ಸಮಾಜ್ ಕೇ ಟೇಕೇಧಾರ್
ಸ್ವಾಮಿ,
ಸಂಪದದಲ್ಲಿ ಕೆಲವೊಮ್ಮೆ ಆಗುವ ವಾದ ವಿವಾದಗಳನ್ನು ನೋಡಿದರೆ, ಹೀಗೆ ಅನ್ನಿಸಿದ್ದಿದೆ, ನಾವ್ಯಾಕೆ ನಮ್ಮ ಸಮಾಜ ನಮ್ಮ ಮೂಗಿನ ನೇರಕ್ಕೇ ಇರಬೇಕು ಅಂತ ಆಸೆ ಪಡ್ತೀವಿ? ಅದೂ, ನಮ್ಮ ಮೂಗಿನ ನೇರದಲ್ಲಿ ಏನಿದೆ ಅನ್ನೋದನ್ನೂ ಸರಿಯಾಗಿ ಅರ್ಥೈಸಿಕೊಳ್ಳದೇ.. ಅಂದರೆ, ನಾವುಗಳು ನಮ್ಮನ್ನೇ 'ಸಮಾಜ್ ಕೇ ಟೇಕೇಧಾರ್' ಅಂತ ಘೋಷಿಸಿಕೊಳ್ಳೋದಿಂದಾನೇ ಹೀಗೆ ಹೊಡೆದಾಡಿಕೊಳ್ಳುವುದು, ನಾನು ಹೇಳಿದ್ದೇಸರಿ, ನಾನು ಹೇಳಿದ್ದೇಸರಿ ಅಂತ ನನ್ನ ಅನಿಸಿಕೆ
.. ಈ ಪದವಿಯಿಂದೀಗಲೇ ರಿಸೈನ್ ಮಾಡಿಬಿಡುವ ಹಾಗಿದ್ರೆ?

- Login or register to post comments
- 474 hits
- Email this forum





RSS:
Re: ಸಮಾಜ್ ಕೇ ಟೇಕೇಧಾರ್
ಹೌದು. ನಾನತ್ವದ ನಮಗೆ((ಅ)ನಾಗರಿಕತೆ ಬೆಳೆಸಿಕೊಂಡ ಮನುಜರು) ಅಂಟಿದ ಶಾಪ...ಇದು ಒಂದು ತರದ ಮಾಯೆ ಎನ್ನಲೂಬಹುದು... ಗೆಲ್ಲುವುದು ಎಷ್ಟು ಕಷ್ಟವೋ ಅಷ್ಟೆ ಸುಲಭ ಕೂಡ ಅಂತ ನನಗನ್ಸುತ್ತೆ. ಅದಕ್ಕೆ ಹೀಗೊಂದು ಸರಳ ನುಡಿಯಿದೆ ..(ಎಲ್ಲೊ ಕೇಳಿದ ನೆನಪು)
ನಾನತ್ವವುಳಿದರೆ ನಾನಳಿಯುವೆನು
ನಾನತ್ವವಳಿದರೆ ನಾನುಳಿಯುವೆನು