vtu ಮೊಬೈಲ್ ರಾಮಾಯಣ
ನಿನ್ನೆ ದಿನ ವಿಟಿಯು ಸಿ ಇ ಓ (ಆಕಾ ಕುಲಪತಿ - ಬಲವೀರರೆಡ್ಡಿ) ಕೆಲವರೊಂದಿಗೆ ಬಿ ಎಮ್ ಎಸ್ ಹಾಗು ಇನ್ನೊಂದು ಇಂಜಿನೀಯರಿಂಗ್ ಕಾಲೇಜಿಗೆ ಲಗ್ಗೆ ಇಟ್ಟು ಕ್ಲಾಸಿನಲ್ಲಿದ್ದ ಮೊಬೈಲ್ ಫೋನುಗಳನ್ನೆಲ್ಲ ವಶಪಡಿಸಿಕೊಂಡರಂತೆ!
ವಿಟಿಯು ಪ್ರಕಾರ ಕಾಲೇಜು ಪ್ರಾಂಗಣಕ್ಕೆ ಮೊಬೈಲ್ ತರುವುದೇ ತಪ್ಪಂತೆ, ಹಾಗೂ ಹಾಗೆ ಮಾಡುವುದಕ್ಕೆ ನಿಷೇಧ ಹೇರಲಾಗಿದೆಯಂತೆ. ಎಲ್ಲಾದರೂ 'ಸುರಕ್ಷಿತ' ಜಾಗದಲ್ಲಿ ಮೊಬೈಲ್ ಇಟ್ಟು ಕಾಲೇಜು ಪ್ರವೇಶಿಸಬೇಕಂತೆ ![]()
"ಏನಪ್ಪಾ ವಿಚಿತ್ರ, ಇದು? 'ಆಫ್ ಮಾಡಿಟ್ಟುಕೊಳ್ಳಿ' ಎನ್ನುವುದನ್ನು ಕೇಳಿದ್ದೇನೆ, 'ಹೊರಗೆಲ್ಲೋ ಇಟ್ಟು ಬನ್ನಿ' ಎಂದರೆ ಮೊಬೈಲ್ ಇಟ್ಟುಕೊಂಡರೂ ಬಂದ ಸುಖವೇನು?" ಎಂದು ಅಲೋಚಿಸುತ್ತಿದ್ದೀರ? ನಮ್ಮ 'ಶಿಕ್ಷಕವೃಂದ' 'ಶಿಕ್ಷಕರ ದಿನ'ದಂದು ಎಸಗಿದ ತಾನಾಶಾಹೀ ಕೃತ್ಯದ 'ಸಾಗಾ' ಡೀಟೇಯ್ಲಾಗಿ ಪ್ರಜಾವಾಣಿಯಲ್ಲಿ ಓದಿ.
ಸದ್ಯ. ನಾವು ಪುಣ್ಯವಂತರು. ವಿ ಟಿ ಯು ಮಾಡುವ ತರಲೆ ನಿರ್ಧಾರಗಳಿಂದ ಹಿಂದಿನ ವರ್ಷವೇ ಮುಕ್ತಿ ಪಡೆದೆವು ಎಂದು ಇದನ್ನೋದಿದಾಗ ನನಗನ್ನಿಸಿತು ![]()

- Login or register to post comments
- 990 hits
- Email this forum






RSS:
ಮೊಬೈಲ್ ಗೇಟಿನಲ್ಲಿಟ್ಟು ಬನ್ನಿ
ಗ್ರಂಥಾಲಯಗಳಲ್ಲಿ ಮತ್ತು ಸೂಪರ್‌ಮಾರ್ಕೆಟ್ಟುಗಳಲ್ಲಿ ನೀವು ತೆಗೆದುಕೊಂಡು ಹೋದ ಪುಸ್ತಕ, ಚೀಲಗಳನ್ನು ಸುರಕ್ಷಿತವಾಗಿ ಇಡಲು ವ್ಯವಸ್ಥೆ ಇದೆ. ಅಲ್ಲಿ ಚೀಲ ಇಟ್ಟು ಟೋಕನ್ ತೆಗೆದುಕೊಂಡು ಒಳಗೆ ಹೋಗಿ ಕೆಲಸ ಮುಗಿಸಿ ವಾಪಾಸು ಬರುವಾಗ ಟೋಕನ್ ಕೊಟ್ಟು ನಿಮ್ಮ ಚೀಲ ವಾಪಾಸು ತೆಗೆದುಕೊಳ್ಳಬಹುದು. ಇದೇ ವ್ಯವಸ್ಥೆಯನ್ನು ಕಾಲೇಜುಗಳಲ್ಲೂ ಮಾಡಬಹುದು. ಮೊಬೈಲ್ ಫೋನ್ ಒಂದಕ್ಕೆ ದಿನಕ್ಕೆ ಒಂದು ರೂ ಚಾರ್ಜೂ ಮಾಡಬಹುದು!
ಇನ್ನೊಂದು ಸಲಹೆ ಇದೆ. ಮೊಬೈಲ್ ಜಾಮರ್‌ಗಳು ಈಗಾಗಲೇ ಲಭ್ಯವಿವೆ. ಅವುಗಳನ್ನು ಕಾಲೆಜುಗಳಲ್ಲಿ ಸ್ಥಾಪಿಸಬಹುದು.
ಸಿಗೋಣ,
ಪವನಜ
-----------
Think globally, Act locally
ನಿಜ
ನಿಜ, ಇಂಜಿನೀಯರಿಂಗ್ ಕಾಲೇಜುಗಳಿಗೆ ದುಡ್ಡಿಗೇನೂಕಡಿಮೆ ಇಲ್ಲವಾದ್ದರಿಂದ ಮೊಬೈಲ್ ಜಾಮ್ಮರ್ ಗಳನ್ನುಪಯೋಗಿಸಬಹುದು. ಎಲ್ಲರಿಗೂ 'ಹೊರಗಿಟ್ಟು ಬನ್ನಿ' ಎನ್ನುವುದು ಸೂಪರ್ ಮಾರ್ಕೆಟ್ಟಿನಲ್ಲಿ ಸಾಮಾನು ಇಟ್ಟುಬರುವಾಗ ಸರಿ ಇರಬಹುದು... ಆದರೆ ದಿನವಿಡೀ ಕಾಲೇಜಿನಲ್ಲಿ ಹೊರಗಿಟ್ಟು ಬರೋದೆಂದರೆ ಪಜೀತಿಯ ವಿಷಯ.
ಹಿರಿಯರಾದ ಶಿಕ್ಷಕರು ಸ್ವಲ್ಪವಾದರೂ ಸೆನ್ಸಿಬಲ್ ಆದ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಬೇಕು. ಒಂದೆರಡು ಬಾರಿ ಹಿಡಿದು ಹೆದರಿಸಿದರೆ ಮೊಬೈಲ್ ಕಾಲೇಜಿಗೆ ತರದೇ ಬಿಡುತ್ತಾರೆಯೇ ವಿಧ್ಯಾರ್ಥಿಗಳು? ಗೊತ್ತಾಗದ ಹಾಗೆ ಸ್ಮಗಲ್ ಮಾಡುತ್ತಾರೆ (ಅಷ್ಟೊಂದು ಜನಸಂದಣಿಯಲ್ಲಿ ಹೀಗೆ ಮಾಡುವುದು ಕಷ್ಟವೂ ಅಲ್ಲ). ಅಲ್ಲದೇ ಟೇಬಲ್ ಕೆಳಗೆ ಅಡಗಿಸಿಕೊಂಡು ಉಪಯೋಗಿಸುತ್ತಾರೆ.
--
"ಹೊಸ ಚಿಗುರು, ಹಳೆ ಬೇರು"