23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮನುಷ್ಯ ಸತ್ತ ನ0ತರ ಅ0ತ್ಯ ಸ0ಸ್ಕಾರ ಏಕೆ ಮಾಡಬೇಕು.

September 15, 2011 - 6:32pm
Nanjunda Raju

ಮನುಷ್ಯ ಸತ್ತ ನ0ತರ ಅ0ತ್ಯ ಸ0ಸ್ಕಾರ ಏಕೆ ಮಾಡಬೇಕು. ದಯವಿಟ್ಟು ತಿಳಿಸುವಿರಾ? ಮನುಷ್ಯ ಸತ್ತ ನ೦ತರ ದೇವರ ಸಮಾನವೆನ್ನುತ್ತಾರೆ. ಪೂಜಿಸುತ್ತಾರೆ. ವಿವಿಧ ರೀತಿಯ ಶಾಸ್ತ್ರ ಮಾಡುತ್ತರೆ. ಒಂದೊಂದು ಕಡೆ ಒಂದೊಂದು ರೀತಿಯ ಶಾಸ್ತ್ರ ಮಾಡುತ್ತಾರೆ. ಇದಕ್ಕೆ ಯಾವ ಶಾಸ್ತ್ರ ಆಧಾರವಾಗಿರುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

Submitted by makara on

ನ0ಜು0ಡ ರಾಜು ಅವರೇ, ನೀವು ಬೆ0ಗಳೂರಿನಲ್ಲೇ ಇರುವುದರಿ0ದ ಬಸವನ ಗುಡಿಯ ಹತ್ತಿರ ಇರುವ ರಾಮಕ್ರಿಷ್ಣ ಮಠಕ್ಕೆ ಭೇಟಿ ಕೊಡಿ. ಅಲ್ಲಿ ನಿಮಗೆ ಶ್ರಾದ್ಧ ದ ಬಗ್ಗೆ ಸ್ವಾಮಿ ಹರ್ಶ್ಹಾನ0ದರು ಬರೆದ ಸಣ್ಣ ಪುಸ್ತಕ ಲಭ್ಯವಿದೆ. ಬೆಲೆ ರೂ. 10 ಮತ್ತು ಪುಟಗಳಲ್ಲಿಯ ವಿವರಣೆಯೂ ಚಿಕ್ಕದಾಗಿ ಚೊಕ್ಕವಾಗಿ ಕೊಟ್ಟಿದ್ದಾರೆ.

Submitted by Manjunatha D G on

ಅಂತ್ಯ ಸಂಸ್ಕಾರವೇ ಬೇರೆ, ವರ್ಷ ವರ್ಷವೂ ಆಚರಿಸುವ ತಿಥಿ ಕಾರ್ಯಗಳು ಬೇರೆ. ಅಂತ್ಯ ಸಂಸ್ಕಾರವು ಪ್ರಪಂಚದಾದ್ಯಂತ ಇರುವಂತಹುದು. ಆದರೆ ಅಂತ್ಯ ಸಂಸ್ಕಾರವನ್ನು ಶವವನ್ನು ಹೂಳುವುದು, ಸುಡುವುದು, ನೀರಿಗೆ ಎಸೆಯುವುದು ಒಂದು ನಿರ್ದಿಷ್ಟವಾದ ಎತ್ತರದ ಸ್ಥಳದಲ್ಲಿ ಶವವನ್ನಿರಿಸಿ ಬರುವುದು, ಮುಂತಾದ ಹಲವು ವಿಧಾನಗಳಲ್ಲಿ ಮಾಡುತ್ತಾರೆ. ಪರಲೋಖದ ಬಗ್ಗೆ ನಂಬಿಕೆಗಾಗಿಯಲ್ಲದಿದ್ದರೂ ಸಹ ಅಂತ್ಯ ಸಂಸ್ಕಾರ ಮಾಡುವುದು ನಾಗರೀಕ ಸಮಾಜದಲ್ಲಿ ಅತ್ಯಂತ ಅವಶ್ಯಕ. ಸತ್ತವರ ಆತ್ಮಕ್ಕೆ ಶಾಂತಿ ಸಿಗಲೆಂದು ಬಯಸುವವರು ತಮ್ಮ ತಮ್ಮ ಧರ್ಮಕ್ಕನುಸಾರವಾಗಿ ಉತ್ತರ ಕ್ರಿಯಾದಿಗಳನ್ನು ಮಾಡುತ್ತಾರೆ ಮತ್ತು ಪ್ರತಿವರ್ಷವೂ ಹಿರಿಯರ ನೆನಪಿಗಾಗಿ ತಿಥಿ ಕಾರ್ಯ ಮಾಡುತ್ತಾರೆ. ಸದ್ಯ ಭಾರತೀಯರಲ್ಲಿ ಮಹಲಾಯ ಪಕ್ಷ ಆಚರಣೆಯಲ್ಲಿದೆ. ಮಹಲಾಯ ಅಮವಾಸ್ಯೆಯ ವರೆಗಿನ ಹದಿನೈದು ದಿನಗಳಲ್ಲಿ ಸತ್ತ ರಕ್ತ ಸಂಬಂದಿಕರಿಗಾಗಿ ಮಹಾಲಯವನ್ನೂ ಆಚರಿಸುತ್ತಾರೆ. ಇದೆಲ್ಲಾ ಅವರವರ ನಂಬೆಕೆಗೆ ಬಿಟ್ಟಿದ್ದು.

Submitted by makara on

ಮಂಜುನಾಥರೇ ನೀವು ಹೇಳಿದ್ದು ಸರಿ. ಅಂತ್ಯ ಸಂಸ್ಕಾರಕ್ಕೂ ಶ್ರಾದ್ಧಕ್ಕೂ ಬಹಳ ವ್ಯತ್ಯಾಸ ಇದೆ. ಆದರೆ ಪ್ರಶ್ನೆ ಕೇಳಿದವರ ಉದ್ದೇಶ ಇದಾಗಿರಬಹುದೆಂದು ತಿಳಿದು ಅವರಿಗೆ ಸ್ವಾಮಿ ಹರ್ಷಾನಂದರ ಪುಸ್ತಕ ಓದಲು ತಿಳಿಸಿದ್ದೆ. ಅದರಲ್ಲೂ ಕೂಡ ಅಂತ್ಯೇಷ್ಟಿಯ ಬಗ್ಗೆ ವಿವರಣೆಗಳನ್ನು ಓದಿದ ನೆನಪು.

Submitted by santhosh_87 on

ಎಲ್ಲದಕ್ಕಿಂತ ಮುಖ್ಯವಾಗಿ ಅಂತ್ಯ ಸಂಸ್ಕಾರ ಮಾಡುವುದು ಶವದಿಂದ ಬರುವ ಕೊಳೆತ ವಾಸನೆಯನ್ನು ತಪ್ಪಿಸಲು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಸತ್ತವರ ಪರಲೋಕ ಗಮನದ ಬಗ್ಗೆ ಬರುವ ಮಾತು ನಂತರದ್ದು. ಯರ್ರಾಬಿರ್ರಿ ಬಿದ್ದಿರುವ ಶವದ ವಾಸನೆ ತಡೆಯಲಾರದೆ ಇಂತಹ ಪ್ರಥೆಯೊಂದು ರೂಢಿಯಲ್ಲಿ ಬಂದಿರಬಹುದು.