25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

"ಚಂಗಪ್ಪ" ಪದದ ಅರ್ಥವೇನು?

April 8, 2012 - 12:19am
mrkryan

 ನಮಸ್ಕಾರ  ಗೆಳೆಯರೆ,

ಚಂಗಪ್ಪ  ಎಂಬ ಪದದ  ಅರ್ಥ  ತಿಳಿಸುವಿರಾ? ಕೊಡಗಿನವರು ಮಾತ್ರ  ಈ  ಹೆಸರು ಹೊಂದಿರುತ್ತಾರೆ.

ದಯಮಾಡಿ ತಿಳಿಸಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Submitted by makara on

ಕನ್ನಡದ ಚನ್ನಪ್ಪನೇ ಕೊಡವ ಭಾಷೆಯಲ್ಲಿ ಚಂಗಪ್ಪ ನಾಗಿರ ಬಹುದು.
ಅಥವಾ ಚನ್ನಿಗಪ್ಪ = ಚಂಗಪ್ಪ ಆಗಿರುವ ಸಾಧ್ಯತೆ ಇದೆ.

Submitted by kavinagaraj on

ಚಂಗಪ್ಪ ಪದದ ಅರ್ಥ ನನಗೆ ಗೊತ್ತಿಲ್ಲ. ಇದು ಅಪ್ರಸ್ತುತ ಪ್ರತಿಕ್ರಿಯೆ: ನಮ್ಮ ಭಾಗದಲ್ಲಿ ಚಂಚಲ ಸ್ವಭಾವದವರಿಗೆ 'ಚಂಗಲು' ಅನ್ನುತ್ತಾರೆ.

Submitted by partha1059 on

ಹುಡುಕು ಪದ: ಚಂಗು
ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು

ಚಂಗು ಕ್ರಿಯಾಪದ
(ದೇ) ಹಾರು, ನೆಗೆ
ಚಂಗು ನಾಮಪದ
(ದೇ) ೧ ಹಾರುವಿಕೆ, ನೆಗೆತ ೨ ಒಂದು ಬಗೆಯ ವಾದ್ಯ
ದಾಸ ಸಾಹಿತ್ಯ ಕೋಶ

ಚಂಗು -
ಹಾರು, ನೆಗೆ; ಒಂದು ಬಗೆಯ ವಾದ್ಯ; ಡೊಂಕಾದ
======================================

ಚಂಗು =>> ಚಂಗ =>> ಚಂಗಪ್ಪ

ಚಂಗು ಕ್ರಿಯಾಪದ ನಾಮಪದವಾಗಿ ಹಾರುವ ಅಪ್ಪ

ಹಾರುವವನು ನೆಗೆಯುವನು ಅಂದರೆ ಹನುಮಂತ/ಅಂಜನೇಯನ ಹೆಸರುಎಂದು ಪರಿಗಣಿಸಬಹುದು

ಅಥವ ಕೊಡಗಿನಲ್ಲಿ ಯಾವುದೊ ವಾದ್ಯಬಾರಿಸುವವರು ಚಂಗಪ್ಪನಾಗಿರಬಹುದು

ಇದು ನನ್ನ ಅಭಿಪ್ರಾಯ

ನಾಗರಾಜರು ,ಮತ್ತು ಶ್ರೀಧರ್ ರವರು ಏನನ್ನುತ್ತಾರೊ ನನಗೆ ತಿಳಿದಿಲ್ಲ

Submitted by makara on

ಪಾರ್ಥ ಸರ್,
ಚಂಗು ಶಬ್ದಕ್ಕೆ ನೆಗೆ ಅಥವಾ ಹಾರು ಎನ್ನುವ ಅರ್ಥ ಸರಿ. ಆದರೆ ಚಂಗಪ್ಪನಿಗೂ ಚಂಗು ಪದಕ್ಕೂ ಸಂಭಂದವಿಲ್ಲವೆನಿಸುತ್ತದೆ. ಯಾರಾದರೂ ಕೊಡವರೆ ಇದಕ್ಕೆ ಸರಿಯಾಗಿ ಉತ್ತರಿಸಬೇಕು.

Submitted by Harish Athreya on

ಶ್ರೀಧರ್ ಅವರ ಅರ್ಥ ಸರಿಯಾಗಿದೆ ಎನಿಸುತ್ತದೆ
ಚ೦ಗಲ ರಾಯಪ್ಪ ಎ೦ಬ ಹೆಸರು ಮುಳಬಾಗಿಲಿನ ಆಸು ಪಾಸು ಇದೆ.
ಚನ್ನಿಗರಾಯ ---- ಚೆನ್ನಿಗ್ರಾಯ----ಚ೦ಗಲ್ರಾಯ ಆಗಿರಬಹುದು
hari