ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಬೇಕೇ ಬೇಕು ನ್ಯಾಯ ಬೇಕು - ಅಂಬಿಗನ ಆರ್ತನಾದ

January 19, 2007 - 12:09pm — Sunil Jayaprakash

ತುಂಬಾ ದಿನಗಳಿಂದ ಬರೆಯಬೇಕು ಎಂದುಕೊಂಡಿದ್ದೆ. ಆದರೆ ಇನ್ನಷ್ಟು ಆಧಾರ ಸಮೇತನಾಗಿ ವಾದ ಮಾಡಬೇಕೆಂದು ತೀರ್ಮಾನಿಸಿ ಸುಮ್ಮನಾಗಿದ್ದೆ. ಇಲ್ಲವಾದರೆ ವಿದ್ವಾಂಸರುಗಳು ಮುಗಿಬೀಳುತ್ತಾರೆ ನೋಡಿ Eye-wink. ಅಷ್ಟರಲ್ಲಿ,ವೆಂಕಟೇಶರು ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? ಎಂಬು ತೂಕದ ಪ್ರಶೆಯನ್ನು ಹಾಕಿ ನನ್ನ ಧೈರ್ಯವನ್ನು ನೂರ್ಮಡಿಗೊಳಿಸಿದರು. ಸರಿ, ಧೈರ್ಯದಿಂದಲೇ ಮುನ್ನುಗ್ಗೋಣ ಅಂತ ಈ ಲೇಖನ ಬರೆಯುತ್ತಿದ್ದೇನೆ. ಅಂದ ಹಾಗೆ, ಇದನ್ನು ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ಬರೆಯಲು ಪ್ರಯತ್ನ ಮಾಡಿದ್ದೇನೆ. ಕೆಲವೆಡೆ ಮಾತಿನ ವರಸೆಗೆ ಇಂಗ್ಲೀಷನ್ನೂ ಬಳಸಿದ್ದೇನೆ. ಅಲ್ಲಲ್ಲಿ ತಪ್ಪುಗಳಿದ್ದರೆ ಅಥವಾ ಅರ್ಥವಾಗದಿದ್ದರೆ ಗೊಂದಲಗಳನ್ನು ಇಲ್ಲಿಯೇ ಪಟ್ಟಿಮಾಡಿರಿ. ಈ ಲೇಖನ ಒಂದು ರೀತಿ ಪವನಜರು "ನಾನು ಅನಂತಮೂರ್ತಿಯಲ್ಲವಲ್ಲ..ಆದ್ದರಿಂದ.." ಎಂದು ಹೇಳಿದ ಹಾಗೆಯೇ, ಈ ಪಾಮರನ ಮಾತುಗಳೂ ಆಗುತ್ತದೆಯೋ ಏನೋ ಎಂಬು ಗುಮಾನಿ ನನ್ನದು. Sad

ನಾನು ಒಬ್ಬ ಕನ್ನಡ(ಅದಕ್ಕಿಂತ ಮುಖ್ಯವಾಗಿ ಸಂಸ್ಕೃತ) ವಿದ್ವಾಂಸನಲ್ಲದ ಕಾರಣವೋ ಏನೋ, ಕನ್ನಡದ ಏತ್ವಗಳು ಚರ್ಚೆಯಲ್ಲಿ ಹೆಚ್ಚು ಜನ ಭಾಗವಹಿಸಲೇ ಇಲ್ಲ. ಇರಲಿ, ಅವುಗಳನ್ನು ಒತ್ತಟ್ಟಿಗಿಡೋಣ. ಇಷ್ಟವಾದವರು ಚರ್ಚೆಯಲ್ಲಿ ಭಾಗವಹಿಸುತ್ತಾರೆ, ಇಲ್ಲವಾ "ನಾವು ಬಳಸುವ ಕನ್ನಡವೇ ಪರಮ ಪಾವನ ಪರಿಶುದ್ಧ ಉತ್ಕೃಷ್ಟ (uff, Heavvvy ಶೆಖೆಯಿದು) ಕನ್ನಡವೆಂದು ಬಡಬಡಾಯಿಸುವ ಪಂಡಿತರಾದರೆ ಸುಮ್ಮನಾಗುತ್ತಾರೆ" ಎಂದು ನನಗೆ ನಾನೇ ಸಮಾಧಾನ ಪಡಿಸಿಕೊಂಡು ಸುಮ್ಮನಾದೆ.

ಕಳೆದ ವರ್ಷ, ಕರ್ನಾಟಕ ಸರ್ಕಾರ ಋವನ್ನು ಬಿಟ್ಟುಬಿಡಬೇಕೇ ಬೇಡವೇ ಎಂಬ ವಿಷಯವನ್ನು ಚರ್ಚೆಗೆ ತಂದಾಗ, "ಕನ್ನಡ ವಿದ್ವಾಂಸರು" ಮುಖ್ಯವಾಗಿ "ಸಂಸ್ಕೃತದ ಹಿನ್ನೆಲೆಯುಳ್ಳ ಕನ್ನಡ ವಿದ್ವಾಂಸರುಗಳಾಡಿದ" ಮಾತುಗಳನ್ನು ಕೇಳಿದರೆ ನಿಜಕ್ಕೂ ಬೇಸರವಾಗುತ್ತದೆ.

ಅದರಲ್ಲೂ ಶಂಕರಭಟ್ಟರನ್ನು ಕೆಲವು ವಿದ್ವಾಂಸರು ಚಂಕರಪಟ್ಟ, ಭಯಂಕರ ಭಟ್ಟ ಅಲ್ಲ ಪಯಂಕರ ಪಟ್ಟ ಎಂದು ಹೀಯಾಳಿಸಿದ, ಅನೇಕಾನೇಕ ಬಿರುದಾಂಕಿತ ಪಂಡಿತರೂ ನಮ್ಮ ನಡುವೆ ಇದ್ದಾರೆನ್ನುವುದು ತಿಳಿದಾಗ ತುಂಬಾ ನಾಚಿಗ್ಗೇಡು ಎನಿಸುತ್ತದೆ.

ಅಂದ ಹಾಗೆ, ಈ ಲೇಖನದ ಮೂಲ ಉದ್ದೇಶ ಋ ವಿಚಾರವಾಗಿ ಅಲ್ಲವೇ ಅಲ್ಲ. ನಿಜವಾಗಿ ನೋಡಿದರೆ, ಋವನ್ನು ಕೈಬಿಡಬಾರದು ಎಂದು ಹೇಳುವಲ್ಲಿ ಎಷ್ಟು ಒಳ್ಳೆಯ ಅಂಶಗಳಿವೆಯೋ, ಅಷ್ಟೇ ಪ್ರಯೋಜನ ಮತ್ತು ಅದಕ್ಕೂ ಹೆಚ್ಚಿನ ಒಳ್ಳೆಯ ಆಶಯಗಳು ಕೈಬಿಡುವುದರಲ್ಲಿಯೂ ಇದೆ. ಋ ಕೈಬಿಡಬಾರದು ಎಂಬುದಕ್ಕೆ ಸಿಗುವ ಒಂದು ಕಾರಣ, ಛಂದಸ್ಸನ್ನು ಬಳಸಿರುವ ಕಾವ್ಯಗಳನ್ನು ಸುಡಬೇಕಾಗುತ್ತದೆ ಎಂಬುದು. ಆದರೆ, ಈ ಸಂಸ್ಕೃತ ಪಂಡಿತರ ಸ್ವಹಿತಾಸಕ್ತಿಯಿಂದ ಕನ್ನಡಕ್ಕೆ ಎಷ್ಟು ಮೋಸವಾಗುತ್ತಿದೆ ಎಂಬುದನ್ನು ಆಧಾರ ಸಮೇತ ತೋರಿಸಿಕೊಡುವುದೇ ಈ ಲೇಖನದ ಉದ್ದೇಶ.

ಕನ್ನಡದ ಏತ್ವಗಳು ಎಳೆಯನ್ನು ಮತ್ತೊಮ್ಮೆ ಓದಿ ನೋಡಿ. Bank, Cat, Bat ಇವುಗಳಲ್ಲಿ ಬರುವ ಏತ್ವವನ್ನು ಗಮನಿಸಿ. ಇದರಲ್ಲಿ ಬರುವ ಏತ್ವ ಯಾವ ರೂಪದಲ್ಲಿದೆ ಹೇಳಬಲ್ಲಿರಾ ?
ಗಮನಿಸಿ ನೋಡಿದಾಗ, ಅದು ಸ್ವರದ ರೂಪದಲ್ಲಿದೆಯೆಂಬುದು ತಿಳಿಯುತ್ತದೆ. ಆದರೆ ನಾವುಗಳು ಇಂದು ಬ್ಯಾಂಕ್, ಕ್ಯಾಟ್, ಬ್ಯಾಟ್ ಎಂಬುದಾಗಿ ಬಳಸುತ್ತಿದ್ದೇವೆ . ಅಂದರೆ ಒಂದು ಸ್ವರಕ್ಕೆ ವ್ಯಂಜನದ ಸ್ಥಾನವನ್ನು ನೀಡಿದ್ದೇವೆ(ಅಥವಾ ನೀಡಿಸಿದ್ದಾರೆ) ಎಂದಾಯಿತು. ಸಂಸ್ಕೃತದ ವಿಚಾರ ಬಂದಾಗ, ಸ್ವರ ಮತ್ತು ವ್ಯಂಜನಗಳ ಬಗ್ಗೆ ಇಷ್ಟು ಆಸ್ಥೆ(ಬಹಳ heavy word ಇದು) ವಹಿಸುವ ನಮ್ಮ ಕನ್ನಡದ ವಿದ್ವಾಂಸರು (ಎಲ್ಲೆಲ್ಲಿ ಕನ್ನಡ ವಿದ್ವಾಂಸರು ಅಂತಿದೆಯೋ ಅಲ್ಲಲ್ಲಿ ಸಂಸ್ಕೃತ ಹಿನ್ನೆಲೆಯುಳ್ಳ ಕನ್ನಡ ವಿದ್ವಾಂಸರು ಎಂಬುದಾಗಿ ತಿಳಿಯುವುದು) ಇಂಗ್ಲೀಷಿನ ಈ ಸ್ವರದ ಬಗ್ಗೆ ಏಕೆ ಚಿಂತಿಸಲಿಲ್ಲ ? ಎಂಬುದು ನನ್ನ ಮುಖ್ಯ ಪ್ರಶ್ನೆ.

ಅಲ್ಲ, ಋಕಾರವನ್ನು ಬಿಡಬಾರದು ಎಂದು ಹೇಳುವ ಕನ್ನಡ ವಿದ್ವಾಂಸರಿಗೆ ಇಂಗ್ಲೀಷಿನ ಒಂದು ಸ್ವರದ ಸ್ಥಾನದಲ್ಲಿ ವ್ಯಂಜನವನ್ನು ಬಳಸುವುದು ತಪ್ಪೆನಿಸುವುದಿಲ್ಲವೇ ?

ಋ ವನ್ನು ರು ಆಗಿ ಬರೆಯೋಣ ಎಂದಾಗ ಛಂದಸ್ಸು ಕೆಡುತ್ತೆ, ಬರೆಯುವುದು ತಪ್ಪು ಎಂದು ಹೇಳುವ ವಿದ್ವಾಂಸರಿಗೆ, Bank ಎನ್ನುವುದನ್ನು ಬ್ಯಾಂಕು ಎಂದು ಬರೆದಾಗ ಛಂದಸ್ಸು ಕೆಡುತ್ತದೆ ಎಂಬುದು ಹೊಳೆಯುವುದಿಲ್ಲವೇ ?

ಉದಾ:
ಪಿತೃ - ಇದರ ಛಂದಸ್ಸು ರೂಪವನ್ನು ಗಣನೆಗೆ ತೆಗೆದುಕೊಳ್ಳೋಣ. ಇಲ್ಲಿರುವುದು ಎರಡು ಲಘು(೧, ೧).
ಇದನ್ನೇ ಪಿತ್ರು ಎಂದು ಬರೆದಾಗ - ಛಂದಸ್ಸು ಒಂದು ಗುರು, ಒಂದು ಲಘು ಆಗುತ್ತದೆ. ( _, ೧).

ಹಾಗಾಗಿ ಋವನ್ನು ಬಳಸಿ ಬರೆದಿರುವ ಕಾವ್ಯಗಳನ್ನು ರು ಆಗಿ ಬದಲಾಯಿಸಿದರೆ, ಛಂದಸ್ಸು ಕೆಡುತ್ತದೆ ಎಂಬುದು ಕನ್ನಡ (again ಸಂ.ಹಿ.ಕ.ವಿ.) ವಿದ್ವಾಂಸರ ಅಂಬೋಣ.

ಸರಿ, ಮೂಲ ವಿಷಯಕ್ಕೆ ಬರೋಣ. ಕನ್ನಡದ ಈಗಿನ ಕವಿಯೊಬ್ಬ Bat ಎಂಬುದನ್ನು ತನ್ನ ಕಾವ್ಯದಲ್ಲಿ ಬಳಸಬೇಕು ಎಂದಿಟ್ಟುಕೊಳ್ಳಿ, ಆಗ ಅವನು ಬರೆಯುವ ಕಾವ್ಯ ವಿದ್ವಾಂಸರ ಪ್ರಕಾರ ಉತ್ಕೃಷ್ಟ(ಯಪ್ಪಾ, ಸಖತ್ ಹೆವ್ವಿ ಇದು Eye-wink ) ಕಾವ್ಯವಾಗುವುದೇ ಇಲ್ಲ. ಏಕೆಂದರೆ ಅದು ಅನ್ಯದೇಶ್ಯ ಅಲ್ಲ ಅನ್ಯಖಂಡೀಯ (ಹಾಗೆಂದರೇನು ?) ) ಪದ ಪ್ರಯೋಗ ?). ಇವರುಗಳು ನಾಕುತಂತಿಯಲ್ಲಿ ಬರುವ ಇಂಗ್ಲೀಷ್ ಪದಗಳ ಪ್ರಯೋಗಗಳನ್ನು ನೋಡಿ ತಿಳಿಯುವುದು ಒಳಿತು.

ಸರಿ Bat ಎಂಬುದರ ಕೆಲವು ಬಳಕೆಗಳನ್ನು ನೋಡೋಣ.

ಉದಾ:
ತೂರಿಬನ್ದಬ್ಯಾಟು - (ಗುರು, ಲಘು, ಗುರು, ಗುರು, ಗುರು, ಲಘು) - ಇದು ಈಗಿನ ಪ್ರಯೋಗ.

ಆದರೆ ನಿಜವಾದದ್ದು,
ತೂರಿಬನ್ದಬಟು)
(ಗುರು, ಲಘು, ಗುರು, ಲಘು, ಲಘು(ಅಥವಾ ಗುರುಕೂಡ ಆಗಬಹುದು), ಲಘು)

ಬ + ಒಂದು ಸ್ವರ + ಟ್ + ಉ = ಬಟು

ಆದರೆ ಇಂಗ್ಲೀಷಿನ ಸ್ವರದ ಸ್ಥಾನದಲ್ಲಿ ಕನ್ನಡದ ವ್ಯಂಜನವನ್ನು ಬಳಸುವಂತೆ ಮಾಡಿರುವ ಸಂಸ್ಕೃತದ ಪಂಡಿತರು ಇದಕ್ಕೆ ಯಾವ ರೀತಿಯ ಸಮರ್ಥನೆಯನ್ನು ನೀಡಬಲ್ಲರು ?

ಹಿಂದೆ ಕನ್ನಡ ಪಂಡಿತರು(ಕನ್ನಡಿಗರಲ್ಲ ಎಂಬುದು ನಿಮ್ಮ ನೆನಪಿನಲ್ಲಿರಲಿ) ಸಂಸ್ಕೃತವನ್ನು ಅಪ್ಪಿಕೊಂಡಾಗ, ಕನ್ನಡದಲ್ಲಿ ಋ, ೠ, ಲೃ, ಲೄ(ಪುಣ್ಯಕ್ಕೆ ೠ, ಲೃ, ಲೄ ಸತ್ತು ಹೋಯಿತು)ಗಳನ್ನು ಹುಟ್ಟುಹಾಕಿದರು, ಆದರೆ ಈಗ ಕನ್ನಡಿಗರಿಗೆ ಬೇಕಿರುವ ಇಂಗ್ಲೀಷ್ ಸ್ವರಗಳು ಮಾತ್ರ ಇವರಿಗೆ ಬೇಡವಾಗಿದೆ ? ಇದು ಸ್ವಹಿತಾಸಕ್ತಿಯಲ್ಲವೇ ? ಮನೆ ಮತ್ತು ಶಾಲೆಗಳಲ್ಲಿ ನಮ್ಮ ಮಕ್ಕಳಿಗೆ, ನಮ್ಮ ತಮ್ಮ, ತಂಗಿಯರಿಗೆ ಋ, ೠಗಳನ್ನು ಹೇಳಿಕೊಡುತ್ತಾ ಕನ್ನಡವನ್ನು ಮೊದಲ ದಿನದಿಂದಲೇ ಕಷ್ಟಮಾಡುವುದು ಏಕೆ ? ಇಂಗ್ಲೀಷಿನ ಸ್ವರ ಪಂಡಿತರಿಗೆ ಏಕೆ ಬೇಡ ?

ಈಗ ಕನ್ನಡಜನಕ್ಕೆ ಬೇಕಿರುವ ಇಂಗ್ಲೀಷಿನ ಹೊಸ ಸ್ವರ (ಏತ್ವ), ಕನ್ನಡ ಪಂಡಿತರಿಗೆ ಬೇಡವಾದರೆ, ಈಗ ಕನ್ನಡಜನಕ್ಕೆ ಬೇಡವಾಗಿರುವ ಸಂಸ್ಕೃತದ ಸ್ವರವೂ (ಋ) ಪಂಡಿತರಿಗೆ ಬೇಡವಾಗಬೇಕು ಅಲ್ಲವೇ ?

ಇಂಗ್ಲೀಷಿಗೊಂದು ನ್ಯಾಯ, ಸಂಸ್ಕೃತಕ್ಕೊಂದು ನ್ಯಾಯವೇಕೆ ?. ಬಹುಶಃ ಇಂಗ್ಲೀಷ್ ಕಲಿತವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ ಎಂಬ ಭಯ ಒಂದು ಕಾಲಘಟ್ಟದಲ್ಲಿ ಪಂಡಿತರುಗಳನ್ನು ಕಾಡಿರಬಹುದು. ಆದರೆ ಈಗ, ಪ್ರತಿಯೊಂದು ವಿಷಯದ ಬಗ್ಗೆಯೂ, ಇಂಗ್ಲೀಷಿನಲ್ಲಿ ಪ್ರಬುದ್ಧ ಪ್ರಬಂಧಗಳು ಮಂಡನೆಯಾಗುತ್ತದೆ.

ಅಂದಹಾಗೆ, ಗೆಳೆಯರೇ, ದಯವಿಟ್ಟು(for heaven sake ಅಂತಾರಲ್ಲ ಹಾಗೆ), ಈ ಲೇಖನದ ಮೂಲಕ ಋವನ್ನು ಬಿಟ್ಟುಬಿಡಬೇಕು, ಅಥವಾ ನಾನೇನೋ ಯಾರಿಗೂ ತಿಳಿಯದ ಹೊಸ ವಿಷಯವನ್ನು ಹೊರಗೆಡಹಿಬಿಟ್ಟಿದ್ದೇನೆ ಎಂದು ಸಾರುವ ಪ್ರಯತ್ನ ಮಾಡುತ್ತಿಲ್ಲ. ಹೊಸ ಸ್ವರದ ಸೃಷ್ಟಿಯನ್ನು ಕುರಿತ ಅಷ್ಟು ತೀವ್ರತೆಯೂ ನನ್ನಲ್ಲಿಲ್ಲ. ಏಕೆಂದರೆ, ಕನ್ನಡದಲ್ಲಿ ಬೇಡ, ಬ್ಯಾಡ ಎಂಬ ಎರಡೂ ಪ್ರಯೋಗಗಳೂ ಬಳಕೆಯಲ್ಲಿವೆ. ಆದರೆ ಈ ಲೇಖನದ ಮೂಲಕವಾದರೂ ಕನ್ನಡಕ್ಕೆ ಆಗುತ್ತಿರುವ ಮೋಸವನ್ನು ಎಲ್ಲರಿಗೂ ಸರಳವಾಗಿ ತೋರಿಸುವ ಪ್ರಯತ್ನವನ್ನು ಮಾಡುತ್ತಿದ್ದೇನೆ ಅಷ್ಟೇ.

Bank ಎನ್ನುವುದನ್ನು ಬ್ಯಾಂಕು ಎಂದು ಬರೆದರೂ ಅಥವಾ ಬ<ಹೊಸತೊಂದು ಸ್ವರ)ಂಕ್ ಎಂದು ಬರೆದರೂ Bank, Bank ಆಗಿಯೇ ಉಳಿದಿರುತ್ತದೆ. ಒಂದು ವೇಳೆ ಕನ್ನಡಕ್ಕೆ ಹೊಸ ಸ್ವರ ಬಂತು ಎಂತಲೇ ಇಟ್ಟುಕೊಳ್ಳಿ. ಈಗಿರುವ ಐ.ಟಿ. ಕಂಪೆನಿಗಳು ಅದನ್ನು ತಮ್ಮ ತಂತ್ರಜ್ಞಾನಗಳಲ್ಲಿ(ಉದಾ, ಫಾಂಟು, ಫಾಂಟ್ ರೂಲ್ಸು) ಇದನ್ನು ಎಷ್ಟರ ಮಟ್ಟಿಗೆ ಅಳವಡಿಸುತ್ತಾರೆ ? ಎಂಬುದಕ್ಕೆ ಸಿಗುವ ಉತ್ತರ ನಿಜಕ್ಕೂ ಕಳವಳಕಾರಿ. ಎಷ್ಟಾದರೂ ಅನೇಕ ಕಂಪೆನಿಗಳಿಗೆ ಕನ್ನಡಿಗರ ಮಾರುಕಟ್ಟೆ ಬೇಕೇ ಹೊರತು ಕನ್ನಡಿಗರಾಗಲೀ, ಕನ್ನಡವಾಗಲೀ ಬೇಡ.

ಕೊನೆಯಲ್ಲಿ, ನನಗೆ ನಮ್ಮ ಕನ್ನಡದ ವಿದ್ವಾಂಸರಿಗೆ ಸಂಸ್ಕೃತ ಚೆನ್ನಾಗಿರಬೇಕು, ಕನ್ನಡ ಆದಷ್ಟೂ ಸಂಸ್ಕೃತಮಯವಾಗಬೇಕು, ಆದಷ್ಟೂ ಸಂಸ್ಕೃತಮಯವಾಗಿ, ದಿವ್ಯ ಕನ್ನಡವಾಗಿ, ದ್ಯುದೀವ್ಯದ್ಭುರ ಕನ್ನಡವಾಗಿ(ದ್ಯುದೀವ್ಯದ್ಭುರ ಹಾಗೆಂದರೇನು, ಹೆಚ್ಚು ತಲೆಕೆರೆದುಕೊಳ್ಳಬೇಡಿ, ಸಂ.ಹಿ.ಕನ್.ಪಂರನ್ನು ಕೇಳಿ, ಅವರಿಗೆ ತಿಳಿದಿಲ್ಲದಿದ್ದರೆ ತರಾಟೆಗೆ ತೆಗೆದುಕೊಳ್ಳಿ Laughing out loud ), ನಂತರ ದೇವಭಾಷೆಯಾಗಿ, ಬದುಕಿನ ಸಾರ್ಥಕ ಪಥದಲ್ಲಿ ನಡೆದು, ಕೊನೆಗೆ ಸತ್ತು ಸ್ವರ್ಗವನ್ನು(ಹೌದು, ಸತ್ತ ಮೇಲೆ ತಾನೇ ಸ್ವರ್ಗ Eye-wink ) ಸೇರಿ, ದೇವರಲ್ಲಿ ಲೀನವಾಗಿ , ಭಗವನ್ಮುಕ್ತಿಯನ್ನು ಪಡೆಯಬೇಕು ಎಂಬ hidden agenda ಏನಾದರೂ ಇದೆಯೇ ? ಎಂಬ ಅನುಮಾನ ನನ್ನದು. ?)

ಅಂದ ಹಾಗೆ, ಇಲ್ಲೊಬ್ಬ ಅಂಬಿಗ ನ್ಯಾಯಕ್ಕಾಗಿ ಕೂಗು ಹಾಕುತ್ತಿದ್ದಾನೆ, ಹೊರಡಬೇಕಿದೆ. ಆಮೇಲೆ ಸಿಗೋಣ.

‹ ಕದಂಬ ನಮ್ಮ ಆಪೀಸಲ್ಲಿ ಕನ್ನಡ ಕಲೀತಾರಂತೆ.. ಹೇಳಿಕೊಡೋರು ಬೇಕು!! ›
  • ಸಾಹಿತ್ಯ, ಭಾಷೆ
~.~
  • Login or register to post comments
  • 657 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 19, 2007 - 2:43pm — Shyam Kishore

ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು - ಅಂಬಿಗನ ಆರ್ತನಾದ

Shyam Kishore's picture

ಸುನಿಲ್,

ಚರ್ಚೆಯ ವಿಷಯ ಓದಿದೆ. ಉತ್ತರವನ್ನು ನನಗೆ ಹೊಳೆದಾಗ, ಮತ್ತು ಮನಸ್ಸಿನಲ್ಲಿ ಹರಳುಗಟ್ಟಿದಾಗ, ಮತ್ತೆ ಬರೆಯುತ್ತೀನಿ. "ಸಂತೆಯಲ್ಲ್ಲಿಕೂತು ಮೂರು ಮೊಳ ನೇಯ್ದಂತೆ" ಆಗೋದು ಬೇಡ ನೋಡಿ. Wink

ಆದರೆ ಚರ್ಚೆಯ ವಿಷಯವನ್ನು ಸುಮ್ಮನೇ ಒಂದು ಪ್ರಬಂಧದ ರೀತಿ ಓದಿದಾಗ ಮನಸ್ಸಿನಲ್ಲಿ ಕೆಲವು ಅನಿಸಿಕೆಗಳು ಬಂದವು. ಬರೆಯಲೇಬೇಕು ಅಂತ ಅನ್ನಿಸುತ್ತಿದೆ. ಬರೀತಿದ್ದೀನಿ. ವೈಯಕ್ತಿಕ ಟೀಕೆ ಅಂತ ತಿಳ್ಕೋಬೇಡೀಪ್ಪ. ಹಾಗನಿಸಿದಲ್ಲಿ ನನಗೊಂದು "ವೈಯಕ್ತಿಕ ಸಂದೇಶ" ಕಳುಹಿಸಿ, ಸರಿಯಾಗಿ ಬಯ್ದು ಬಿಡಿ! ನಾನು ಬರೆದಿರುವ ಅನಿಸಿಕೆಯೆಲ್ಲ, ಚರ್ಚೆಯ ವಿಷಯಕ್ಕೆ ನನ್ನ ಉತ್ತರ ಅಲ್ಲವೇ ಅಲ್ಲ ಅಂತ ಮೊದಲಿಗೇ ಹೇಳುತ್ತೀನಿ. ಇದೊಂದು ರೀತಿಯ "on a lighter note" ತರಹ.

೧. ಯಾಕೋ ಸ್ವಲ್ಪ "ಋಣಾತ್ಮಕ ಧೋರಣೆ" ಇಣುಕಿದಂತಿದೆಯಲ್ಲ? ಆ ರೀತಿಯ ಚಿಂತನೆ ಖಂಡಿತ ಬೇಡ. ಬೇಕಾದವರು ಖಂಡಿತ ಭಾಗವಹಿಸುತ್ತಾರೆ. ನಿಮಗನ್ನಿಸಿದ್ದನ್ನು "ಹಾಡುವುದು ಅನಿವಾರ್ಯ ಕರ್ಮ ಎನಗೆ" ಎಂಬಂತೆ, ಆದರೆ "ಎದೆ ತುಂಬಿ" ಹಾಡಿ! ಉಳಿದದ್ದು ನಿಮ್ಮ ಕೈಯಲ್ಲಿಲ್ಲ್ಲ(ಕೇವಲ ನಿಮಗೆ ಅಂತಲ್ಲ, ನನಗೂ ಕೂಡ ಅನ್ವಯಿಸಿಕೊಂಡು). ಅದೂ ಅಲ್ಲದೇ ಯಾವ ಚರ್ಚೆಯಲ್ಲಿ ಭಾಗವಹಿಸಬೇಕು, ಬೇಡ ಅನ್ನೋದು ಅವರವರಿಗೆ ಸೇರಿದ್ದು ತಾನೇ? ಅದರಲ್ಲಿ ಯಾರೂ ಮೂಗು ತೂರಿಸುವಂತಿಲ್ಲ. ತೂರಿಸಿದಲ್ಲಿ ಗಾಯಗೊಳ್ಳುವುದು ನಮ್ಮ ಮೂಗೇ ಅಲ್ಲವೇ? Laughing

೨.

ಸುನಿಲ್ ಜಯಪ್ರಕಾಶ್ wrote:
ಈ ಲೇಖನ ಒಂದು ರೀತಿ ಪವನಜರು "ನಾನು ಅನಂತಮೂರ್ತಿಯಲ್ಲವಲ್ಲ..ಆದ್ದರಿಂದ.." ಎಂದು ಹೇಳಿದ ಹಾಗೆಯೇ, ಈ ಪಾಮರನ ಮಾತುಗಳೂ ಆಗುತ್ತದೆಯೋ ಏನೋ ಎಂಬು ಗುಮಾನಿ ನನ್ನದು.
.

ಯಾಕೆ ಯಾರೇ ಆದರೂ ಕೂಡ "ನಾನು ಅವರಲ್ಲ" ಅಂತ ಯೋಚಿಸಬೇಕು? ಎಲ್ಲವನ್ನೂ "ಅವರೇ" ಹೇಳಬೇಕು, ಆಗಲೇ ಅಭಿಪ್ರಾಯಕ್ಕೆ ತೂಕ ಅಂದಲ್ಲಿ, ನಾವು ನಾವಾಗಿ, ವಿಭಿನ್ನವಾಗಿ ಹೇಳೋ ಪ್ರಮೇಯವೇ ಬರೋದಿಲ್ಲ ಅಲ್ಲವೇ? ಬೇಡಪ್ಪ, ನೀವು ನೀವಾಗಿಯೇ ಹೇಳಿ; ನಾನು ನಾನಾಗಿಯೇ ಹೇಳುತ್ತೀನಿ;ಇನ್ನೊಬ್ಬರು ಅವರಾಗಿಯೇ ಹೇಳಲಿ. ನಮ್ಮ ಮಾತುಗಳನ್ನು ನಮ್ಮದಾಗಿಯೇ ಕೇಳಿಸಿಕೊಂಡಲ್ಲಿ ಮಾತ್ರ ಮಾತಾಡಿದ್ದೂ ಸಾರ್ಥಕ.Wink ಇಲ್ಲ ಅಂದರೆ (ನಮ್ಮ ಮಾತಿಗೆ ಬೆಲೆಯಿಲ್ಲ ಅಂದರೆ) ಮಾತಾಡದೇ ಇರೋ ಜಾಣತನ ಕಲಿಯಬೇಕು. ನೀವೇನಂತೀರಾ? ಮರೆಯದೇ ತಿಳಿಸಿ.

೩.

ಸುನಿಲ್ ಜಯಪ್ರಕಾಶ್ wrote:
ನಂತರ ದೇವಭಾಷೆಯಾಗಿ, ಬದುಕಿನ ಸಾರ್ಥಕ ಪಥದಲ್ಲಿ ನಡೆದು, ಕೊನೆಗೆ ಸತ್ತು ಸ್ವರ್ಗವನ್ನು(ಹೌದು, ಸತ್ತ ಮೇಲೆ ತಾನೇ ಸ್ವರ್ಗ Eye-wink ) ಸೇರಿ...

ಸುನಿಲ್, ದಯವಿಟ್ಟು ಕ್ಷಮಿಸಿ; ನನಗೆ ಈ ಒಂದು ಅಂಶ ಅರ್ಥ ಆಗುತ್ತಲೇ ಇಲ್ಲ! ಇನ್ನೊಂದು ಭಾಷೆಯನ್ನು ಅಲ್ಲಗಳೆಯುವುದರಿಂದ ಮಾತ್ರ ನಮ್ಮ ಭಾಷೆ ದೊಡ್ಡದಾಗಬೇಕೆ. ನನ್ನ ಸ್ನೇಹಿತರ ಜತೆ ಕೂಡ ಈ ಬಗ್ಗೆ ಚರ್ಚಿಸಿದ್ದೇನೆ. ನಮ್ಮ ಚರ್ಚೆಯ ವಿಷಯ ಆಗೆಲ್ಲ "ತಮಿಳು ಪುರಾತನವೋ, ಕನ್ನಡವೋ...", ಹೀಗೆ ಈ ಧಾಟಿಯಲ್ಲಿ. ನನ್ನ ಅನಿಸಿಕೆ ಇಷ್ಟೇ: ಇನ್ನೊಂದು ಭಾಷೆಗಿಂತ ಪುರಾತನವಾದಲ್ಲಿ ಮಾತ್ರ ನಮ್ಮ ಕನ್ನಡಕ್ಕೆ "ಗರಿ ಮೂಡುತ್ತೆ" ಅನ್ನೋದನ್ನು ನಾನು ಒಪ್ಪೋಲ್ಲ. ನಾನು ಕನ್ನಡವನ್ನು "ಹಚ್ಚಿಕೊಳ್ಳೋಕೆ", ಇಷ್ಟಪಡೋದಕ್ಕೆ, ನನಗೆ ಅದನ್ನು ಇನ್ನೊಂದು ಭಾಷೆಯ ಜತೆ ಹೋಲಿಸಿ, ತೂಗಿ, prove ಮಾಡಬೇಕಿಲ್ಲ. ಹಾಗೆಯೇ ಇಲ್ಲಿ ಕೂಡ. ನನ್ನ ವಿನಂತಿ ಇಷ್ಟೇ: ಕನ್ನಡವನ್ನು ಹೊಗಳೋಣ, ಚರ್ಚಿಸೋಣ. ಆದರೆ ಆ ಧಾವಂತದಲ್ಲಿ ಇನ್ನೊಂದು ಭಾಷೆಯನ್ನು ಹಂಗಿಸುವುದು ಬೇಡ. ಆ ಇನ್ನೊಂದು ಭಾಷೆ ಇಂಗ್ಲಿಷ್ ಇರಬಹುದು, ಸಂಸ್ಕೃತ ಇರಬಹುದು ಅಥವಾ ತಮಿಳೋ, ತೆಲುಗೋ, ಯಾವುದಾದರೂ ಸರಿ. ಅದು ನಮಗೇ ಅಷ್ಟು ಹಿತಕರವಲ್ಲ ಅಲ್ಲವೇ? ಏನಂತೀರಾ? ನಾನು ಸಂಸ್ಕೃತ ಪಂಡಿತನೂ ಅಲ್ಲ, ಕಟ್ಟಾ ಸಂಸ್ಕೃತ ಅಭಿಮಾನಿಯೂ ಅಲ್ಲ. ಆದರೆ ಇದೊಂದು ರೀತಿ, "ನಮ್ಮಮ್ಮ ದೊಡ್ಡವಳು ಅಂತ ತೋರಿಸೋಕೆ ನಿಮ್ಮಮ್ಮನನ್ನು ಚಿಕ್ಕವಳಾಗಿ ಮಾಡಬೇಕು, ಹಂಗಿಸಬೇಕು" ಅನ್ನೋ ಥರ ಆಯಿತು. ಅಮ್ಮ ಅಂದಮೇಲೆ, ಯಾರಿಗೋ ಅಮ್ಮನೇ ತಾನೇ? ಹತ್ತು ಮಕ್ಕಳಿಗೆ ಅಮ್ಮ ಆದರೇನು, ಸಾವಿರ ಮಕ್ಕಳಿಗೆ ಅಮ್ಮ ಆದರೇನು? ಬಳಸದೇ ಹೋದಲ್ಲಿ ಯಾವ ಭಾಷೆಯೇ ಆದರೂ ಖಂಡಿತ "ಮೃತ ಭಾಷೆ" ಆಗುತ್ತೆ. ಇದು ಸತ್ಯ. ನಾಳೆ ನನ್ನ ಮಗ/ಮಗಳು ಕನ್ನಡಕ್ಕೆ ಹಾಗಂತ (ಸತ್ತ ಭಾಷೆ) ಅಂದ್ರೆ ಕೂರಿಸಿಕೊಂಡು "ಹಾಗೆ ಅನ್ನೋದು ತಪ್ಪು. ಕನ್ನಡ ಹಾಗಾಗೋಕೆ ಕಾರಣ ನೀವು. ಅದನ್ನು ಬಳಸಿ, ಆಮೇಲೆ ಮಾತನಾಡಿ" ಅಂತ ತಿಳಿ ಹೇಳುತ್ತೀನಿ. ಸರಿ ತಾನೇ?

ಇವು ಓದಿದ ತಕ್ಷಣ ಅನ್ನಿಸಿದ್ದು. ಇನ್ನು ಚರ್ಚೆಯ ನಿಜವಾದ ವಿಷಯದ ಬಗ್ಗೆ, ಮತ್ತೊಮ್ಮೆ ಮಾತಾಡೋಣ!

- ಶ್ಯಾಮ್ ಕಿಶೋರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 19, 2007 - 9:22pm — Sunil Jayaprakash

ಪ್ರತಿಕ್ರಿಯೆ : ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು......

Sunil Jayaprakash's picture

ಶ್ಯಾಮ್ ಕಿಶೋರ್,

ನಿಮ್ಮ ಪ್ರತಿಕ್ರಿಯೆಯನ್ನು ನನ್ನ ಗೂಗಲ್ ರೀಡರ್ನಲ್ಲಿ ಮಧ್ಯಾಹ್ನವೇ ಓದಿದೆ. ನಿಜಕ್ಕೂ ನಿಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಕ್ಕೆ ಸಂತೋಷವಾಯಿತು. ಕೆಲಸದ ಒತ್ತಡದಲ್ಲಿದ್ದುದರಿಂದ (ನಮ್ಮ ಸಹೋದ್ಯೋಗಿ, ಈಗಷ್ಟೇ ಪ್ಲೇನ್ ಹತ್ತಿಯಾಯಿತು) ನೀವು ಮೊದಲು ಮಾಡಿದ ಮಾತುಗಳು ಮತ್ತು ಪ್ರಶ್ನೆಗಳಿಗೆ ನನ್ನ ಮಾತುಗಳನ್ನು ಸೇರಿಸಲಾಗಲಿಲ್ಲ.

Shyam Kishore wrote:
ವೈಯಕ್ತಿಕ ಟೀಕೆ ಅಂತ ತಿಳ್ಕೋಬೇಡೀಪ್ಪ

ಖಂಡಿತವಾಗಿಯೂ ನಿಮ್ಮ ಟಿಪ್ಪಣಿಗಳನ್ನು ವೈಯಕ್ತಿಕ ಟೀಕೆಯೆಂದು ನಾನು ಭಾವಿಸಲಿಲ್ಲ. ಇದರ ಬಗ್ಗೆ ಎಳ್ಳಷ್ಟೂ ಸಂಶಯ ಬೇಡ.

Shyam Kishore wrote:
"ಹಾಡುವುದು ಅನಿವಾರ್ಯ ಕರ್ಮ ಎನಗೆ"

ಹೌದು, ನಿಮ್ಮ ಮಾತುಗಳು, ನನ್ನ ಮನಸ್ಸಿಗೆ ಹೀಗೆ ಮನವರಿಕೆ ಮಾಡಿಕೊಡಲು ಸಹಾಯ ಮಾಡಿದೆ. "ಎಲ್ಲ ಓದಲಿ ಎಂದು ನಾನು ಬರೆಯುವುದಿಲ್ಲ, ಬರೆಯುವುದು ನನಗಾಗಿಯೇ" Laughing out loud

Shyam Kishore wrote:
ಯಾಕೆ ಯಾರೇ ಆದರೂ ಕೂಡ "ನಾನು ಅವರಲ್ಲ" ಅಂತ ಯೋಚಿಸಬೇಕು?....ನೀವೇನಂತೀರಾ? ಮರೆಯದೇ ತಿಳಿಸಿ.

ಈ ಮಾತಿಗೆ ನಿಜಕ್ಕೂ ಸವಿಯೊದಗನ್ನು ಸಲ್ಲಿಸುವೆ. ಒಂದು ವಿಷಯ ಸ್ಪಷ್ಟಪಡಿಸಿಬಿಡುವೆ, ನಾನು ಯಾವುದಾದರೂ ಲೇಖನ ಬರೆದಾಗ ಅದಕ್ಕೆ ಪ್ರತಿಕ್ರಿಯೆ ಬರಲಿಲ್ಲವೆಂದ ಮಾತ್ರಕ್ಕೆ ನನಗೆ ಖಂಡಿತವಾಗಿಯೂ ಬೇಸರವಾಗುವುದಿಲ್ಲ. ನನಗೆ ನಿಜವಾದ ಸಂತೋಷ ಸಿಗುವುದು ಬರೆಯುವುದರಿಂದ. ಇಂಥವರು ಓದಲಿ, ಅಥವಾ ಇಂಥವರೇ ಪ್ರತಿಕ್ರಿಯಿಸಲಿ ಎಂಬ ಪೂರ್ವಾಗ್ರಹಪೀಡಿತನಾಗಿ ಖಂಡಿತವಾಗಿಯೂ ಕೂಡ ಬರೆಯುವುದಿಲ್ಲ. ಯಾರಾದರು ಪ್ರತಿಕ್ರಿಯಿಸದರೆ ಮತ್ತಷ್ಟು ಸಂತೋಷವಾಗುತ್ತದೆಯೇ ಹೊರತು, ಯಾರು ಪ್ರತಿಕ್ರಿಯಿಸದ ಮಾತ್ರಕ್ಕೆ ಬೇಸರ ಖಂಡಿತವಾಗಿಯೂ ಆಗುವುದಿಲ್ಲ.

Shyam Kishore wrote:
ಸುನಿಲ್, ದಯವಿಟ್ಟು ಕ್ಷಮಿಸಿ; ನನಗೆ ಈ ಒಂದು ಅಂಶ ಅರ್ಥ ಆಗುತ್ತಲೇ ಇಲ್ಲ! ಇನ್ನೊಂದು ಭಾಷೆಯನ್ನು ಅಲ್ಲಗಳೆಯುವುದರಿಂದ ಮಾತ್ರ ನಮ್ಮ ಭಾಷೆ ದೊಡ್ಡದಾಗಬೇಕೆ.

ಅಯ್ಯೋ, ಶ್ಯಾಮ್ ಕಿಶೋರರೆ, ಮತ್ತೊಮ್ಮೆ ನಾನು ಪ್ರಾರಂಭಿಸಿದ ಚರ್ಚೆಯನ್ನು ನೋಡಿ. ನಾನು ಚರ್ಚಿಸ ಹೊರಟಿದ್ದು, ಇಂಗ್ಲೀಷಿಗೊಂದು ನ್ಯಾಯ, ಸಂಸ್ಕೃತಕ್ಕೊಂದು ನ್ಯಾಯವೇಕೆ ? ಎಂಬುದರ ಕುರಿತಾಗಿ. ಇದು ಪಂಡಿತರೆನಿಸಿದವರ ಸ್ವಹಿತಾಸಕ್ತಿಯ ಸಂಕೇತವೇ ? H.S.R.Raghavendra Raoರವರು ತುಂಬಾ ಚೆನ್ನಾಗಿ, ಕರ್ನಾಟಕ v/s ಕನ್ನಡ ಎಂಬುದಾಗಿ ಬರೆದಿದ್ದಾರೆ ನೋಡಿ. ಸಂಸ್ಕೃತವನ್ನು ಬರಮಾಡಿಕೊಂಡ ವಿದ್ವಾಂಸರು, ಇಂಗ್ಲೀಷನ್ನೇಕೆ ಬೇಡವೆನ್ನುತ್ತಾರೆ ? ಇದು ಪುರೋಹಿತಶಾಯಿ ಪದ್ಧತಿಯ ಸಂಕೇತವೇ ?

Shyam Kishore wrote:
ನಾನು ಕನ್ನಡವನ್ನು "ಹಚ್ಚಿಕೊಳ್ಳೋಕೆ", ಇಷ್ಟಪಡೋದಕ್ಕೆ, ನನಗೆ ಅದನ್ನು ಇನ್ನೊಂದು ಭಾಷೆಯ ಜತೆ ಹೋಲಿಸಿ, ತೂಗಿ, prove ಮಾಡಬೇಕಿಲ್ಲ.

ನಿಮ್ಮ ಮಾತಿಗೆ ನಿಜಕ್ಕೂ ನನ್ನ ಸಹಮತವೂ ಇದೆ. ನನಗೆ ಕನ್ನಡ ಇಷ್ಟವಾಗಲು ಕನ್ನಡವೇ ಕಾರಣ. ದಯವಿಟ್ಟು, ಇಡೀ ಲೇಖನವನ್ನು ಮತ್ತೊಮ್ಮೆ ಓದಿ ನೋಡೀಪ್ಪ(ಪಾತಿಗೆ ಸಾತು ಸಂಪತ್ತುನಲ್ಲಿ ಪಾಚು ಹೇಳುವ ರೀತಿ Eye-wink ). ನಾನು ಸಂಸ್ಕೃತವನ್ನೇ ಆಗಲೀ, ಬೇರೆ ಯಾವುದೇ ಭಾಷೆಯನ್ನಾಗಲೀ ಎಲ್ಲಿಯೂ ತುಚ್ಛವಾಗಿ ಕಂಡಿಲ್ಲ. ಬೇರೆ ಭಾಷೆಯನ್ನು ಕೀಳಾಗಿ ಕಾಣುವುದು ಒಂದು ರೀತಿಯ ಅಸಹನೆಯ ಸಂಕೇತ ಎಂಬ ಮಾತನ್ನು ಒಪ್ಪುತ್ತೇನೆ

. ನಿಮ್ಮಂತೆ ನನಗೂ ಕೂಡ, ಕನ್ನಡ ಇಷ್ಟವಾಗಲು ಅದು ಪುರಾತನ ಎನ್ನುವ ಕಾರಣಕ್ಕೋ ಅಥವಾ ಇನ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿಯೋ ಖಂಡಿತವಾಗಿಯೂ ಅಲ್ಲ. ಕನ್ನಡವನ್ನು ಬೇರೆ ಭಾಷೆಯ ಜೊತೆ ಹೋಲಿಸಿ ಬೇರೆಯದನ್ನು ತುಚ್ಛವಾಗಿ ಕಂಡು ನಮ್ಮನ್ನು ಉದ್ಧಾರವಾಗಿಸುವುದರಲ್ಲಿ ಯಾವ ಪುರುಷಾರ್ಥವೂ ನನಗೆ ಕಾಣಿಸುವುದಿಲ್ಲ.

ಈ ಚರ್ಚೆಯ ಆಶಯ ಸಂಸ್ಕೃತದ ವಿರುದ್ಧವಾಗಲೀ, ಅಥವಾ ಬೇರೆ ಭಾಷೆಯ ವಿರುದ್ಧ ಖಂಡಿತವಾಗಿಯೂ ಅಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 20, 2007 - 12:21am — srivathsajoshi

Re: ಪ್ರತಿಕ್ರಿಯೆ : ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು......

srivathsajoshi's picture

Shyam Kishore wrote:
ಯಾಕೆ ಯಾರೇ ಆದರೂ ಕೂಡ "ನಾನು ಅವರಲ್ಲ" ಅಂತ ಯೋಚಿಸಬೇಕು? ಎಲ್ಲವನ್ನೂ "ಅವರೇ" ಹೇಳಬೇಕು, ಆಗಲೇ ಅಭಿಪ್ರಾಯಕ್ಕೆ ತೂಕ ಅಂದಲ್ಲಿ, ನಾವು ನಾವಾಗಿ, ವಿಭಿನ್ನವಾಗಿ ಹೇಳೋ ಪ್ರಮೇಯವೇ ಬರೋದಿಲ್ಲ ಅಲ್ಲವೇ? ಬೇಡಪ್ಪ, ನೀವು ನೀವಾಗಿಯೇ ಹೇಳಿ; ನಾನು ನಾನಾಗಿಯೇ ಹೇಳುತ್ತೀನಿ;ಇನ್ನೊಬ್ಬರು ಅವರಾಗಿಯೇ ಹೇಳಲಿ. ನಮ್ಮ ಮಾತುಗಳನ್ನು ನಮ್ಮದಾಗಿಯೇ ಕೇಳಿಸಿಕೊಂಡಲ್ಲಿ ಮಾತ್ರ ಮಾತಾಡಿದ್ದೂ ಸಾರ್ಥಕ.

ಇದನ್ನೇ ನಾನು ಅವತ್ತು 'ಯು ಬಿ ಪವನಜ' ('You be Pavanaja') ಎಂದು ಸಿಂಬಲ್ ಆಗಿ ಹೇಳಿದ್ದು! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 20, 2007 - 3:29am — Shyam Kishore

ಉ: Re: ಪ್ರತಿಕ್ರಿಯೆ : ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು......

Shyam Kishore's picture

punಡಿತರೇ,

ಇದರ ಬಗ್ಗೆ ಎರಡನೇ ಮಾತೇ ಇಲ್ಲ. Wink

ನೀವವತ್ತು ಸಿಂಪಲ್ ಆಗಿ ಹೇಳಿದ್ದನ್ನು ಇಸ್ಮಾಯಿಲ್ ಅವರು ಸ್ವಲ್ಪ ಬಿಡಿಸಿ ಹೇಳಿದರು. ನಾನು ಅದನ್ನು ಇನ್ನೂ ವಿವರಿಸಿ, ಆದರೆ ವ್ಯಕ್ತಿಗಳ ಹೆಸರನ್ನು ಬಿಟ್ಟು, ಬರೆದೆ ಅಷ್ಟೇ!

- ಶ್ಯಾಮ್ ಕಿಶೋರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದ ಏತ್ವಗಳು
  • ಕನ್ನಡದಲ್ಲಿನ ಒತ್ತಕ್ಷರಗಳು - ಭಾಗ ಎರಡು (೨)
  • ನಾನು ಕಾಗುಣಿತವನ್ನು ಕಲಿತ ಬಗೆ
  • "ಕನ್ನಡದ ಕಗ್ಗೊಲೆ" ವಿಜಯ ಕರ್ನಾಟಕದ ಉದ್ದೇಶವೇ ?
  • firefox tab, keyboard tabಗಳಿಗೆ ಕನ್ನಡ ಪದಗಳು
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಅಳುವ ಗಂಡಸ ನಂಬಬೇಡ?
  • ಮಾಹಿತಿ ಬೇಕಿದೆ
  • ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
  • ಮೆಱವಣಿ, ಮೆಱವಣಿಗೆ
  • ಪೞೆಯುೞಿಕೆಗಳು
  • ಹೆಂಡತಿ-ಎಂದರೆ ಜೋಕು ಯಾಕೆ ?
  • Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 12:37pm
  • shashikannada
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 9, 2008 - 12:28pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:16pm
  • hpn
    ಉ: Abroad ಅನ್ನೋ ಮಾಯೆ...
    July 9, 2008 - 12:04pm
  • uniquesupri
    ಉ: ಅಳುವ ಗಂಡಸ ನಂಬಬೇಡ?
    July 9, 2008 - 11:55am
  • uniquesupri
    ಉ: ನುಡಿ ಚಿತ್ರ ಬರೆಯಲು ಕಲಿತಿದ್ದು
    July 9, 2008 - 11:52am
  • shashikannada
    ಉ: Abroad ಅನ್ನೋ ಮಾಯೆ...
    July 9, 2008 - 11:51am
  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 11:47am
  • Sunil Jayaprakash
    ಉ: ಪುಟಾಣಿ ಪಾಪ !
    July 9, 2008 - 11:20am
ಇನ್ನಷ್ಟು


ಸರಳತೆಯು ನಿಸರ್ಗದ ಮೊದಲ ಹೆಜ್ಜೆ ಮತ್ತು ಕಲೆಯ ಕೊನೆಯ ಹೆಜ್ಜೆ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator