ಹೊಸ ಸದಸ್ಯನೊಬ್ಬನ ಸ್ವಗತವು
ಹೆಸರು ಪ್ರಶಾಂತ ಪಂಡಿತ. ಮೂಲ ಉತ್ತರಕನ್ನಡ. ಸಧ್ಯಕ್ಕೆ ಬೆಂದಕಾಳೂರಿನಲ್ಲಿ ಉದ್ಯೋಗ, ವಾಸ. ಮಿತ್ರರೊಂದಿಗೆ lacefilms ಎಂಬ ಚಿತ್ರಸಮಾಜದಲ್ಲಿ ಸಕ್ರಿಯ ಪಾತ್ರ (www.lacefilms.org)
ಸಂಪದದಲ್ಲಿ ಚರ್ಚಿಸುವ, ಬರೆಯುವ ಇಚ್ಛೆಯಿದೆ.

- Login or register to post comments
- 1335 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಸ್ವಾಗತ
ಪ್ರಶಾಂತ್, ಸಂಪದದಲ್ಲಿ ನಿಮಗೆ ಹೃತ್ಪೂರ್ವಕ ಸ್ವಾಗತ. 'ಬರೆಯುವ ಇಚ್ಛೆ' ಬರವಣಿಗೆಯಾಗಿ ಬೇಗ ಪರಿವರ್ತನೆ ಹೊಂದಲಿ ಎಂದು ಆಶಿಸುತ್ತೇನೆ.
ಲೇಸ್ ಫಿಲ್ಮ್ಸ್ ಪುಟ ನೋಡಿದೆ. ಕಾನ್ಸೆಪ್ಟ್ ಚೆನ್ನಾಗಿದೆ. ಅಷ್ಟಾಗಿ ಓದಲಾಗಲಿಲ್ಲವಾದ್ದರಿಂದ ಈ ಪ್ರಶ್ನೆ ಇಲ್ಲಿಯೇ ಹಾಕುತ್ತಿದ್ದೇನೆ. ಚಿತ್ರಗಳ ಪ್ರದರ್ಶನ ನಡೆಯುವುದು ಎಲ್ಲಿ? ನನಗೂ ತಿಳಿಸಿದರೆ, ಸಮಮನಸ್ಕರಾದ ನನ್ನ ಕೆಲವು ಸ್ನೇಹಿತರೊಂದಿಗೆ ಈ ವಿಷಯವನ್ನು ಹಂಚಿಕೊಳ್ಳುವೆ. ಎಲ್ಲರೂ ಭೇಟಿ ನೀಡಬಹುದು. ಅಕಿರಾ ಕುರೊಸಾವಾರವರ ಚಿತ್ರಗಳನ್ನು ನೋಡಿದ್ದೀರ?
--
"ಹೊಸ ಚಿಗುರು, ಹಳೆ ಬೇರು"
ಧನ್ಯವಾದ
ನಾಡಿಗ್ ರವರೆ,
ಲೇಸ್ ಚಿತ್ರಸಮಾಜದ ಬಗೆಗಿನ ನಿಮ್ಮ ಆಸಕ್ತಿಗೆ ಧನ್ಯವಾದಗಳು. ಕಳೆದ 3 ವರ್ಷಗಳಿಂದ ಸುಚಿತ್ರ ಫಿಲ್ಮ್ ಸೊಸೈಟಿ ಆವರಣದಲ್ಲಿ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದೇವೆ. ಅಕಿರಾ ಕುರೊಸಾವಾನ ಚಿತ್ರಗಳನ್ನು ನೋಡಿದ್ದೇವೆ, ಅದರ ಬಗ್ಗೆ ಚರ್ಚಿಸಿದ್ದೇವೆ. (http://www.lacefilms.org/screening.asp). ನೀವೂ ಬನ್ನಿ, ಸ್ನೇಹಿತರನ್ನೂ ಕರೆತನ್ನಿ.
ವೈಶಿಷ್ಟ್ಯ ಮತ್ತು ವಿಶೇಷತೆ
ವಿಶೇಷ ಎಂಬ ಪದ ಸಂಸ್ಕೃತದ ವ್ಯಾಕರಣದ ನಿಯಮದಂತೆ ವಿಶಿಷ್ಟ ಅಥವ ವೈಶಿಷ್ಟ್ಯಎಂದಾಗುತ್ತದೆ. ವೈಶಿಷಟ್ಯತೆ, ಆಥವ ವಿಶಿಷ್ಟತೆ ಎಂದಲ್ಲ. ಕನ್ನಡದ ಬಳಕೆಯಲ್ಲಿ ತೆಗೆದುಕೊಂಡಾಗ ವಿಶೇಷತೆ ಎಂದಾಗುತ್ತದೆ. ವೈಶಿಷ್ಟ್ಯ, ವಿಶಿಷ್ಟ, ವಿಶೇಷತೆ ಸರಿ. ಆದರೆ ವೈಶಿಷಟ್ಯತೆ ಅಲ್ಲ. ಆದರೂ ಕನ್ನಡ ಜನ ಹಾಗೂ ಬಳಸುತ್ತಿದ್ದಾರೆ. ಬಳಕೆಯಲ್ಲಿರುವುದೆಲ್ಲವೂ ಸರಿಯೇ ಅಲ್ಲವೇ? ಅರ್ಥವಾಗುವುದು ಮುಖ್ಯ.
ಬನ್ನಿ
ಬನ್ನಿ ಪ್ರಶಾಂತ್, ನಿಮ್ಮನ್ನು ಸಂಪದಕ್ಕೆ ಸ್ವಾಗತಿಸುವೆ. ಕಲಾ ಪ್ರಪಂಚದ ಬಗ್ಗೆ ನಮಗೆಲ್ಲ ಪರಿಚಯ ಮಾಡಿಕೊಡಿ. ವೈವಿಧ್ಯಮಯ ಸದಸ್ಯರುಗಳಿರುವುದು ನಮ್ಮ ಸಂಪದದ ವಿಶೇಷತೆ.
---
ತವಿಶ್ರೀನಿವಾಸ
ಯಾವುದು ಸರಿ ?
ವಿಶೇಷತೆ ಸರಿಯೋ ಅಥವಾ ವೈಶಿಷ್ಟತೆಯೋ?
~ನಾಗು.
ವೈಶಿಷ್ಟತೆ
ಬಹುಶಃ ವೈಶಿಷ್ಟತೆ.
--
"ಹೊಸ ಚಿಗುರು, ಹಳೆ ಬೇರು"
ವೈಶಿಷ್ಟ್ಯತೆ
ನನಗೆ ತಿಳಿದ ಹಾಗೆ ವಿವಿಧ, ವಿವಿಧತೆ ಹೇಗೆ ವೈವಿಧ್ಯತೆ ಆಗುವುದೋ ಹಾಗೇ ವಿಶೇಷ, ವಿಶೇಷತೆ, ವೈಶಿಷ್ಟ್ಯತೆ ಆಗುವುದು. (ಹೆಚ್ ಪಿ ಎನ್ ತಿಳಿಸಿರುವುದಕ್ಕೆ ಒಂದು ಯ ಕಾರ ಸೇರಬೇಕು ಅನ್ನಿಸುತ್ತದೆ.)
---
ತವಿಶ್ರೀನಿವಾಸ
ಕರೆಕ್ಟು :)
ನೀವು ಹೇಳಿದ್ದು ಕರೆಕ್ಟು. ಸಮಯ ಉಳಿಸ ಹೋಗಿ ಇಲ್ಲಿಂದ ಕಟ್ಟು ಪೇಸ್ಟು ಮಾಡಿದ್ದರಿಂದ ತಪ್ಪಾದದ್ದು
--
"ಹೊಸ ಚಿಗುರು, ಹಳೆ ಬೇರು"
ಹೆಚ್ಚಾಗೈ"ತೆ"
ಈಗಾಗಲೇ ಓ ಎಲ್ ಎನ್ ಅವರು ಬರೆದಂತೆ ವೈಶಿಷ್ಟ್ಯ ಸರಿ. ಈ ಅತಿಯಾದ "ತೆ" ಸೇರಿಸುವ ಚಾಳಿಯ ಬಗ್ಗೆ ನಾನು ಈಗಾಗಲೆ ಸಂಪದದಲ್ಲಿ ಬರೆದಿದ್ದೇನೆ. ಅದನ್ನು ಇಲ್ಲಿ ಓದಬಹುದು.
ಸಿಗೋಣ,
ಪವನಜ
-----------
Think globally, Act locally
ಖಂಡಿತ
ಶ್ರೀನಿವಾಸ್, ನಿಮ್ಮ ಬರಹಗಳನ್ನು ಒಂದೊಂದಾಗಿ ಓದುತ್ತಿದ್ದೇನೆ. ವೆಬ್ ಸೈಟ್ ನಲ್ಲಿ ಮಾಸಪತ್ರಿಕೆ ನಡೆಸುವ ಕ಼ಷ್ಟ ತಿಳಿದಿದೆ. ನಿಮ್ಮ ಪ್ರಯತ್ನಕ್ಕೆ ನನ್ನ ಶುಭಹಾರೈಕೆಗಳು.
ನನಗೆ ತಿಳಿದದ್ದು, ನನ್ನ ಹುಡುಕಾಟದಲ್ಲಿ ಪಡೆದದ್ದು ಇವನ್ನೆಲ್ಲ ಖಂಡಿತ ಹಂಚಿಕೊಳ್ಳುವೆ.
- ಪ್ರಶಾಂತ
ಪ್ರಶಾಂತರಿಗೆ ಸ್ವಾಗತ
ಬನ್ನಿ ಬನ್ನಿ ಪ್ರಶಾಂತರೆ. ನಿಮ್ಮಿಂದ ಕೆಲವು ಲೇಖನಗಳೂ ಬರಲಿ. ನಿಮ್ಮ ಮನೆಯ ಗಣಕದಲ್ಲಿ ಯುನಿಕೋಡ್ ಬೆಂಬಲ ಸ್ಥಾಪಿಸಿದಿರೇ? ನಾನು ಕಳುಹಿಸಿದ ಈಮೈಲ್ ಉಪಯುಕ್ತವಾಗಿತ್ತೇ? ಇನ್ನೇನಾದರೂ ಸಹಾಯ ಬೇಕಿದ್ದರೆ ಖಂಡಿತ ಕೇಳಿ.
ಸಿಗೋಣ,
ಪವನಜ
-----------
Think globally, Act locally
ಲಿನಕ್ಸಗೆ ಜಯವಾಗಲಿ !
ಪವನಜರೇ,
sampada.net/fonthelp ನಲ್ಲಿ ಸೂಚಿಸಿದಂತೆ ನನ್ನ ವಿಂಡೋಸ್ 2000ದಲ್ಲಿ ಯುನಿಕೋಡ್ ಕನ್ನಡ ಸ್ಥಾಪಿಸಲು ಪ್ರಯತ್ನಿಸಿದೆ. ಅದು ಯಾವ cdಯನ್ನೂ ಬೇಡದೇ ಹಿಂದಿಯನ್ನು ಮಾತ್ರ ಸ್ಥಾಪಿಸಿತು. ನಾನೇ cd ಹಾಕಿ ನಾನಾ ರೀತಿಯ ಸರ್ಕಸ್ ಮಾಡಿದೆ, ಪ್ರಯೋಜನವಾಗಲಿಲ್ಲ. ಕಡೆಗೆ ಲಿನಕ್ಸಗೆ ಶರಣಾದೆ. ಎರಡೇ ನಿಮಿಷದಲ್ಲಿ ಕನ್ನಡದ ಸ್ಥಾಪನೆಯಾಯ್ತು. ಈಗ ಈ ಪತ್ರ ಮೊಝಿಲ್ಲಾದಿಂದ ಬರೆಯುತ್ತಿದ್ದೇನೆ.
- ಪ್ರಶಾಂತ
ವಿಂಡೋಸ್ 2000 ಮತ್ತು ಕನ್ನಡ
ವಿಂಡೋಸ್ 2000 ದಲ್ಲಿ ಕನ್ನಡ ಯುನಿಕೋಡ್ ಬೆಂಬಲ ಇಲ್ಲ. ಆದರೆ ಹಿಂದಿ ಮತ್ತು ತಮಿಳು ಇವೆ. ನೀವು ಈಗಾಗಲೇ ಹಿಂದಿ ಬೆಂಬಲ ಚಾಲನೆಗೊಳಿಸಿದ್ದೀರಿ. ಕನ್ನಡದ ಕೀಲಿಮಣೆಯನ್ನು ಹೊರಗಡೆಯಿಂದ ಅಳವಡಿಸಿಕೊಳ್ಳಬಹುದು. ಅದಕ್ಕಾಗಿ ನೀವು ಐಬಿಎಂನವರ ತಂತ್ರಾಂಶವನ್ನು ಬಳಸಿ. ಮುಂದಿನದು ಫಾಂಟ್. ನೀವು ತುಂಗ ಅಥವಾ ಇತರೆ ಯಾವುದೇ ಕನ್ನಡ ಓಪನ್ ಟೈಪ್ ಫಾಂಟ್ ಅಳವಡಿಸಿಕೊಳ್ಳಿ. ಇಲ್ಲಿಗೆ ನಿಮ್ಮ ಸಿದ್ಧತೆ ಪೂರ್ಣ.
ಸಿಗೋಣ,
ಪವನಜ
-----------
Think globally, Act locally
ಅಪೂರ್ಣ ಮಾಹಿತಿ?
ಹಾಗಾದರೆ sampada.net/fonthelp ನಲ್ಲಿರುವುದು ಅಪೂರ್ಣ ಮಾಹಿತಿಯಲ್ಲವೇ?
ಇರಬಹುದು
ಇರಬಹುದು
ವಿನ್ ೨೦೦೦ ಬಳಕೆದಾರರೇ ಅದನ್ನು ಸರಿಪಡಿಸಲು ಸಹಾಯ ಮಾಡಬೇಕು. ನನ್ನ ಬಳಿ ವಿನ್ ೨೦೦೦ ಇಲ್ಲವಾದ್ದರಿಂದ ಸದಸ್ಯರೊಬ್ಬರು ಕಳುಹಿಸಿಕೊಟ್ಟ ಮಾಹಿತಿಗೆ ಮೊರೆಹೋದೆ. ಅದನ್ನು ಸರಿಪಡಿಸಿ ಕಳುಹಿಸಲಾದಲ್ಲಿ ದಯವಿಟ್ಟು ಕಳುಹಿಸಿ.
- ಹೆಚ್ ಪಿ
--
"ಹೊಸ ಚಿಗುರು, ಹಳೆ ಬೇರು"