಕೇವಲ ಮುಸಲ್ಮಾನ್ ಎಂದು ನಮೂದಿಸುವಂತಿಲ್ಲ. ಅವರು "ಹಿಂದು-ಮುಸಲ್ಮಾನ್" ಎಂದೇ ನಮೂದಿಸಬೇಕು.
ಹಿಂದು ಅನ್ನುವುದು ರಾಷ್ಟ್ರೀಯತೆ, ಮುಸಲ್ಮಾನ್ ಅವರ ಮತ - ಇದನ್ನು ಮೆಕ್ಕಾದಲ್ಲಿರುವವರು ನಮ್ಮ ಮುಸಲ್ಮಾನರಿಗೆ ತಿಳಿಸುತ್ತಾರೆ.
ಇಂದು ಅವರನ್ನು ಒಪ್ಪುವುದಿಲ್ಲವೆಂದು "ಹಿಂದು" ಎನ್ನುವ ಬದಲು "ಭಾರತೀಯ" ಎಂದು ಕರೆಯಿರಿ ಎಂದು ಅನೇಕರು "ಬುದ್ಧಿವಾದ" ನೀಡುತ್ತಿರುತ್ತಾರೆ.
ನಾಳೆಯ ದಿನ "ಭಾರತೀಯ" ಎನ್ನುವುದನ್ನೂ ಒಪ್ಪುವುದಿಲ್ಲ ಎಂದರೆ, ಆಗ ಏನೆಂದು ಕರೆಯುವಿರಿ?
ಯಾರೋ ಒಪ್ಪುವುದಿಲ್ಲವೆಂದು ನಿಮ್ಮ ರಾಷ್ಟ್ರೀಯತೆ ಬದಲಾಗುತ್ತಾ ಹೋಗುತ್ತದೆಯೇ?

>ರಾಷ್ಟ್ರೀಯ ಹಿತ ಚಿಂತಿಸುವ ಎಲ್ಲರು ಮುಸ್ಲಿಮರೆ (ಹಿಂದುಗಳನ್ನು ಒಳಗೊಂಡಂತೆ) ಎಂಬ ವಾದವನ್ನು ಅವರು ಮುಂದಿಟ್ಟರೆ ಅದಕ್ಕೆ ತಮ್ಮ ( RSS ) ಅಭಿಪ್ರಾಯವೇನು.
ಮುಸಲ್ಮಾನ್ ಎನ್ನುವುದು ನಮ್ಮ ದೇಶದ ರಾಷ್ಟ್ರೀಯತೆಯಾಗಲು ಸಾಧ್ಯವಿಲ್ಲ.
ಏಕೆಂದರೆ, ಮುಸಲ್ಮಾನರು ಬರುವುದಕ್ಕೂ ಮೊದಲೇ ಇಲ್ಲೊಂದು ರಾಷ್ಟ್ರೀಯತೆ ಇತ್ತು ಮತ್ತು ಅದಕ್ಕೆ ಅಂದು ಕೂಡಾ ಹಿಂದು ರಾಷ್ಟ್ರೀಯತೆ ಎಂದೇ ಹೆಸರಿತ್ತು.
ಈ ದೇಶದಲ್ಲಿ ಅನೇಕ ಮತಗಳಿವೆ - ಬೌದ್ಧ, ಜೈನ, ಪಾರಸಿ, ಕ್ರೈಸ್ತ, ಶೈವ, ವೈಷ್ಣವ, ಲಿಂಗಾಯತ, ಬ್ರಾಹ್ಮಣ, ಶೂದ್ರ, ಇತ್ಯಾದಿ.
ಇವರಾರಿಗೂ ಇದು ಸಮಸ್ಯೆ ಎನಿಸಿಲ್ಲ. ಇವರಾರ ಪರವಾಗಿಯೂ ನೀವು ಮಾತನಾಡುವುದಿಲ್ಲ.
ಮುಸಲ್ಮಾನರ ಪರವಾಗಿ ಮಾತ್ರ ಮಾತನಾಡುವಿರಿ. ಅವರಿಗೆ ಮಾತ್ರ ಈ ದೇಶದ ರಾಷ್ಟ್ರೀಯತೆ ಕುರಿತಾಗಿ ಸಮಸ್ಯೆಯಿದೆ.
ಅವರಿಗೆ ಸಮಸ್ಯೆಯಿದೆ ಎಂಬ ಕಾರಣಕ್ಕಾಗಿಯೇ, ನಾವು ಮಾತೃಭೂಮಿ ಎಂದು ನಂಬಿಕೊಂಡಿರುವ ತಾಯಿಯನ್ನೇ ಒಡೆದು ಒಂದು ಭಾಗವನ್ನು ೧೯೪೭ರಲ್ಲಿ ನೀಡಿದ್ದೇವೆ.
ಅಲ್ಲಿಗೆ ಹೋಗದಿರುವ, ಇಲ್ಲಿ ಉಳಿದಿರುವ ಮುಸಲ್ಮಾನರು ಆ ನಂತರವಾದರೂ ಇಲ್ಲಿರುವುದನ್ನು ಒಪ್ಪಿಕೊಳ್ಳಲು ಅಡ್ಡಿಯೇನು?
ಅವರಿಗೆ ಇಲ್ಲಿರುವುದನ್ನು ಒಪ್ಪಿಕೊಳ್ಳಲು ಇಷ್ಟವಿಲ್ಲವೆಂದಾದರೆ, ಅವರೇಕೆ ತಮಗೆ ಸಿಕ್ಕ ಭಾಗಕ್ಕೆ ೧೯೪೭ರಲ್ಲೇ ಹೋಗಲಿಲ್ಲ?

Submitted by ssnkumar on

ಕಿರಣ್,

ನೀವು ಪ್ರಾಮಾಣಿಕ ಆಸಕ್ತಿಯಿಂದ ಚರ್ಚಿಸುತ್ತಿರುವಿರೆಂದು ನಾನು ಅಂದುಕೊಂಡಿದ್ದೆ.
ಹೀಗಾಗಿ ನಿಮ್ಮ ಪ್ರಶ್ನೆಗಳಿಗೆ (ಅವನ್ನು ಆರೋಪಗಳೆಂದೇ ಅನ್ನಬಹುದು) ಪ್ರಾಮಾಣಿಕ ಉತ್ತರಗಳನ್ನು ನೀಡಲೆತ್ನಿಸಿದೆ.
ಮತ್ತೊಬ್ಬರ ಮೇಲೆ ತಪ್ಪುಗಳ ಗೂಬೆ ಕೂಡಿಸುವುದು ಸುಲಭ.
ಅದಕ್ಕಾವ ಪುರಾವೆಗಳೂ ಬೇಕಿಲ್ಲ - ಯಾರೋ ಹೇಳಿದ್ದಾರೆಂದರಾಯಿತು!
ನಿಮ್ಮಿಂದ ಉತ್ತರ ಬರದಿರುವುದನ್ನು ನೋಡಿದಾಗ, ನೀವೂ ಈ ರೀತಿಯ ವೃಥಾ ಆರೋಪ ಮಾಡುತ್ತಿರುವಿರಿ, ಪ್ರಾಮಾಣಿಕ ಉತ್ತರ ತಿಳಿಯುವ ಆಸಕ್ತಿಯಿಲ್ಲ, ಎಂದು ನನಗನ್ನಿಸುತ್ತಿದೆ.
ಎದುರಾಳಿಯ ಉತ್ತರಗಳು ಸರಿಯೆಂದು ಸಾಭೀತಾದಾಗ, ಅವನ್ನು ಒಪ್ಪಿಕೊಳ್ಳಲು ಮನಸ್ಸಾಗದೆ, ಚರ್ಚೆಯಿಂದಲೇ ಅದೃಶ್ಯವಾಗಿಬಿಡುವ ಚರ್ಯೆಗಳು ಇದನ್ನು ಸಾಬೀತುಪಡಿಸುತ್ತವೆಯಲ್ಲವೇ?

Submitted by bhasip on

"ಸಮಕಾಲೀನ ಸಂದರ್ಭದಲ್ಲಿ ಆರೆಸ್ಸೆಸ್ ಅಥವಾ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭಾರತದ ಅತಿ ದೊಡ್ಡ ರಾಜಕೀಯ(?) ಸಂಘಟನೆ."

ಕ್ಷಮಿಸಿ! RSS ನೇರವಾಗಿ ತನ್ನ ಅಭ್ಯರ್ಥಿಗಳನ್ನ ಎಲ್ಲಿ ಚುನಾವಣೆಗೆ ನಿಲ್ಲಿಸಿದೆ?

"ಮನುವಾದಿ ಹೀಗೆ ಏನೇನೆಲ್ಲ ಬಡಿದುಕೊಂಡರು ಜನಸಾಮಾನ್ಯನಿಗೆ ಮೋದಿ ದೇವರಾಗಿ, 'ಬಿಜೆಪೆಯೇ ಪರಿಹಾರ'ವಾಗಿ ಕಾಣಿಸುತ್ತದೆ."

ಪುನಃ ಎಡವಟ್ಟು... ಮೋದಿ ದೇವರಾಗಿ ಕಂಡರೆ ಆತ ಮಾಡಿದ ಕೆಲ್ಸ ಕಾರಣ ಅಲ್ಲವೆ?

Submitted by kpbolumbu on

<<<ಹಿಂದೆ ನಾವು (ಹಿಂದೂಗಳು) ಹಾಗೂ ಅವರು (ಮುಸ್ಲಿಂರು) ಎಂದು ಕಾರ್ಯತಂತ್ರ ರೂಪಿಸುತ್ತಿದ್ದ ಆರೆಸ್ಸೆಸ್ ಇಂದು ನಾವು ಹಾಗೂ ಉಳಿದವರು (ಕ್ರಿಶ್ಚಿಯನ್ನರು, ಬುದ್ಧಿಜೀವಿಗಳು) ಎಂಬ ರಣತಂತ್ರ ಹೊಸೆಯುತ್ತಿದೆ>>>
ತಾವು 'ಚಿನ್ತನ ಗಂಗಾ' [ bunch of thoughs ಎಂಬ ಇಂಗ್ಲೀಷ್ ಪುಸ್ತಕದ ಕನ್ನಡ ಆವೃತ್ತಿ ] ಓದಿದ್ದರೆ ಈ ಅಭಿಪ್ರಾಯ ಮೂಡುತ್ತಿರಲಿಲ್ಲ.

Submitted by ssnkumar on

> ಗೋಲ್ವಾಲ್ಕರ್ ಧರ್ಮ. ಇದರಲ್ಲಿ ನೆರೆ ದೇಶದವರನ್ನು, ಪರ ಧರ್ಮದವರನ್ನು ದ್ವೇಷಿಸುವುದೇ ದೇಶಪ್ರೇಮ ಎಂದು ಭ್ರಮಿಸುತ್ತಾ, ಅದೇ ಭ್ರಮೆಯಲ್ಲಿ ಕೇಕೆ ಹಾಕುತ್ತಾ ಅವರ ಮೇಲೆ ವಿಷ ಕಾರುತ್ತಾ
> ನಾವೂ ದೇಶಪ್ರೇಮಿಗಳಾಗಿದ್ದೇವೆ ಎಂದುಕೊಳ್ಳುವುದು. ಅದೇ ಹೊತ್ತಿಗೆ ನಮ್ಮನ್ನು ಆಳುವವರು ದೇಶವನ್ನು ವಿದೇಶಿಯರ ಪದತಲದಲ್ಲಿ ಒಪ್ಪಿಸುವುದಕ್ಕೆ ತಲೆ ಅಲ್ಲಾಡಿಸುತ್ತಾ ಇರುವುದು.

ನೀವು ವಿಷಯಗಳನ್ನು ಮನದಟ್ಟು ಮಾಡಿಕೊಂಡು ಚರ್ಚಿಸುತ್ತೀರಿ ಎನ್ನುವುದು ನನ್ನ ಇಷ್ಟು ದಿನದ ನಂಬಿಕೆಯಾಗಿತ್ತು.
ರಾಜಕಾರಣಿಗಳು ಮಾತ್ರ ಬಾಯಿಗೆ ಬಂದಂತೆ ಹರಟುತ್ತಾರೆ, ಯಾವುದೇ ಆಧಾರವಿಲ್ಲದೆ ಹೇಳಿಕೆಗಳನ್ನು ನೀಡುತ್ತಿರುತ್ತಾರೆ ಎನ್ನುವುದು ಯಾರಿಗೂ ತಿಳಿಯದ ಸಂಗತಿಯಲ್ಲ.
ಈ ಹಿಂದೆ ಆರೆಸ್ಸೆಸ್ ಬಗ್ಗೆ ಸೀತಾರಾಂ ಕೇಸರಿ ಮುಂತಾದ ಕೆಲವು ರಾಜಕಾರಣಿಗಳು, ಪತ್ರಿಕೆಗಳು ನೀಡಿದ್ದ "ಗಾಂಧಿ ಕೊಲೆ ಆರೋಪ"ವನ್ನು
ಹಿಡಿದು ಆರೆಸ್ಸೆಸ್ ನ್ಯಾಯಾಲಯಕ್ಕೆ ಹೋಗಿತ್ತು. ತಮಗಾಗುವ ಮುಖಭಂಗದಿಂದ ತಪ್ಪಿಸಿಕೊಳ್ಳಲು ಈ ರಾಜಕಾರಣಿಗಳು, ಪತ್ರಿಕೆಗಳು
ಆರೆಸ್ಸೆಸ್ ಕಾರ್ಯಾಲಯಕ್ಕೆ ಅಲೆದಾಡಬೇಕಾಯಿತು; ತಪ್ಪೊಪ್ಪಿಗೆ ನೀಡಬೇಕಾಯಿತು.
ನೀವು ಈ ರೀತಿಯವರ ಜಾತಿಗೆ ಸೇರಿಲ್ಲವೆಂದು ತಿಳಿದಿದ್ದೆ!
ತಪ್ಪು ತಿಳಿದುಕೊಂಡದ್ದಕ್ಕೆ ದಯವಿಟ್ಟು ಕ್ಷಮಿಸಿ.

ನೀವು ಹೇಳುತ್ತಿರುವ ರೀತಿಯ ಗೋಳ್ವಲ್ಕರ್ ಧರ್ಮ ನನಗೆ ಯಾವ ಅಧಿಕೃತ ಪುಸ್ತಕದಲ್ಲೂ ದೊರೆತಿಲ್ಲ.
ದಯವಿಟ್ಟು ನಿಮ್ಮ ಮಾಹಿತಿಯ ಮೂಲವನ್ನು ತಿಳಿಸುವ ದೊಡ್ಡ ಮನಸ್ಸು ಮಾಡಬಹುದೇ?

Pages