ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸುದ್ದಿ, ಸಮಾಚಾರ

ರಾಷ್ಟ್ರಗೀತೆ ಹಾಡಿದರೆ ವಿದೇಶೀಯರಿಗೆ ಅಸುಖ?

April 9, 2007 - 3:08pm — smurthygr

"National Anthem could make foreigners at Infy uneasy - NRN" - Deccan Herald 09.04.2007 (Mysore Edition)

ಇದು ಡೆಕ್ಕನ್ ಹೆರಾಲ್ಡನಲ್ಲಿ ಇಂದು ಪ್ರಕಟವಾದ ರಾಷ್ಟ್ರಪತಿಗಳ ಮೈಸೂರು ಇನ್‌ಫೋಸಿಸ್ ಭೇಟಿಯ ಸಮಯದಲ್ಲಿ ರಾಷ್ಟ್ರಗೀತೆಯನ್ನು ಹಾಡದೇ ವಾದ್ಯದಲ್ಲಿ ಕೆಟ್ಟದಾಗಿ ನುಡಿಸಿದ ಬಗ್ಗೆ ನಾರಾಯಣ ಮೂರ್ತಿಗಳ ಪ್ರತಿಕ್ರಿಯೆ ಬಗ್ಗೆ ವರದಿ.

‹ ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! ›
  • ಸುದ್ದಿ, ಸಮಾಚಾರ
~.~
  • Login or register to post comments
  • 1348 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 9, 2007 - 4:06pm — hpn

ರಾಷ್ಟ್ರಗೀತೆ

hpn's picture

'ಅಸುಖ' ಎಂದು ಬಳಸೋದು ನಾನು ಕಂಡದ್ದು ಇದೇ ಮೊದಲು.

ನಮ್ಮ ರಾಷ್ಟ್ರಗೀತೆ ವಿದೇಶಿಯರಿಗೂ ಇಂಪಾಗಿದ್ದೀತು, ಹಿಡಿಸೀತು ಎಂದಿಲ್ಲವಲ್ಲ Sticking out tongue

ಒಟ್ಟಾರೆ ಎನ್ ಆರ್ ಎನ್ ಹೇಳಿರುವುದನ್ನು ಸಂಪೂರ್ಣವಾಗಿ ಓದಿದರೆ ಅವರ ಆಶಯ ತಿಳಿಯತ್ತೆ. ಸುಮ್ಮನೆ ಒಂದುಚೂರು quote ಮಾಡಿ ಅದರ ಬಗ್ಗೆ ಡಿಬೇಟ್ ಮಾಡುವುದು ಕತ್ತಲಲ್ಲಿ ಸೂಜಿ ದಾರ ಪೋಣಿಸಿದಂತೆ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 9, 2007 - 5:54pm — mahesha

NRN (ಮುಂದಿನ president?)

mahesha's picture

ಆ ಸುದ್ದಿ ಇಲ್ಲಿದೆ.

ನಮ್ಮ ಕಂಟ್ರಿಯಲ್ಲಿ national anthem ಅನ್ನು ಹಾಡದೇ ಇರುವ, ಇಲ್ಲವೇ ಕೆಟ್ಟದಾಗಿ ನುಡಿಸುವ freedom ಎಲ್ಲರಿಗೂ ಇದೆ ಅಂತ ಕಾಣುತ್ತೆ. ಇದು ಅವರ 'ಅಭಿವ್ಯಕ್ತಿ ಸ್ವಾತಂತ್ರ್‍ಯ' Laughing out loud

ಇವರು ನಮ್ಮ ಮುಂದಿನ president ಅಂತೇ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 12, 2007 - 10:41am — ASHOKKUMAR

Re: ಸರ್ವಸ್ವತಂತ್ರರು ನಾವೆಲ್ಲಾ

ASHOKKUMAR's picture

ಮಹೇಶ>>ನಮ್ಮ ಕಂಟ್ರಿಯಲ್ಲಿ national anthem ಅನ್ನು ಹಾಡದೇ ಇರುವ, ಇಲ್ಲವೇ ಕೆಟ್ಟದಾಗಿ ನುಡಿಸುವ freedom ಎಲ್ಲರಿಗೂ ಇದೆ ಅಂತ ಕಾಣುತ್ತೆ. ಇದು ಅವರ 'ಅಭಿವ್ಯಕ್ತಿ ಸ್ವಾತಂತ್ರ್‍ಯ' Smiling

ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ ಎನ್ನುವುದನ್ನು ನೀವು ಜಾಹೀರುಪಡಿಸಿದ ರೀತಿ ಚೆನ್ನಾಗಿದೆ.(ಇದನ್ನು ಟೀಕೆಯೆಂದುಕೊಳ್ಳಬೇಡಿ).

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 12, 2007 - 11:18am — mahesha

Re: ಸರ್ವಸ್ವತಂತ್ರರು ನಾವೆಲ್ಲಾ

mahesha's picture

ನಾನು ಟೀಕೆಯಂದುಕೊಳ್ಳಲಿಲ್ಲ.. ಈಗ ಕುಶಿನಾ? Smiling

"ಜಾಹೀರು" ಅಂದರೆ ಏನು ಗೊತ್ತಾ? ನನಗಂತೂ ಗೊತ್ತಿಲ್ಲ.!!

ಒಟ್ನಾಗೆ ನನ್ನ ಪೊಗಳ್ದಿ... ನಂಗೆ ಸ್ಯಾನೆ ಸಂತಸಮಾಯ್ತು....

ನಿಂಗೆ ಒಳ್ಳೇದಾಗಲಿ.!!! Laughing out loud

======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 12, 2007 - 12:33pm — ASHOKKUMAR

Re: ಜಾಹೀರು ಅಂದರೇನು?

ASHOKKUMAR's picture

ಹುಡುಕು ಪದ: ಜಾಹೀರು--------------------------------------------------------------------------------

1. proclaim (ಕ್ರಿ) 1) ಘೋಷಿಸು, ಬಹಿರಂಗವಾಗಿ ಪ್ರಕಟಿಸು, ಜಾಹೀರು ಮಾಡು, ಸಾರು, ಶ್ರುತಪಡಿಸು 2) ತೋರಿಸು, ಸೂಚಿಸು

2. proclamation (ನಾ) ಪ್ರಕಟಣೆ, ಘೋಷಣೆ, ಘೋಷಿಸುವುದು, ಜಾಹೀರು

3. publicise (ಕ್ರಿ) ಪ್ರಚಾರ ಮಾಡು, ಜಾಹೀರು ಮಾಡು, ಜನರ ಗಮನ ಸೆಳೆ, ಸಾರ್ವಜನಿಕರ ಗಮನಕ್ಕೆ ತರು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 9, 2007 - 5:38pm — Sunil Jayaprakash

ಟಿ: ರಾಷ್ಟ್ರಗೀತೆ ಹಾಡಿದರೆ ವಿದೇಶೀಯರಿಗೆ ಅಸುಖ?

Sunil Jayaprakash's picture

ವರದಿಯಲ್ಲಿರುವಂತೆ ಎನ್.ಆರ್.ಎನ್ ಅವರ ನಿಲುವು ನಿಜವೇ ಆಗಿದ್ದರೆ, ಕೀಳರಿಮೆ ಅಂತ ಬೇಕಿದ್ದಲ್ಲಿ ಹೇಳಬಹುದು. ಏಕೆ ಹೀಗಾಯಿತೋ ತಿಳಿಯದು. ಮುಂದಿನ ಬಾರಿ ಸರಿಪಡಿಸಿಕೊಳ್ಳುತ್ತಾರಂತೆ Eye-wink ಆದರೆ, ಕಲಾಂ ಅವರು ರಾಷ್ಟ್ರಗೀತೆಯನ್ನು ಹಾಡಿದ್ದನ್ನು ಕೇಳಿ ಸಂತೋಷವಾಯಿತು. ಇಂದಿನ ಎಷ್ಟೋ ಯುವಕರಿಗೆ (ನನ್ನನ್ನೂ ಸೇರಿ) ಅಬ್ದುಲ್ ಕಲಾಂ ಒಬ್ಬರು ದಾರ್ಶನಿಕರಾಗಿ ಕಾಣಿಸಿಕೊಳ್ಳುವುದು ಅವರ ಇಂತಹ ಆದರ್ಶಗಳಿಂದಾಗಿಯೇ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 9, 2007 - 9:03pm — venkatesh

Re: ರಾಷ್ಟ್ರಗೀತೆ ಹಾಡಿದರೆ ವಿದೇಶೀಯರಿಗೆ ಅಸುಖ ?

venkatesh's picture

ಅಲ್ಲಾ ದೇವ್ರು, ರಾಷ್ಟ್ರಗೀತೆ ಹೇಳಿದ್ರೆ, ವಿದೇಶಿಯರಿಗೇಕೆ ಅಸುಖ ಯಾಕ್ ಆಗ್ಬೇಕು ? ನಮಗ್ ತಿಳಿಯಲ್ವೆ !

ಇದಕ್ಕು, ಅಂದರೆ ನಿಮ್ಮ ಶೀರ್ಷಿಕೆಗೂ ಕೆಳಗಿನ ವರದಿಗೂ ಏನಾದರೂ ಸಂಬಂಧ ಇದ್ಯಾ ಸ್ವಾಮಿ ?

ಇನ್ನು ಮೇಲಿನ ವರದಿ ಪ್ರಕಾರ, ರಾಷ್ಟ್ರಪತಿಗಳು ಇನ್ಫೋಸಿಸ್ ಕಂ. ಭೇಟಿಮಾಡ್ತಿದ್ದ ಸಮಯದಲ್ಲಿ ರಾಷ್ಟ್ರಗೀತೆಯನ್ನು ಹಾಡದೆ, ಕೆಟ್ಟ -ಕೆಟ್ಟದಾಗಿ ವಾದ್ಯದಲ್ಲಿ ಬಾರ್ಸಿದ್ರೆ ಪಾಪ, ಅವರೇನ್ ಮಾಡ್ತಾರೆ ?

ಪ್ರತಿಕ್ರಿಯೆ ಸರಿಯಾಗೇ ಇದೆಯಲ್ಲ. ನಮ್ಮ ಒಬ್ಬ ಮೈಸೂರಿನ ಧೀರ, ತನ್ನ ಘನವಾದ ಛಾಪನ್ನು ವಿಶ್ವದಲ್ಲಿ ಮೆರೆಸಿ, ಸಾವಿರಾರು ಜನರಿಗೆ ಉದ್ಯೋಗಾವಕಾಶವನ್ನು ನೀಡುತ್ತಿರುವ ಒಬ್ಬ ಮಾದರಿ ವ್ಯಕ್ತಿಯ ಬಗ್ಗೆ, ಒಂದು ಒಳ್ಳೆ ಅಭಿಪ್ರಾಯ ಬೇಡವೇ ? ನಮಗೆ ಹೇಳ್ಕೊಳ್ಳೋಕೆ ಒಬ್ಬ ಸರಿಯಾದ ಕನ್ನಡದ ಧುರೀಣ ವ್ಯಾಪಾರಿ ಇಲ್ಲ. ಯಾವಾಗ್ ನೋಡಿದ್ರೂ, ಬಡ ಬ್ರಾಹ್ಮಣ ಹೊಟ್ಟೆಗಿಲ್ಲ- ಭಿಕ್ಷೆ ಬೇಡ್ತಿದ್ದ. ಇತ್ಯಾದಿ; ಕೇಳ್ ಸಾಕಾಗ್ ಹೋಗಿದೆ.

ಸ್ವಲ್ಪ ಅವರ ಕಷ್ಟ ಏನು, ಅನ್ನೊದ್ ತಿಳ್ಕೊಳ್ಳೋಕೆ ನಾವ್ ಯಾಕ್ ಪ್ರಯತ್ನ ಮಾಡ್ ಬಾರ್ದು ? ಒಟ್ಟಿನಲ್ಲಿ ಅವ್ರೇನಾದ್ರು ಹಾಗೆ ಹೇಳಿದ್ರೆ, ಅದು ತಪ್ಪು ಅನ್ನೋದ್ ಅವ್ರುಗೂ ಗೊತ್ತಿದೆ. ಸಮ್ಯಾ ಯಾವ್ದು, ವಿಷ್ಯ ಏನು, ಅನ್ನೊದ್ ಮುಖ್ಯ ಅಷ್ಟೆ !

ನಮ್ಮ ನಾಡಿಗರು ಹೇಳೋ ಮಾತುಗಳು ಸರಿಯಾಗಿವೆ. ಇನ್ನೊಂದು, ನಿಮ್ಮ ಅನುವಾದ ಅಷ್ಟು ಸಮರ್ಪಕವಾಗಿಲ್ಲ ಅನ್ನುವುದು ನನ್ನ ಅನಿಸಿಕೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 9, 2007 - 9:35pm — mahesha

National anthem ಹಾಡಿದರೆ ಪರದೇಶದೋರಿಗೆ uneasy ?

mahesha's picture

ಈ ಟೀವಿಯಾಗೆ ಇವರ ಸುದ್ದಿ ಬಂದೈತೆ.

"ನಾರಾಯಣ ಮೂರ್ತಿ ರಾಷ್ಟ್ರಪತಿ ಆದರೆ ದೇಶಾನ ಹೊರದೇಶಕ್ಕೆ ಮಾರ್ತಾರೆ" - ಚಂಪಾ!! Smiling

ನೋಡೋಣ ಈ ಜಗ್ಗಾಟ ಹೆಂಗೆ ಬಣ್ಣ ಎರ್ಸಿಕೊಳ್ಳತ್ತೆ ಅಂತ Laughing out loud

======
Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 10, 2007 - 8:58pm — muralihr

Re: National anthem ಹಾಡಿದರೆ ಪರದೇಶದೋರಿಗೆ uneasy ?

muralihr's picture

ಯಾಕ್ ತಾತ ಅಷ್ಟೋ೦ದು ಲವ್ ..ಮೂರ್ತಿಗಳ ಮೇಲೆ ??
ನಿನ್ನ ಮಗನೋ ಅಳಿಮಯ್ಯಾನೋ ಇಲ್ಲಿ ಕೆಲ್ಸಾ ಮಾಡ್ತಾಯಿರ್ ಬೇಕು.

ಮೊದಲನೇ ದಾಗಿ ರಾಷ್ಟ್ರ ಗೀತೆ ಅನ್ನುವುದಾದರೇನು ??
ರಾಷ್ಟ್ರದ ಕಲ್ಪನೆ ನಮ್ಮಲ್ಲಿ ಎಷ್ಟು ಮ೦ದಿಗೆ ಇದೆ ??
ಆ ಕಲ್ಪನೆ ಸಹಜವಾದದ್ದೋ ಅಥವಾ ಒತ್ತಾಯದಿ೦ದ ಮೂಡಿದ್ದೋ ??
ರಾಷ್ಟ್ರ ಗೀತೆಯನ್ನು ಹಾಡಿದರೆ ಅಭಿಮಾನವಿರುತ್ತೋ ಅಥವಾ ಪ್ರೀತಿಯಿರುತ್ತೋ ??
ನೋಡಿ, ಈ ರಾಷ್ಟ್ರ ಗೀತೆ ಮುಷ್ಠಿ ಬಿಗಿಹಿಡಿದು ಹಾಡಿಸ್ತಾರಲ್ಲಾ ಎಲ್ಲಾ ಸ್ಕೂಲ್ ಗಳಲ್ಲಿ
ಅದು ನಿಜವಾಗಲೂ ಅಪ್ರಕೃತ ಮತ್ತು ಹಿ೦ಸೆ.
ನನಗೆ ನಾನು ಹೈ ಸ್ಕೂಲ್ ಗೆ ಬರುವ ವರೆಗೂ ಅದರ ಅರ್ಥ ತಿಳಿದಿರಲಿಲ್ಲಾ.
ಆದರೆ ನನ್ನ ದೇಶದ ಬಗ್ಗೆ ತು೦ಬಾ ಪ್ರೀತಿ ಇತ್ತು .
ಸ್ವಲ್ಪ ಲೇಟ್ ಆದರೆ ರಾಷ್ಟ್ರ ಗೀತೆಯನ್ನು ಲೈನ್ ಗೆ ಸೇರದೆ ದೂರ ನಿ೦ತು ಹಾಡಬೇಕಿತ್ತು.
ಹಾಡಿದ ನ೦ತರ ಏಟುಗಳು ಬೀಳುತ್ತಿದವು.

ಅದರಿ೦ದ ನಮ್ಮ ದೇಶ ಅನ್ನುವ ಚಿ೦ತನೆ ಎಷ್ಟು ಮ೦ದಿಗೆ ಬ೦ದಿದೆ.
ಪಾಪ ಹುಡುಗರಿಗೆ ಬೇಸತ್ತು ಹೋಗಿರುತ್ತ್ದೆ.
ನಿಜವಾಗಲೂ ಯಾವುದೇ ಕವಿ ಬಯಸುವುದು ತನ್ನ ಕವಿತೆ ಜನ ಕುಣಿದು ನಲಿದ ಹಾಡಲಿ
ಎ೦ದು ತಾನೇ ??. ಮುಷ್ಟಿ ಬಿಗಿ ಹಿಡಿದು ಯಾ೦ತ್ರಿಕವಾಗಿ ಹಾಡುವ ಕ್ರಿಯೆ ಕವಿಗೆ ಮತ್ತು ಆತನ
ಕವಿತೆಗೆ ಎಸಗುವ ಅವಮಾನ.

ನಮ್ಮ ದೇಶದಲ್ಲಿ (ಹೋಗಲಿ ಮನೆಯಲ್ಲಿ ) ನಾವೆಲ್ಲಾ ಒ೦ದು ಎ೦ಬುವ ಕಲ್ಪನೆ ಯಾದರು ಉ೦ಟೇ ??
ಎಷ್ಟು ಮ೦ದಿ ಠಾಗೋರ್ ರ ಸಾಹಿತ್ಯ ಓದಿದ್ದಾರೆ ??
ಎಷ್ಟು ಮ೦ದಿಗೆ ನಮ್ಮ ಇತಿಹಾಸ ಮತ್ತು ಸ೦ಸ್ಕೃತಿಯ ಬಗ್ಗೆ ಕಾಳಜಿ ಇದೆ ?
ಮನುಷ್ಯ ನನ್ನು ಭಯದಿ೦ದ ಒಗ್ಗೂಡಿಸಿ ತಮ್ಮ ಹಿತವನ್ನು ಸಾಧಿಸಿಕೊಳ್ಳಲು ರಾಜಕೀಯ ಶಕ್ತಿಗಳು ರಾಷ್ಟ್ರೀಯತೆ ಎ೦ಬುವ ಆದರ್ಶವನ್ನು ಸೃಷ್ಟಿ ಮಾಡಿದ್ದಾರೆ.
ಮನುಷ್ಯ ನನ್ನು ಒಗ್ಗೂಡಿಸುವುದು ಭಯ ಮತ್ತು ಪ್ರೀತಿ ಮಾತ್ರ.
ಬೇರೆ ಯಾವುದೇ ಆದರ್ಶಗಳು (ಜಾತಿ, ಭಾಷೆ,)ಸ್ವಲ್ಪ ದಿನವಿರುತ್ತದೆ ಆಮೇಲೆ ಹೋಗಿ ಬಿಡುತ್ತದೆ.
ಹೃದಯದಲ್ಲಿ ಶ್ರದ್ಧೆ ಮೂಡಿ ಚಿಮ್ಮಿದ ಗೀತೆ ಗೆ ಮಾತ್ರ ಒ೦ದಾಗಿಸುವ ಶಕ್ತಿಯಿರುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 12, 2007 - 8:44pm — venkatesh

Re: National anthem ಹಾಡಿದರೆ ಪರದೇಶದೋರಿಗೆ uneasy ?

venkatesh's picture

ಮುರುಳೀಧರರೆ,

ಸ್ವಲ್ಪ ಶಾಂತರಾಗಿರಿ. Please kool down. ಹೇಳುವುದು ಎಲ್ಲಾ ಆಯ್ತಾ ? ರವೀಂದ್ರನಾಥ ಟ್ಯಾಗೊರ್ ರ ಪುಸ್ತಕ- ಅವರ ವಿಚಾರಧಾರೆಗಳನ್ನು ನಾವೆಲ್ಲಾ ಬಾಲ್ಯದಿಂದಲೇ ಓದಿದ್ದೇವೆ. ನೀವೊಬ್ಬರೆ , ಅಂತ ಅನ್ಕೊಂಡಿದ್ದರೆ ನಿಮ್ಮಂತಹ ಶತಮೂರ್ಖರು ಇನ್ನೊಬ್ಬರಿಲ್ಲ. ನಾರಾಯಣಮೂರ್ತಿಗಳಂತವರ ಬಗ್ಗೆ ಹೇಳುವಾಗ ನಿಮ್ಮ ಮಾತುಗಳಲ್ಲಿ ಸ್ವಲ್ಪ ಬಿಗಿಯಿರಲಿ. ಅವರೊಬ್ಬ ಭಾರತವನ್ನು ಪ್ರತಿನಿಧಿಸುವ ಸಾಂಸ್ಕೃತಿಕ ರಾಯಭಾರಿ. ಬಿಲ್ಗೇಟ್ಸ್ , ಬಿರ್ಲ, ಟಾಟಾ, ಅಜಿಮ್ ಪ್ರೇಂಜೀ, ಲಕ್ಷ್ಮೀ ಮಿಟ್ಟಲ್ ರಂತಹ ಕಾರ್ಪೊರೇಟ್ ಚಕ್ರವರ್ತಿಗಳು ನಿಮ್ಮ ಕಾಮೆಂಟ್ ಕೇಳಿದರೆ ನಗೆಯಾಡಿಯಾರು !

ಸ್ವಲ್ಪ ಎಚ್ಚರ. ದೇಶಪ್ರೇಮ ನಿಮ್ಮೊಬ್ಬರಿಗೇ ಮೀಸಲಾಗಿದೆ ಅನ್ನೊ ಅಹಂ ಬಿಡಿ. ಸ್ವಲ್ಪ ಸರಿಯಾಗಿ ಪ್ರತಿಕ್ರಯಿಸುವುದನ್ನು ಕಲಿತರೆ ನಿಮ್ಮ ಘನತೆಗೇ ಒಳ್ಳೆಯದು ! ಕನ್ನಡದವರು ಅಂದ ಮಾತ್ರಕ್ಕೆ ಹಗುರವಾಗಿ ಮಾತಾಡಿ ನೀವು ಹಗುರವಾಗಬೇಡಿ.
ನಿಮ್ಮ ವಿಷಯ ಪ್ರಸ್ತಾವನೆ ಚೆನ್ನಾಗಿದೆ. ಅದನ್ನು ಲೇಖನದಲ್ಲಿ, ನಿಮ್ಮ ಅನಿಸಿಕೆಗಳಲ್ಲಿ ಲೇಖಣಿಯಮೂಲಕ ಇಳಿಸುವಾಗ ಸ್ವಲ್ಪ ಎಚ್ಚರವಾಗಿರಿ. ಹಿರಿಯರು, ವಯಸ್ಸಾದೋರು ಅನ್ನೋರ ಹತ್ತಿರ ಹೇಗೆ ನಡೆದುಕೊಳ್ಳಬೇಕು ಅನ್ನೋದನ್ನು ನೀವು ಮೊದಲು ಅಭ್ಯಾಸಮಾಡಿ. ಘನತೆಯ ಬಗ್ಗೆ ನಿಮ್ಮ ಮನೆಯಲ್ಲಿ ಕಲಿಸಿದ್ದಾರೆ ತಾನೇ ? ಸ್ವಲ್ಪ ಜ್ಞಾಪಿಸಿಕೊಳ್ಳಿ ಅಯ್ಯ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 13, 2007 - 1:01am — hpn

ವೆಂಕಟೇಶರು ಹೇಳೋದು ಸರಿ

hpn's picture

ವೆಂಕಟೇಶರು ಹೇಳೋದು ಸರಿ, ಮುರಳಿ. ಹಿರಿಯರಿಗೆ ಗೌರವ ಕೊಟ್ಟು ಬರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 13, 2007 - 2:51am — Prabhu Murthy

Re: ವೆಂಕಟೇಶರು ಹೇಳೋದು ಸರಿ

Prabhu Murthy's picture

ವೆಂಕಟೇಶ್ ಮತ್ತು ನಾಡಿಗ್ ಅವರೆ, ನಿಮ್ಮ ಪ್ರತಿಕ್ರಿಯೆ ಬಹಳ ಸಮಂಜಸವಾಗಿದೆ. ಇಂತಹ ಪಬ್ಲಿಕ್ ಡಿಸ್ಕೋರ್ಸಿನಲ್ಲಿ ಗಮಸಿಸಲೇಬೇಕಾದ ಎಚ್ಚರಿಕೆ ಮತ್ತು ಸಭ್ಯತೆಗಳ ಪರಿವೆ ಎಲ್ಲರಿಗೂ ಇದ್ದಂತೆ ಅನಿಸುವುದಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಮಗ್ಗಲಲ್ಲೇ ಹೊಣೆಗಾರಿಕೆಯೂ ಇದೆ ಅಲ್ಲವೇ? ಆದರೆ ಇಲ್ಲಿ ಕಾಣಬರುವ ಹೊಣೆಗೇಡಿತನದಲ್ಲೇ ಅಂತಹ ಸ್ವಾತಂತ್ರ್ಯದ ಸೋಲೂ ಇದೆ. ಇಂದು ನಮ್ಮ ನಾಡಿನಲ್ಲಿ ತಾಂಡವವಾಡುತ್ತಿರುವ ನೀಚತನಗಳಲ್ಲಿ ಇದೂ ಒಂದು ಅನಿಸುತ್ತದೆ. ಇದು ಬ್ಲಾಗುಗಳಿಂದ ಹಿಡಿದು ವಿಧಾನಸೌಧದವರೆಗೆ ಅನೇಕ ಕನ್ನಡಿಗರನ್ನು ಆವರಿಸಿರುವಂತೆ ತೋರುತ್ತಿದೆ.

- ಪ್ರಭು

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 13, 2007 - 8:53am — mahesha

Re: National anthem ಹಾಡಿದರೆ ಪರದೇಶದೋರಿಗೆ uneasy ?

mahesha's picture

ಮುರಳಿ( ಕೊಳಲಯ್ಯ Smiling )

ನಿಮ್ಮ ಮಾತುಗಳನ್ನೆಲ್ಲ, ನೋಡಿ ಹಿಂದೆ ನಡೆದ ಕೆಲವು ಸಂಗತಿಗಳು ನೆನೆಪಾದವು.

೧) ಕೇರಳದ ಕ್ರಿಶ್ಚಿಯನ್ ಪಾದ್ರಿ, ನೇಷನಲ್ ಹಾಡನ್ನು ಹಾಡಲ್ಲ ಎಂದು ಕೋರ್ಟಿಗೆ ಹೋಗಿ ಗೆದ್ದಿದ್ದ. ಅವನ ಮಾತು ಆ ಹಾಡಲ್ಲಿ ಇರುವ "ಅಧಿನಾಯಕ" ಯಾರು? ಅವನು ಏಸು ಅಲ್ಲದಿದ್ದರೆ, ತಾನು ಹಾಡಲ್ಲವೆಂದು.
೨) ಈ ಹಾಡಲ್ಲಿ ಬರೆದವರಿಗೆ ಈಗಿನ ಇಂಡಿಯಾದಲ್ಲಿ ಇರದ "ಸಿಂಧ್" ಮುಂತಾದ ನೆಲಗಳನ್ನು ಹೇಳಿ, ಇಡೀ ತೆಂಕಣವನ್ನು ಬರಿ ದ್ರಾವಿಡ ಎಂದು ಕರೆದಿರುವುದು, ದೊಡ್ಡ ತಪ್ಪು. ಕನ್ನಡ, ತೆಲುಗು, ತುಳು ಮುಂತಾದವರು ದ್ರಾವಿಡರಲ್ಲ. ದ್ರಾವಿಡ ಬರೀ ತಮಿಳು-ನೆಲ. ಆದುದರಿಂದ ಈ ಹಾಡನ್ನು, ಆರಿಸುವಾಗ, ಕನ್ನಡ, ತೆಲುಗು, ತುಳು ಮುಂತಾದ ಮಂದಿಯನ್ನು ಎಣಿಸಿಲ್ಲ.
೩)ನಾವು ನಮ್ಮ ದೇಸವನ್ನು "mother land", "ತಾಯಿನೆಲ" ಎಂದು ಕರೆಯುವುದು. ಆದರೆ ಈ ಹಾಡಲ್ಲಿ "ಅಧಿನಾಯಕ" ಎಂದು ಒಂದು ಗಂಡಸನ್ನು ಕುಱಿಯಲಾಗಿದೆ. ಆದುದರಿಂದ ಇದು ಯಾವುದೋ ಇಂಗ್ಲೀಸ್ ದೊರೆಗೆ ಬರೆದುದು.

ಹಿಂಗೆ ಈ ಹಾಡಿನ ಕುರಿತು ಈಗಾಗಲೇ, ಹಲವು ಮಾತುಗಳೆದ್ದಿವೆ. ಅದೂ ಅಲ್ಲದೇ, ಅದನ್ನು ಹಾಡಲು ಒಪ್ಪದೇ ಇರವ'ಸಲಿಗೆ/freedom' ಇದೆ.

======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 9, 2007 - 11:56pm — pradeepkishore

Re: ರಾಷ್ಟ್ರಗೀತೆ ಹಾಡಿದರೆ ವಿದೇಶೀಯರಿಗೆ ಅಸುಖ?

pradeepkishore's picture

http://churumuri.wordpress.com/2007/04/09/jana-gana-mana-makes-foreigners-uneasy-nrn

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 11, 2007 - 10:23pm — Sunil Jayaprakash

Re: ರಾಷ್ಟ್ರಗೀತೆ ಹಾಡಿದರೆ ವಿದೇಶೀಯರಿಗೆ ಅಸುಖ?

Sunil Jayaprakash's picture

ಯಪ್ಪ ಪ್ರದೀಪ್, ಚುರುಮುರಿಯಲ್ಲಿ ಕಿಡಿಗಳು ಹೊತ್ತಿ ಉರಿಯುತ್ತಾ ಇದೆ Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 12, 2007 - 11:16am — Sunil Jayaprakash

ಟಿ: ರಾಷ್ಟ್ರಗೀತೆ ಹಾಡಿದರೆ ವಿದೇಶೀಯರಿಗೆ ಅಸುಖ?

Sunil Jayaprakash's picture

ಚುರುಮುರಿಯ ಬ್ಲಾಗಿನ ಪ್ರಸ್ತಾಪವನ್ನು ಸಿಎನ್ಎನ್-ಐಬಿಎನ್ ತನ್ನ ವರದಿಯಲ್ಲಿ ಮಾಡಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 10, 2007 - 10:23pm — Sunil Jayaprakash

ತಪ್ಪಾಯಿತೆಂದ ಮೂರ್ತಿ..ಮತ್ತಷ್ಟು

Sunil Jayaprakash's picture

ಅಪಾಲಜಿ ಕೇಳಿರುವೆ ಬಗ್ಗೆ ವರದಿ ಬಂದಿದೆ

ಅಂದ ಹಾಗೆ, ಕ್ಷಮೆ ಕೇಳಿದಾಕ್ಷಣ ಮೂರ್ತಿಯನ್ನು ಅಗತ್ಯಕ್ಕಿಂತ ಹೆಚ್ಚಾಗಿ ಅಟ್ಟಕ್ಕೇರಿಸಿ ಕರ್ನಾಟಕದ ರಾಜಕಾರಣಿಗಳನ್ನು ಬೇಕಾಬಿಟ್ಟಿಯಾಗಿ ಚಿತ್ರಿಸಿರುವುದನ್ನು ಆ ವರದಿಯಲ್ಲಿ ಸ್ಪಷ್ಟವಾಗಿ ಕಾಣಬಹುದು. ಈ ಘಟನೆಯ ಬಗ್ಗೆ ಸ್ಪಷ್ಟನೆ ಕೇಳುವುದಕ್ಕೆ ಕರ್ನಾಟಕ ಸರ್ಕಾರದ ಗೃಹಸಚಿವಾಲಯಕ್ಕೆ ಹಕ್ಕಿಲ್ಲವೇ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 11, 2007 - 7:58am — ASHOKKUMAR

Re: ನಾರಾಯಣ ಮೂರ್ತಿ..ರಾಷ್ಟ್ರಪತಿ ಇನ್ನು ಅಸಾಧ್ಯ

ASHOKKUMAR's picture

ವಿಧಾನಸಭೆಯಲ್ಲಿ ನಾರಾಯಣ ಮೂರ್ತಿಗಳು ಟೀಕೆಗೀಡಾಗುವುದರೊಂದಿಗೆ ಅವರು ರಾಷ್ಟ್ರಪತಿ ಆಗುವ ಸಾಧ್ಯತೆ ಕ್ಷೀಣವಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 11, 2007 - 9:46pm — venkatesh

Re: ನಾರಾಯಣ ಮೂರ್ತಿ..ರಾಷ್ಟ್ರಪತಿ ಇನ್ನು ಅಸಾಧ್ಯ

venkatesh's picture

ಮೀಡಿಯಾಗಳು ಅನ್ಯಥಾ ವಿಷಯಗಳನ್ನು ದೊಡ್ಡದಾಗಿ ಬೆಳಸಿ ಅದರ ದುರುಪಯೋಗ ಮಾಡುತ್ತಿರುವುದು, ಇದೇ ಮೊದಲಂತೂ ಅಲ್ಲ. ಟಾಟಾ, ಬಿರ್ಲ, ಮಿತ್ತಲ್, ಮತ್ತೆ ನಾರಾಯಣ ಮೂರ್ತಿ, ಬಿಲ್ ಗೇಟ್ಸ್, ಇಂತಹವರು ರಾಷ್ಟ್ರಪತಿ ಹುದ್ದೆಯಲ್ಲಿ ಕುಳಿತು ಮಾಡುವುದಾದರೂ ಏನು ?

ನಮಗೆ ಗೊತ್ತಿರುವಂತೆ ನಮ್ಮ ದೇಶದ ರಾಷ್ಟ್ರಪತಿ ಸ್ಥಾನ ಕೇವಲ ಮುದ್ರೆಗುರುವಿನ ಕೆಲಸ ! ಚುನಾಯಿತರು ಸದ್ದಿಲ್ಲದೆ ಕೆಲಸ ಮಾಡಲೂ ಬಹುದು. ಎಲ್ಲೋ ಡಾ. ಅಬ್ದುಲ್ ಕಲಾಂ, ಇದಕ್ಕೆ ಅಪವಾದ ಅಷ್ಟೆ ! ಸಮಯ ಬಂದಾಗ ಅವರು ತಮ್ಮ ಆಫೀಸಿನ ಪ್ರೊಟೋಕಾಲ್ ಬಿಟ್ಟು ಮಾನವೀಯತೆಯ ಪ್ರದರ್ಶನ ಮಾಡಿರುವುದು ಸ್ತುತ್ಯಾರ್ಹ ! ಒಮ್ಮೆ ಶ್ರಿ . ಖುಷ್ ವಂತ್ ಸಿಂಗರ ಮನೆಗೆ, ಒಮ್ಮೆ ಶ್ರೀ. ಆರ್. ಕೆ. ಲಕ್ಷ್ಮಣ್ ರ ಮುಂಬೈ ಮನೆಗೆ, ಹೋಗಿ ಅವರುಗಳ ಆರೋಗ್ಯ ವಿಚಾರಿಸಿಕೊಂಡುಬಂದ ಪ್ರಥಮ ವ್ಯಕ್ತಿ.

ನಾರಾಯಣ ಮೂರ್ತಿಯವರ ಕಾರ್ಯ ಕುಶಲತೆ, ಹಾಗೂ ಶಿಸ್ತು, ದೂರಾಲೋಚನೆಗಳಂತಹ ಸಮಗ್ರ ವೈಚಾರಿಕತೆಗಳು ಒಂದು ಇನ್ಫೋಸಿಸ್ ನಂತಹ ವಿಶ್ವಪ್ರಸಿದ್ಧ ಕಂಪೆನಿಗೆ ಮಾತ್ರ ಸಾಧ್ಯ. ಅಧವಾ ಅದೇ ಉದಾತ್ತ ಧ್ಯೇಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಸಂಸ್ಥೆಗಳಿಗೆ ಮಾತ್ರ ಸಾಧ್ಯ !

ಸುಮ್ಮನೆ ಅವರು ಆ ಬೃಹತ್ "ದಂತ ಮಹಲ್ಲಿಗೆ " ಹೋಗಿ, ಸಮಯದ ಅಭಾವದಿಂದ ತಮ್ಮ ಕಾರ್ಪೊರೇಟ್ ಸಂಸ್ಥೆಯ ಆಡಳಿತ ವ್ಯವಸ್ಥೆಗೆ ಕುಂದು ಬರುವಂತಹ ಹೆಜ್ಜೆಯನ್ನು ತೆಗೆದುಕೊಳ್ಳದಿರುವುದೇ ಮೇಲು. ನಾರಾಯಣಮೂರ್ತಿಯಂತಹ ಕ್ರಿಯಾಶೀಲ, ಮೇಧಾವಿಗಳನ್ನು ಅವರ ಪಾಡಿಗೆ ಬಿಟ್ಟರೆ ದೇಶಕ್ಕೆ ಕ್ಷೇಮ ಅಲ್ಲವೇ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 11, 2007 - 10:11pm — ASHOKKUMAR

Re: ನಾರಾಯಣ ಮೂರ್ತಿ..ಯಾಕೆ ಹೀಗೆ

ASHOKKUMAR's picture

ಮೂರ್ತಿಗಳಂತವರು ವಿವಾದಕ್ಕೆ ಬೇಕುಬೇಕೆಂದೇ ಒಳಗಾಗುತ್ತಾರೆ.ಯಾಕೆ ಹೀಗೆ?ಆನಿಸಿಕೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 12, 2007 - 9:49am — venkatesh

Re: ನಾರಾಯಣ ಮೂರ್ತಿ..ಯಾಕೆ ಹೀಗೆ

venkatesh's picture

ನಾರಾಯಣಮೂರ್ತಿಯವರು ತಮ್ಮ ಜೀವನವಿಡೀ ಪಾರದರ್ಶಿ ವ್ಯವಸ್ಥೆಯನ್ನೇ ಪಾಲಿಸಿಕೊಂಡುಬಂದವರು. ಕೆಲವೊಮ್ಮೆ ದಿಡೀರನೆ ಹೇಳಿಬಿಡುತ್ತಾರೆ- ಕೆಲವನ್ನು ; ಅವು ನಿಜವೇ ಆಗಿರಬಹುದು. ಅದನ್ನು ಸ್ವೀಕರಿಸಲು ಎಲ್ಲರೂ ಸಿದ್ಧರಾಗಿರುವುವಿಲ್ಲ. ಇದನ್ನೇ ತಮಿಳನೊ ತೆಲುಗನೋ ಹೇಳಿದಾಗ ಅಷ್ಟು ವಿವಾದ ಸೃಷ್ಟಿಯಾಗುವುದಿಲ್ಲ. ಅದು ನಮ್ಮ ಹಣೆಬರಹ. ಮನುಷ್ಯನ ಒಳ್ಳೆತನವನ್ನು ಗುರುತಿಸುವಲ್ಲಿ ನಾವು ಸೋತಿರುವುದೂ ಇದಕ್ಕೊಂದು ಒಳ್ಳೆಯ ಉದಾಹರಣೆ.

ನಮ್ಮ ಜನಗಳನ್ನು ನಾವು ಬಿಟ್ಟುಕೊಡಬಾರದು. ಎನ್. ಆರ್. ಎನ್ ಗೆ ದೇಶಗೀತೆಯ ಬಗ್ಗೆ ಪ್ರೇಮ, ಶ್ರದ್ಧೆ ಇಲ್ಲಾ ಅಂತೀರಾ ?

ಅವರು ವಿವಾದಗಳಲ್ಲಿ ಸಿಕ್ಕಿಹಾಕಿಕೊಂಡಿರುವುದು ಇದೇ ಮೊದಲೇನಲ್ಲ. ಒಮ್ಮೆ ಅವರು ಯೂರೋಪಿನಲ್ಲಿ ರೈಲಿನಲ್ಲಿ ಬರುತ್ತಿದ್ದಾಗ [ ಆ...ಸೈಬೀರಿಯದ ಹತ್ತಿರ ಅಂತ ಕಾಣುತ್ತೆ...] ಒಬ್ಬ ಯುವತಿ ಬಂದು ಅವರ ಎದುರಿಗಿನ ಸೀಟಿನ ಮೇಲೆ ಕೂಡುತ್ತಾಳೆ. ಅವಳ ದೇಶದ ಆಡಳಿತ ವ್ಯವಸ್ಥೆಯಬಗ್ಗೆ ಬಡ-ಬಡಿಸುತ್ತಾಳೆ. ಪಾಪದವರಾದ ಮೂರ್ತಿ, ಅವಳಿಗೆ ಸಾಂತ್ವನ ಹೇಳುತ್ತಾರೆ. ಅಷ್ಟರಲ್ಲಿ ರೈಲ್ವೆ ಪೋಲಿಸ್ ಬಂದು ಅವರನ್ನು arrest ಮಾಡಿ, ಅವರಿಗೆ ಜೈಲಿನಲ್ಲಿ ಇರಬೇಕಾದ ಪ್ರಸಂಗ ಬಂದ ವಿಷಯವನ್ನು ನಾವು ಟೀ. ಆರ್. ಅನಂತರಾಮು ಅವರ ತ್ರಿವಿಕ್ರಮ ಹೆಜ್ಜೆಗಳು ಅನ್ನುವ ಪುಸ್ತಕದಲ್ಲಿ ಬರುವ, "ಸಾಫ್ಟ್ ವೇರ್ ಸಂತ’ ಅನ್ನುವ ಶೀರ್ಶಿಕೆಯಲ್ಲಿ ಬರೆದ ಲೇಖನದಲ್ಲಿ ಓದಬಹುದು. ವಿಧಿಯಲ್ಲ. ಇವು ಇಂದಿನ ಕಟು ಸತ್ಯಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 12, 2007 - 11:19am — ಶ್ರೀನಿಧಿ

Re: ನಾರಾಯಣ ಮೂರ್ತಿ..ಯಾಕೆ ಹೀಗೆ

ಶ್ರೀನಿಧಿ's picture

Quote:
ಇದನ್ನೇ ತಮಿಳನೊ ತೆಲುಗನೋ ಹೇಳಿದಾಗ ಅಷ್ಟು ವಿವಾದ ಸೃಷ್ಟಿಯಾಗುವುದಿಲ್ಲ

ಇದು ಸರಿಯಾದ ಮನೋಭಾವ ಅಲ್ಲ. ನಮಗೇಕೆ ಇಷ್ಟು ಕೀಳರಿಮೆ? ಎಲ್ಲರೂ ಕನ್ನಡದವರನ್ನು ಬಡಿಯಲೇ ಹೊರಟಿದ್ದಾರೆ ಎಂದೇಕೆ ಭಯ? ತಪ್ಪು ಮಾಡಿದವನು ಯಾರೇ ಆಗಿರಲಿ, ಯಾವುದೇ ಉನ್ನತ ಸ್ಥಾನದಲ್ಲಿರಲಿ, ಆತ ಮಾಡಿದ್ದು ತಪ್ಪೇ. ಅವರೇ ಕ್ಷಮಾಪಣೆ ಕೇಳಿದ್ದಾರೆ. ಇದರಿಂದ ಅವರಿಗೇ ತಾವು ಮಾಡಿದ್ದು ತಪ್ಪು ಎಂದು ತಿಳಿದಿದೆ ಅಲ್ಲವೇ.

Quote:
ನಮ್ಮ ಜನಗಳನ್ನು ನಾವು ಬಿಟ್ಟುಕೊಡಬಾರದು. ಎನ್. ಆರ್. ಎನ್ ಗೆ ದೇಶಗೀತೆಯ ಬಗ್ಗೆ ಪ್ರೇಮ, ಶ್ರದ್ಧೆ ಇಲ್ಲಾ ಅಂತೀರಾ ?

ಅವರಿಗೆ ದೇಶಪ್ರೇಮ/ದೇಶಗೀತೆಯ ಬಗ್ಗೆ ಶ್ರದ್ಧೆ ಇದೆಯೋ ಇಲ್ಲವೋ. ಆದರೆ ಅವರು ಮಾತಾಡುವಾಗ ಸ್ವಲ್ಪ ಎಚ್ಚರ ವಹಿಸಿ ಮಾತಾಡಿದ್ದರೆ ಚೆನ್ನಾಗಿರುತ್ತಿತ್ತು. ಅದರಲ್ಲೂ ರಾಷ್ಟ್ರಪತಿಯವರ ಭೇಟಿ ಸಮಯದಲ್ಲಿ ಈ ರೀತಿಯ ತಪ್ಪು (ನಡೆ-ನುಡಿ ಎರಡೂ) ನಡೆದಿದ್ದು ವಿಷಾದನೀಯ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 12, 2007 - 10:32am — ASHOKKUMAR

Re: ನಾರಾಯಣ ಮೂರ್ತಿ..ಕ್ಷಮೆ ಯಾಚಿಸಿದರೂ ತಿಳಿಯಾಗದ ವಿವಾದ

ASHOKKUMAR's picture

ನಾರಾಯಣಮೂರ್ತಿಯಂತವರನ್ನು ನಾವು ಬಿಟ್ಟ್ಟುಕೊಡಬಾರದು ನಿಜ. ನೇರ ಮಾತಿನ ವ್ಯಕ್ತಿತ್ವ ಮೊದಲಿನಿಂದಲೂ ಅವರಿಗೆ ತೊಂದರೆಯೊಡ್ಡಿದೆ ಎನ್ನುವುದೂ ಸತ್ಯ. ನಮ್ಮ ಶಾಸಕರು ಮೂರ್ತಿಗಳು ಕ್ಷಮೆ ಯಾಚಿಸಿದರೂ ಪ್ರಕರಣಕ್ಕೆ ತೆರೆಯೆಳೆಯಲು ತಯಾರಿಲ್ಲ ಎನ್ನುವುದು ಬೇಸರ ಹುಟ್ಟಿಸುವ ಸಂಗತಿ. ಆದರೂ ಜನರು ಇಂತಹ ಅವಕಾಶಕ್ಕೆ ಕಾಯುತ್ತಿದ್ದಾರೆ ಎಂಬುದನ್ನು ಅರಿತು ಮೂರ್ತಿಗಳು ತುಸು ಎಚ್ಚರಿಕೆ ವಹಿಸುವುದು ಅವಶ್ಯಕವಲ್ಲವೇ?ಪದೇ ಪದೇ ವಿವಾದಗಳನ್ನು ಸೃಷ್ಟಿಸಿಕೊಳ್ಳುವುದು ಅವರಂತಹ ಮಾದರಿ(role model) ವ್ಯಕ್ತಿಗಳಿಗೆ ಒಪ್ಪುವುದಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 12, 2007 - 2:36pm — venkatesh

Re: ನಾರಾಯಣ ಮೂರ್ತಿ..ಕ್ಷಮೆ ಯಾಚಿಸಿದರೂ ತಿಳಿಯಾಗದ ವಿವಾದ

venkatesh's picture

ಕೊನೆಗೆ, ಈ ಒಂದು ಪ್ರಕರಣ ನಿಜವಾಗಿಯೂ ಯಾರಿಗೂ ಹಿತಕರವಾದ ಅಥವಾ ಆರೋಗ್ಯಕರವಾದ ಸಂಗತಿಯಂತೂ ಅಲ್ಲ. ನಾರಾಯಣ ಮೂರ್ತಿಯವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎನಿಸುತ್ತೆ. ಇನ್ನು, ತಪ್ಪು ತಪ್ಪೆ. ಯಾರೇ ಮಾಡಿರಲಿ.

ನನ್ನ ಮಕ್ಕಳಾಗಲಿ ಅಳೇಮಯ್ಯಗಳಾಗಲಿ, ಇನ್ಫೋಸಿಸ್ ನಲ್ಲಿ ಕೆಲಸ ಮಾಡ್ತಿಲ್ಲ. ಸಮಾಧಾನವೇ ?

ನಾರಾಯಣಮೂರ್ತಿಗಳು ಮುಂದೆ ಇಂತಹ ವಿವಾದಗಳಿಗೆ ಎಡೆಮಾಡಿಕೊಡದಿರುವುದೇ ಕ್ಷೇಮ !
ನಮ್ಮವರೇ ಆದ ಆದರ್ಶಪ್ರಾಯರಾದ ವ್ಯಕ್ತಿಗಳ ಬಗ್ಗೆ ಸಂತೋಷ, ಮೆಚ್ಚುಗೆ ಇರಬೇಕಾದದ್ದು ಒಮ್ಮ ಸಾಮಾನ್ಯವಾದ ಸಂಗತಿ. ಅದಕ್ಕೆ ಬೇರೆ ಏನೊ ಬಣ್ಣ ಕಟ್ಟಬೇಡಿ.

ಉದಾ : ನಮ್ಮ ಸಂಪದದ ಸೈಟಿನ ನಾಡಿಗರು ಒಳ್ಳೆಯ ಸಂಘಟಕರು. ಒಂದು ಕನ್ನಡಪರ ಕೆಲಸವನ್ನು ಮುತುವರ್ಜಿಯಿಂದ ಮಾಡುತ್ತಿದ್ದಾರೆ. ಒಂದು ವೇಳೆ ಅವರು ತಮಗೆ ತಿಳಿದ ವಿಷಯ ಹೇಳಿದರೆ, ಹೇಳಿದಮಾತನ್ನೇ ಆಕಾಶಕ್ಕೇರಿಸಿ ಹಂಗಾಮ ಮಾಡುವುದು ಒಳ್ಳೆಯದಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 12, 2007 - 8:42pm — smurthygr

Re: ನಾರಾಯಣ ಮೂರ್ತಿ..ಕ್ಷಮೆ ಯಾಚಿಸಿದರೂ ತಿಳಿಯಾಗದ ವಿವಾದ

smurthygr's picture

ನನಗೆ ಅನಿಸಿದ ಮಟ್ಟಿಗೆ ಇಲ್ಲಿ ನಾರಾಯಣ ಮೂರ್ತಿಗಳು ರಾಷ್ಟ್ರ ಗೀತೆಗೆ ಗೌರವ ತೋರಿಸಿಲ್ಲ ಎನ್ನುವುದಕ್ಕಿಂತ "ಪರದೇಶದವರಿಗೆ ಹಿಂಸೆ ಆಗಬಹುದು" ಎಂದಿದ್ದು ಬೇಸರದ ಸಂಗತಿ.  ಇನ್ನೂ ನಮ್ಮ ಗುಲಾಮ mentality ಹೋಗಿಲ್ಲ ಅಂತ ಅನ್ನಿಸಲ್ವ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 12, 2007 - 3:08pm — mahesha

ಪಗರಣಕ್ಕೆ ಕೊನೆ

mahesha's picture

ಕುವರ(?) ಅಸೋಕ..

ಹೆಂಗೆ ಎಲ್ಲಿರಿಗೂ ಅಬಿವೆಕುತಿ "ಸೊತಂತ್ರ್‍ಯ" ಇರುವುದೋ, ಹಂಗೆ ನಮ್ಮ ಸಾಸಕರಿಗೂ ಐತೆ.

ಯಾಕಪ್ಪ ಅವರು 'ಅಭಿವ್ಯಕ್ತಿ ಸೊತಂತ್ರ್‍ಯ' ಕಂಡು ನಿಮ್ಗೆ ಪೊಟೇ ಉರಿ..... Laughing out loud

ಇವ್ರು ಹಿಂಗೆ ಕಿತ್ತಾಡಿಯಾದ್ರು ಜನಗೊಳಿಗೆ ತುಸು ಕುಸಿಕೊಡ್ಲಿ. ಒಳ್ಳೇ ಕೆಲಸ-ಗಿಲಸ ಮಾಡಿಯಂತೂ ಕುಸಿ ಕೊಡಕ್ಕಿಲ್ಲ. Sad

ನಾವ್ ಇದನ್ನೆಲ್ಲ ನೋಡಕಂಡು 'ಮಸ್ತ್ ಮಜಾ ಮಾಡೋಣ' Smiling

======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 12, 2007 - 6:15pm — mahesha

NRNಗೆ SLಬೈರಪ್ಪನವರ ಬೆನ್‌ಬಲ....

mahesha's picture

NRNಗೆ SLಬೈರಪ್ಪನವರ ಬೆನ್‌ಬಲ....

ಸರಿ ಹೋಯ್ತು.. ಇನ್ನು ಇದು ಕೂಡಲೆ ಮುಗಿಯಕ್ಕಿಲ್ಲ. ಆ ಟಿಪ್ಪು ಪಜೀತಿ ತೆರ ಇನ್ನೂ ಎಳ್ದಾಡೋದು ನಿಕ್ಕುವ!! Sad

=====================================
( ಮಸ್ತ್ ಮಜಾ ಮಾಡಿ Laughing out loud )

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 12, 2007 - 5:50pm — mahesha

ನಮ್ಮ ದೇಸಕ್ಕೆ president

mahesha's picture

ನಮ್ಮ ದೇಸಕ್ಕೆ president ಆಗಕ್ಕೆ ಈವಯ್ಯ ಒಬ್ನೇ ಇರೋದಾ?

ಈ ಸರತಿ ನಂಗೆ, ಒಬ್ಳು ಹೆಂಗಸು presidentಉ ಆಗ್ಲಿ ಅಂತ ಹಂಬಲ.

ಹಿಂಗಂದವೊತ್ತಿಗೆ ಒಬ್ರು.. "ನಮ್ಮ "ICEವರ್ಯಾ ರೈ" ಆದ್ರೆ ಚಂದಾಗಿರ್ತೈತೆ ನೋಡಕ್ಕೆ Laughing out loud " ಅಂದ್ರು.. Smiling
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೌಂಟರ್ ಪಾಯಿಂಟ್ !
  • "ಓದುವ ಸುಖ, ಬರೆಯುವ ಸುಖ....." - ಒಂದು ಚಿಂತನೆಗೆ ಹಚ್ಚುವ ಲೇಖನ
  • ನಾಳೆ ನೀವೂ ಮಾಯ.............
  • ಇನ್ಫಿ ಮೂರ್ತಿ ಬಗ್ಗೆ `ಒನ್' ಜೋಕ್!
  • ಸುದ್ದಿಪುಟಗಳಲ್ಲಿ 'ಸಂಪದ'
Syndicate content

ಲೇಖಕರು

smurthygr's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
  • ಬೆಂಗಳೂರು ಸುಧಾರಿಸಲು ಸಹಾಯ ಮಾಡಿ
  • ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
  • ಮುಕ್ತ...ಮುಕ್ತ...ಸಾಹಿತ್ಯ ಬೇಕು...
  • ಕನ್ನಡ ಕಸ್ತೂರಿ
  • Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
  • ಜಿಮೇಲ್ ಕನ್ನಡ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: ವೈದ್ಯನಾರಾಯಣಕಥೆ
    July 6, 2008 - 8:48pm
  • yuvapremi
    ಉ: ಕನಸಿನ ಕನ್ಯ
    July 6, 2008 - 8:46pm
  • Narayana
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:38pm
  • ಗಣೇಶ
    ಉ: ವೈದ್ಯನಾರಾಯಣಕಥೆ
    July 6, 2008 - 8:09pm
  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:03pm
  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:01pm
  • ಗಣೇಶ
    ಉ: ಶಾಸಕರ ರಾಜೀನಾಮೆ ರಾಜಕೀಯ
    July 6, 2008 - 7:54pm
  • venkatesh
    ಉ: ಬ್ರಹ್ಮ ಕಮಲ
    July 6, 2008 - 7:44pm
  • Chamaraj
    ಉ: ಕನಸಿನ ಕನ್ಯ
    July 6, 2008 - 5:57pm
  • rameshbalaganchi
    ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
    July 6, 2008 - 4:56pm
ಇನ್ನಷ್ಟು


ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ

— ಶಿಶುನಾಳ ಷರೀಫ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator