ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

underestimate ಗೆ ಕನ್ನಡ ಪದ ತಿಳಿಸಿ

February 20, 2007 - 6:34pm — Aravinda

ನಮಸ್ಕಾರ,

 

underestimate ಗೆ ಕನ್ನಡ ಪದ ತುಂಬಾ ದಿನದಿಂದ ಹುಡುಕುತ್ತಿದ್ದೇನೆ, ಸಂಪದದಲ್ಲಿ ನಿರಾಶೆ ಆಗುವುದಿಲ್ಲ ಅಂದುಕೊಂಡಿದ್ದೇನೆ.

 

ಧನ್ಯವಾದಗಳೊಂದಿಗೆ

ಅರವಿಂದ

‹ ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? ಕನ್ನಡ ಅನುವಾದಕ್ಕೆ ನಿಮ್ಮ ಸಹಾಯ ಬೇಕು ›
  • ಸಾಹಿತ್ಯ, ಭಾಷೆ
~.~
  • Login or register to post comments
  • 880 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 20, 2007 - 8:39pm — raghavendra.s

Re: underestimate ಗೆ ಕನ್ನಡ ಪದ ತಿಳಿಸಿ

raghavendra.s's picture

ನನಗನ್ನಿಸಿದಂತೆ underestimate ನ ಸಮನಾರ್ಥಕ ಪದ "ಲಘುವಾಗಿ ಪರಿಗಣಿಸು", "ಕಡಿಮೆ ನಿರೀಕ್ಷೆ ಮಾಡು"

ಉದಾ: ಭೀಮನು ಬಲರಾಮನ ಶಿಷ್ಯನಾದ ದುರ್ಯೋಧನನ್ನು ಲಘುವಾಗಿ ಪರಿಗಣಿಸಲಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 21, 2007 - 9:41am — Gopinath Rao

Re: underestimate ಗೆ ಕನ್ನಡ ಪದ ತಿಳಿಸಿ

Gopinath Rao's picture

ಲಘುವಾಗಿ ಪರಿಗಣಿಸು ಅತೀ ಹತ್ತಿರದ ಅರ್ಥ ಕೊಡುತ್ತದೆ. ಕೀಳಂದಾಜು ಕೂಡ ಸರಿ ಹೋಗುತ್ತದೆ ಎಂದು ನನಗನ್ನಿಸುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 23, 2007 - 12:55pm — Shyam Kishore

ಉ: Re: underestimate ಗೆ ಕನ್ನಡ ಪದ ತಿಳಿಸಿ

Shyam Kishore's picture

ನನಗೂ ಲಘುವಾಗಿ ಪರಿಗಣಿಸು ಎನ್ನುವುದು ಹತ್ತಿರದ (ಭಾವನೆಯಲ್ಲಿ) ಪ್ರಯೋಗ ಅನ್ನಿಸುತ್ತಿದೆ.

- ಶ್ಯಾಮ್ ಕಿಶೋರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 21, 2007 - 2:03pm — ಸಂಗನಗೌಡ

Re: underestimate ಗೆ ಕನ್ನಡ ಪದ ತಿಳಿಸಿ

ಸಂಗನಗೌಡ's picture

ಅರವಿಂದ್ ಅವರss, 

ನಮ್ ಕಡೆ ಇದಕ್ಕ್ 'ಹಗುರ ಅಂತ ತಿಳಿ' ಅಂತಾರ್ರಿ. ಮಾತಾಡುವಾಗ 'ಅವನನ್ನೇನ್ ನೀ ಹಗುರ ಅಂತ ತಿಳಿಬ್ಯಾಡ, ಅವ ಭಾರಿ ಕುಳ' ಅಂತಾರ. ಇದನ್ನೇ ಇಂಗಲೀಸ್‍ದಾಗ 'dont underestimate him, he has powers' ಅನ್ನಲಡ್ಡಿ ಇಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 23, 2007 - 12:29am — benaka

underestimate = "ಕೀಳ್ಮಟ್ಟು"

benaka's picture

ಸಂಸ್ಕೃತದಲ್ಲಿ "ಅಂಡರ್ ಎಸ್ಟಿಮೇಟ್" ಗೆ ಸರಿಯಾದ ಪದ =ಕದರ್ಥ. ಕನ್ನಡದಲ್ಲಿ ಕದರ್ಥ ಮಾಡು ಎಂದಾಗಿರಬಹುದೇ!?
ಕದ್ + ಅರ್ಥಯ = ಕೆಟ್ಟದಾಗಿ/ಕೀಳಾಗಿ ಕಾಣು.
ದ್ರಾವಿಡಭಾಷೆಗಳಲ್ಲಿ ಎಸ್ಟಿಮೇಟ್ ಎಂಬ ಕ್ರಿಯಾಪದಕ್ಕೆ "ಮಟ್ಟು" ಎಂಬ ಪದವಿದೆ. ಆದ್ದರಿಂದ ಕನ್ನಡದಲ್ಲಿ "ಅಂಡರ್ ಎಸ್ಟಿಮೇಟ್" = "ಕೀಳ್ಮಟ್ಟು" ಇರಬಹುದು.

ನಿಮ್ಮ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 23, 2007 - 11:29am — Sunil Jayaprakash

ಉ: underestimateಗೆ ಸರಿಯಾದ ಕನ್ನಡ ಪದ ಕೀಳೆಣಿಸು

Sunil Jayaprakash's picture

ಗೆಳೆಯರೇ,

ಕ್ಷಮಿಸಿ ಕೆಲಸದೊತ್ತಡದಲ್ಲಿದ್ದ ಕಾರಣ ಕೆಲವು ದಿನಗಳಿಂದ ಬರೆಯಲಾಗಿರಲಿಲ್ಲ. underestimateಗೆ ಸರಿಯಾದ ಕನ್ನಡ ಪದ ಕೀಳೆಣಿಸು ಎಂಬುದಾಗಿ. ಇದನ್ನು ಬರೆವಣಿಗೆಯಲ್ಲಿ ಅನೇಕ ಕಡೆ ನೋಡಿದ್ದೇನೆ ಮತ್ತು ಓದಿದ್ದೇನೆ.

ಕೀಳೆಣಿಸು ಪದದ ವಿವರಣೆ ಹೀಗೆ.

ಕೀಳು - under.
ಎಣಿಸು - estimate http://dsal.uchicago.edu/cgi-bin/philologic/getobject.pl?c.0:1:797.burrow

ಎಣಿಕೆ ಎಂಬುದು ಕೇವಲ counting ಅಷ್ಟೇ ಅಲ್ಲ, estimation ಅನ್ನು ಕೂಡ ಸೂಚಿಸುತ್ತದೆ.

ಬೆನಕರವರು ಪ್ರಸ್ತಾಪಿಸಿದ "ಮಟ್ಟು" ಎಂಬ ಪದ ಕನ್ನಡದಲ್ಲಿ ಅನೇಕ ಕಡೆ "ಮಟ್ಟ" ಎಂಬುದಾಗಿ ಬಳಕೆಯಲ್ಲಿದೆ. ಹಾಗೆಯೇ ವ್ಯಾವಹಾರಿಕವಾಗಿ ನೋಡಿದಾಗ ಮಟ್ಟ ಎನ್ನುವುದು ಕನ್ನಡದಲ್ಲಿ ಅಳತೆಗಾಗಿಯೇ (measurement) ಬಳಸುವಂತಹುದ್ದಾಗಿದೆ.

ದೊಡ್ಡಮಟ್ಟ - ಬೃಹತ್ ಪ್ರಮಾಣದಲ್ಲಿ
ಕೀಳ್ಮಟ್ಟ - bad quality. ಇಲ್ಲಿ ಕೀಳ್ಮಟ್ಟು ಎಂದರೂ ಮಟ್ಟುವಿನಲ್ಲಿ estimation ಅನ್ನು ಹುಡುಕುವುದು ಕಷ್ಟ.

ಈ ಅನುಮಾನ ಪರಿಹಾರಕ್ಕೆ ನಾನು ದ್ರಾವಿಡ ಪದಕೋಶದಲ್ಲಿ ಹುಡುಕಿದಾಗ ಮಟ್ಟು ಪದದ ಪೂರ್ಣ ವಿವರ ಸಿಕ್ಕಿತು.
http://dsal.uchicago.edu/cgi-bin/philologic/getobject.pl?c.1:1:2078.burrow

ತಮಿಳಿನಲ್ಲಿ ಮಟ್ಟು ಎಂಬುದು estimate ಎಂಬ ಅರ್ಥದಲ್ಲಿದೆ, ಆದರೆ ಕನ್ನಡದಲ್ಲಿ measurement of a fixed entity ಎಂಬ ಅರ್ಥದಲ್ಲಿದೆ.
Ka. maṭṭu measure, extent, height, limit

ಮತ್ತೊಂದು ಮಹತ್ವದ ವಿಚಾರವೆಂದರೆ underestimate ಅನ್ನು ನಾಮಪದವಾಗಿ ನೋಡುತ್ತಾ ಇದ್ದಾಗ ಕೀಳೆಣಿಸು ಸರಿಹೊಂದುತ್ತದೆ. ಆದರೆ ಸಂಗನರು ಪ್ರಸ್ತಾಪಿಸಿದ ಹಾಗೆ, ಕನ್ನಡದಲ್ಲಿ ಎಷ್ಟೋ ಕಡೆ ಹಗುರ, ಕೀಳು, ಸಣ್ಣದೆಣಿಸು ಎಂಬ ಪದಗಳೇ ಪೂರ್ಣ ಅರ್ಥವನ್ನು ಸೂಚಿಸುತ್ತದೆ.

ಹಾಗೆಯೇ ಕನ್ನಡದಲ್ಲಿ ಇನ್ನೊಂದು ಪದವಿದೆ, ಕೀಳರಿಮೆ - inferiority complex.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 23, 2007 - 8:38pm — ಸಂಗನಗೌಡ

Re: ಉ: underestimateಗೆ ಸರಿಯಾದ ಕನ್ನಡ ಪದ ಕೀಳೆಣಿಸು

ಸಂಗನಗೌಡ's picture

ನೀವು ಹೇಳುವ 'ಮಟ್ಟ' ಬೇರೆ. ಇದು ಆಡು ಮಾತಲ್ಲಿ 'ಮಟ' ಆಗಿದೆ. 'ಏಸನೇತೆ ಮಟ ಸಾಲಿ ಕಲತೀಯೋ ತಮ್ಮಾ' ಅಂತ ಹಿರಿಯರು ಕೇಳೋದು. 'ಆಣೆಕಟ್ಟಿನಲ್ಲಿ ನೀರಿನ ಮಟ್ಟ' ಅಂತಾರೆ. ಇದನ್ನು altitude ಗೆ ಹೋಲಿಕೆ ಮಾಡಬಹುದೇನೋ.

ಮಟ್ಟು, ಇದು 'ಮಾಡು'ವಿನ ಜೋಡಿ ಪದವಾಗಿ ಬಳಕೆಯಲ್ಲಿದೆ, 'ಮಾಡು-ಮಟ್ಟು'.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 23, 2007 - 8:28pm — ಸಂಗನಗೌಡ

Re: underestimate = "ಕೀಳ್ಮಟ್ಟು"

ಸಂಗನಗೌಡ's picture

ಮಟ್ಟು, ಇದು ನಮ್ ಕಡೆ, 'ಮಾಡು'ವಿನ ಜೋಡಿ ಪದವಾಗಿ ಬಳಕೆಯಲ್ಲಿದೆ. ಮಾಡು-ಮಟ್ಟು. ಮಾದರಿಗೆ 'ಅಣ್ಣ ಇದ್ದಿದ್ದರೆ, ಏನೋ ಒಂದು ಮಾಡೋರು, ಮಟ್ಟೋರು'. ಹಾಗಾಗಿ ನೀವು ಹೇಳುವಂತೆ ಮಟ್ಟು = estimate ಇದ್ದೀತು.

ಹಗುರ ಅಂತ ತಿಳಿ, ಕೀಳ್ಮಟ್ಟು ಇವು ಅಚ್ಹ ಕನ್ನಡ. ಆದರೆ ಸುನೀಲ್  ಅವರು ಹೇಳುವ 'ಎಣಿಕೆ' ಅಂದರೆ calculate ಆಗುವದು. ಅದು estimate ಗೆ ಹತ್ತಿರ ಇದ್ದರೂ, ಅದು ಬೇರೆ.

ಈ ಎಳೆಗೆ ನೆಂಟಾಗದಿದ್ದರೂ, ಇನ್ನೊಂದು ಅಚ್ಚಕನ್ನಡ ಪದ ಮಂದಿಯ ಮಾತುಗಳಲ್ಲಿ ಹೇಗೆ ಉಳಿದಿದೆ ಅನ್ನುವದನ್ನ ಇಲ್ಲಿ ಹೇಳಬೇಕೆನಿಸಿದೆ, 'ಧ್ವನಿ'ಗೆ ಕನ್ನಡ ಪದ 'ಉಲಿ'. ಒಂದು ಕಡೆ, ಜನರ ಸುಳಿದಾಟ ಇದ್ದರೆ, 'ಅಲ್ಲಿ ಉಲು(ಅದು ನಿಜವಾಗಿ 'ಉಲಿವು') ಇದೆ' ಅಂತಾರೆ. ಅಂದರೆ ಯಾರ ಧ್ವನಿಯೂ ಇಲ್ಲದ 'ಸ್ಮಶಾನ ಮೌನ' ಇದ್ದಲ್ಲಿ, 'ಅಬ್ಬಬ್ಬಾ ಅಲ್ಲಿ ಮಂದಿ-ಉಲು ಒಂಚೂರೂ ಇರಲಿಲ್ಲ, ಜೀವ ಕೈಯಾಗ್ ಹಿಡಕೊಂಡು ಬಂದೆ' ಹೀಗೆ ಮಾತುಗಳು ಬರುತ್ತವೆ. 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 31, 2007 - 2:53pm — mahesha

ಉ: underestimate ಗೆ ಕನ್ನಡ ಪದ ತಿಳಿಸಿ

mahesha's picture

underestimate = ನಿಕೃಷ್ಟಭಾವಿಸು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 31, 2007 - 3:12pm — betala

ಉ: underestimate ಗೆ ಕನ್ನಡ ಪದ ತಿಳಿಸಿ

betala's picture

underestimate = ಹೀನಾಯ

ಗಡಿಬಿಡಿ ಗಂಡ ಚಿತ್ರದಲ್ಲಿ ಚಿ.ಉ ಅವ್ರು ಬರೆದಿರೊ ಒಂದು ಡೈಲಾಗ್ "ಹೀನಾಯವಾಗಿ ಕಂಡರೆ ಘೋರವಾಗಿ ಏಟು ತಿಂತಿಯಾ !!!" Smiling

-ನಿಮ್ಮ ಬೆಂಬಿಡದ ಬೇತಾಳ .....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 4, 2008 - 2:33pm — kannadakanda

ಉ: underestimate ಗೆ ಕನ್ನಡ ಪದ ತಿಳಿಸಿ

kannadakanda's picture

ಕೀೞೆಣಿಸು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಂಗೀತ ಪಾಠದ ಮೊದಲ ಗೀತೆ
  • ಅನುವಾದ ಸಾಹಿತ್ಯಕ್ಕೆ ಒಂದು ಬೇರೆ ವಿಭಾಗ
  • ಮಹಾಭಾರತ
  • ಐ.ಬಿ.ಎನ್ - ಬೆಂಗಳೂರು
  • ಸಂಸಾರವೇ ಮೊಬೈಲು!!
Syndicate content

ಲೇಖಕರು

Aravinda's picture

ಪೂರ್ಣ ಹೆಸರು
ಅರವಿಂದ

ಪರಿಚಯ

ನನ್ನ ಊರು ಶ್ರಿಂಗೇರಿ ಹತ್ತಿರದಲ್ಲಿರುವ ಉತ್ತಮೇಶ್ವರ ಎಂಬ ಹಳ್ಳಿ.
ನನಗೆ ಕುಂಗ್ ಫು, ಅಂತರ್ಜಾಲ ತಂತ್ರಜ್ಞಾನ ಹಾಗೂ ಮುಕ್ತ ತಂತ್ರಾಂಶಗಳಲ್ಲಿ ಆಸಕ್ತಿ.
ಈಗ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ. ವೃತ್ತಿಯಲ್ಲಿ ತಂತ್ರಾಂಶ ತಂತ್ರಜ್ನ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • "ಕನ್ನಡ+ತಮಿಳ್" = ?
  • ಸ್ತ್ರೀಸೌಂದರ್ಯ
  • ಯೋಗವಾಹಕ
  • ತೆರೆ, ತೆಱೆ
  • ಮಾತಿನ ಒಳಗುಟ್ಟು - ಡಾ. ಡಿ.ಎನ್.ಶಂಕರಬಟ್ಟರ ಹೊಚ್ಚ ಹೊಸ ಹೊತ್ತಗೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • roshan_netla
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:38pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
  • uniquesupri
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 24, 2008 - 5:23pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:13pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:06pm
  • keerthi2kiran
    ಉ: ನವ್ಯ, ನವೋದಯ, ಬಂಡಾಯ.....
    July 24, 2008 - 5:05pm
  • mahesha
    ಉ:
    July 24, 2008 - 5:01pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:01pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:00pm
ಇನ್ನಷ್ಟು


ಮಾತನಾಡುವ ಹತ್ತು ಜನರು ಮಾತನಾಡದ ಹತ್ತು ಸಾವಿರ ಜನರಿಗಿಂತ ಹೆಚ್ಚು ಗದ್ದಲ ಮಾಡುತ್ತಾರೆ

— ನೆಪೊಲಿಯನ್ ಬೊನಾಪಾರ್ಟೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator