ಶಿವಾಜಿನಗರದಲ್ಲಿ ಬಡಿ-ಕಡಿ : ಕೊಳಕು ರಾಜಕೀಯದ ಫಲ
ತಮ್ಮ ಬೇಳೆ ಬೇಯಿಸಿಕೊಳ್ಳಲು ರಾಜಕಾರಣಿಗಳು ಹೇಗೆ ಮುಗ್ಧರ ತಲೆ ಕೆಡಿಸಿ ಮೋಜು ನೋಡುತ್ತಾರೆಂಬುದಕ್ಕೆ ಬಹುಷಃ ಇದಕ್ಕಿಂತ ಬೇರೆ ಮಾದರಿ ಸಿಗಲಿಕ್ಕಿಲ್ಲ.
ಸದ್ದಾಮ್ ಎಂಥವನಾಗಿದ್ದ ಅಂಬೋದಾದರೂ ಇವರಿಗೆ ಗೊತ್ತಾ? ಲೆಕ್ಕ ಇಲ್ಲದಷ್ಟು ಮುಸ್ಲೀಮರನ್ನೇ ಅವನು ಕೊಂದಿದ್ದಾನೆಂಬುದು ಇವರಿಗೆ ಗೊತ್ತಾ?
ಇರಾಕಿನ ವಿಷಯದಲ್ಲಿ ಮೂಗು ತೂರಿಸೋಕೆ ಅಮೆರಿಕೆಗೆ ಯಾವ ಹಕ್ಕಿದೆ ಎಂಬುದು ಬೇರೆ ವಿಷಯ, ಆದರೆ ಎಲ್ಲೋ ಯಾರನ್ನೋ ಗಲ್ಲಿಗೆ ಹಾಕಿದರೆ ಇವರು ಇಲ್ಲಿ ಮಂದಿಯ ತಲೆ ಕೆಡಿಸಿ ಅವರ ನೆಮ್ಮದಿ ಹಾಳು ಮಾಡಲು ಯಾವ ಹಕ್ಕಿದೆ?
ಶಿವಾಜಿನಗರದಲ್ಲಿ ನಡೆದ ಹಿಂಶೆಯಲ್ಲಿ ಪಾಲುಗೊಂಡವರು ಖಂಡಿತ ಇದ್ಯಾವುದನ್ನೂ ತಿಳಿಯದ ಅಮಾಯಕರು.

- Login or register to post comments
- 781 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಶಿವಾಜಿನಗರದಲ್ಲಿ ಬಡಿ-ಕಡಿ : ಕೊಳಕು ರಾಜಕೀಯದ ಫಲ
ಅದು ಹಾಗೆಯೇ. ಯಾರದೋ ರಾಜಕೀಯ ತೀಟೆಗೆ ಗಲಾಟೆ ನಡೆಯತ್ತೆ... ಸಾಯೋದು, ಕಷ್ಟ ಪಡೋದು ಬೇರೆಯವರೇ - ಅವರು ಅಮಾಯಕರೋ ಅಲ್ಲವೊ ಬಿಡಿ, ಒಟ್ಟು ಪ್ರಾಣಹಾನಿ ಗ್ಯಾರೆಂಟಿ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಅನಿಸಿಕೆ: ಶಿವಾಜಿನಗರದಲ್ಲಿ ಬಡಿ-ಕಡಿ : ಕೊಳಕು ರಾಜಕೀಯದ ಫಲ
ಒಂದು ವೇಳೆ ಎಲ್ಲ ಕೋಮಿನವರೂ ಪರಸ್ಪರ ಹೊಂದಾಣಿಕೆಯಿಂದ ಇರುತ್ತೀವಿ ಅಂತ ನಾವು (ಸಾಮಾನ್ಯ ಜನರು) ನಿರ್ಧರಿಸಿದರೂ, ಈ ನಮ್ಮ "ನೇತಾರರು" ಬಿಡೋದಿಲ್ಲ. ಅವರ ಬೇಳೆ ಬೇಯಬೇಕಲ್ಲ. ಒಂದು ಕೋಮಿನವರು ಯಾವುದಾದರೂ ಒಂದು ಸಮಾವೇಶ ನಡೆಸಿದಾಗ, ಅದರಲ್ಲಿ ಹೀಗೆ ಗಲಾಟೆಯಾಯಿತು, ಅದಕ್ಕೆ ಕಾರಣ ಇನ್ನೊಂದು ಕೋಮಿನವರು ಅಂತೆಲ್ಲ ಕೂಗುತ್ತಾರಲ್ಲ, ನನಗೇನೋ ಅನುಮಾನ. ಇವರೇ ಬೇಕಾದರೆ "ಬಾಡಿಗೆ ಜನರನ್ನು" ಬಿಟ್ಟು ಆ ರೀತಿ ಮಾಡಿಸಿದ್ದರೂ ಮಾಡಿಸಿರುತ್ತಾರೆ. ಒಟ್ಟಿನಲ್ಲಿ ಆಗಾಗ ಗಲಭೆಗಳು ಆಗುತ್ತಿರಬೇಕು. ಕೊನೆಗೆ ಅನುಭವಿಸುವುದು ನಾವು, ನಮ್ಮಂಥವರು.
ಅದರೆ ಇದರಲ್ಲಿ, ಮುಕ್ತವಾಗಿ "ವೇದಿಕೆ"ಗಳಲ್ಲಿ ಚರ್ಚಿಸಲಾಗದಂತಹ ಒಳ ಸುಳಿವುಗಳೂ ಇವೆ ಅನ್ನೋದು ಕಟು ಸತ್ಯ. ಕೆಲವೊಮ್ಮೆ ಬರೆಯುವುದೂ ಬಹಳ ಕಷ್ಟ. ಏಕೆಂದರೆ "ಮತ, ಧರ್ಮ" ಅನ್ನೋದು ಬಹಳ ವೈಯಕ್ತಿಕ ಶ್ರದ್ಧೆಯ ವಿಚಾರ (ಯಾವ ಕೋಮಿನವರಿಗೇ ಆದರೂ) ನೋಡಿ.
- ಶ್ಯಾಮ್ ಕಿಶೋರ್
Re: ಅನಿಸಿಕೆ: ಶಿವಾಜಿನಗರದಲ್ಲಿ ಬಡಿ-ಕಡಿ : ಕೊಳಕು ರಾಜಕೀಯದ ಫಲ
ಶಾಮ್ ಕಿಶೋರ್ ಬರೆದಿದ್ದು,
ಇವರೇ ಬೇಕಾದರೆ "ಬಾಡಿಗೆ ಜನರನ್ನು" ಬಿಟ್ಟು ಆ ರೀತಿ ಮಾಡಿಸಿದ್ದರೂ ಮಾಡಿಸಿರುತ್ತಾರೆ. ಒಟ್ಟಿನಲ್ಲಿ ಆಗಾಗ ಗಲಭೆಗಳು ಆಗುತ್ತಿರಬೇಕು.
ಇರಬಹುದು, ಈ ರಾಜಕಾರಣಿಗಳು ಅದನ್ನೂ ಮಾಡಲು ಹೇಸುವದಿಲ್ಲ, ಅನಿಸುತ್ತೆ.