ಡೈರೆಕ್ಟರ್‍ಗಿಂತ ಹೀರೋಗೇಕೆ ಹೆಚ್ಚಿನ ಮಹತ್ವ?
'ಮುಂಗಾರು ಮಳೆ'ಯ ಗೆಲುವಿನ ನಂತರ, ಗಾಂದಿನಗರ ಗಣೇಶ್ ಮುಂದಿನ ಸಿನಿಮಾ ಬಗ್ಗೆ ಸುದ್ದಿ ಕೊಟ್ಟಿತೇ ಹೊರತು ಯೋಗರಾಜ್ ಭಟ್‍ರ ಸುದ್ದಿನೇ ಇಲ್ಲ. ಇವರ ಮೊದಲ ಸಿನಿಮಾ 'ಮಣಿ' ಕೂಡ ಚೆನ್ನಾಗಿದೆ, ಆದರೆ ಇದು ಸೋತಿದ್ದು ಅತಿಯಾದ ಹಿಂಸೆಯನ್ನು ತೋರಿಸಿದ್ದರಿಂದ. ಆದರೆ ಕತೆ ಮತ್ತು ಅದನ್ನು ಹೆಣೆದಿರುವ ರೀತಿ, ದ್ರುಶ್ಯಗಳು ಚೆನ್ನಾಗಿವೆ. ಉಮಾಶ್ರಿ ಮತ್ತು ರಂಗಾಯಣ ರಘು ಪ್ರತಿಭೆ ಒರೆಗೆ ಹಚ್ಚಿದಂತಿದೆ.
ಒಂದು ಸಿನಿಮಾ ಗೆಲ್ಲೋಕೆ ಮೂರು ವಿಷಯಗಳು ಚೆನ್ನಾಗಿರಬೇಕು. ೧) ಹಾಡುಗಳು ೨)ಕತೆ ೩) ಡೈರೆಕ್ಷನ್. ಉಪೇಂದ್ರ, ಪ್ರೇಮ್ ಮುಂತಾದವರು ಮೇಲೆ ಬಂದಿದ್ದೇ ಡೈರೆಕ್ಷನ್ ಪ್ರತಿಭೆಯಿಂದ. ತಮಿಳು, ತೆಲುಗರಂತೆ ಕನ್ನಡಿಗರು ಹೀರೋ oriented ಅಲ್ಲ ಅನ್ನುವದನ್ನು ಮತ್ತೆ ಮತ್ತೆ ತೋರಿಸುತ್ತಿದ್ದರೂ ಗಾಂದಿನಗರ ಇದನ್ನು ತಿಳಿದುಕೊಳ್ಳುತ್ತಿಲ್ಲ. ಹೀಗಾಗಿ ಉಪೇಂದ್ರನಂತ ಅದ್ಭುತ ಪ್ರತಿಭೆ ಧೂಳು ತಿಂತಿದೆ, ಪ್ರೇಮ್ ಕೂಡ ಅದೇ ಹಾದಿಯಲ್ಲಿದೆ.
ಬಹುಶ ಕನ್ನಡ ಸಿನಿಮಾರಂಗದ ಈ ನೋಟ ಬದಲಾಗಬೇಕು. ಡೈರೆಕ್ಟರ್‍ಗೆ ಹೆಚ್ಚಿನ ಮಹತ್ವ ನೀಡಬೇಕು ಅನಿಸುತ್ತದೆ.
ನೀವೇನಂತೀರಿ?

- Login or register to post comments
- 698 hits
- Email this forum





RSS:
ಉ: ಡೈರೆಕ್ಟರ್‍ಗಿಂತ ಹೀರೋಗೇಕೆ ಹೆಚ್ಚಿನ ಮಹತ್ವ?
ಒಳ್ಳೆಯ ಪ್ರಶ್ನೆ ಇದು
'ಉಪ್ಪಿ' ನಿರ್ದೇಶನ ಬಿಟ್ಟು ನಟನೆಗೆ ಇಳಿದಿದ್ದರ ಹಿಂದಿರುವ ಕಾರಣವೂ ಇದೇ ಅನ್ಸತ್ತೆ!
ಉಪೇಂದ್ರ ಒಳ್ಳೆಯ ನಿರ್ದೇಶಕ - ನಟನಾದ ಮೇಲೆ ಕನ್ನಡಕ್ಕೊಬ್ಬ ಒಳ್ಳೆಯ ನಟ ಸಿಕ್ಕಿದ್ದು ಹಾಗಿರಲಿ, ಬಹಳ ಮುಖ್ಯವಾಗಿ ಬೇಕಿದ್ದ ಹೊಸ ಆಲೋಚನೆಯ ಕ್ರಿಯೇಟಿವ್ ನಿರ್ದೇಶಕ ಹೀಗೆ ಕನ್ನಡಕ್ಕೆ ತಪ್ಪಿ ಹೋದರು ಅನ್ಸತ್ತೆ
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಉ: ಡೈರೆಕ್ಟರ್‍ಗಿಂತ ಹೀರೋಗೇಕೆ ಹೆಚ್ಚಿನ ಮಹತ್ವ?
ಚಲನಚಿತ್ರಗಳಲ್ಲಿ ನಾಯಕ-ನಾಯಕಿಯರೇ ಚಲನಚಿತ್ರದ ಯಶಸ್ಸಿನ ಲಾಭ ಪಡೆಯುತ್ತಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ಆಟಗಳಲ್ಲೂ ಆಟಗಾರರೇ ಯಶಸ್ಸಿನ ಕ್ರೆಡಿಟ್ ಪಡೆಯುತ್ತಾರೆ-ಕೋಚ್ ಅಲ್ಲ.
ಅಂದ ಹಾಗೆ ಗಾಂಧಿನಗರ ಸರಿಯಾದ ಪ್ರಯೋಗ ಅಲ್ಲವೇ?(ಗಾಂದಿ ಅಲ್ಲ)
ಡೈರೆಕ್ಟರ್‍ಗಿಂತ ಹೀರೋಗೇಕೆ...? - ಉಪ್ಪಿ ಅನಿಸಿಕೆ!
ಈ ಬಗ್ಗೆ ನಮ್ಮ ಉಪ್ಪೀನೇ ಕೇಳಿದ್ರೆ ಹೇಗಿರುತ್ತೆ ಅಂತ ಅನ್ನಿಸಿ, ಅವರನ್ನೊಮ್ಮೆ ಮಾತಾಡಿಸಿದೆ. ಉಪ್ಪಿ ತನ್ನ ಟಿಪಿಕಲ್ ರಕ್ತಕಣ್ಣೀರು ಶೈಲಿಯಲ್ಲಿ ಹೇಳಿದ್ದು ಇಷ್ಟು:
ಈ ಜಗತ್ತು ಇರೋದೆ ಹೀಗೆ ಮ್ಯಾನ್. ಎಲ್ರಿಗೂ ಶೋಆಫ್ ಬೇಕು ಮ್ಯಾನ್, ಬರೀ ಶೋಆಫ್. ತೆರೆ ಹಿಂದೆ ದಿನಗಟ್ಟಲೆ ಕುಳಿತು, ಚಿತ್ರಕತೆ ಬರ್ದು, ಕಷ್ಟಪಟ್ಟು ದುಡಿದ್ರೂ, ನೀವು ತೆರೆಯ ಮೇಲೆ ಹೀರೋ ಬಂದ ತಕ್ಷಣ ಬಾಯ್ಬಾಯಿ ಬಿಡ್ತೀರಾ...ಆ ಹೀರೋ ಹಿಂದೆ ಒಬ್ಬ ನಿರ್ದೇಶಕ ಇದ್ದಾನೇ ಅನ್ನೋದನ್ನೇ ಮರೀತೀರಾ...ನಮ್ಗೆ ಹೊಟ್ಟೆ ಉರಿಯಲ್ವಾ? ನಂಗೂ ಈ ಫೇಮ್ ಬೇಕು ಅನ್ಸೋಲ್ವಾ? ಏನೋ ಆ ಪುಟ್ಟಣ್ಣ ಒಬ್ರು ಹಾಗೇ ಹೇಗೋ ಬದುಕಿಕೊಂಡ್ರು...ಅವ್ರು ಮಾಡಿದ್ರು ಅಂತ ನಾನೂ ಹಾಗೇ ಮಾಡೋಕಾಗುತ್ತಾ ಮ್ಯಾನ್? ಇನ್ನೂ ನಾನು ನಿರ್ದೇಶನದಲ್ಲೇ ಇದ್ದಿದ್ರೆ "ಸುಮ್ಮನೆ" ಅಂಥಾ ಮನೆ ಕಟ್ಟೋಕೆ ಆಗುತ್ತಿತ್ತಾ? ಹೇಳು ಮ್ಯಾನ್...ಈ ವಯಸ್ಸು ಇವತ್ತಿದ್ದು ನಾಳೆ ಹೋಗುತ್ತೆ..ಅಷ್ಟರಲ್ಲಿ ದುಡ್ಡು ಮಾಡಿಕೊಂಡುಬಿಡಬೇಕು...ನಿಂಗಿದೆಲ್ಲಾ ಗೊತ್ತಾಗೋಲ್ಲ ಬಿಡು...ಬುದ್ಧಿವಂತಿಕೆಗೇನು,ಇನ್ನೂ ಹತ್ತು ವರ್ಷ ಆದರೂ ತಲೇಲಿ ಕೂತಿರುತ್ತೆ...ಏಜ್ ಆದ ಮೇಲೆ ಮತ್ತೆ ನಿರ್ದೇಶನಕ್ಕೆ ಇಳಿದರಾಯ್ತು ಮ್ಯಾನ್, ಆವಾಗ ನನ್ನ ಮುಖ ಯಾರು ನೋಡ್ತಾರೆ...
- ಶ್ಯಾಮ್ ಕಿಶೋರ್ (on a lighter note...ಗಂಭೀರವಾದ ಅನಿಸಿಕೆಯಲ್ಲ)
Re: ಡೈರೆಕ್ಟರ್‍ಗಿಂತ ಹೀರೋಗೇಕೆ...? - ಉಪ್ಪಿ ಅನಿಸಿಕೆ!
ನೀವು ಹೇಳ್ತೀರೋದು ಒಪ್ಪತಕ್ಕ ಮಾತು!
Re: ಡೈರೆಕ್ಟರ್‍ಗಿಂತ ಹೀರೋಗೇಕೆ ಹೆಚ್ಚಿನ ಮಹತ್ವ?
ಬರೆದ ಎಲ್ಲರಿಗೂ thanks. ಹಿಂದಿಯಲ್ಲಿ ನೋಡಿ, ಮಣಿರತ್ನಂ,ಸಂಜಯ್‍ಲೀಲಾ ಬನ್ಸಾಲಿ, ರಾಮ್‍ಗೋಪಾಲ್ ವರ್ಮಾ, ಮಧು ಭಂಡಾರ್ಕರ್ ಮುಂತಾದ ಡೈರೆಕ್ಟರ್‍ಗಳ ಸಿನಿಮಾಗಳು ಇದು ಇವರ ಸಿನಿಮಾ ಅಂತ ಹೀರೋಗಿಂತ ಹೆಚ್ಚಾಗಿ ಡೈರೆಕ್ಟರ್ ಹೆಸರುಗಳೇ ಸಿನಿಮಾಗೆ ಅಂಟಿಕೊಂಡಿರುತ್ತವೆ. ಇಂತ ಟ್ರೆಂಡ್ ಕನ್ನಡ ಸಿನಿಮಾಗಳಿಗೂ ಮತ್ತೆ ಬರಬೇಕು ಅನಿಸುತ್ತೆ.
ಅಂತ ಡೈರೆಕ್ಟರ್‍ಗಳು ಕನ್ನಡದಲ್ಲೂ ಇದಾರೆ, ನಾಗತಿಹಳ್ಳಿ, ನಾಗಾಭರಣ,ಪ್ರೇಮ್, ಇಂದ್ರಜೀತ್ ಲಂಕೇಶ್ ಕೆಲವೇ ಕೆಲವು. and ofcourse ಸ್ಟಾರ್ ಮೇಕರ್ ಪುಟ್ಟಣ್ಣ ಕಣಗಾಲ್ ಇದ್ದರು.
ಮಾದರಿಗೆ ಹೇಳೋದಾದರೆ ಯೋಗರಾಜ್ ಭಟ್‍ರ ಮುಂದಿನ ಸಿನಿಮಾಗೆ ' from the director of ಮುಂಗಾರು ಮಳೆ ' tag ಕೊಟ್ಟು ಬಿಟ್ಟರೆ, ಅದು ಮತ್ತೊಂದು ಹಿಟ್ ಸಿನಿಮಾ ಆಗುವ ಸಾಧ್ಯತೆ ಹೆಚ್ಚು. ಅಂತ ಟ್ರೆಂಡ್ ಕನ್ನಡ ಸಿನಿಮಾಗೆ ಮತ್ತೆ ಬರಲಿ.