Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವ್ಯಾಕರಣ

ಕನ್ನಡ-ಇಂಗ್ಲಿಸ್ ಹೋಲಿಕೆ ಮತ್ತು ಬೇರೆತನಗಳು

March 27, 2007 - 9:31am — ಸಂಗನಗೌಡ

ಇಂಗ್ಲಿಸಿನಲ್ಲಿ ಐದು ಸ್ವರಗಳಿವೆ ಅಲ್ಲವೇ,

a,e,i,o,u

ಇವು ಕನ್ನಡದ ಅ,ಎ,ಇ,ಒ, ಮತ್ತು ಉ ಗಳಿಗೆ ಸಮನಾದವು. ಆದರೆ ಕನ್ನಡದಲ್ಲಿ ಎಳೆದು ಆಡಲು ಇನ್ನೊಂದು ಬಗೆಯ ಸ್ವರಗಳು ಬರುತ್ತವೆ. ಹ್ರುಸ್ವ ಮತ್ತು ದೀರ್ಘ ಅಂತಾರಲ್ಲ, ಅದು.

ಅ-ಆ,ಇ-ಈ,ಉ-ಊ,ಎ-ಏ,ಒ ಮತ್ತು ಓ. ಒಟ್ಟು ಹತ್ತಾಯ್ತು. ಉಳಿದ ಐ,ಔ,ಅಂ ಮತ್ತು ಅಃ ಗಳನ್ನು ವೆಂಜನಗಳನ್ನು ಬಳಸಿಯೇ ಬರೆಯಬಹುದು. ಅಯ್, ಅವ್, ಅಮ್, ಮತ್ತು ಅಹ.

ಇನ್ನೊಂದು important ಹೋಲಿಕೆ ಏನು ಅಂದ್ರೆ, ಕನ್ನಡದಲ್ಲಿ ಕ್ಷ ಮತ್ತು ಜ್ಞ್ ಗಳು ಕೊನೆಯಲ್ಲಿ ಬರುವಂತೆಯೇ, ಇಂಗ್ಲೀಸಿನಲ್ಲೂ ಅದೇ ಸೊಲ್ಲು ಹೊಂದಿರುವ X ಮತ್ತು Z ಗಳು ಕೊನೆಯಲ್ಲಿಯೇ ಬರುತ್ತವೆ.

‹ ಕನ್ನಡದಲ್ಲಿನ ಒತ್ತಕ್ಷರಗಳು ಕನ್ನಡದಲ್ಲಿ ಞ ಮತ್ತು ಙ ›
  • ವ್ಯಾಕರಣ
Ornamental seperator
  • Login or register to post comments
  • 1009 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 27, 2007 - 11:35am — ASHOKKUMAR

Re: ಕನ್ನಡ v/s ಇಂಗ್ಲಿಷ್

ASHOKKUMAR's picture

ಋ ಸ್ವರಾಕ್ಷರ ಅಲ್ಲವೇ?
ಹೃಸ್ವ ಬರೆಯುವಾಗ ಅದು ಬೇಕು ತಾನೇ?ವ್ಯಂಜನ ಬರೆಯುವಾಗ ಯ ಬೇಕು. ನೀವು ಎ ಬಳಸಿ ಬರೆದಿರುವುದು ಯಾಕೋ ಅರ್ಥವಾಗಲಿಲ್ಲ.

  • Login or register to post comments
  • link
  • Email this ಪ್ರತಿಕ್ರಿಯೆ
March 27, 2007 - 1:07pm — ಸಂಗನಗೌಡ

Re: ಕನ್ನಡ v/s ಇಂಗ್ಲಿಷ್

ಸಂಗನಗೌಡ's picture

ವ್ಯಂಜನ ಬರೆಯುವಾಗ ಯ ಬೇಕು. ನೀವು ಎ ಬಳಸಿ ಬರೆದಿರುವುದು ಯಾಕೋ ಅರ್ಥವಾಗಲಿಲ್ಲ.

ಕನ್ನಡದ ಸರಳತನ ಏನು ಅಂದ್ರೆ, ಒಂದು ಪದಕ್ಕೆ spelling ಒಂದೇ ಇರಬೇಕೆಂದೇನೂ ಇಲ್ಲ, ಅದನ್ನು ಓದಿದಾಗ ಸರಿಯಾಗಿ ಕೇಳಿಸಿದರೆ ಆಯ್ತು. ಅಲ್ಲವೇ?

  • Login or register to post comments
  • link
  • Email this ಪ್ರತಿಕ್ರಿಯೆ
March 27, 2007 - 1:25pm — mahesha

ವೆಂಜನ vs ವ್ಯಂಜನ

mahesha's picture

ಗೌಡರ ಮಾತು ಸರಿ.! ಕನ್ನಡದ ಉಲಿಕೆಯಲ್ಲಿ ಇದು ಇದೆ.

ವ್ಯಂಜನ <=> ವೆಂಜನ ಇದು ಕನ್ನಡದ ಉಲಿಕೆಯಲ್ಲಿ ಸರಿ. ಬರೆವಣಿಗೆಯಲ್ಲಿ ಗೊತ್ತಿಲ್ಲ.

ಬೇಡ <=> ಬ್ಯಾಡ
ಹೇಗೆ <=> ಹ್ಯಾಗೆ
ಬೇರೆ <=> ಬ್ಯಾರೆ
ಬೆಳೆ <=> ಬ್ಯಳೆ
ಏಕೆ <=> ಯಾಕೆ.
ಬೆಂಕಿ <=>ಬ್ಯಂಕಿ

ಕನ್ನಡಿಗರು ಈ ಬಗೆಯಲ್ಲಿ ಉಲಿಯುವುದು common. ಇದು ಕನ್ನಡದ ಮತ್ತು ಕನ್ನಡಿಗರ nature, uniqueness.!

ಹಾಗೆ

ತುಳಸಿ <=> ತೊಳಸಿ( ಇದು ಗುದುಗಿನ ಭಾರತದಲ್ಲಿ ಬಂದಿದೆ, ನೆನ್ನೆ ಓದಿದ್ದು, "ಮೊದಲ ಓದು" ಸರಣಿ )
ಮುದಲ್ <=> ಮೊದಲ್
ಕಿಡು <=> ಕೆಡು

  • Login or register to post comments
  • link
  • Email this ಪ್ರತಿಕ್ರಿಯೆ
March 27, 2007 - 12:38pm — mahesha

Re: ಕನ್ನಡ-ಇಂಗ್ಲಿಸ್ ಹೋಲಿಕೆ ಮತ್ತು ಬೇರೆತನಗಳು

mahesha's picture

a e i o u

ಇವು ಬೇರೆ ಬೇರೆ ಪದಗಳಲ್ಲಿ ಬೇರೆ ಬೇರೆ sound ಹೇಳುತ್ತದೆ. English ಅಲ್ಲಿ ಹಲವು symbol ಗಳು ಇದೇ sound ಅನ್ನು ಹೇಳುತ್ತದೆ ಅಂತ ಇಲ್ಲ.

ಅಲ್ಲದೆ ಇಂಗ್ಲೀಸಿನ a ಮತ್ತು o ಗೆ ಕನ್ನಡದಲ್ಲಿ ಸಮನಾದ ಉಲಿಯಿಲ್ಲ. ant != ಆಂಟ್, orange != ಓರೆಂಚ್.

ಕನ್ನಡ ಮತ್ತು ಇಂಗಲೀಷು ಶುದ್ಧಗೆಯಲ್ಲಿ ಹೆಚ್ಚು ಹೋಲಿಕೆಯಿಲ್ಲ. ಆದರೆ ಅವೆರಡರ grammar ಅಲ್ಲಿ ಬಹಳ ಇದೆ.

.
.
.
.

ಇನ್ನು ಅಂ ಮತ್ತು ಅಃ
ಅಂ != ಅಮ್
ಅಂಕ = ಅಙ್ಕ
ಅಂಚೆ = ಅಞ್ಚೆ
ಅಂಡ = ಅಣ್ಡ
ಅಂದ = ಅನ್ದ
ಅಂಬು = ಅಮ್ಬು
ಹಂಸ != ಹಮ್ಸ

ಈ o(ಅನುಸ್ವರ?) nasal ವ್ಯಂಜನದ ಬದಲಿಗೆ ಬರುವುದು. ಅಲ್ಲದೆ.

ಎಂದುಂ ಈಗೆ = ಎಂದುಮೀಗೆ
ಎಂದುಂ ನನ್ನ = ಎಂದುನ್ನನ್ನ
ಎಂದುಂ ಕೇಳು = ಎಂದುಙ್ಕೇಳು....

ಹೀಗೆ o ಇದರ ಉಲಿ ಮುಂದೆ ಬರುವ ವ್ಯಂಜನದ ಮೇಲೆ ನಿಂತಿರುತ್ತದೆ. ಹಾಗಾಗಿ o(ವಿಸರ್ಗ) ಙ, ಞ, ಣ, ನ, ಮ ಮತ್ತು [ ಹಂಸ, ಸಂಯುಕ್ತ ] ಒಟ್ಟು ಆರು sound ಗಳನ್ನು represent ಮಾಡುವುದು.

ಅಃ != ಅಹ
೧. ಪ್ರಾತಃ ಕಾಲ != ಪ್ರಾತಹ ಕಾಲ
೨. ಪುನಃ ಪೂಜೆ != ಪುನಹ ಪೂಜೆ
೩. ರಾಮಃ != ರಾಮಹ

ಇದು :(ವಿಸರ್ಗ?) ಮೂರು soundಗಳನ್ನು represent ಮಾಡುವುದು.

ಆದರೆ ಕನ್ನಡದಲ್ಲಿ : ಇರುವ ಪದಗಳು ಇಲ್ಲ. ಅದಕ್ಕೆ ಇದರ ಬಗ್ಗೆ ಹೆಚ್ಚು ತಲೆಗೆಡಿಸಿಕೊಳ್ಳಬೇಕಿಲ್ಲ ಎಂದು ಅನಿಸುತ್ತದೆ.

ಈ : ಇಂಗ್ಲಿಸಲ್ಲೂ ಇಲ್ಲ, ಯಾವ ದ್ರಾವಿಡ ನುಡಿಗಳಲ್ಲೂ ಇಲ್ಲ. ಆದರೆ ಅರಬ್ಬೀ, ಪಾರಸೀ ಗಳಲ್ಲಿ ಇದೆ ಎಂದು ಅನಿಸಿಕೆ.
ಉದಾ: "ಅಲ್ಲಃ" ( allah ) , ಜದ್ದಃ ( jaddah)

  • Login or register to post comments
  • link
  • Email this ಪ್ರತಿಕ್ರಿಯೆ
March 27, 2007 - 3:03pm — ismail

Re: ಕನ್ನಡ-ಇಂಗ್ಲಿಸ್ ಹೋಲಿಕೆ ಮತ್ತು ಬೇರೆತನಗಳು

ismail's picture

ಅರಬಿ, ಫಾರಸಿಗಳಲ್ಲಿ ವಿಸರ್ಗವಿಲ್ಲ. ಅಲ್ಲಿ ಮೂರು ಬಗೆಯ 'ಹ'ಗಳಿವೆ.
ಇಸ್ಮಾಯಿಲ್

ನನ್ನ ಬ್ಲಾಗ್: http://ismail.sampada.net

  • Login or register to post comments
  • link
  • Email this ಪ್ರತಿಕ್ರಿಯೆ
March 27, 2007 - 3:55pm — mahesha

ಅರಬಿ, ಫಾರಸಿಗಳಲ್ಲಿ ವಿಸರ್ಗವಿಲ್ಲ.

mahesha's picture

ಧನ್ಯವಾದ..!!

ನೋಡುವೆನು!

  • Login or register to post comments
  • link
  • Email this ಪ್ರತಿಕ್ರಿಯೆ
March 27, 2007 - 3:24pm — ಸಂಗನಗೌಡ

a,e,i,o,u

ಸಂಗನಗೌಡ's picture

ಇಂಗ್ಲೀಸಿನಲ್ಲಿ ಆ ಗೊಂದಲಗಳಿದ್ದರೂ, a,e,i,o,u ಗಳು ಸರಿಯಾಗಿ ಅ,ಎ,ಇ,ಒ ಮತ್ತು ಉ ಗಳ slot ಗಳಲ್ಲೇ ಕುಳಿತುಕೊಳ್ಳುತ್ತವೆ. ಮತ್ತು ಕನ್ನಡದಲ್ಲಿ ಹೇಳಿಕೊಳ್ಳಲು ಹದಿನಾಕು ಸ್ವರಗಳಿದ್ದರೂ, ಈ ಐದು + ಇವುಗಳ ದೀರ್ಘಗಳು (ಒಟ್ಟು ಹತ್ತು) ಇಷ್ಟು ಮಾತ್ರ ದಿಟವಾದ ಸ್ವರಗಳು. ಅಂದರೆ ಅ-ಆ,ಇ-ಈ,ಉ-ಊ,ಎ-ಏ,ಒ ಮತ್ತು ಓ ಇವನ್ನು ಬೇರೆ ಯಾವುದೇ ಸುದ್ದಗೆ ಬರೆದು ಅದೇ ಸೊಲ್ಲು ಬರಿಸಲಾಗದು.

  • Login or register to post comments
  • link
  • Email this ಪ್ರತಿಕ್ರಿಯೆ
March 27, 2007 - 3:41pm — mahesha

Re: a,e,i,o,u

mahesha's picture

Quote:

ಅ-ಆ,ಇ-ಈ,ಉ-ಊ,ಎ-ಏ,ಒ ಮತ್ತು ಓ ಇವನ್ನು ಬೇರೆ ಯಾವುದೇ ಸುದ್ದಗೆ ಬರೆದು ಅದೇ ಸೊಲ್ಲು ಬರಿಸಲಾಗದು.

ಈ ಮಾತು ನನಗೆ ತಿಳಿಯಲಿಲ್ಲ.

  • Login or register to post comments
  • link
  • Email this ಪ್ರತಿಕ್ರಿಯೆ
March 27, 2007 - 3:44pm — ಸಂಗನಗೌಡ

Re: a,e,i,o,u

ಸಂಗನಗೌಡ's picture

ಅಂದರೆ, ಐ,ಔ ಗಳನ್ನು ಅಯ್ ಮತ್ತು ಅವ್ ಎಂದು ಬರೆಯಬಹುದು ಆದರೆ ಅ-ಆ, ಇ-ಈ, ಉ-ಊ, ಎ-ಏ ಒ-ಓ ಇವುಗಳನ್ನು ಬೇರೆ ಯಾವುದೇ ಸುದ್ದಗೆ(letter,ಅಕ್ಷರ) ಬಳಸಿ ಬರೆಯಲು ಸಾಧ್ಯವಿಲ್ಲವೆಂದು ನಾ ಹೇಳಿದ್ದು.

  • Login or register to post comments
  • link
  • Email this ಪ್ರತಿಕ್ರಿಯೆ
March 27, 2007 - 3:53pm — mahesha

Re: a,e,i,o,u

mahesha's picture

Quote:

ಅಂದರೆ, ಐ,ಔ ಗಳನ್ನು ಅಯ್ ಮತ್ತು ಅವ್ ಎಂದು ಬರೆಯಬಹುದು ಆದರೆ ಅ-ಆ, ಇ-ಈ, ಉ-ಊ, ಎ-ಏ ಒ-ಓ ಇವುಗಳನ್ನು ಬೇರೆ ಯಾವುದೇ ಸುದ್ದಗೆ(letter,ಅಕ್ಷರ) ಬಳಸಿ ಬರೆಯಲು ಸಾಧ್ಯವಿಲ್ಲವೆಂದು ನಾ ಹೇಳಿದ್ದು.

ಹೌದು. ನಾನು ಓದುತ್ತಿರುವ ಶಬ್ದಮಣಿದರ್ಪಣದ ಹೊತ್ತಗೆಯಲ್ಲೂ ಈ ಮಾತು ಬಂದಿದೆ. ಬಹಳ ಹಳಯ ಕನ್ನಡದ ಬರಹಗಳಲ್ಲಿ ಐ ಮತ್ತು ಔ ಇಲ್ಲ. ಬದಲಿಗೆ ಅಯ್ ಮತ್ತು ಅವ್ ಇದೆ.

ಅಂದರೆ
ಕೈ = ಕಯ್ ಅಂತ ಇದೆ
ಮೈ = ಮಯ್ ಅಂತ ಇದೆ

'ಹೌದು' ಅನ್ನು 'ಹವುದು' ಅಂತಲೂ ಬರೆಯುವುದುಂಟು ಅಂತ.

  • Login or register to post comments
  • link
  • Email this ಪ್ರತಿಕ್ರಿಯೆ
March 27, 2007 - 12:22pm — Shyam Kishore

Cut = ಕಟ್ ಆದರೆ Put = ಪುಟ್; ಗೊಂದಲವೋ ಗೊಂದಲ!

Shyam Kishore's picture

ಇಂಗ್ಲೀಷಿನಲ್ಲಿ ಪದಗಳನ್ನು ಬರೆಯೋದು ಒಂದು ರೀತಿಯಾದರೆ ಅವನ್ನು ಓದೋದು ಇನ್ನೊಂದು ತರಹ; ಸಂದರ್ಭಕ್ಕೆ ತಕ್ಕಂತೆ. ಇದೊಂದು ರೀತಿಯ ಗೊಂದಲವನ್ನುಂಟುಮಾಡುತ್ತದೆ. ಈ ರೀತಿಯ ಗೊಂದಲವೆಂದಾಕ್ಷಣ ನೆನಪಿಗೆ ಬರೋದು "ಬಂಗಾರದ ಮನುಷ್ಯ" ಚಿತ್ರದ ಒಂದು ಸಂಭಾಷಣೆ. ದ್ವಾರಕೀಶ್ ಪಾತ್ರ ಹೇಳುವಂತೆ "Cut = ಕಟ್ ಆದರೆ Put = ಪುಟ್; ಗೊಂದಲವೋ ಗೊಂದಲ!". ಇದು ಕೇವಲ ಒಂದು ಉದಾಹರಣೆ ಅಷ್ಟೆ. ಈ ಪದಗಳಲ್ಲಿ U ಎನ್ನುವ ಅಕ್ಷರ ಸಂದರ್ಭಕ್ಕೆ ತಕ್ಕಂತೆ ಉಚ್ಚಾರಣೆಯನ್ನು ಪಡೆಯುತ್ತದೆ.

ಇನ್ನೂ ವಿಚಿತ್ರ ಉಚ್ಚಾರಣೆಗೆ ಉದಾಹರಣೆ ಅಂದರೆ colonel ಅಂತ ಬರೆದು ಕರ್ನಲ್ ಅಂತ ಓದೋದು. ಉಸ್ಸಪ್ಪಾ, ಗೊಂದಲವೋ ಗೊಂದಲ.

- ಶ್ಯಾಮ್ ಕಿಶೋರ್

  • Login or register to post comments
  • link
  • Email this ಪ್ರತಿಕ್ರಿಯೆ
March 27, 2007 - 12:38pm — ವೈಭವ

Re: Cut = ಕಟ್ ಆದರೆ Put = ಪುಟ್; ಗೊಂದಲವೋ ಗೊಂದಲ!

ವೈಭವ's picture

ಇದು ಯಾಕಂದ್ರೆ ಇಂಗ್ಲಿಷ್ನಲ್ಲಿ ಕಾಗುಣಿತದ ಕಾನ್ಸೆಪ್ಟ್ ಇಲ್ಲ... ಅದಕ್ಕೆ ಬೇಕಾದಂಗ್ ಬರೆಯೋದು ಬೇಕಾದಂಗ್ ಉಲಿಯೋದು...ಹಿಂದೆ ಇದರ ಬಗ್ಗೆ ಬ್ಲಾಗಿದ್ದೆ.

  • Login or register to post comments
  • link
  • Email this ಪ್ರತಿಕ್ರಿಯೆ
March 27, 2007 - 2:59pm — ismail

Re: Cut = ಕಟ್ ಆದರೆ Put = ಪುಟ್; ಗೊಂದಲವೋ ಗೊಂದಲ!

ismail's picture

ಈ ಗೊಂದಲಕ್ಕೆ ಕಾರಣವಾದದ್ದು ಇಂಗ್ಲಿಷ್ ನ ನಿಘಂಟು ಪಿತಾಮಹ ಸ್ಯಾಮ್ಯುಯೆಲ್ ಜಾನ್ಸನ್ ಎಂದು ಎಲ್ಲಿಯೋ ಓದಿದ ನೆನಪು. ಬಹುಶಃ ಶಂಕರಭಟ್ಟರ ಪುಸ್ತಕದಲ್ಲಿರಬೇಕು. ಪದಗಳನ್ನು ಬರೆವಾಗ ಅವುಗಳ ಇತಿಹಾಸವೂ ತಿಳಿಯುವಂತೆ ಇರಲಿ ಎಂದು ಭಾವಿಸಿ ಅವನು ಈ ಬಗೆಯ ಸ್ಪೆಲ್ಲಿಂಗ್ ಪದ್ಧತಿಯನ್ನು ರೂಢಿಸಿದನಂತೆ. ನಮ್ಮ ಮಧ್ಯೆಯೂ ಈ ಬಗೆಯ ಸ್ಪೆಲ್ಲಿಂಗ್ ಪದ್ಧತಿ ಇದೆ. ಇದು ಸಂಸ್ಕೃತ ಪದಗಳನ್ನು ಕನ್ನಡದಲ್ಲಿ ಬರೆಯುವಾಗ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ 'ಪದ್ಧತಿ' ಎಂಬುದನ್ನು ಪದ್ದತಿ ಎಂದೂ ಬರೆಯಬಹುದು. ಆದರೆ ಸಂಸ್ಕೃತದಲ್ಲಿ ಅದು 'ಪದ್ಧತಿ' ಆಗಿರುವುದರಿಂದ 'ದ' ಅಕ್ಷರಕ್ಕೆ ಮಹಾಪ್ರಾಣದ ಒತ್ತನ್ನು ಕೊಡುವುದರಿಂದ ಅದು ಮಾತ್ರ ಸರಿ ಎಂದು ವೈಯಾಕರಣಿಗಳು ವಾದಿಸುತ್ತಾರೆ.

ಈ ವಾದದ ತಪ್ಪು-ಸರಿಗಳನ್ನು ನಾನೀಗ ವಿಮರ್ಶಿಸಲು ಹೋಗುವುದಿಲ್ಲ. ಈ ಬಗೆಯ ನಿಲುವುಗಳ ಹಿಂದೆ ಸಾಮಾಜಿಕ ಕಾರಣಗಳಿರುವುದಂತೂ ಹೌದು. ಸಂಸ್ಕೃತದಲ್ಲಿರುವುದು ಸರಿ ಎಂದು ಭಾವಿಸುವುದನ್ನು ಎಂ.ಎನ್. ಶ್ರೀನಿವಾಸ್ ಅವರು ಅಂಥ್ರೋಪಾಲಜಿಯ ಸಂದರ್ಭದಲ್ಲಿ ಹೇಳುವ ಸಂಸ್ಕೃತೀಕರಣ ಕ್ರಿಯೆಗೆ ಹೋಲಿಸಬಹುದೇನೋ. 

ಈಗ ಇಂಗ್ಲಿಷ್ ನಲ್ಲಿ ಇರುವುದು ಸರಿ ಎಂಬ ಭಾವನೆಯೂ ನೆಲೆಯೂರತೊಡಗಿದೆ. ರವೀಂದ್ರನಾಥ ಟ್ಯಾಗೋರ್ ಎಂದು ಬರೆಯುವುದನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ. ತೀರಾ ಇತ್ತೀಚಿನವರೆಗೂ ಕನ್ನಡ ಬರೆವಣಿಗೆಯಲ್ಲಿ ಇದು ರವೀಂದ್ರನಾಥ ಠಾಕೂರ್ ಎಂದು ಬರೆಯಲಾಗುತ್ತಿತ್ತು. ಈಗ ಇಂಗ್ಲಿಷ್ ನಲ್ಲಿ ಬರೆಯುವಂತೆ ಟ್ಯಾಗೋರ್ ಎಂದು ಬರೆಯುತ್ತಿದ್ದೇವೆ. ವಿದೇಶಾಂಗ ಕಾರ್ಯದರ್ಶಿಯಾಗಿದ್ದ ರವಿ ರಾಯ್, ರಬಿ ರಾಯ್ ಆಗಿ ಈಗಂತೂ ರೊಬಿ ರಾಯ್ ಎಂದು ಬರೆಯುವ ಮಟ್ಟಕ್ಕೆ ಮುಟ್ಟಿದ್ದೇವೆ.

ಇದರಲ್ಲಿ ಯಾವುದೋ ಒಂದು ಸರಿ, ಮತ್ತಾವುದೋ ಒಂದು ತಪ್ಪು ಎಂದು ಹೇಳಲು ನಾನು ಸಮರ್ಥನಲ್ಲ. ಒಂದು ಬದಲಾವಣೆಯನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನಷ್ಟೆ.

ಇಸ್ಮಾಯಿಲ್ ನನ್ನ ಬ್ಲಾಗ್: http://ismail.sampada.net

  • Login or register to post comments
  • link
  • Email this ಪ್ರತಿಕ್ರಿಯೆ
March 27, 2007 - 1:28pm — ಸಂಗನಗೌಡ

Re: ಕನ್ನಡ-ಇಂಗ್ಲಿಸ್ ಹೋಲಿಕೆ ಮತ್ತು ಬೇರೆತನಗಳು

ಸಂಗನಗೌಡ's picture

ನಾವು ಬಳಸುತ್ತಿರುವ ಕನ್ನಡ ಲಿಪಿಯ ಬಗ್ಗೆ ನನಗಿರುವ ದೊಡ್ಡ ಅನುಮಾನ ಏನು ಅಂದರೆ, ಇದನ್ನು ಆಗಿನ scholars ಬಹುಶ ಸಂಸ್ಕ್ರುತ ಬರೆಯಲಿಕ್ಕೆ ಮಾಡಿಕೊಂಡಿದ್ದರೇನೋ. ಯಾಕೆ ಅಂದರೆ ಈಗ ಸಂಸ್ಕ್ರುತ,ಮರಾಟಿ,ಹಿಂದಿಗಳು ಬಳಸುವ ದೇವನಾಗರಿ ಲಿಪಿ ಬಂದದ್ದೇ, 12ನೇ ಶತಮಾನದಲ್ಲಿ(ಇಲ್ಲಿ ನೋಡಿ). ಅದಕ್ಕೂ ಮುಂಚಿನ ಸಂಸ್ಕ್ರುತ ಬರಹಗಳು ಹೆಚ್ಚಾಗಿ ದೊರೆತಿರುವದು ಕನ್ನಡದಲ್ಲೇ.

ಕನ್ನಡ ಲಿಪಿಗೆ ತಳಹದಿ ೪-೫ ನೇ ಶತಮಾನದ ಕದಂಬ ಲಿಪಿ(ಇಲ್ಲಿ ನೋಡಿ). ಕನ್ನಡವು ಸಂಸ್ಕ್ರುತಕ್ಕಾಗಿ ಮಾಡಿದ ಲಿಪಿಯೇ ದಿಟವಾದಲ್ಲಿ, ಕನ್ನಡದ ಮೇಲೆ ಸಂಸ್ಕ್ರುತದ ಸವಾರಿ ಹೇರಿದ್ದಲ್ಲ, ಅದು obvious ಅನಿಸುತ್ತದೆ.

  • Login or register to post comments
  • link
  • Email this ಪ್ರತಿಕ್ರಿಯೆ
March 27, 2007 - 1:39pm — mahesha

ದೇವನಾಗರಿಗಿಂತ ಕನ್ನಡದ ಲಿಪಿ ಹಳತು

mahesha's picture

ಸಂಗನಗೌಡರೇ,

ನಿಮ್ಮ ಮಾತು ದಿಟ.

ಸಂಸ್ಕೃತವನ್ನು ಬರೆಯಲು ಕದಂಬ ಲಿಪಿ ಕೆಲವು symbol/ಗುರುತು ಗಳನ್ನು ಸೇರಿಸಲಾಯಿತು ಎಂದು ಹಲವರ ಅಭಿಪ್ರಾಯ.

ಕದಂಬ ಲಿಪಿಯನ್ನು ಕಟ್ಟಿದ್ದೇ/ವಿನ್ಯಾಸಗೊಳಿಸಿದ್ದೇ, ಸಂಸ್ಕೃತ ಬರೆಯಲು, ಕನ್ನಡ ಬರೆಯಲು ಅಲ್ಲ ಎನ್ನುವ ಮಾತು ಇದೆ.
ಬಳಿಕ ಆ ಕದಂಬ ಲಿಪಿಯನ್ನು ಬಳಸಿ ಕನ್ನಡವನ್ನೂ ಬರೆಯಲಾಯಿತು ಎಂದೂ ಇದೆ.

ಅಂದರೆ ನಾವು ಬಳಸುತ್ತಿರುವ ಲಿಪಿ ಸಂಸ್ಕೃತ ಬರೆಯಲು ವಿನ್ಯಾಸಗೊಂಡ ಲಿಪಿ, ಕನ್ನಡಕ್ಕಾಗೇ ವಿನ್ಯಾಸವಾದುದಲ್ಲ. ಅದಕ್ಕೇ ಆ ಲಿಪಿಯೊಳಗೆ ಕನ್ನಡದಲ್ಲಿ ಇರದ ಹಲವು sound/ಉಲಿ ಗಳಿಗೆ symbol/ಗುರುತು ಗಳು ಇವೆ.

ಲಿಪಿಯ ವಿಷಯದಲ್ಲಿ ಸಂಸ್ಕೃತದ ಸವಾರಿ, ಹೇರಿಕೆಯ ಪ್ರಶ್ನೆಯೇ ಬರುವುದೇ ಇಲ್ಲ. ಏಕೆಂದರೆ ಕದಂಬ ಲಿಪಿ ಮಾಡಿದ್ದೇ ಸಂಸ್ಕೃತ-ಬರೆಯಲು, ಅದನ್ನು ತರುವಾಯ ಕನ್ನಡ ಬರೆಯಲು ಬಳಸಿಕೊಂಡಿದ್ದೇವೆ.

ಹಲವು ಸರತಿ ಒಂದು ಭಾಷೆಗೂ, ಅದರ ಲಿಪಿಗೂ ಸರಿಯಾದ ನಂಟಿರುವುದಿಲ್ಲ. ಅದಕ್ಕೆ ಕಾರಣ, ಒಂದು ಭಾಷೆಗೆ, ಬೇರಾವುದೋ ಭಾಷೆಗೆಂದು ಮಾಡಿದ ಲಿಪಿಯನ್ನು ಬಳಸುತ್ತಿರುತ್ತದೆ. ಇಂಗ್ಲೀಸು, ಹಿಂದಿ, ತೆಲುಗು, ಮುಂತಾದವು, ಇವುಗಳ ಕತೆಯೂ ಇದೆ. ಇವು ಯಾವುದಕ್ಕೂ ಸ್ವಂತ ಲಿಪಿಯಿಲ್ಲ.

ಆದರೆ ಕದಂಬ ಲಿಪಿ, ಕನ್ನಡದೇಶದಲ್ಲಿ ಹುಟ್ಟಿದುದು. ಆದ್ದರಿಂದ ಅದನ್ನು ನಾವು ಕನ್ನಡ-ಲಿಪಿ ಎಂದು ಹೇಳಿದರೆ ತಪ್ಪಲ್ಲ.!!!

  • Login or register to post comments
  • link
  • Email this ಪ್ರತಿಕ್ರಿಯೆ
March 27, 2007 - 1:42pm — hamsanandi

Re: ಕನ್ನಡ ಲಿಪಿ ಮತ್ತು ಸಂಸ್ಕೃತ

hamsanandi's picture

Quote:
ನಾವು ಬಳಸುತ್ತಿರುವ ಕನ್ನಡ ಲಿಪಿಯ ಬಗ್ಗೆ ನನಗಿರುವ ದೊಡ್ಡ ಅನುಮಾನ ಏನು ಅಂದರೆ, ಇದನ್ನು ಆಗಿನ scholars ಬಹುಶ ಸಂಸ್ಕ್ರುತ ಬರೆಯಲಿಕ್ಕೆ ಮಾಡಿಕೊಂಡಿದ್ದರೇನೋ.

 ಖಂಡಿತ ಇಲ್ಲ. ದೇವನಾಗರಿಗೂ ಮೊದಲು ಸಂಸ್ಕ್ಕೃತವನ್ನು ಬರೆಯಲು, ಬ್ರಾಹ್ಮಿ, ಶಾರದ, ಗುಪ್ತ , ನಾಗರಿ ಮೊದಲಾದ ಇತರ ಲಿಪಿಗಳು ಬಳಕೆಯಲ್ಲಿದ್ದವು. ಆ ಲಿಪಿಗಳೇ ಮುಂದೆ ದೇವನಾಗರಿಗೆ ದಾರಿಮಾಡಿಕೊಟ್ಟವು.

ಎಷ್ಟೋ ಸಂಸ್ಕ್ಕೃತ ಶಾಸನಗಳು ಕನ್ನಡಲಿಪಿಯಲ್ಲಿವೆ ( ಸಂಸ್ಕೃತಕ್ಕೆ ಗುಪ್ತ (ಕಾಲದ) ಲಿಪಿ ಇತ್ಯಾದಿ ಎಂದು ಹೇಳುವುದಾದರೆ , ಈ ಕನ್ನಡ ಲಿಪಿಗಳಿಗೂ ಚಾಲುಕ್ಯ ಲಿಪಿ/ಕದಂಬ ಲಿಪಿ ಎಂಬುದಾಗಿ ಹೇಳಿದರೂ ತಪ್ಪಿಲ್ಲ.) ಆದರೆ, ಈ ಶಾಸನಗಳನ್ನು ಬರೆಯಿಸಿದವರು ಕರ್ನಾಟಕದಲ್ಲಿ ಆಳಿದಂತಹ ಅಥವ ಕರ್ನಾಟಕದ ಮೂಲದ ಚಾಲುಕ್ಯ-ಹೊಯ್ಸಳ-ರಾಷ್ಟ್ರಕೂಟರೇ ಮೊದಲಾದ ರಾಜವಂಶದವರು.

ಕನ್ನಡ ಲಿಪಿಗೂ, ದೇವನಾಗರಿಗೂ ಹೋಲಿಕೆ (ದೃಶ್ಯಾತ್ಮಕವಾಗಿ ಅಲ್ಲ, ಆದರೆ ಅಕ್ಷರಗಳ ಪ್ರಕಾರ) - ಇರುವುದು ಎರಡೂ ಲಿಪಿಗಳು ಬ್ರಾಹ್ಮಿಯಿಂದ ಬಂದಿರುವುದನ್ನು ಸೂಚಿಸುತ್ತವೆ.

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ
March 27, 2007 - 2:04pm — Shyam Kishore

ದನಿಗೂಡು: ಕನ್ನಡ ಲಿಪಿ ಮತ್ತು ಸಂಸ್ಕೃತ

Shyam Kishore's picture

ಹೌದು, ಬ್ರಾಹ್ಮಿ ಲಿಪಿ ಎಲ್ಲಕ್ಕಿಂತ ಮೊದಲು ಸಂಸ್ಕೃತವನ್ನು ಬರೆಯಲು ಬಳಕೆಯಲ್ಲಿದ್ದದ್ದು. ಈಗಲೂ ಎಷ್ಟೋ ಶಾಸನಗಳನ್ನು (ಸಂಸ್ಕೃತದಲ್ಲಿರುವ) ಕನ್ನಡ ಲಿಪಿಯನ್ನು ಬಳಸಿ ಬರೆದಿರುವುದನ್ನು ನೋಡಬಹುದಾಗಿದೆ.

- ಶ್ಯಾಮ್ ಕಿಶೋರ್

  • Login or register to post comments
  • link
  • Email this ಪ್ರತಿಕ್ರಿಯೆ
March 27, 2007 - 3:49pm — mahesha

Re: ಕನ್ನಡ ಲಿಪಿ ಮತ್ತು ಸಂಸ್ಕೃತ

mahesha's picture

Quote:

ದೇವನಾಗರಿಗೂ ಮೊದಲು ಸಂಸ್ಕ್ಕೃತವನ್ನು ಬರೆಯಲು, ಬ್ರಾಹ್ಮಿ, ಶಾರದ, ಗುಪ್ತ , ನಾಗರಿ ಮೊದಲಾದ ಇತರ ಲಿಪಿಗಳು ಬಳಕೆಯಲ್ಲಿದ್ದವು. ಆ ಲಿಪಿಗಳೇ ಮುಂದೆ ದೇವನಾಗರಿಗೆ ದಾರಿಮಾಡಿಕೊಟ್ಟವು.

ದಿಟ!!
ಬ್ರಾಹ್ಮೀ ಯೇ ಹಲವು south-asian ಲಿಪಿಗಳಿಗೆ ಬೇರು.

ಈ ತಾವಿನಲ್ಲಿ ನೋಡಿರಿ.
http://ancientscripts.com/ws_timeline.html

ಆದರೆ ಕದಂಬ ಲಿಪಿಯಲ್ಲಿ ಕನ್ನಡಕ್ಕಿಂತ ಮುಂಚೆ ಸಂಸ್ಕೃತವನ್ನು ಬರೆಯಲಾಗುತ್ತಿತ್ತು. ಅದಕ್ಕೆ ಕದಂಬ ಲಿಪಿಯಲ್ಲಿ ದೊರೆತ ಅತಿ ಹಳಯ ಶಾಸನಗಳು ಸಂಸ್ಕೃತದದ್ದು . ಕನ್ನಡದೇಶದಲ್ಲಿ ಸಂಸ್ಕೃತಕ್ಕೆ ದೇವನಾಗರಿಯ ಬಳಕೆ ತರುವಾಯ ಆಗಲು ಶುರುವಾಯಿತು.

ಆದರೆ "ತಮಿಳು ಲಿಪಿ" ಕತೆ ಬೇರೆ, ಅದೂ ಬ್ರಾಹ್ಮೀ ಇಂದ ಬಂದರೂ, ಅವರು "ತಮಿಳಿಗೆ ಬೇಡ" ಅಂತ ಹಲವಾರು symbols/ಗುರುತುಗಳನ್ನು ಬಿಟ್ಟರು. ಅಂದರೆ ಬ್ರಾಹ್ಮೀಯಿಂದ ಬಂದ ಗ್ರಂತ ಲಿಪಿಯನ್ನು ತಮಿಳಿಗೆ customize ಮಾಡಿದರು.

ಆದರೆ ಕನ್ನಡ, ತುಳು, ಸಿಂಹಳ ಮತ್ತು ಮಲಯಾಳದವರು ಹಾಗೆ customize ಮಾಡಲಿಲ್ಲ. ಮಲಯಾಳ ಲಿಪಿಯೋ ಕೂಡ ಮೊದಲು ಸಂಸ್ಕೃತವನ್ನು ಬರೆಯಲು ತುಳು ಬ್ರಾಹ್ಮಣರು ಬಳಸುತ್ತಿದ್ದರು ಎಂಬ ಮಾತಿದೆ.

ಇಲ್ಲಿ ಗಮಸಿಸಬೇಕಾದುದು "ಕದಂಬ ಲಿಪಿ" ಯನ್ನು ಬರಿ ಕನ್ನಡ ಬರೆಯಲು, ಕನ್ನಡದಲ್ಲಿ ಇರುವ soundಗಳನ್ನು represent ಮಾಡಲು ಮಾಡಿದುದಲ್ಲ. "ಕದಂಬ ಲಿಪಿ"ಯ ಮೂಲ ಗುರಿಯೇ ಸಂಸ್ಕೃತವನ್ನು(ಕನ್ನಡದೇಶದವರು) ಬರೆಯುವುದು. ತರುವಾಯ ಅದೇ ಲಿಪಿಯಲ್ಲಿ ಕನ್ನಡವನ್ನು ಬರೆದುಕೊಂಡು ಬಂದಿದ್ದೇವೆ.

ಅಂದರೆ ಆ ಕಾಲದಲ್ಲಿ ಸಂಸ್ಕೃತವನ್ನು ಬಡಗಣದವರು ಮತ್ತು ತೆಂಕಣದವರು ಬೇರೆ ಬೇರೆ ಲಿಪಿಗಳಲ್ಲಿ ಬರೆಯುತ್ತಿದ್ದರು. ಬಡಗಣದವರು ಯಾವ ಲಿಪಿಯಲ್ಲಿ ಸಂಸ್ಕೃತವನ್ನು ಬರೆದರೋ, ಅದೇ ಲಿಪಿಯಲ್ಲಿ ಅಲ್ಲಿನ local / regional ಭಾಷೆಗಳನ್ನು ಬರೆಯಲಾಯಿತು. ಹಾಗೆ ತೆಂಕಣದಲ್ಲೂ ಕೂಡ.

  • Login or register to post comments
  • link
  • Email this ಪ್ರತಿಕ್ರಿಯೆ
March 27, 2007 - 4:00pm — ಸಂಗನಗೌಡ

ಸಂಸ್ಕ್ರುತದ ತಾಯ್ ಕನ್ನಡ??

ಸಂಗನಗೌಡ's picture

Indo-Europian ಭಾಷೆಗಳ ಗುಂಪಲ್ಲಿಯೇ ಇಂಗ್ಲಿಷ್ ಮತ್ತು ಸಂಸ್ಕ್ರುತ ಬರುತ್ತವೆ. ಆದರೆ ಈ IE ಭಾಷೆಗಳಿಗೆ proto-dravidian ಭಾಷೆ ತಾಯಿಯೇ?

http://www.datanumeric.com/dravidian/

ಹಿಂದೊಮ್ಮೆ ಯಾರೋ, ಸಂಸ್ಕ್ರುತ ಕನ್ನಡದ ತಾಯಿ, ಅಂತೆಲ್ಲಾ ಅಂದ ನೆನಪು.

ಯಾವುದನ್ನು ನಂಬೋದು, ಯಾವುದನ್ನು ಬಿಡೋದು, ಗೊಂದಲವೋ ಗೊಂದಲ.!!

  • Login or register to post comments
  • link
  • Email this ಪ್ರತಿಕ್ರಿಯೆ
March 28, 2007 - 11:23am — mahesha

ಸಂಸ್ಕ್ರುತ, ಕನ್ನಡ ಯಾರ ತಾಯಿ ಯಾರೂ ಅಲ್ಲ

mahesha's picture

Smiling

ಈ ಒಂದರ ತಾಯಿ ಇನ್ನೊಂದು ಮಾಡೋ ತೆವಲು ಯಾಕೋ ಬರ್ತಾ ಬರ್ತಾ ವಸಿ ಜಾಸ್ತಿ ಆಯ್ತು Smiling.

ಒಂದು ಕಡೆ ಬಹಳ ಮಂದಿ ಕನ್ನಡ, ತಮಿಳು, ಚೀನಿ, ಮುಂತಾದ ನುಡಿಗಳನ್ನು ಎಳ್ಳಷ್ಟು ಅರಿಯದೇ "ಸಂಸ್ಕೃತ ಸರ್ವಭಾಷಾಜನನಿ", "ಸಂಸ್ಕೃತವೇ ಇವನ್ನು ಹಡೆದ ತಾಯಿ" ಅಂತ ಅರಚೀ ಅರಚೀ ಸಾರಿದ್ದಾರೆ, ಸಾರುತ್ತಾ ಇದ್ದಾರೆ, ಸಾರುತ್ತಲೇ ಇರುತ್ತಾರೆ.

ಇನ್ನೊಂದು ಕಡೆ ಹಲವು ತಮಿಳರೂ ಸಂಗನಗೌಡರು ತೋರಿದಂತಹ ಬಗೆಯಲ್ಲಿ "ತಮಿಳೇ ಎಲ್ಲ, ಬೇರೇನು ಇಲ್ಲ" ಅಂತ ಕೂಗ್ತಾ ಇದ್ದಾರೆ. ನಾವು ಕನ್ನಡದೋರು "ಇದೆಲ್ಲ ನಮಗೆ ಯಾಕೆ ಅಂತ" ಯಾವುದೋ ಒಂದನ್ನು ಒಪ್ಪಿಕೊಂಡು ತೆಪ್ಪಗೆ ಇದ್ದೇವೆ.

ಆದರೆ ಇವರಿಬ್ಬರ(sanskrit lobby & tamil lobby) ಮಾತಿಗೂ ನಿಖರವಾದ ಪುರಾವೆ, ಆಧಾರವಿಲ್ಲ ಆದುದರಿಂದ ಇಬ್ಬರ ಮಾತು ಸರಿಯಿಲ್ಲ. ಇಬ್ಬರು ಯಾವುದೋ ಸ್ವಾರ್ಥ ಸಾಧನೆಗೆ, ಒಂದು ಸಂಪ್ರದಾಯದ ಪ್ರಚಾರಕ್ಕೆ, ತಮ್ಮ ನುಡಿಯೇ ಮಿಕ್ಕೆಲ್ಲ ನುಡಿಗಳಿಂತ ಮೇಲು(ಅಂದರೆ ಮಿಕ್ಕವು ಕೀಳು) ಅಂತ, ಮಾಡುತ್ತಿರುವ circusಗಳು.

ದ್ರಾವಿಡ ನುಡಿ ಗುಂಪುಕ್ಕೂ( ಇಲ್ಲಿ ದ್ರಾವಿಡ ಅಂತ ಕ್ಯಾಡ್ವೆಲ್ ಕರೆದನು, ಆದರೆ ಅದು ಅಷ್ಟು ಸರಿಯಾದ ಪದವಲ್ಲ ) ಮತ್ತು
IE/IA Indo-European/Indo-Aryan ನುಡಿ ಗುಂಪುಗೂ ಯಾವುದೇ ನೇರವಾದ ನಂಟಿಲ್ಲ. ಅಂದರೆ ಕನ್ನಡ ಮತ್ತು ಸಂಸ್ಕೃತ ಒಂದರ ಒಂದು ತಾಯಿ ಆಗುವುದಿರಲಿ, ಅವು ದೂರದ ನೆಂಟಗಳು, ರಕ್ತ ಸಂಬಂಧಿಗಳೇ ಅಲ್ಲ. Laughing out loud.

ಆದರೆ ಈ ಎರಡು ನುಡಿ ಗುಂಪುಗಳು ಒಂದರಿಂದ ಒಂದು ಪದಗಳನ್ನು , ವ್ಯಾಕರಣಾಂಶಗಳನ್ನು ಅನುಸರಿಸಿವೆ(borrowing).

ಅದರಲ್ಲೂ ದ್ರಾವಿಡ ನುಡಿಗಳು ವ್ಯಾಕರಣ, ಭಾಷಾ ಸ್ವರೂಪಕ್ಕೆ ಸಂಬಂಧಿಸಿದ(structural borrowing) ಅಂಶಗಳಿಗಿಂತ ಪದಗಳನ್ನು (word borrowing) ಎರವಲು ಪಡೆದಿದೆ. ಆದರೆ
Indo-Aryan ನುಡಿಗಳು ಪದಗಳಿಗಿಂತ ವ್ಯಾಕರಣಾಂಶವನ್ನು, ಭಾಷಾಪ್ರಯೋಗಗಳನ್ನು ಪಡೆದಿದೆ.

ಮಾದರಿ : 'ಆಲು'ಪ್ರತ್ಯಯ, ದಯಾಲು, ಕೃಪಾಲು, ಮುಂತಾದವು ದ್ರಾವಿಡದ "ಆಳು" ವಿನ ಎರವಲು ಎಂದು ಹೇಳುವುದುಂಟು(ದಿಟತನದ ಬಗ್ಗೆ ಗೊತ್ತಿಲ್ಲ).
ದಯ+ ಆಳು = ದಯಾಳು ( ದಯವಿರುವ ಆಳು )
ಕೃಪಾ + ಆಳು = ಕೃಪಾಳು( ಕೃಪಾ ಇರುವ ಆಳು )

"A tendency toward structural and systemic balance and stability is characteristic of the Dravidian group. Nevertheless, there is no doubt about the influence of the other languages of India. Dravidian languages show extensive lexical (vocabulary) borrowing, but only a few traits of structural (either phonological or grammatical) borrowing, from the Indo-Aryan tongues. On the other hand, Indo-Aryan shows rather large-scale structural borrowing from Dravidian, but relatively few loanwords. There is indeed a possibility of Dravidian and Indo-Aryan drawing even closer together in the future; but it is highly doubtful that a new family of languages will develop in such a way that the bases of the contributing groups (i.e., Dravidian and Indo-Aryan) will be completely eliminated through the phenomena of borrowing."

-britannica

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • fa ಮತ್ತು za
  • how much, hom many ಕನ್ನಡದಲ್ಲಿ....
  • ಕ್ಷ , ತ್ರ ಮತ್ತು ಜ್ಞ
  • ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
  • ಮತ್ತು
Syndicate content

ಲೇಖಕರು

ಸಂಗನಗೌಡ's picture

ಪೂರ್ಣ ಹೆಸರು
ಸಂಗನಗೌಡ

ಪರಿಚಯ

ಕನ್ನಡಿಗ, ಬೆಂಗಳೂರಿನಲ್ಲಿರುವದು. ಹೇಳಿಕೊಳ್ಳುವಂತದ್ದೇನೂ ಇಲ್ಲ, ಎಲ್ಲಾರಂತೆ ನಾರ್ಮಲ್ ಮನಸ್ಯಾ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಸವಾಲೊಂದು ನಿನ್ನ ಮ್ಯಾಲ...
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
  • ಮಧುವನ ಕರೆದರೇ, ತನುಮನ ಸೆಳೆದರೆ
  • ಆರನೇ ವಿಬಕುತಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
ಇನ್ನಷ್ಟು

ಸಾಕೋದನ್ ಅರಿತಾತ - ಸಾವಿರ ಜನಕ್ ತ್ರಾತ

— ಟಿ ಪಿ ಕೈಲಾಸಂ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator