ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಸಮುದಾಯ › ಮಾಹಿತಿ ಫಲಕ

ಗೈಮ್ ಕನ್ನಡದಲ್ಲಿ ಲಭ್ಯ

January 29, 2007 - 4:01pm — hpn

gaim in Kannada

ಮುಕ್ತ ತಂತ್ರಾಂಶವಾದ - ಗೈಮ್ multi protocol instant messaging client ಈಗ ಕನ್ನಡದಲ್ಲಿ ಲಭ್ಯ. ಹಿಂದಿನ ವಾಕ್ಯದಲ್ಲಿ ಬರೆದ ಟೆಕ್ನಿಕಲ್ ಪದವನ್ನೋದಿ ಯಾರೂ ಮೂರ್ಛೆ ಹೋಗಿರಲಿಕ್ಕಿಲ್ಲ ಎಂದು ಭಾವಿಸಿ ಅದರರ್ಥ ವಿವರಿಸಲು ಪ್ರಯತ್ನಿಸುತ್ತೇನೆ:

ನಿಮ್ಮ ಕಂಪ್ಯೂಟರಿನಲ್ಲಿ ಯಾಹೂ ಮೆಸೆಂಜರ್ ಬಳಸೇ ಇರುತ್ತೀರ. ಇಲ್ಲದಿದ್ದರೆ ಗೂಗಲ್ ಟಾಲ್ಕ್ ಅಂತೂ ಬಳಸಿರುತ್ತೀರ. ಇವಕ್ಕೆ instant messaging ಎನ್ನುತ್ತಾರೆ. ಇಂತಹ ಹಲವು ಇನ್ಸ್ಟಂಟ್ ಮೆಸ್ಸೇಜಿಂಗ್ ಪ್ರೋಗ್ರಾಮುಗಳಾಗಿಬಿಟ್ಟರೆ ಪ್ರತಿಯೊಂದು ಪ್ರೋಟೋಕಾಲ್ ಗೂ (ಅಂದ್ರೆ ಯಾಹೂ, ಗೂಗಲ್, MSN, AOL, ICQ ಮುಂತಾದವಕ್ಕೆ) ನೀವು ತಲಾ ಒಂದೊಂದು ಪ್ರೋಗ್ರಾಮು install ಮಾಡಿಕೊಂಡು ಅವುಗಳೊಂದಿಗೆ ಗುದ್ದಾಡಬೇಕಾಗುತ್ತದೆ.
ನಿಮ್ಮ ಕೆಲವು ಸ್ನೇಹಿತರು ಯಾಹೂ ಬಳಸಿದರೆ ಮತ್ತು ಹಲವರು ಗೂಗಲ್ ಟಾಲ್ಕ್ ಬಳಸುತ್ತಿರುತ್ತಾರೆ.

ಗೈಮ್ ಈ ಪರಿಸ್ಥಿತಿಯನ್ನು ತಿಳಿಯಾಗಿಸುತ್ತದೆ. ಹೇಗೆ? ನಿಮಗೆ ಎಲ್ಲ ಪ್ರೋಟೋಕಾಲ್ ಗಳಿಗೂ ಒಂದೇ ಮೆಸ್ಸೆಂಜರನ್ನು ಒದಗಿಸಿ! ಉದಾಹರಣೆಗೆ, ಯಾಹೂ, ಎಮ್ ಎಸ್ ಎನ್, ಗೂಗಲ್ ಟಾಲ್ಕ್ ಎಲ್ಲಕ್ಕೂ ಒಂದೇ ಪ್ರೋಗ್ರಾಮು ಬಳಸಿ ನೀವು ನಿಮ್ಮ ಸ್ನೇಹಿತರೊಂದಿಗೆ ಚ್ಯಾಟ್ ಮಾಡಬಹುದು! "ನಿಜವೇ? ಹೀಗೂ ಇದೆಯೇ?" ಎಂದು ಹಲವರು ನನಗೆ ಕೇಳಿದ್ದುಂಟು. Smiling
ಕಳೆದ ಹಲವು ವರ್ಷಗಳಿಂದ ನಾನು ಮತ್ತು ನನ್ನ ಕೆಲವು ಲಿನಕ್ಸ್ ತಿಳಿದ ಸ್ನೇಹಿತರು ಇದನ್ನೇ ಬಳಸುತ್ತಾ ಬಂದಿದ್ದೇವೆ. ನಮಗಿದು ದಿನನಿತ್ಯದ ಸಂಗತಿ - ಹಾಗಾಗಿ ಇದರ ಬಗ್ಗೆ ಹೇಳುವಾಗ excitement usually ಕಡಿಮೇನೆ Smiling

ಅದೇನೆ ಇರಲಿ - ಗೈಮ್ ಲಿನಕ್ಸ್ ಮತ್ತು ವಿಂಡೋಸ್ ಎರಡರಲ್ಲೂ ಬಳಸಬಹುದಾದಂತ ತಂತ್ರಾಂಶ. ಉಪಯೋಗಿಸಿ ನೋಡಿ.

ಕನ್ನಡದಲ್ಲಿ ಗೈಮ್ ಕುರಿತು ಹೆಚ್ಚಿನ ಮಾಹಿತಿಗೆೆ ಕೆಳಗಿನ ಪುಟ ನೋಡಿ:
http://dev.sampada.net/wiki/Gaim_Kannada_Translation

ಅನುವಾದಗಳ Credits - http://translate.sampada.net ನಲ್ಲಿ ಅನುವಾದಗಳಲ್ಲಿ ತೊಡಗಿಕೊಂಡಿರುವ ಎಲ್ಲ ಉತ್ಸಾಹಿ ಕನ್ನಡಿಗರದ್ದು.

ಓದುಗರ ಗಮನಕ್ಕೆ: ಚಿತ್ರದಲ್ಲಿ ಸ್ನೇಹಿತರ ಪಟ್ಟಿಯಲ್ಲಿರುವ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಬ್ಲರ್ ಮಾಡಲಾಗಿದೆ. ಹಾಗೆಯೇ ಇರುತ್ತದೆ ಅಂದುಕೊಂಡುಬಿಡಬೇಡಿ ಮತ್ತೆ Sticking out tongue

‹ ಅಂತರ್ಜಾಲದಲ್ಲಿ ಕನ್ನಡ ರೇಡಿಯೋ ಇದು ಯಾಕೆ ಹಿಂಗೆ? ›
  • ಮಾಹಿತಿ ಫಲಕ
~.~
  • Login or register to post comments
  • 1202 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 29, 2007 - 4:19pm — ರಘುನಂದನ

Re: ಗೈಮ್ ಕನ್ನಡದಲ್ಲಿ ಲಭ್ಯ

ರಘುನಂದನ's picture

www.meebo.com ಎನ್ನುವ ಸೈಟೊಂದು ಈ ತರಹದ ಸರ್ವೀಸ್ ಕೊಡ್ತಾ ತುಂಬ ದಿನ ಆಗಿದೆ. ಇದರಲ್ಲಿ ಯೂನಿಕೋಡ್ ಬೆಂಬಲ ಸಹ ಇದೆ. ಅಂದ ಹಾಗೆ ಹೊಸ ಯಾಹುವಿನಲ್ಲೂ ಎಂ.ಎಸ್.ಎನ್ ಐಡಿ ಬಳಸಿ ಚಾಟ್ ಮಾಡಬಹುದು.

ಎನಗಿಂತ ಕಿರಿಯರಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 29, 2007 - 4:31pm — hpn

ಉ: ಗೈಮ್ ಕನ್ನಡದಲ್ಲಿ ಲಭ್ಯ

hpn's picture

ನಿಮಗೆ ಈ ವಿಚಾರ ಗೊತ್ತಿರಲಿಕ್ಕಿಲ್ಲ - ಮೀಬೋ in turn ಗೈಮ್ ಬಳಸುತ್ತದೆ Eye-wink

libgaim ಎಂಬೋದು ಮುಕ್ತವಾಗಿರಿಸಿರುವ ಲೈಬ್ರರಿ. ಅದನ್ನೇ ಬಳಸಿ meebo ಮತ್ತು ಇತರ ಅದೇ ರೀತಿಯ ಸರ್ವೀಸುಗಳು ಅಂತರ್ಜಾಲದಲ್ಲಿ ಲಭ್ಯ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 29, 2007 - 6:11pm — ರಘುನಂದನ

Re: ಉ: ಗೈಮ್ ಕನ್ನಡದಲ್ಲಿ ಲಭ್ಯ

ರಘುನಂದನ's picture

ಓಹೋ ಹೀಗಾ ಸಮಾಚಾರ! ಚೆನ್ನಾಗಿದೆ ಮುಕ್ತತಂತ್ರಜ್ಞಾನದ ಕ್ರಾಂತಿ. ಕನ್ನಡದ ಕಿಡಿ(ಗೇಡಿ)ಗಳು ಇಲ್ಲಿ ಸಾಕಷ್ಟು ಕಾಣುತ್ತಿರುವುದು ಸಂತಸದ ಸಂಗತಿ.

ಎನಗಿಂತ ಕಿರಿಯರಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 29, 2007 - 6:17pm — hpn

ಉ: ಗೈಮ್ ಕನ್ನಡದಲ್ಲಿ ಲಭ್ಯ

hpn's picture

ಏನು ಕಿಡಿಗೇಡಿತನ ನಿಮಗೆ ಕಂಡುಬಂದದ್ದು ಎಂಬುದನ್ನ ವಿವರಿಸಿ ಹೇಳಿ, ಇಲ್ಲಾಂದ್ರೆ ಓದುಗರು ತಪ್ಪು ತಿಳಿದುಕೊಂಡಾರು! Eye-wink

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 2, 2007 - 1:08am — ರಘುನಂದನ

Re: ಉ: ಗೈಮ್ ಕನ್ನಡದಲ್ಲಿ ಲಭ್ಯ: ಕಿಡಿಗೇಡಿತನ ;)

ರಘುನಂದನ's picture

ತುಂಬಾ ಕ್ರಿಯಾಶೀಲರಾದ ವ್ಯಕ್ತಿಗಳನ್ನು (ಸಾಮಾನ್ಯವಾಗಿ ಕಿರಿಯರನ್ನು) ಪ್ರೀತಿಯಿಂದ ಕಿಡಿಗೇಡಿಗಳು ಎಂದು ಕರೆಯುವುದು ರೂಢಿಯಲ್ಲವೇ? ಇವರು ಸುಮ್ಮನೆ ಕೂಡಲೊಲ್ಲರು. ಏನಾದರೊಂದನ್ನು ಮಾಡುತ್ತಲೇ ಇರಬೇಕು.ಪ್ರತಿಯಾಗಿ ಸುಮ್ಮನೆ ಕೂಡುವ ಮನೋಧರ್ಮಿಗಳು ಏನನ್ನೂ ಮಾಡಲು ಮುಂದುವರೆಯರು! ಸಾಧ್ಯವಾದಲ್ಲಿ ಇತರರು ಮಾಡಿದ ಕೆಲಸಗಳಲ್ಲಿ ಇಲ್ಲಸಲ್ಲದ ತಪ್ಪುಗಳನ್ನು ಹುಡುಕಿ ಕಟಕಿಯಾಡುವರು. (ಬಹುಶಃ ನಾನು ಈ ವರ್ಗಕ್ಕೆ ಸೇರಿರಬೇಕೆಂದು ನನಗೆ ಒಂದೊಂದು ಸಲ ಅನ್ನಿಸುತ್ತಿರುತ್ತದೆ)

ಇಲ್ಲಿ ಕಿಡಿ(ಗೇಡಿ)ಗಳು ಅಂತ ಅಂದಿದ್ದು ಹಲವಾರು ದೃಷ್ಟಿಕೋನಗಳಿಂದ.
ಅ) ಓಪನ್ ಸೋರ್ಸ್ ರಂಗದಲ್ಲಿ ಕನ್ನಡದ ಜ್ಯೋತಿಯನ್ನು ಹೊತ್ತಿಸಿದ "ಕಿಡಿಗಳು" ಇವರು.
ಬ)ಏನೂ ಇಲ್ಲದ ಜಾಗದಲ್ಲಿ ಸಾಕಷ್ಟು ಪ್ರಗತಿಯನ್ನು ಮೂಡಿಸಿದ್ದರೂ ಜಾಗತಿಕವಾಗಿ ಇದು ಇನ್ನೂ "ಕಿಡಿಯ" ರೂಪದಲ್ಲಿಯೇ ಇರುವುದು. ಇದೊಂದು ಪ್ರಖರ ತೇಜಃಪುಂಜವಾಗಬೇಕಲ್ಲವೇ?
ಕ)ಇನ್ನೂ ಹಲವಾರು ಭಾಷೆಗಳು ಇನ್ನೂ ಅತ್ಯಂತ ಶೈಶವಾಸ್ಥೆಯಲ್ಲಿಯೇ ತೆವಳುತ್ತಿರುವಾಗ ನಾವು "ಕಿಡಿಯ" ರೂಪದಲ್ಲಿಯಾದರೂ ಇದ್ದೇವಲ್ಲ ಎನ್ನುವ ಸಂತಸ.
ಡ)ಯಾವಾಗಲಾದರೊಮ್ಮೆ ನೈಜ ಕೇಡಿಗಳು ಕನ್ನಡಕ್ಕೆ ಅಪಚಾರ ಮಾಡಿದಾಗ ಅದನ್ನು ಪ್ರತಿಭಟಿಸಿ ಅವರ(ಅಪಚಾರ ಮಾಡಿದವರ) ಪಾಲಿನ ಕಿಡಿಗೇಡಿಗಳೂ ಹಾಗು "ಕೇಡಿ"ನ "ಕಿಡಿ"ಗಳೂ ಆಗಿದ್ದರಿಂದ ಕಿಡಿ(ಗೇಡಿ)ಗಳೆನ್ನುವ ಅಭಿಪ್ರಾಯಕ್ಕೆ ಬಂದೆ.
ಇ) ಕಿಡಿ(ಗೇಡಿ)ಗಳೇ ಪ್ರತಿಭಟಿಸಬೇಕಲ್ಲದೇ ಅಮುಲ್ ಬೇಬಿಗಳೆಂತು ಪ್ರತಿಭಟಿಸಿಯಾವು? ಹಾಗಾಗಿ ಕಿಡಿ(ಗೇಡಿ)ಗಳೇ ಉತ್ತಮರು

ಎನಗಿಂತ ಕಿರಿಯರಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 29, 2007 - 4:53pm — shreekant.mishrikoti

Re: ಗೈಮ್ ಕನ್ನಡದಲ್ಲಿ ಲಭ್ಯ:- ಡೌನ್‍ಲೋಡ್ ಹೇಗೆ ?

shreekant.mishrikoti's picture

ಹರಿಪ್ರಸಾದ ನಾಡಿಗರೇ ,

ತುಂಬ ಸಂತೋಷದ ವಿಷಯ.

ಆದರೆ ಡೌನ್ಲೋಡ್ ಹೇಗೆ ? ಎಲ್ಲಿದೆ ? ಲಿಂಕ್ / ಅನುಸ್ಥಾಪನೆ ಮತ್ತಿತರ ವಿವರ ಕೊಡಿ ,
ಬಳಸಿ ಸಂತೋಷಪಡುತ್ತೇವೆ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 29, 2007 - 6:12pm — hpn

ಉ: ಗೈಮ್ ಕನ್ನಡದಲ್ಲಿ ಲಭ್ಯ:- ಡೌನ್‍ಲೋಡ್ ಹೇಗೆ ?

hpn's picture

PO ಮೇಲೆ ತಿಳಿಸಿದಂತೆ ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.

ಗೈಮ್ ಇಲ್ಲಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.

ವಿವರವಾಗಿ ಬರೆಯುವವನಿದ್ದೆ - ಆದರೆ ಸಮಯವಿಲ್ಲ. ಒಳ್ಳೆಯದೇ - ತುಂಬ ಸುಲಭವಾಗಿಸಿಬಿಟ್ಟರೆ ಯಾರೂ ಕಲೆಯೋದಿಲ್ಲ - ಸ್ವಲ್ಪ ಜಟಾಪಟಿ ನಡೆಸಿ ಪ್ರಯತ್ನಿಸಿ ಕಲಿಯಿರಿ Eye-wink ಆಸಕ್ತಿ ಮೂಡುವುದೂ ಹಾಗೆಯೇ Eye-wink

ಸೂ: ಕನ್ನಡ ಅನುವಾದವನ್ನು ವಿಂಡೋಸ್ ಮೇಲೆ ಟೆಸ್ಟ್ ಮಾಡಿಲ್ಲ. ನನ್ನ ಲ್ಯಾಪ್ ಟಾಪ್ ವಿಂಡೋಸ್ ನಲ್ಲಿ ಬೂಟ್ ಮಾಡಿದರೆ ಬಳಸೋಕಾಗದೇ ಇರುವಷ್ಟು ಕೆಮ್ಮತ್ತೆ ಮತ್ತು ಅದೊಂದರಲ್ಲೆ ನನ್ನ ಹತ್ತಿರ ವಿಂಡೋಸ್ ಇರೋದು. ಯಾರಿಗಾದರೂ ಆಸಕ್ತಿಯಿದ್ದರೆ ಗೈಮ್ ನ ಇತ್ತೀಚೆಗಿನ ಆಕರ ಡೌನ್ಲೋಡ್ ಮಾಡಿಕೊಂಡು ಕನ್ನಡದ ಅನುವಾದಗಳೊೊಂದಿಗೆ installer ರೆಡಿ ಮಾಡಬಹುದು. .

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 31, 2007 - 2:42pm — shreekant.mishrikoti

Re: ಉ: ಗೈಮ್ ಕನ್ನಡದಲ್ಲಿ ಲಭ್ಯ:- ಡೌನ್‍ಲೋಡ್ ಹೇಗೆ ?

shreekant.mishrikoti's picture

ನಾಡಿಗರೇ ,

Quote:

PO ಮೇಲೆ ತಿಳಿಸಿದಂತೆ ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.

ಗೈಮ್ ಇಲ್ಲಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.

ವಿವರವಾಗಿ ಬರೆಯುವವನಿದ್ದೆ - ಆದರೆ ಸಮಯವಿಲ್ಲ. ಒಳ್ಳೆಯದೇ - ತುಂಬ ಸುಲಭವಾಗಿಸಿಬಿಟ್ಟರೆ ಯಾರೂ ಕಲೆಯೋದಿಲ್ಲ - ಸ್ವಲ್ಪ ಜಟಾಪಟಿ ನಡೆಸಿ ಪ್ರಯತ್ನಿಸಿ ಕಲಿಯಿರಿ ಆಸಕ್ತಿ ಮೂಡುವುದೂ ಹಾಗೆಯೇ

ಮೊದಲನೇಯದಾಗಿ ನೀವು ಕೊಟ್ಟ ಎರಡನೆಯ ಲಿಂಕೂ ಮೊದಲನೆಯದನ್ನೇ ಸಂಪರ್ಕಿಸುತ್ತದೆ .

ಎರಡನೆಯದಾಗಿ "ತುಂಬ ಸುಲಭವಾಗಿಸಿಬಿಟ್ಟರೆ ಯಾರೂ ಕಲೆಯೋದಿಲ್ಲ" ಯಾಕೋ ಸರಿ ಕಾಣುತ್ತಿಲ್ಲ.
ನಮ್ಮ ಈ ಲೋಕಲೈಸೇಷನ್ ಉದ್ದೇಶ ಜನ ಕಂಪ್ಯೂಟರ್ ಅನ್ನು ಬಳಸುವಲ್ಲಿ ಅನುಕೂಲವಾಗಲಿ ಎಂದೇ ಹೊರತು ತಾಂತ್ರಿಕ ವಿಷಯಗಳನ್ನು ಕಲಿಯಲಿ ಎಂದಲ್ಲ.

ಡೌನ್ಲೋಡ್ ಎಲ್ಲಿಂದ ಮಾಡಬೇಕು , ಹೇಗೆ ಕನ್ನಡಕ್ಕೆ ಒಗ್ಗಿಸಿಕೊಳ್ಳಬೇಕು ಇತ್ಯಾದಿಗಳನ್ನು ಸಾಮಾನ್ಯ ಜನ ಕಲಿಯುವದಾದರೆ ಲೋಕಲೈಸೇಷನ್ ಏಕೆ ಬೇಕು ? ಎಲ್ಲರಿಗೂ ಕಲಿಯುವ ತಾಳ್ಮೆ , ಶಕ್ತಿ , ಪುರುಸೊತ್ತು ಇರುವದೇ ? ಸ್ಕೂಟರ್ ಬಳಸಬೇಕಾದವನು ಅದರ ರಿಪೇರಿ , ಅದು ಹೇಗೆ ಕಾರ್ಯನಿರ್ವಹಿಸುತ್ತದೆ , ಅದರ ಭಾಗಗಳಾವುವು , ಇತ್ಯಾದಿ ತಿಳಿದುಕೊಳ್ಳಬೇಕೇ? . ಕ್ಲಚ್ಚು , ಗೇರು , ಬ್ರೆಕ್ಕು ಮುಂತಾದ ಭಾಗಗಳ ಬಳಕೆ ತಿಳಿದುಕೊಂಡರೆ ಸಾಕಲ್ಲವೇ ?

ಕಂಪ್ಯೂಟರ್ ಇಂಜಿನೀಯರುಗಳಿಗೆ ಈ ಮಾತು ಸರಿಹೋಗಬಹುದು. ಲೋಕಲೈಸೇಶನ್ ಲಾಭ ಪಡೆಯಬೇಕಾದ ಬಳಕೆದಾರರಿಗೆ ಹೀಗೆ ಹೇಳಲಾಗುವದಿಲ್ಲ. ಅಲ್ಲವೇ?

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 31, 2007 - 7:01pm — hpn

Re: ಉ: ಗೈಮ್ ಕನ್ನಡದಲ್ಲಿ ಲಭ್ಯ:- ಡೌನ್‍ಲೋಡ್ ಹೇಗೆ ?

hpn's picture

mishrikoti wrote:
ಮೊದಲನೇಯದಾಗಿ ನೀವು ಕೊಟ್ಟ ಎರಡನೆಯ ಲಿಂಕೂ ಮೊದಲನೆಯದನ್ನೇ ಸಂಪರ್ಕಿಸುತ್ತದೆ .

ಇದನ್ನು ಸರಿಪಡಿಸಲಾಗಿದೆ.

Quote:
ನಮ್ಮ ಈ ಲೋಕಲೈಸೇಷನ್ ಉದ್ದೇಶ ಜನ ಕಂಪ್ಯೂಟರ್ ಅನ್ನು ಬಳಸುವಲ್ಲಿ ಅನುಕೂಲವಾಗಲಿ ಎಂದೇ ಹೊರತು ತಾಂತ್ರಿಕ ವಿಷಯಗಳನ್ನು ಕಲಿಯಲಿ ಎಂದಲ್ಲ.

ವಿಷಯ ಅನುಕೂಲದ್ದಲ್ಲ. ಮರ ಹತ್ತಲು ಅನುಕೂಲ ಮಾಡಿಕೊಡುವುದು ಬೇರೆ. ಮರವನ್ನು ಹತ್ತಿಸಿ ಬರುವುದು ಬೇರೆ.*

ಎಲ್ಲ ಸುಲಭ ಮಾಡಿಬಿಟ್ಟರೆ ಉಳಿದವರು ಮೂರಾಣೆ ತಲೆಕೆಡಿಸಿಕೊಳ್ಳುವುದಿಲ್ಲ. ಸುಮ್ಮನೆ ಹಾಕ್ಕೊಳ್ತಾರೆ, ಬಳಸ್ತಾರೆ, "ಓಹೋ, ಚೆನ್ನಾಗಿದೆ ಅಂತಾರೆ", ತೆಗೆದು ಬಿಸಾಕ್ತಾರೆ. Passion ಉಳಿಯೋದಿಲ್ಲ. ಕೆಲವರು ಕೆಲಸ ಮಾಡ್ತಾನೇ ಇರ್ತಾರೆ - ಇನ್ನುಳಿದವರು ನೋಡ್ತಾನೇ ಇರ್ತಾರೆ.

ಅದೇ ಒಂದಷ್ಟು ಕಷ್ಟ ಪಟ್ಟ ಅನಂತರ ಕಂಡುಕೊಂಡರೆ "ಅಹಾ" ಎಂದುಕೊಂಡು ಸಂತಸಪಟ್ಟುಕೊಂಡು passionate ಆಗಿ ಬಳಸ್ತಾರೆ, ತಾವೂ ತೊಡಗಿಕೊಳ್ತಾರೆ. ಕಷ್ಟ ಪಟ್ಟು ಕಲೆತು ಮಾಡಿದ ಖುಷಿ ಸುಲಭವಾಗಿ ದೊರೆತದ್ದರಲ್ಲಿರುವುದಿಲ್ಲ.

ಹಾಗೆಯೇ ವಿಷಯ "ಎಲ್ಲ ಜನರ"ದ್ದಲ್ಲ ವಿಷಯ ನಮ್ಮಗಳದ್ದು - ಇದನ್ನು ಟೆಸ್ಟ್ ಮಾಡಿ ನೋಡಬೇಕಿರುವವರದ್ದು. ಹೊಸ ಲಿನಕ್ಸ್ ಆವೃತ್ತಿಗಳಲ್ಲಿ ಕನ್ನಡ ಲೊಕಾಲೆಯೊಂದಿಗೆ ಕನ್ನಡದಲ್ಲಿ ಗೈಮ್ ಹೇಗಿದ್ದರೂ ಬಂದೇ ಬರುತ್ತದೆ. ಆಗ ಅವರೇನೂ ಹೆಚ್ಚು ಮಾಡಬೇಕಾದದ್ದಿಲ್ಲ

Quote:
ಹೇಗೆ ಕನ್ನಡಕ್ಕೆ ಒಗ್ಗಿಸಿಕೊಳ್ಳಬೇಕು ಇತ್ಯಾದಿಗಳನ್ನು ಸಾಮಾನ್ಯ ಜನ ಕಲಿಯುವದಾದರೆ ಲೋಕಲೈಸೇಷನ್ ಏಕೆ ಬೇಕು ? ಎಲ್ಲರಿಗೂ ಕಲಿಯುವ ತಾಳ್ಮೆ , ಶಕ್ತಿ , ಪುರುಸೊತ್ತು ಇರುವದೇ ?

ಸಾಮಾನ್ಯ ಜನರು ಎಂದು ಬೌಂಡರಿ ಯಾಕೆ ಎಳೆಯಬೇಕು? ಜನ ಟಿವಿ ರಿಮೋಟು ಕಲಿಯೋದು ಕಷ್ಟ ಅಂತ ನೋಡೋದು ಬಿಟ್ಟಿದ್ದಾರೆಯೆ? ವಾಷಿಂಗ್ ಮೆಶೀನ್ ಬಳಸೋದು ಕಷ್ಟ, ತಾಳ್ಮೆ ಇಲ್ಲ ಅಂತ ಬಳಸೋದು ಬಿಟ್ಟಿದ್ದಾರೆಯೆ? ಕಾರಲ್ಲಿರೋ ಸ್ಟೀರಿಯೋ ಬಳಸೋದನ್ನ ಕಲಿಯೋದು ಬಿಟ್ಟಿದ್ದಾರೆಯೇ? ಮೊಬೈಲು ಬಳಸೋದನ್ನ ಕಲೆಯೋದು ಬಿಟ್ಟಿದ್ದಾರೆಯೆ?

ಇಂದಿನ ಜೀವನದಲ್ಲಿ ಯಾರಿಗೆ ತಾಳ್ಮೆಯಿದೆ? ಯಾರಿಗೆ ಪುರುಸೊತ್ತಿದೆ? ಎಲ್ಲರಿಗೂ ಪುರುಸೊತ್ತಿಲ್ಲ!
ನನಗೂ ಪುರುಸೊತ್ತಿಲ್ಲ, ನಿಮಗೂ ಪುರುಸೊತ್ತಿಲ್ಲ! ಆದರೆ ಇದರ ಬಗ್ಗೆ ಮಾತನಾಡುತ್ತಿದ್ದೇವೆಯಲ್ಲವೆ? ಯಾಕೆ? ನಮಗಿದರ ಬಗ್ಗೆ ಉತ್ಸಾಹ ಇದೆ, ನಮಗಿದು ಬೇಕು ಅನ್ಸತ್ತೆ, ಅದಕ್ಕೆ!

ಪುರುಸೊತ್ತು ಎಲ್ಲರೂ *ಮಾಡಿಕೊಳ್ಳಬೇಕು* - ಯಾರಿಗೂ‌ ಪುರುಸೊತ್ತಿರೋದಿಲ್ಲ. ಪುರುಸೊತ್ತಾಗೋದು ನಾವು ಕೆಲಸ ಮಾಡಲೇಬೇಕಾದಾಗ ಅಥವ ಅದರ ಬಗ್ಗೆ ನಮಗೆ ಉತ್ಸಾಹ ಇದ್ದಾಗ.

ಎಲ್ಲವೂ ಮಾಡಿಕೊಟ್ಟರೆ ಯಾರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸಮುದಾಯಗಳ ವಿಷಯವನ್ನು ಎತ್ತಿಕೊಂಡರೆ ನಾನು ಈ ಹಿಂದೆ ಹಲವು ಬಾರಿ ಹೇಳಿದಂತೆ - ಎಲ್ಲರದ್ದು ಒಂದಷ್ಟು ಜವಾಬ್ದಾರಿ ಇರುತ್ತದೆ. ಅದನ್ನು ಅವರವರುಗಳು ಮರೆಯಬಾರದು. ಪ್ರತಿಯೊಂದೂ ಕೆಲವರೇ ಮಾಡುವ ಸಮುದಾಯ "ಒಳ್ಳೆಯ ಸಮುದಾಯ" ಎನಿಸಿಕೊಳ್ಳುವುದಿಲ್ಲ.

ಶ್ಯಾಮ್ ಕಶ್ಯಪ್ ಸಮಾಜದಲ್ಲಿನ ನಮ್ಮ ಜವಾಬ್ದಾರಿಯ ಬಗ್ಗೆ ಒಂದು ಲೇಖನ ಬರೆದಿದ್ದರು. ಸಮುದಾಯಗಳಲ್ಲಿಯೂ ಹಾಗೆಯೇ. ಪ್ರತಿಯೊಬ್ಬರೂ ಅದನ್ನು ಸ್ವತಃ ಕಂಡುಕೊಳ್ಳಬೇಕು.

--
* ಕಂಪ್ಯೂಟರ್ ಕಲಿಯದೆ ಕಂಪ್ಯೂಟರ್ ಹೇಗೆ ಬಳಸುತ್ತೀರಿ? ತಂತ್ರಜ್ಞಾನದ ಸುಳಿವೇ ಇಲ್ಲದೆ ತಂತ್ರಜ್ಞಾನವನ್ನಾದರೂ ಹೇಗೆ ಬಳಸುತ್ತೀರಿ? ಕಲಿಯುವಿಕೆ ಬಿಟ್ಟು ಕೆಲಸ ಮಾಡಲಾಗದು. ಹಲವರನ್ನು ನೋಡಿದ್ದೇನೆ - ಅವರಿಗೆ ಲಿನಕ್ಸ್ ಬೇಕು, ಆದರೆ ಲಿನಕ್ಸ್ ಕಲಿಯಲು ಇಷ್ಟವಿಲ್ಲ. ಅವರು ಕೊಡುವ ಸಬೂಬು - "ನಮಗೆ ಕಲಿಯುವ ತಾಳ್ಮೆ ಇಲ್ಲ" ಅಂತಲೋ ಅಥವ "ನಮಗದು ತಲೆಗೆ ಹೋಗುವುದಿಲ್ಲ" ಅಂತಲೋ. ಕೆಲವರಂತೂ ಇನ್ನೂ pathetic - "ಲಿನಕ್ಸೇ ಸರಿ ಇಲ್ಲ" ಎಂದುಬಿಡುತ್ತಾರೆ - fox grape storyಯ ನರಿೆ ತರಾ!

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ದಿನಚರಿ - ೨೩/೧೨/೨೦೦೫
  • ನಿಮ್ಮ ಭಾವನೆಗಳ ಕನ್ನಡಿ ಹಿಡಿಯಿರಿ!
  • ಗೂಗಲ್ ಸರ್ಚ್ ಈಗ ಸಂಪೂರ್ಣ ಕನ್ನಡದಲ್ಲಿ ಲಭ್ಯ
  • ಕಳೆದ ವಾರದಲ್ಲಿ 'ಸಂಪದ'
  • ಅನುವಾದದಲ್ಲಿ ಪಾಲ್ಗೊಳ್ಳುತ್ತಿರುವವರಿಗೊಂದಷ್ಟು ಸಲಹೆಗಳು
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • "ಕನ್ನಡ+ತಮಿಳ್" = ?
  • ಸ್ತ್ರೀಸೌಂದರ್ಯ
  • ಯೋಗವಾಹಕ
  • ತೆರೆ, ತೆಱೆ
  • ಮಾತಿನ ಒಳಗುಟ್ಟು - ಡಾ. ಡಿ.ಎನ್.ಶಂಕರಬಟ್ಟರ ಹೊಚ್ಚ ಹೊಸ ಹೊತ್ತಗೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • roshan_netla
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:38pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
  • uniquesupri
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 24, 2008 - 5:23pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:13pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:06pm
  • keerthi2kiran
    ಉ: ನವ್ಯ, ನವೋದಯ, ಬಂಡಾಯ.....
    July 24, 2008 - 5:05pm
  • mahesha
    ಉ:
    July 24, 2008 - 5:01pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:01pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:00pm
ಇನ್ನಷ್ಟು


ನಂಬಿದಂತಿರಬೇಕು, ನಂಬದಲೆ ಇರಬೇಕು |
ನಂಬಿದವ ಕೆಟ್ಟ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator