ಈಗಿನಂತೆ 3 ಸದಸ್ಯರು ಮತ್ತು 59 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಏಪ್ರಿಲ್ ೨೬, ೨೦೦೫, ರ ದುರ್ದಿನ, ಮುಂಬೈನಲ್ಲಿ ಮತ್ತೆ ಮರುಕಳಿಸುವುದು ಬೇಡ !
venkatesh's picture
Venkatesh/ವೆಂಕಟೇಶ್/ಹೊರಂಲವೆಂ
26
May
2006
ಪುಟ
ಅಮೆರಿಕ, ಹಾಗೂ ವಶ್ವದ ಪ್ರಜೆಗಳ ದಿನಚರಿಯಲ್ಲಿ ೯/೧೧ ಹೇಗೆ ಭಯಾನಿಕ ದಿನವೋ, ಹಾಗೆಯೆ ಮುಂಬೈ ನಿವಾಸಿಗಳಿಗೆ ಏಪ್ರಿ ಲ್ ೨೬ ,೨೦೦೫, ಒಂದು ಅಂತಹ 'ದುರ್ದಿನ 'ವೆಂದರೆ...
ಪ್ರತಿಕ್ರಿಯೆಗಳು: 6
ಹಿಟ್ಸ್ : 1,639
ಇಂದಿಗೂ ಪ್ರಸ್ತುತವಾಗಿರುವ ಬಸವಣ್ಣನವರ ವಚನಗಳು
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
16
May
2010
ಪುಟ

  (ಇಂದು ಬಸವ ಜಯಂತಿ. ತನ್ನಿಮಿತ್ತ ಈ ಲೇಖನ)  

  ಇಂದಿಗೆ ಒಂಬತ್ತು ಶತಮಾನಗಳ ಹಿಂದೆ ಬುವಿಯ ಭಾಗ್ಯವಾಗಿ ಬಂದವರು ಬಸವಣ್ಣನವರು. ಅವರು ಅಂದು ಸಾರಿದ...

ಪ್ರತಿಕ್ರಿಯೆಗಳು: 7
ಹಿಟ್ಸ್ : 1,450
ನೆನಪಿನ ಚಿತ್ರಕಲಾ ಶಾಲೆ: ಭಾಗ ೭ ನಿಗೂಢ ಬಿ.ಬಿ.ಎಂ ಕ್ಷಣ
anilkumar's picture
ಎಚ್.ಎ. ಅನಿಲ್ ಕುಮಾರ್
07
Aug
2011
ಲೇಖನ

 (೧೮)
 
ರಾತ್ರಿ ಏಳೂವರೆಯ ಸಮಯ. ಪ್ರಶ್ನಾಮೂರ್ತಿಯ ಬಗ್ಗೆ ಚಿಂತಿಸುತ್ತ, ’ನೇತಾಡುತ್ತಿರುವ’ ಪ್ರಶ್ನಾಮೂರ್ತಿಯನ್ನು ಕುರಿತು ’ತೂಗಾಡುತ್ತಿದ’ ಪ್ರಶ್ನೆಗೆ...

ಪ್ರತಿಕ್ರಿಯೆಗಳು: 0
ಹಿಟ್ಸ್ : 208
ಪರೋಪಕಾರ
hamsanandi's picture
ಹಂಸಾನಂದಿ
09
Jul
2010
ಬ್ಲಾಗ್ ಬರಹ

ಅರಳಿಸುವ ತಾವರೆಗಳ ಆ ನೇಸರ
ಬಿರಿಯಿಸುವ ನೈದಿಲೆಗಳನು ಚಂದಿರ
ಕೋರದೇ ಮಳೆಸುರಿಸೀತು ಮುಗಿಲು
ಹೆರವರೊಳಿತ ತಾವೇ ನಡೆಸುವರಗ್ಗಳರು


...

ಪ್ರತಿಕ್ರಿಯೆಗಳು: 8
ಹಿಟ್ಸ್ : 1,064
ಆಧ್ಯಾತ್ಮ ಸಾಧಕ ಶ್ರೀ ಮುಕುಂದೂರು ಸ್ವಾಮಿಗಳು
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
21
Sep
2011
ಲೇಖನ

(ಇದು ಪುಸ್ತಕ ಪರಿಚಯದ ರೂಪದಲ್ಲಿರುವ ಲೇಖನ.

ಮೂಲ ಪುಸ್ತಕದ ಹೆಸರು : ಯೇಗ್ದಾಗೆಲ್ಲಾ ಐತೆ. ಲೇಖಕರು : ಶ್ರೀ...

ಪ್ರತಿಕ್ರಿಯೆಗಳು: 15
ಹಿಟ್ಸ್ : 231
ಮತ್ತೆ ಚಿಗುರಿದೆ 'ಸಂಪದ'
hpn's picture
ಹರಿ ಪ್ರಸಾದ್ ನಾಡಿಗ್
01
Nov
2009
ಪುಟ

ಎರಡು ತಿಂಗಳ ಹಿಂದೆ ಆದ ಅವಗಢದಿಂದಾಗಿ ಸಂಪದ ಕಾರ್ಯನಿರ್ವಹಿಸದಂತಾಗಿತ್ತು. ಮುಂಚೆಯೇ ಪ್ರತಿ ದಿನ ಹೆಚ್ಚುತ್ತಿದ್ದ ಟ್ರಾಫಿಕ್ ನಿರೀಕ್ಷೆಗೆ ಮೀರಿದ ತಾಂತ್ರಿಕ ತೊಂದರೆಗಳನ್ನು...

ಪ್ರತಿಕ್ರಿಯೆಗಳು: 76
ಹಿಟ್ಸ್ : 3,075
ಮನೆ, ಕಂಪೌಂಡ್ ನಮಗಷ್ಟೇ ಸೀಮಿತ..ದೊರವಾಯನ ಹಕ್ಕಿಗಲ್ಲ!
harshavardhan v.sheelavant's picture
harshavardhan v. sheelavant
02
Nov
2010
ಪುಟ

...

ಪ್ರತಿಕ್ರಿಯೆಗಳು: 9
ಹಿಟ್ಸ್ : 886
ಸಖೀಗೀತ - ಒಂದು ಹೊಸ ಓದು
vasudeva.tn's picture
ಡಾ. ಟಿ.ಎನ್. ವಾಸುದೇವಮೂರ್ತಿ
10
Feb
2012
ಲೇಖನ

          ಶ್ರೇಷ್ಠ ಕಾವ್ಯಗಳ ಮರು ಓದು ನಿಂತಾಗ ಅವು ಗೊಡ್ಡು ಅಕಾಡೆಮಿಕ್ ವಿಶ್ಲೇಷಣೆ...

ಪ್ರತಿಕ್ರಿಯೆಗಳು: 7
ಹಿಟ್ಸ್ : 247
ಕಗ್ಗ - ಮತ್ತೊಂದು ಚಿಂತನೆ
krvinutha's picture
ವಿನುತಾ ಕುಂಸಿ ರಾಜಾರಾವ್
13
Jun
2011
ಬ್ಲಾಗ್ ಬರಹ
ಇತ್ತೀಚೆಗೆ...
ಪ್ರತಿಕ್ರಿಯೆಗಳು: 7
ಹಿಟ್ಸ್ : 407
ಅರಬ್ಬರ ನಾಡಿನಲ್ಲಿ...೩ - ಹಾರಿ ಹೋದ ಪ್ರಾಣ ಪಕ್ಷಿ.
manju787's picture
ಹೊಳೆ ನರಸೀಪುರ ಮಂಜುನಾಥ
15
May
2010
ಪುಟ

ಅಬುಧಾಬಿಯಲ್ಲಿ ಕೆಲಸ ಆರಂಭಿಸಿದ ನಂತರ ಅಲ್ಲಿನ ವಾತಾವರಣವನ್ನು ಅರ್ಥೈಸಿಕೊಂಡು ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು.  ಥಟ್ಟಂತ ನನ್ನ ಗಮನಕ್ಕೆ ಬಂದ ಮುಖ್ಯ ಅಂಶವೆಂದರೆ...

ಪ್ರತಿಕ್ರಿಯೆಗಳು: 16
ಹಿಟ್ಸ್ : 1,034

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಬ್ಲಾಕ್‍ನಲ್ಲಿ ಟಿಕೇಟ್ ತುಗೋಳೋದ್ ಸರೀನಾ?

ಬ್ಲಾಕ್‍ನಲ್ಲಿ ಟಿಕೇಟ್ ತುಗೋಳೋದ್ ಸರೀನಾ?

ಗೆಳೆಯರೇ,

ನವರಂಗ್ ಸಿನಿಮಾ ಮನೆಗೆ ರಾತ್ರಿ ೧೦ ರ ಆಟಕ್ಕೆ ನಾನು ಮೊದಲ ಸಲ 'ಮುಂಗಾರು ಮಳೆ' ನೋಡೋಕೆ ಹೋದಾಗ, ಬಾಲ್ಕನಿ ಟಿಕೇಟ್, ಕಿಂಡೀಲೇ ಸಿಗುತ್ತಿತ್ತು. ಸಿನಿಮಾ ಚೆನ್ನಾಗಿದೆ ಅಂತ ಎರಡನೇ ಸಲ ಹೋದರೆ, ಇನ್ನೂ ಅರ್ಧ ಗಂಟೆ ಮೊದಲೇ sold out ಅಂತ ಮಾಡ್ಕೊಂಡು theator ನವರೇ ಮೂವತ್ತೈದು ರೂಪಾಯಿ ಟಿಕೇಟ್‍ನಾ ಅರವತ್ತು ರೂಪಾಯಿಗೆ ಬ್ಲಾಕ್‍ನಲ್ಲಿ ಮಾರುತ್ತಿದ್ದರು. ಅವನ್ನೇ ಎಷ್ಟೋ ಜನ ತುಗೋತಿದ್ದರು. ಆದರೆ ಇಂತದಕ್ಕೆ ಮಂದೀನೇ ಹೀಗೆ ಕುಮ್ಮಕ್ಕು ಕೊಡೋದು ಸರೀನಾ? ನನಗಂತೂ ಅದು ಸರಿ ಕಾಣದೇ ಕೆಳಗಡೆ ಇಪ್ಪತ್ತೈದು ರೂಪಾಯಿಯ ಟಿಕೇಟನ್ನು ಕಿಂಡಿ(counter)ಯಲ್ಲೇ ಪಡೆದು ನೋಡಿದೆವು.

ಇರೋರು ಕೊಟ್ಟು ನೋಡುತ್ತಾರೆ, ಇರದೇ ಇರೂರು ಏನ್ ಮಾಡಬೇಕು? ಆದರೆ ಸಿನಿಮಾ ನೋಡಲೇಬೇಕಾದ ಅವಸರದಲ್ಲಿ ನಾವೆಲ್ಲಾ ಇದನ್ನು ವಿಚಾರ ಮಾಡೋದೇ ಇಲ್ಲಾ. ನೀವೇನಂತೀರಿ ಇದು ಸರೀನಾ?

No votes yet
1489 ಹಿಟ್ಸ್

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
shivannakc's picture
22
Jan
2007
6:42

Re: ಬ್ಲಾಕ್‍ನಲ್ಲಿ ಟಿಕೇಟ್ ತುಗೋಳೋದ್ ಸರೀನಾ?

ಪ್ರೀತಿಯ ಸಂಗನಗೌಡರವರೇ,

ಅದೇ ಅನುಭವ ನನಗೂ ಆಯಿತು! ಅದರೆ ನವರಂಗ ಚಿತ್ರಮಂದಿರದಲ್ಲಲ್ಲ... ಸಾಗರ್ ಚಿತ್ರಮಂದಿರದಲ್ಲಿ. ಕಳೆದ ಭಾನುವಾರ ನಾನು ಕೂಡ "ಮುಂಗಾರಿನ ಮಳೆ" ಸಿನಿಮಾ ನೋಡಲು ಹೋಗಿದ್ದೆ... ವಿಪರೀತ ಜನ... ಬಹುಶ: ಚಿತ್ರ ಚೆನ್ನಾಗಿರುವುದು ಒಂದು ಕಾರಣವಿರಬಹುದು. ಆದರೆ ನೀವು ಹೇಳಿರೋ ಹಾಗೆ, ಇಲ್ಲಿಯೂ ಚಿತ್ರಮಂದಿರದ ಕಾವಲುಗಾರರೇ(ಸಿಬ್ಬಂದಿ (?)) ಸಾಲನ್ನು ಸರಿಯಾಗಿ ನಿಲ್ಲುವಂತೆ ತಿಳಿಸುತ್ತಾ... ವ್ಯಾಪಾರ (?)ದಲ್ಲಿ ಕಾರ್ಯೋಮ್ನುಖರಾಗಿದ್ದರು. ಪಾಪ! ಅದೇನು ಶಿಸ್ತು! ಅದೇನು ಸಂಯಮ!. ಆದರೆ ಸಾಲಿನಲ್ಲಿ ನಿಂತಿದ್ದ ನಮಗೆ "ಚೀಟಿಗಳು ಮಾರಾಟವಾಗಿವೆ" (House Full) ಎಂದು ತಿಳಿಸಲಾಯಿತು. ಸಿನಿಮಾ ನೋಡಲೇಬೇಕು ಅಂತಾ ಹಟ ಹಿಡಿದವರ ಥರಾ ನಾವಿದ್ದುದ್ದನ್ನು ನಮಗಂಡ ಮಹಾಷಯರು (ಕಳ್ಳ ಚೀಟಿ ಮಾರಾಟ - Black Ticket Sellers) ಸಂತಸಗೊಂಡು ಕರಪತ್ರ ಹಂಚೋ ಥರಾ ...... ಮುಗಿಸಿದರು. ಏನೇ ಆದರೂ ಭಾನುವಾರ... ಮಧ್ಯಾಹ್ನವಾದರೆ ಮತ್ತೆ 3 ಗಂಟೆ ಹಾಳುಮಾಡುವುದು ಸರಿಯಲ್ಲವೆಂದೆನಿಸಿ ಅದೂ ಅಲ್ಲದೇ ಮತ್ತೆ ಮೆಜಿಸ್ಟಿಕ್ ನತ್ತ ಹೋಗಬೇಕಾಗುವುದರಿಂದ 25ರೂ. ಗಳಷ್ಟು ಹೆಚ್ಚಿಗೆ ಕೊಟ್ಟರೂ ಪರವಾಗಿಲ್ಲ ಎಂದೆನಿಸಿತು. ಬೇರೆ ದಾರಿಕಾಣದೇ ನಾನಉ ಸಹ ಇದಕ್ಕೆ ಒಪ್ಪಿಕೊಂಡು (Actual Charges 45 + 25 Special Gift = 70/-) ಸಿನಿಮಾ ನೋಡಿದೆ. ಬೆಳಿಗ್ಗೆ ಪ್ರದರ್ಶನ ಮುಗಿತ್ತು... ಚಿತ್ರಾ ಚೆನ್ನಾಗಿತ್ತ್ತು... ಮತ್ತೆ ಅದೇ ಜನಜಂಗುಳಿ... ಅದೇ ಕೆಲಸ... ಅದೇ ಮಹಾನುಭಾವರು... ಬೆಕ್ಕಿನ ಕೊರಳಿಗೆ ಘಂಟೆ ಕಟ್ಟವವರ್ಯಾರು?

ಶಿವಣ್ಣ.

 

Sunil Jayaprakash's picture
22
Jan
2007
8:13

ನನ್ನ ವರಸೆ: ಬ್ಲಾಕ್‍ನಲ್ಲಿ ಟಿಕೇಟ್ ತುಗೋಳೋದ್ ಸರೀನಾ?ನಾನು ಮುಂಗಾರು ಮಳೆಯಲ್ಲಿ ಮಿಂದದ್ದು, Renovate ಆಗಿರುವ ಈಶ್ವರಿ ಚಿತ್ರಮಂದಿರದಲ್ಲಿ, ೬:೩೦ಕ್ಕಿದ್ದ ಷೋಗೆ ನಾವು ೫:೩೦ಗೆ ಹೋದರೆ, ನಮಗೆ ಬಾಲ್ಕನಿ ಟಿಕೇಟು ಬ್ಲಾಕಿನಲ್ಲಿಯೂ ಸಿಕ್ಕಿರಲಿಲ್ಲ. ೨ನೇ ಕ್ಲಾಸು ೬೦ರೂ ಇತ್ತು. ಸರಿ ಇದರ ಸಹವಾಸವೇ ಬೇಡ ಅಂತ, ರಾತ್ರಿ ೯:೩೦ ಷೋಗೆ ಹೋದೆವು. ಆಶ್ಚರ್ಯವೆಂದರೆ ಈಶ್ವರೀ ಥಿಯೇಟರಿನ ಆವರಣದಲ್ಲಿಯೇ ಪೋಲೀಸ್ ಸ್ಟೇಷನ್ ಇದೆ :D ಸರಿ ಇನ್ನು ಮೂಲ ಪ್ರಶ್ನೆಗೆ ಬರುತ್ತಾ, ಬ್ಲಾಕಿನಲ್ಲಿ ಟಿಕೇಟು ತೊಗೊಳ್ಳೋದು ಸರಿಯೇ ತಪ್ಪೇ ಎನ್ನುವುದಕ್ಕೆ ಒಂದೇ ಮಾತಿನ ಉತ್ತರ ಬೇಕೆಂದರೆ, ನನ್ನ ಉತ್ತರ ಅದು ತಪ್ಪು, ಅದೊಂದು ಸಾಮಾಜಿಕ ಅಪರಾಧ. ಆದರೆ ಬೆತ್ತಲೆ ನಾಡಿನಲ್ಲಿ, ಬಟ್ಟೆ ಹಾಕಿದವನೇ ನಗಪಾಟಲಿಗೀಡಾಗುವನು ಎಂಬ ತತ್ವವನ್ನು ಅರಿತಿರುವ ನನ್ನ ಮನಸ್ಸು ಈ ಸೂತ್ರಗಳನ್ನು ನೆಚ್ಚಿಕೊಂಡು ಕೆಲಸ ಮಾಡುತ್ತದೆ. ೧. ಅಪ್ಪಿತಪ್ಪಿಯೂ ಹಿಂದಿ ಮತ್ತು ಇಂಗ್ಲೀಷ್ ಸಿನಿಮಾಗಳಿಗೆ ನಾನು ಬ್ಲಾಕಿನಲ್ಲಿ ದುಡ್ಡು ಸುರಿಯುವುದಿಲ್ಲ. ಕೆಲವೊಮ್ಮೆ ಬರುವ ಒಳ್ಳೆಯ ಹಿಂದಿ ಮತ್ತು ಇಂಗ್ಲೀಷ್ ಸಿಸಿನಿಮಾಗಳನ್ನು ನೋಡಲೇಬೇಕೆನಿಸಿದಾಗ, ಟಿಕೇಟು ಸಿಕ್ಕಿದರೆ ಸಂತೋಷ, ಇಲ್ಲವಾದರೆ, ೨೦-೩೦ರೂಗಳನ್ನು ನೀಡಿ ಡಿ.ವಿ.ಡಿ ಪ್ರಿಂಟ್ ತಂದು ನೋಡಬಹುದು. ೨. ಒಳ್ಳೆಯ ಚಿತ್ರಗಳು ಬಂದಾಗ, (ಒಳ್ಳೆಯ ಚಿತ್ರಗಳೆಂದರೆ ಬರೇ ಕಲಾತ್ಮಕ ಚಿತ್ರಗಳಲ್ಲ ಎಂದು ನಂಬಿದ್ದೇನೆ) ಕೆಲವೊಮ್ಮೆ ಓದಿ ಓದಿ ಬೇಸರವಾದಾಗ ಅಥವಾ ಗೆಳೆಯರೆಲ್ಲರೂ ಒಟ್ಟಿಗೆ ಸೇರಿದಾಗ ಅಥವಾ ಬಳಗದವರೆಲ್ಲರೂ ಒಟ್ಟಿಗೆ ಸೇರಿ ಕನ್ನಡ ಸಿನಿಮಾ ನೋಡಲು ಹೋದಾಗ, ಬ್ಲಾಕಾದರೂ ಪರವಾಗಿಲ್ಲ ಕೆಲವೊಮ್ಮೆ ನೋಡಿ ಬರುತ್ತೇನೆ(ವೆ). ನಾನು ಅಪರಾಧದಲ್ಲಿ ಭಾಗಿಯಾಗುತ್ತಿದ್ದೇನೆ ಎಂಬ ಅರಿವಿದ್ದರೂ, ಬೇಸರವಾದರೂ, ಒಂದು ಕಾರಣಕ್ಕೆ ಸಂತೋಷವಾಗುತ್ತದೆ. ಕನ್ನಡದಿಂದ (ಕನ್ನಡವೆಂದರೆ ಬರೇ ನುಡಿಯಲ್ಲ ಎಂದು ನಂಬಿದ್ದೇನೆ) ದುಡ್ಡು ಸಂಪಾದನೆಯಾಗುವುದಿಲ್ಲ ಎಂಬು ಮಾತು ಸಂಪದದಲ್ಲೇ ಬಂದಿತ್ತು. ಆ ಮಾತು ಎಷ್ಟು ಪೊಳ್ಳು, ನಿರಾಧಾರ, ನಿರರ್ಥಕ ಮತ್ತು ನಿರಾಶಾವಾದದ ಸಂಕೇತ ಎಂಬುದನ್ನು ತಿಳಿದು ಮನಸ್ಸಿಗೆ ತುಂಬಾ ಹಿತವೆನಿಸುತ್ತದೆ.
ವೈಭವ's picture
22
Jan
2007
8:55

Re: ನನ್ನ ವರಸೆ: ಬ್ಲಾಕ್‍ನಲ್ಲಿ ಟಿಕೇಟ್ ತುಗೋಳೋದ್ ಸರೀನಾ?

ನಾನು ಕೂಡ "ಮುಂಗಾರು ಮಳೆ" ಯಲ್ಲಿ ನೆನೆದಿದ್ದು "ಈಶ್ವರಿ" ಯಲ್ಲಿ...ನಾನು ಸುನಿಲ್ ರವರ ಎಲ್ಲ ಅಭಿಪ್ರಾಯಗಳನ್ನು ಒಪ್ಪುತ್ತೇನೆ.  "ಬ್ಲ್ಯಾಕ್" ನಲ್ಲಿ ಮಾರುವುದು (ಕೊಂಡುಕೊಳ್ಳುವುದು) ನಮಗೆ ಅಂಟಿರುವ necessary evil ಇದು( ಪ್ಲಾಸ್ಟಿಕ್ ನಂತೆ ). 

ಈಶ್ವರಿ ಯಲ್ಲಿ ಹೀಗೆ ನಡೆಯುತ್ತದೆ.

* ಇಲ್ಲಿ ಬ್ಲ್ಯಾಕ್ ಗೆ ಮಾರುವವರೇ ಕ್ಯೊ ನಲ್ಲಿ ನಿಂತಿರುತ್ತಾರೆ. ಇನ್ನು ಬೇರೆಯವರು ಟಿಕೆಟ್ ಪಡೆಯುವ ಅವಕಾಶವೆ ಇಲ್ಲ.. ಇನ್ನು "ಈಶ್ವರಿ" ಯಲ್ಲಿ ನಿಲ್ಲಲು ಬಹಳ ಸ್ಥಳವಿಲ್ಲ....ಅದನ್ನೆ ದುರುಪಯೋಗ ಮಾಡಿಕೊಂಡು ಅಲ್ಲಿ ತಮ್ಮ "ವ್ಯವಹಾರ" ಕುದುರಿಸುತ್ತಾರೆ.

*  ನಾನು ವಯಸ್ಸಾದವರೆನ್ನಲ್ಲಾ ಚಿತ್ರಕ್ಕೆ ಕರೆದುಕೊಂಡು ೨:೩೦ ಆಟಕ್ಕೆ ಹೊರಟಿದ್ದೆ. ನಾನು ಅಲ್ಲಿ ೧೨:೩೦ ಕ್ಕೆ ಹೋದೆ ... ೧:೩೦ ಕ್ಕೆ ಟಿಕೆಟ್ ಕೊಡುತ್ತೇವೆ ಎಂದರು... ತಿರುಗಿ ೧:೩೫ ಕ್ಕೆ ಹೋದರೆ ಬಾಲ್ಕನಿ ಟಿಕೆಟ್  ಕೌಂಟರ್ ಮುಚ್ಚಿತ್ತು.  ಆಷ್ಟೊತ್ತಿಗೆ ನಮ್ಮವರೆಲ್ಲ ಆಟೊದಲ್ಲಿ ಬಂದು ಇಳಿತ ಇದ್ದರು... ಇನ್ನೇನು ಮಾಡದು ಮಲ್ಟಿಪ್ಲೆಕ್ಸ್ ಗೆ ಹೋದರೆ ಅಷ್ಟೆ ಆಗುತ್ತೆ ( ಮತ್ತು ೨ ಕ್ಲಾಸ್ ಕೂಡ ಸಿಗುವ ಲಕ್ಷಣಗಳು ಕಾಣಲೆ ಇಲ್ಲ)  ಅಂತ ಅನ್ಕೊಂಡು ಬ್ಲಾಕ್ ನಲ್ಲಿ ಕೊಂಡುಕೊಳ್ಳಬೇಕಾಯಿತು.

ನಾನು ಬ್ಲಾಕ್ ನಲ್ಲಿ ಮೊದಲು ನೋಡಿದ ಸಿನಿಮಾ ಇದು... ಆದರೂ ಬೇಸರ ಇಲ್ಲ...ಒಂದು ಒಳ್ಳೆ ಕನ್ನಡ ಚಿತ್ರವನ್ನು ನೋಡಿದ ಅನುಭವ ಇವುಗಳೆಲ್ಲವನ್ನು ಮರೆ ಮಾಚಿತ್ತು.