ರೇಡಿಯೋ ಪುರಾಣ...
ಸತತವಾಗಿ ಇಪ್ಪತ್ನಾಲ್ಕು ಗಂಟೆ ಕನ್ನಡ ಹಾಡುಗಳನ್ನೇ ಪ್ರಸಾರ ಮಾಡುವ ಏಕೈಕ ರೇಡಿಯೋ ಎಂದೇ ಶುರುವಾಗಿದ್ದ S FM ಇದೀಗ ಹಿಂದಿ ಹಾಡುಗಳ ಪ್ರಸಾರ ಮಾಡಲು ಮೊದಲು ಮಾಡಿದೆ. ಇದು ಕನ್ನಡದ ಸೋಲೆ? ನಿಮಗೇನನ್ನಿಸುವದು?

- Login or register to post comments
- 878 hits
- Email this forum



ಸತತವಾಗಿ ಇಪ್ಪತ್ನಾಲ್ಕು ಗಂಟೆ ಕನ್ನಡ ಹಾಡುಗಳನ್ನೇ ಪ್ರಸಾರ ಮಾಡುವ ಏಕೈಕ ರೇಡಿಯೋ ಎಂದೇ ಶುರುವಾಗಿದ್ದ S FM ಇದೀಗ ಹಿಂದಿ ಹಾಡುಗಳ ಪ್ರಸಾರ ಮಾಡಲು ಮೊದಲು ಮಾಡಿದೆ. ಇದು ಕನ್ನಡದ ಸೋಲೆ? ನಿಮಗೇನನ್ನಿಸುವದು?




ರೇಡಿಯೋ ಪುರಾಣ: ನಾರ್ಥಿಗಳ ಧೋರಣೆ
ಎಸ್. ಎಫ್ ಎಮ್ ಇದ್ದಕ್ಕಿದ್ದಂತೆ ತನ್ನ strategy ಬದಲಾಯಿಸಿರುವದಕ್ಕೆ ಏನು ಕಾರಣ? ಇದು ನನ್ನನ್ನು ಸದ್ಯಕ್ಕೆ ಕಾಡತೊಡಗಿರುವದು. ಗೂಗಲ್ ಟ್ರೆಂಡ್ ನಲ್ಲಿ ಕೆಲ ದಿನಗಳ ಹಿಂದೆ ನಾನು ಕನ್ನಡ,ಹಿಂದಿ ತೂಗಿ ನೋಡಿದಾಗ, ಬೆಂಗಳೂರಿನಲ್ಲಿ ಮಾತ್ರ ಕನ್ನಡಕ್ಕಿಂತ ಹಿಂದಿಗೆ ಬೇಡಿಕೆ ಹೆಚ್ಚಿತ್ತು. ಆದರೆ ಈಗ ಅದು ಮಂಗಳೂರು,ಮೈಸೂರುಗಳಿಗೆ ಹಬ್ಬಿದೆ. ಬೆಳಗಾವಿ,ಹುಬ್ಬಳ್ಳಿ ಆಗ ಲಿಸ್ಟಲ್ಲೆ ಇರಲಿಲ್ಲ.
ಇದರಿಂದ ಹಿಂದಿ ಹಾಡುಗಳಿಗೆ ಬೆಂಗಳೂರು,ಮೈಸೂರು,ಮಂಗಳೂರುಗಳಲ್ಲಿ ಬೇಡಿಕೆ ಹೆಚ್ಚಿದೆ ಅನಿಸುತ್ತೆ. ಇದು ಒಂದಾದರೆ ನಾರ್ಥಿಗಳು ಹಿಂದಿ ಇಂಡಿಯಾದಲ್ಲಿ ಮೆರಿಬೇಕೆಂಬ ಧೋರಣೆಯವರು, ಅವರ ಕೆಟ್ಟ comment ಗಳೂ ಈ ಬದಲಾವಣೆಗೆ ಕಾರಣವಾಗಿರಲೂ ಬಹುದು. ಅಥವಾ ಹಿಂದಿ ನಮ್ಮ ರಾಷ್ಟ್ರ ಭಾಷೆ ಅದನ್ನು ತಲೆಯ ಮೇಲೆ ಹೊತ್ತು ಮೆರೆಸಬೇಕು ಎಂಬ ಧೋರಣೆಯ ಕನ್ನಡಿಗರೂ ಕಾರಣರಿರಬಹುದು.
Re: ರೇಡಿಯೋ ಪುರಾಣ...
೧.೬ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ತಮಿಳು, ತೆಲುಗು, ಪಂಜಾಬಿ ಭಾಷೆಗಳಿಗೆ ಒಂದೊಂದು FM channel ನೀಡುವುದಾಗಿ ಹಾಗು 91 FM ಅಲ್ಲಿ "Learn tamil, telugu, punjabi etc.." ಅಂತ ಸುದ್ದಿ ಬಂದಿತ್ತು. ಕೂಡಲೆ ಗೆಳೆಯರೆಲ್ಲಾ ಕೂಡಿ ಒಂದು ಖಾರವಾದ mail ಹಾಕಿ, ನಂತರ ಕ.ರ.ವೇ ಯವರು ಪ್ರತಿಭಟಿಸಿದ ಮೇಲೆ FM ಅವರು ಮುಚ್ಚಿಕೊಂಡು ಕೂತರು. ಈಗ ಮತ್ತೆ ಗಾಂಚಲಿ ಶುರು ಮಾಡಿದಾರೆ. ಕಾಲು ಕೆರ್ಕೊಂಡು ಜಗಳಕ್ಕೆ ಬರ್ತಾರೆ ಬೋ. ಮಕ್ಕಳು. ಮತ್ತೆ ಚುರುಕು ಹತ್ತಿಸಬೇಕು.... ಮೊದಮೊದಲು ಕನ್ನಡ ಮಾತ್ರ ಅಂತ ಹೇಳ್ತಿದ್ದೋರು ಈಗ ಮೆತ್ತಗೆ ಬಾಲ ಬಿಚ್ಚ್ತಾಯಿದಾರೆ. ಒಂದು e-mail ಹೋರಾಟ ಶುರು ಮಾಡುವ. ಶಿರಬಾಗದಿದ್ದರೆ ಇದ್ದೇ ಇದೆ ... ನಮ್ಮ ಕರ್ನಾಟಕ ರಕ್ಷ್ಜಣ ವೇದಿಕೆ.
ಉ: ರೇಡಿಯೋ ಪುರಾಣ...
ಆಹ್! ಸ್ವಲ್ಪ ತಣ್ಣಗಾಗ್ರಿ, ಅನೂಪ್
ಯಾಕೋ ಗಾಳೀಲಿ ಎಲ್ಲೆ ಮೀರಿ ಕ್ರಾಂತಿ ಹಾಗೂ ಚಳುವಳಿ ಇರೋ ಹಾಗಿದೆ. ಯಾವುದೂ ತುಂಬಾ ಜಾಸ್ತಿ ಚೆಂದವಿರೋದಿಲ್ರೀಪ್ಪ. ಅಮೃತಾನೂ ಜಾಸ್ತಿ ಕುಡಿದ್ರೆ ವಿಷ ಆಗತ್ತಂತೆ!
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಅನಿಸಿಕೆ: ರೇಡಿಯೋ ಪುರಾಣ...ಕೆಲವು ಪ್ರಶ್ನೆಗಳು
ನನ್ನನ್ನು ಕಾಡುತ್ತಿರೋ ಒಂದೆರಡು ಪ್ರಶ್ನೆಗಳು ಹೀಗಿವೆ:
೧. ನಾವು ಕನ್ನಡಿಗರು ಈ ಕನ್ನಡ ರೇಡಿಯೋ ವಾಹಿನಿಗಳನ್ನು ಕೇಳುತ್ತೀವಾ? ನಾವು ಅಂದರೆ, ಬರೀ ನೂರಾರು ಜನರಲ್ಲ; ಭಾರೀ ಪ್ರಮಾಣದಲ್ಲಿ, ಸಾವಿರಾರು, ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಅಂತ. ಕನ್ನಡಿಗರೇ ಹಾಗೆ ಕನ್ನಡ ವಾಹಿನಿಗಳನ್ನು ಕೇಳದೇ ಇದ್ದ ಪಕ್ಷದಲ್ಲಿ ಆ ರೇಡಿಯೋ ವಾಹಿನಿಗಳು ತಮ್ಮ ನಿಲುವನ್ನು ಬದಲಾಯಿಸಿಕೊಳ್ಳೋದ್ರಲ್ಲಿ ಅರ್ಥ ಇದೆ ಅಲ್ವಾ? ಯಾಕೇಂದ್ರೆ ಅದು ಅವರಿಗೆ "ವ್ಯಾಪಾರ". ಲಾಭ ಅವರಿಗೆ ಮುಖ್ಯವೇ ವಿನಃ "ಕನ್ನಡ ಸೇವೆ" ಅಲ್ಲ. ಆದರೆ ಒಂದನ್ನು ನಾವು ನೆನಪಿನಲ್ಲಿಡಲೇಬೇಕು. ಎಲ್ಲ ಕನ್ನಡ ವಾಹಿನಿಗಳೂ ಆರಂಭದಲ್ಲೇ, FM 91 ತರಹ ಪೂರ್ಣ ಪ್ರಮಾಣದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಆದರೆ ನಾವು ಕನ್ನಡಿಗರು ಕೇಳಿ ಪ್ರೋತ್ಸಾಹ ನೀಡಿದರೆ ಇದು ಖಂಡಿತ ಸಾಧ್ಯ.
೨. ಕನ್ನಡಿಗರು ಮುಗಿಬಿದ್ದು ಕೇಳುತ್ತಿದ್ದೂ, ಈ ವಾಹಿನಿಗಳು ನಮಗೆ ಬೇರೆ ಭಾಷೆಗಳ "ರಸದೌತಣ" ಬಡಿಸಲು ಹೊರಟಿದ್ದಾರೆ ಅಂದರೆ, ಅದು ನಿಜಕ್ಕೂ ಖಂಡನೆಗೆ ಅರ್ಹವಾದದ್ದೇ.
೩. ಗೂಗಲ್ ಟ್ರೆಂಡ್‍ನಲ್ಲಿ ಮತ ಚಲಾವಣೆಗೆ ನಾವು ಕನ್ನಡಿಗರೂ ಯಾಕೆ ಮುಂದಾಗಬಾರದು. ಎಲ್ಲರೂ ಒಮ್ಮೆ ಅಭಿಪ್ರಾಯ ಹಾಕಿದಲ್ಲಿ "ಟ್ರೆಂಡ್" ತಿರುಗಿಬೀಳುತ್ತೆ ಅಲ್ವಾ? ಅಷ್ಟಕ್ಕೂ "ಗೂಗಲ್ ಟ್ರೆಂಡ್"ನ ಫಲಿತಾಂಶಗಳು ಅಷ್ಟು ಪ್ರಭಾವವನ್ನು ಹೊಂದಿವೆಯಾ? ನನಗೆ ಈ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ತಿಳಿದವರು ದಯವಿಟ್ಟು ಈ ಬಗ್ಗೆ ಬರೆಯಿರಿ.
- ಶ್ಯಾಮ್ ಕಿಶೋರ್ (ಒಲವೆ ಜೀವನ ಸಾಕ್ಷಾತ್ಕಾರ)
Re: ಅನಿಸಿಕೆ: ರೇಡಿಯೋ ಪುರಾಣ...ಕೆಲವು ಪ್ರಶ್ನೆಗಳು
ಹೌದು, ಕನ್ನಡಿಗರು ಕನ್ನಡ ವಾಹಿನಿಗಳಿಗೆ ಕಿವಿಗೊಡಬೇಕೆನಿಸುತ್ತದೆ. ಆದರೆ ಬೆಂಗಳೂರಿನ ಕನ್ನಡಿಗರು ದೂರದ ಪಂಜಾಬಿಯಿಂದ ಹಿಡಕೊಂಡು ತೆಲುಗು, ತಮಿಳು, ಹಿಂದಿ ಎಲ್ಲ ಹಾಡುಗಳನ್ನು ಕೇಳುತ್ತಾರೆ.
ಆದರೆ ನನಗೆ ಕಂಡಂತೆ ಎಸ್.ಎಫ್.ಎಮ್ ಗೆ ಜನ ಮುಗಿ ಬಿದ್ದೇ ಕೇಳುತ್ತಿದ್ದರು. ಇದು ತಮಿಳರ ಕನ್ನಡ ಚಾನೆಲ್. ಇವರಿಗೆ ಕನ್ನಡದಿಂದ ಹಣದ ಹೊಳೆಯೇ ಹರಿಯುತ್ತೆ. ಸನ್ ನೆಟ್‍ವರ್ಕನವರು ಉದಯ,ಮುಂತಾದ ಕನ್ನಡ ಚಾನೆಲ್‍ಗಳನ್ನು pay ಚಾನೆಲ್ ಮಾಡಿರುವದರಿಂದ ಆ ಮೂಲಕ ಅವರಿಗೆ ಹಣ ಬರುತ್ತಿದೆ.
ಗೂಗಲ್‍ನಲ್ಲಿ ಮತ ಹಾಕುವದು ಹೇಗೆ? ತಿಳಿಸಿ.
Re: ಅನಿಸಿಕೆ: ರೇಡಿಯೋ ಪುರಾಣ...ಡಿಎಂಕೆ ಕುತಂತ್ರ
ದಟ್ಸ್ ಕನ್ನಡದಲ್ಲಿ ಇದರ ಬಗ್ಗೆ ಬರೆಯಲಾಗಿದೆ. ಅವರ ಪ್ರಕಾರ SFM ೯೩.೫ ಡಿಎಂಕೆ ಪಕ್ಷದ ಮುಖಂಡರ ಒಡೆತನದಲ್ಲಿದೆ. ನಾವೆಲ್ಲ ಟ್ರೆಂಡ್ ಅದು-ಇದು ಅಂತ ತಲೆಕೆಡಿಸಿಕೊತ್ತಾ ಇದ್ದೀವಿ. ಆದರೆ ನಿಜವಾದ ಕಾರಣವೆ ಬೇರೆ.
http://thatskannada.oneindia.in/category/response/190207sfm_kannada.html
-ಜೈ ಕರ್ನಾಟಕ
Re: ರೇಡಿಯೋ ಪುರಾಣ...
ಈ ಪರಿಸ್ಥಿತಿಗೆ ನಾವೇ ಕಾರಣ ಎಂದು ಅನಿಸುತ್ತದೆ. ನಾವು ಕನ್ನಡಿಗರು ಖಾಸಗಿ ಎಫ್ಎಂ ಕೇಂದ್ರಗಳನ್ನು ಆರಂಭಿಸಲು ಪ್ರಯತ್ನಿಸಬೇಕು. ಆಗ ಬೇರೆ ಭಾಷೆಯವರ ಒಡೆತನದ ಬೆಂಗಳೂರು ಮತ್ತು ಇತರ ಪಟ್ಟಣಗಳ ಎಫ್ಎಂ ಕೇಂದ್ರ ಗಳಿಗೆ ಸ್ಪರ್ಧೆ ನೀಡಬಹುದು. ನಮ್ಮ ಕನ್ನಡ ಉದ್ಯಮಿಗಳು / ಆಸಕ್ತರು/ ಸಮಾನ ಮನಸ್ಕರು ಇದರ ಬಗ್ಗೆ ಚಿಂತನೆ ಮಾಡಬಹುದು. ಎಫ್ಎಂ ಕೇಂದ್ರಕ್ಕಾಗಿ ಎಷ್ಟು ಖರ್ಚಾಗುತ್ತದೆ ?