ವಲ್ಲಿ ಎಂದರೆ ಬಳ್ಳಿ ಎಂದು ಅಥ೯ವೆ?
March 21, 2007 - 5:34pm — bhcsb
ವಲ್ಲಿ ಎಂದರೆ ಬಳ್ಳಿ ಎಂದು ಅಥ೯ವೆ? `ವಲ್ಲಿ' ಸಂಸ್ಕೃತ ಪದದ ತತ್ಸಮ ಪದವಿರಬಹುದೆ ಕನ್ನಡದ `ಬಳ್ಳಿ' ಪದಕ್ಕೆ?
ಚಂದ್ರಶೇಖರ ಬಿ.ಎಚ್.
೨೧/೦೩/೨೦೦೭

- Login or register to post comments
- 1339 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

ವಲ್ಲಿ.
ವಲ್ಲಿ ಅಂದರೆ ಸಂಸ್ಕ್ರುತದಲ್ಲಿ ಬಳ್ಳಿ. ಆದರೆ ಇದರ ಬಳಕೆ ಸಂಸ್ಕ್ರುತದಲ್ಲಿ ಹೆಚ್ಚಿಲ್ಲವಂತೆ.
ಸಂಸ್ಕ್ರುತದಲ್ಲಿ ಬಳ್ಳಿಗೆ ’ಲತಾ’ ಎಂಬ ಪದ ಹೆಚ್ಚು ಬಳಕೆಯಲ್ಲಿ ಇರೋದು.
ವೇದದಲ್ಲಿ ಆ ’ವಲ್ಲಿ’, ಈ ’ವಲ್ಲಿ’ ಅಂತ ಭಾಗಗಳೂ ಇವೆ.
ಆದರೆ ಬಳ್ಳಿ ಇದು ಅಚ್ಚ ಕನ್ನಡದ ಪದ. ಇದು ಸಂಸ್ಕ್ರುತದಿಂದ ಬಂದಿಲ್ಲ.
ಕನ್ನಡದಲ್ಲಿ ವಲ್ಲಿ ಅಂದರೆ ಹೊದೆಕೆ, ಸೆರಗು, ಉತ್ತರಿಯ ಅಂತ ಅರ್ಥ ಇದೆ. ಆದರೂ ಇದು ಬರಿ ಒಂದು ಕಡೆಯ ಮಂದಿಗೆ. ಇಲ್ಲಿ ನೋಡಿ
ವಲ್ಲೀ(ತತ್ಸಮ)=ಬಳ್ಳಿ(ತತ್ಸಮ)
ಚಂದ್ರಶೇಖರರೆ,
ಮೂಲ ಸಂದೇಹಕ್ಕೆ ಉತ್ತರಗಳು ಇಲ್ಲಿವೆ:
ಸಂಸ್ಕೃತದಲ್ಲಿ "ವಲ್ಲೀ" ಹಾಗೂ "ಬಲ್ಲೀ" ಎರಡೂ ಶಬ್ದಗಳಿವೆ; ಎರಡನ್ನೂ ಉಪಯೋಗಿಸುವ ರೂಢಿ ಇದೆಯಾದರೂ ಅರ್ಥ ಸೂಕ್ಷ್ಮವಾಗಿ ವ್ಯತ್ಯಾಸಗೊಳ್ಳುತ್ತದೆ. ಇದಕ್ಕೆ ಕಾರಣ ಆ ಪದಗಳ ಮೂಲ ಕ್ರಿಯಾಧಾತುಗಳು - ವಲ್ ಹಾಗೂ ಬಲ್.
ವಲ್=ಸುತ್ತಿಕೋ, ಅಪ್ಪಿಕೋ, ಮೈತಾಗು, ಹೊದಿಕೆಯಾಗು, ಬರಸೆಳೆದುಕೋ ಇತ್ಯಾದಿ.
ಬಲ್=ಸುರುಳಿಯಾಗು; ಬಲ್ಬಲ್=ಸುರುಳಿಸುರುಳಿಯಾಗು ಇತ್ಯಾದಿ.
ಆದ್ದರಿಂದ ವಲ್ಲೀ=ಲತೆ,(ಔಷಧಸಸ್ಯದ)ಬಳ್ಳಿ,ಹೊರಗವಚ,ಮೈಗಪ್ಪಿದ ತೊಗಟೆ,ಮೈಯನ್ನು ಸುತ್ತುವ ಬಟ್ಟೆ ಎಂದೆಲ್ಲ ಅರ್ಥಗಳಿವೆ. ಬಲ್ಲೀ=ಸುರುಳಿಸುರುಳಿಯಾಗುವ ವಸ್ತು, (ಹೂವಿನ)ಬಳ್ಳಿ ಎಂಬರ್ಥವಿದೆ.
ಆದರೆ, ಕನ್ನಡದ ಬಳ್ಳಿಗೆ 'ಲತೆ' ಎಂಬರ್ಥ ಮಾತ್ರ ಜನಜನಿತ; ಸುತ್ತಿಕೊಳ್ಳುವ ಬಟ್ಟೆಯೆಂಬರ್ಥ ಇಲ್ಲ! ಅದಿರುವುದು 'ವಲ್ಲಿ'ಗೆ ಮಾತ್ರ. ಅದನ್ನೇ ಮಹೇಶರು ಹೇಳಿದ್ದು -
"ನಮ್ಮ ಬಲ್ಲಿದ ರಂಗನ ವಲ್ಲಿಯ ಮೇಲೆ ಚೆಲ್ಲಿದರೋಕುಳಿಯ"
ಅಲ್ಲಿಗೆ ಎರಡೂ ಸಕ್ಕದದವೇ ಎಂದಂತಾಯಿತು:
ವಲ್ಲೀ ->ವಲ್ಲಿ=ಹೊದಿಕೆ, ಔಷಧೀಯ ಬಳ್ಳಿ[ಚರಕ ಸಂಹಿತೆ, ಸುಶ್ರುತ ಸಂಹಿತೆಯಲ್ಲಿ ಇದರ ಉಲ್ಲೇಖ ಹೇರಳವಾಗಿದೆ. ಉದಾ: ನಾಗವಲ್ಲೀ=ವೀಳ್ಯದೆಲೆಯ ಬಳ್ಳಿ]
ಬಲ್ಲೀ->ಬಳ್ಳಿ=ಹೂವಿನ ಬಳ್ಳಿ, ಮರವನ್ನು ಸುರುಳಿಸುರುಳಿಯಾಗಿ ಅಪ್ಪಿ ಮನಸೆಳೆವ ಲತೆ.
ಕನ್ನಡದ 'ಬಳ್ಳಿ'ಯ ಮೂಲ - ಸಕ್ಕದದ 'ವಲ್ಲೀ' ಎಂಬುದೇ ಎಂದು ಮಹೇಶರು ಕಿತ್ತಂಟಿಸಿರುವ ಕೊಂಡಿಯ ತಾಣ ತೋರುತ್ತಿದೆ. ಇರಲಿ, ಬಿ.ಜಿ.ಎಲ್.ಸ್ವಾಮಿಯವರು ಹೇಳುವಂತೆ ತಮಿಳಿನಿಂದಲೇ ಎಲ್ಲ ಭಾಷೆಗಳಿಗೂ ಪದಗಳು ಹೋಗಿವೆಯೆಂದು ತಮಿಳರು ವಾದಿಸುವ ಹಾಗೆ ಕನ್ನಡಿಗರು ಮಾಡುವ ಅಗತ್ಯವಿಲ್ಲ. 'ಲತೆ'ಯ ವಿಷಯದಲ್ಲಿ ನಿರ್ಭಯವಾಗಿ ವಲ್ಲೀ(ತತ್ಸಮ)=ಬಳ್ಳಿ(ತತ್ಸಮ) ಎನ್ನಬಹುದು.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
Re: ವಲ್ಲೀ(ತತ್ಸಮ)=ಬಳ್ಳಿ(ತತ್ಸಮ)
ಬೆನಕರೆ
"ಎಲ್ಲ ಭಾಷೆಗಳಿಗೂ ಪದಗಳು ಹೋಗಿವೆಯೆಂದು ತಮಿಳರು ವಾದಿಸುವ ಹಾಗೆ ಕನ್ನಡಿಗರು ಮಾಡುವ ಅಗತ್ಯವಿಲ್ಲ"
ನಾನು ಹೀಗೆ ವಾದಿಸಿಲ್ಲ.
ನಾನು ಬಳ್ಳಿ ಅಚ್ಚಕನ್ನಡದ, ಇಲ್ಲವೇ ದ್ರಾವಿಡ ಪದ ಅನ್ನಲು. http://dsal.uchicago.edu/cgi-bin/philologic/getobject.pl?c.2:1:65.burrow ಈ ತಾಣವೇ ಕಾರಣ. ಇದು Dravidian Etymological Dictionary.
Burrow ಮತ್ತು Emeneau ಅವರು ಸಂಶೋದನೆ ಮಾಡಿ ಮಾಡಿರುವ ಪ್ರಸಿದ್ಧ ನಿಘಂಟು. ಅದರ ಅಲ್ಲಿ ಇರುವುವೆಲ್ಲ ದ್ರಾವಿಡ ಪದಗಳು.
Re: ವಲ್ಲೀ(ತತ್ಸಮ)=ಬಳ್ಳಿ(ತತ್ಸಮ)
ಮಹೇಶರೆ,
ನಾನು ಬಳ್ಳಿ ಅಚ್ಚಕನ್ನಡದ, ಇಲ್ಲವೇ ದ್ರಾವಿಡ ಪದ ಅನ್ನಲು. http://dsal.uchicago.edu/cgi-bin/philologic/getobject.pl?c.2:1:65.burrow ಈ ತಾಣವೇ ಕಾರಣ. ಇದು Dravidian Etymological Dictionary.
Burrow ಮತ್ತು Emeneau ಅವರು ಸಂಶೋದನೆ ಮಾಡಿ ಮಾಡಿರುವ ಪ್ರಸಿದ್ಧ ನಿಘಂಟು. ಅದರ ಅಲ್ಲಿ ಇರುವುವೆಲ್ಲ ದ್ರಾವಿಡ ಪದಗಳು.
ದ್ರಾವಿಡ ಭಾಷಾ ನಿಘಂಟಿನಲ್ಲಿರುವುದು ದ್ರಾವಿಡಭಾಷೆಯ ಪದಗಳೇ ಆದರೂ, ಎಲ್ಲವೂ "ದ್ರಾವಿಡ ಮೂಲದವೇ", "ಸಕ್ಕದದ ಸೋಂಕಿಲ್ಲದವು" ಎಂದು ಯಾರೂ ಎಲ್ಲಿಯೂ ಹೇಳಿಲ್ಲ; ನಮೂದಿಸಿಯೂ ಇಲ್ಲ. ಬದಲಿಗೆ, ಸಂಸ್ಕೃತ-ಪ್ರಾಕೃತ ಭಾಷೆಗಳಿಂದ ಎರವಲು ತಂದು ತದ್ಭವ ರೂಪಾಂತರಗಳಲ್ಲಿ ಬಳಕೆಯಲ್ಲಿ ಇದ್ದ-ಇರುವ ಪದಗಳ ಕೊನೆಯಲ್ಲಿ Cf. Skt , Cf. Pkt ಎಂಬ ವಿಭಾಗಗಳಿದ್ದು ಮೂಲ ಪದವನ್ನು ತಿಳಿಸಿದ್ದಾರೆ. ನೀವು ಕಿತ್ತಂಟಿಸಿರುವ ಮೇಲ್ಕಂಡ ಕೊಂಡಿಯನ್ನು(ಬಳ್ಳಿ) ನೋಡಿದಾಗ ಕೊನೆಯಲ್ಲಿ Cf. Skt "ವಲ್ಲೀ" ಎಂಬುದು ಗೋಚರವಾಗುತ್ತದೆ; ಗಮನಿಸಿ.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
’ಬಳ್ಳಿ’ ಕನ್ನಡದ್ದೇ ಪದ
ಸಂಸ್ಕೃತ-ಪ್ರಾಕೃತ ಭಾಷೆಗಳಿಂದ ಎರವಲು ತಂದು ತದ್ಭವ ರೂಪಾಂತರಗಳಲ್ಲಿ ಬಳಕೆಯಲ್ಲಿ ಇದ್ದ-ಇರುವ ಪದಗಳ ಕೊನೆಯಲ್ಲಿ Cf. Skt , Cf. Pkt ಎಂಬ ವಿಭಾಗಗಳಿದ್ದು ಮೂಲ ಪದವನ್ನು ತಿಳಿಸಿದ್ದಾರೆ.
http://dsal.uchicago.edu/cgi-bin/philologic/getobject.pl?c.0:1:3.burrow ಅಲ್ಲಿ ೯ನೇ point ಮೇಲೆ ತುಸು ಕಣ್ಣು ಹಾಯಿಸತಕ್ಕದ್ದು.
"Many of the groups contain at the end notes on Indo-Aryan (IA); these always follow the sign /. We have avoided inclusion in the dictionary of words that were certainly borrowed by Dravidian languages from IA languages, whether Sanskrit, Middle Indo-Aryan, or the modern IA vernaculars. At times these borrowings show interesting features, either of geographical extension, of phonological development, or of semantic development. However, it was decided, while DED was being prepared, that such items should be presented elsewhere; Dravidian Borrowings from Indo-Aryan (1962) resulted. During the preparation of DEDR more such items were identified in our older publications; these have been relegated to an appendix of 61 numbered groups. A very few items of this kind have been retained, when e.g. it seemed possible that the words were really Dravidian (e.g. group 5339), or when, as in the case of the words for 'king', It was Jules Bloch who with Gallic clarity said of etymologies: 'either they are self-evident, or they are a matter of probability and to a certain extent, of faith' (BSOS 5. 743 (1928-30)). He was speaking of borrowings from Dravidian into IA, but the dictum is true (though perhaps over-simple) for all etymologies.
-- xviii --
group 201, the borrowing from Sanskrit is so old and so thoroughly naturalized that the words seem tantalizingly Dravidian-like.
On the other hand, it has seemed useful to include all items which involve a possibility or probability that similarities between Dravidian and IA material indicate borrowing from Dravidian into IA. Much of this material had already been published by Burrow, but new items have appeared, especially of the kind that show Marathi alone on the IA side presenting a similarity with Dravidian material; e.g. group 5342. In presenting similarities which may indicate borrowing by IA from Dravidian, we have tended to refrain from making judgements as to certain, probable, or possible borrowings. It has seemed preferable to present the material and to allow judgements to be presented elsewhere.
Already in DEDS we had begun to use (Sir) R. L. Turner's A Comparative Dictionary of the Indo-Aryan Languages (CDIAL), the first volume of which (the dictionary proper) was completed in 1966. In DEDR we have used and quoted from this epoch-making work much more extensively. Of particular value to us have been such Old Indo-Aryan reconstructions as we are now able to quote from CDIAL in, e.g., App. 3 and App. 5."
ಅದರಂತೆ ನಿರ್ದಿಷ್ಟವಾಗಿ ಇದು ಸಂಸ್ಕೃತದಿಂದ ಬಂದದ್ದೇ ಎಂದು ಹೇಳಲಾಗದು. ಅದು ದ್ರಾವಿಡದಿಂದಲೇ ಸಂಸ್ಕೃತಕ್ಕೆ ಹೋಗಿರಲೂ ಬಹುದು.
ನೀವು ಹೇಳಿದ "ವಲ್" ಅದೂ ದ್ರಾವಿಡದ್ದೇ ಎಂದು ಹೇಳಬಹುದು http://dsal.uchicago.edu/cgi-bin/philologic/getobject.pl?c.2:1:54.burrow. ಒಪ್ಪಿಕೊಳ್ಳುವುದು, ಕೊಳ್ಳದಿರುವುದು, ವೈಯಕ್ತಿಕ ನಂಬಿಕೆ.
ಇದೇ ತೆರದ ಮಾತು ಕತೆ "ಕರ್ಣಾಟಕ vs ಕರ್ನಾಟಕ" ವಿಷಯದಲ್ಲೂ ಆಗಿದೆ. ಕನ್ನಡದ ಪದಕ್ಕೆ ಹೋಲುವಂತಹ ಪದ ಸಂಸ್ಕೃತದಲ್ಲಿ ಕಂಡ ಕೂಡಲೇ, ಸಂಸ್ಕೃತದಿಂದ ಅದು ಕನ್ನಡಕ್ಕೆ ಬಂತು ಎಂದು ಕಣ್ಣುಮುಚ್ಚಿ ತೀರ್ಪು ಬರೆಯುವುದು, ಸುಣ್ಣದ ನೀರು ಕಂಡು ಪರೀಕ್ಷಿಸದೆ ಹಾಲೆಂದ ಹಾಗೆ. ಹಾಗಂತ "ಕನ್ನಡವು ಸಂಸ್ಕೃತದಿಂದ ಯಾವ ಪದವನ್ನು ಪಡೆದಿಲ್ಲ" ಎಂದರೂ ಅದು ಶುದ್ಧ ಸುಳ್ಳು, ಹಾಗೆ "ಕನ್ನಡದ ಎಲ್ಲ ಪದಗಳೂ ಸಂಸ್ಕೃತದಿಂದ ಬಂದಿವೆ" ಎಂದು ತಿಳಿದರೆ, ಅದೂ ತಪ್ಪು ತಿಳಿವಳಿಕೆ.
ನಮಗೆ ಕನ್ನಡವು ಸಂಸ್ಕೃತದಿಂದ ಹುಟ್ಟಿದ ನುಡಿಯಲ್ಲ, ಅದಕ್ಕೆ ತನ್ನದೇ ಆದ ಸ್ವತಂತ್ರ ಹುಟ್ಟಿದೆ. ಕನ್ನಡ ಮತ್ತು ತಮಿಳುಗಳು proto-south-dravidian ಎನ್ನುವ ತಾಯಿ ನುಡಿಯ ಕವಲುಗಳು ಮೊದಲಾದ ಸಂಗತಿಗಳು ತಿಳಿದಿವೆ ಎಂದು ಅಂದುಕೊಳ್ಳವೆನು. ಗೊತ್ತಿಲ್ಲದಿದ್ದರೆ, ಕೆಳಗಿನ ಕೊಂಡಿ ನೋಡಬಹುದು.
http://ccat.sas.upenn.edu/~haroldfs/sars238/shortencybrit.html
ಇಲ್ಲಿ ಯಾವ anti-sanskrit movement ನಡೆಸುತ್ತಿಲ್ಲ. ಕನ್ನಡದ ಪದ ಕನ್ನಡದ್ದೇ ಎಂದವರನ್ನು ಏಕ್ದಂ "ತಮಿಳರಂತವರು, sanskrit ವಿರೋಧಿ" ಅಂತ ಹೆಸರಿಸುವುದು ದುಡುಕುತನ ಮತ್ತು ಕುರುಡು ನಂಬಿಕೆ. ಅವರ ಗುರಿ ಇಷ್ಟೇ, ಕನ್ನಡದ್ದೇ ಆದ ಪದಗಳನ್ನೂ ಕೂಡ ಸಂಸ್ಕೃತದಿಂದ, ಇಲ್ಲವೇ ತಮಿಳಿನಿಂದ, ಇಲ್ಲವೇ ಇನ್ನಾವುದೋ ನುಡಿಯಿಂದ ಎರವಲು ಪಡೆದಿದೆ ಎಂದಾಗ, ಅದು "ಹಾಗಲ್ಲ, ಅದು ನಮ್ಮ ಕನ್ನಡದ್ದೇ" ಎಂದು ಹೇಳೋದಷ್ಟೇ
ಇನ್ನೂ BGL Swamy ಅವರ ’ತಮಿಳು ತಲೆಗಳ ನಡುವೆ’ಯನ್ನು ನಾನೂ ಓದಿದೆನು. ಆದರೆ ಆ ಹೊತ್ತಗೆಗೆ ಯಾವ ಮನ್ನಣೆಯಿಲ್ಲ. ಕೇಂದ್ರ ಸರಕಾರ ತಮಿಳಿಗೆ "ಶಾಸ್ತ್ರೀಯಭಾಷಾ" ಬಿರುದು ಕೊಡುವಾಗ ಅವರ ಯಾವ ಮಾತನ್ನು ನೋಡಿದಂತೆ ಕಾಣುವುದಿಲ್ಲ. ಅವರು ತಮಿಳರನ್ನು ನಗೆಪಾಟಲಿಗೆ ಈಡು ಮಾಡಿ, ಅವರ ಇತಿಹಾಸಕಾರರನ್ನು, ಅವರ ಇತಿಹಾಸವನ್ನು ಗೇಲಿ ಮಾಡಿ, ಕನ್ನಡಿಗರನ್ನು ನಲಿಸಿರುವುದೇನು ನಿಜ. ಆದರೆ ಆ ಹೊತ್ತಗೆಗೆ ಕನ್ನಡಿಗರಲ್ಲದೆ ಬೇರೆಡೆ ಹೆಚ್ಚು ಮಾನ್ಯತೆ ಇರುವಂತು ಕಾಣುವುದಿಲ್ಲ.
ಕನ್ನಡಿಗ ಅಂದ ಕೂಡಲೆ ಅವನು, "ತಮಿಳು ಹಗೆ" ಎನ್ನುವ ಒಂದು ಅತಿ, ಇಲ್ಲವೇ ಕನ್ನಡದ ಎಲ್ಲವೂ "ಸಂಸ್ಕೃತ ಮೂಲ" ಎನ್ನುವ ಇನ್ನೊಂದು ಅತಿ, ಈ ಎರಡು ಅತಿಗಳಲ್ಲೂ ಇರಬೇಕಾಗಿಲ್ಲ.
ಕನ್ನಡವು ತಮಿಳಿನ ಒಡಹುಟ್ಟಿದುದು, ಕನ್ನಡ-ತಮಿಳುಗಳಲ್ಲಿ ಸಾಮ್ಯತೆ, ಅವು ಒಂದರಿಂದ ಒಂದು ಕೊಂಡ/ಪಡೆದ ಪದಗಳಿಂದ ಅಲ್ಲ. ಅವು ಹೋಲುವುದಕ್ಕೆ ಕಾರಣ, ಅವು ಒಂದೇ ತಾಯಿ ನುಡಿಯ ಕವಲುಗಳು ಅದಕ್ಕೆ.
ಆದರೆ
ಕನ್ನಡ ಮತ್ತು ಸಂಸ್ಕೃತದ ಸಂಬಂಧ/ಹೋಲಿಕೆ, ಕನ್ನಡವೂ ಸಂಸ್ಕೃತದಿಂದ ಹುಟ್ಟಿದೆ ಎಂಬ ಸುಳ್ಳಿನಿಂದ ಅಲ್ಲ. ಇಂದು ಕನ್ನಡವೂ ಹೇಗೆ ಇಂಗಲೀಷಿಂದ ಪದಗಳನ್ನು ಪಡೆಯುತ್ತಿದೆ, ಹಾಗೆ ಹಿಂದೆ ಸಂಸ್ಕೃತದಿಂದ ಪಡೆಯಿತು. ಇದಕ್ಕೆ ಕಾರಣ ಕನ್ನಡ ಬರಹಗಾರರಲ್ಲಿ ಹೆಚ್ಚಿನವರು bilingual ಇಂದೂ, ಹಿಂದೂ. ಅಂದರೆ ಸಂಸ್ಕೃತವನ್ನೂ ಅರಿತ ಕನ್ನಡದ ಬರಹಗಾರ ಕನ್ನಡದಲ್ಲಿ ಸಂಸ್ಕೃತವನ್ನು ಬರೆಸುತ್ತಾನೆ, ಹಾಗೆ ಇಂಗಲೀಷು ತಿಳಿದವನು ಇಂಗಲೀಷನ್ನು.
============================================================
============================================================
ಹೆಚ್ಚು ಜನ ನಂಬಿರುವುದೇ ಧರ್ಮ, ನ್ಯಾಯ, ಸತ್ಯ, ನೀತಿ, ಸಭ್ಯತೆ, ಸದಾಚಾರ, ಸರಿ! ಅಲ್ಲ!
’ಬಳ್ಳಿ’ ಕನ್ನಡದ್ದೇ ಮೂಲ ಪದ - ಎನ್ನಲು ಪುರಾವೆ ಸಾಲದು!
ಮಹೇಶರೆ,
ನೀವು ಬರೆದಿರುವುದೆಲ್ಲವೂ ಚೆನ್ನಾಗಿದೆ; ಆದರೆ ಕ್ಷಮಿಸಿ, ದ್ರಾವಿಡ ನಿಘಂಟಿನಲ್ಲಿನ ವಿವರಣೆಯಲ್ಲಿಯೇ ಗೋಜಲುಗಳಿವೆ! ಆರ್ಯ ಭಾಷೆಗಳನ್ನು ಸೇರಿಸಿಲ್ಲವೆನ್ನುತ್ತಲೇ, ಆ ಭಾಷೆಯ ಪದಗಳನ್ನು ವಿವರಣೆಯ ಕೊನೆಯಲ್ಲಿ ಬಾಲಂಗೋಚಿಯಂತೆ ಸಿಕ್ಕಿಸಿರುವುದರ ಅರ್ಥ-ಪ್ರಾಮುಖ್ಯತೆ ಸ್ಪಷ್ಟವಾಗಿಲ್ಲ! ಭಾಗ-೯ರಲ್ಲಿ ನೀವು ತೋರಿದ ಮೊದಲನೆಯ ವಾಕ್ಯ ನನ್ನ ನಿಲುವನ್ನು ಸಮರ್ಥಿಸಿದರೆ, ಇತರ ವಾಕ್ಯಗಳು, ನೇರವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ನನ್ನ ನಿಲುವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿವೆ. ಇರಲಿ, ನೀವೇ ಹೇಳಿದಂತೆ ನಂಬುವುದು/ಬಿಡುವುದು ಅವರವರ ಅಭಿಪ್ರಾಯ. ನಿಮ್ಮ ನಿಲುವನ್ನು ನಂಬಲು ಸಮರ್ಥವಾದ ಸಾಕ್ಷಿ ನನಗಿನ್ನೂ ದೊರಕಿಲ್ಲ(ದ್ರಾವಿಡ ಶಬ್ದಕೋಶದಲ್ಲಿನ ವಿವರಣೆ ಅದೇಕೋ ಸಾಲದೆನಿಸುತ್ತಿದೆ - ಪುರಾವೆಗಳಿಲ್ಲದ ಕಾರಣ). ಇರಲಿ, ನನ್ನ ಅಭಿಪ್ರಾಯವನ್ನು ನಾನು ಹೇರಲೆತ್ನಿಸುವುದಿಲ್ಲ. ಹಾಗೆಯೇ ಪಡುವಣದವರು ಬರೆದದ್ದೆಲ್ಲ ಸರಿಯೆಂದು ನಂಬುವವನೂ ಅಲ್ಲ. ಯಾವ ಭಾಷೆಯಿಂದ ಯಾವುದು ಹುಟ್ಟಿತು ಎಂಬುದರ ಬಗ್ಗೆ ಯಾರು ಎಷ್ಟು ತಿಪ್ಪರಲಾಗ ಹಾಕಿ ಹಗಲು-ರಾತ್ರಿ ಚರ್ಚಿಸಿದರೂ, ಅವೆಲ್ಲ ಕೇವಲ ಊಹೆಯೇ ಹೊರತು, ಸತ್ಯವಂತೂ ಅಲ್ಲ; ನಂಬಲು ಕಾರಣವೂ ಇಲ್ಲ. ನಾನು ಸಕ್ಕದ ಪಕ್ಕದವನೂ ಅಲ್ಲ; ಸಕ್ಕದ-ವಿರೋಧಿಗಳ ಶತ್ರುವೂ ಅಲ್ಲ. ನನ್ನ ಅಭಿಪ್ರಾಯವೊಂದೇ - ಕನ್ನಡ ಕೇವಲ ಆಡು ಭಾಷೆಯಾಗದೆ ಭಾರತದ ಭಾಷೆಗಳ ಸೋದರಿಯಾಗಿ, ಚೆನ್ನಾಗಿ - ಅನ್ಯೋನ್ಯವಾಗಿರಲು ಸಂಸ್ಕೃತ ಪದಗಳ ಪಾತ್ರ ಅತಿ ಮುಖ್ಯ!
ವಲ್ಲಿ, ಬಳ್ಳಿ ಗಳಿಗೆ ಸಂಬಂಧಿಸಿದಂತೆ ಒಂದು ಬಾರಿ ವಾಮನ ಶಿವರಾಮ ಆಪ್ಟೆಯವರ ಸಕ್ಕದ ಶಬ್ದಕೋಶವನ್ನೂ, ಮೊನಿಎರ್ - ವಿಲಿಯಂ ರ ಸಕ್ಕದ-ಆಂಗ್ಲ ನಿಘಂಟನ್ನೂ ತಿರುವಿಹಾಕುವುದು ಉತ್ತಮ. ಆಗ ನನ್ನ ಅಭಿಪ್ರಾಯದ ಮೂಲದ ಬಗ್ಗೆ ತಮಗೇ ತಿಳಿಯುತ್ತದೆ. ನೆನಪಿಗೆ ಬರುತ್ತಿಲ್ಲ...ಪಹ್ಲವೀ-ಬ್ರಾಹೂಯೀ ನಿಘಂಟೊಂದಿದೆಯೆನಿಸುತ್ತದೆ; ಇನ್ನೂ ಹೆಚ್ಚಿನ ಪುರಾವೆಗಳನ್ನು ಅಲ್ಲಿಂದ ಹೆಕ್ಕಲು ಸಾಧ್ಯವೇ ನೋಡುತ್ತೇನೆ.
ವಿ.ಸೂ: ಬಿ.ಜಿ.ಎಲ್.ಸ್ವಾಮಿಯವರ 'ತಮಿಳು ತಲೆಗಳ ನಡುವೆ' ಗೂ ನನಗೂ ಅತೀವ ಅಕ್ಕರೆಯೇನಿಲ್ಲ.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
Re: ’ಬಳ್ಳಿ’ ಕನ್ನಡದ್ದೇ ಮೂಲ ಪದ
ಒಟ್ಟಿನಲ್ಲಿ ಅದು ಸಂಸ್ಕೃತದ್ದೇ ಎಂದು ಹೇಳುವುದೂ ಅಷ್ಟು ಸರಿಯಿಲ್ಲ. ಕನ್ನಡದ್ದೇ ಎನ್ನವುದಕ್ಕೆ ತಕ್ಕ ಮಟ್ಟಿನ ವಾದಗಳೂ ಇವೆ ಅಂತ ತೋರಿಸಿದ್ದೇನೆ. ಅದನ್ನು ನಂಬುವುದು ಬಿಡುವುದು ಅವರವರಿಗೆ ಬಿಟ್ಟಿದ್ದು.
ಸಂಸ್ಕೃತದ ಮೇಲೆ ಅತೀವವಾಗಿ ಪ್ರೇಮ, ಕುರುಡು ಆದರವಿರುವವರು, ದ್ರಾವಿಡ ನುಡಿಗಳ ಮೇಲೆ ಆದರ ಇಲ್ಲದೇ, ಸಂಸ್ಕೃತವೇ "ಸರ್ವಭಾಷಾಜನನಿ"[ಆದರೆ ಸಂಸ್ಕೃತ ಮತ್ತು ಪಾರಸೀ ಭಾಷೆಗಳು ಒಂದೇ proto-language ಇಂದ ಬಂದಿದೆ ಎಂದು ಅವರಿಗೆ ತಿಳಿದಿರುವುದಿಲ್ಲ!!] ಎಂದು ಬೊಬ್ಬೆ ಇಡುವವರ ನಿಘಂಟಗಳನ್ನು ನೋಡಿದರೆ, ಅವರು ಹೇಗೋ ಬೇಕಾದಷ್ಟು ಕನ್ನಡದ ಪದಗಳನ್ನೂ ಸಂಸ್ಕೃತದದ್ದೂ ಎಂದು ಹೇಗೋ ಒಂದು Etmology ತೋರಿಸಿದ್ದಾರೆ. ಈ ಬಗೆಯ ನಿಘಂಟುಗಳೂ ಇವೆ.
ಅದರಲ್ಲಿ ಬೇಕಾದಷ್ಟು ತಪ್ಪುಗಳಿವೆ ಎಂಬ ವಾದವಿದೆ. ಅಂತಹ ಪದಗಳಲ್ಲಿ ’ಬಳ್ಳಿ’ಯಂತೆ ’ಹೊತ್ತಗೆ’, ’ನೀರು’, ’ಪಕ್ಕ’, ಮುಂತಾವು ಇವೆ.
"ಪದಾರ್ಥ ಚಿಂತಾಮಣಿ" ಹೊತ್ತಗೆ ನೋಡಬೇಕು. ಅದರಲ್ಲಿ ಹಲವರು ಸಂಸ್ಕೃತದದ್ದೇಎಂದು ಕೊಂಡಿರುವ ಬೇಕಾದಷ್ಟು ಪದಗಳ ಜನುಮ ಜಾಲಾಡಿದ್ದಾರೆ. ಕಿಟ್ಟಲ್ ಪಟ್ಟಿ ಮಾಡಿರುವ ಕನ್ನಡದಿಂದ ಸಕ್ಕದಕ್ಕೆ ಹೋದ ಪದಗಳನ್ನು ನೋಡಬಹುದು.
ಈ ಬಳ್ಳಿ ಕನ್ನಡದ್ದೇ ಇರಬೇಕು ಏಕೆಂದರೆ ಕನ್ನಡದೇಶದ ಬಹಳ ಹಳೆಯ ಊರುಗಳ ಹೆಸರಲ್ಲಿ ’ಬಳ್ಳಿ’ , ಹೂಬಳ್ಳಿ=>ಹುಬ್ಬಳ್ಳಿ, ಬಳ್ಳಿಗಾವೆ ಮುಂತಾದವು.
'ಬಳ್ಳಿ' ಸಂಸ್ಕೃತದದ್ದೇ ಎಂದು ಸಾಧಿಸಲು ಯಾವ ಪುರಾವೆಯನ್ನು(ಲಿಂಕು, ಹೊತ್ತಗೆಗಳ ಹೆಸರು) ಯಾರು ಕೊಟ್ಟಿಲ್ಲ.
"Sanskrit, Tamil and Pahlavi Dictionaries" ಇಲ್ಲಿದೆ.
http://webapps.uni-koeln.de/tamil/ ಅದರಲ್ಲೂ "All dictionaries" option ಆಯ್ದು, 'valli' ಮತ್ತು 'val' ಪದಗಳನ್ನು ಹುಡುಕಬಹುದು. ಅಲ್ಲೂ ಅದು ಎರಡು(ಸಂಸ್ಕೃತ ಮತ್ತು ದ್ರಾವಿಡ) ನಿಘಂಟಲ್ಲೂ ಬರುವುದು. ಮತ್ತೂ ಅದು ಸಂಸ್ಕೃತದ್ದೇ ಎಂದು ಹೇಳುವುದಿಲ್ಲ.
Dravidian Etmological Dictionary ಇರುವಂತೆ ಸಂಸ್ಕೃತಕ್ಕೂ ಇದ್ದರೆ ಅದರಲ್ಲಿ ಹುಡುಕಬೇಕು. ಅಂತಹ ನಿಘಂಟು ಸಿಗುತ್ತಿಲ್ಲ
ನನ್ನ ಅಭಿಪ್ರಾಯವೊಂದೇ - ಕನ್ನಡ ಕೇವಲ ಆಡು ಭಾಷೆಯಾಗದೆ ಭಾರತದ ಭಾಷೆಗಳ ಸೋದರಿಯಾಗಿ, ಚೆನ್ನಾಗಿ - ಅನ್ಯೋನ್ಯವಾಗಿರಲು ಸಂಸ್ಕೃತ ಪದಗಳ ಪಾತ್ರ ಅತಿ ಮುಖ್ಯ!
ಹೇಗೆ? ಕನ್ನಡದಲ್ಲಿ ಸಂಸ್ಕೃತದ ಪದ ಇರದಿದ್ದರೆ ಅದಕ್ಕೆ ಅವಮಾನವೇ? ಅನ್ಯೋನ್ಯತೆಗೂ ಸಂಸ್ಕೃತಕ್ಕೂ ಎಲ್ಲಿಯ ನಂಟು? ಹಾಗಾದರೆ ನಾವು ಅನ್ಯೋನ್ಯವಾಗಿರ ಬೇಕಾದರೆ / ಹೊಂದಿಕೊಂಡು ಇರಲು ಸಂಸ್ಕೃತದಿಂದ ಮಾತ್ರ ಸಾಧ್ಯವೇ?
ಹಾಗಾದರೆ ಯಾರು "need ಇಲ್ಲದೇ ಸಂಸ್ಕೃತದ ಪದ ಬೇಡ" ಅನ್ನುವವರು "ನಮ್ಮ ದೇಶದ ಭಾಷಾ ಅನ್ಯೋನ್ಯತೆಗೆ" ಕುತ್ತು ತರುವವರೇ?
ಎಷ್ಟು ಮಂದಿಗೆ ಸಂಸ್ಕೃತ ಬರುವುದು(ಮಾತಾಡುವುದು ಬಿಡಿ, ಬರಿ ಸಂಸ್ಕೃತದಲ್ಲಿ ಬರೆದುದನ್ನು ಸರಿಯಾಗಿ ತಿಳಿಯಲು)? ೨%( ಅಂದರೆ ಎರಡು ಕೋಟಿ ಸಂಸ್ಕೃತ ಬಲ್ಲವರು
)? ಹಾಗಾದರೆ ಮಿಕ್ಕ ೯೮% ಮಂದಿ ನಮ್ಮ ದೇಶದಲ್ಲಿ ಅನ್ಯೋನ್ಯವಾಗಿ ಇಲ್ಲವೇ. ಇಂದು ಸಂಸ್ಕೃತದ ಸ್ಥಿತಿಯೇ ಹೇಳುತ್ತಿದೆ, ಅದು ಮಂದಿಗೆ ಎಷ್ಟು ಬೇಕು, ಎಷ್ಟು ಬೇಡ ಅಂತ.
"ಎಲ್ಲ ಪದಗಳೂ ಸಂಸ್ಕೃತದಿಂದ ಬಂದುವು" ಎಂದರೆ ಕಣ್ಣು ಮುಚ್ಚಿ ಒಪ್ಪಿಕೊಳ್ಳಲು ಆಗವುದಿಲ್ಲ. ಅದಕ್ಕೂ "ಭಾಷಾನ್ಯೂನ್ಯತೆ"ಗೂ ಯಾವ ನಂಟಿಲ್ಲ. ಇದು ಕನ್ನಡದ ಸ್ವಂತಿಕೆ, ತನ್ತನದ ಪ್ರಶ್ನೆ.!!!
Re: ’ಬಳ್ಳಿ’ ಕನ್ನಡದ್ದೇ ಮೂಲ ಪದ
ಅಯ್ಯಪ್ಪಾ-
ನಾನು ಮಹಿಷ ಅಲ್ಲ ಅನ್ನೋ ಒಬ್ಬರು, ಆನೆ ಮುಖದ ಇನ್ನೊಬ್ಬರು. ಇವರಿಬ್ಬರ ಜಗ್ಗಾಟದಲ್ಲಿ ನಿಜವಾದ ಬಳ್ಳಿಯಾಗಿದ್ದಿದ್ದರೆ ಇಷ್ಟು ಹೊತ್ತಿಗೆ ಕಿತ್ತುಕೊಂಡು ಹೋಗ್ತಿತ್ತು. ಅಷ್ಟೆ ಯಾಕೆ ವಲ್ಲಿಯಾಗಿದ್ದಿದ್ದರೂ ಹರಕೊಂಡು ಹೋಗ್ತಿತ್ತು. ಯಾರೊ ಹೇಳಿದಾರಲ್ಲ - "ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತು" ಅಂತ.(ಯಾರೂ?) ಹಾಗಾಯ್ತು
ಆದರೆ, ಚರ್ಚೆ ಒಳ್ಳೆ ತಿರುವುಗಳನ್ನ ಪಡೀತಿದೆ, ದಯವಿಟ್ಟು ಮುಂದುವರೆಸಿ. ನಿಮ್ಮ ಮಾತುಗಳೆಲ್ಲಾ ಓದಿದ ಮೇಲೆ ನನ್ನ ಒಲವು ಈ ಪದಗಳು ಕನ್ನಡದಿಂದ ಸಂಸ್ಕೃತಕ್ಕೆ ಹೋಗಿರುವ ಸಾಧ್ಯತೆಯೇ ಹೆಚ್ಚೇನೋ ಅನಿಸುತ್ತಿದೆ. ಪುರಾವೆ ಕೇಳ್ಬೇಡಿ-ಅನಿಸಿಕೆ ಅಷ್ಟೆ.
ಅಭಿನಂದನೆಗಳು.
Re: ’ಬಳ್ಳಿ’ ಕನ್ನಡದ್ದೇ ಮೂಲ ಪದ - ಚರ್ಚೆ ಮುಂದುವರೆಯಲಿ
ವಲ್ಲಿ ಮತ್ತು ಬಳ್ಳಿ ಈ ಪದಗಳೆರಡರ ಬಗೆಗಿನ ಚರ್ಚೆ `ಸಂಪದ' ವೆಂಬ ವೃಕ್ಷದಲ್ಲಿ (ಮರದಲ್ಲಿ) ಬಳ್ಳಿಯಂತೆಯೇ ಹಬ್ಬುತ್ತಿರುವುದು ಸಂತಸದ ವಿಷಯ. ಈ ಒಂದು ಚರ್ಚೆಯಿಂದ ನನಗೆ ಹೊಸ ಹೊಸ ಪದಗಳು ಗೊತ್ತಾಗಿಸುತ್ತಿರುವುದಕ್ಕೆ ನಿಮಗೆಲ್ಲಾ ಧನ್ಯವಾದಗಳು. ಬಳ್ಳಿ ಮರವ ತಬ್ಬಿದಂತೆ - ಚರ್ಚೆ ಮುಂದುವರೆಯಲಿ
ಚಂದ್ರಶೇಖರ ಬಿ.ಎಚ್.
೦೫/೦೪/೨೦೦೭
ಸಕ್ಕದದ "ನಂಟು"
ಮಹೇಶರೆ,
೧. ನೀವು ತೋರಿದ ತಮಿಳು-ಪಹ್ಲವೀ-ಸಕ್ಕದ ನಿಘಂಟನ್ನು ನಾನು ಹಲವು ವರ್ಷಗಳಿಂದ ಬಳಸುತ್ತಿದ್ದೇನೆ; ನಾನು ಹುಡುಕುತ್ತಿದ್ದುದು ಇದಲ್ಲ. ಆದರೂ, ಇಲ್ಲಿಯೂ "ಮೂಲ" ಯಾವುದೆಂಬುದರ ಬಗ್ಗೆ ಯಾವ ಉಲ್ಲೇಖವೂ ಇಲ್ಲ. ಸಂಶೋಧನೆಯ ಅಗತ್ಯ ಇಲ್ಲದಿಲ್ಲ.
೨. ಈಗ ಪ್ರತಿಯೊಬ್ಬ ಭಾರತೀಯನೂ ಶಾಲೆಯಲ್ಲಿ ಮೂರು ಭಾಷೆಯನ್ನು ಅವಶ್ಯಕವಾಗಿ ಕಲಿತಿರುವುದರಿಂದ ಸಂಸ್ಕೃತ ಬೇಕಿಲ್ಲದಿರಬಹುದು. ಆದರೆ ಸಕ್ಕದ ಪದಗಳು ಎಲ್ಲ ಭಾರತೀಯ ಭಾಷೆಗಳಲ್ಲಿ ಹಾಸುಹೊಕ್ಕಾಗಿದೆ; ಇದನ್ನು ಅಲ್ಲಗಳೆಯಲು ಸಾಧ್ಯವಿಲ್ಲ; ಕಾಲಕ್ರಮೇಣ ರೂಪಾಂತರ ಹೊಂದಿರಬಹುದು ಅಷ್ಟೇ! "ಗಣೇಶ" ಎಂದರೆ ಎಲ್ಲರಿಗೂ ಅರ್ಥವಾಗುತ್ತದೆ. "ಪಿಳ್ಳಾರಿ" ಎಂದರೆ ತಮಿಳರಿಗೆ ಮಾತ್ರ! ನೀವು ಕೊಯಮತ್ತೂರಿನಲ್ಲಿ ಎರೆದುಕೊಂಡರೂ, ಹುಬ್ಬಳ್ಳಿಯಲ್ಲಿ ಜಳಕಮಾಡಿದರೂ, ಮೈಸೂರಿನಲ್ಲಿ ಮಿಂದರೂ, ಅರ್ಥವಾಗುವುದು ಕನ್ನಡಿಗರಿಗೆ ಮಾತ್ರ. "ಸ್ನಾನ" ಎಂದರೆ ನಮಗೂ ಪಕ್ಕದ ರಾಜ್ಯದವರಿಗೂ ಎಲ್ಲರಿಗೆ ಅರ್ಥವಾಗುತ್ತದೆ. ಆದ್ದರಿಂದಲೇ ಕನ್ನಡದ ಪದಗಳ ಜೊತೆಗೆ ಸಕ್ಕದ ಅವಶ್ಯಕ; ಅದು ಆರ್ಯಾವರ್ತವನ್ನೂ ದಕ್ಷಿಣಾಪಥವನ್ನೂ ಬೆಸೆವ ದೊಡ್ಡ ಕೊಂಡಿ. ಇದೇ ಸಕ್ಕದಕ್ಕೆ ಇರುವ "ನಂಟಿನ" ಗುಣ. ನಂಟಿರಲು ಎಲ್ಲರಿಗೂ ಆ ಭಾಷೆ ಆಡಲು ಬರಲೇಬೇಕೆನ್ನುವ ಅಗತ್ಯವಂತೂ ಇಲ್ಲವೇ ಇಲ್ಲ. "ರಾಮನವಮಿ" ಎನ್ನಲು ಸಕ್ಕದ ಸಂಭಾಷಣೆ ಬರಬೇಕೇ?
ಇದರರ್ಥ ಕನ್ನಡದಲ್ಲಿ "ಅನಗತ್ಯ" ಸಕ್ಕದಪದಗಳನ್ನು ತುಂಬಿ ಎಂದಲ್ಲ; ಸಕ್ಕದದ "ನಂಟು" ಇಲ್ಲದೆ ಕನ್ನಡಕ್ಕೆ ಅವಮಾನವೆಂದು ಹೇಳಿದವರಾರು? ಭಾಷಾ ಅನ್ಯೋನ್ಯತೆಗೆ ಸಕ್ಕದ ಒಂದು ವರವೇ ಹೊರತು, ಕೇವಲ ಅದೊಂದೇ ಮಾಧ್ಯಮ ಎಂದು ತಿಳಿವ ಅವಶ್ಯಕತೆಯಿಲ್ಲ. ಇದು ನಿಮಗೆ ತಿಳಿಯದ್ದೇನಲ್ಲ! ಸಂಸ್ಕೃತ ಕೇವಲ ಭಾಷೆಯಲ್ಲ; ಅದು ಆಡುಭಾಷೆಗಳನ್ನು ಸಂಸ್ಕರಿಸಿದ ಭಾಷೆ; ನಮ್ಮ ಸಂಸ್ಕೃತಿಗೆ ತಾಗಿರುವ ಸಾಹಿತ್ಯದ ಭಾಷೆ; ನಮ್ಮ ಧರ್ಮದೊಡನೆ ಹಾಸುಹೊಕ್ಕಾಗಿರುವ ಭಾಷೆ. ಇದನ್ನು ಕನ್ನಡದಿಂದ ದೂರವಿಡುವುದು ಕಸ್ತೂರಿಯಿಂದ ಪರಿಮಳವನ್ನು ಕಿತ್ತೆಸೆದಂತೆ! ದೈನಂದಿನ ಆಡು ಭಾಷೆಗೆ ಸಕ್ಕದ ಬೇಡದಿರಬಹುದು; ಸಾಹಿತ್ಯಕ್ಕೆ ಅಗತ್ಯವಾಗಿ ಬೇಕು; ಯೋಚಿಸಿ ನೋಡಿ. ೨೦೦೦ ವರ್ಷಗಳ ಇತಿಹಾಸದಲ್ಲಿ ಕನ್ನಡಕ್ಕೆ ಸಕ್ಕದ ಮುಳುವಾಗುತ್ತದೆ ಎಂದೆನಿಸಿದ್ದ ಪಕ್ಷದಲ್ಲಿ, ಅದು ಯಾವಾಗಲೋ ಕಿತ್ತೆಸೆಯಲ್ಪಡುತ್ತಿತ್ತು!
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಕನ್ನಡದ ಬಳ್ಳಿ
೧. ನೀವು ತೋರಿದ ತಮಿಳು-ಪಹ್ಲವೀ-ಸಕ್ಕದ ನಿಘಂಟನ್ನು ನಾನು ಹಲವು ವರ್ಷಗಳಿಂದ ಬಳಸುತ್ತಿದ್ದೇನೆ; ನಾನು ಹುಡುಕುತ್ತಿದ್ದುದು ಇದಲ್ಲ. ಆದರೂ, ಇಲ್ಲಿಯೂ "ಮೂಲ" ಯಾವುದೆಂಬುದರ ಬಗ್ಗೆ ಯಾವ ಉಲ್ಲೇಖವೂ ಇಲ್ಲ. ಸಂಶೋಧನೆಯ ಅಗತ್ಯ ಇಲ್ಲದಿಲ್ಲ.
"’ಬಳ್ಳಿ’ ೧೦೦% ಸಂಸ್ಕೃತದ್ದೇ" ಇಂದ, ಈಗ "ಸಂಶೋಧನೆಯ ಅಗತ್ಯ ಇಲ್ಲದಿಲ್ಲ" ಕ್ಕೆ ಬಂದಿದೆ. ಇದನ್ನೇ ಮೊದಲೂ ಹೇಳಿದುದು. ಸಂಸ್ಕೃತದ್ದೇ ಅನ್ನಲು ’ಪುರಾವೆ’ ಇಲ್ಲ ಅಂತ. ಆದರೆ Dravidian Etmology ಕನ್ನಡದ್ದೇ ಆಗಿರುವ chances ಇದೆ ಎಂದು ತೋರಿಸಿದೆ.
೨. ಈಗ ಪ್ರತಿಯೊಬ್ಬ ಭಾರತೀಯನೂ ಶಾಲೆಯಲ್ಲಿ ಮೂರು ಭಾಷೆಯನ್ನು ಅವಶ್ಯಕವಾಗಿ ಕಲಿತಿರುವುದರಿಂದ ಸಂಸ್ಕೃತ ಬೇಕಿಲ್ಲದಿರಬಹುದು. ಆದರೆ ಸಕ್ಕದ ಪದಗಳು ಎಲ್ಲ ಭಾರತೀಯ ಭಾಷೆಗಳಲ್ಲಿ ಹಾಸುಹೊಕ್ಕಾಗಿದೆ; ಇದನ್ನು ಅಲ್ಲಗಳೆಯಲು ಸಾಧ್ಯವಿಲ್ಲ; ಕಾಲಕ್ರಮೇಣ ರೂಪಾಂತರ ಹೊಂದಿರಬಹುದು ಅಷ್ಟೇ! "ಗಣೇಶ" ಎಂದರೆ ಎಲ್ಲರಿಗೂ ಅರ್ಥವಾಗುತ್ತದೆ. "ಪಿಳ್ಳಾರಿ" ಎಂದರೆ ತಮಿಳರಿಗೆ ಮಾತ್ರ! ನೀವು ಕೊಯಮತ್ತೂರಿನಲ್ಲಿ ಎರೆದುಕೊಂಡರೂ, ಹುಬ್ಬಳ್ಳಿಯಲ್ಲಿ ಜಳಕಮಾಡಿದರೂ, ಮೈಸೂರಿನಲ್ಲಿ ಮಿಂದರೂ, ಅರ್ಥವಾಗುವುದು ಕನ್ನಡಿಗರಿಗೆ ಮಾತ್ರ. "ಸ್ನಾನ" ಎಂದರೆ ನಮಗೂ ಪಕ್ಕದ ರಾಜ್ಯದವರಿಗೂ ಎಲ್ಲರಿಗೆ ಅರ್ಥವಾಗುತ್ತದೆ. ಆದ್ದರಿಂದಲೇ ಕನ್ನಡದ ಪದಗಳ ಜೊತೆಗೆ ಸಕ್ಕದ ಅವಶ್ಯಕ; ಅದು ಆರ್ಯಾವರ್ತವನ್ನೂ ದಕ್ಷಿಣಾಪಥವನ್ನೂ ಬೆಸೆವ ದೊಡ್ಡ ಕೊಂಡಿ. ಇದೇ ಸಕ್ಕದಕ್ಕೆ ಇರುವ "ನಂಟಿನ" ಗುಣ. ನಂಟಿರಲು ಎಲ್ಲರಿಗೂ ಆ ಭಾಷೆ ಆಡಲು ಬರಲೇಬೇಕೆನ್ನುವ ಅಗತ್ಯವಂತೂ ಇಲ್ಲವೇ ಇಲ್ಲ. "ರಾಮನವಮಿ" ಎನ್ನಲು ಸಕ್ಕದ ಸಂಭಾಷಣೆ ಬರಬೇಕೇ?
"ಸ್ನಾನ" ಇದನ್ನು ಬಹಳ ಮಂದಿಗೆ ಹೇಳಲೇ ಬರುವುದಿಲ್ಲ. ಇನ್ನು ಇದು standard ಅನ್ನೋದು ತಪ್ಪು. ’ರಾಮನವಮಿ’ಗೂ ಕನ್ನಡಕ್ಕೂ ಏನು ನಂಟು? ಕನ್ನಡಿಗರೆಲ್ಲ ಹಿಂದುಗಳೇ?
ನಮ್ಮ ಬಿಸಿಲು ಮಾರಮ್ಮ, ಅಣ್ಣಮ್ಮ, ಹಾಸನಾಂಬೆ, ಮದ್ದೂರಮ್ಮ, ಮಲೆಯ ಮಾದೇವ, ಇವರನ್ನು ಯಾವ ಹಿಂದು ಸಂಸ್ಕೃತದ ಹೊತ್ತಗೆ ಒಪ್ಪುವುದು, ಹೆಸರಿಸುವುದು? ಹೀಗೆ ಒಂದು ಜಾತಿ/religion ಅವರಿಗೆ ಬೇಕು, ಅಂತ ಎಲ್ಲರ ಮೇಲೂ ಹೇರಲಾಗದು.
ಉತ್ತರದವರ ನಂಬಿಕೆ "ಹೆಣವನ್ನು ಹಿಂದುಗಳು ಹೂಳುವುದಿಲ್ಲ", ಇದು ಸರಿಯೇ? ಸಂಸ್ಕೃತದಲ್ಲಿ ಇರುವ ಅಪರಶಾಸ್ತ್ರಗಳು ಬರಿ ಸುಡುವುದಕ್ಕೆ ಇವೆ, ಹೊರತು ಹೂಳಲು, ಇಲ್ಲವೆ ಬೇರಾವುದೇ ಬಗೆಯಲ್ಲಿ ಹೆಣಕ್ಕೆ ಗತಿ ಕಾಣಿಸಲು ಇಲ್ಲ ಅಂತ(ದಿಟವಿಲ್ಲದಿದ್ದರೆ ಹೇಳಬಹುದು). ಗರುಡ ಪುರಾಣದಲ್ಲಿ ಹೂಳಲು ಏನೂ ಹೇಳಿಲ್ಲ ಅಂತ!! ಒಕ್ಕಲಿಗರು ಹೂಳುವಾಗ ಯಾವ ಸಂಸ್ಕೃತದ ಮಂತ್ರ ಹೇಳಲ್ಲ(ಇದು ಗೊತ್ತು); ತಿಥೀ ಮಾಡಲ್ಲ. ಅಂದರೆ ಸಂಸ್ಕೃತದ ಹೊತ್ತಗೆ ಹೇಳುವುದನ್ನು ಮಾಡಲ್ಲ, ಹಾಗಂತ ಅವರು ಧರ್ಮಭ್ರಷ್ಟರೇ? ಅದಕ್ಕೆ ಈ ಧರ್ಮದ/ಗಳ ಸುದ್ದಿ ಬೇಡ.
ಇನ್ನು ನಾವು "ಆರ್ಯಾವರ್ತ ದಕ್ಷಿಣಾಪಥ ಗೌಡದೇಶ ಪಾಂಚಾಲ"ದ ಕಾಲವನ್ನು ದಾಟಿದ್ದೇವೆ. ಸಂಸ್ಕೃತವನ್ನು ಒತ್ತಾಯವಾಗಿ ಹೇರಲು ಅಂತಹ ಅರಸುಗಳೂ ಇಲ್ಲ. ಅವರ ಕಾಲದಲ್ಲೂ ಸಂಸ್ಕೃತವನ್ನು ಹಾದಿಬೀದಿಯಲ್ಲಿ, ಎಲ್ಲರು ಮಾತಾಡಿದ್ದೂ ಅನುಮಾನ ಅಂತ ಇದೆ. ಈಗ recent ಆಗಿ ಟಿಪ್ಪು ಮೇಲೇ ಹಾಯ್ದು ಬಿದ್ದ ಮಂದಿಗೆ, ನಮ್ಮ ಹಿಂದೂ ಅರಸರೂ ಕೂಡ ದೇಶಭಾಷೆಯಲ್ಲದ(local language) ಸಂಸ್ಕೃತವನ್ನು ಆಡಳಿತ ನುಡಿಯನ್ನಾಗಿ ಮಾಡಿ, ಸಂಸ್ಕೃತದ ಹೇರಿಕೆ ಮಾಡಿದ್ದರು ಎಂದು ಅನ್ನಿಸುವುದೇ ಇಲ್ಲ. ಕಾರಣ ಅವರು "ಹಿಂದೂ"(ಜೈನರೂ ಹಿಂದೂ ಅಂತ) ಅಷ್ಟೇ, ಬೇರೇನು ಇಲ್ಲ.
ಈಗ ಬೆಸೆಯುವ ಕೊಂಡಿ "English". ಅದಕ್ಕೆ ಸಂಸ್ಕೃತವನ್ನು ಎಲ್ಲೂ ಆಡಳಿತ ನುಡಿ ಮಾಡಿಲ್ಲ. ಸಂಸ್ಕೃತದಲ್ಲಿ ಯಾವ ಅರ್ಜಿ ಕೊಟ್ಟರು ಸರಕಾರ ತಗೋಳಲ್ಲ. ಬೇಕಾದರೆ ಕೊಟ್ಟಿ ನೋಡಬಹುದು.
ಕರ್ನಾಟಕದಲ್ಲೂ ಆಡಳಿತ ನುಡಿ ಇಂಗ್ಲೀಷೇ. ಅದರಲ್ಲಿ ಸಂಸ್ಕೃತ ಬರೆಸಲ್ಲ. ಅಂದರೂ ಕೆಲಸ ನಡೆಯತ್ತೆ.
ಇದರರ್ಥ ಕನ್ನಡದಲ್ಲಿ "ಅನಗತ್ಯ" ಸಕ್ಕದಪದಗಳನ್ನು ತುಂಬಿ ಎಂದಲ್ಲ; ಸಕ್ಕದದ "ನಂಟು" ಇಲ್ಲದೆ ಕನ್ನಡಕ್ಕೆ ಅವಮಾನವೆಂದು ಹೇಳಿದವರಾರು?[ ಭಾಷಾ ಅನ್ಯೋನ್ಯತೆಗೆ ಸಕ್ಕದ ಒಂದು ವರವೇ ಹೊರತು, ಕೇವಲ ಅದೊಂದೇ ಮಾಧ್ಯಮ ಎಂದು ತಿಳಿವ ಅವಶ್ಯಕತೆಯಿಲ್ಲ. ಇದು ನಿಮಗೆ ತಿಳಿಯದ್ದೇನಲ್ಲ! ಸಂಸ್ಕೃತ ಕೇವಲ ಭಾಷೆಯಲ್ಲ; ಅದು ಆಡುಭಾಷೆಗಳನ್ನು ಸಂಸ್ಕರಿಸಿದ ಭಾಷೆ; ನಮ್ಮ ಸಂಸ್ಕೃತಿಗೆ ತಾಗಿರುವ ಸಾಹಿತ್ಯದ ಭಾಷೆ; ನಮ್ಮ ಧರ್ಮದೊಡನೆ ಹಾಸುಹೊಕ್ಕಾಗಿರುವ ಭಾಷೆ. ಇದನ್ನು ಕನ್ನಡದಿಂದ ದೂರವಿಡುವುದು ಕಸ್ತೂರಿಯಿಂದ ಪರಿಮಳವನ್ನು ಕಿತ್ತೆಸೆದಂತೆ! ದೈನಂದಿನ ಆಡು ಭಾಷೆಗೆ ಸಕ್ಕದ ಬೇಡದಿರಬಹುದು; ಸಾಹಿತ್ಯಕ್ಕೆ ಅಗತ್ಯವಾಗಿ ಬೇಕು; ಯೋಚಿಸಿ ನೋಡಿ. ೨೦೦೦ ವರ್ಷಗಳ ಇತಿಹಾಸದಲ್ಲಿ ಕನ್ನಡಕ್ಕೆ ಸಕ್ಕದ ಮುಳುವಾಗುತ್ತದೆ ಎಂದೆನಿಸಿದ್ದ ಪಕ್ಷದಲ್ಲಿ, ಅದು ಯಾವಾಗಲೋ ಕಿತ್ತೆಸೆಯಲ್ಪಡುತ್ತಿತ್ತು!
ಕನ್ನಡದ ಪದಗಳು ತಿಂದು ಹಾಕುತ್ತಿರುವ ಸಕ್ಕದಪದಗಳನ್ನು, ಇಂಗ್ಲೀಸು ಪದಗಳನ್ನೂ ಇಂದೂ ನುಸುಳಿಸಲಾಗುತ್ತಿದೆ. "ಹಾಲು/ಕ್ಷೀರ", "ನೀರು/ಜಲ", "ಗಾಳಿ/ವಾಯು", "ದೊಡ್ಡ ಬೆಂಗಳೂರು/ಬೃಹತ್ ಬೆಂಗಳೂರು", "ಕೋಳಿ ಸಾಕಣೆ/ಕುಕ್ಕುಟ ಪಾಲನೆ"(ನಮ್ಮ ಹಳ್ಳಿಯಲ್ಲಿ "ಕುಕ್ಕುಟ ಪಾಲನಾ ಇಲಾಖೆ"ಯ ಕಛೇರಿ ಇದೆ). ಇದಕ್ಕೆ ಕಾರಣವಿಷ್ಟೆ: "ಸಕ್ಕದ ಒಂದು ಸತ್ತ ನುಡಿ, ಇಲ್ಲವೇ ಅದಕ್ಕೆ ತ್ರಾಣವೇ ಇಲ್ಲ. ಅದರ fanaticಗಳು ಅದನ್ನು ಬೇರೆ ನುಡಿಗಳಿಗೆ infect ಮಾಡಿ ಬದುಕಿಸುವ ಹುನ್ನಾರದಲ್ಲಿದ್ದಾರೆ ಅಷ್ಟೇ", ಹೀಗೆ ಹೇಳಿದರೆ ಹಲವರಿಗೆ ’ಅತಿ’ ಅನ್ನಿಸಬಹುದು. ಆದರೆ ಅದರಿಂದ ಸಕ್ಕದದ ಕೂಟೆ ಕನ್ನಡವೂ ಸಾಯುದೆ ಹೊರತು, ಕನ್ನಡ ಅದರಿಂದ ಬದುಕಲ್ಲ.
ಕನ್ನಡ ಬದುಕಬೇಕಾದರೆ ಇಂದಿನ generation ಇಷ್ಟ ಪಡುವ, ಅವರಿಗೆ ಬೇಕಾಗಿರುವ ಬರಹ/ಬರೆವಣಿಗೆ ಕನ್ನಡದಲ್ಲಿ ಬರಬೇಕು. ಅದರಲ್ಲಿ ಒಂದು science, politics, economics, technology ಮುಂತಾದವು ಇರಬೇಕು. ಅದು ಸಕ್ಕದ ಬರೆಸುವುದಿಂದ ಆಗಲ್ಲ. ಬದಲಿಗೆ ನಾವು ಇಂಗ್ಲೀಷು ಕಡೆಗೆ ನೋಡಲೇ ಬೇಕು( ಅಂದರೆ ಇಂಗ್ಲೀಸು ಮಾದರಿ. ಇಂಗ್ಲೀಸು ಬರೆಸಿ ಅಂತ ಹೇಳ್ತಿಲ್ಲ). ಕನ್ನಡವನ್ನು ಓದುವವರು ಕಡಮೆಯಾಗುತ್ತಿರುವುದೂ, ಸಿನಿಮಾ ಕನ್ನಡವನ್ನು ಹೆಚ್ಚು ಮಂದಿ ಮೆಚ್ಚುತ್ತಿರುವುದೂ ಇದನ್ನು ತೋರಿಸುವುದು( 5 ಕೋಟಿಯಲ್ಲಿ ನೂರು ಪಂಡಿತರೂ ಇದನ್ನು ಕೀಳೆಂದರೆ, who cares? ಅಂತಾರೆ).
ಸಂಸ್ಕೃತವು ಕನ್ನಡವನ್ನು ಸಂಸ್ಕರಿಸಿದ್ದರಿಂದ ಬಂದುದಲ್ಲ. ಇದಕ್ಕೆ ಪುರಾವೆಯೇ ಇಲ್ಲ. ಸಂಸ್ಕೃತ ಸಂಸ್ಕರಿಸಿದ್ದೇ ಅಲ್ಲ; ಹೇಗೆ "ಸಂಸ್ಥಾ" ಅಂದರೆ ’ಗುಂಪು/ಹಲವರು ನೆಲೆಸಿಸಿದ್ದು/ಒಕ್ಕೂಟ’ವೋ, ಹಾಗೆ "ಸಂಸ್ಕೃತ" ಅಂದರೆ "ಹಲವರು ಸೇರಿ ಮಾಡಿದ್ದು"( ಈ ವಾದವೂ ಇದೆ), ಯಾವುದೂ ಕಾಲದಲ್ಲಿ. ಪಾಣಿನಿ ಇದ್ದ ಪೇಷಾವರದಲ್ಲಿ( ಇಲ್ಲ ಬೇರೊಂದೆಡೆ, ಯಾರಿಗೆ ಬೇಕದು! ). ಅದಕ್ಕೆ ಬೆಳೆವಣಿಗೆಯೇ ಇಲ್ಲ. ಯಾವುದೋ ಕಾಲದಲ್ಲಿ ಯಾರೋ ಒಬ್ಬ ಹಾಕಿ ಬೇಲಿಯೊಳಗೆ ಇದ್ದು ಸತ್ತಿದೆ. ಅದರಲ್ಲಿ updation ಇಲ್ಲ . Refined oil ಕೂಡ ಹಳೆಯದಾಗಿ ಕಮಟುತ್ತೆ. ಕನ್ನಡದಂತೆ ಬಂಡಾಯ, ಮಾರ್ಕವಾದ, ನಕ್ಸಲ್ವಾದ ಮುಂತಾದ ಹೊಸಕಾಲದ ಯೋಚನೆಗಳು ಇದೆಯೇ? democracy, communism, capitalism ಬಗ್ಗೆ ಯಾವ ಸಂಸ್ಕೃತದ ಗ್ರಂಥ/ಹೊತ್ತಗೆ ಇದೆ?
ಸಕ್ಕದವು ಕನ್ನಡ ಸಾಹಿತ್ಯದಲ್ಲಿ ಇದೆ, ಆದರೆ ಎಲ್ಲಾ ಸಾಹಿತ್ಯದಲ್ಲಿ ಇಲ್ಲ. ಕಾರಣ ಕನ್ನಡದಲ್ಲಿ ಹಿಂದೆ ಸಂಸ್ಕೃತದಿಂದ ಇಳಿಸಿದ ಸಾಹಿತ್ಯವೇ ಹೆಚ್ಚು ಅದಕ್ಕೆ. ಕನ್ನಡದಲ್ಲಿ ಸಂಸ್ಕೃತವನ್ನು ಬಹಳ ಕಡಮೆ ಬಳಸಿದ ಬರಹಗಳೂ, ಹಾಡುಗಳೂ ಬೇಕಾದಷ್ಟಿವೆ. ಇದಕ್ಕೆ "ವಚನ ಸಾಹಿತ್ಯ, "ಜಾನಪದ"ವೇ ಪುರಾವೆ. ಇಂದು ಸಂಸ್ಕೃತದಿಂದ ಇಳಿಸುವವರು ಕಡಮೆ.( ಬದಲಿಗೆ ಇಂಗ್ಲೀಷಿಂದ ಹೆಚ್ಚು
)
ಸಂಸ್ಕೃತವನ್ನು ೧೨ನೇ ಶತಮಾನದಲ್ಲೇ ತಕ್ಕ ಮಟ್ಟಿಗೆ ಕಿತ್ತೆಸೆದವರು ವಚನಕಾರರು"(ಪ್ರಭುಲಿಂಗಲೀಲೆ ಬಗ್ಗೆ ಮಾತುಕತೆ ನೋಡಬಹುದು). ಅವರೇ, ಕನ್ನಡದಲ್ಲಿ ಸಂಸ್ಕೃತದ ಪಾಟಿಯನ್ನು ತಗ್ಗಿಸಿದವರು. ಕೆ.ಎಸ್.ನರಸಿಂಹ ಸ್ವಾಮಿ, ಬೇಂದ್ರೆ, ಮುಂತಾದವರು ಹಳಗನ್ನಡದಷ್ಟು ಸಂಸ್ಕೃತ ಬಳಸಿಲ್ಲ. ಹಾಗೆ ನೋಡಿದರೆ ವಚನ ಸಾಹಿತ್ಯದ ಬಳಿಕ ಸಂಸ್ಕೃತದ ಪದಗಳು ಕನ್ನಡದ ತಗ್ಗುತ್ತಾ ಹೋಗಿ, ಪಾರಸೀ, ಇಂಗ್ಲೀಷು ಪದಗಳು ಹೆಚ್ಚುತ್ತಾ ಬಂದಿದೆ( ಎಲ್ಲೋ ಓದಿದ ನೆನಪು + ನನ್ನ ಅನಿಸಿಕೆ ಕೂಡ ).
ಇಂದು ೨೧ ಶತಮಾನಕ್ಕೆ ಒಬ್ಬ common manಗೆ ಕನ್ನಡಿಗನಿಗೆ ಸಂಸ್ಕೃತದ ಬಾಳಿಕೆಯೇ ಇಲ್ಲ. ಸಂಸ್ಕೃತದಿಂದ modern science, economics, computer, ಮುಂತಾದವುಗಳನ್ನು ಕಲಿಯಲಾಗುವುದಿಲ್ಲ. ಒಬ್ದ ಸಂಸ್ಕೃತ ಕಲಿಯದೇ, ಕನ್ನಡ ಕಲಿಯದೇ ಬರಿ ಇಂಗ್ಲೀಸಿಂದ ಬರಿ ಬದುಕುವುದೇನು ಬಂತು, ಏಳಿಗೆಯನ್ನು ಎಲ್ಲ fieldಗಳಲ್ಲಿ ಪಡೆಯಬಲ್ಲ. ಏಕೆಂದರೆ ಇಂಗ್ಲೀಸಲ್ಲಿ ಎಲ್ಲ ಸಂಗತಿಯ( ಇಂದು ಬೇಕಾದ) ಬಗ್ಗೆ ಅರಿವು ಸಿಗುವುದು, ಅಲ್ಲದೇ ಅದು ಹೊತ್ತು ಹೊತ್ತಿಗೆ ತನ್ನನ್ನು ತಾನು ತಿದ್ದಿಕೊಂಡು/ಸಂಸ್ಕರಿಸಿಕೊಂಡು ಮುನ್ನುಗ್ಗುತ್ತಿದೆ.
ಇಂದು ಕನ್ನಡವೂ ಅಷ್ಟು ಬಾಳಿಕೆಗೆ ಬರದಿದ್ದರೂ, ನಮ್ಮ ತಾಯ್ನುಡಿ ಅಂತ sentimentಇಂದ ಅದಕ್ಕೆ ಮನ್ನಣೆ ಕೊಡಬಹುದು( ಕೊಡಬೇಕು ಎಂದು ಹೇಳಿದರೆ ಅನಿಸಿಕೆಯ ಹೇರಿಕೆ ಅನ್ನಬಹುದು ).
ಒಟ್ಟಿನಲ್ಲಿ ಇಂದಿನ ಟೈಮ್ಗೆ practicalityಗೆ ಸಂಸ್ಕೃತ outdated/obsolete ಆದುದರಿಂದ ಅದು ಯಾವ difference ಮಾಡಲ್ಲ. ಸಂಸ್ಕೃತದ ಬದಲು ಇಂಗ್ಲೀಸಿದೆ. ಅದನ್ನು ಬೆರೆಸಿದರೂ ನಡೆಯುವುದು( ಬರಿ ಕನ್ನಡದಲ್ಲೇ ಹೇಳಿದರೆ ಸಾಲದು, ಯಾವುದನ್ನಾದರೂ ಬೆರೆಸಲೇ ಬೇಕು ಅಂತ ಇದ್ದರೆ ). ಇದಕ್ಕೆ ಇಂದಿನ ಬದಲಾಗುತ್ತಿರುವ newspaper, news channelಗಳು proof.
.
.
.
.
.
.
ಇಷ್ಟೆಲ್ಲ ಮಾತಿನಿಂದ, ಇವೆಲ್ಲ ಕಾರಣಗಳಿಂದ ’ಬಳ್ಳಿ’ ಸಂಸ್ಕೃತದ್ದೇ ಎಂದು ತೋರಿಸಿಲ್ಲ, ಒಪ್ಪಲಾಗುವುದಿಲ್ಲ.
ಕನ್ನಡದವನಾಗಿ ಇಂತಹ ಹೊತ್ತುಗಳಲ್ಲಿ ಕನ್ನಡದ ಕಡೆ ಒರಗಿ, ’ಬಳ್ಳಿ’ ಕನ್ನಡದ್ದೇ ಎಂದು ನಂಬುತ್ತೇನೆ!!
=====================================================
ದಿಟವು ಯಾವಾಗಲೂ ನಲಿವು ತರಲ್ಲ! ಹಾಗಂತ ದಿಟವನ್ನು ಅರಿಯದೇ ಇರುವುದು ಅರಿಯಮಿಕೆ
Re: ಕನ್ನಡದ ಬಳ್ಳಿ
ಸಕ್ಕದ-ಕನ್ನಡ ಜಟಾಪಟಿ ಮತ್ತೆ ಮೊದಲಾಗಿದೆ,
Re: ಕನ್ನಡದ ಬಳ್ಳಿ
ಸಂಗನ!
ಇಲ್ಲಿ ಪೋಟಿ ಇರೋದು 'ಬಳ್ಳಿ ' ಕನ್ನಡದ್ದೂ, ಅಲ್ಲ ಅಂತ.
ಮಿಕ್ಕವು ಬಿಡಿ, ಇದ್ದದ್ದೇ.
ನಿಮಗೆ 'ಬಳ್ಳಿ' ಕನ್ನಡದ್ದೋ, ಅಲ್ಲವೋ?
====================================================
ದಿಟವು ಯಾವಾಗಲೂ ನಲಿವು ತರಲ್ಲ! ಹಾಗಂತ ದಿಟವನ್ನು ಅರಿಯದೇ ಇರುವುದು ಅರಿಯಮಿಕೆ
ನಿಮ್ಮ ಊಹೆಗೆ ನೀವೇ ಜವಾಬ್ದಾರರು!
ಮಹೇಶರೇ,
ಅಸಂಬದ್ಧ ಕಂತೆಪುರಾಣಗಳನ್ನೆಲ್ಲ ಬದಿಗಿಟ್ಟು ಕೇಳುತ್ತೇನೆ:
೧.’ಬಳ್ಳಿ’ ೧೦೦% ಸಂಸ್ಕೃತದ್ದೇ" ಎಂದು ಯಾರು ಯಾವಾಗ ಹೇಳಿದರು? ನಿಮಗೆ ನೆನಪಿಸಲು ಹೇಳುತ್ತೇನೆ - ನಾನೆಂದಿದ್ದು : "ವಲ್ಲೀ" "ಬಳ್ಳಿ"ಯ ತತ್ಸಮ.
೨.Dravidian Etmology "ಬಳ್ಳಿ" ಕನ್ನಡದ್ದೇ ಆಗಿರುವ chances ಇದೆ ಎಂದು ತೋರಿಸಿದೆ. chances ಇಲ್ಲವೆಂದವರಾರು? ನಿಮಗೆ ನೆನಪಿಸಲು ಹೇಳುತ್ತೇನೆ - ನಾನೆಂದಿದ್ದು : "ಬಳ್ಳಿ"ಯ ಮೂಲ ರೂಪ ಸಕ್ಕದದ "ಬಲ್ಲೀ". ಇದರ chances ಇಲ್ಲವೆನ್ನುವುದಕ್ಕೆ ನಿಮ್ಮಲ್ಲಿ ಯಾವ ಆಧಾರವಿದೆ?
೩."ಸ್ನಾನ" ಇದು standard ಎಂದವರು ಯಾರು? ’ರಾಮನವಮಿ’ಯನ್ನು ಕನ್ನಡಿಗರು ಬೇರೆ ಯಾವ ಪದದಿಂದ ಕರೆಯುತ್ತಾರೆ? ಕನ್ನಡಿಗರೆಲ್ಲ ಹಿಂದುಗಳೇ ಎಂದವರಾರು?
೪.ಬಿಸಿಲು ಮಾರಮ್ಮ, ಅಣ್ಣಮ್ಮ, ಹಾಸನಾಂಬೆ, ಮದ್ದೂರಮ್ಮ, ಮಲೆಯ ಮಾದೇವರಿಗೆ ಕರ್ಪೂರ ತೋರಿಸಿ ಕೈಯಾಡಿಸುವ ಕೆಲಸ "ಆರತಿ/ ಮಂಗಳಾರತಿ" ಎಂಬ ಉಪಚಾರ ಮೂಲವಾಗಿ ಸಕ್ಕದದಿಂದಲ್ಲದೆ ಬೇರೆ ಯಾವ ಭಾಷೆಯ ಹೊತ್ತಗೆಯಲ್ಲಿ ಮೊದಲು ಕಾಣಸಿಗುತ್ತದೆ?
೫.ಸಂಸ್ಕೃತದ ಹೊತ್ತಗೆ ಹೇಳುವುದನ್ನು ಮಾಡದವರು ಧರ್ಮಭ್ರಷ್ಟರು ಎಂದವರಾರು?
೬.ಸಂಸ್ಕೃತವನ್ನು ಒತ್ತಾಯವಾಗಿ ಹೇರಿದ ರಾಜರ ಹೆಸರುಗಳನ್ನು ತಿಳಿಸಿ. ಅಥವಾ ಈ ನಿಮ್ಮ ಆರೋಪಕ್ಕೆ ತಕ್ಕ ಪುರಾವೆಯಿದ್ದರೆ ತೋರಿಸಿ.
೭.ಆಡಳಿತ ನಡೆಸುವ ಸರ್ಕಾರ ಸಕ್ಕದದ ಅರ್ಜಿ ತೆಗೆದುಕೊಳ್ಳಬೇಕೆಂದು ಹೇಳಿದವರಾರು?
೮.ಸಕ್ಕದದಲ್ಲಿ science, politics, economics, technology ಮುಂತಾದವು ಇಲ್ಲವೆಂದು ನಿಮಗೆ ಯಾರು ಹೇಳಿದರು? (ಅವನ್ನು ತಿಳಿಯುವ ಬಯಕೆ ಜನರಿಗೆ ಕಡಿಮೆಯಾಗಿದೆ ಅಷ್ಟೇ. ಯಾವನಾದರೂ ಪಾಶ್ಚಿಮಾತ್ಯ ಪಂಡಿತ ಅದನ್ನು ತೋರಿದಾಗ ಹೌದೆನ್ನುವವರಲ್ಲವೇ ಭಾರತೀಯರು?)
೯. ಸಂಸ್ಕೃತವು ಕನ್ನಡವನ್ನು ಸಂಸ್ಕರಿಸಿದ್ದರಿಂದ ಬಂದುದೆಂದು ಯಾರು ಹೇಳಿದರು? ಸಂಸ್ಕೃತ ಸಂಸ್ಕರಿಸಿದ್ದೇ ಅಲ್ಲ ಎನ್ನುವ ನಿಮ್ಮ ವಾದಕ್ಕೆ ಪುರಾವೆಯಿದೆಯೆ? "ಸಂಸ್ಕೃತ" ಅಂದರೆ "ಹಲವರು ಸೇರಿ ಮಾಡಿದ್ದು"- ಈ ವಾದ ಎಲ್ಲಿದೆ?
೧೦.democracy, communism, capitalism ಬಗ್ಗೆ ಯಾವ ಕನ್ನಡದ "ಮೂಲ"(ಅಂದರೆ ಮೊದಲನೆಯ, ಕನ್ನಡದಲ್ಲೇ ಹುಟ್ಟಿದ ಸ್ವಂತ ವಿಚಾರದ, ತರ್ಜುಮೆಯಲ್ಲದ) ಗ್ರಂಥ/ಹೊತ್ತಗೆ ಇದೆ? ಅಥವಾ ಬಸವಣ್ಣನವರ ಬಗ್ಗೆ ಪಾಳೀ ಭಾಷೆಯಲ್ಲಿ ಯಾವ ಗ್ರಂಥವಿದೆ?
೧೧.ನೀವೆಂದದ್ದು: ಇಂದು ಕನ್ನಡವೂ ಅಷ್ಟು ಬಾಳಿಕೆಗೆ ಬರದಿದ್ದರೂ, ನಮ್ಮ ತಾಯ್ನುಡಿ ಅಂತ sentimentಇಂದ ಅದಕ್ಕೆ ಮನ್ನಣೆ ಕೊಡಬಹುದು( ಕೊಡಬೇಕು ಎಂದು ಹೇಳಿದರೆ ಅನಿಸಿಕೆಯ ಹೇರಿಕೆ ಅನ್ನಬಹುದು ). - ಇದು ಕನ್ನಡಿಗನಾದ ನಿಮಗೆ ಸಂತಸದ ಸಂಗತಿಯೇ? ಅಥವಾ ಇದೇ sentiment ನನಗೆ ಸಕ್ಕದದ ಬಗೆಗಿದ್ದರೆ ನಿಮಗೆ ತಪ್ಪೆನಿಸುತ್ತದೆಯೇ? ನಿಮ್ಮದು ದ್ವಂದ್ವನೀತಿಯೆಂದು ಈಗಲೂ ನಿಮಗೆನಿಸುತ್ತಿಲ್ಲವೇ?
೧೩.ಇಷ್ಟೆಲ್ಲ ಮಾತಿನಿಂದ, ಇವೆಲ್ಲ ಕಾರಣಗಳಿಂದ ’ಬಳ್ಳಿ’ ಸಂಸ್ಕೃತದ್ದೇ ಎಂದು ತೋರಿಸಲು ಸಾಧ್ಯವಿಲ್ಲ; ಏಕೆಂದರೆ "ಬಳ್ಳಿ" ಕನ್ನಡದ್ದೇ. ಸಕ್ಕದದ್ದು ಅದರ ಮೂಲ ರೂಪವೆಂದು ನಾನು ನಂಬಿರುವ "ವಲ್ಲೀ"/"ಬಲ್ಲೀ". ಅಭಿಪ್ರಾಯಭೇದವಿರುವುದೇ ತಪ್ಪೇ?
ನೇರವಾಗಿ ಹೇಳಬೇಕೆಂದರೆ, ವಿತಂಡವಾದಕ್ಕೆ ನಾನು ಸೊಪ್ಪು ಹಾಕುವವನಲ್ಲ ಅಷ್ಟೇ! ನಾನು ಬರೆದಿಲ್ಲದ ವಿಚಾರಗಳನ್ನು ಊಹಿಸಿಕೊಳ್ಳುವ ತಮ್ಮ ಜಾಣತನಕ್ಕೆ ನಾನು ಹೊಣೆಯಲ್ಲ; ನಿಮ್ಮ ಊಹೆಗೆ ನೀವೇ ಜವಾಬ್ದಾರರು!
ಮತ್ತೆ ಸಿಗೋಣ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
Quote:
೧. ನೀವು ತೋರಿದ ತಮಿಳು-ಪಹ್ಲವೀ-ಸಕ್ಕದ ನಿಘಂಟನ್ನು ನಾನು ಹಲವು ವರ್ಷಗಳಿಂದ ಬಳಸುತ್ತಿದ್ದೇನೆ; ನಾನು ಹುಡುಕುತ್ತಿದ್ದುದು ಇದಲ್ಲ. ಆದರೂ, ಇಲ್ಲಿಯೂ "ಮೂಲ" ಯಾವುದೆಂಬುದರ ಬಗ್ಗೆ ಯಾವ ಉಲ್ಲೇಖವೂ ಇಲ್ಲ. ಸಂಶೋಧನೆಯ ಅಗತ್ಯ ಇಲ್ಲದಿಲ್ಲ.
-------
"’ಬಳ್ಳಿ’ ೧೦೦% ಸಂಸ್ಕೃತದ್ದೇ" ಇಂದ, ಈಗ "ಸಂಶೋಧನೆಯ ಅಗತ್ಯ ಇಲ್ಲದಿಲ್ಲ" ಕ್ಕೆ ಬಂದಿದೆ. ಇದನ್ನೇ ಮೊದಲೂ ಹೇಳಿದುದು. ಸಂಸ್ಕೃತದ್ದೇ ಅನ್ನಲು ’ಪುರಾವೆ’ ಇಲ್ಲ ಅಂತ. ಆದರೆ Dravidian Etmology ಕನ್ನಡದ್ದೇ ಆಗಿರುವ chances ಇದೆ ಎಂದು ತೋರಿಸಿದೆ.
Quote:
೨. ಈಗ ಪ್ರತಿಯೊಬ್ಬ ಭಾರತೀಯನೂ ಶಾಲೆಯಲ್ಲಿ ಮೂರು ಭಾಷೆಯನ್ನು ಅವಶ್ಯಕವಾಗಿ ಕಲಿತಿರುವುದರಿಂದ ಸಂಸ್ಕೃತ ಬೇಕಿಲ್ಲದಿರಬಹುದು. ಆದರೆ ಸಕ್ಕದ ಪದಗಳು ಎಲ್ಲ ಭಾರತೀಯ ಭಾಷೆಗಳಲ್ಲಿ ಹಾಸುಹೊಕ್ಕಾಗಿದೆ; ಇದನ್ನು ಅಲ್ಲಗಳೆಯಲು ಸಾಧ್ಯವಿಲ್ಲ; ಕಾಲಕ್ರಮೇಣ ರೂಪಾಂತರ ಹೊಂದಿರಬಹುದು ಅಷ್ಟೇ! "ಗಣೇಶ" ಎಂದರೆ ಎಲ್ಲರಿಗೂ ಅರ್ಥವಾಗುತ್ತದೆ. "ಪಿಳ್ಳಾರಿ" ಎಂದರೆ ತಮಿಳರಿಗೆ ಮಾತ್ರ! ನೀವು ಕೊಯಮತ್ತೂರಿನಲ್ಲಿ ಎರೆದುಕೊಂಡರೂ, ಹುಬ್ಬಳ್ಳಿಯಲ್ಲಿ ಜಳಕಮಾಡಿದರೂ, ಮೈಸೂರಿನಲ್ಲಿ ಮಿಂದರೂ, ಅರ್ಥವಾಗುವುದು ಕನ್ನಡಿಗರಿಗೆ ಮಾತ್ರ. "ಸ್ನಾನ" ಎಂದರೆ ನಮಗೂ ಪಕ್ಕದ ರಾಜ್ಯದವರಿಗೂ ಎಲ್ಲರಿಗೆ ಅರ್ಥವಾಗುತ್ತದೆ. ಆದ್ದರಿಂದಲೇ ಕನ್ನಡದ ಪದಗಳ ಜೊತೆಗೆ ಸಕ್ಕದ ಅವಶ್ಯಕ; ಅದು ಆರ್ಯಾವರ್ತವನ್ನೂ ದಕ್ಷಿಣಾಪಥವನ್ನೂ ಬೆಸೆವ ದೊಡ್ಡ ಕೊಂಡಿ. ಇದೇ ಸಕ್ಕದಕ್ಕೆ ಇರುವ "ನಂಟಿನ" ಗುಣ. ನಂಟಿರಲು ಎಲ್ಲರಿಗೂ ಆ ಭಾಷೆ ಆಡಲು ಬರಲೇಬೇಕೆನ್ನುವ ಅಗತ್ಯವಂತೂ ಇಲ್ಲವೇ ಇಲ್ಲ. "ರಾಮನವಮಿ" ಎನ್ನಲು ಸಕ್ಕದ ಸಂಭಾಷಣೆ ಬರಬೇಕೇ?
--------------
"ಸ್ನಾನ" ಇದನ್ನು ಬಹಳ ಮಂದಿಗೆ ಹೇಳಲೇ ಬರುವುದಿಲ್ಲ. ಇನ್ನು ಇದು standard ಅನ್ನೋದು ತಪ್ಪು. ’ರಾಮನವಮಿ’ಗೂ ಕನ್ನಡಕ್ಕೂ ಏನು ನಂಟು? ಕನ್ನಡಿಗರೆಲ್ಲ ಹಿಂದುಗಳೇ?
ನಮ್ಮ ಬಿಸಿಲು ಮಾರಮ್ಮ, ಅಣ್ಣಮ್ಮ, ಹಾಸನಾಂಬೆ, ಮದ್ದೂರಮ್ಮ, ಮಲೆಯ ಮಾದೇವ, ಇವರನ್ನು ಯಾವ ಹಿಂದು ಸಂಸ್ಕೃತದ ಹೊತ್ತಗೆ ಒಪ್ಪುವುದು, ಹೆಸರಿಸುವುದು? ಹೀಗೆ ಒಂದು ಜಾತಿ/religion ಅವರಿಗೆ ಬೇಕು, ಅಂತ ಎಲ್ಲರ ಮೇಲೂ ಹೇರಲಾಗದು.
ಉತ್ತರದವರ ನಂಬಿಕೆ "ಹೆಣವನ್ನು ಹಿಂದುಗಳು ಹೂಳುವುದಿಲ್ಲ", ಇದು ಸರಿಯೇ? ಸಂಸ್ಕೃತದಲ್ಲಿ ಇರುವ ಅಪರಶಾಸ್ತ್ರಗಳು ಬರಿ ಸುಡುವುದಕ್ಕೆ ಇವೆ, ಹೊರತು ಹೂಳಲು, ಇಲ್ಲವೆ ಬೇರಾವುದೇ ಬಗೆಯಲ್ಲಿ ಹೆಣಕ್ಕೆ ಗತಿ ಕಾಣಿಸಲು ಇಲ್ಲ ಅಂತ(ದಿಟವಿಲ್ಲದಿದ್ದರೆ ಹೇಳಬಹುದು). ಗರುಡ ಪುರಾಣದಲ್ಲಿ ಹೂಳಲು ಏನೂ ಹೇಳಿಲ್ಲ ಅಂತ!! ಒಕ್ಕಲಿಗರು ಹೂಳುವಾಗ ಯಾವ ಸಂಸ್ಕೃತದ ಮಂತ್ರ ಹೇಳಲ್ಲ(ಇದು ಗೊತ್ತು); ತಿಥೀ ಮಾಡಲ್ಲ. ಅಂದರೆ ಸಂಸ್ಕೃತದ ಹೊತ್ತಗೆ ಹೇಳುವುದನ್ನು ಮಾಡಲ್ಲ, ಹಾಗಂತ ಅವರು ಧರ್ಮಭ್ರಷ್ಟರೇ? ಅದಕ್ಕೆ ಈ ಧರ್ಮದ/ಗಳ ಸುದ್ದಿ ಬೇಡ.
ಇನ್ನು ನಾವು "ಆರ್ಯಾವರ್ತ ದಕ್ಷಿಣಾಪಥ ಗೌಡದೇಶ ಪಾಂಚಾಲ"ದ ಕಾಲವನ್ನು ದಾಟಿದ್ದೇವೆ. ಸಂಸ್ಕೃತವನ್ನು ಒತ್ತಾಯವಾಗಿ ಹೇರಲು ಅಂತಹ ಅರಸುಗಳೂ ಇಲ್ಲ. ಅವರ ಕಾಲದಲ್ಲೂ ಸಂಸ್ಕೃತವನ್ನು ಹಾದಿಬೀದಿಯಲ್ಲಿ, ಎಲ್ಲರು ಮಾತಾಡಿದ್ದೂ ಅನುಮಾನ ಅಂತ ಇದೆ. ಈಗ recent ಆಗಿ ಟಿಪ್ಪು ಮೇಲೇ ಹಾಯ್ದು ಬಿದ್ದ ಮಂದಿಗೆ, ನಮ್ಮ ಹಿಂದೂ ಅರಸರೂ ಕೂಡ ದೇಶಭಾಷೆಯಲ್ಲದ(local language) ಸಂಸ್ಕೃತವನ್ನು ಆಡಳಿತ ನುಡಿಯನ್ನಾಗಿ ಮಾಡಿ, ಸಂಸ್ಕೃತದ ಹೇರಿಕೆ ಮಾಡಿದ್ದರು ಎಂದು ಅನ್ನಿಸುವುದೇ ಇಲ್ಲ. ಕಾರಣ ಅವರು "ಹಿಂದೂ"(ಜೈನರೂ ಹಿಂದೂ ಅಂತ) ಅಷ್ಟೇ, ಬೇರೇನು ಇಲ್ಲ.
ಈಗ ಬೆಸೆಯುವ ಕೊಂಡಿ "English". ಅದಕ್ಕೆ ಸಂಸ್ಕೃತವನ್ನು ಎಲ್ಲೂ ಆಡಳಿತ ನುಡಿ ಮಾಡಿಲ್ಲ. ಸಂಸ್ಕೃತದಲ್ಲಿ ಯಾವ ಅರ್ಜಿ ಕೊಟ್ಟರು ಸರಕಾರ ತಗೋಳಲ್ಲ. ಬೇಕಾದರೆ ಕೊಟ್ಟಿ ನೋಡಬಹುದು.
ಕರ್ನಾಟಕದಲ್ಲೂ ಆಡಳಿತ ನುಡಿ ಇಂಗ್ಲೀಷೇ. ಅದರಲ್ಲಿ ಸಂಸ್ಕೃತ ಬರೆಸಲ್ಲ. ಅಂದರೂ ಕೆಲಸ ನಡೆಯತ್ತೆ.
Quote:
ಇದರರ್ಥ ಕನ್ನಡದಲ್ಲಿ "ಅನಗತ್ಯ" ಸಕ್ಕದಪದಗಳನ್ನು ತುಂಬಿ ಎಂದಲ್ಲ; ಸಕ್ಕದದ "ನಂಟು" ಇಲ್ಲದೆ ಕನ್ನಡಕ್ಕೆ ಅವಮಾನವೆಂದು ಹೇಳಿದವರಾರು?[ ಭಾಷಾ ಅನ್ಯೋನ್ಯತೆಗೆ ಸಕ್ಕದ ಒಂದು ವರವೇ ಹೊರತು, ಕೇವಲ ಅದೊಂದೇ ಮಾಧ್ಯಮ ಎಂದು ತಿಳಿವ ಅವಶ್ಯಕತೆಯಿಲ್ಲ. ಇದು ನಿಮಗೆ ತಿಳಿಯದ್ದೇನಲ್ಲ! ಸಂಸ್ಕೃತ ಕೇವಲ ಭಾಷೆಯಲ್ಲ; ಅದು ಆಡುಭಾಷೆಗಳನ್ನು ಸಂಸ್ಕರಿಸಿದ ಭಾಷೆ; ನಮ್ಮ ಸಂಸ್ಕೃತಿಗೆ ತಾಗಿರುವ ಸಾಹಿತ್ಯದ ಭಾಷೆ; ನಮ್ಮ ಧರ್ಮದೊಡನೆ ಹಾಸುಹೊಕ್ಕಾಗಿರುವ ಭಾಷೆ. ಇದನ್ನು ಕನ್ನಡದಿಂದ ದೂರವಿಡುವುದು ಕಸ್ತೂರಿಯಿಂದ ಪರಿಮಳವನ್ನು ಕಿತ್ತೆಸೆದಂತೆ! ದೈನಂದಿನ ಆಡು ಭಾಷೆಗೆ ಸಕ್ಕದ ಬೇಡದಿರಬಹುದು; ಸಾಹಿತ್ಯಕ್ಕೆ ಅಗತ್ಯವಾಗಿ ಬೇಕು; ಯೋಚಿಸಿ ನೋಡಿ. ೨೦೦೦ ವರ್ಷಗಳ ಇತಿಹಾಸದಲ್ಲಿ ಕನ್ನಡಕ್ಕೆ ಸಕ್ಕದ ಮುಳುವಾಗುತ್ತದೆ ಎಂದೆನಿಸಿದ್ದ ಪಕ್ಷದಲ್ಲಿ, ಅದು ಯಾವಾಗಲೋ ಕಿತ್ತೆಸೆಯಲ್ಪಡುತ್ತಿತ್ತು!
----------------
ಕನ್ನಡದ ಪದಗಳು ತಿಂದು ಹಾಕುತ್ತಿರುವ ಸಕ್ಕದಪದಗಳನ್ನು, ಇಂಗ್ಲೀಸು ಪದಗಳನ್ನೂ ಇಂದೂ ನುಸುಳಿಸಲಾಗುತ್ತಿದೆ. "ಹಾಲು/ಕ್ಷೀರ", "ನೀರು/ಜಲ", "ಗಾಳಿ/ವಾಯು", "ದೊಡ್ಡ ಬೆಂಗಳೂರು/ಬೃಹತ್ ಬೆಂಗಳೂರು", "ಕೋಳಿ ಸಾಕಣೆ/ಕುಕ್ಕುಟ ಪಾಲನೆ"(ನಮ್ಮ ಹಳ್ಳಿಯಲ್ಲಿ "ಕುಕ್ಕುಟ ಪಾಲನಾ ಇಲಾಖೆ"ಯ ಕಛೇರಿ ಇದೆ). ಇದಕ್ಕೆ ಕಾರಣವಿಷ್ಟೆ: "ಸಕ್ಕದ ಒಂದು ಸತ್ತ ನುಡಿ, ಇಲ್ಲವೇ ಅದಕ್ಕೆ ತ್ರಾಣವೇ ಇಲ್ಲ. ಅದರ fanaticಗಳು ಅದನ್ನು ಬೇರೆ ನುಡಿಗಳಿಗೆ infect ಮಾಡಿ ಬದುಕಿಸುವ ಹುನ್ನಾರದಲ್ಲಿದ್ದಾರೆ ಅಷ್ಟೇ", ಹೀಗೆ ಹೇಳಿದರೆ ಹಲವರಿಗೆ ’ಅತಿ’ ಅನ್ನಿಸಬಹುದು. ಆದರೆ ಅದರಿಂದ ಸಕ್ಕದದ ಕೂಟೆ ಕನ್ನಡವೂ ಸಾಯುದೆ ಹೊರತು, ಕನ್ನಡ ಅದರಿಂದ ಬದುಕಲ್ಲ.
ಕನ್ನಡ ಬದುಕಬೇಕಾದರೆ ಇಂದಿನ generation ಇಷ್ಟ ಪಡುವ, ಅವರಿಗೆ ಬೇಕಾಗಿರುವ ಬರಹ/ಬರೆವಣಿಗೆ ಕನ್ನಡದಲ್ಲಿ ಬರಬೇಕು. ಅದರಲ್ಲಿ ಒಂದು science, politics, economics, technology ಮುಂತಾದವು ಇರಬೇಕು. ಅದು ಸಕ್ಕದ ಬರೆಸುವುದಿಂದ ಆಗಲ್ಲ. ಬದಲಿಗೆ ನಾವು ಇಂಗ್ಲೀಷು ಕಡೆಗೆ ನೋಡಲೇ ಬೇಕು( ಅಂದರೆ ಇಂಗ್ಲೀಸು ಮಾದರಿ. ಇಂಗ್ಲೀಸು ಬರೆಸಿ ಅಂತ ಹೇಳ್ತಿಲ್ಲ). ಕನ್ನಡವನ್ನು ಓದುವವರು ಕಡಮೆಯಾಗುತ್ತಿರುವುದೂ, ಸಿನಿಮಾ ಕನ್ನಡವನ್ನು ಹೆಚ್ಚು ಮಂದಿ ಮೆಚ್ಚುತ್ತಿರುವುದೂ ಇದನ್ನು ತೋರಿಸುವುದು( 5 ಕೋಟಿಯಲ್ಲಿ ನೂರು ಪಂಡಿತರೂ ಇದನ್ನು ಕೀಳೆಂದರೆ, who cares? ಅಂತಾರೆ).
ಸಂಸ್ಕೃತವು ಕನ್ನಡವನ್ನು ಸಂಸ್ಕರಿಸಿದ್ದರಿಂದ ಬಂದುದಲ್ಲ. ಇದಕ್ಕೆ ಪುರಾವೆಯೇ ಇಲ್ಲ. ಸಂಸ್ಕೃತ ಸಂಸ್ಕರಿಸಿದ್ದೇ ಅಲ್ಲ; ಹೇಗೆ "ಸಂಸ್ಥಾ" ಅಂದರೆ ’ಗುಂಪು/ಹಲವರು ನೆಲೆಸಿಸಿದ್ದು/ಒಕ್ಕೂಟ’ವೋ, ಹಾಗೆ "ಸಂಸ್ಕೃತ" ಅಂದರೆ "ಹಲವರು ಸೇರಿ ಮಾಡಿದ್ದು"( ಈ ವಾದವೂ ಇದೆ), ಯಾವುದೂ ಕಾಲದಲ್ಲಿ. ಪಾಣಿನಿ ಇದ್ದ ಪೇಷಾವರದಲ್ಲಿ( ಇಲ್ಲ ಬೇರೊಂದೆಡೆ, ಯಾರಿಗೆ ಬೇಕದು! ). ಅದಕ್ಕೆ ಬೆಳೆವಣಿಗೆಯೇ ಇಲ್ಲ. ಯಾವುದೋ ಕಾಲದಲ್ಲಿ ಯಾರೋ ಒಬ್ಬ ಹಾಕಿ ಬೇಲಿಯೊಳಗೆ ಇದ್ದು ಸತ್ತಿದೆ. ಅದರಲ್ಲಿ updation ಇಲ್ಲ . Refined oil ಕೂಡ ಹಳೆಯದಾಗಿ ಕಮಟುತ್ತೆ. ಕನ್ನಡದಂತೆ ಬಂಡಾಯ, ಮಾರ್ಕವಾದ, ನಕ್ಸಲ್ವಾದ ಮುಂತಾದ ಹೊಸಕಾಲದ ಯೋಚನೆಗಳು ಇದೆಯೇ? democracy, communism, capitalism ಬಗ್ಗೆ ಯಾವ ಸಂಸ್ಕೃತದ ಗ್ರಂಥ/ಹೊತ್ತಗೆ ಇದೆ?
ಸಕ್ಕದವು ಕನ್ನಡ ಸಾಹಿತ್ಯದಲ್ಲಿ ಇದೆ, ಆದರೆ ಎಲ್ಲಾ ಸಾಹಿತ್ಯದಲ್ಲಿ ಇಲ್ಲ. ಕಾರಣ ಕನ್ನಡದಲ್ಲಿ ಹಿಂದೆ ಸಂಸ್ಕೃತದಿಂದ ಇಳಿಸಿದ ಸಾಹಿತ್ಯವೇ ಹೆಚ್ಚು ಅದಕ್ಕೆ. ಕನ್ನಡದಲ್ಲಿ ಸಂಸ್ಕೃತವನ್ನು ಬಹಳ ಕಡಮೆ ಬಳಸಿದ ಬರಹಗಳೂ, ಹಾಡುಗಳೂ ಬೇಕಾದಷ್ಟಿವೆ. ಇದಕ್ಕೆ "ವಚನ ಸಾಹಿತ್ಯ, "ಜಾನಪದ"ವೇ ಪುರಾವೆ. ಇಂದು ಸಂಸ್ಕೃತದಿಂದ ಇಳಿಸುವವರು ಕಡಮೆ.( ಬದಲಿಗೆ ಇಂಗ್ಲೀಷಿಂದ ಹೆಚ್ಚು )
ಸಂಸ್ಕೃತವನ್ನು ೧೨ನೇ ಶತಮಾನದಲ್ಲೇ ತಕ್ಕ ಮಟ್ಟಿಗೆ ಕಿತ್ತೆಸೆದವರು ವಚನಕಾರರು"(ಪ್ರಭುಲಿಂಗಲೀಲೆ ಬಗ್ಗೆ ಮಾತುಕತೆ ನೋಡಬಹುದು). ಅವರೇ, ಕನ್ನಡದಲ್ಲಿ ಸಂಸ್ಕೃತದ ಪಾಟಿಯನ್ನು ತಗ್ಗಿಸಿದವರು. ಕೆ.ಎಸ್.ನರಸಿಂಹ ಸ್ವಾಮಿ, ಬೇಂದ್ರೆ, ಮುಂತಾದವರು ಹಳಗನ್ನಡದಷ್ಟು ಸಂಸ್ಕೃತ ಬಳಸಿಲ್ಲ. ಹಾಗೆ ನೋಡಿದರೆ ವಚನ ಸಾಹಿತ್ಯದ ಬಳಿಕ ಸಂಸ್ಕೃತದ ಪದಗಳು ಕನ್ನಡದ ತಗ್ಗುತ್ತಾ ಹೋಗಿ, ಪಾರಸೀ, ಇಂಗ್ಲೀಷು ಪದಗಳು ಹೆಚ್ಚುತ್ತಾ ಬಂದಿದೆ( ಎಲ್ಲೋ ಓದಿದ ನೆನಪು + ನನ್ನ ಅನಿಸಿಕೆ ಕೂಡ ).
ಇಂದು ೨೧ ಶತಮಾನಕ್ಕೆ ಒಬ್ಬ common manಗೆ ಕನ್ನಡಿಗನಿಗೆ ಸಂಸ್ಕೃತದ ಬಾಳಿಕೆಯೇ ಇಲ್ಲ. ಸಂಸ್ಕೃತದಿಂದ modern science, economics, computer, ಮುಂತಾದವುಗಳನ್ನು ಕಲಿಯಲಾಗುವುದಿಲ್ಲ. ಒಬ್ದ ಸಂಸ್ಕೃತ ಕಲಿಯದೇ, ಕನ್ನಡ ಕಲಿಯದೇ ಬರಿ ಇಂಗ್ಲೀಸಿಂದ ಬರಿ ಬದುಕುವುದೇನು ಬಂತು, ಏಳಿಗೆಯನ್ನು ಎಲ್ಲ fieldಗಳಲ್ಲಿ ಪಡೆಯಬಲ್ಲ. ಏಕೆಂದರೆ ಇಂಗ್ಲೀಸಲ್ಲಿ ಎಲ್ಲ ಸಂಗತಿಯ( ಇಂದು ಬೇಕಾದ) ಬಗ್ಗೆ ಅರಿವು ಸಿಗುವುದು, ಅಲ್ಲದೇ ಅದು ಹೊತ್ತು ಹೊತ್ತಿಗೆ ತನ್ನನ್ನು ತಾನು ತಿದ್ದಿಕೊಂಡು/ಸಂಸ್ಕರಿಸಿಕೊಂಡು ಮುನ್ನುಗ್ಗುತ್ತಿದೆ.
ಇಂದು ಕನ್ನಡವೂ ಅಷ್ಟು ಬಾಳಿಕೆಗೆ ಬರದಿದ್ದರೂ, ನಮ್ಮ ತಾಯ್ನುಡಿ ಅಂತ sentimentಇಂದ ಅದಕ್ಕೆ ಮನ್ನಣೆ ಕೊಡಬಹುದು( ಕೊಡಬೇಕು ಎಂದು ಹೇಳಿದರೆ ಅನಿಸಿಕೆಯ ಹೇರಿಕೆ ಅನ್ನಬಹುದು ).
ಒಟ್ಟಿನಲ್ಲಿ ಇಂದಿನ ಟೈಮ್ಗೆ practicalityಗೆ ಸಂಸ್ಕೃತ outdated/obsolete ಆದುದರಿಂದ ಅದು ಯಾವ difference ಮಾಡಲ್ಲ. ಸಂಸ್ಕೃತದ ಬದಲು ಇಂಗ್ಲೀಸಿದೆ. ಅದನ್ನು ಬೆರೆಸಿದರೂ ನಡೆಯುವುದು( ಬರಿ ಕನ್ನಡದಲ್ಲೇ ಹೇಳಿದರೆ ಸಾಲದು, ಯಾವುದನ್ನಾದರೂ ಬೆರೆಸಲೇ ಬೇಕು ಅಂತ ಇದ್ದರೆ ). ಇದಕ್ಕೆ ಇಂದಿನ ಬದಲಾಗುತ್ತಿರುವ newspaper, news channelಗಳು proof.
.
.
.
.
.
.
ಇಷ್ಟೆಲ್ಲ ಮಾತಿನಿಂದ, ಇವೆಲ್ಲ ಕಾರಣಗಳಿಂದ ’ಬಳ್ಳಿ’ ಸಂಸ್ಕೃತದ್ದೇ ಎಂದು ತೋರಿಸಿಲ್ಲ, ಒಪ್ಪಲಾಗುವುದಿಲ್ಲ.
ಕನ್ನಡದವನಾಗಿ ಇಂತಹ ಹೊತ್ತುಗಳಲ್ಲಿ ಕನ್ನಡದ ಕಡೆ ಒರಗಿ, ’ಬಳ್ಳಿ’ ಕನ್ನಡದ್ದೇ ಎಂದು ನಂಬುತ್ತೇನೆ!!
=====================================================
ದಿಟವು ಯಾವಾಗಲೂ ನಲಿವು ತರಲ್ಲ! ಹಾಗಂತ ದಿಟವನ್ನು ಅರಿಯದೇ ಇರುವುದು ಅರಿಯಮಿಕೆ
ಕನ್ನಡದ ಬಳ್ಳಿ
ನೇರವಾಗಿ ಹೇಳಬೇಕೆಂದರೆ, ವಿತಂಡವಾದಕ್ಕೆ ನಾನು ಸೊಪ್ಪು ಹಾಕುವವನಲ್ಲ ಅಷ್ಟೇ! ನಾನು ಬರೆದಿಲ್ಲದ ವಿಚಾರಗಳನ್ನು ಊಹಿಸಿಕೊಳ್ಳುವ ತಮ್ಮ ಜಾಣತನಕ್ಕೆ ನಾನು ಹೊಣೆಯಲ್ಲ; ನಿಮ್ಮ ಊಹೆಗೆ ನೀವೇ ಜವಾಬ್ದಾರರು!
೧) ಹೊಣೆಯಾಗಿ ಅಂತ ನಾನು ಹೇಳಿದೆನೆ?
೨) ನೀವು ನಿಮ್ಮ ಊಹೇಗಳಿಗೆ ಜವಾಬ್ದಾರರೂ ಕೂಡ?
ನೀವು ಹೇಳುದುದಕ್ಕೆಲ್ಲ ಒಂದೊಂದೊ ಪ್ರಶ್ನೆ ಹಾಕಬಹುದು. ಟೈಮಿಲ್ಲ. ಬೇರೆ threadಗಳನ್ನೂ ನೋಡಬೇಕು
ಬರಿ Etmology ಸುತ್ತ ಇದ್ದ ಮಾತುಕತೆಯನ್ನು ಎಲ್ಲೆಲ್ಲೋ ಒಯ್ದು, "ಭಾಷಾ ಅನ್ಯೋನ್ಯತೆ, ಗಣೇಶ, ಪಿಳ್ಳಾರಿ, ರಾಮನವಮಿ, ತಮಿಳು ತಲೆಗಳ ನಡುವೆ, ತಮಿಳರವಾದ ದಂತೆ" ಅಂತ ಎಲ್ಲಿಂದೆಲ್ಲಿಗೋ ಮಾತು ತಿರುಗಿಸಿ, ಕೊನೆಯಲ್ಲಿ "ವಿತಂಡವಾದಕ್ಕೆ ನಾನು ಸೊಪ್ಪು ಹಾಕುವವನಲ್ಲ ಅಷ್ಟೇ" ಅಂತ ಹೇಳಿಕೊಂಡು typical ಆಗಿ ಜಾರಿಕೊಳ್ಳೋದು.
ಹೀಗೆ ಎಲ್ಲಿಂದ ಎಲ್ಲಿಗೋ ಮಾತಾಡಿ. ಕೊನೆಗೆ ಇಡೀ ಮಾತನ್ನು "ವಿತಂಡ" ಅಂದು ಹಾರಾಡಕ್ಕೆ ಏನು ಕಾರಣವೋ ನನಗೆ ಗೊತ್ತಿಲ್ಲ.
ಹೀಗೆ ನೋಡಿದರೂ "ವಿತಂಡವಾದಕ್ಕೆ ಸೂಪ್ಪು ಗರಿಕೆ ಹಾಕುವವನಲ್ಲ"
ಅಂತ ಹಾಗೆ ವಾದ ಮಾಡ್ತಾ ಇರೋದು. topic ಗೆ ಬರಿ Etmology ಮಾತುಗಳಾಡಿದ್ದರೆ ಸಾಕಿತ್ತು, ಸುಮ್ನೆ ಏನೇನು topicಇಂದ ಆಚೆ ಎತ್ತಿದವರು/ಎತ್ತುವವರು ಮೊದಲು ಯಾರೆಂದು ನೋಡಿಕೊಳ್ಳಬೇಕು.
ವಿತಂಡವಾದಕ್ಕೆ ನಾನು ಸೊಪ್ಪು ಹಾಕುವವನಲ್ಲ ಅಷ್ಟೇ
who cares?
ಬರಿ ’ಬಳ್ಳಿ/ವಲ್ಲಿ’ಯ ನೀಟಾದ sanskrit etmology ತೋರಿಸಿದ್ದರೆ, ಅದು ಸಂಸ್ಕೃತದಿಂದ ಬಂದುದು ಎನ್ನುವದಕ್ಕೆ ’ಪುರಾವೆ’ ಕೊಟ್ಟಿದ್ದರೆ(ಇನ್ನೂ ಕೊಟ್ಟಿಲ್ಲ), ಸಾಕಿತ್ತು!! ಅದಕ್ಕೆ ಧರ್ಮ, national integration, ಇನ್ನು ಏನೇನೋ ಒಗ್ಗರಣೆ ಬೇಕಿರಲಿಲ್ಲ. ಅಲ್ವಾ
!!
ಅಂತೂ ಇವಾಗಲಾದರೂ ಈ ಮಾತುಕತೆ ತೀರಿತಲ್ಲ(?)!! ಮತ್ತೆ ಯಾವ "ಬ್ರಹ್ಮದೇಶ, ಸಿಂಹಳ, ತಾಯಿಲೇಂಡು, ಕೊರಿಯನ್ ರಾಮಾಯಣ, ಜಾಪಾನಿ ಭಾಗವತ"ದ ಬಗ್ಗೆ ಬರೆದು ಕೊನೆಗೆ ’ಬಳ್ಳಿ’ಯನ್ನೇ ಬಿಟ್ಟಯ ಇರುತ್ತೋ ಅಂತ ಇದ್ದೆ.
====================================================
ದಿಟವು ಯಾವಾಗಲೂ ನಲಿವು ತರಲ್ಲ! ಹಾಗಂತ ದಿಟವನ್ನು ಅರಿಯದೇ ಇರುವುದು ಅರಿಯಮಿಕೆ
Re: ಕನ್ನಡದ ಬಳ್ಳಿ
ಮಹೇಶರೇ,
democracy, communism, capitalism ಗಳಿಂದ "ಹಿಂದೂ ಶವಸಂಸ್ಕಾರ"ಕ್ಕೆ ತಿರುಗಿ ಇನ್ನೆಲ್ಲಿ ಬಳ್ಳಿ ಕಳೆದುಹೋಗುವುದೋ ಎಂದು ಕೊಂಡಿದ್ದೆ; ಸದ್ಯ ತಿರುಗಿ ಬಂತಲ್ಲ -ಒಳ್ಳೆಯದು; ನಿಮಗೆ ಸಮಯವಾದಾಗ ನನ್ನೆಲ್ಲ ಪ್ರಶ್ನೆಗಳಿಗೆ ಉತ್ತರಿಸಿರಿ!
ಅಂದಹಾಗೆ ಸಕ್ಕದದಲ್ಲಿ ವಲ್ಲೀ, ಬಲ್, ಬಲ್ಬಲ್, ಬಲ್ಲೀ ಇತ್ಯಾದಿಗಳ ಬಗ್ಗೆ ನಾನು ಬರೆದ ವಿವರಣೆಗೆ ಪುರಾವೆಯಾಗಿ ಈ ಕೆಳಗಿನ ಪುಸ್ತಕಗಳನ್ನು ತಿರುವಿಹಾಕಬಹುದು(೧,೨ ನ್ನು ಈ ಮೊದಲೂ ತಿಳಿಸಿದ್ದೆ). ಅಂತರ್ಜಾಲ ಪ್ರತಿ ಸಿಗುವುದೆನಿಸುತ್ತದೆ:
೧.ವಿ.ಎಸ್.ಆಪ್ಟೆ - ಸಕ್ಕದಾಂಗ್ಲ ನಿಘಂಟು
೨.ಮೊನಿಎರ್-ವಿಲಿಯಂ - ಸಕ್ಕದಾಂಗ್ಲ ನಿಘಂಟು
೩. ಕಪೆಲ್ಲರ್ - ಸಕ್ಕದಾಂಗ್ಲ ನಿಘಂಟು
೪.ಡಾ.ಕಲ್ಯಾಣರಾಮನ್ ರ ಸಕ್ಕದೈರೋಪ್ಯದ್ರಾವಿಡ ಶಬ್ದಕೋಶ, ಭಾರತೀಯ ಶಬ್ದೋಚ್ಚಾರಣಾ ಕೋಶ.
೫.ಅಮರಸಿಂಹನ ನಾಮಲಿಂಗಾನುಶಾಸನ - ದ್ವಿತೀಯಕಾಂಡ:ನಾಲ್ಕನೇ ಸಸ್ಯವರ್ಗ
೬.ತೋಕ್ಯೋ ವಿವಿ ಯ ಕ್ಯೋತೊ-ಹಾರ್ವಡ್ ಪದ್ಧತಿಯ ಸಕ್ಕದ ನಿಘಂಟು
ನಿಮ್ಮ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಕನ್ನಡದ್ದೇ ಬಳ್ಳಿ
Sanskrit Etymology ಯ ಬಗ್ಗೆ ಇರುವ ಹೊತ್ತಗೆ ಇಲ್ಲವೇ?
ಇಂಗ್ಲೀಷ್ನ ೪೮ ನಿಘಂಟುಗಳಲ್ಲಿ ಪೈಜಾಮ ಇದೆ. ಅದಕ್ಕೆ ಪೈಜಾಮ ಇಂಗ್ಲೀಷದ್ದು ಅಂದಹಾಗ ಆಯ್ತು.!!!
ನಿಘಂಟಲ್ಲ ಬೇಕಿರುವುದು, "Etymological ನಿಘಂಟು" ಅದು ಸಂಸ್ಕೃತಕ್ಕೆ ಯಾರಾದರು ಮಾಡಿರುವರೇ ಹುಡುಕಿ ತೋರಬಹುದು.
ದ್ರಾವಿಡದಿಂದ ಹೋಗಿದೆ ಅಂತ ಇನ್ನು chances ಇದ್ದೇ ಇದೆ, ಏಕೆಂದರೆ Dravidian ETYMOLOGICAL ನಿಘಂಟೇ ಅದನ್ನು ಹೇಳುತ್ತೆ!!!
democracy, communism, capitalism ಗಳಿಂದ "ಹಿಂದೂ ಶವಸಂಸ್ಕಾರ"ಕ್ಕೆ ತಿರುಗಿ ಇನ್ನೆಲ್ಲಿ ಬಳ್ಳಿ ಕಳೆದುಹೋಗುವುದೋ ಎಂದು ಕೊಂಡಿದ್ದೆ
ಹೋಗುತ್ತಿತು. ಆದರೆ ಯಾವ "ಗಣೇಶ, ಪಿಳ್ಳಾರಿ, ತಮಿಳು ತಲೆಗಳ ನಡುವೆ, ಕನ್ನಡಿಗರು ತಮಿಳರಾಗ ಬೇಕಿಲ್ಲ, ರಾಮನವಮಿಗಾಗಿ ಸಂಸ್ಕೃತ, ಕನ್ನಡಕ್ಕೆ ಕಸ್ತೂರಿ ಪರಿಮಳ ಸಂಸ್ಕೃತದಿಂದ, ಭಾಷಾ ಅನ್ಯೂನ್ಯತೆಗೆ ಸಕ್ಕದವೆಂಬ ಮಂತ್ರದಂಡ" ಹೀಗೆ random infoಗಳ ಚಕಾರ ಮತ್ತೆ ಬರಲಿಲ್ಲ ಅದಕ್ಕೆ ಆ opportunity miss ಆಯ್ತು
"ವಿತಂಡವಾದ" ಎಂದು ಕರೆದು ಎದ್ದವರು, ಮತ್ತೆ ಮುಂದುವರಿಸಲು ಕೇಳಿರುವುದು ಸೋಜಿಗ!!
ಏನೇ ಇರಲಿ Etymology ನಿಘಂಟಿಗಾಗಿ ಕಾಯೋಣ!!

======
ವಲ್ಲೀ ಸಕ್ಕದವೇ!
ಸ್ವಾಮೀ ಮಹೇಶರೆ,
"ಎಟಿಮೋಲಜಿ" ಶಬ್ದಕ್ಕಿರುವ ಅರ್ಥವನ್ನು ಕೊಂಚ ಪರಾಮರ್ಶಿಸುವಂಥವರಾಗಿ! ಎಟಿಮೊಲಜಿ = ಶಬ್ದದ ಇತಿಹಾಸವನ್ನು ಅಧ್ಯಯನ ಮಾಡುವ ಶಾಸ್ತ್ರ; ಅಂದರೆ ಒಂದು ಶಬ್ದದ ಹಳೆಯ ರೂಪ, ಮೂಲಗಳನ್ನು ಅದಕ್ಕಿಂತ ಹಳೆಯ ಭಾಷೆಗಳಿಂದ ಹುಡುಕಿ ತೆಗೆದು ತಿಳಿಯಲು ಯತ್ನಿಸುವ ವಿದ್ಯೆ. ಕನ್ನಡಕ್ಕೆ ಇದು ಸಾಧ್ಯವಿರಬಹುದು ಏಕೆಂದರೆ ಕನ್ನಡಕ್ಕಿಂತ ಹಳೆಯ ಭಾಷೆಗಳಿವೆಯೆನ್ನುತ್ತಾರೆ ವಿದ್ವಾಂಸರು. ಸಕ್ಕದಕ್ಕೆ ಇದು ಅಸಾಧ್ಯ! ಏಕೆಂದರೆ ಸಿಗುವ ಎಲ್ಲ ಗ್ರಂಥಭಾಷೆಗಳಲ್ಲಿ ಸಕ್ಕದವೇ ಅತಿ ಹಳೆಯದು; ಋಗ್ವೇದವೇ ಜಗತ್ತಿನ ಅತಿ ಹಳೆಯ ಗ್ರಂಥವೆಂದು ಪಾಶ್ಚಾತ್ಯರೂ ಒಪ್ಪಿರುವ ಸತ್ಯ! ನೀವದನ್ನು ನಂಬುವಿರೋ ಬಿಡುವಿರೋ ನನಗೆ ಬೇಡವಾದರೂ, ಸಕ್ಕದಕ್ಕಿಂತ ಹಳೆಯ ಆಡುಭಾಷೆಗಳ ಎಟಿಮೊಲಜಿ ಲಭ್ಯವಿಲ್ಲವೆಂಬುದು ಸತ್ಯ. ಆದ್ದರಿಂದ ನೀವು ಸಕ್ಕದದ ಎಟಿಮೊಲಜಿಗಾಗಿ ಕಾಯುತ್ತಿರಲೇ ಬೇಕಾಗುತ್ತದೆ- ಅನಂತವಾಗಿ! "ಬಳ್ಳಿ"ಯ ಮೂಲ ಕನ್ನಡದ್ದೇ ಎಂಬುದರ ಬಗ್ಗೆ ಸಮಾಧಾನಕರ ಆಧಾರ-ಉತ್ತರಕ್ಕಾಗಿ ನಾನು ಕಾಯುತ್ತಿರುವಂತೆ!
ಒಂದು ಹೊತ್ತಗೆಯಲ್ಲಿರುವ ಶಬ್ದಕ್ಕೇ ನೀವು "ಮೂಲ" ಪಟ್ಟ ಕಟ್ಟಲೆತ್ನಿಸುವಾಗ, ನೂರಾರು ಶಬ್ದಕೋಶಗಳಿರುವವರು ಸುಮ್ಮನಿರುವರೇ ಸ್ವಾಮೀ? ಸಂಖ್ಯಾಬಲ! ಡೆಮಾಕ್ರಸಿ - ನಿಮ್ಮ ಅಚ್ಚುಮೆಚ್ಚಿನ ಪದ!
ನಿಮ್ಮಂತೆ ನಾನೂ ಬಿಡುವಿಲ್ಲದ ಕೆಲಸಗಳಲ್ಲಿ ನಿರತ; ಮತ್ತೆ ಈ ಎಳೆಯಲ್ಲಿ ಉತ್ತರಿಸಲು ಯೋಗ್ಯವಾದ ಪ್ರಶ್ನೆಯಿದ್ದರೆ ಖಂಡಿತ ಬರೆಯುತ್ತೇನೆ!
ನಿಮ್ಮ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಬಳ್ಳಿ ಕನ್ನಡವೇ.
ಋಗ್ವೇದವೇ ಜಗತ್ತಿನ ಅತಿ ಹಳೆಯ ಗ್ರಂಥವೆಂದು ಪಾಶ್ಚಾತ್ಯರೂ ಒಪ್ಪಿರುವ ಸತ್ಯ!
ಋಗ್ವೇದ ಗ್ರಂಥವೇ? ಅದನ್ನು ಬರೆದವರು ಯಾರು?
ಋಗ್ವೇದದ ಕಾಲದ ತೀರ್ಮಾನ ಇನ್ನೂ ಆಗೇ ಇಲ್ಲ. ಯಾರೋ ಕೊಚ್ಚಿಕೊಳ್ಳುವರು ಅಂತ ಒಪ್ಪಲು ಬರುವುದಿಲ್ಲ. ಋಗ್ವೇದವು ಇಷ್ಟೊಂದು ಹಳೆಯದು ಎಂದು ಹೇಳಿ, ಅದೇ ಅತಿ ಹಳೆಯದು ಎಂದು ಹೇಳುವವರ ವಾದ "ಋಗ್ವೇದದಲ್ಲಿ ೧ಲಕ್ಷ( something like this ) ಹಳೆಯ ಒಂದು ತಿಥಿಯ mention ಇದೆ" ಅದಕ್ಕೆ.
ನಮ್ಮ ದೇಶದಲ್ಲಿ ಸಿಗುವ ಅತಿ ಹಳೆಯ ಬರಹಗಳು ಪ್ರಾಕೃತ ಮತ್ತು ತಮಿಳಿನಲ್ಲಿವೆ ಹೊರತು ಸಂಸ್ಕೃತದಲ್ಲಿಲ್ಲ. ( ಬೇಕಾದರೆ ಹುಡುಕಿಕೊಂಡು ಓದಿಕೊಳ್ಳಬಹುದು). ಅದರಲ್ಲೂ ಹರಪ್ಪ ಕಣಿವೆಯ inscriptions ದ್ರಾವಿಡನುಡಿಗಳದ್ದೇ. ಅದರಲ್ಲಿ ದ್ರಾವಿಡದ "ಅಂಬು/ಅಂಪು" ಪದವಿದೆ ಎಂಬ ನಂಬಿಕೆ ಎಲ್ಲಡೆ ಇದೆ. ಅದೆಲ್ಲ ಇರಲಿ.. "ಎತ್ತಿಂದೆತ್ತಣ ಮಾತಯ್ಯ"
ಮತ್ತೇ ಅದೇ ಮಾತು, ವಿಷಯದಿಂದ ಆಚೆಗೆ. "ಋಗ್ವೇದ ಹಳೆಯದು" ಇದು ಸತ್ಯವೇ, ಇದು ಒಂದು claim ಇನ್ನು prove ಆಗಬೇಕು.
ಸಂಸ್ಕೃತದ Etymology ನಿಘಂಟು ತೋರಿಸಿ ಹೇಳಬೇಕು.
.
.
.
ದ್ರಾವಿಡ Etymology ನಿಘಂಟು ಅದು ಕನ್ನಡದ್ದೇ, ದ್ರಾವಿಡದಿಂದ Indo-Aryan ನುಡಿಯಾದ ಸಂಸ್ಕೃತಕ್ಕೆ ಹೋಗಿರಬಹುದು ಎಂದು ಹೇಳುವುದರಿಂದ, ಬಳ್ಳಿ ಕನ್ನಡದ್ದೇ.
ಉತ್ತರಿಸಲು ಯೋಗ್ಯವಾದ ಪ್ರಶ್ನೆಯಿದ್ದರೆ ಖಂಡಿತ ಬರೆಯುತ್ತೇನೆ!
ನೀವು ಬರೆಯಲಿ ಎಂದು ನಾನಂತೂ ಕಾಯುತ್ತಿಲ್ಲ. ಬರೆಯದಿದ್ದರೆ "ಕತ್ತೆ ಬಾಲ ಕುದುರೆ ಜುಟ್ಟು"
"ಇನ್ನು ಯೋಗ್ಯಾಯೋಗ್ಯದ ನಿರ್ಧರಣೆಯನ್ನು ಒಬ್ಬನ ಕಯ್ಯಲ್ಲಿ ಇಲ್ಲ!!!"
ಸಂಸ್ಕೃತದ Etymology ನಿಘಂಟು ತೋರಿಸುವವರೆಗೂ ಏನು ಹೇಳಿದರೂ ಅಷ್ಟೇ. !!!

======
ಉ: ಬಳ್ಳಿ ಕನ್ನಡವೇ.
ಬಳ್ಳಿ ಕನ್ನಡವೋ ಸಂಸ್ಕೃತವೋ ಎಂಬ ವಾದದ ಬಗ್ಗೆ ಮೂರ್ತಿಗಳು ಏನು ಹೇಳಿದರು?
ಕನ್ನಡದ ಬಳ್ಳಿಗಳು