ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಕನ್ನಡಿಗರಿಗೆ ಕಷ್ಟವಾದ ಕನ್ನಡ!!

April 1, 2007 - 10:29pm — mahesha

ನನ್ನ ಗೆಳೆಯನ್ನೊಬ್ಬ ಮೊನ್ನೆ ನಮ್ಮ ಮನೆಗೆ ಬಂದಿದ್ದ. ಅವನು ಅಮೆರಿಕದಲ್ಲಿ ಎಂ.ಎಸ್. ಗೆ ಹೋಗಿದ್ದ.

ನಾನು ಅವನು ಜೊತೆಯಲ್ಲಿ ಹೈಸ್ಕಾಲಲ್ಲಿ ಕಲಿತೆವು. ಅವನು ಕನ್ನಡದಲ್ಲಿ ಒಳ್ಳೆಯ ಮಾರ್ಕುಗಳನ್ನೇನೋ ಪಡೆಯುತ್ತಿದ್ದ. ಆದರೆ ಅವನು ಮಾತೋಡುತ್ತಿದ್ದ ಕನ್ನಡದಲ್ಲಿ ’ಅಕಾರಕ್ಕೆ ಹಕಾರ ಬರುವುದು, ಹಕಾರಕ್ಕೆ ಅಕಾರ ಬರುವುದು ’ ಇವೆಲ್ಲ ಮಾಮೂಲಿ. ಒಂದು ಸರತಿಯಂತೂ ಮೇಸ್ಟರು ಅವನ್ನು ಹತ್ತಿರಕ್ಕೆ ’ಅತ್ತಿರ’ ಅಂತ ಸಕ್ಕತ್ ಭಾರಿಸಿದ್ದರು. ಅವನಿಗೆ ಈ ಅನುಭವದಿಂದ ಇರಬೇಕು, ಚೆನ್ನಾಗಿ ಕನ್ನಡ ಬರೆದರೂ, ಬರುಬರುತ್ತಾ ಕನ್ನಡದ ತರಗತಿಯಲ್ಲಿ ಯಾವುದಕ್ಕೂ ಉತ್ತರ ಹೇಳದೆ, ಮೇಸ್ಟರ ಮುಂದೆ ಮಾತಾಡಲು ಅಂಜಿ, ಸುಮ್ಮನೆ ಇರಲು ಹತ್ತಿದ್ದು ಇರಬೇಕು.

ಏನೇ ಆದರೂ ನಾವು ಮಾತಾಡುವುದು ನಮ್ಮ ಕನ್ನಡದಲ್ಲೇ. ನಾವಿಬ್ಬರು ಎಂದು ನಾವು ಕಲಿತವರು ಎಂದು ಹಲವರು ಮಾಡುವ ಹಾಗೆ ಹೊತ್ತಗೆಯ ಕನ್ನಡವನ್ನು ಆಡಿಯೇ ಇಲ್ಲ.

ಸರಿ, ಮೊನ್ನೆಯ ವಿಚಾರ ಹೇಳೋಣ.

ಅಮ್ಮ ಕಾಪಿ ತಿಂಡಿ ತಂದಿಕ್ಕಿದಳು. ತಿನ್ನುತ್ತಾ ಮಾತಾಡಕ್ಕೆ ತೊಡಗಿದೆವು.

"ಏನೋ ಅಮೆರಿಕೆ ಹೆಂಗಿತ್ತು. ಉಣ್ಣಕ್ಕೆ ತಿನ್ನಕ್ಕೆ ಏನ್ ಮಾಡಿಕಂಡ್ ಇದ್ದೀ?"
"ಅಮೆರಿಕದಲ್ಲಿ ಏನ್ problem ಇರ್ನಿಲ್ಲ. ಎಲ್ಲ ಓಕೆ. ಒಂದು apartment ಮಾಡ್ಕಂಡು ನಾವು ಮುವ್ವರು ಇದ್ವು. ತಿನಕ್ಕೆ ಮನೇಲೆ ಮಾಡ್ಕತಿದ್ವು. ಬೇಜಾರ್‍ ಆದ್ರೆ ಬಾಡ್ಗೆ Smiling ಆಚೆ ಓಯ್ತಿದ್ವು".

"ಹಾಗೋ, ಅದಕ್ಕೆ ಗುಂಡ್ಗೆ ಆಗಿದೀಯಿ. ಸರಿ, free ಟೈಮಲ್ಲಿ ಏನ್ ಮಾಡ್ತಿದ್ದೀ?"
"ನಾವೆಲ್ ಓದ್ತಿದ್ದೆ. ಇಲ್ಲ ಅಲ್ಲೊಂದು ಬುಕ್ ಶಾಪ್ಗೆ ಕೆಲಸಕ್ಕೆ ಓಯ್ತಿದ್ದೆ, ಅದ್ ಸರಿ, ನೀನೇನ್ ಮಾಡ್ತೀಯೋ free ಟೈಮಲ್ಲಿ?"

"ನಾನಾ.. free ಟೈಮಿದ್ರೆ ಯಾವುದಾದರೂ ನಾವೆಲ್ಲು ಗೀವೆಲ್ಲು ಓದ್ತೀನಿ ನಿನ್ನ ಹಂಗೆ"
"ಸರಿ ಯಾರಪ್ಪ ನಿನ್ನ favorate author?"

"ನಂಗೆ ಬೈರಪ್ಪ ಇಸ್ಟ, ಈಗತಾನೆ ಆವಯ್ಯಂದು ಆವರಣ ಅನ್ನೋ ನಾವೆಲ್ ಮುಗಿಸ್ದೆ"
(ಸೋಜಿಗ ತೋರಿಸಿ) "ಕನ್ನಡಾನ, ಇನ್ನೂ ಕನ್ನಡ ಓದ್ತೀಯೇನೋ. ನಾನು ಕನ್ನಡ ಓದಿದ್ದು ಸೆಕೆಂಡ್ ಪೀಯುಸಿಗೆ, ಆಮೇಲೆ ಕನ್ನಡ ಬುಕ್ ಮುಟ್ಟೂ ಇಲ್ಲ"( ಕಿಸಿದು )

ನನಗೆ ತುಸು ಉರಿಯಿತು.

"ಅದ್ಯಾಕಪ್ಪ. ಕನ್ನಡ ಓದಬಾರದಾ? ಅದ್ಯಾಕೆ ನಿಂಗೆ ಕನ್ನಡ ಬರಲ್ವಾ? ಸ್ಕೂಲಾಗೆ ಸಕ್ಕತ್ ಮಾರ್ಕು ಹೊಡೀತಿದ್ದಿ"
"ಹೂಂ. ಯಪ್ಪ!! ಅದೆಂಗ್ ಕನ್ನಡದಲ್ಲಿ ಪಾಸ್ ಆದ್ನೋ ನಾನು. ಕನ್ನಡ ಸಿಕ್ಕಪಾಟ್ಟೆ ಕಸ್ಟ. ನಿನಗೆ ಗ್ಯಾಪನ ಇಲ್ವಾ, ಆ ನನ್ನ ಮಗ M.P.J ನಂಗೆ ಯಂಗ್ ಓಡ್ದಿದ್ದ. ಅದಕ್ಕಿಂಗ ಇಂಗ್ಲೀಸೇ ಎಸ್ಟೋ ಈzಇ"

"ಇದೇನೋ, ಹಿಂಗ್ ಅನ್ತಿ. ನಿನ್ನ mother tongue ಕನ್ನಡ ಅಲ್ವೇನೋ. ನಮಗೆ ನಮ್ mother tongue ಕಸ್ಟ ಅಂದರೆ ಏನ್ ಅರ್ತ? ಅಮೆರಿಕದಿಂದ ಬಂದಿದೀನಿ ಅಂತ ನನ್ ಮಗನೆ ಸ್ಯಾನೆ ನಕರ ಮಾಡಬೇಡ"
"ಲೋ ಯಾಕೆ ಎಗರ್ತೀಯ. ನಂಗೆ ಸತ್ಯವಾಗಲು ಕನ್ನಡ ಕಸ್ಟ. ಅದೇನ್ ಬರೀತಾರೆ. ನಂಗೇನು ನಂಮಪ್ಪಂಗೂ ತಿಳಿಯಕ್ಕಿಲ್ಲ. ಅದಕ್ಕೆ ನಮ್ ಮನೇಲಿ ನಮ್ಮಪ್ಪನೂ ಕನ್ನಡ ಪೇಪರ್‍ ತರ್‍ಸಲ್ಲ. "

ನನಗೆ ಅವನು ಸುಮ್ನೆ ಜಾರಿಕೊಳ್ಳಕ್ಕೆ ಕನ್ನಡ ಕಸ್ಟ ಅಂದ ಅಂತ ಅನ್ನಿಸಲಿಲ್ಲ. "ಕನ್ನಡಕ್ಕಿಂತ ತುಂಬಾ ಸುಲಬ ಇಂಗ್ಲೀಸು, ಅದಕ್ಕೆ ಅದನ್ನೇ ಓದ್ತೀನಿ" ಎಂದ ಹಾಗೆ ಹೇಳಿದಂತೆ ಇತ್ತ ಅವನ ಮಾತು. ಅವನಿಗೆ ಓದೋ ಆಸಕ್ತಿ ಇದೆ . ಇದಲ್ಲದೆ ಅವನ ನಮ್ಮ ಹಳ್ಳಿಯವನೇ. ಅವರ ಮನೆಯಲ್ಲಿ ಕನ್ನಡಾನೇ ಮಾತಾಡೋದು. ಅಂದ್ರೂ ಹೆಂಗೆ ಕನ್ನಡ ಕಸ್ಟ ಓದಕ್ಕೆ?

ಈಗ ಪ್ರಶ್ನೆ, ಕನ್ನಡ ಓದಕ್ಕೆ ಅಷ್ಟೊಂದು ಕಷ್ಷವೇ? ಕನ್ನಡವನ್ನು ಮೊದಲ ಸರತಿ ಓದಲು ತೊಡಗುವವರು ಸಿಕ್ಕಾಪಟ್ಟೆ ಕಷ್ಟ ಪಡಬೇಕೇ?
ಕನ್ನಡ ಕಷ್ಟ ಎಂದೇ ಕನ್ನಡವನ್ನು ಓದುವವರು ಕಡಮೆ ಆಗ್ತಾ ಇರೋದೇ? ಅದಕ್ಕೆ ಕನ್ನಡಕ್ಕಿಂತ ಇಂಗ್ಲೀಸಾಡೋ ಕನ್ನಡಿಗರು ಜಾಸ್ತಿ ಆಗ್ತಾ ಇರೋದೇ?

‹ ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ ಬೆಳ್ದಿಂಗಳು ಮತ್ತು ಕರ್ದಿಂಗಳು ›
  • ಸಾಹಿತ್ಯ, ಭಾಷೆ
~.~
  • Login or register to post comments
  • 917 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 2, 2007 - 2:12am — hpn

'ಭಾ' ಭರಾಟೆ

hpn's picture

ಸಕ್ಕತ್ ಭಾರಿಸಿದ್ದರೆ? Sticking out tongue

ಸಕ್ಕತ್ 'ಭಾ'ರ ಊರುತ್ತಿದ್ದೀರಿ.
--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 2, 2007 - 4:03am — mahesha

ತಿಳಿಯಲಿಲ್ಲ!

mahesha's picture

ಏನ್ HPN ನೀವು ಹೇಳಿದ್ದು?

ಭಾರಿಸು ತಪ್ಪು ಅಂತವೇ?

======
Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 2, 2007 - 10:38am — ಸಂಗನಗೌಡ

Re: ತಿಳಿಯಲಿಲ್ಲ!

ಸಂಗನಗೌಡ's picture

ಏನಪಾ ಇದು? Shocked ಒಬ್ಬರು ನೋಡಿದರೆ ನೆಟ್ಟಿರುಳು ಎರಡಕ್ಕೆ ಬರೆದಿದಾರೆ, ಇದಕ್ಕೆ ಹೊಳ್ಳಿ ಇನ್ನೊಬ್ಬರು ನಸುಕಿನ ನಾಕಕ್ಕೆ ಬರೆದಿದ್ದಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 2, 2007 - 12:23pm — mahesha

ಹೊಳ್ಳಿ ಅಂದರಾ ಏನ್ ಮಾರಾಯ?

mahesha's picture

ಹೊಳ್ಳಿ ಅಂದರಾ ಯೇನ್ ಮಾರಾಯ?

ನಂಗ ತಿಳೀ ವಲ್ದು! Smiling
======
Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 2, 2007 - 1:03pm — hpn

ಟೈಮಿಂಗು

hpn's picture

ನಿನ್ನೆ ರಾತ್ರಿ ಅಪರೂಪಕ್ಕೆ ಮ್ಯಾಚು ನೋಡ್ತ ಕೂತಿದ್ದೆ. ಮಲಗಿರಲಿಲ್ಲ. ಮ್ಯಾಚು ಬೋರ್ ಹೊಡಿಸಿದಾಕ್ಷಣ ಸಂಪದ ಓದಿ, ಮೇಯ್ಲ್ ನೋಡಿ ಮಲಗೋದೆಂದು ಬಂದಾಗ ಮೇಲಿನ ಕಾಮೆಂಟು ಬರೆದದ್ದು. Sticking out tongue

ಮಹೇಶನ ಕಥೆ ಬೇರೆ ಇರ್ಬೇಕು. ಮಾರಾಯ ೪ ಕ್ಕೇ ಏಳ್ತಾನೆ ಅನ್ಸತ್ತೆ.

ಹೊಳ್ಳಿ == ಹೊರಳಿ?

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 2, 2007 - 2:23pm — mahesha

ಕನ್ನಡದ ಚಿಂತೆ:)

mahesha's picture

"ನಂಗೆ ಕನ್ನಡದ ಮ್ಯಾಲೆ ಸ್ಯಾನೆ ಚಿಂತೆ ಆಗ್ ಬುಟ್ಟು, ಜಂಪೂ ಬರಕ್ಕಿಲ್ಲ "
.
.

ಅಂತ ಏನಿಲ್ಲ. Smiling

ನಾನೂ ಕ್ರಿಕೆಟ್ ನೋಡ್ತಿದ್ದೆ. ಸಿರಿಲಂಕದೋರು ಸಂದಾಕ್ ಆಡದ್ರು Smiling

ಪೋಟಿ ಬೋ ಸಂದಾಗಿತ್ತು!!

ಹೊರಳಿ ಅಂದರೆ ನಂಗೆ roll ಅಂತ ಅರ್ತ ಆಗ್ತೈತೆ. in returnಗೆ 'ಮರಳಿ' ಅಂತ ಅಲ್ವರ ಅನ್ನೋದು Smiling

ಅಂದರೂ ಇನ್ ಮ್ಯಾಲೆ 'ಹೊಳ್ಳಿ' ಅಂತ್ಲೇ 'reply/comment' ಅಂತ ಮಡಿಕ್ಕ ಬೋದು.

ನಿಮ್ಮ ಹೊಳ್ಳಿಗಳಿಗೆ ಯನ್ನ ನನ್ನಿ!
======
Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 2, 2007 - 3:28pm — ಸಂಗನಗೌಡ

roll = ಉರುಳು, ಸುರುಳಿ

ಸಂಗನಗೌಡ's picture

ಈ 'ಮರಳಿ' ಆಡು ಮಾತಲ್ಲಿಲ್ಲ. ಯಾಕೋ ಗೊತ್ತಿಲ್ರೆಪಾ..

ಹೊರಳಿ ಯಾವ ಬಗೇಲಿದೇ ಅಂದ್ರ, ಹಾಸಿಗೇಲಿ ಹೊರಳಾಡೋದು, ಹೊರಳಿ ಮಾತಾಡೋದು, ಹೊರಳಿ ಬರೋದು(ಇದಕ್ಕೆ ತಿರುಗಿ ಬರೋದು ಅಂತನೂ ಅನಬಹುದು).

ಉರುಳು ಸೇವೆ ಇನ್ನೊಂದು ಮಾದರಿ.

'ಅವ್ವ ಅವ್ವ ಚಪಾತಿ ಉಳ್ಳಿ (ಇಲ್ಲಾ ಸುಳ್ಳಿ) ಮಾಡಿಕೊಡು' ಅಂತಾ ಸಣ್ಣ್ ಮಕ್ಳು ಕೇಳೋದ್ ಕಾಮನ್. ಚಪಾತಿ ಉಳ್ಳಿ ಅಂದರೆ ಅದೇ chapati roll.

ನೇಣು ಕುಣಿಕೆಗೆ 'ಉರುಲು' ಅಂತಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 2, 2007 - 3:45pm — mahesha

Re: roll = ಉರುಳು, ಸುರುಳಿ

mahesha's picture

ಹೊಳ್ಳಿ ಸಂದಾಕ್ ಐತೆ.. ಇರಲಿ...

'ಮರಳು' ಆಡು ಮಾತಲ್ಲಿ ಐತೆ. 'ಈಗ ಓದೋನು, ಮರಳೋದು ಏಟ್ವೊತ್ಗೋ?":)

======
Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 2, 2007 - 4:08pm — ಸಂಗನಗೌಡ

Re: roll = ಉರುಳು, ಸುರುಳಿ

ಸಂಗನಗೌಡ's picture

ಇರಬೋದು.

'ಈಗ ಓದೋನು, ಮರಳೋದು ಏಟ್ವೊತ್ಗೋ?'

ಹಿಂಗಂದ್ರೆ ಏನು? ತಿಳೀಲಿಲ್ಲ.

ಇಂತ ಒರೆಗಳ ನಡುವಿನ ಸುದ್ದಗೆ ಬಿಟ್-ಬಿಟ್ಟು, ಸರಳ ಮಾಡಿಕೊಂಡಿದೀವಿ, ನಮ್ ಕಡೆ. Smiling ಹೊರಳಿ-ಹೊಳ್ಳಿ, ಉರುಳು - ಉಳ್ಳು, ಸುರುಳಿ - ಸುಳ್ಳಿ ಹೀಗೆ.

ಮರುಳ - ಮಳ್ಳ(fool) , ಮರುಳಿ - ಮಳ್ಳಿ ಇದೂ ಒಂದು ಮಾದರಿ.

"ಮಳ್ಳಿ ಮಳ್ಳಿ ಮಂಚಕೆಷ್ಟು ....." ಅಂತ ನಿಮ್ ಕಡೇನೂ ಅಂತಾರಲ್ವಾ.

ಮರಳಿ - ಮಳ್ಳಿ ಮಾಡಿಕೊಂಡರೆ ಮೇಲಿನ ಮಳ್ಳಿ ಜೊತೆ clash ಅಗೋದರಿಂದ ಬಹುಸ ಅದನ್ನು ಬಿಟ್ಟಿರಬೇಕ್ ನಾವು. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 2, 2007 - 4:45pm — mahesha

ಮರಳು

mahesha's picture

ಅದಕ್ಕೆ ಮರಳು ಅನ್ನು ಮಳ್ಳು ಮಾಡಿಲ್ಲ. ಮಾಡಲ್ಲ Smiling

"ಮರಳಿ ಬಾ ಮನ್ವಂತರವೇ ಕಂಬನಿಗಳ ..." ನೆಪ್ಪಿಸಿಕೊಳ್ಳಪ್ಪ.

"'ಈಗ ಓದೋನು, ಮರಳೋದು ಏಟ್ವೊತ್ಗೋ?'"
ಅಂದರೆ "ಈಗ ಹೋದವನು, ಹಿಂದಿರುಗುವುದು ಎಷ್ಟು ಹೊತ್ತಿಗೋ". ನಮ್ಮ ಕಡೆ ಹಲವು ಸರತಿ 'ಹ' ಹೇಳಲ್ಲ. Smiling

ಮಳ್ಳ ಅಂದರೆ fool ಅಲ್ಲ, ಮಳ್ಳ ಅಂದರೆ clever man who acts like a fool.

ಇರಲಿ ಬಿಡಪ್ಪ!!
ಹೊಳ್ಳಿ ಒಪ್ಪಿಕೊಂಡೆ!
======
Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 2, 2007 - 8:45pm — ಸಂಗನಗೌಡ

Re: ಮರಳು

ಸಂಗನಗೌಡ's picture

Quote:
ಅದಕ್ಕೆ ಮರಳು ಅನ್ನು ಮಳ್ಳು ಮಾಡಿಲ್ಲ. ಮಾಡಲ್ಲ

ಮಾಡ್ಕೊಂಡ್ರೆ ಏನ್ ತಪ್ಪು ಶಿವ? ಇಂಗ್ಲಿಷಿನಲ್ಲೂ ಅದು ಇಲ್ಲವಾ? ಅಮೇರಿಕದವರು, ಯುರೋಪಿನವರು, ಇಂಡಿಯಾದವರು ಒಂದೇ ಪದವನ್ನು ಬೇರೆ ಬೇರೆ ಅಕ್ಸೆಂಟ್‍ನಲ್ಲಿ ಆಡೋದಿಲ್ಲವಾ, ಹಾಗೇನೇ ಇದೂ.

know ಅಂತ ಬರೆದ್ರೂ ಅದನ್ನು ’ನೋ’ ಅನ್ನಲ್ವಾ?

ಆದರೆ ’ಮರಳಿ’ ಎಂಬುದು ’ಹೊಡಮಳ್ಳಿ’ ಎಂಬ ಒರೆಯಾಗಿ ನಮ್ಮಲ್ಲಿ ಬಳಕೆಯಲ್ಲಿದೆ.

ಆದ್ರೆ  ನೀವ್ ನೋಡಿ, ’ಓದೋರು’ ಅಂತೀರಾ, ಅದೇನು ಹೋದೋರುನೋ? ಇಲ್ಲಾ ಒದುವವರುನೋ?

ಕನ್ನಡ ಕಷ್ಟ ಅನ್ನೋ ವಿಚಾರ ನಮ್ಮ್ ಕನಸಲ್ಲೂ ಬರಲ್ಲ ಬಿಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 2, 2007 - 9:06pm — mahesha

ಮರಳು => ಮಳ್ಳು

mahesha's picture

ಇದು ಇದೆ.

ಮಳ್ಳು ಅಂದ್ತೆ ಉಸುಗು-sand ಅಂತ. ಇರಲಿ ಮಳ್ಳು ಅಂದ್ರೆ to return ಅಂತ ಕೂಡ ಇಟ್ಟುಕೊಳ್ಳೋಣ.

ಇರಲಿ..

ಸಂಗನ ನೀವು ಪೇಳೋದು ಎಲ್ಲ ಸರಿ. ನಾನು ಕೊಸರಿಲ್ಲದೆ ಒಪ್ತೀನಿ.

ಬೆರಳು => ಬೆಳ್ಳು
ಮಲಗಿಕೊ => ಮಕ್ಕೊ
ತೆಗೆದುಕೊ => ತಗೊ
ನೆಕ್ಕಿಕೊ => ನೆಕ್ಕೊ
ಹರಳು => ಹಳ್ಳು
ಬರ್ತಾ => ಬತ್ತಾ

ಇದು ನಮ್ಮ ಕಡೆಯೋ ಇವೆ.
======
Smiling

.
.
.

ಕನ್ನಡ ಕಸ್ಟವಾಗಿ ನಂಗೂ ಇಲ್ಲ, ಆದರೆ ನಂಗೆ ಗೊತ್ತಿರೂ ಬಹಳ ಕನ್ನಡಿಗರಿಗೆ ಅದು ಕಸ್ಟವಂತೆ! ಅದನ್ನು ಅವರು ಬಾಯಿಬಿಟ್ಟು ಹೇಳವ್ರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 2, 2007 - 1:31pm — ಸಂಗನಗೌಡ

Re: ಹೊಳ್ಳಿ ಅಂದರಾ ಏನ್ ಮಾರಾಯ?

ಸಂಗನಗೌಡ's picture

ಹೌದು, ಹೊಳ್ಳಿ = ಹೊರಳಿ.

ಹೊರಳಿ = in return.

ಹೊರಳಿ ಮಾತಾಡು = reply = ಮಾರುಲಿ.

ಅಂತೂ ಸಂಪದಕ್ಕೆ ನಿದ್ದೆ ಇಲ್ಲ. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 2, 2007 - 12:56pm — hpn

ಭಾರದ 'ಭಾರಿಸು', ಬಾರದ 'ಬಾರಿಸು'

hpn's picture

ಹೌದು. "ಬಾರಿಸು" ಸರಿಯಾದ ಪದ.
"ಕೋಣದ ಮುಂದೆ ಕಿಂದ್ರಿ ಬಾರಿಸಿದಂತೆ"
"ಬಾರಿಸು ಕನ್ನಡ ಡಿಂಡಿಮವ"

ಮಹೇಶ, ಎಲ್ಲರಿಗೂ ಕನ್ನಡ ಸರಿಪಡಿಸಿಕೊಳ್ಳಿ ಎಂದು ಹೇಳಿ ನಿನ್ನ ಬರವಣಿಗೆಯಲ್ಲೇ ತಪ್ಪು ತಪ್ಪು ಬರೀತಿಯಲ್ಲೊ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 2, 2007 - 2:04pm — mahesha

Re: ಭಾರದ 'ಭಾರಿಸು', ಬಾರದ 'ಬಾರಿಸು'

mahesha's picture

ಅದಕ್ಕೆ ಕಾಣಪ್ಪ ನಾನು ಮುಂಚೆಯೇ ಪೇಳಿದ್ದು. ಈ 'ಭ' ಯಾಕೆ ಬೇಕು. ಅಂತ

ನಾನು ಯಾರಿಗೆ "ಕನ್ನಡ ಸರಿಪಡಿಸಿಕೊಳ್ಳಿ " ಅಂದೀನಿ?

ನಾನು ಪೇಳೋದು ಈ ಕನ್ನಡದಾಗಿ ಈ "ಭ, ಠ, ಷ.. ಮುಂದಾವು" ಅವನ್ನು ಕಿತ್ತಾಕಿ ಅಂತ. ನಮಗೆಲ್ಲ ಇವುಗೊಳಿಂದ ಸ್ಯಾನೆ ಬಾದೆನಪ್ಪೋ)!!

ಆದರೆ "ಭಾರಿಸು" ಅಂತ ಬರೆದಿರೋದನ್ನ ನಾನು ಓದೀನಿ. ಎಲ್ಲಿ ಅಂತ ನೆಪ್ಪಾಯ್ತಾ ಇಲ್ಲ!!

======
Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 2, 2007 - 1:11pm — pavanaja

Re: ಕನ್ನಡಿಗರಿಗೆ ಕಷ್ಟವಾದ ಕನ್ನಡ!!

pavanaja's picture

ನಿಮ್ಮ ಸ್ನೇಹಿತನಿಗೆ ಕನ್ನಡಕ್ಕಿಂತಲೂ ಕ್ಲಿಷ್ಟವಾದ ವಿಜ್ಞಾನ, ತಂತ್ರಜ್ಞಾನ, ಪ್ರೊಗ್ರಾಮ್ಮಿಂಗ್‌ಗಳನ್ನು ಕಲಿಯಲು ಕಷ್ಟವಾಗಲಿಲ್ಲ. ಅವನು ಅವನ್ನೆಲ್ಲ ಖಂಡಿತ ಕಲಿತಿದ್ದಾನೆ ಎಂದು ನಾನು ನಂಬಿದ್ದೇನೆ. ಇಲ್ಲವಾದರೆ ಆತ ಅಮೇರಿಕಾಕ್ಕೆ ಎಂಎಸ್ ಮಾಡಲು ಹೇಗೆ ಹೋದ? ಈ ಕ್ಲಿಷ್ಟವಾದ ವಿಷಯಗಳನ್ನು ಆತ ಯಾಕೆ ಕಷ್ಟಪಟ್ಟು ಓದಿದ? ಅದರಿಂದ ಆತನಿಗೆ ಹೊಟ್ಟೆ ತುಂಬುತ್ತದೆ. ಕನ್ನಡವನ್ನು ಕಷ್ಟಪಟ್ಟು ಯಾಕೆ ಕಲಿಯಲಿಲ್ಲ? ಅದರಿಂದ ಅವನಿಗೆ ಹೊಟ್ಟೆ ತುಂಬುವುದಿಲ್ಲ. ಗೊತ್ತಾಯಿತೆ? 

 

ಸಿಗೋಣ,
ಪವನಜ

-----------

Vishva Kannada

Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 2, 2007 - 2:09pm — mahesha

Re: ಕನ್ನಡಿಗರಿಗೆ ಕಷ್ಟವಾದ ಕನ್ನಡ!!

mahesha's picture

ಆದರೆ ಅವನು ನಾವೆಲ್ಲು ಗೀವೆಲ್ಲು ಓದ್ತಾನೆ. ಅದು ಅವನ ಪೊಟ್ಟೆ ತುಂಬಸಕ್ಕಿಲ್ಲ!! ಅಂದರೆ ಅವನ್ಗೆ ಓದೋ ಚಟ ಐತೆ.

ಅವನು ಕನ್ನಡ ಚೆನ್ನಾಗೇ ಮಾತಾಡ್ತಾನೆ.

ಇನ್ನ ಯಾವ ಕಾಲದಾಗೆ ನಮ್ಮ ಹೈಕಳು ಕನ್ನಡದಾಗೆ ವಿಗ್ಯಾನ, ತಂತ್ರಗ್ಯಾನ, ಓದೋದು. !!
ಹಂಗೆ ಓದಿಕೊಂಡು ಹೆಂಗೆ ಕೆಲಸ ಗಿಟ್ಟಿಸೋದು?

ಇದು ಆಗೋ ಮಾತಾ, ಬುಡಿ!!!Shocked

ಒಂದಾಸೆಯಿಂದ ನೋಡಿದ್ರೆ, ಬುದ್ದಿಯೋರು ಕನ್ನಡ ಓದಕ್ಕೆ, ಬರೆಯಕ್ಕೆ, ವಸಿ ಜಾಸ್ತಿ ಕಸ್ಟ ಪಡಲೇ ಬೇಕು ಅಂತ ಪೇಳದಂಗೆ ಐತೆ. ಬರಿ ಕನ್ನಡ ಮಾತಾಡದ್ರೆ, ಕನ್ನಡದ ಅಕ್ಕರ ಕಲಿತರೆ ಸಾಲಕ್ಕಿಲ್ಲ.. ಅಂತ ಆಯ್ತು.

ಒಟ್ಟಿನಾಗೆ , ಕನ್ನಡ ವಸಿ ಕಸ್ಟ ಅಂತ, ಟೈಮ್ ತಗೊತದೆ ಅಂತ ಆಯ್ತು!!!
======
Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!
  • ನಮ್ಮ ಕನ್ನಡವನ್ನು develop ಮಾಡಿ.
  • ಕನ್ನಡದ ಕಂದ
  • ಪ್ಲಾನೆಟ್ ಕನ್ನಡದಲ್ಲಿ ಕನ್ನಡ.. ಎನ್ನಡ?
  • ಕಂನಡ ಸಂಗಗಳು ಯಾಕೆ ಇಷ್ಟೊಂದು?
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
  • ಆಶ್ವಯುಜ ಶುದ್ಧ ಮಹಾನವಮಿ ಬರಲಂದು - ಪೂರ್ಣ ಸಾಹಿತ್ಯ ಬೇಕು
  • ರಾಷ್ಟ್ರಪತಿ ಬೆನ್ನಟ್ಟಿದ ನಿಗೂಢ ಕಾರು
  • ದಸರ ಹಬ್ಬ ಆಚರಿಸಿದ ಕ್ರೈಸ್ತ ಸಮುದಾಯ..
  • ಕನ್ನಡಕ್ಕೆ ಯಾಕೆ ಶಾಸ್ತ್ರಿಯ ಭಾಷೆ ಅನ್ನೋ ಸ್ಥಾನ ಸಿಗುತ್ತಿಲ್ಲ?
  • ಶಿರಾಡಿ ಘಾಟ್ ಎಂಬ ನರಕದ ದಾರಿ.
  • ಅಡಿಗರಿಗೆ ಬುಕ್ಕರ್‍ ಸಿಕ್ಕಿದೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • createam
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 4:56am
  • imunde
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 4:55am
  • venkatesh
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 16, 2008 - 4:50am
  • createam
    ಉ: ಕೈ ಕೊಟ್ಟ ಜೆಟ್ ಏರ್
    October 16, 2008 - 4:49am
  • hamsanandi
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 3:33am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:12am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:06am
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • ಹಿರಣ್ಯಾಕ್ಷ
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • srinivasps
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 15, 2008 - 11:48pm
ಇನ್ನಷ್ಟು


ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು.

— ಮನುಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator