ಸಂಪದ - ಜನವರಿ ತಿಂಗಳ ಅಂಕಿ ಅಂಶಗಳು
'ಸಂಪದ'ದ ಜನವರಿ ತಿಂಗಳ ಅಂಕಿ ಅಂಶ ಹೀಗಿದೆ:
* Total hits recorded: 1,078,408
( ಒಂದು ಮಿಲಿಯನ್ ಪಾರು ಮಾಡಿದ್ದೇವೆ
)
* Total number of unique visitors: 1,59,959
* Average hits per day: 34,787
ಅತಿ ಹೆಚ್ಚು ಟ್ರಾಫಿಕ್ ರೆಕಾರ್ಡ್ ಆಗಿರುವುದು ಜನವರಿ 16ರಂದು.
ಹೆಚ್ಚು ಡೌನ್ಲೋಡ್ ಮಾಡಲ್ಪಟ್ಟ Podcast ಕೆ ಪಿ ಪೂರ್ಣಚಂದ್ರ ತೇಜಸ್ವಿಯವರೊಂದಿಗಿನ ಮಾತುಕತೆ. (ಕಳೆದ ತಿಂಗಳು ೧೦೭ ಬಾರಿ ಡೌನ್ಲೋಡ್ ಆಗಿದೆ). ಟಿ ಎನ್ ಸೀತಾರಾಮ್ ರವರ ಸಂದರ್ಶನ ೮೫ ಬಾರಿ ಡೌನ್ಲೋಡ್ ಮಾಡಲ್ಪಟ್ಟಿರುವುದರಿಂದ ಎರಡನೇ ಜನಪ್ರಿಯ Podcast ಎನ್ನಬಹುದು ![]()
* http://sampada.net/fonthelp ಕಳೆದ ತಿಂಗಳ ಜನಪ್ರಿಯ ಪುಟ - ದಿನಕ್ಕೆ ಸರಾಸರಿ ೪೬೫ hits ರೆಕಾರ್ಡ್ ಆಗಿದೆ. ![]()
'ಸಂಪದ'ದಲ್ಲಿನ ಕಳೆದ ಒಂದೂವರೆ ವರ್ಷಗಳಲ್ಲಿನ ಜನಪ್ರಿಯ ಪುಟಗಳ ಪಟ್ಟಿ ಇಲ್ಲಿ ಲಭ್ಯವಿದೆ.

- Login or register to post comments
- 711 hits
- Email this forum





RSS:
ಮಿಲಿಯನ್ ಹಿಟ್ಸ್ ದಾಟಿದ ಆನಂದ
"....ಒಂದು ಮಿಲಿಯನ್ ಪಾರು ಮಾಡಿದ್ದೇವೆ "
ಬಹಳ ಸಂತೋಷವಾಗುತ್ತಿದೆ. ಸವಿಗೂ ಮಿಕ್ಕು ಸವಿ. ಕನ್ನಡಕ್ಕಾಗಿನ ನಮ್ಮ ಧ್ಯೇಯಗಳು ಹೀಗೆಯೇ ಮುಂದುವರೆದರೆ ಒದೆತಗಳು
ಮತ್ತೂ ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ.
ಉ: ಮಿಲಿಯನ್ ಹಿಟ್ಸ್ ದಾಟಿದ ಆನಂದ
ಛೆ ಛೆ! ಒದೆತವೆ?
Hits ಅನ್ನೋದಕ್ಕೆ 'ಒದೆತ' ಅನ್ನೋದು ಬಹಳ ಕೆಟ್ಟ ಅನುವಾದ. ನಾವು ಇಂಗ್ಲೀಷಿನಲ್ಲಿ "hit", "touch" ಅನ್ನೋದನ್ನ ಟೆಕ್ನಿಕಲ್ contextನಲ್ಲಿ ಬಳಸೋವಾಗ "ಒದಿಯೋದು", "ಮುಟ್ಟೋದು" ಅಂತಂದ್ಕೊಳ್ತೀವಾ?
ಹಾಗಾಗ್ಬಿಟ್ಟು ಪಾಪ ದಿನಾ ಒದೆಗಳು ತಿಂದ್ರೆ Server ಪಾಡು ಏನಾದೀತು?
ಮಿಲಿಯನ್ ಗಟ್ಟಲೆ 'ಒದೆತ'ಗಳು ಬೇರೆ!
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಉ: ಮಿಲಿಯನ್ ಹಿಟ್ಸ್ ದಾಟಿದ ಆನಂದ
'ಹಿಟ್ಸ್'ಗೆ - ಮುಖ್ಯವಾಗಿ ಅಂತರ್ಜಾಲಪುಟವೊಂದಕ್ಕೆ ಸಂದರ್ಶಕರು ಭೇಟಿ ನೀಡುವ ವಿಷಯದಲ್ಲಿ - 'ಒದೆತ' ಸ್ವಲ್ಪ ಲಘುಮಟ್ಟದ್ದೆನಿಸಿದರೆ (ಅಸತ್ಯಾನ್ವೇಷಿಯ ಬ್ಲಾಗ್‍ನಲ್ಲಿ ಈ ಪದ ಸಮಂಜಸ ರೀತಿಯಲ್ಲಿ ಬಳಸಲ್ಪಡುತ್ತದೆ) ಗಾಂಭೀರ್ಯ ಹೆಚ್ಚಿರುವ ಇತರ ಪದಗಳನ್ನು ಬಳಸಬಹುದೇನೊ.
೧. ಸ್ಪರ್ಶ : ಸ್ಪರ್ಶಿಸುವವರಿಗೂ ಸ್ಪರ್ಶಿಸಲ್ಪಡುವವರಿಗೂ ಪುಳಕ ಕೊಡುವ ಪ್ರಕ್ರಿಯೆ. ಅಂತೆಯೇ 'ಸಂಪದ' ಪುಟಗಳಿಗೆ ಭೇಟಿ - ಸಂದರ್ಶಕನಿಗೂ, ಪುಟದೊಡೆಯನಿಗೂ ಪುಳಕ ತರುವಂಥದು.
೨. ಚುಂಬನ : ಸ್ಪರ್ಶದ್ದೇ ಸಮರ್ಥನೆ. ಇನ್ನಷ್ಟು ರೋಮಾಂಚನಗೊಳಿಸಬೇಕಿದ್ದರೆ ಈ ಪದ. ಚುಂಬನದಲ್ಲೂ ಕರ್ತೃ-ಕರ್ಮ ಎರಡಕ್ಕೂ ರೋಮಾಂಚನವಲ್ಲವೇ?
೩. ತಟ್ಟು : ಸ್ಪರ್ಶ, ಚುಂಬನ ಇತ್ಯಾದಿ ಸಂಸ್ಕೃತ ಪದಗಳು ಬೇಡವೆನಿಸಿದರೆ ಮತ್ತು ಅವನ್ನು ಈ ಸಂದರ್ಭದಲ್ಲಿ ನಾಮಪದ ರೂಪದಲ್ಲಷ್ಟೇ ಉಪಯೋಗಿಸಬಹುದು ಎಂದೆನಿಸಿದರೆ ಅಚ್ಚಕನ್ನಡದ 'ತಟ್ಟು' (ಕ್ರಿಯಾಪದ ಮತ್ತು ನಾಮಪದ ರೂಪಗಳಲ್ಲಿ hit ನಂತೆಯೇ) ಸಹ ಸೂಕ್ತವೆನಿಸೀತು. ಚಪ್ಪಾಳೆತಟ್ಟು, ಬೆನ್ನುತಟ್ಟು ಇದ್ದಂತೆ... "ಇವತ್ತು ಸಂಪದದಲ್ಲೊಂದು ಪುಟವನ್ನು ತಟ್ಟಿದೆ, ಬಹಳ ಚೆನ್ನಾಗಿತ್ತು..." ಅಥವಾ "ಸಂಪದದಲ್ಲಿ ನನ್ನ ಬ್ಲಾಗ್‍ಗೆ ಇತ್ತೀಚೆಗೆ ತಟ್ಟುಗಳ ಸಂಖ್ಯೆ ಹೆಚ್ಚಿದೆ..." ಇತ್ಯಾದಿ.
ಉ: ಮಿಲಿಯನ್ ಹಿಟ್ಸ್ ದಾಟಿದ ಆನಂದ
ಕಾಮೆಂಟಿನಲ್ಲಿ 'under-lying' punಉ ಎಂದಿನಂತೆ overflowingಉ
ಸದ್ಯಕ್ಕೆ "ಭೇಟಿ"ಯೇ ಒಳ್ಳೆಯ ಪದ ಅನ್ಸುತ್ತೆ. ಇಲ್ಲಿಗೆ ಈ ಚರ್ಚೆ ಕ್ಲೋಸ್ ಮಾಡೋಣಾರಿ. ಯಾವ ಶಬ್ಧ ಬಳಸಬೇಕು ಅನ್ನೋದೆ ತಲೆನೋವಾದ್ರೆ ಕನ್ನಡ ಮಾತಾಡೋದು, ಬಳಸೋದಾದ್ರೂ ಎಂತು? "ಹಿಟ್ಸ್" ಅಂತಾನೇ ಬಳಸಬಹುದು.
P.S: ನಿಮ್ಮ ಅಸತ್ಯಾನ್ವೇಷಿಯವರೊಡಗೂಡಿ ಸಂಚು ಮಾಡಬ್ಯಾಡ್ರೀ

ಅವರಿಗ್ಯಾಕೋ ಮೊದಲೇ ಸಂಪದ ನೆಟ್ಟಗೆ ಕಾಣೋದಿಲ್ವಂತೆ - ಅವರ "ನೆಟ್ಟಗಿರೋ ಕನ್ನಡ ರಸಾಯನ"ಗಳಲ್ಲಿ ಸಂಪದವೊಂದನ್ನ ಬಿಟ್ಟು ಎಲ್ಲಕ್ಕೂ ಲಿಂಕ್ ಹಾಕಿಕೊಂಡಿದ್ದಾರೆ. ಅದೆಂತದು ಮಾರಾಯ್ರೆ!
'ಸಂಪದ' ನೆಟ್ಟಗಿಲ್ಲ, ಆದರೆ ಅವರ ಬೊಗಳೆಗೆ ಮಾತ್ರ ಇಲ್ಲಿ ಜಾಗ ಬೇಕು ಅಂತಾರಲ್ಲ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಉ: ಮಿಲಿಯನ್ ಹಿಟ್ಸ್ ದಾಟಿದ ಆನಂದ
ಹೌದು ಸಿಟ್ಟು ಬೇಡ ಹಿಟ್ಟೇ ಇರಲಿ, ಅಕ್ಕಿಹಿಟ್ಟು ಮೈದಾಹಿಟ್ಟು ಕಡ್ಲೆಹಿಟ್ಟು ರಾಗಿಹಿಟ್ಟು ಯಾವುದೋ ಒಂದು.
ಆದರೆ,
"ಈ ಚರ್ಚೆ ಮುಗಿಸೋಣ" ಎನ್ನುವ ಬದಲು "ಈ ಚರ್ಚೆ ಕ್ಲೋಸ್ ಮಾಡೋಣಾರಿ..." ಎಂದರೆ "ಕನ್ನಡ ಮಾತಾಡೋದು, ಬಳಸೋದಾದ್ರೂ ಎಂತು?"
ಅಂದಹಾಗೆ 'ನನ್ನ' ಅಸತ್ಯಾನ್ವೇಶಿ??!!
ಉ: ಮಿಲಿಯನ್ ಹಿಟ್ಸ್ ದಾಟಿದ ಆನಂದ
>>> ಹೌದು ಸಿಟ್ಟು ಬೇಡ ಹಿಟ್ಟೇ ಇರಲಿ, ಅಕ್ಕಿಹಿಟ್ಟು ಮೈದಾಹಿಟ್ಟು ಕಡ್ಲೆಹಿಟ್ಟು ರಾಗಿಹಿಟ್ಟು ಯಾವುದೋ ಒಂದು.
ಆಗಬಹುದು.
>>> "ಈ ಚರ್ಚೆ ಕ್ಲೋಸ್ ಮಾಡೋಣಾರಿ..." ಎಂದರೆ "ಕನ್ನಡ ಮಾತಾಡೋದು, ಬಳಸೋದಾದ್ರೂ ಎಂತು?"
ನಟ್ಟು ಬೋಲ್ಟು, ಬಸ್ಸು ಲಾರಿ ತರಾ ನಮ್ಮದೂ "ಕ್ಲೋಸ್" ಪದ ಸೇರಿಸ್ಕೊಳ್ಳಿ. ಮಾತಾಡೋವಾಗ "ವಿಂಡೋ ಕ್ಲೋಸ್ ಮಾಡಬಹುದು; ಫೈಲ್ ಕ್ಲೋಸ್ ಮಾಡಬಹುದು" ಎಂದಲ್ಲಾ ಬಳಸ್ತೀವಂತೆ. ಬರೆಯೋವಾಗ ಬಳಸೋದಕ್ಕೇನು
>>> ಅಂದಹಾಗೆ 'ನನ್ನ' ಅಸತ್ಯಾನ್ವೇಶಿ??!!
ಹೆ ಹೆ. ತಪ್ಪು ಬಳಕೆ. Sorry.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಉ: ಮಿಲಿಯನ್ ಹಿಟ್ಸ್ ದಾಟಿದ ಆನಂದ
ಅತ್ಯಂತ ಸಂತೋಷ ಪಡುವ ವಿಷಯ. ಅಭಿನಂದನೆಗಳು.
ಉ: ಮಿಲಿಯನ್ ಹಿಟ್ಸ್ ದಾಟಿದ ಆನಂದ
ಇದು ಹೋದ ವರ್ಷ ಇದೇ ಸಮಯ ಬರೆದ ಪುಟ!
ಈಗ 'ಸಂಪದ'ದ ಹಿಟ್ಸ್ ಸಂಖ್ಯೆ ಸುಮಾರು ಮೂರುವರೆ ಮಿಲಿಯನ್ ಇದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಜನವರಿ ತಿಂಗಳ ಅಂಕಿ ಅಂಶಗಳು - ನಮ್ಮ ಬೆನ್ನನ್ನು ನಾವೇ...
ಓದಿ ಬಹಳ ಸಂತಸವಾಯಿತು. ಒಮೆ ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳಬಹುದೇನೋ
- ಶ್ಯಾಮ್ ಕಿಶೋರ್