ಬರಲಿದೆ, ಮಗದೊಂದು ಕನ್ನಡ ತಂತ್ರಾಂಶ...
ಇನ್ನು ಹದಿನೈದು ದಿನಗಳಲ್ಲಿ ಕನ್ನಡಕ್ಕೆ ಮತ್ತೊಂದು ತಂತ್ರಾಂಶ ಬಿಡುಗಡೆಯಾಗಲಿದೆ ಎಂದು ವಿಜಯಕರ್ನಾಟಕ ಇಂದು ವರದಿ ಮಾಡಿದೆ. ರಾಷ್ಟ್ರಕವಿ ಕುವೆಂಪುರವರ ಹೆಸರು ಹೊತ್ತ ಈ ಹೊಸ ತಂತ್ರಾಂಶ ಕೆಲವು ಹೊಸತುಗಳನ್ನ ನೀಡಲಿದೆಯಂತೆ.
ತಂತ್ರಾಂಶದ ಪ್ರಮುಖಗಳು (ಲೇಖನ ತಿಳಿಸುವಂತೆ):
* ನಾಲ್ಕು ಲಿಪಿಗಳಿಗೂ ಪರಿವರ್ತಕ (converter) - ನುಡಿ, ಬರಹ, ಶ್ರೀಲಿಪಿ
(ನಾಲ್ಕನೆಯದು ಲೇಖನದಲ್ಲಿ ಉಲ್ಲೇಖಿಸಿದ್ದು ಕಾಣಲಿಲ್ಲ - ಬಹುಶಃ 'ಪ್ರಜಾಮತ' ಅಥವ CRG ರವರ ಫಾರ್ಮ್ಯಾಟ್ ಇರಬೇಕು.)
* ಇನ್ನಾರು ತಿಂಗಳಲ್ಲಿ ಯೂನಿಕೋಡ್ ಬೆಂಬಲವೂ ಸೇರುವುದಂತೆ.
ಯೂನಿಕೋಡ್ ಬೆಂಬಲದೊಂದಿಗೆ ಈ ತಂತ್ರಾಂಶ ಈಗಲೇ ಹೊರಬರುವುದಿಲ್ಲವೆಂದು ಓದಿ ಬೇಸರವಾಯ್ತು. ಆದರೆ ಸಾಕಷ್ಟು ಸಕಾರಾತ್ಮಕ ಸವಲತ್ತುಗಳಿದ್ದಂತಿದೆ! ಕುತೂಹಲದಿಂದ ನಿರೀಕ್ಷಿಸೋಣ ![]()
ತಂತ್ರಾಂಶವನ್ನು ಅವರು GPLನ ಅಡಿ ರಿಲೀಸ್ ಮಾಡಿದರೆ ಉಳಿದವರೂ ಅದರ ಅಭಿವೃದ್ಧಿಯಲ್ಲಿ ಭಾಗವಹಿಸಬಹುದು.

- Login or register to post comments
- 851 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಕುವೆಂಪು ಕನ್ನಡ ತಂತ್ರಾಂಶ ಈಗ ಲಭ್ಯ
ಕುವೆಂಪು ಕನ್ನಡ ತಂತ್ರಾಂಶದ ಬೀಟಾ ಆವೃತ್ತಿಯು ಇಂದು(೧೭/೦೨/೨೦೦೭) ಬಿಡುಗಡೆಯಾಗಿದ್ದು, ಇದನ್ನು ಕುವೆಂಪು ಕನ್ನಡ ತಂತ್ರಾಂಶ ಇಲ್ಲಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.
Re: ಕುವೆಂಪು ಕನ್ನಡ ತಂತ್ರಾಂಶ ಈಗ ಲಭ್ಯ
ದಯವಿಟ್ಟು ಇದನ್ನು ಉಪಯೋಗಿಸುವ ಬಗ್ಗೆ ಸ್ವಲ್ಪ ವಿವರ ನೀಡಿದ್ದರೆ ಅನೇಕ ಜನರಿಗೆ ಅನುಕೂಲವಾಗು ತ್ತಿತ್ತು. ಈಗ ನಾನು ನುಡಿಯನ್ನು ಬಳಸುತ್ತಿದ್ದೇನೆ, ಆದರೆ ಸರಿಯಾಗಿ ಬಳಸುವ ಬಗ್ಗೆ ಗೊತ್ತಾಗ್ತಿಲ್ಲ. ಅಂದಾಜಿನ ಮೇಲೆ ಉಪಯೋಗಿಸುವುದಾಗಿದೆ. ಇನ್ ಸ್ಕ್ರಿಪ್ಟ್ ಗಿಂತ ಫೋನೆಟಿಕ್ ಸುಲಭ ಅಂತ ನನ್ನ ಅನಿಸಿಕೆ. ಕುವೆಂಪು ಕನ್ನಡ ತಂತ್ರಾಂಶದಲ್ಲಿ ಈ ಅನುಕೂಲ ಇದೆಯಾ
ಉ: ಕುವೆಂಪು ಕನ್ನಡ ತಂತ್ರಾಂಶ ಈಗ ಲಭ್ಯ
ಹೌದು. ತಂತ್ರಾಂಶದ ಜೊತೆ ಉಪಯೋಗಿಸುವ ವಿವರವನ್ನೂ ಕೊಡಬೇಕು.
ತಂತ್ರಾಂಶ ಪ್ರಾರಂಭಿಸಿದ ಕೂಡಲೆ "ಹೇಮಾವತಿ, ಶರಾವತಿ, ನೇತ್ರಾವತಿ, ಕಾವೇರಿ" ಎಂದು ನಮ್ಮ ಕಣ್ಮುಂದೆ ಬರುತ್ತದೆ. ಅವುಗಳು ಏನು ಎಂಬುದು ಯಾರಿಗೂ ತಿಳಿಯೋದಿಲ್ಲ (ನಮ್ಮ ನದಿಗಳ ಹೆಸರು ಎಂಬುದೊಂದು ಬಿಟ್ಟರೆ). ಈ ಹೆಸರುಗಳ ಕೆಳಗೆ ಒಂದೆರಡು ವಾಕ್ಯಗಳು (ಇದು ಏನು, ಹೇಗೆ ಬಳಸೋದು ಎಂದೆಲ್ಲ) ಬರೆಯಬೇಕು, ತಂತ್ರಾಂಶ ಕತೃಗಳು. ಇದು ಒಳ್ಳೆಯ ತಂತ್ರಾಂಶಗಳಲ್ಲಿ ಇರಬೇಕಾದ ಗುಣ, ಕೂಡ.
ಇನ್ನು ಕನ್ವರ್ಟರ್ ಅಥವ ಪರಿವರ್ತಕವನ್ನು ನಾನಿನ್ನೂ ಬಳಸಿ ನೋಡಿಲ್ಲ. ಏಕೆಂದರೆ SRGಯಾಗಲಿ, Shrilipiಯಾಗಲಿ ನಾನು ಬಳಸಿಯೇ ಇಲ್ಲ (ಹೀಗಾಗಿ ಆ ಎನ್ಕೋಡಿಂಗ್ ನಲ್ಲಿರುವ ಪುಟಗಳು ನನ್ನಲ್ಲಿಲ್ಲ ಎಂಬುದನ್ನು ಹೇಳಬೇಕಿಲ್ಲ). ಆ ತಂತ್ರಾಂಶದಲ್ಲಿ ಬೆಂಬಲ ನೀಡಿರುವ ಇನ್ನು ಎರಡು ಎನ್ಕೋಡಿಂಗ್ ವ್ಯವಸ್ಥೆಗಳು - "ಸುರಭಿ" ಮತ್ತು "ಅನು" ಇವುಗಳ ಬಗ್ಗೆ ನಾನು ಈ ಹಿಂದೆ ಕೇಳಿರಲಿಲ್ಲ, SRGಯ ಬಗ್ಗೆ ಕೂಡ ತೇಜಸ್ವಿಯವರ ಮನೆಗೆ ಒಮ್ಮೆ ಹೋದಾಗಲೆ ತಿಳಿದುಬಂದದ್ದು.
ನೇರವಾಗಿ ಈ ತಂತ್ರಾಂಶದ ಬಗ್ಗೆ ಅಭಿಪ್ರಾಯ ದಾಖಲು ಮಾಡಬೇಕೆಂದರೆ - ಈ ತಂತ್ರಾಂಶ ಹೊಸತೇನನ್ನೂ ಮಾಡುವುದಿಲ್ಲ. ಹಳೆಯ ಕೆಲವು ಎನ್ಕೋಡಿಂಗ್ ವ್ಯವಸ್ಥೆಗಳನ್ನ "ಕುವೆಂಪು" ಎಂಬ ಹೆಸರು ಹೊತ್ತ ಹೊಸತೊಂದು ವ್ಯವಸ್ಥೆಗೆ ಪರಿವರ್ತಿಸುತ್ತಿದ್ದಾರೆ, ಅಷ್ಟೆ. ಈಗಾಗಲೆ ಇರುವ ಬರಹ, ನುಡಿ ಮುಂತಾದ (edit)
ANSCIIASCII ಎನ್ಕೋಡಿಂಗುಗಳ ಜೊತೆ ಇದೊಂದು ಸೇರಿಕೊಂಡು ಹೋಗಲಿದೆ. ಯೂನಿಕೋಡ್ ಗೆ ಪರಿವರ್ತಕವನ್ನು ಬರೆದರೆ ಖಂಡಿತವಾಗಿ ಹೊಸತೊಂದು ಮಾಡಿದಂತಾಗುತ್ತದೆ. ಆದರೆ ಈಗಿನಂತೆ ಈ ತಂತ್ರಾಂಶ ಹೆಚ್ಚು ಜನರ ಉಪಯೋಗಕ್ಕೆ ಬರುವ ಸಾಧ್ಯತೆಯಂತೂ ಕಡಿಮೆಯೇ.--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಉ: ಕುವೆಂಪು ಕನ್ನಡ ತಂತ್ರಾಂಶ ಈಗ ಲಭ್ಯ
"ಈಗಾಗಲೆ ಇರುವ ಬರಹ, ನುಡಿ ಮುಂತಾದ ANSCII ಎನ್ಕೋಡಿಂಗುಗಳ ಜೊತೆ ಇದೊಂದು ಸೇರಿಕೊಂಡು ಹೋಗಲಿದೆ..."
ANSI = American National Standards Institute;
ASCII = American Standard Code for Information Interchange;
ANSCII = ?
ಉ: ಕುವೆಂಪು ಕನ್ನಡ ತಂತ್ರಾಂಶ ಈಗ ಲಭ್ಯ
ಬರೆಯುವಾಗ ತಪ್ಪಾಗಿದೆ. ASCII ಸರಿ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"