ಅಡೂರು ಗೋಪಾಲಕೃಷ್ಣನ್ ರವರಿಗೆ ಫಾಲ್ಕೆ
ಮಲಯಾಳಮ್ ಚಿತ್ರರಂಗದ ಅಡೂರು ಗೋಪಾಲಕೃಷ್ಣನ್ ರವರನ್ನು ಈ ಬಾರಿಯ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸುದ್ದಿ ಇಂದಿನ ಹಿಂದೂ ಪತ್ರಿಕೆಯಲ್ಲಿ, ಓದಿ.
"ಈ ಪ್ರಶಸ್ತಿ ಮತ್ತಷ್ಟು ಜನರು ನನ್ನ ಸಿನಿಮಾಗಳನ್ನು ನೋಡುವಂತೆ ಮಾಡಿದರೆ, ಅದೇ ಸಂತೋಷ"
ಎಂದಿದ್ದಾರೆ, ಗೋಪಾಲಕೃಷ್ಣನ್

- Login or register to post comments
- 987 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉತ್ತಮ ನಿರ್ದೇಶಕ
ಗೋಪಾಲಕೃಷ್ಣನ್ ಉತ್ತಮ ನಿರ್ದೇಶಕರು. ನಾನು ಅವರ ಕೆಲವು ಸಿನೆಮಾಗಳನ್ನು ನೋಡಿದ್ದೇನೆ. ಅವರಿಗೆ ಫಾಲ್ಕೆ ಪ್ರಶಸ್ತಿ ಬಂದ ಬಗ್ಗೆ ಲೇಖನ ರೀಡಿಫ್‌ನಲ್ಲಿ ಬಂದಿದೆ. ಆದರೆ ಅವರು ಲೇಖನದಲ್ಲಿ ಒಂದು ತಪ್ಪು ಮಾಡಿದ್ದಾರೆ, ಅವರ ನಿರ್ದೇಶನದ ಚಿತ್ರಗಳ ಪಟ್ಟಿಯಲ್ಲಿ ಚೆಮ್ಮೀನ್ ಹೆಸರನ್ನೂ ಸೇರಿಸಿಕೊಂಡಿದ್ದಾರೆ. ಈ ತಪ್ಪನ್ನು ಈಗಾಗಲೇ ಹಲವರು (ನಾನೂ ಈ ಪಟ್ಟಿಯಲ್ಲಿದ್ದೇನೆ) ತೋರಿಸಿಕೊಟ್ಟಿದ್ದಾರೆ.
ಸಿಗೋಣ,
ಪವನಜ
-----------
Think globally, Act locally
ರಿಡಿಫ್ ಯಾವಾಗಲೂ ಹೀಗೆಯೇ
ರಿಡಿಫ್ ಕಥೆ ಯಾವಾಗಲೂ ಹೀಗೆಯೇ.
ಅವರ ಸಿನಿಮಾ ವಿಮರ್ಶೆಗಳನ್ನ ನೋಡ್ಬೇಕು... ಎಲ್ಲ ಏಕಪಕ್ಷೀಯವಾಗಿರುತ್ತವೆ.
--
"ಹೊಸ ಚಿಗುರು, ಹಳೆ ಬೇರು"