ಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ

— ಪ್ರಚಲಿತ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಪ್ರಜಾವಾಣಿಯಲ್ಲಿ ನಾ ಕಸ್ತೂರಿಯವರ ಬಗ್ಗೆ ಲೇಖನ

ಪ್ರಜಾವಾಣಿಯಲ್ಲಿಂದು ನಾ. ಕಸ್ತೂರಿಯವರ ಬಗ್ಗೆ ಸ್ವಾರಸ್ಯಕರವಾದ ಲೇಖನ ಪ್ರಕಟವಾಗಿದೆ, ಓದಿ.

ಲೇಖನದ ಕೆಲವು ತುಣುಕುಗಳು:

ಸರ್ಕಾರದ ಸ್ಕಾಲರ್ಶಿಪ್ ಐದು ರೂಪಾಯಿ ಮೂರು ವರ್ಷ ಲಭಿಸಿದ್ದು, ಹೆಚ್ಚಿನ ಅಂಕಗಳನ್ನು ಗಳಿಸಿದ್ದಕ್ಕಾಗಿ ಮೂರು ತಿಂಗಳಿಗೊಮ್ಮೆ ಒಂದು 'ರಾಣಿ ವಿಕ್ಟೋರಿಯ' ಇರುವ ನಾಣ್ಯವನ್ನು ಹೆಡ್ಮಾಸ್ತರರಿಂದ ತಪ್ಪದೆ ಪಡೆದ ಹೆಗ್ಗಳಿಕೆ ಕಸ್ತೂರಿಯವರದು.

ಕುಳಿತಲ್ಲಿ ನಿಂತಲ್ಲಿ ಹೊಸ ಪದಗಳನ್ನು ಸೃಷ್ಟಿಮಾಡುವ ಚಮತ್ಕಾರ ಅವರಲ್ಲಿತ್ತು. ಅದಕ್ಕೆ ಅವರು ಶಬ್ಧಬ್ರಹ್ಮರೆನಿಸಿಕೊಂಡಿದ್ದು, ಕೆಟ್ಟ ವಾತಾವರಣಕ್ಕೆ 'ನಾಥಾವರಣ' ಎನ್ನುತ್ತಿದ್ದರು. ಬರಗಾಲದಲ್ಲಿನ ಹಸುವನ್ನು 'ಕ್ಷಾಮಧೇನು' ಎನ್ನುತ್ತಿದ್ದರು. ದೇವಸ್ಥಾನದಲ್ಲಿ ಕೊಂಚೆವೇ ಸಿಗುವ ಪಂಚಾಮೃತವನ್ನು 'ಕೊಂಚಾಮೃತ ಕೊಡಿ' ಎಂದು ಕೇಳಿ ಎಲ್ಲರನ್ನೂ‌ನಗಿಸುತ್ತಿದ್ದರಂತೆ.

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

:)

gvmt's picture

ಪ್ರಜಾವಾಣಿಯವರು ಬಳಸುವ ಫಾಂಟಿಗೂ ನನ್ನ ಬ್ರೌಸರಿಗೂ ಮುಂಚಿನಿಂದಲೂ ಎಣ್ಣೆ-ಸೀಗೇಕಾಯಿ. ಲೇಖನವನ್ನು ಓದಲಾಗಲಿಲ್ಲ. ಆದರೂ ಏನಿರಬಹುದು ಎನ್ನುವುದನ್ನು ಊಹಿಸಿಕೊಳ್ಳಬಲ್ಲೆ. ಭಾಷೆಯಬಗ್ಗೆ ದುರಭಿಮಾನ ನಿರಭಿಮಾನಗಳೆ ಹೆಚ್ಚಾಗಿರುವ ಇಂದಿನ ವಾತಾವರಣದಲ್ಲಿ ಕಸ್ತೂರಿಯಂತಹವರು ವಿರಳ.

ಮೈಸೂರಿನಲ್ಲಿ ಗೋಪಾಲಸ್ವಾಮಿಯವರು ಶುರುಮಾಡಿದ (ಭಾರತದಲ್ಲಿಯೆ ಮೊದಲನೆಯ) ರೇಡಿಯೋ ಸ್ಟೇಶನ್ನಿಗೆ ಆಕಾಶವಾಣಿ ಎಂದು ಹೆಸರನ್ನಿಟ್ಟವರು ಯಾರು ಗೊತ್ತೆ? ಕಸ್ತೂರಿಯವರ ಅಜ್ಜಿ!! ಕಸ್ತೂರಿಯವರು ಆಗ ನಿಲಯದ ನಿರ್ದೇಶಕರಾಗಿದ್ದರು. ಆ ಹೆಸರೆ ಮುಂದೆ ಕಾಯಿದೆ ಬಂದು ಸ್ಟೇಶನ್ನು ಸರ್ಕಾರದ ರೇಡಿಯೋ ಜಾಲಕ್ಕೆ ಸೇರಿದ ಮೇಲೆ ಇಡಿಯ ಜಾಲದ ಭಾರತೀಯ ಹೆಸರಾಯಿತು.

ಕಸ್ತೂರಿಯವರದು "ಅನರ್ಥಕೋಶ"ವೋ ಏನೋ ಹೆಸರಿನ ಪುಸ್ತಕವಿದೆಯಂತೆ. ಯಾರದ್ದಾದರೂ ಹತ್ತಿರ ಅದು ಇದ್ದರೆ ಅಲ್ಲಿಂದ ಇಲ್ಲಿಗೆ ಒಂದಷ್ಟನ್ನು ತೆಗೆದುಹಾಕುವಿರ?

ವೆಂ.

ಅನರ್ಥಕೋಶ

pavanaja's picture

ಅನರ್ಥಕೋಶ ನನ್ನಲ್ಲಿದೆ. ಕೆಲವು ಸ್ಯಾಂಪಲ್‌ಗಳನ್ನು ಸಮಯವಾದಾಗ ಹಾಕುವೆ.

ನಿಮ್ಮ ಬ್ರೌಸರ್ ಯಾವುದು? ಏನು ತೊಂದರೆ?

ಸಿಗೋಣ,
ಪವನಜ
-----------
Think globally, Act locally

ಪ್ರಜಾವಾಣಿ ದರ್ಶನ

hpn's picture

ಅರೆರೆ, ಲಿನಕ್ಸಿನಲ್ಲಿ ಕೂಡ ಯಾವ ಮಾಯದಲ್ಲೋ ಬರುತ್ತಿದೆಯಪ್ಪ! (ಸುಮ್ಮನೆ ಹೇಳಿದ್ದು. ಆಕೃತಿ ಪದ್ಮಿನಿ ಫಾಂಟು ಹಾಕಿ, charset ಜೊತೆ ಒಂದಷ್ಟು ಗುದ್ದಾಡಿದ ಮೇಲೆ ಪ್ರಜಾವಾಣಿ ದರ್ಶನ ಕೊಡ್ತು).

ಬಾರಿ ತರಲೆ ಸೈಟು ರೀ ಅದು. ಡೀಫಾಲ್ಟ್ ಕ್ಯಾರೆಕ್ಟರ್ ಸೆಟ್ಟನ್ನೆ ಡಿಫೈನ್ ಮಾಡಿಲ್ಲ. ಪ್ರತೀ ಬಾರಿ ನಾವೇ ಡಿ'ಫೈನ್' ಮಾಡಿ ಕೊಳ್ಳಬೇಕು!

--

"ಹೊಸ ಚಿಗುರು, ಹಳೆ ಬೇರು"

ಹೌದು

Rohit's picture

ಬಾರಿ ತರಲೆ ಸೈಟು ರೀ ಅದು.

ಹೌದು. ನಾನು ಒಮ್ಮೆ ಸಂಪಾದಕರಿಗೆ ಬರೆದಿದ್ದೆ, ಪ್ರಿಂಟ್ ಎಡಿಷನ್ ಬಗ್ಗೆ ತೋರ್ಸೋ ಕಾಳಜೀನ ಇದಕ್ಕೂ ಸ್ವಲ್ಪ ತೋರ್ಸಿ ಅಂತ. ಒಂದು ಅಕ್ನಾಲೆಜ್ಮೆಂಟ್ ಸಹ ಬರ್ಲಿಲ್ಲ..

ನಮ್ಮಂಥ ಹೊರನಾಡ ಕನ್ನಡಿಗರಿಗೆ ಇದೊಂದೇ ಜೀವಸೆಲೆ...

Re: ಅನರ್ಥಕೋಶದಿಂದ ಉದಿತ ಪದಗಳು

srivathsajoshi's picture

ಅನರ್ಥಕೋಶದ ಕೆಲವು 'ಉದಿತ' ಪದಗಳು ತುಳಸಿವನ ಬ್ಲಾಗ್‍ನ ಈ ಪೋಸ್ಟ್‌ನಲ್ಲಿವೆ.

ಹಾಗೆಯೇ ನಾ.ಕಸ್ತೂರಿ ವಿರಚಿತ ನವೀನ ಗಾದೆಗಳು ಈ ಪೋಸ್ಟ್‌ನಲ್ಲಿ.

ಆನಂದಿಸಿ!

Re: :)ಅನರ್ಥಕೋಶ :ಒಂದಷ್ಟನ್ನು ಹಾಕುವಿರ?--- ಒಂದಷ್ಟೇ ಸಾಕೇ ?

shreekant.mishrikoti's picture

Quote:
ಕಸ್ತೂರಿಯವರದು "ಅನರ್ಥಕೋಶ"ವೋ ಏನೋ ಹೆಸರಿನ ಪುಸ್ತಕವಿದೆಯಂತೆ. ಯಾರದ್ದಾದರೂ ಹತ್ತಿರ ಅದು ಇದ್ದರೆ ಅಲ್ಲಿಂದ ಇಲ್ಲಿಗೆ ಒಂದಷ್ಟನ್ನು ತೆಗೆದುಹಾಕುವಿರ?

ಪುಸ್ತಕದ ಹೆಸರು 'ಅನರ್ಥಕೋಶ' - ಸರಿ.

ಒಂದಷ್ಟೇ ಸಾಕೇ ? ಎಲ್ಲವೂ ಚೆನ್ನಾಗಿದೆ.
ಹುಡುಕಿ , ಕೊಂಡು , ಓದಿ . ಬೆಲೆಯೂ ಬಹಳ ಕಡಿಮೆ.

ಪುಸ್ತಕದ ಪ್ರತಿ ಸಾಲೂ ಸಂತೋಷ ಕೊಡುತ್ತದೆ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"