Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಇತಿಹಾಸ

ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ?

January 26, 2007 - 12:44pm — hpn

ಸೆಪಿಯಾ ಮ್ಯೂಟಿನಿಯಲ್ಲಿ ಹತ್ತಿ ಬೆಳೆಯ ಬಗ್ಗೆ ಒಂದು ಬಹಳ ಚೆಂದವಾದ ಬ್ಲಾಗ್ ರೌಂಡ್ ಅಪ್ ಸೇರಿಸಿದ್ದಾರೆ. ಓದಿ.

ತಮಾಷೆಯ ಸಂಗತಿಯೆಂದರೆ ಯೂರೋಪಿಯನ್ನರಿಗೆ ಹತ್ತಿ ಗಿಡಗಳ ನಿಜವಾದ ಪರಿಚಯ ಆಗುವ ತನಕ "ಹತ್ತಿ ಗಿಡದಲ್ಲಿ ಚಿಕ್ಕ ಕುರಿಗಳು ಬಿಡುತ್ವೆ" ಅಂದುಕೊಂಡಿದ್ರಂತೆ. ಚಿತ್ರ ನೋಡಿ Eye-wink

cotton-europeans

‹ ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. "ಚಂದಮಾಮ" ಬೇಕೋ ಅಥವಾ "HARRY POTTER" ಬೇಕೋ? ›
  • ಇತಿಹಾಸ
Ornamental seperator
  • Login or register to post comments
  • 902 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 26, 2007 - 8:04pm — venkatesh

Re: ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ?

venkatesh's picture

"ಭಾರತದಲ್ಲಿ ಬಿ.ಟಿ.ಹತ್ತಿ", ಎಂಬ ಲೇಖನದಲ್ಲಿ ಇದನ್ನು ನಾನು ದಾಖಲಿಸಿದ್ದೇನೆ. ಓದಿ.
ಯೂರೋಪಿನ ಪ್ರತಿಯೊಬ್ಬ ಯುವಕನ ಆಗಿನಕಾಲದ ಬಯಕೆ ಎಂದರೆ, ಭಾರತಕ್ಕೆ ಹೋಗಿ ಅಲ್ಲಿನ ಮರಗಳಮೇಲೆ ಇರುವ ಶುಭ್ರ ಬಿಳಿಕುರಿತುಪ್ಪಟದಂತಹ ಉಣ್ಣೆಯನ್ನು ತರೊಣ ಎನ್ನುವುದು. ಅದರಿಂದ ಮಸ್ಲಿನ್ ಬಟ್ಟೆಗಳನ್ನು ಮಾಡುವ ನಮ್ಮ 'ಗೃಹಕೈಗಾರಿಕೆಗಳ'ನ್ನು ನೋಡಲು ಸೋಜಿಗ ಅವರಿಗೆ ! ಇಂಡಿಗೊ- ಪ್ರಾಕೃತಿಕ ಬಟ್ಟೆಗಳಿಗೆ ಹಾಕುವ ಬಣ್ಣ, ಅವರನ್ನು ಮೋಡಿಮಾಡಿತ್ತು ! ಕಪ್ಪು ಮೆಣಸಿನ ಕಾಳು, ಶ್ರೀಗಂಧ,ರೇಷ್ಮೆ ವಸ್ತ್ರ, ಎತ್ಯಾದಿ. ವಿಧವಿಧದ ಹಾವುಗಳು,ಆನೆಗಳು, ರಾಜ,ಮಹಾರಾಜರು,ಸಾಂಬಾರ್ ಪದಾರ್ಥಗಳು ಅವರನ್ನು ಹುಚ್ಚರನ್ನಾಗಿಸಿದ್ದವು. ಚೀಣದೇಶಕ್ಕೂ ಹೋಗಿ ಅಲ್ಲಿನ ಅದ್ಭುತ ಗಳನ್ನು ನೋಡುವ ಆತುರ ಅವರಿಗೆ.

ನಿಜವಾಗಿಯೂ 'ಕೊಲಂಬಸ್' ಇಂಡಿಯವನ್ನು ಕಂಡುಹಿಡಿಯಲು ಬಂದವನು, ಅದು ವೆಸ್ಟ್ ಇಂಡೀಸ್, ಅಂತ ತಿಳಿದಾಗ ಅವನಿಗೆ ಭಯಂಕರ ನಿರಾಶೆ ! ಬೆಂಜಮಿನ್ ಫ್ರಾಂಕ್ಲಿನ್, ಎಂಬ ಅಮೆರಿಕದ ಪ್ರಸಿದ್ಧ ಸಂವಿಧಾನ ಕರ್ತ, ತನ್ನ ಹೆಂಡತಿಯ, "ಶುದ್ಧ ನವಿರಾದ ಮಸ್ಲಿನ್ ಹತ್ತಿಯ ಫ್ರಾಕ್" ಕಾಣೆಯಾದ ಬಗ್ಗೆ, ಅಲ್ಲಿನ ಒಂದು ಪ್ರಸಿದ್ಧ 'ದಿನ ಪತ್ರಿಕೆ'ಯಲ್ಲಿ 'ಕಾಣೆಯಾದ ವಸ್ತುಗಳ ಸ್ಥಳದಲ್ಲಿ' ಮುದ್ರಿಸಿದ್ದು, ಅದು ಆ ದಿನದ ಒಂದು ಪ್ರಮುಖ ಸುದ್ದಿಯಾಯಿತೆಂದು ತಿಳಿಸಲು ನನಗೆ ಹೆಮ್ಮೆ ! ( ಬೆಂಜಮಿನ್ ಫ್ರಾಂಕ್ಲಿನ್ ರು ಒಬ್ಬ ಸಂಶೊಧಕರು,ವಿಜ್ಞಾನಿಗಳು, ವಿದ್ಯುಚ್ಛಕ್ತಿಯ ಬಗ್ಗೆ ಲೇಖನಗಳನ್ನು ಪ್ರಕಟಿಸುತ್ತಿದ್ದರು. ಅವರೊಬ್ಬ ರಾಜಕೀಯ ಧುರೀಣರು. ಒಂದು ದಿನ ಪತ್ರಿಕೆಯನ್ನು ಮುದ್ರಿಸಿ ಪ್ರಕಟಿಸುತ್ತಿದ್ದರು (ಫಿಲೆಡೆಲ್ಫಿಯದಲ್ಲಿ)

'ಹತ್ತಿಯ ಸಾಮ್ರಾಜ್ಯ'ದಲ್ಲಿ ನಾನು ನನ್ನ ಪೂರ್ತಿ ಜೀವನ ಕಳೆದನಲ್ಲ ! !

ಪಂ. ಜವಹರಲಾಲ್ ನೆಹ್ರೂ ರವರು ಒಂದು ಪ್ರಸಿದ್ಧ ಪತ್ರಿಕೆಗೆ ಮುನ್ನುಡಿ ಬರೆಯುವಾಗ ಬಳಸಿದ ಮಾತನ್ನು, ಯಾರೂ ಮರೆಯುವಂತಿಲ್ಲ !

"ನಮ್ಮನ್ನು ಆಳಿದ ಬ್ರಿಟಿಶ ಸಾಮ್ರಾಜ್ಯ, ತನ್ನ ಮೊದಲ 'ನೂರು ವರ್ಷಗಳನ್ನು' ಕೇವಲ ಹತ್ತಿ ಮತ್ತು ಅದರ ಉಪವಸ್ತುಗಳನ್ನು ತಮ್ಮದಾಗಿಸುವ 'ಕಲೆ'ಯನ್ನು ಪ್ರಚಾರಮಾಡುವುದರಲ್ಲಿ, ಕಲಿಯುವುದರಲ್ಲಿಯೇ, ಕಳೆಯಿತು." ! ಎಷ್ಟು ಅರ್ಥಪೂರ್ಣವಾಗಿದೆಯಲ್ಲವೆ ಅವರ ಮಾತುಗಳು ?

ಹತ್ತಿಯಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ ನನ್ನನ್ನು ಸಂಪರ್ಕಿಸಿ.

  • Login or register to post comments
  • link
  • Email this ಪ್ರತಿಕ್ರಿಯೆ
January 27, 2007 - 12:41am — hpn

ಉ: ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ?

hpn's picture

'ಮಸ್ಲಿನ್' ಬಗ್ಗೆ ಕೇಳಿದ್ದೆ. ನಮಗೆ ಪಾಠದಲ್ಲಿದ್ದದ್ದು ನೆನಪು.

"ಉಗುರ ತೂತಿನಲ್ಲಿ ನೂಲು ಎಣೆಯುತ್ತಿದ್ದರು" - ಎಂದೋ ಅಥವ ಅದರ ಹತ್ತಿರದ ಅರ್ಥದಲ್ಲೋ ಹಿರಿಯರೊಬ್ಬರು ನನಗೆ ಮಸ್ಲಿನ್ ಬಗ್ಗೆ ವಿವರಿಸಿದ್ದರು.

ಭಾರತದಲ್ಲಿ ಅಂತಹ ಮುಳುಗಿಹೋದ ಕಲೆಗಳು ಎಷ್ಟೋ!

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
September 8, 2007 - 1:39pm — girish.rajanal

ಉ: Re: ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ?

girish.rajanal's picture

ಕೋಲಂಬಸ್ ಅಗಲಿ ವಸಕ್ಡಿಗಾಮ ಆಗಲಿ ಭಾರತವನ್ನಾಗಲಿ ಅಮೇರಿಕವನ್ನಾಗಲಿ ಕಂಡು ಹಿಡಿದಿಲ್ಲ ಅಂದು ಸ್ಪಷ್ಟಪಡಿಸುತ್ತೇನೆ. ಅವರು ಬರುವ ಮೊದಲೂ ನಮ್ಮ ದೇಶ ಇತ್ತು. ಅವರು ನಮ್ಮ ದೇಶಕ್ಕೆ ಬಂದದ್ದು ದೇಶಾನ ಲೂಟಿ ಮಾಡಲಿಕ್ಕೆ, ಕ್ರಮೇಣ ನಮ್ಮನ್ನ ಆಳೋಕೆ ಶುರುಮಾಡಿದ್ರು. ಹೀಗೆ ಬಂದವರು ಫ್ರಂಚರು, ಡಚ್ಚರು, ಪೋರ್ಚುಗೀಜರು ಹಾಗು ಬ್ರಿಟೀಷರು. ಇವರೆಲ್ಲ ಕಳ್ಳಕಾಕರೆ ಯಾಕೆಂದರೆ ಆ ಕಾಲದಲ್ಲಿ ಅತೀ ಸಂಪದ್ಭರಿತ ದೇಶ ಅಣದ್ರೆ ಭಾರತ.

ತಿಳಿಯಿರಿ.

  • Login or register to post comments
  • link
  • Email this ಪ್ರತಿಕ್ರಿಯೆ
September 8, 2007 - 1:40pm — girish.rajanal

ಉ: Re: ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ?

girish.rajanal's picture

ಕೋಲಂಬಸ್ ಅಗಲಿ ವಸಕ್ಡಿಗಾಮ ಆಗಲಿ ಭಾರತವನ್ನಾಗಲಿ ಅಮೇರಿಕವನ್ನಾಗಲಿ ಕಂಡು ಹಿಡಿದಿಲ್ಲ ಅಂದು ಸ್ಪಷ್ಟಪಡಿಸುತ್ತೇನೆ. ಅವರು ಬರುವ ಮೊದಲೂ ನಮ್ಮ ದೇಶ ಇತ್ತು. ಅವರು ನಮ್ಮ ದೇಶಕ್ಕೆ ಬಂದದ್ದು ದೇಶಾನ ಲೂಟಿ ಮಾಡಲಿಕ್ಕೆ, ಕ್ರಮೇಣ ನಮ್ಮನ್ನ ಆಳೋಕೆ ಶುರುಮಾಡಿದ್ರು. ಹೀಗೆ ಬಂದವರು ಫ್ರಂಚರು, ಡಚ್ಚರು, ಪೋರ್ಚುಗೀಜರು ಹಾಗು ಬ್ರಿಟೀಷರು. ಇವರೆಲ್ಲ ಕಳ್ಳಕಾಕರೆ ಯಾಕೆಂದರೆ ಆ ಕಾಲದಲ್ಲಿ ಅತೀ ಸಂಪದ್ಭರಿತ ದೇಶ ಅಂದ್ರೆ ಭಾರತ.

ತಿಳಿಯಿರಿ.

  • Login or register to post comments
  • link
  • Email this ಪ್ರತಿಕ್ರಿಯೆ
April 17, 2007 - 8:39am — venkatesh

Re: ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ?

venkatesh's picture

ತಮಾಷೆಯ ಸಂಗತಿಯೆಂದರೆ ಯೂರೋಪಿಯನ್ನರಿಗೆ ಹತ್ತಿ ಗಿಡಗಳ ನಿಜವಾದ ಪರಿಚಯ ಆಗುವ ತನಕ "ಹತ್ತಿ ಗಿಡದಲ್ಲಿ ಚಿಕ್ಕ ಕುರಿಗಳು ಬಿಡುತ್ವೆ" ಅಂದುಕೊಂಡಿದ್ರಂತೆ. ಚಿತ್ರ ನೋಡಿ

ಚಿಕ್ಕ ಕುರಿ ಹತ್ತಿ ಗಿಡ, ಹತ್ತಿ ಬಿಡುತ್ತೆ" ಅಂದುಕೊಂಡಿದ್ರಂತೆ. ಚಿತ್ರ ನೋಡಿ .
ಹೀಗಿದ್ದರೆ ಹೇಗೆ ?

ಹಳದಿ ಹೂವಿನ ಗಿಡದಲ್ಲಿ ಹಳದಿ ಹೂ ಬಿಡಲ್ವೆ ?

ಕೆಂಪು ಹೂವಿನ ಗಿಡದಲ್ಲಿ ಕೆಂಪು ಹೂ ಬಿಡಲ್ವೆ ?

ಹಾಗೆ...

ಚಿಕ್ಕ ಕುರಿ ಹತ್ತಿ ಗಿಡ, ಹತ್ತಿ ಬಿಡುತ್ತೆ" ಅಂದುಕೊಂಡಿದ್ರಂತೆ.

  • Login or register to post comments
  • link
  • Email this ಪ್ರತಿಕ್ರಿಯೆ
April 17, 2007 - 9:50am — ASHOKKUMAR

Re: ಹತ್ತಿ v/s ಖಾದಿ

ASHOKKUMAR's picture

ಹತ್ತಿ ಬಟ್ಟೆಗೂ ಖಾದಿಗೂ ಇರುವ ವ್ಯತ್ಯಾಸ ಏನು? ಬೇಸಿಗೆಗೂ ಹತ್ತಿ ಬಟ್ಟೆಗೂ ನಂಟಿದೆ ಅಲ್ಲವೇ?

  • Login or register to post comments
  • link
  • Email this ಪ್ರತಿಕ್ರಿಯೆ
April 17, 2007 - 12:17pm — venkatesh

Re: ಹತ್ತಿ v/s ಖಾದಿ

venkatesh's picture

ಭಾರತದಲ್ಲಿ ಕೈನಿಂದ ತಯಾರಿಸಿದ ಹತ್ತಿ ಬಟ್ಟೆಗೆ "ಖಾದಿ ಅಥವಾ ಖದ್ದರ್ " ಎಂದು ಹೆಸರು. ಹತ್ತಿಯಲ್ಲದೆ ಉಣ್ಣೆ, ರೇಷ್ಮೆ ಸೇರಿದಂತೆ ಇನ್ನೂ ಹಲವು ನಾರಿನಿಂದ ನೇದು ಮಗ್ಗದಲ್ಲಿ ತಯಾರಿಸಿದ ಬಟ್ಟೆಗಳು ಖಾದಿ ವರ್ಗಕ್ಕೆ ಸೇರುತ್ತವೆ. ಕೈನಿಂದ ನೂತ ದಾರದಿಂದಲೇ ಬಟ್ಟೆಯನ್ನು ಕೈ ಮಗ್ಗದ ಮೇಲೆ ನೇಯುವ ಕಲೆಯನ್ನು ಮಹಾತ್ಮಗಾಂಧಿಯವರು ಕುಮ್ಮಕ್ಕು ಕೊಟ್ಟು ಬೆಳೆಸಿದರು. ಹತ್ತಿ-ಬಟ್ಟೆಗೆ ಗಾಂಧಿಯವರು ಕೊಟ್ಟ ಹೆಸರು- ಖಾದಿ !

ನಮ್ಮ ದೇಶದ ಕರ- ಕುಶಲ ಕೈಗಾರಿಕೆಗಳಿಗೆ ಆದ್ಯತೆ, ಸ್ವಾವಲಂಬನೆ, ಇವು ಆಗ ನಮ್ಮನ್ನು ಕಾಡಿಸಿದ ನಿಜವಾದ ಉದ್ದೇಶ್ಯಗಳು. ಆದರೆ ಇದರ ತಯಾರಿಕೆಯಲ್ಲಿ, ಮತ್ತು ಅದರ ಉಪಯೋಗದಲ್ಲಿ ಅನೇಕ ತೊಡಕು ಹಾಗೂ ಅಪಪ್ರಚಾರಗಳಿಂದ ಇಂದಿನ ಖಾದಿ ತನ್ನ ತನವನ್ನು ಕಳೆದುಕೊಳ್ಳುತ್ತಿದೆ. ಮೇಲಾಗಿ ಅಂದಿನ ಉದ್ದೇಶ್ಯವೇ ಬೇರೆ. ಇಂದಿನ ನಮ್ಮ ಅನಿವಾರ್ಯತೆಗಳೇ ಬೇರೆ. ಖಾದಿಯನ್ನು ಇನ್ನೂ ಅವೈಜ್ಞಾನಿಕವಾಗಿ, ಮೊದಲಿನಂತೆಯೇ ಹಳೆಪದ್ಧತಿಯಲ್ಲಿ ನಿರ್ಮಿಸುವ ಮೂರ್ಖತನಕ್ಕೆ ಏನು ಹೇಳಬೇಕೋ ತಿಳಿಯುತ್ತಿಲ್ಲ !

ಮಹಾತ್ಮರ ಈ ಕಾರ್ಯವೈಖರಿ, ಮುಂದಾಲೋಚನೆಯ ಪ್ರವೃತ್ತಿಗಳು, ಬ್ರಿಟನ್ನಿನ ಯಂತ್ರ ವಸ್ತ್ರೋದ್ಯಮಕ್ಕೆ ಭಾರಿ ಸವಾಲನ್ನು ಒಡ್ಡಿದವು !

ಭಾವನಾತ್ಮಕವಾಗಿ ಯಾರೂ ಊಹಿಸಲಾರದಂತಹ, ನಮ್ಮ ಸ್ವಾತಂತ್ರ್ಯ ಸೇನಾನಿಗಳ ಮಹತ್ತರ ಕಾರ್ಯಸಾಧನೆಗಳಿಂದ, ಬ್ರಿಟಿಷರು ಹೇಳದೇ ಕೇಳದೆ ನಮ್ಮ ಭರತವರ್ಷವನ್ನು ಬಿಟ್ಟು ಹೋಗಬೇಕಾದ ಪ್ರಮೇಯ ಒದಗಿ ಬಂತು. ಅವರು ಕನಸು ಮನಸಿನಲ್ಲೂ ಊಹಿಸದಂತಹ ಇಂತಹ ಅಸಾಧಾರಣ ತತ್ವಗಳು ಅದನ್ನು ಅನುಷ್ಠಾನಕ್ಕೆ ತಂದ ನಮ್ಮ ಮಹಾತ್ಮರ ನಿಲವುಗಳು, ಇಂಗ್ಲೀಷ್ ಸಾಮ್ರಾಜ್ಯಕ್ಕೆ ಬೃಹತ್ ತಲೆನೋವಿನ ಪ್ರಸಂಗಗಳು. ಈ ನಿಟ್ಟಿನಲ್ಲಿ ಮಹಾತ್ಮ ಗಾಂಧಿಯವರು ಅಮರರಾಗಿ ನಮ್ಮ ದೇಶದ ಚರಿತ್ರೆಯಲ್ಲಿ ಪ್ರಜ್ವಲಿಸುತ್ತಾರೆ !

ಹತ್ತಿ, ಭಾರತದೇಶಕ್ಕೆ ದೇವರು ಕೊಟ್ಟ ಮಹತ್ವದ ಕೊಡುಗೆ. ಎಲ್ಲಿಲ್ಲಿಯೂ ಬೆಳೆಯಬಹುದಾದ, ಪರಿಶುದ್ಧವಾದ versatile ಆದ, ತಂತು ( Fibre) ಮತ್ತೊಂದಿಲ್ಲ. ಎಂದೆಂದಿಗೂ ಅದರ ಭಂಡಾರ ಖಾಲಿಯಾಗುವುದಿಲ್ಲ. ಅದು ನಮ್ಮ ದೇಶದ ಅಮರ ತಂತು ! ಹಾಗೂ ರಾಷ್ಟ್ರೀಯ ತಂತು. ಹತ್ತಿ- ನೀರನ್ನು, ಬೆವರನ್ನು ಹೀರುವ ಶಕ್ತಿ ಹೊಂದಿದ್ದು, ನಮ್ಮಂತಹ "ಉಷ್ಣ ಕಟೀ ದೇಶ "ಕ್ಕೆ ಹೇಳಿಮಾಡಿಸಿ ಬೆಳಸಿದ ಫೈಬರ್. ಬೇಸಿಗೆಯಲ್ಲಿ ಹತ್ತಿ ಬಟ್ಟೆಗಳು ಉಡಲು ಮುದಕೊಡುತ್ತವೆ, ಮತ್ತು ತಂಪಾಗಿರುತ್ತವೆ. ಇದನ್ನು ನಾವೆಲ್ಲಾ ಅನುಭವಿಸಿದ್ದೇವೆ !

  • Login or register to post comments
  • link
  • Email this ಪ್ರತಿಕ್ರಿಯೆ
April 17, 2007 - 12:25pm — Sunil Jayaprakash

ಕಾರ್ಪಸ ಮತ್ತು ಕಲಾಪತ್ತು

Sunil Jayaprakash's picture

ವೆಂಕಟೇಶರೇ ನಿಮ್ಮ ಅನುಭವ ನಮಗೆ ಒಂದು ಒಳ್ಳೆಯ ಓದನ್ನು ನೀಡಿತು. ಅಂದ ಹಾಗೆ "ಕಾರ್ಪಸ" ಮತ್ತು "ಕಲಾಪತ್ತು" ಇವುಗಳ ಬಗ್ಗೆ ಏನಾದರೂ ತಿಳಿಸಿಕೊಡಲು ಸಾಧ್ಯವೇ ?

  • Login or register to post comments
  • link
  • Email this ಪ್ರತಿಕ್ರಿಯೆ
April 17, 2007 - 12:56pm — ASHOKKUMAR

Re: ಡೆನಿಮ್ ಮತ್ತು ಹತ್ತಿ

ASHOKKUMAR's picture

ಜೀನ್ಸ್ ಪ್ಯಾಂಟು-ಶರ್ಟಿಗೆ ಬಳಸುವ ಡೆನಿಮ್ ಬಟ್ಟೆ ಹತ್ತಿ ಬಟ್ಟೆಯೇ ಅಥವಾ ವ್ಯತ್ಯಾಸ ಇದೆಯೇ? ಕೃತಕ ನೂಲಿನ ಮಿಶ್ರಣವಿದೆಯೇ?

  • Login or register to post comments
  • link
  • Email this ಪ್ರತಿಕ್ರಿಯೆ
April 17, 2007 - 1:18pm — mahesha

ಜೀನ್ಸು

mahesha's picture

ನಂಗೆ ಹತ್ತಿ, ಖಾದಿ, ಕುರ್ಪಾಸ, ಕಲಾಪತ್ತು ಬಗ್ಗೆ ಜಾಸ್ತಿ ಗೊತ್ತಿಲ್ಲ.

ಆದರೆ ನಾನು ತೊಡೋ, ಜೀನ್ಸು ೧೦೦% ಕಾಟನ್ ( ಗುಂಡಿ, ಜಿಪ್, ಬಿಟ್ಟು Smiling )
======================================

  • Login or register to post comments
  • link
  • Email this ಪ್ರತಿಕ್ರಿಯೆ
April 20, 2007 - 11:14pm — venkatesh

ಉ:

venkatesh's picture

ಜೀನ್ ಎಂದರೆ ಹತ್ತಿ ಬಟ್ಟೆ ಎಂದರ್ಥ. ಅದೂ ಸಾಮಾನ್ಯ ತೆಳ್ಳನೆಯಲ್ಲ." ಹೆವ್ವಿ- ಡ್ಯೂಟಿ "ಬಟ್ಟೆ. ಇದು ಜೀನ್ ಗೆ ಇರಬೇಕಾದ ಲಕ್ಷಣ. ಈಗಲೂ ಹೆಚ್ಚು ಕಡಿಮೆ ಇದನ್ನೇ ಫಾಲೋ ಮಾಡ್ತಿದಾರೆ. ಗಂಡು ಹುಡಗರೂ ಹುಡುಗಿಯರಂತೆ ದಪ್ಪ ರಗೆಡ್ ಸ್ಟ್ರಕ್ಚರ್ (Rugged ) ಇಷ್ಟಪಡಲ್ಲ. ಹ್ಯಾಗೂ "ಲಯೊಸಿಲ್ "ನಂತಹ ಫೈಬರ್ಗಳು ಮಾರುಕಟ್ಟೆಗೆ ಬಂದಿವೆ. ಹತ್ತಿಗೆ ಇರಬೇಕಾದ ತಂಪುಗುಣ, ಆರ್ದ್ರತೆ ಅಂದರೆ ನೀರು-ಬೆವರು ಹೀರುವ ಶಕ್ತಿ ಮತ್ತು ತಾಳಿಕೆ -ಬಾಳಿಕೆ, ಹತ್ತಿಯಂತೇ ಇದ್ದು -ಅದು ಫೇಮಸ್ ಆಗಿದೆ. ಬಟ್ಟೆಯ ಫಿನಿಷಿಂಗ್ ಮುಖ್ಯ,. ಸ್ಟೋನ್ ವಾಶ್ ಇತ್ಯಾದಿ.. ಅದಕ್ಕೆ ರ್ಯಾಗ್ Rags ನ ತರಹ ಕಾಣ್ಸೋದ್ ಮುಖ್ಯ. ಟ್ರೌಸರ್ಸ್ ಗೆ ೮ ರಿಂದ ೧೪ ಕೌಂಟ್ ಬಳಸಿದರೆ, ( 8s to 14s count) ಶರ್ಟಿಗೆ ೧೮ ರಿಂದ ೨೦ ರವರೆಗೆ ( 18s to 20s) ಕೌಂಟ್ ಬಳಸುವುದು ರೂಢಿಯಲ್ಲಿದೆ. ಅರ್ವಿಂದ್ ಮಿಲ್ಸ್ ಅಹ್ಮದಾಬಾದ್, ಬೃಹತ್ ಡೆನಿಮ್ ತಯಾರುಮಾಡುವ ಕೇಂದ್ರ. ಅದಕ್ಕೆ ಬೇರೆ ಯಂತ್ರೋಪಕರಣಗಳೇ ಇವೆ. ಉಡುಪು ಮಾಡಲು ಗುತ್ತಿಗೆ ಪಡೆದ ಭಾರತೀಯ ಕಂ. ಗಳು ಇದನ್ನು ಮಾಡಿಕೊಡುತ್ತವೆ.

  • Login or register to post comments
  • link
  • Email this ಪ್ರತಿಕ್ರಿಯೆ
April 20, 2007 - 11:29pm — ASHOKKUMAR

ಉ:

ASHOKKUMAR's picture

thanks a lot.
ಒಂದು ವಿಷಯ ಹೇಳಬಹುದಾದರೆ ಹೇಳಿ. ಇಷ್ಟು ಅಧಿಕಾರವಾಣಿಯಿಂದ ಬಟ್ಟೆಗಳ ಬಗ್ಗೆ ಬರೆಯುವ ಗುಟ್ಟು ಏನು?

  • Login or register to post comments
  • link
  • Email this ಪ್ರತಿಕ್ರಿಯೆ
April 21, 2007 - 7:12am — venkatesh

ಉ:

venkatesh's picture

ಅಶೋಕ್, ಅದು ಅತ್ಯಂತ ಸುಲಭದ ಮಾತು. ನಾನು ಒಬ್ಬ ಟೆಕ್ಸ್ಟಲ್ ಇಂಜಿನಿಯರ್- ನಿಮಗೆ ತಿಳಿದಂತೆ. ೩೭ ವರ್ಷದ ಬಹುದೊಡ್ಡಪಾಲಿನ ಸೇವಾವೃತ್ತಿ, ಈ ನಿಟ್ಟಿನಲ್ಲೇ ಆದದ್ದು. ಒಂದು ವೇಳೆ ನಾನು ಇಷ್ಟೂ ಹೇಳಲಿಲ್ಲ ಅಂತಿಟ್ಕೊಳ್ಳಿ , ನೀವೇ ನನ್ಗೆ ತರಾಟೆಗೆ ತೆಗೆದ್ಕೊಳ್ತಿದ್ರಿ. ಅಲ್ವೆ. ಅನ್ನ- ಬಟ್ಟೆ, ಇರಕ್ಕೆ ಒಂದ್ ನೆಲೆ- ಮಿಲಿಯಗಟ್ಟಲೆ ಕಾಲದಿಂದ ಮನುಕುಲದ ಪರಂಪರೆಗೆ ಬಂದಿದೆ. ಅದರಲ್ಲೇ ನಾವು ಮುಂದುವರೀತಿದೀವಲ್ಲ. ಹತ್ತಿ -ಉದ್ಯೋಗ, ಸಂಶೋಧನೆಯ ಉಗಮ ಸ್ಥಾನವಾದ ಮುಂಬೈನ ಮಾಟುಂಗಾದಲ್ಲಿರುವ, Central Institute of Research on Cotton Technology (CIRCOT ) ’ತಾಯಿಮನೆ ’ಯಲ್ಲಿ ಕೆಲ್ಸ ಮಾಡಿದ್ದರ ಫಲ.

ಭಾರತದಲ್ಲಿ ಹತ್ತಿಬಟ್ಟೆಗಳ ಬಗ್ಗೆಯಾಗಲಿ, ಟೆಕ್ಸ್ಟೈಲ್ಸ್ ಬಗ್ಗೆಯಾಗಲಿ ಇನ್ನೂ ಯಾವ ಸಂಸ್ಥೆಯೂ ಆಗ ( ೧೯೨೫) ರಲ್ಲಿ ಹುಟ್ಟಿರಲಿಲ್ಲ. ನಾವೇ ಮೊದಲಿಗರು. ನಮ್ಮ ಮೈಸೂರಿನವರೆ ಆದ ಡಾ. ಸಿ. ನಂಜುಂಡಯ್ಯನವರು, ಬೊಂಬಾಯಿನ Bombay Textile Research Association,( BTRA ) ನ್ನು ಹುಟ್ಟುಹಾಕಿ ಬೆಳಸಿದ "ಘಟಾನುಘಟಿ ವ್ಯಕ್ತಿ ". ಅವರು ನಮ್ಮಲ್ಲಿ ಡೈರೆಕ್ಟರ್ ಆಗಿದ್ರು. ಮೇಲಾಗಿ ಅವ್ರು ಯಾರ್ ಗೊತ್ತೆ ? ಡಾ. ಸಿ. ವಿ. ರಾಮನ್ನರ ಅಚ್ಚು-ಮೆಚ್ಚಿನ ವಿದ್ಯಾರ್ಥಿ ! ಇನ್ನೇನಾದರು ಬೇಕಾದರೆ ಹೇಳಿ. ಸಂಕೋಚ ಪಟ್ಗೊಬೇಡಿ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗಿಡದಲ್ಲಿ ಹತ್ತಿ ಚೆನ್ನಾಗಿ ಪಕ್ವವಾಗಿ ತಾನೇ ಬಿರಿತು, ಶುಭ್ರವಾದ ಹಾಲಿನ ಬಿಳುಪಿನ ಹತ್ತಿ ಹೊರಹೊಮ್ಮಿದೆ ; ಇದು ಅಮೆರಿಕನ್ ಹತ್ತಿ !
  • ಎಲ್ಲರಿಗೂ ಸ್ವಾಗತ!
  • ಹತ್ತಿ ಕಾಯಿ ದಪ್ಪಕ್ಕೆ ಧೃಢವಾಗಿದ್ದಷ್ಟೂ ಒಳ್ಳೇದು. ಒಳ್ಳೆ ಹತ್ತಿ ಸಿಗತ್ತೆ !
  • ಫಾರಿನ್ ಪಾಲಿಸಿ: ಎಲ್ರೂ ಫಾರಿನ್...
  • ಬ್ಲಾಗ್ ಸ್ಪಾಟ್ ಬಳಕೆದಾರರಿಗೊಂದು ಕಹಿ ಸುದ್ದಿ
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ ಅಥವಾ ಭಯ ಪಡುವ ಕಾರಣವಿಲ್ಲ. ಅದು ನಿನ್ನ ಗುಲಾಮ. ನಿನ್ನ ಆಜ್ಞೆಯಂತೆ ನಡೆಯುತ್ತದೆ. ನೀನು ನಿಂತರೆ ಅದೂ ನಿಲ್ಲುವುದು, ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು.

— --- ವಿನೋಬಾ ಭಾವೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator