'ಸಹೋದರಿ' ಸರಿಯೇ?
ಸಕ್ಕದದ ಸಹೋದರಿ ಸರಿಯಾದ ಪದವೇ?
ನಂಗೆ ಗೊತ್ತಿರುವ ಹಾಗೆ ಸಹೋದರ -> ಸಹ + ಉದರ , ಉದರ = ಹೊಟ್ಟೆ, ಅಂದ್ರೆ ಒಂದೆ ಹೊಟ್ಟೆಯಲ್ಲಿ ಹುಟ್ಟಿದವನು ಮತ್ತು ಹುಟ್ಟಿದವಳು ಎರಡಕ್ಕೂ 'ಸಹೋದರ'ನೇ ಬಳಸಬೇಕಲ್ಲವೇ?
ಇನ್ನು ಸಹ+ಉದರಿ = ಸಹೋದರಿ ಬಳಕೆ ಯಾಕೆ?....ಇಲ್ಲಿ ಉದರಿ ಅಂದ್ರೇನು? ![]()
ಕನ್ನಡದಲ್ಲಿ ಈ ಗಲಿಬಿಲಿಯಿಲ್ಲ
ಅಣ್ಣ - ಅಕ್ಕ, ತಮ್ಮ -ತಂಗಿ ಎನ್ನುತ್ತೇವೆ.

- Login or register to post comments
- 685 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
Re: 'ಸಹೋದರಿ' -ಸೋದರಿ
ಹೌದಲ್ಲ,ಸಹೋದರ ಶಬ್ದದ ಕನ್ನಡೀಕರಣದ ಮೂಲಕ ಸಹೋದರಿ ಬಂದಿರಬಹುದೇ? ಸೋದರಿ ಶಬ್ದದ ಮೂಲ ಏನು?
'ಸಹೋದರಿ' vs ಸೋದರಿ
ವಯ್ಬವರೇ....
೧) ಸಂಸ್ಕೃತದಲ್ಲಿ ಸಮಾಸಗಳು ಒಂದು ದೊಡ್ಡ ಗಲಿಬಿಲಿ-ಗೊಂದಲವೇ ಸರಿ. "ಕನ್ನಡಕ್ಕೆ ಬೇಕು ಕನ್ನಡ ವ್ಯಾಕರಣ"ನೋಡಿರಿ.
೨) ಸಮಾಸ ಬಿಡಿಸುವಾಗ ಹೇಗೆ ಬಿಡಿಸಬೇಕು ಎಂದು ಒಂದು ಸರಿಯಾದ ದಾರಿಯಿಲ್ಲ. ಬಿಡಿಸಿ, ಬಿಡಿಸಿ ಕೊನೆಗೆ ಯಾವುದು ಹೆಚ್ಚು ಸರಿಯೆನಿಸುವುದೋ ಅದನ್ನು ಇಟ್ಟುಕೊಳ್ಳಬೇಕು.
ಉದರ = ಹೊಟ್ಟೆ
ವೃಕೋದರ = ನರಿ ಹೊಟ್ಟೆ; ನರಿಯ ಹೊಟ್ಟೆ;ನರಿಯಂತೆ ಹೊಟ್ಟೆ; ನರಿಯಂತೆ ಹೊಟ್ಟೆ ಉಳ್ಳವನು; ಭೀಮ
ಸಹೋದರ = ಜೊತೆ ಹೊಟ್ಟೆ; ಹೊಟ್ಟೆಯ ಜೊತೆಗೆ; ಒಂದೇ ಹೊಟ್ಟೆಯಲ್ಲಿ; ಒಂದೇ ಹೊಟ್ಟೆಯಲ್ಲಿ ಹುಟ್ಟಿದವ(ನು/ಳು/ದು )
ನೋಡಿ ಬಿಡಿಸುವುದು ಎಷ್ಟು ತಲೆ ನೋವು.
ಗೊತ್ತಿರುವ(ಮೊದಲೇ ಅದರ ಒಟ್ಟು ತಿಳಿವು ತಲೆಯಲ್ಲಿ ಇರುವ) ಸಮಾಸ ಒರೆಗಳಾದರೆ ಓಕೆ, ಆದರೆ ಯಾವುದಾರು ಒಂದು ಹೊಸತು ಸಮಾಸ ಒರೆ ಬಂದರೆ ಪುಲ್ ಗಲಿಬಿಲಿ. ಮಾದರಿ ( 'ಸಮ್ಯಗ್ದರ್ಶನನಿಷ್ಠೆ'
)
ಸಂಸ್ಕೃತದಲ್ಲಿ "ಸಹೋದರ" ಅಂದರೇ ಗಂಡಸೇ ಆಗಿರಬೇಕಿಲ್ಲ. ಹಾಗೇ 'ಸಹೋದರೀ' ಹೆಣ್ಣೇ ಆಗಿರಬೇಕಿಲ್ಲ.
"ದಾರ" ಪುಲ್ಲಿಂಗ ಏಕವಚನ; ಅರ್ಥ "ಹೆಂಡತಿ"
" ಅಂತ ಕೇಳಿದರೆ ಅದಕ್ಕೆ ಉತ್ತರವಿಲ್ಲ. ( ಅಮರಕೋಶದಲ್ಲೋ, ಇನ್ನೆಲ್ಲೋ ಹೇಳಿದ್ದಾರೆ ಅದಕ್ಕೆ ಎಂಬ ಉತ್ತರದ ಹೊರತು )
"ಪಾದಪ" ಪುಲ್ಲಿಂಗ ಏಕವಚನ; ಅರ್ಥ "ಗಿಡ", "ಈಗ ಪಾದಪ ಹೇಗೆ ಪುಲ್ಲಿಂಗ
ಹಿಂಗೇ ಬೇಕಾಷ್ಟು ಸಿಗುತ್ತವೆ. ಒಟ್ಟಿನಲ್ಲಿ ಸಕ್ಕದದಲ್ಲಿ "ಲಿಂಗ ತೀರ್ಮಾನ ಹೇಗೆ" ಎನ್ನುವುದಕ್ಕೆ ಉತ್ತರವಿಲ್ಲ. ಅದಕ್ಕೆ ಅದರಲ್ಲಿ ಒಂದು noun ಯಾವ gender ಎಂದು ಹೇಳುವುದು ದೊಡ್ಡ ಕಷ್ಟ. ಇದಕ್ಕೆ ಅಮರಕೋಶ, ಮುಂತಾದ ಕೋಶಗಳನ್ನು ಉರು ಹೊಡೆಯುವುದು.
ಕನ್ನಡದಲ್ಲಿ ಈ ಪಜೀತಿ ಇಲ್ಲ. ಕನ್ನಡದ ನಾಲ್ಕು ಲಿಂಗಗಳನ್ನು ನಾವು ಸಲೀಸಾಗಿ ಪತ್ತೆ ಮಾಡುತ್ತೇವೆ. ಅದು ಹೇಗೆ ಎಂದು ಗೊತ್ತು
ಇಲ್ಲಿ ಸಹೋದರ ಮತ್ತು ಸೋದರ ಎರಡೂ ಸರಿ.
ಸಹ+ಉದರ, ಸ+ಉದರ ಎರಡೂ ಸರಿ..
'ಸಹ' ಇದು ಒಂದು ಒರೆ(ಪದ). ಇದು 'ಜೊತೆಗೆ' ಎಂದು ಹೇಳುವುದು.
'ಸ' ಇದು ಒಂದು prefix(ಉಪಸರ್ಗ) ಇದು "ಜೊತೆ"ಗೆ ಎಂದು ತೋರುವುದು.
"ಸಾಂಬಾಸದಾಶಿವ" = ಸ + ಅಂಬಾ + ಸದಾಶಿವ = ಅಮ್ಮಳ ಜೊತೆಗಿರುವ ಶಿವ.
ಸಾರ್ಥಕ = ಸ + ಅರ್ಥಕ = ಅರ್ಥದ ಜೊತೆಯಿರುವುದು.

ಸಾನುಭಾವ = ಸ + ಅನುಭಾವ = with feeling
ಸಾಷ್ಟಾಂಗ = ಸ + ಅಷ್ಟ + ಅಂಗ = ಎಂಟು partಗಳ ಜೊತೆಗೆ
======
Re: 'ಸಹೋದರಿ' vs ಸೋದರಿ
ಸುನಾಥ
ವೃಕ ಇದರ ಅರ್ಥ ತೋಳ ಎಂದಾಗುತ್ತದೆ; ನರಿ ಎಂದಲ್ಲ.
ವೃಕ ನರಿಯಲ್ಲ, ತೋಳ ಇದಕ್ಕೆ ನನ್ನಿ!!!
ವೃಕ ನರಿಯಲ್ಲ, ತೋಳ ಇದಕ್ಕೆ ನನ್ನಿ!!!
ನನಗೂ ತುಸು ಗೊಂದಲವಿತ್ತು.
ಆದುದಿಂದ ಅಲ್ಲಿ
"ವೃಕೋದರ = ತೋಳ ಹೊಟ್ಟೆ; ತೋಳದ ಹೊಟ್ಟೆ; ತೋಳದಂತೆ ಹೊಟ್ಟೆ; ತೋಳದಂತೆ ಹೊಟ್ಟೆ ಉಳ್ಳವನು; ಭೀಮ" ಎಂದು ಇರಬೇಕು.
ಶೃಗಾಲ,ಶಿವ = ನರಿ!!
ಶೃಗಾಲಮತಿ = ನರಿಜಾಣ್ಮೆ; ನರಿಯ ಜಾಣ್ಮೆ; ನರಿಯಂತೆ ಜಾಣ್ಮೆ; ಸಿಕ್ಕಾಪಟ್ಟೆ ಜಾಣ
======

Re: ವೃಕ .....ನನ್ನಿ all in one ಪದವೇ?
thanksಗೆ ನನ್ನಿ ಅಂತಿದ್ದೀರಿ ಅಂದ್ಕೊಂಡಿದ್ದೆ...sorryಗೂ ಅದೇ ನಡೆಯುತ್ತಾ...?
Re: ವೃಕ .....ನನ್ನಿ all in one ಪದವೇ?
ಅಲ್ಲಿ ನನ್ನಿ thanks, sorry ಅಲ್ಲ.
sorry = ಅಳಲು.
excuse = ಮನ್ನಿಸಿ
"'ವೃಕ ನರಿಯಲ್ಲ, ತೋಳ' ಇದಕ್ಕೆ thanks" ಅಂತ ಅದು. Clear?
======================================
Re: ವೃಕ .....ನನ್ನಿ all in one ಪದವೇ?
tubelight ಈಗ ಹತ್ತಿತು..! ನಿಜ ಹೇಳಬೇಕೆಂದರೆ ಸುನಾಥರ ಪ್ರತಿಕ್ರಿಯೆ ಗಮನಿಸಿರಲಿಲ್ಲ!
ಅಂತೂ ಪಜ್ಜಳಿಸಿತು ಬೆಳಕ್ಕೋಲು....
ಕಡವಳ...!!
.
ಅಂತೂ ಇಂತೂ ಎಂತೋ ಹೊತ್ತಿತು ತಮ್ಮ ಬೆಳಕ್ಕೋಲು
ಕೆಲಸ ತೀರಿತು, ಮನೆಗೆ ಹೋಗಿ, ನಾಳೆ ಬಂದೇನು.... ...
"ಎಲ್ಲರಿಗೂ ಒಳ್ಳೇದು ಆಗಲಿ. ನಲಿವಿರಲಿ."
======================================
ಉದರಿ..
ಉದರಿ ಅಂದರೆ ಬಿಟ್ಟಿ, ಪುಕ್ಕಟೆ, ಮುಪತು ಅಂತ ಅರಿವೂ ಇದೆ.
ಉದಾರ => ಉದಾರಿ => ಉದರಿ ಆಗಿರಬೇಕು.
======================================
ಉ: ಉದರಿ..
ಉದ್ರಿ ಅಥವಾ ಉದ್ದರಿ ಸರಿಯಾದ ಪದ ಅಲ್ಲವೇ? ಉದರಿ ಅಂತ ಎಲ್ಲೂ ಓದಿದ ನೆನಪಾಗ್ತ್ಹಿಲ್ಲ.
'ಉದ್ರಿ' ಪದ ಉರ್ದುವಿನಿಂದ ಬಂದಿರಬಹುದೇ?
shaamala
ಉ: 'ಸಹೋದರಿ' ಸರಿಯೇ?
ಸಹೋದರಿ ಸರಿ, ಅನಾವಶ್ಯಕ ಗೊಂದಲಗಳನ್ನೆಬ್ಬಿಸಬಾರದು, ಕುಮಾರ-ಕುಮಾರಿ ಗಮನಿಸಿ ಸ್ರ್ತೀಲಿಂಗವನ್ನು ನಿರ್ದೇಶಿಸಿ ಹೇಳುವಾಗ 'ಇ' ಕಾರವನ್ನು ಸೇರಿಸಿ ಹೇಳುವುದು ರೂಢಿಯಲ್ಲಿದೆ ಇದನ್ನು ಜನ ಒಪ್ಪಿದ್ದಾರೆ, ಅರ್ಥಮಾಡಿಕೊಂಡಿದ್ದಾರೆ, ಬಳಸುತ್ತಿದ್ದಾರೆ ಸುಮ್ಮನೆ ತೌಡುಕುಟ್ಟುವುದು ಬೇಡ. ಜನಿಸಿದ ಶಿಶುವಿಗೆ ಸಂಬಂಧಪಟ್ಟಮಾತಿದು, ತಾಯಿಯನ್ನಲ್ಲ.
ಉ: 'ಸಹೋದರಿ' ಸರಿಯೇ?
"ಅನಾವಶ್ಯಕ ಗೊಂದಲ" ಯಾರು ಎಬ್ಬಸ್ತಾ ಇರೋದು? ... ನಾನು ಸಹೋದರಿ ತಪ್ಪು ಎಂದು ಹೇಳಲಿಲ್ಲ ...ಅದಕ್ಕೆ ತಲೆಬರಹದಲ್ಲಿ "?" ಇದೆ. ಕೊಂಚ ಸರಿಯಾಗಿ ತಲೆಬರಹ ಓದಿ ಸಾರ್.
ಉ: 'ಸಹೋದರಿ' ಸರಿಯೇ?
ಮುಂದುವರೆದು ಸಹೋದರ ಬಳಸಬೇಕಲ್ಲವೇ ಎಂದು ಪ್ರಶ್ನಿಸಿದ್ದೀರಿ ಇದರರ್ಥ ಸಹೋದರಿ ತಪ್ಪು ಎಂದು ನನಗೆ ತಿಳಿದಿರುವಷ್ಟು ಕನ್ನಡದಲ್ಲಿ ಅರ್ಥಮಾಡಿಕೊಂಡಿದ್ದೇನೆ. ನನಗೆ ಕನ್ನಡವೇ ಸರಿಯಾಗಿ ಬರುವುದಿಲ್ಲವೆಂದು ನೀವು ಭಾವಿಸಿದರೆ ಧನ್ಯವಾದ, ವೀರ ಕನ್ನಡಿಗರಿಗೆ ಜಯವಾಗಲಿ
ಉ: 'ಸಹೋದರಿ' ಸರಿಯೇ?
ನಾನು ಬರೆದಿರುವುದು ಹೀಗೆ :- ಎರಡಕ್ಕೂ 'ಸಹೋದರ'ನೇ ಬಳಸಬೇಕಲ್ಲವೇ?
ಇಲ್ಲೂ "?" ಇದಿಯಲ್ಲ ಸಾರ್ . ಅಂದರೆ ನಾನು ಕೇಳುತ್ತಿದ್ದೇನೆ ಹೊರತು ನನ್ನ ಅನಿಸಿಕೆಯನ್ನು ಹೇರುತ್ತಿಲ್ಲ.
ಉ: 'ಸಹೋದರಿ' ಸರಿಯೇ?
ಸೋದರಿ, ಸಹೋದರಿ ಎರಡೂ ಸರಿ ಒಂದೇ ಹೊಟ್ಟೆಯಲ್ಲಿ ಅಂದರೆ ಒಂದೇ ತಾಯಿಯ ಬಸಿಱಿನಲ್ಲಿ ಹುಟ್ಟಿದವರೆಂದೇ ಅರ್ಥ.