Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವಿಜ್ಞಾನ ಸಾಹಿತ್ಯ

Minimize and Maximize

January 21, 2007 - 1:43pm — Sunil Jayaprakash

ಈ ದಿನ translate.sampada.net ನಲ್ಲಿ ಮೋಝಿಲ್ಲಾವನ್ನು ಕನ್ನಡಿಸುತ್ತಿರುವಾಗ, maximize ಮತ್ತು minimize ಎನ್ನುವುದಕ್ಕೆ ಕನ್ನಡದಲ್ಲಿ ಏನು ಹೇಳಬಹುದು ಎಂಬುದಾಗಿ ಯೋಚಿಸುತ್ತಿದ್ದಾಗ, ಪಂಡಿತ ಕವಲೀಯವರ ಕಸ್ತೂರೀ ಕೋಶ ಸಹಾಯಕ್ಕೆ ಬಂತು. ಗ್ರಾಮ್ಯವಲ್ಲದ ಕನ್ನಡವೂ ಇರಲು ಸಾಧ್ಯ ಎಂಬುದಕ್ಕೆ ಪುಷ್ಟಿ ನೀಡುವಂತಿದೆ ಈ ಪದಗಳು. ಕಸ್ತೂರೀ ಕೋಶವನ್ನು ನೋಡಿದ ನಂತರ, ದ್ರಾವಿಡ ಪದಕೋಶದಲ್ಲಿ ಹುಡಕಿದಾಗ ಮತ್ತಷ್ಟು ಸಂತೋಷವಾಯಿತು. ನನ್ನ ಸಂತೋಷಕ್ಕೆ ಮುಖ್ಯ ಕಾರಣ ಆ ಪದಗಳಿಗಿರುವ ನಾಮಪದದ ರೂಪ.

ಆ ಪದಗಳೆಂದರೆ,
ಕಸ್ತೂರೀ ಕೋಶದಿಂದ, Maximizeಗೆ - ಪರ್ವಿಸು; ಪರ್ವು - (ಕ) ಧಾ. ಹಬ್ಬು, ಹರಹು, ವಿಸ್ತಾರವಾಗು, ಹೆಚ್ಚಾಗು, ಚದುರು.
ದ್ರಾವಿಡ ಪದಕೋಶದ ವಿವರಣೆಗೆ ಇಲ್ಲಿ ಕ್ಲಿಕ್ ಮಾಡಿ.
Minimize - ಪರ್ವು ಪದದ ವಿರುದ್ಧ ಪದ (ಪರ್ವು + ಅಳಿ = ಪರ್ವಳಿ) - ಪರ್ವಳಿಸು.

ಅಂದ ಹಾಗೆ, ಕುಗ್ಗಿಸು ಮತ್ತು ಹಿಗ್ಗಿಸು ಇವುಗಳನ್ನು ಬಳಸಬಹುದಾದರೂ, ಈ ಪದಗಳು zip ಮತ್ತು unzipಗಳಿಗೆ ಹೆಚ್ಚು ಸೂಕ್ತವೆನಿಸುತ್ತವೆ. translate.sampada.netದಲ್ಲಿದ್ದ ಮತ್ತಷ್ಟು ಸಲಹೆಗಳೆಂದರೆ, ಕನಿಷ್ಟಿಸು, ಹ್ರಸ್ವವಾಗಿಸು. Puzzled

ನಿಮಗೇನನ್ನಿಸಿತು ? ನಿಮ್ಮಭಿಪ್ರಾಯವನ್ನು ಸಾಧ್ಯವಾದರೆ ಹಂಚಿಕೊಳ್ಳಿರಿ. ನಿಮಗೆ ತಿಳಿದಿರುವಂತೆ ಇನ್ಯಾವುದಾದರೂ ಸರಳ ಕನ್ನಡ ಪದವಿದೆಯೇ ?

ಒಂದು ಮಾತು ಗಮನದಲ್ಲಿಡಬೇಕಾದದ್ದು, ಈ ಪರ್ವಿಸು ಮತ್ತು ಪರ್ವಳಿಸು ಪದಗಳು ಮೊದಲ ಬಾರಿಗೆ ಹೊಸಪದಗಳೆನಿಸಬಹುದು. ಆದರೆ, ಒಮ್ಮೆ ತಿಳಿದ ನಂತರ ಬಳಸುವವರಿಗೆ ತಾನಾಗಿಯೇ ಅರಿವಿಗೆ ಬರುತ್ತದೆ.

ಈ ಪರ್ವು ಪದದ ವಿವಿಧ ರೂಪಗಳು ಕನ್ನಡ, ಕೊಡವ, ತುಳು ಮತ್ತು ತೆಲುಗು ಭಾಷೆಗಳಲ್ಲೂ ಇವೆಯಂತೆ. ದ್ರಾವಿಡ ಪದಕೋಶದಲ್ಲಿ ಇದರ ಪೂರ್ಣ ವಿವರಣೆಯಿದೆ. ಹಾಗಾಗಿ ಇದನ್ನು common word ಅಂತ ಸ್ವೀಕರಿಸಬಹುದೇ?

‹ ಕನ್ನಡದಲ್ಲಿ ಸೈನ್ಸ್ ಫಿಕ್ಷನ್ ray ಕಿರಣ ಆದ್ರೆ radiation ವಿಕಿರಣ ಅಂತೆ !? ›
  • ವಿಜ್ಞಾನ ಸಾಹಿತ್ಯ
Ornamental seperator
  • Login or register to post comments
  • 870 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 21, 2007 - 3:09pm — Shyam Kishore

ಅನಿಸಿಕೆ: Minimize and Maximize

Shyam Kishore's picture

ಸುನಿಲ್,

ಹೊಸ ಪದಗಳನ್ನು (ಅಂದರೆ ಈಗ ನಿತ್ಯ ಬಳಕೆಯಲ್ಲಿಲ್ಲದ ಪದಗಳು ಅಂತ; ವಾಸ್ತವವಾಗಿ ಈ ಪದಗಳು ಪುರಾತನವೇ!) ಬರಮಾಡಿಕೊಳ್ಳುವ ದೃಷ್ಟಿಯಿಂದ "ಪರ್ವಿಸು, ಪರ್ವಳಿಸು"ಗಳನ್ನು ಬಳಸಿ ನೋಡಬಹುದು; ಎಲ್ಲರೂ ಹೇಗೆ ಸ್ವೀಕರಿಸುತ್ತಾರೆ ಅಂತ. "ಹಾಡ್ತಾ ಹಾಡ್ತಾ ರಾಗ" ಅನ್ನುವಂತೆ, ಬಳಸುತ್ತಾ ಬಳಸುತ್ತಾ ಎಲ್ಲರೂ ಮೆಚ್ಚಿ, ಬಳಕೆಗೆ ತಂದರೆ, ಒಳ್ಳೆಯದೇ ಆಯಿತು. ನನಗೆ, ವೈಯಕ್ತಿಕವಾಗಿ, ಈ ಪದಗಳು ಚಿಕ್ಕದಾಗಿ-ಚೊಕ್ಕವಾಗಿದ್ದು, ಇಷ್ಟವಾದವು.

ಆದರೆ "ಹಿಗ್ಗಿಸು/ಕುಗ್ಗಿಸು"ಗಾದರೆ ನಿಘಂಟಿನ ಸಹಾಯವಿಲ್ಲದೇ ಯಾರು ಬೇಕಾದರೂ ಅರ್ಥ ಮಾಡಿಕೊಳ್ಳಬಹುದು ಅಂತ ನನ್ನ ಅನಿಸಿಕೆ. ಯಾಕೆಂದರೆ ಕನ್ನಡೀಕರಣಗೊಂಡ ಪದಗಳ ಮೊದಲ ಸ್ಪರ್ಧೆ ಈಗಾಗಲೇ ಇದ್ದ Maximize/Minimize ಜತೆ ಅನ್ನುವುದನ್ನು ನಾವು ಮರೆಯಬಾರದು ಅಲ್ಲವೇ! ಹೊಸ ಪದಗಳನ್ನು ಸ್ವಾಗತಿಸುವ ಮನೋಭಾವದಲ್ಲಿ, ತುಸು ಶ್ರಮ ವಹಿಸಿ, ನಿಘಂಟು ನೋಡಿ, ಅರ್ಥ ತಿಳಿದಲ್ಲಿ ಪರವಾಗಿಲ್ಲ. ಅದು ಬಿಟ್ಟು, "ಅಯ್ಯೋ, ಇದ್ಯಾವ ಪದಾಂತ ಹಾಕಿದ್ದಾರೆ, ಹೊಗೋ ಮಾರಾಯ, ಇದರ ಸಹವಾಸವೇ ಬೇಡ" ಅಂತ ಮೂಗು ಮುರಿದರೆ, ಇಷ್ಟೆಲ್ಲ ಶ್ರಮ ಪಟ್ಟದ್ದೂ ವ್ಯರ್ಥ ಅಲ್ಲವೇ? 

ಅದೂ ಅಲ್ಲದೇ Unzip ಅನ್ನುವುದು ನಿಜಕ್ಕೂ Zipನ ವಿರುದ್ಧ ಅಲ್ಲ ಅಲ್ಲವೇ? ನೀವೇ ಯೋಚಿಸಿ; zip ಮಾಡುವುದು ಗಾತ್ರದಲ್ಲಿ ಕಡತವನ್ನು ಕುಗ್ಗಿಸುತ್ತದೆ. ಆದರೆ unzip ಅದನ್ನು ಗಾತ್ರದಲ್ಲಿ ಹಿಗ್ಗಿಸುವುದಿಲ್ಲ; ಮೊದಲಿದ್ದ ಗಾತ್ರಕ್ಕೆ ತರುತ್ತದೆ. ಹಾಗಾಗಿ Zip/Unzipಗೆ ಬೇರೆ ಪದಗಳನ್ನು ಹುಡುಕಬಹುದೇನೋ? ಏನಂತೀರಾ?

ಈ ರೀತಿಯ ಅನುವಾದ ಮಾಡುವಾಗ ನಾವು ಪದಶಃ ಅನುವಾದಕ್ಕಿಂತ, ಕೆಲವೊಮ್ಮೆ ಭಾವಾನುವಾದ ಮಾಡುವುದೇ ಸೂಕ್ತವೇನೋ ಅಂತ ನನ್ನ ಭಾವನೆ. ಇದೊಂದು ರೀತಿಯ paradigm shift ಅನ್ನುವ ಹಾಗೆ. ಪದಶಃ ಅನುವಾದದಿಂದ ನಮ್ಮನ್ನು ನಾವು ಬಿಡಿಸಿಕೊಂಡು ಈ ಕೆಲಸ ಮಾಡಬೇಕಾದೀತು. ನಾನು translate.sampada.net ನಲ್ಲಿ ಮೋಝಿಲ್ಲಾವನ್ನು ಅನುವಾದ ಮಾಡುವಾಗ, ನಿನ್ನೆ, ಕೆಲವೊಂದಕ್ಕೆ ಈ ರೀತಿ ಅನುವಾದ ಮಾಡಲು ಪ್ರಯತ್ನಿಸಿದೆ.

ನಿಮಗೆ ಏನನ್ನಿಸಿತು ಅಂತ ತಿಳಿಸಿ.

- ಶ್ಯಾಮ್ ಕಿಶೋರ್

  • Login or register to post comments
  • link
  • Email this ಪ್ರತಿಕ್ರಿಯೆ
January 21, 2007 - 10:06pm — Sunil Jayaprakash

ಮೆಚ್ಚುಗೆ : Minimize and Maximize

Sunil Jayaprakash's picture

ಶ್ಯಾಮ್ ಕಿಶೋರ್,

ನಿಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಕೆ ತುಂಬಾ ಸವಿಯೊದಗು Smiling. ನಿಮ್ಮ ಮಾತುಗಳಿಗೆ ನನ್ನ ದನಿಯನ್ನು ಸೇರಿಸುತ್ತಿರುವೆ. ಇವುಗಳನ್ನು ಕುರಿತು ಬಿಡುವಾದಾಗ ಚರ್ಚಿಸಿ ನಮ್ಮ ದನಿಯೆಡೆಗೆ ಸಾಗುವ ಪ್ರಯತ್ನವನ್ನು ಮಾಡೋಣ.

Shyam Kishore wrote:
ಆದರೆ "ಹಿಗ್ಗಿಸು/ಕುಗ್ಗಿಸು"ಗಾದರೆ ನಿಘಂಟಿನ ಸಹಾಯವಿಲ್ಲದೇ ಯಾರು ಬೇಕಾದರೂ ಅರ್ಥ ಮಾಡಿಕೊಳ್ಳಬಹುದು ಅಂತ ನನ್ನ ಅನಿಸಿಕೆ.

ಆಕ್ಚುಯಲಿ ಕುಗ್ಗಿಸು, ಹಿಗ್ಗಿಸುವನ್ನೇ Minimize Maximize ಅರ್ಥದಲ್ಲಿ ಅನೇಕ ಕಡೆ ಬಳಸಿರುವೆ. ಆದರೆ ಕುಗ್ಗಿಸು, ಹಿಗ್ಗಿಸು ಎಂಬುದನ್ನು zipಗೆ ಇಡಲು ಸಾಧ್ಯವೇ ಎಂಬುದಾಗಿಯೇ ನಾನು ಬಹಳವಾಗಿ ಯೋಚಿಸುತ್ತಿರುವೆ. ನಿಮ್ಮ ಸಲಹೆ ಸೂಕ್ತವೆನಿಸಿತು. ಸರಿ, zip ಮತ್ತು unzipಗಳಿಗೆ ಬೇರೆಯೇನನ್ನಾದರು ಮಾಡೋಣ ಬಿಡಿ Laughing out loud

Shyam Kishore wrote:
ಈ ರೀತಿಯ ಅನುವಾದ ಮಾಡುವಾಗ ನಾವು ಪದಶಃ ಅನುವಾದಕ್ಕಿಂತ, ಕೆಲವೊಮ್ಮೆ ಭಾವಾನುವಾದ ಮಾಡುವುದೇ ಸೂಕ್ತವೇನೋ ಅಂತ ನನ್ನ ಭಾವನೆ.

ಇದನ್ನು ನಾನೂ ಒಪ್ಪುತ್ತೇನೆ. ಆದರೂ ಕೆಲವೊಮ್ಮೆ ಮರೆತುಹೋಗಿರುವುದನ್ನು ನೆನಪಿಸಿಕೊಂಡು ಅದಕ್ಕೆ ಹೊಸ ಅರ್ಥ ಕೊಡಲೇ ಬೇಕಾಗುತ್ತದೆ. ನನ್ನ ಪ್ರಯತ್ನ ಇಷ್ಟೇ, ಗ್ರಾಮ್ಯವಲ್ಲದ ಕನ್ನಡ ಪದಗಳೂ ಇದೆ ಎಂಬುದನ್ನು ಎತ್ತಿಹಿಡಿಯುವುದು. ಸೃಜನಶೀಲ ಸಾಹಿತ್ಯಕ್ಕಷ್ಟೇ ಕನ್ನಡ ಸೀಮಿತ ಎಂಬ ಭಾವನೆ ನಮ್ಮಿಂದ ದೂರವಾಗಬೇಕು. ಅದರಲ್ಲೂ ಬಳಕೆಯಲ್ಲಿಲ್ಲದ ಸಂಸ್ಕೃತದ ಪದಗಳನ್ನು ತಂತ್ರಜ್ಞಾನದ ಹೆಸರಿನಲ್ಲಿ ಕನ್ನಡಕ್ಕೆ ಬಲವಂತವಾಗಿ ತುರುಕುವ ನಮ್ಮ ಮನೋಭಾವ ನಿಜಕ್ಕೂ ಒಳ್ಳೆಯದಲ್ಲ ಎನ್ನುವುದು ವೈಯಕ್ತಿಕ ಭಾವನೆ. ಒಂದು ವೇಳೆ ನಾವು ಕನ್ನಡಿಗರು ಹೊಸ ಪದವನ್ನೇ(Cache, Memory, Hard Disk, CD, DVD) ಕಲಿಯಬೇಕಾದ ಸಂದರ್ಭ ಬಂದಲ್ಲಿ ಇಂಗ್ಲೀಷನ್ನೇ ಕಲಿಯೋಣ(ತಂತ್ರಜ್ಞಾನ ಇನ್ನೂ ಹತ್ತಿರವೆನಿಸುತ್ತದೆ) ಅಥವಾ ಇರುವ ಕನ್ನಡ ಪದಕ್ಕೇ ಹೊಸ ಅರ್ಥವನ್ನು ನೀಡೋಣ. ನೀವೇನಂತೀರಾ ?

ಉದಾ - ಇಲ್ಲಿ ಯಾರನ್ನೂ ಟೀಕಿಸುವ ಉದ್ದೇಶ ನಿಜಕ್ಕೂ ನನಗೆ ಎಳ್ಳಷ್ಟೂ ಇಲ್ಲ. ಬದಲಾಗಿ ಚರ್ಚಿಸುವ ಉದ್ದೇಶದಿಂದ ಮಾತ್ರವೇ ಹಾಕುತ್ತಿರುವುದು. kn.wikipedia.orgನಲ್ಲಿ Random articleಗೆ ಮಾಡಿರುವ ಅನುವಾದ ಯಾದೃಚ್ಛಿಕ ಪುಟ. ಈ ಯಾದೃಚ್ಛಿಕ ಎಂಬ ಬಳಕೆಯನ್ನು ನಾವ್ಯಾರಾದರು ಎಂದಾದರೂ ಬಳಸಿದ್ದೇವೇಯೇ ನೀವೇ ಯೋಚಿಸಿ. ಇದು ಕನ್ನಡಿಗರಿಗೆ ಹೊಸ ಪದವಲ್ಲವೇ ? ಯಾವುದಾದರೊಂದು ಪುಟ ಅಂತಲೇ ಹೇಳಬಹುದಲ್ಲವೇ, ಇಲ್ಲವೇ ಅದು ಗ್ರಾಮ್ಯವೆನಿಸಿದರೆ ರಾಂಡಮ್ ಪುಟ ಅಂತಲೇ ಹೇಳಬಹುದು? ಪರ್ವಿಸು, ಪರ್ವಳಿಸು ಎಂಬ ಪ್ರಯೋಗಕ್ಕೆ ಸಂಬಂಧಿಸಿದ್ದು ಅಂತಲ್ಲ. ಆದರೆ ಸಂಸ್ಕೃತದ ವಿಷಯ ಬಂದಾಗ ಹೊಸತನ್ನು ಸುಲಭವಾಗಿ ಒಪ್ಪಿಕೊಳ್ಳುವ ನಾವು, ಕನ್ನಡದ ಅಥವಾ ಇಂಗ್ಲೀಷಿನ ವಿಷಯ ಬಂದಾಗ ಹಿಂಜರಿಯುವುದು ಏಕೆ Puzzled

  • Login or register to post comments
  • link
  • Email this ಪ್ರತಿಕ್ರಿಯೆ
January 22, 2007 - 4:39am — bhatpp

ಮಗುದೊಂದು ಅನಿಸಿಕೆ : Minimize and Maximize

bhatpp's picture

ಸಂದರ್ಭಕ್ಕೆ ತಕ್ಕಂತೆ ಹಿಗ್ಗಿಸು/ಕುಗ್ಗಿಸು ಎಂಬೆರಡು ಪದಗಳನ್ನೇ maximize/minimize ಹಾಗೂ unzip/zip ಗಳಿಗೆ ಬದಲಾಗಿ ಬಳಸಬಹುದಲ್ಲವೇ? ಅಥವಾ zip/unzip ಗಳ ಬದಲಾಗಿ, ವಿಶೇಷಣದ ಜೊತೆಗೆ, ಕಡತದ ಗಾತ್ರ ಹೆಚ್ಚಿಸು/ತಗ್ಗಿಸು ಎಂದೂ ಹೇಳಬಹುದಲ್ಲವೇ?

ಹೊಸ, ಅಥವಾ ರೂಪಾಂತರಗೊಂಡ ಪದಗಳನ್ನು (ಉದಾ: ಪರ್ವಳಿಸು, ಇತ್ಯಾದಿ), ಪದಗಳನ್ನು ತಿರಸ್ಕರಿಸುವ ಉದ್ದೇಶ ನನ್ನದಲ್ಲ, ಆದರೆ ಇಲ್ಲಿ ಈ ಯತ್ನದ ಅಗತ್ಯವಿಲ್ಲ ಎಂದು ನನ್ನ ಅನಿಸಿಕೆ. ಯಾಕೆಂದರೆ, ಹಿಗ್ಗಿಸು/ಕುಗ್ಗಿಸು, ಹೆಚ್ಚಿಸು/ತಗ್ಗಿಸು, ಅಲ್ಲದೇ ಕನ್ನಡ/ಸಂಸ್ಕೃತ ಪದಗಳಾದ ವೃದ್ಧಿಸು/ಕ್ಷೀಣಿಸು ಎಂಬವುಗಳನ್ನೂ ಇಲ್ಲಿ ಬಳಸಬಹುದಾಗಿದೆ. ಇನ್ನು ಹಿಂಜರಿಕೆಯ ವಿಚಾರ, ದೈನಂದಿನ ಬಳಕೆಯಲ್ಲಿ ಈ ಹಿಂಜರಿಕೆಯಿಲ್ಲವೆಂದೇ ನನ್ನ ತಿಳುವಳಿಕೆ. ಅಂದರೆ, ಕನ್ನಡ ಅಥವಾ ಹೆಚ್ಚಾಗಿ ಇಂಗ್ಲಿಷ್ ನಾಮಪದಗಳ ಜೊತೆಗೆ ಕನ್ನಡ ಕ್ರಿಯಾಪದಗಳನ್ನು ಜೋಡಿಸಿಬಿಡುವುದು ವಾಡಿಕೆ (ಉದಾ: file size ದೊಡ್ಡದು/ಸಣ್ಣದು ಮಾಡು, window maximize/minimize ಮಾಡು). ಬರೆಯುವ ವಿಷಯಕ್ಕೆ ಬಂದಾಗ ಮಾತ್ರ ಈ ಮಡಿವಂತಿಕೆ (ಬರೀ ನಮ್ಮಲಲ್ಲ, ಎಲ್ಲವರಲ್ಲೂ, ಅಂದರೆ ಎಲ್ಲಾ ಭಾಷೆಗಳ ವಿಚಾರದಲ್ಲೂ) Smiling.

  • Login or register to post comments
  • link
  • Email this ಪ್ರತಿಕ್ರಿಯೆ
January 22, 2007 - 11:29am — shreekant.mishrikoti

Re: Minimize and Maximize

shreekant.mishrikoti's picture

Minimize and Maximize ಗೆ ಅತೀಸಣ್ಣದಾಗಿಸು/ಅತೀದೊಡ್ಡದಾಗಿಸು ಹೇಗೆ?

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • Email this ಪ್ರತಿಕ್ರಿಯೆ
January 22, 2007 - 12:27pm — Shyam Kishore

ಉ: Minimize and Maximize

Shyam Kishore's picture

ಸುನಿಲ್,

ಭಟ್ ಅವರು ಹೇಳಿದಂತೆ ಕೆಲವೆಡೆ "ಸಾಂದರ್ಭಿಕವಾಗಿ" ಒಂದೇ ಪದವನ್ನು ಬಳಸಬಹುದು. ಆಯಾ ಸಂದರ್ಭಕ್ಕೆ ತಕ್ಕಂತೆ, ಬೇರೆ ಬೇರೆ ಅರ್ಥಗಳು ಬಳಸುವವರಿಗೆ ಹೊಳೆಯುತ್ತವೆ. ಈ ಅಂಶ ಚೆನ್ನಾಗಿದೆ ಅಲ್ಲವೇ?

ಹೌದು, ಕೆಲವೆಡೆ ಸರಳ ಆಂಗ್ಲ ಪದಗಳನ್ನೂ ಬರಮಾಡಿಕೊಳ್ಳಬಹುದು. ನೀವು ಕೊಟ್ಟ ಉದಾಹರಣೆಯಂತೆ, "ಯಾದೃಚ್ಛಿಕ" ಪದ ಕೂಡ, ಸಾಮಾನ್ಯವಾಗಿ ಈಗೀಗ ಬಳಕೆಯಲ್ಲಿಲ್ಲ. "ಯಾವುದಾದರೂ ಪುಟ" ಅನ್ನುವುದು ಗ್ರಾಮ್ಯ ಅನ್ನುವುದಕ್ಕಿಂತ, ಸ್ವಲ್ಪ ಗೊಂದಲವನ್ನು ಸೂಚಿಸುತ್ತದೆ. ಇಂತಹ ಕಡೆಗಳಲ್ಲಿ "ರಾಂಡಮ್ ಪುಟ" ಎನ್ನುವ ಸರಳ ಪದದ ಬಳಕೆಗೆ (ಅದು ಆಂಗ್ಲ ಪದವಾದರೂ ಕೂಡ) ನಾನೂ ಸಹ ದನಿಗೂಡಿಸುತ್ತೇನೆ.

"Minimize/Maximize"ಗಳಿಗೆ ಮಿಶ್ರಿಕೋಟಿಯವರು ಸೂಚಿಸಿದಂತೆ "ಅತಿ ದೊಡ್ಡದಾಗಿಸು/ಅತಿ ಸಣ್ಣದಾಗಿಸು" ಕೂಡ ಚೆನ್ನಾಗಿದೆ. ಸರಳವಾಗಿದೆ ಮತ್ತು ತಕ್ಕುದಾಗಿದೆ ಅಂತ ನನ್ನ ಅನಿಸಿಕೆ. ಆಗ ಬೇಕಿದ್ದಲ್ಲಿ "ಹಿಗ್ಗಿಸು/ಕುಗ್ಗಿಸು"ಗಳನ್ನು zip/unzipಗೆ ಬಳಸಬಹುದು. ಏನಂತೀರಾ?

- ಶ್ಯಾಮ್ ಕಿಶೋರ್

  • Login or register to post comments
  • link
  • Email this ಪ್ರತಿಕ್ರಿಯೆ
January 22, 2007 - 3:50pm — Sunil Jayaprakash

ನಮ್ಮ ದನಿ: Minimize and Maximize

Sunil Jayaprakash's picture

Shyam Kishore wrote:
ಈ ಅಂಶ ಚೆನ್ನಾಗಿದೆ ಅಲ್ಲವೇ?

ಸವಿಯೊದಗು, ಭಟ್ ಮತ್ತು ಶ್ಯಾಮ್ ಕಿಶೋರ್. ಖಂಡಿತವಾಗಿಯೂ, ಸರಿ ಆ ದಿಕ್ಕಿನಲ್ಲಿಯೇ ಮುಂದುವರಿಯೋಣ.

Shyam Kishore wrote:
ಇಂತಹ ಕಡೆಗಳಲ್ಲಿ "ರಾಂಡಮ್ ಪುಟ" ಎನ್ನುವ ಸರಳ ಪದದ ಬಳಕೆಗೆ (ಅದು ಆಂಗ್ಲ ಪದವಾದರೂ ಕೂಡ) ನಾನೂ ಸಹ ದನಿಗೂಡಿಸುತ್ತೇನೆ.

ನನ್ನ ದನಿಗೆ ನಿನ್ನ ದನಿಯಾ, ಸೇರಿದಂತೇ ನಮ್ಮ ದನಿಯಾ, ನಾ ಸ್ವರಮು ನೀ ಸ್ವರಮು ಸಂಗಮ...ಮಿಲೇ ಸುರ್ ಮೇರಾ ತುಮ್ಹಾರಾ ತೋ ಸುರ್ ಬನೇ ಹಮಾರಾ. ಧನ್ಯವಾದಗಳು. :ಚಪ್ಪಾಳೆ:

Shyam Kishore wrote:
"Minimize/Maximize"ಗಳಿಗೆ ಮಿಶ್ರಿಕೋಟಿಯವರು ಸೂಚಿಸಿದಂತೆ "ಅತಿ ದೊಡ್ಡದಾಗಿಸು/ಅತಿ ಸಣ್ಣದಾಗಿಸು" ಕೂಡ ಚೆನ್ನಾಗಿದೆ. ಸರಳವಾಗಿದೆ ಮತ್ತು ತಕ್ಕುದಾಗಿದೆ ಅಂತ ನನ್ನ ಅನಿಸಿಕೆ.

ಮಿಶ್ರಿಕೋಟಿಗಳೇ ನಿಮಗೂ ಧನ್ಯವಾದಗಳು. ಇಲ್ಲಿ Minimize ಎನ್ನುವುದಕ್ಕೆ ಪರ್ವಳಿಸು ಬದಲಾಗಿ ಸಣ್ಣದಾಗಿಸು ಅಂತಲೇ ಬಳಸಿದ್ದೇನೆ. ಸಣ್ಣದಾಗಿಸು ಎನ್ನುವಾಗ ಅತಿ ಎನ್ನುವುದು implicit ಆಗಿ ತಿಳಿಯುತ್ತದೆ ಅಂದುಕೊಂಡು ಅತಿ ಬಳಸಲಿಲ್ಲ.

ಗೆಳೆಯರೇ ಒಂದಂಶವಂತೂ ಸ್ಪಷ್ಟವಾಗುತ್ತಿದೆ. ನಾವು ಬಳಸಲಿ ಬಿಡಲಿ (ಯಾಕೆ ಬಳಸುತ್ತಿಲ್ಲ....ಬೇರೆ ವಿಚಾರ) ಕನ್ನಡದಲ್ಲಿ ಈ ರೀತಿಯಾದ ಗ್ರಾಮ್ಯವಲ್ಲದ ಎಷ್ಟೋ ಒಳ್ಳೆಯ ಪದಗಳಿವೆ. ಆದರೆ ನಾವುಗಳು ಶಾಲಾ ಕಾಲೇಜಿನಲ್ಲಿ ಇವುಗಳನ್ನು ಕುರಿತು ಓದುವುದಿಲ್ಲವಾದ್ದರಿಂದ ಮತ್ತು ಸಣ್ಣವರಿದ್ದಾಗ ಇವುಗಳ ಮಹತ್ವವನ್ನು ನಮಗೆ ತಿಳಿಸಿಕೊಡುವವರು ಯಾರೂ ಇಲ್ಲವಾದ್ದರಿಂದ ಇವುಗಳ ಪರಿಚಯ ನಮಗೆ ಅಷ್ಟಾಗಿ ಆಗಿರುವುದಿಲ್ಲ ಅಂತನಿಸುತ್ತದೆ.

ಅಂದಹಾಗೆ, ಇನ್ನೊಂದು ಮಜ್ಜಾ ಗೊತ್ತೇ, ಯಪ್ಪಾ.....ಹೇಗೆ ಹೇಳಬೇಕು ತಿಳಿಯುತ್ತಿಲ್ಲ Smiling ....ಅದನ್ನು ಹೇಳಿದರೆ...ನನ್ನನ್ನು ಹುರಿದುಮುಕ್ಕಿಬಿಡುತ್ತಾರೆ (ತಪ್ಪು ತಿಳೀಬೇಡೀಪ್ಪಾ..ಒಳ್ಳೆಯ ದೃಷ್ಟಿಯಲ್ಲಿ ಹಾಗೆ ಹೇಳಿದ್ದು) Laughing out loud ನನಗೇ ನಗು ತಡೆಯಲಾಗುತ್ತಿಲ್ಲ :ಹೊಹುನ: (ಹೊಟ್ಟೆ ಹುಣ್ಣಾಗುವಷ್ಟು ನಗು) Eye-wink ಸರಿ ಬಿಡುವಾದಾಗ ಸಂಜೆ ಬ್ಲಾಗುತ್ತೇನೆ, ಕಾತರದಿಂದ ನಿರೀಕ್ಷಿಸಿ....

  • Login or register to post comments
  • link
  • Email this ಪ್ರತಿಕ್ರಿಯೆ
January 31, 2007 - 11:47pm — Sunil Jayaprakash

ನಗು ತಂದ ವಿಚಾರ: ನಮ್ಮ ದನಿ.....

Sunil Jayaprakash's picture

Sunil Jayaprakash wrote:
ಅಂದಹಾಗೆ, ಇನ್ನೊಂದು ಮಜ್ಜಾ ಗೊತ್ತೇ, ಯಪ್ಪಾ.....ಹೇಗೆ ಹೇಳಬೇಕು ತಿಳಿಯುತ್ತಿಲ್ಲ ....ಅದನ್ನು ಹೇಳಿದರೆ...ನನ್ನನ್ನು ಹುರಿದುಮುಕ್ಕಿಬಿಡುತ್ತಾರೆ (ತಪ್ಪು ತಿಳೀಬೇಡೀಪ್ಪಾ..ಒಳ್ಳೆಯ ದೃಷ್ಟಿಯಲ್ಲಿ ಹಾಗೆ ಹೇಳಿದ್ದು)..ನನಗೇ ನಗು ತಡೆಯಲಾಗುತ್ತಿಲ್ಲ :ಹೊಹುನ: (ಹೊಟ್ಟೆ ಹುಣ್ಣಾಗುವಷ್ಟು ನಗು) ಸರಿ ಬಿಡುವಾದಾಗ ಸಂಜೆ ಬ್ಲಾಗುತ್ತೇನೆ, ಕಾತರದಿಂದ ನಿರೀಕ್ಷಿಸಿ....

ಗೆಳೆಯರೇ, ಆ ನಗು ತಂದ ವಿಚಾರವನ್ನು ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ ಎಂಬ ಎಳೆಯಲ್ಲಿ ಬ್ಲಾಗಿದ್ದೇನೆ, ಬಿಡುವಿದ್ದಾಗ ಓದಿ. ನಿಮಗೆ ಸಂತೋಷವಾದರೆ, ನನಗೂ ಸಂತೋಷವೇ.

  • Login or register to post comments
  • link
  • Email this ಪ್ರತಿಕ್ರಿಯೆ
January 31, 2007 - 3:04pm — vardhana

Re: ಅನಿಸಿಕೆ: Minimize and Maximize

vardhana's picture

ಅದೂ ಅಲ್ಲದೇ Unzip ಅನ್ನುವುದು ನಿಜಕ್ಕೂ Zipನ ವಿರುದ್ಧ ಅಲ್ಲ ಅಲ್ಲವೇ? ನೀವೇ ಯೋಚಿಸಿ; zip ಮಾಡುವುದು ಗಾತ್ರದಲ್ಲಿ ಕಡತವನ್ನು ಕುಗ್ಗಿಸುತ್ತದೆ. ಆದರೆ unzip ಅದನ್ನು ಗಾತ್ರದಲ್ಲಿ ಹಿಗ್ಗಿಸುವುದಿಲ್ಲ; ಮೊದಲಿದ್ದ ಗಾತ್ರಕ್ಕೆ ತರುತ್ತದೆ. ಹಾಗಾಗಿ Zip/Unzipಗೆ ಬೇರೆ ಪದಗಳನ್ನು ಹುಡುಕಬಹುದೇನೋ? ಏನಂತೀರಾ?

 

zip ಗೆ ಕುಗ್ಗಿಸು unzip ಗೆ  ಕುಗ್ಗಳಿಸು (ಕುಗ್ಗು + ಅಳಿಸು) ಹೆಗಿದೆ

ಹರ್ಷ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದಿಂದ ಸಕ್ಕದಕ್ಕೆ ಒರೆಗಳು
  • Subdomains on Sampada
  • translate.sampada.net
  • firefox tab, keyboard tabಗಳಿಗೆ ಕನ್ನಡ ಪದಗಳು
  • ಸರ್ವರ್ ಸ್ಥಳಾಂತರ ಪೂರ್ಣ...
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ದೊಡ್ಡ ಕಂಪನಿಯೊಂದಕ್ಕೆ ಕೆಲಸ ಮಾಡುವುದೆಂದರೆ ರೈಲು ಪ್ರಯಾಣಮಾಡಿದಂತೆ. ನೀವು ಅರವತ್ತು ಮೈಲು ವೇಗದಲ್ಲಿದ್ದರೂ ಅಥವಾ ರೈಲು ಅರವತ್ತು ಮೈಲು ವೇಗದಲ್ಲಿದ್ದರೂ, ನೀವು ಮಾತ್ರ ಕುಳಿತಿರಲೇ ಬೇಕು.

— ಜೆ. ಪಾಲ್ ಗೆಟ್ಟಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator