Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವ್ಯಾಕರಣ

ಮೈಕ್ರೋಸಾಫ್ಟೀಕರಣ

January 22, 2007 - 5:13pm — ismail

Kannada Issues in Microsoft Vista

ಮೈಕ್ರೋಸಾಫ್ಟ್ ನ 'ವಿಸ್ತಾ' ಇನ್ನೇನು ಮಾರುಕಟ್ಟೆಗೆ ಬರಲಿದೆಯಂತೆ. ಎಕ್ಸ್ ಪಿಯಲ್ಲಿ ಇದ್ದ ಕನ್ನಡ ಅಕ್ಷರಗಳ ಸಮಸ್ಯೆ ಇಲ್ಲಿಯೂ ಮುಂದುವರಿದಿದೆ ಎಂಬುದು ವಿಸ್ತಾದ ರಿಲೀಸ್ ಕ್ಯಾಂಡಿಡೇಟ್ -2 ಪರೀಕ್ಷಿಸಿದವರಿಗೆಲ್ಲಾ ತಿಳಿಯುತ್ತದೆ. Rank ಈಗ ರ್ಯಾಂಕ್ ಆಗುವುದಿಲ್ಲ. ಆದರೆ ಸಾಫ್ಟ್ ವೇರ್ ಎಂದು ಬರೆದರೆ ಅದು ಸಾ ಫ್ ಟ್ ವೇ ರ್ ಆಗುತ್ತದೆ.

ಮೈಕ್ರೋಸಾಫ್ಟ್ ನಲ್ಲಿ ಇದೆಲ್ಲಾ ಸರಿಯಾಗಿರಲೇಬೇಕು ಎಂದು ವಾದಿಸುವುದರ ಬದಲಿಗೆ ಅದನ್ನು ಬಳಸುವುದನ್ನೇ ಬಿಟ್ಟು ಬಿಡಿ ಎಂಬ ವಾದವನ್ನು ಮಂಡಿಸಬಹುದು. ಇದು ತಾತ್ವಿಕವಾಗಿ ಸರಿಯೂ ಹೌದು. ನನಗೆ ಕಾಡುತ್ತಿರುವುದು ಈ ಸಮಸ್ಯೆಯಲ್ಲ. ಯಾವುದಾದರೂ ಒಂದು ಸಂಸ್ಥೆ ಸಾವಿರಾರು ವರ್ಷಗಳ ಇತಿಹಾಸವಿರುವ ಭಾಷೆಯೊಂದನ್ನು ಅದಕ್ಕೆ ತೋಚಿದಂತೆ ಬದಲಾಯಿಸಿಬಿಡುವುದನ್ನು ಒಪ್ಪಿಕೊಳ್ಳಬೇಕೇ?

Kannada Issues on Microsoft Vista

ಸಾ ಫ್ ಟ್ ವೇ ರ್ ಎಂಬಂಥ ಪ್ರಯೋಗವನ್ನು ಬಿಎಂಶ್ರೀ ಒಮ್ಮೆ ಪ್ರತಿಪಾದಿಸಿದ್ದರು. ಆದರೆ ಅದಕ್ಕೆ ಹೆಚ್ಚಿನವರ ಬೆಂಬಲ ದೊರೆಯಲಿಲ್ಲ. ಕೆಲವರಿದನ್ನು ವಿರೋಧಿಸಿದರು ಎಂದೂ ಓದಿದ್ದು ನೆನಪಾಗುತ್ತಿದೆ. ಈಗ ಮೈಕ್ರೋಸಾಫ್ಟ್ ಇದನ್ನು ಹೇರುತ್ತಿದೆ. ವಿರೋಧಿಸುವುದು ಬಿಡಿ. ಕನಿಷ್ಠ ಇದರ ಕುರಿತು ಚರ್ಚಿಸುತ್ತಿಲ್ಲ.

ಎಲ್ಲರಿಗೂ ತಿಳಿದಿರುವಂತೆ ಎಲ್ಲಾ ಸಾಫ್ಟ್ ವೇರ್ ಗಳ ಅತಿದೊಡ್ಡ ಗ್ರಾಹಕ ಸರಕಾರ. ಸರಕಾರ ತನ್ನ ಎಲ್ಲಾ ಕೆಲಸಕ್ಕೆ ಮೈಕ್ರೋಸಾಫ್ಟ್ ನ ತಂತ್ರಾಂಶಗಳನ್ನೇ ಬಳಸುತ್ತಿದೆ. (ಇತ್ತೀಚೆಗೆ ಚುನಾವಣಾ ಆಯೋಗ ಮುಕ್ತ ತಂತ್ರಾಂಶಗಳನ್ನು ಬಳಸುವ ಪ್ರಯತ್ನ ಆರಂಭಿಸಿದೆ) ಕರ್ನಾಟಕ ಸರಕಾರದ ಇ-ಗವರ್ನನ್ಸ್ ಕಾರ್ಯದರ್ಶಿಯವರಿಗಂತೂ ಮೈಕ್ರೋಸಾಫ್ಟ್ ಎಂದರೆ ಪಂಚಪ್ರಾಣ. ಆಡಳಿತದಲ್ಲಿ ಕನ್ನಡ ಎಂಬ ಪರಿಕಲ್ಪನೆ ಕಂಪ್ಯೂಟರ್ ಗಳ ಸಂದರ್ಭದಲ್ಲಿಯೂ ನಿಜವಾಗುತ್ತಿರುವ ಹೊತ್ತಿನಲ್ಲಿ ಕನ್ನಡ ಬರೆವಣಿಗೆಯೂ ಮೈಕ್ರೋಸಾಫ್ಟ್ ನ ತಂತ್ರಾಂಶಗಳ ಮೂಗಿನ ನೇರಕ್ಕೆ ಇರುತ್ತದೆ ಎಂದಾಗುತ್ತದೆಯಲ್ಲವೇ?

ಮೈಕ್ರೋಸಾಫ್ಟ್ ಎಕ್ಸ್ ಪಿಗಾಗಿ ಹೊರತಂದಿದ್ದ ಕನ್ನಡ ಹೊದಿಕೆ ಅಥವಾ ಲಾಂಗ್ವೇಜ್ ಇಂಟರ್ ಫೇಸ್ ಪ್ಯಾಕ್ ನಲ್ಲಿ ಕನ್ನಡವನ್ನು ವ್ಯವಸ್ಥಿತವಾಗಿ ಕೊಂದಿರುವುದರ ಬಗ್ಗೆ ಉದಾಹರಣೆ ಸಹಿತ ಒಂದು ವರ್ಷದ ಹಿಂದೆಯೇ ಪ್ರಶಾಂತ್ ಪಂಡಿತ್ 'ಸಂಪದ'ದಲ್ಲಿಯೇ ಬರೆದಿದ್ದರು. ಆ ಸ್ಥಿತಿ ಈಗಲೂ ಬದಲಾಗಿಲ್ಲ. ವಿಸ್ತಾಕ್ಕೂ ಇದೇ ಹೊದಿಕೆಯನ್ನು ಬಳಸಲಾಗುತ್ತದೆ ಎಂಬ ಮಾತೂ ಕೇಳಿಬರುತ್ತಿದೆ.

ಮೈಕ್ರೋಸಾಫ್ಟ್ ತಪ್ಪುಗಳನ್ನು ತಿದ್ದಿಕೊಳ್ಳಲು ಸಿದ್ಧವಿಲ್ಲ. ಈ ತಪ್ಪನ್ನು ತಿದ್ದಿಸಬೇಕು ಎಂಬ ಅರಿವು ಕರ್ನಾಟಕ ಸರಕಾರಕ್ಕೂ ಇರುವಂತೆ ಕಾಣಿಸುತ್ತಿಲ್ಲ. ಸರಕಾರಕ್ಕೂ, ಮೈಕ್ರೋಸಾಫ್ಟ್ ಗೂ ಕನ್ನಡವನ್ನು ಕೊಲ್ಲಬೇಡಿ ಎಂದು ಹೇಳುವವರು ಯಾರು? ಹೇಗೆ?

-ಇಸ್ಮಾಯಿಲ್

‹ ಕನ್ನಡದಲ್ಲಿನ ಒತ್ತಕ್ಷರಗಳು - ಭಾಗ ಎರಡು (೨) ಪಡುವಣ ಪಂಡಿತರನ್ನು ಏಕೆ ನಂಬಬಾರದು? ›
  • ವ್ಯಾಕರಣ
Ornamental seperator
  • Login or register to post comments
  • 2025 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 23, 2007 - 2:19am — Shyam Kishore

ಅನಿಸಿಕೆ: ಮೈಕ್ರೋಸಾಫ್ಟೀಕರಣ - ಹೀಗೆ ಮಾಡಬಹುದೇ?

Shyam Kishore's picture

ಇಸ್ಮಾಯಿಲ್ ಅವರೇ,

ವಿಷಯ ನಿಜಕ್ಕೂ ಪ್ರತಿಯೊಬ್ಬರೂ ಗಂಭೀರವಾಗಿ ಹತ್ತು ನಿಮಿಷವಾದರೂ ಯೋಚಿಸಲೇಬೇಕಾದ್ದು. ಯಾವುದೋ ಸಂಸ್ಥೆ ತನ್ನ ಅಗತ್ಯಕ್ಕೆ ಭಾಷೆಯ ವಿಧಿ-ವಿಧಾನಗಳನ್ನು ತಿದ್ದುವುದು ಅಪರಾಧವೇ ಸರಿ.

ಸಾಫ್ಟ್‌ವೇರ್ "ಸಾ ಫ್ ಟ್ ವೇ ರ್" ಆದಲ್ಲಿ ಮೈಕ್ರೋಸಾಫ್ಟ್ "ಮ ಯ್ ಕ್ ರೋ ಸಾ ಫ್ ಟ್" ಆಗುತ್ತಾ ಅಂತ ಸಂಬಂಧಿಸಿದವರನ್ನು ಕೇಳಬೇಕು; ಏನು ಉತ್ತರ ಸಿಗುತ್ತೆ ಗೊತ್ತಗುತ್ತದೆ.  

ಇಸ್ಮಾಯಿಲ್ wrote:
ಮೈಕ್ರೋಸಾಫ್ಟ್ ತಪ್ಪುಗಳನ್ನು ತಿದ್ದಿಕೊಳ್ಳಲು ಸಿದ್ಧವಿಲ್ಲ. ಈ ತಪ್ಪನ್ನು ತಿದ್ದಿಸಬೇಕು ಎಂಬ ಅರಿವು ಕರ್ನಾಟಕ ಸರಕಾರಕ್ಕೂ ಇರುವಂತೆ ಕಾಣಿಸುತ್ತಿಲ್ಲ. ಸರಕಾರಕ್ಕೂ, ಮೈಕ್ರೋಸಾಫ್ಟ್ ಗೂ ಕನ್ನಡವನ್ನು ಕೊಲ್ಲಬೇಡಿ ಎಂದು ಹೇಳುವವರು ಯಾರು?
ಮೈಕ್ರೋಸಾಫ್ಟ್ ಅಂತಲ್ಲ, ಯಾವ ಸಂಸ್ಥೆ ಕೂಡ ತಾನಾಗಿಯೇ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವುದಿಲ್ಲ; ಏಕೆಂದರೆ ಅವರ ದೃಷ್ಟಿಯಲ್ಲಿ ಅದು ತಪ್ಪೇ ಆಗಿರುವುದಿಲ್ಲ! ಅದನ್ನು ಮನವರಿಕೆ ಮಾಡಿಕೊಡಬೇಕಾದದ್ದು ನಮ್ಮ - ಅಂದರೆ ಪ್ರತಿಯೊಬ್ಬ ಕನ್ನಡಿಗನ - ಕರ್ತವ್ಯ.

ಈ ಕೆಲಸವನ್ನು ಮಾಧ್ಯಮಗಳ ಮೂಲಕ, ಅಥವಾ "ಜಾಥಾ"ದ ಮೂಲಕ, ಅಥವಾ "ಸಹಿ ಸಂಗ್ರಹಣೆ"ಯಂಥ ಸಾಂಕೇತಿಕ ವಿಧಾನಗಳ ಮೂಲಕ ಮಾಡಬಹುದು ಅಂತ ನನ್ನ ಅನಿಸಿಕೆ. ನೀವೇನಂತೀರಾ? ಆದರೆ ಒಟ್ಟಿನಲ್ಲಿ "bottom line" ಇರೋದು ನಮ್ಮ ಮೇಲೆ ಅಂತಲೇ ನನ್ನ ಅಭಿಪ್ರಾಯ. ಏನಾದರೂ ಒಂದನ್ನು ಕಾರ್ಯರೂಪಕ್ಕೆ ತಂದರೆ ಮಾತ್ರ, ಇಂತಹವುಗಳನ್ನು ತಡೆಗಟ್ಟಲು ಸಾಧ್ಯ. ಇಲ್ಲವಾದಲ್ಲಿ ನಮ್ಮ ನಡುವಣ ಈ ಚರ್ಚೆಗಳು "ಮೈಕ್ರೋಸಾಫ್ಟ್" ಅಂತಹ ಕಂಪೆನಿಯ ಮುಂಬಾಗಿಲನ್ನೂ ಸಹ ತಲುಪುವುದಿಲ್ಲ.

- ಶ್ಯಾಮ್ ಕಿಶೋರ್

  • Login or register to post comments
  • link
  • Email this ಪ್ರತಿಕ್ರಿಯೆ
January 23, 2007 - 10:42am — hpn

ಉ: ಅನಿಸಿಕೆ: ಮೈಕ್ರೋಸಾಫ್ಟೀಕರಣ - ಹೀಗೆ ಮಾಡಬಹುದೇ?

hpn's picture

ಸಹಿ ಸಂಗ್ರಹಣೆ, ಜಾಥಾ ಏನಾದರೂ ಕೆಲಸ ಮಾಡುತ್ತದೆ ಎನ್ನುವ ಕಾಲ ನನ್ನ ಅಭಿಪ್ರಾಯದಲ್ಲಿ ಹೊರಟುಹೋಗಿ ಯುಗಗಳಾಗಿವೆ. ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ಇದು ಕೆಲಸ ಮಾಡಬಹುದು.
ಈಗ ಕಂಪೆನಿಗಳು, ಸರಕಾರ ಅವುಗಳಿಂದಲೂ ತಪ್ಪಿಸಿಕೊಳ್ಳುವ ವಿಧಾನ ಕಂಡುಕೊಂಡಿದ್ದಾರೆ.

ಬಹುಶಃ ನಾವು ಮಾಡಬೇಕಿರುವ ಕೆಲಸ - ಮುಕ್ತ ತಂತ್ರಾಂಶಗಳನ್ನು ಬಲಪಡಿಸುವುದು: ಹೆಚ್ಚಿನ ಕನ್ನಡ ಸಪೋರ್ಟು, ಕನ್ನಡ ಕುರಿತ ಡೆವಲಪ್ಮೆಂಟ್ ಮೊದಲಾದವುಗಳಿಂದ.

ಬಾಟಮ್ ಲೈನ್ ಬಹುಶಃ ಯಾವುದಕ್ಕೆ ಹೇಗೆ ನೋಡಿದರೂ ಸಾಮಾನ್ಯರ ಮೇಲೆಯೇ ಬರುತ್ತದೆ. Eye-wink
ರಾಜಕಾರಣಿಗಳನ್ನು ದೂರುವ ಸಮಯದಲ್ಲಿ ವಿಧಾನಸೌಧದಲ್ಲಿ ಕೂರುವಂತೆ ಮಾಡಿದ್ದೂ ನಾವೇ ಎಂದು ಬರೋದಿಲ್ವೆ? ಹಾಗೆ. ಇದೇ ವಿಷಯವಾಗಿ ಶ್ಯಾಮ್ ಕಶ್ಯಪ್ ಒಂದು ಬಹಳ ಒಳ್ಳೆಯ ಲೇಖನ ಬರೆದಿದ್ದರು.

ಜವಾಬ್ದಾರಿ ಪ್ರತಿಯೊಬ್ಬರದ್ದು.

ಅದೇ ಜವಾಬ್ದಾರಿ ಹೊತ್ತು ಇಸ್ಮಾಯಿಲರು ಈ ಲೇಖನ ಬರೆದಿದ್ದಾರೆ - ನಾವುಗಳು ಈ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂದು ನನಗನ್ನಿಸುತ್ತದೆ Eye-wink
ಬಹುಶಃ. ಚರ್ಚೆ ಕಾರ್ಯರೂಪದೆಡೆಗೆ ಮೊದಲ ಹೆಜ್ಜೆ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
January 23, 2007 - 11:46am — Shyam Kishore

ಮರುದನಿ: ಉ: ಅನಿಸಿಕೆ: ಮೈಕ್ರೋಸಾಫ್ಟೀಕರಣ - ಹೀಗೆ ಮಾಡಬಹುದೇ?

Shyam Kishore's picture

HPN wrote:
ಬಾಟಮ್ ಲೈನ್ ಬಹುಶಃ ಯಾವುದಕ್ಕೆ ಹೇಗೆ ನೋಡಿದರೂ ಸಾಮಾನ್ಯರ ಮೇಲೆಯೇ ಬರುತ್ತದೆ. Eye-wink
ರಾಜಕಾರಣಿಗಳನ್ನು ದೂರುವ ಸಮಯದಲ್ಲಿ ವಿಧಾನಸೌಧದಲ್ಲಿ ಕೂರುವಂತೆ ಮಾಡಿದ್ದೂ ನಾವೇ ಎಂದು ಬರೋದಿಲ್ವೆ? ಹಾಗೆ.
ಇದು ಖಂಡಿತ ನಿಜ.ಇದಕ್ಕಿಂತ ದೊಡ್ಡ ಬಾಟಮ್ ಲೈನ್ ಇಲ್ಲ ಅಂತ ನನ್ನ ವೈಯಕ್ತಿಕ ನಂಬಿಕೆ. ಇರಲಿ ಬಿಡಿ,ಈಗ ಅದನ್ನು (ಅವರನ್ನು) ಬದಲಾಯಿಸುವುದರ ಬಗ್ಗೆ ಅಲ್ಲವಲ್ಲ್ ಈ ಚರ್ಚೆ.

ಜಾಥಾ, ಸಹಿ ಸಂಗ್ರಹಣೆ ಎಲ್ಲವೂ ಈ ಕಾಲದಲ್ಲಿಯೂ ನಡೆಯುತ್ತವೆ. ಆದರೆ ಬಲವಾಗಿ, ಕಾಣುವ ರೀತಿ, ಮಾಡಬೇಕು ಅಷ್ಟೆ. ಸುಮ್ಮನೆ ೧೦೦ ಜನ ಸೇರಿ, ಅದನ್ನೇ ಜಾಥ ಎಂದರೆ ಅದು ದೇವರಾಣೆಗೂ flop ಆಗುತ್ತದೆ! ಕನ್ನಡಿಗರು ಒಟ್ಟಾಗಿ ಸೇರಬೇಕು.ಅರ್ಧ ದಿನದ ರಜೆ ಹೋದರೂ ಪರವಾಗಿಲ್ಲ,ಕನ್ನಡಕ್ಕಾಗಿ ಮುನ್ನುಗ್ಗುತ್ತೇವೆ ಅನ್ನುವ ಭಾವನೆ ಬಂದಾಗ ಮಾತ್ರ ಪೂರ್ಣ ಪ್ರಮಾಣದಲ್ಲಿ ಚಳುವಳಿಗಳ ಉಪಯೋಗ ಸಾಧ್ಯ. ನನಗೇನೋ ಈಗಲೂ ಚಳುವಳಿಗಳಲ್ಲಿ ನಂಬಿಕೆಯಿದೆ.

HPN wrote:
ಅದೇ ಜವಾಬ್ದಾರಿ ಹೊತ್ತು ಇಸ್ಮಾಯಿಲರು ಈ ಲೇಖನ ಬರೆದಿದ್ದಾರೆ - ನಾವುಗಳು ಈ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ... 
ಬಹುಶಃ ನನ್ನ ಅನಿಸಿಕೆಯ ಕೊನೆಯ ಪ್ಯಾರವನ್ನು ಓದಿ ಹೀಗಂದಿರಬೇಕು. ನನಗೆ ಇಸ್ಮಾಯಿಲರ ಆಶಯದ ಬಗ್ಗೆ ಶಂಕೆಯಿಲ್ಲ, ಮೇಲಾಗಿ ಅದನ್ನು ಸಂಪೂರ್ಣ ಒಪ್ಪುತ್ತೇನೆ.ಅದನ್ನು ಕುರಿತು ನಾನು ಹೇಳಲಿಲ್ಲ. ಖಂಡಿತ ಚರ್ಚೆ ಎನ್ನುವುದು ಯಾವುದೇ ಕ್ರಿಯೆಗೆ ಮುಂಚಿನ ಹಂತ. ಆದರೆ ಅದು ಬರಿಯ ಚರ್ಚೆಯಾಗಿಯೇ ಉಳಿಯಬಾರದು ಅನ್ನುವುದು ನನ್ನ ಆಸೆ. ಹಲವಾರು ಬಾರಿ ಎಷ್ಟೋ ವಿಚಾರಗಳು ಚರ್ಚೆಯಲ್ಲೇ ಆರಂಭವಾಗಿ, ಚರ್ಚೆಯಲ್ಲೇ ಬೆಳೆದು, ಕೊನೆಗೆ ಚರ್ಚೆಯಲ್ಲೇ ಮುಗಿದೂ ಹೋಗುತ್ತವೆ Wink. ಏನಂತೀರಾ? ಇದನ್ನು ನಾನೂ ನೋಡಿದ್ದೇನೆ, ನೀವೂ ನೋಡಿದ್ದೀರಾ. ಅಲ್ಲವೇ? ಈ ವಿಷಯ ನಿಜಕ್ಕೂ ಗಂಭೀರವಾದ್ದರಿಂದ, ಹಾಗಾಗದಿರಲಿ ಅಂತ ನನ್ನ ಹಾರೈಕೆ.

- ಶ್ಯಾಮ್ ಕಿಶೋರ್

  • Login or register to post comments
  • link
  • Email this ಪ್ರತಿಕ್ರಿಯೆ
January 23, 2007 - 10:18am — Sunil Jayaprakash

ಸ್ಪಷ್ಟಣೆ: ಮೈಕ್ರೋಸಾಫ್ಟೀಕರಣ

Sunil Jayaprakash's picture

ನಲ್ಮೆಯ ಇಸ್ಮಾಯಿಲ್,

ನಿಜಕ್ಕೂ, ಈ ರೀತಿ ಮುಕ್ತವಾಗಿ ಬರೆಯುವವರನ್ನು ಕಂಡಾಗ ಬಹಳ ಹೆಮ್ಮೆಯೆನಿಸುತ್ತದೆ. ನಿಮ್ಮ ಲೇಖನಕ್ಕೆ ಪ್ರತಿಕ್ರಿಯೆಯನ್ನು ನೆನ್ನೆಯೇ ಬರೆದಿದ್ದೇನಾದರೂ, ನಾನು ಕೂಡ ಒಮ್ಮೆ ವಿಸ್ತಾ ಬಳಸಿ, ನೀವು ಹೇಳಿದ್ದು ನಿಜವೆಂದು ಕಂಡಮೇಲೆ ಬರೆಯೋಣ ಅಂತ ಸುಮ್ಮನಾಗಿದ್ದೆ.

Infact, ನಾನು ಕನ್ನಡ I.M.E ಬಳಸಿ, ನೋಟ್‌ಪ್ಯಾಡಿನಲ್ಲಿ ಸಲೀಸಾಗಿ ಕನ್ನಡವನ್ನು ಟೈಪಿದೆ. ಕನ್ನಡ ಎನ್ನುವುದು ಕ ನ್ ನ ಡ ಆಗಲಿಲ್ಲ. ಹಾಗೆಯೇ ಸಾಫ್ಟ್‌ವೇರ್ ಎನ್ನುವುದು ಸಾ ಪ್ ಟ್ ವೇ ರ್ ಆಗಲಿಲ್ಲ. ನೋಟ್‌ಪ್ಯಾಡಿನಿಂದಲೇ ಅದೇ ಪುಟವನ್ನು .htm ಆಗಿ ಸೇವ್ ಮಾಡಿ, IE 7.0 ನಲ್ಲಿ ತೆರೆದಾಗ ಕನ್ನಡ, ಸಾಫ್ಟ್‌ವೇರ್ ಎನ್ನುವುದು ಸ್ಪಷ್ಟವಾಗಿ ಕಂಡಿತು.

ಆದರೆ ಒಂದು ವಿಚಾರ ಎಂದರೆ, Kannadaದ Locale ಅನ್ನು KN ನಿಂದ ಬದಲಾಯಿಸಿ KD ಅಂತ ಮಾಡಿದ್ದಾರೆ. ಕನ್ನಡದ Locale ಯಾವಾಗ ಬದಲಾಯಿತು ತಿಳಿಯದು.

ಅಂದ ಹಾಗೆ, ನಾನು ಬಳಸಿದ್ದು, Microsoft Vista(TM) Pre-RC1 ಮತ್ತು I.E. 7.0.

ವಿಷಯ ಕುತೂಹಲಕಾರಿಯಾಗಿ ಮುಂದುವರಿಯುತ್ತಿದೆ, ನೀವು ಯಾವ ಬ್ರೌಸರಿನಲ್ಲಿ ಪ್ರಯತ್ನಿಸಿದಿರಿ ಎನ್ನುವುದನ್ನು ತಿಳಿಸಲು ಸಾಧ್ಯವೇ ?

  • Login or register to post comments
  • link
  • Email this ಪ್ರತಿಕ್ರಿಯೆ
January 23, 2007 - 11:13am — hpn

ಉ: ಸ್ಪಷ್ಟಣೆ: ಮೈಕ್ರೋಸಾಫ್ಟೀಕರಣ

hpn's picture

ಸುನಿಲ್,

ನೀನು ಬಳಸಿ ನೋಡಿದ ವಿಸ್ಟ ಮೂರು-ನಾಲ್ಕು ತಿಂಗಳು ಹಳೆಯದು.

ಹೊಸ ವಿಸ್ಟ ಆಗಲೇ ಅತಿ ಹೆಚ್ಚು ಕೊಳ್ಳುವ ಅವರ ಕ್ಲೈಂಟುಗಳಿಗೆ (ಕಾರ್ಪೊರೇಟುಗಳಿಗೆ) ಬಿಡುಗಡೆಯಾಗಿದೆ. ಜನವರಿ ೩೦ಕ್ಕೆ ವಿಸ್ಟ ಸಾಮಾನ್ಯ ಬಳಕೆದಾರರಿಗೆ ಮಾರಾಟ ಮಾಡೋಕ್ಕೆ ಪ್ರಾರಂಭಿಸ್ತಾರೆ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
January 23, 2007 - 3:23pm — Sunil Jayaprakash

ಒಕ್ಕಣೆ : ಮೈಕ್ರೋಸಾಫ್ಟೀಕರಣ

Sunil Jayaprakash's picture

ಹರಿ,

ಕುತೂಹಲಕಾರಿಯಾಗಿದೆ. PreRelease1 ನಲ್ಲಿರದ ತಪ್ಪುಗಳು RC2ನಲ್ಲಿ ಹೇಗೆ ನುಸುಳಿರಬಹುದು. ಇದು ನಿಜವೇ ಆಗಿದ್ದಲ್ಲಿ ಕೊಬ್ಬಿದ ಗೂಳಿಗಳ ಸೊಕ್ಕಡಗಿಸಲೇಬೇಕು. ಈ ವಿಷಯವನ್ನು ಎಲ್ಲರಿಗೂ ತಿಳಿಸಿದ ಇಸ್ಮಾಯಿಲ್ರಿಗೆ ಸವಿಯೊದಗು.

ಇಲ್ಲಿ ನೋಡು, ಪತ್ರಿಕೋದ್ಯಮ ಯಾವ ರೀತಿಯಲ್ಲಿ Open Source ಬಳಸುವ ಇಂಜಿನಿಯರುಗಳಿಗೆ ಸಹಾಯ ಮಾಡಬಹುದು ಅಂತ ದೊಡ್ಡ ಲೇಖನವನ್ನು ಬರೆದಿದ್ದೇನೆ.

ಹಾಗೆಯೇ, ಕನ್ನಡದ Locale KNನಿಂದ KDಗೆ ಬದಲಾಯಿಸಿಬಿಟ್ಟಿದ್ದಾರಲ್ಲ, ಇದರ ಬಗ್ಗೆ ISO standardsನಲ್ಲಿ ಏನಾದರು ಬದಲಾವಣೆಗಳಾಗಿವೆಯೇ ?

  • Login or register to post comments
  • link
  • Email this ಪ್ರತಿಕ್ರಿಯೆ
January 23, 2007 - 6:48pm — ismail

ಒಂದು ಸ್ಪಷ್ಟೀಕರಣ

ismail's picture

ಪ್ರಿಯ ಸುನೀಲ್
ನಾನು ನೋಡಿದ್ದು ರಿಲೀಸ್ ಕ್ಯಾಂಡಿಡೇಟ್-2. ಬಳಸಿದ್ದು ಡಿಪಾಲ್ಟ್ ಐಎಂಇ ಆಗಿರುವ inscript ನಾನು ಸಮಸ್ಯೆಯನ್ನು ಬರೆದದ್ದರಲ್ಲಿ ಕೆಲವು ಅಸ್ಪಷ್ಟತೆಗಳಿದ್ದವು. ಪರಿಣಾಮವಾಗಿ ಸಮಸ್ಯೆಯನ್ನು ತಪ್ಪಾಗಿ ಗ್ರಹಿಸಲಾಗುತ್ತಿದೆ. ಅಸ್ಪಷ್ಟ ಬರೆವಣಿಗೆಗೆ ಕ್ಷಮೆ ಕೋರುತ್ತೇನೆ. ನಾನು ಬರೆದದ್ದು ಅರ್ಧಾಕ್ಷರವೊಂದಕ್ಕೆ ಒತ್ತು ಬರುವಾಗಿನ ಸಮಸ್ಯೆ. ಸಾಫ್ಟ್‌ವೇರ್ ಎಂದು ಬರೆಯಲು ಹೊರಟರೆ 'ಸಾ ಫ್‌ ಟ್‌ ವೇ ರ್'ಎಂದು ಮುದ್ರಿತವಾಗುತ್ತದೆ(ಸ್ಪಷ್ಟತೆಗಾಗಿ ಅಕ್ಷರಗಳ ಮಧ್ಯೆ space ನೀಡಲಾಗಿದೆ). ಇದು ಝೀರೋ ವಿಡ್ತ್ ಜಾಯ್ನರ್ ಮತ್ತು ನಾನ್ ಜಾಯ್ನರ್ ಸವಲತ್ತಿನ ಸಮಸ್ಯೆ. 'ಸಾಫ್ಟ್' ಎಂದು ಟೈಪಿಸಿದ ನಂತರ ಝೀರೋ ವಿಡ್ತ್ ನಾನ್ ಜಾಯ್ನರ್ ಒತ್ತುತ್ತೇವೆ. ತಕ್ಷಣ 'ಸಾಫ್ಟ್' ಹೋಗಿ 'ಸಾ ಫ್ ‌ಟ್‌' ಆಗುತ್ತದೆ. ಇದು ನೋಟ್ ಪ್ಯಾಡ್, ವರ್ಡ್ ಪ್ಯಾಡ್ಗಳ ಸಮಸ್ಯೆ. ನಾನು ಆರ್ ಸಿ-2ನ್ನು ಪರೀಕ್ಷಿಸಿದ ಸಿಸ್ಟಂಗೆ ಇಂಟರ್ನೆಟ್ ಸವಲತ್ತು ಇರಲಿಲ್ಲವಾದ್ದರಿಂದ ಯಾವುದೇ ಬ್ರೌಸರ್ ನಲ್ಲಿ ಪರೀಕ್ಷಿಸಲು ಹೋಗಲಿಲ್ಲ. ನೀವು ಮಾಡಿದಂತೆ HTML ಆಗಿ ಸೇವ್ ಮಾಡಿ ನೋಡಬಹುದಿತ್ತು. ಆದರೆ ಆ ಕ್ಷಣದಲ್ಲಿ ನನಗದು ಹೊಳೆದಿರಲಿಲ್ಲ. ಎಂ ಎಸ್ ಆಫೀಸ್-2007ನಲ್ಲಿ ಝೀರೋ ವಿಡ್ತ್ ಜಾಯ್ನರ್ ಮತ್ತು ನಾನ್ ಜಾಯ್ನರ್ಗಳೇ Inscript ಐಎಂಇಯಲ್ಲಿ ಕೆಲಸ ಮಾಡುವುದಿಲ್ಲ.

ಇಸ್ಮಾಯಿಲ್

ನನ್ನ ಬ್ಲಾಗ್: http://ismail.sampada.net

  • Login or register to post comments
  • link
  • Email this ಪ್ರತಿಕ್ರಿಯೆ
January 23, 2007 - 8:48pm — Sunil Jayaprakash

ಮತ್ತಷ್ಟು ಸ್ಪಷ್ಟಣೆಗಳನ್ನು ನೀಡಲು ಸಾಧ್ಯವೇ

Sunil Jayaprakash's picture

ನಲ್ಮೆಯ ಇಸ್ಮಾಯಿಲ್,

ನಿಮ್ಮ ಸ್ಪಷ್ಟನೆಗೆ ಸವಿಯೊದಗು. ಇದು ನನ್ನಲ್ಲಿ ತೀವ್ರ ಕುತೂಹಲವನ್ನು ಕೆರಳಿಸುತ್ತಿದೆ. ವಿಸ್ತಾ ಮೆಷಿನ್ ಮನೆಯಲ್ಲಿ ಇಲ್ಲವಾದ್ದರಿಂದ, ಇದನ್ನು ನಾಳೆ Pre Release 1ನಲ್ಲಿ ಪ್ರಯತ್ನಿಸುತ್ತೇನೆ. ಅದಕ್ಕೆ ಮುಂಚೆ ಮತ್ತಷ್ಟು ಸ್ಪಷ್ಟಣೆ ಕೇಳಬೇಕೆನಿಸಿತು. ನೀವು ಝೀರೋ ವಿಡ್ತ್ ಜಾಯ್ನರ್ ಮತ್ತು ಝೀರೋ ವಿಡ್ತ್ ನಾನ್ ಜಾಯ್ನರ್ರಿಗೆ ಯಾವ ಕೀಲಿಯನ್ನು ಬಳಸಿದಿರಿ.

ನೋಡಿ, ಸದ್ಯಕ್ಕೆ ನಾನಿದನ್ನು ಟೈಪುತ್ತಿರುವುದು XP, Default IME ಮತ್ತು Inscriptಗಳನ್ನು ಬಳಸಿ.
ನನಗೆ ಸಾಫ್ಟ್ವೇರ್, ಸಾ ಫ್ ಟ್ ‌ವೇರ್(ಇದನ್ನು ಕೂಡಿಸಿಯೇ ಬರೆದಿದ್ದೆ, ಆದರೆ ಸಂಪದಕ್ಕೆ ಹಾಕುವಾಗ ಕೂಡಿಕೊಂಡು ಬಿಟ್ಟಿತು, ಹಾಗಾಗಿ ಸ್ಪೇಸ್ ಬಳಸಿದ್ದೇನೆ), ಸಾಫ್ಟ್‍ವೇರ್ ಮೂರು ಪದಗಳನ್ನು ಟೈಪಲು ಸಾಧ್ಯವಾಯಿತು.

ಸಾಫ್ಟ್ವೇರ್
(Inscript - meHd'dbsjd)
ಸಾ ಫ್ ಟ್ ‍ವೇ ರ್
(Inscript - meHd'd(Ctrl+Shift+1)bsjd)
ಸಾಫ್ಟ್‌ವೇರ್
(Inscript - meHd'd(Ctrl+Shift+2)bsjd)

ನಾನು ಇದನ್ನು ನೋಟ್‌ಪ್ಯಾಡ್, ವರ್ಡ್‌ಪ್ಯಾಡ್, ಆಫೀಸ್ ೨೦೦೩, ಎಕ್ಸೆಲ್ ೨೦೦೩, ಔಟ್ಲುಕ್ ೨೦೦೩, ಜಿಟಾಕ್ ವಿಂಡೋಗಳಲ್ಲಿ ಪ್ರಯತ್ನಿಸಿ ನೋಡಿದೆ. ಎಲ್ಲದರಲ್ಲಿಯೂ ಸರಿಯಾಗಿ ಮೂಡಿಬಂತು. ಮೊದಲೇ ಹೇಳಿದ ಹಾಗೆ, ವಿಸ್ತಾದಲ್ಲಿ ನಾಳೆ ಪ್ರಯತ್ನಿಸಿ ನೋಡುತ್ತೇನೆ.

ಅಂದ ಹಾಗೆ ಜಿಟಾಕ್‌ನಲ್ಲಿಯೂ ಬಗ್ಗುಗಳಿವೆ, ಇದರ ಬಗೆಗಿನ ವಿವರಗಳು ಇಲ್ಲಿ ಇದೆ ನೋಡಿ.

  • Login or register to post comments
  • link
  • Email this ಪ್ರತಿಕ್ರಿಯೆ
January 23, 2007 - 9:02pm — ismail

ಮತ್ತಷ್ಟು ಸ್ಪಷ್ಟಣೆ

ismail's picture

ಎಕ್ಸ್ ಪಿ ವೇದಿಕೆಯಲ್ಲಿ ನೀವು ಮೇಲೆ ಹೇಳಿದ ಎಲ್ಲಾ ಅಪ್ಲಿಕೇಶನ್ ಗಳಲ್ಲಿ  ಸಾಫ್ಟ್‌ವೇರ್ (Inscript - meHd'd(Ctrl+Shift+2)bsjd) ಎಂದು ಬರೆದರೆ ಸರಿಯಾಗಿಯೇ ಇದೆ. ಇದೇ ವಿಧಾನದಲ್ಲಿ ವಿಸ್ತಾ ವೇದಿಕೆ (R.C-2)ಯಲ್ಲಿ ನೋಟ್ ಪ್ಯಾಡ್ ಅಥವಾ ವರ್ಡ್ ಪ್ಯಾಡ್ ನಲ್ಲಿ ಪ್ರಯತ್ನಿಸಿ ನೋಡಿ. ಹಾಗೆಯೇ ಆಫೀಸ್-2007 ನಲ್ಲಿ  Ctrl+Shift+2 ಕೆಲಸವೇ ಮಾಡಲಿಲ್ಲ. 

ನಾನು Inscriptನಲ್ಲಿ  meHd'd ಎಂದು ಟೈಪಿಸಿ Ctrl+Shift+2 ಒತ್ತಿದ ತಕ್ಷಣ ಅದು ಸಾ ಫ್ ಟ್ ಆಗಿಬಿಡುತ್ತದೆ. ಅರ್ಧಾಕ್ಷರ ವ್ಯಂಜನಕ್ಕೆ ಒತ್ತು ಬರುವಾಗ ಮಾತ್ರ ಈ ಸಮಸ್ಯೆ ಇರುವಂತೆ ಕಾಣಿಸುತ್ತದೆ.

ಇಸ್ಮಾಯಿಲ್ ನನ್ನ ಬ್ಲಾಗ್: http://ismail.sampada.net

  • Login or register to post comments
  • link
  • Email this ಪ್ರತಿಕ್ರಿಯೆ
January 24, 2007 - 10:36am — Sunil Jayaprakash

ವಿಸ್ತಾದಲ್ಲಿನ ಬಗ್ಗುಗಳು- Bugs in Vista

Sunil Jayaprakash's picture

ಗೆಳೆಯರೇ,
ಇಸ್ಮಾಯಿಲರು ತೋರಿಸಿಕೊಟ್ಟ ತಪ್ಪುಗಳ ಚಿತ್ರಗಳನ್ನು ಲಗತ್ತಿಸುತ್ತಿದ್ದೇನೆ.

ವಿಸ್ತಾದ IE7.0ನಲ್ಲಿನ ತಪ್ಪುಗಳು - Bugs in Vista IE 7.0
left

ವಿಸ್ತಾದ ನೋಟ್‌ಪ್ಯಾಡಿನಲ್ಲಿನ ತಪ್ಪುಗಳು - Bugs in Vista Notepad
right

ವಿಸ್ತಾದ ವರ್ಡ್‌ಪ್ಯಾಡಿನಲ್ಲಿನ ತಪ್ಪುಗಳು - Bugs in Vista Wordpad
center

ಎಲ್ಲಕ್ಕಿಂತ ಸ್ವಲ್ಪ ಆಶ್ಚರ್ಯವುಂಟು ಮಾಡಿದ್ದೆಂದರೆ, ಫೈರ್ಫಾಕ್ಸ್. ಫೈರ್ಫಾಕ್ಸಿನಲ್ಲಿ ಸರಿಯಾಗಿ ರೆಂಡರಾಗುತ್ತಿದೆ.
left

ಒಟ್ಟಿನಲ್ಲಿ IE.7.0ಗೆ ಕನ್ನಡದ ಮಾರುಕಟ್ಟೆ ಸಿಗುವುದು ಕಷ್ಟ ಎಂದಾಯಿತು. ಆದರೆ ಕೊಳ್ಳುವ ಕನ್ನಡಿಗರ ಮಾರುಕಟ್ಟೆಯೂ ಸಿಗದಂತೆ ಮಾಡುವುದು ಬಿಡುವುದು ನಮ್ಮ ನಮ್ಮ ಕೈಯಲ್ಲೇ ಇದೆ.

  • Login or register to post comments
  • link
  • Email this ಪ್ರತಿಕ್ರಿಯೆ
January 24, 2007 - 11:14am — hpn

ಉ: ವಿಸ್ತಾದಲ್ಲಿನ ಬಗ್ಗುಗಳು- Bugs in Vista

hpn's picture

ಒಳ್ಳೆಯ ಕೆಲಸ, ಸುನಿಲ್. Bravo! Smiling

ಫೈರ್ಫಾಕ್ಸ್ ಇದೊಂದನ್ನು ಸರಿಯಾಗಿ ರೆಂಡರ್ ಮಾಡಬಹುದು, ಆದರೆ ವಿಸ್ಟಾದೊಂದಿಗೆ ಉಪಯೋಗಿಸಲು ಲಭ್ಯವಿರುವ ಫರಿಫಾಕ್ಸಿನ bugsಗಳ ಒಂದು ದೊಡ್ಡ ಪಟ್ಟಿಯೇ ಇದೆ. ಅವೆಲ್ಲವೂ ನಿಮಗೆ ತೊಂದರೆಯಿನಿಸದಿದ್ದರೆ ವಿಸ್ಟಾ ಕೊಂಡು ಅದರೊಂದಿಗೆ ಫೈರ್ಫಾಕ್ಸ್ ಬಳಸಬಹುದು Sticking out tongue

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
January 31, 2007 - 8:52pm — sudhimail

Re: ಮೈಕ್ರೋಸಾಫ್ಟೀಕರಣ

sudhimail's picture

ಅದಕ್ಕೇ ನಾನು ಮೈಕ್ರೋಸಾಫ್ಟ್ ನ ಐಎಂಇಯನ್ನು ಉಪಯೋಗಿಸುವುದೇ ಇಲ್ಲ.
XPನಲ್ಲಿ ಬರಹ ಐಎಂಇಯನ್ನೂ, ಲಿನಕ್ಸ್ ನಲ್ಲಿ ಸ್ಕಿಮ್-೧೭ಎನ್ ಅನ್ನೂ ಯಾವುದೇ ತೊಂದರೆಯಿಲ್ಲದೆ ಉಪಯೋಗಿಸುತ್ತಿದ್ದೇನೆ. ಇದರಿಂದ ಮುಕ್ತ ತಂತ್ರಾಂಶವನ್ನೂ ನಿತ್ಯ ಬಳಸುವುದು ಅಭ್ಯಾಸವಾಗುತ್ತದೆ.

ವಂದನೆಗಳೊಂದಿಗೆ,
ಸುಧೀಂದ್ರ

  • Login or register to post comments
  • link
  • Email this ಪ್ರತಿಕ್ರಿಯೆ
January 31, 2007 - 9:12pm — Sunil Jayaprakash

Re: ಮೈಕ್ರೋಸಾಫ್ಟೀಕರಣ

Sunil Jayaprakash's picture

sudhimail wrote:
XPನಲ್ಲಿ ಬರಹ ಐಎಂಇಯನ್ನೂ, ಲಿನಕ್ಸ್ ನಲ್ಲಿ ಸ್ಕಿಮ್-೧೭ಎನ್ ಅನ್ನೂ ಯಾವುದೇ ತೊಂದರೆಯಿಲ್ಲದೆ ಉಪಯೋಗಿಸುತ್ತಿದ್ದೇನೆ. ಇದರಿಂದ ಮುಕ್ತ ತಂತ್ರಾಂಶವನ್ನೂ ನಿತ್ಯ ಬಳಸುವುದು ಅಭ್ಯಾಸವಾಗುತ್ತದೆ.

ನಮಸ್ಕಾರ ಸುಧೀಂದ್ರರವರೇ,
ನಿಜಹೇಳಬೇಕೆಂದರೆ, ನಿಮ್ಮ ಮಾತು ನನಗೆ ಸರಿಬರಲಿಲ್ಲ. Microsoft IMEಗೂ ಇದಕ್ಕೂ ಸಂಬಂಧವಿಲ್ಲ. XPಯನ್ನೇ ಬಳಸುವುದಾದರೆ, ಅತ್ಯಂತ ಸುಲಭವಾಗಿ ಟೈಪಬಹುದಾದ Microsoft IMEಅನ್ನು ಬಳಸಿ ಯಾವದೇ ಅಳುಕಿಲ್ಲದೆ INSCRIPT ಮೂಲಕ ಕನ್ನಡ ಟೈಪಬಹುದು. ಮೈಕ್ರೋಸಾಫ್ಟ್ ಬಗ್ಗುಗಳೆಂಬ ಒಂದೇ ಕಾರಣಕ್ಕಾಗಿ, ನಾನು ಬರಹ ಬಳಸುತ್ತೇನೆ ಎನ್ನುವುದು ಒಪ್ಪತಕ್ಕ ಮಾತಲ್ಲ. Microsoft IME ಬಳಸುವುದರಲ್ಲಿ ನನಗೆ ವೈಯಕ್ತಿಕವಾಗಿ ಯಾವ ತಪ್ಪೂ ಕಾಣುವುದಿಲ್ಲ. ಕನ್ನಡ ಟೈಪುವುದಕ್ಕೆ ಬರಹ, ನುಡಿ ಇಲ್ಲವೇ ಮತ್ಯಾವುದೇ THIRD PARTY ಸಾಫ್ಟ್ ವೇರ್ ಬೇಕಿಲ್ಲ.

ಹಾಗೆಯೇ, ಲಿನಕ್ಸಿನಲ್ಲಿಯೂ ಕೂಡ ಸ್ಕಿಮ್ ಇಲ್ಲದೆ, ಮೂಲ ಗ್ನೋಮ್ ಮೂಲಕವೇ ಕನ್ನಡವನ್ನು ಟೈಪಬಹುದು, ಆದರೆ ಇದರ ಬಗ್ಗೆ ನನ್ನ ಯಾವ ತಕರಾರೂ ಇಲ್ಲ. ಅದು ಬಳಸುವವರಿಗೆ ಬಿಟ್ಟಿದ್ದು.

sudhimail wrote:
ಇದರಿಂದ ಮುಕ್ತ ತಂತ್ರಾಂಶವನ್ನೂ ನಿತ್ಯ ಬಳಸುವುದು ಅಭ್ಯಾಸವಾಗುತ್ತದೆ.

ನಿಮ್ಮ ಈ ಮಾತು ತುಂಬಾ ಇಷ್ಟವಾಯಿತು.

  • Login or register to post comments
  • link
  • Email this ಪ್ರತಿಕ್ರಿಯೆ
February 1, 2007 - 1:39am — hpn

ಉ: ಮೈಕ್ರೋಸಾಫ್ಟೀಕರಣ

hpn's picture

Quote:
ಕನ್ನಡ ಟೈಪುವುದಕ್ಕೆ ಬರಹ, ನುಡಿ ಇಲ್ಲವೇ ಮತ್ಯಾವುದೇ THIRD PARTY ಸಾಫ್ಟ್ ವೇರ್ ಬೇಕಿಲ್ಲ.

Third party? ಮೈಕ್ರೊಸಾಫ್ಟು ನಮಗೆ "ಥರ್ಡ್ ಪಾರ್ಟಿ", ಇವರೆಲ್ಲ ನಮ್ಮವರೇ - ಕನ್ನಡ ಪಾರ್ಟಿ! Sticking out tongue

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೆಂಗಳೂರಿನಲ್ಲಿ ಮೈಕೇಲ್ ಕಪ್ಲಾನ್
  • ದೊಡ್ಡದಾದ ಮಂಚ ???
  • ಮೈಕ್ರೋಸಾಫ್ಟೀಕರಣವನ್ನು ಪ್ರತಿಭಟಿಸೋಣ
  • ಕನ್ನಡ ಪತ್ರಿಕೋದ್ಯಮದ ಸೋಲು ? ಮತ್ತು ಅದರ ಬಗಲಲ್ಲೇ ಇರುವ ಆಶಾಕಿರಣ.
  • MSPhi - ಇನ್ನಿಲ್ಲ?
Syndicate content

ಲೇಖಕರು

ismail's picture

ಪೂರ್ಣ ಹೆಸರು
ismail

ಪರಿಚಯ

ವೃತ್ತಿಯಲ್ಲಿ ಪತ್ರಕರ್ತ. ಈ ವೃತ್ತಿಗೆ ಸಹಜವಾಗಿರುವಂತೆ ಜಗತ್ತಿನಲ್ಲ ಎಲ್ಲ ವಿಷಯಗಳ ಬಗ್ಗೆಯೂ ಆಸಕ್ತಿ ಇದೆ. ಭಾಷಾ ವಿಜ್ಞಾನ ಮತ್ತು ಅರ್ಥಶಾಸ್ತ್ರ ಮೆಚ್ಚಿನ ವಿಷಯಗಳು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
  • ಮಧುವನ ಕರೆದರೇ, ತನುಮನ ಸೆಳೆದರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 12:29pm
  • nag4pl
    ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ
    May 16, 2008 - 12:26pm
  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
ಇನ್ನಷ್ಟು

ಮಕ್ಕಳ ಸ್ಕೂಲ್ ಮನೇಲಲ್ವೇ

— ಬೀchi

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator