Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವ್ಯಾಕರಣ

`ಓವಿ ' ಪದದ ಅರ್ಥವೇನು?

April 11, 2007 - 12:44pm — bhcsb

`ಸಂಪದ.ನೆಟ್' ಮಿತ್ರರೆ,

ನಾನು ಒಂದು ಪುಸ್ತಕವನ್ನು ಓದುತ್ತಿರುವಾಗ, ವಾಕ್ಯವೊಂದರಲ್ಲಿ `ಓವಿ' ಯಷ್ಟಾದರೂ ಓದಬೇಕು ಎಂದಿತ್ತು. ನನಗೆ `ಓವಿ' ಪದದ ಅರ್ಥವು `ಒಂದು ಪುಟವೋ ಅಥವಾ ಒಂದು ಅಧ್ಯಾಯವೋ' ಎಂದು ತಿಳಿಯುತ್ತಿಲ್ಲ. ನಿಮಗೆ ಗೊತ್ತಿದ್ದರೆ ತಿಳಿಸಿ.

ಧನ್ಯವಾದಗಳು

ಚಂದ್ರಶೇಖರ ಬಿ.ಎಚ್.
೧೧ ಏಪ್ರಿಲ್ ೨೦೦೭, ಭಾಕಾಮಾ ಮಧ್ಯಾಹ್ನ ೧೨.೦೩

‹ ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ ವ್ಯಾಕರಣ : ತದ್ಧಿತ ›
  • ವ್ಯಾಕರಣ
Ornamental seperator
  • Login or register to post comments
  • 558 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 11, 2007 - 1:41pm — mahesha

Re: `ಓವಿ ' ಪದದ ಅರ್ಥವೇನು?

mahesha's picture

ಅದು 'ಒಸಿ' ಯಷ್ಟಾದರು ಎಂದಿರಬಹುದೇ?...

ಇರಲಿ.. ಯಾವ ಹೊತ್ತಗೆ?
======
Smiling

  • Login or register to post comments
  • link
  • Email this ಪ್ರತಿಕ್ರಿಯೆ
April 11, 2007 - 3:18pm — Sunil Jayaprakash

ಟಿ: `ಓವಿ ' ಪದದ ಅರ್ಥವೇನು?

Sunil Jayaprakash's picture

ಓವಿ ಪದದ ಹುಡುಕಾಟ ನಡೆಸುತ್ತಿದ್ದಾಗ ಕನ್ನಡಸಾಹಿತ್ಯ.ಕಾಂನಲ್ಲಿ ಕುಸುಮಾ ಶ್ಯಾನುಭಾಗ ಎನ್ನುವವರು ಓವಿಯನ್ನುಅಕ್ಷರಲೋಕದಲ್ಲಿ ಅಜ್ಜಿಯದೊಂದು ಹೆಜ್ಜೆ ಎಂಬ ತಮ್ಮ ಒಂದು ಕಥೆಯಲ್ಲಿ ಬಳಸಿರುವುದು ಅರಿವಿಗೆ ಬಂತು. ಓವಿ ಪದದ ಅರ್ಥ ಹುಡುಕಾಟದಲ್ಲಿ ಒಂದು ಕಥೆ ಓದಲು ಸಿಕ್ಕಿತು Eye-wink

  • Login or register to post comments
  • link
  • Email this ಪ್ರತಿಕ್ರಿಯೆ
April 11, 2007 - 7:11pm — Sunil Jayaprakash

ಉ: `ಓವಿ ' ಪದದ ಅರ್ಥವೇನು?

Sunil Jayaprakash's picture

ಓವಿ ಪದ ಸದ್ಯಕ್ಕೆ ಇನ್ನೂ ಸಿಕ್ಕಿಲ್ಲ. ಆದರೆ ಪಂಡಿತ ಕವಲೀ ಎಂಬುವರ ಕಸ್ತೂರೀ ಕೋಶದಲ್ಲಿ ಓವು ಪದ ಸಿಕ್ಕಿತು.

ಓವು - ಕಾಪಾಡು, ಉಪಚರಿಸು, ಪ್ರೀತಿಸು, ಲಕ್ಷಿಸು, ಗೌರವಿಸು, ಮನ್ನಣೆ ನೀಡು. ಇಂಗ್ಲೀಷಿನ owing ಗೆ ಹತ್ತಿರವಾಗಿದೆ ಇದು.
ಓವ - (=ಓಪ, ಓಮ ನೋಡಿರಿ), ಒಬ್ಬ, ಪರಮಾತ್ಮ, ರಕ್ಷಕ.
ಓಪ - ಕಾಪಾಡುವವ, ರಕ್ಷಕ, ಪ್ರೀತಿಸುವವ, ಪ್ರಿಯ, ಗಂಡ, ಸ್ವಾಮಿ, ಯಜಮಾನ.
ಓಮ - ದಯೆ, ಕೃಪೆ, ಸಹಾಯ, ನೆರವು, ಉಪಕಾರ, ವಾಮ, ಎಡಗಡೆ, ಒಂದು ಬಗೆಯ ಸುಗಂಧ ದ್ರವ್ಯ.

ನನಗೆ ಹೇಳಬೇಕೆನಿಸಿದ ಮತ್ತೊಂದು ವಿಷಯವೆಂದರೆ, ಕನ್ನಡದಲ್ಲಿ ಆವ, ಈವ (ಕೆಲವು ಸೀಮೆಯಲ್ಲಿ ಆವಿ, ಈವಿ ಅಂತ ಇರಬಹುದು) ಎಂಬ ಪದಗಳಿವೆ.
ಆ (ಆ ಎನ್ನುವುದು ಅದು, ಅವನು, ಅಲ್ಲಿ, ಅತ್ತ ಎಂಬುದರ ಸರ್ವನಾಮರೂಪದಲ್ಲಿ ಬಳಕೆಯಾಗುತ್ತದೆ) + ಪ -> ಆವ
ಈ(ಈ ಎನ್ನುವುದು ಇದು, ಇವನು, ಇಲ್ಲಿ, ಇತ್ತ ಎಂಬುದರ ಸರ್ವನಾಮರೂಪದಲ್ಲಿ ಬಳಕೆಯಾಗುತ್ತದೆ) + ಪ -> ಈವ

ಹಾಗೆಯೇ ಊ (ಉದು, ಉವನು, ಉಲ್ಲಿ ಎಂಬ ಬಳಕೆಗಳೂ ಇದೆ ಮತ್ತು ನಾವದನ್ನು ದಿನವೂ ಬಳಸುತ್ತಿರುತ್ತೇ

ವೆ. ಇದರ ಬಗ್ಗೆ ದೊಡ್ಡ ಚರ್ಚೆಯೇ ಆಗಿಹೋಗಿದೆ Eye-wink

ನೋಡಿ, ಕನ್ನಡದ ಬಗ್ಗೆ ನಾವು ತಿಳಿದುಕೊಳ್ಳುವುದು ತುಂಬಾ ಇದೆಯಲ್ಲವೇ Eye-wink ಬಹುಶಃ ಓವಿಯಷ್ಟನ್ನಾದರೂ ಎಂದರೆ ಒಂದುಚೂರಾದರೂ ಅಥವಾ ನಮಗಿಷ್ಟವಾದ ಭಾಗವನ್ನಾದರೂ ಎಂದು ತಿಳಿಯಬಹುದೇ ?

  • Login or register to post comments
  • link
  • Email this ಪ್ರತಿಕ್ರಿಯೆ
April 11, 2007 - 8:02pm — mahesha

ಅವ, ಇವ, ಉವ, ಎವ

mahesha's picture

ಸುನಿಲ...

ಅವನು, ಇವನು ಮುಂತಾದವನ್ನು "ಸರ್ವನಾಮ" ಎಂದು ಕರೆಯುವುದು ತಪ್ಪು ಎಂದು ಶಂಕರ ಭಟ್ಟರ ಮಾತು "ಕನ್ನಡ ಸರ್ವನಾಮಗಳು"( ಏಕೆ ಅಲ್ಲಿ ನೋಡಬೇಕು ).

ಅವನು, ಇವನು, ಉವನು, ಎವನು/ಯಾವನು...ಒಬ್ಬನು "ಆಗ/ಅಲ್ಲಿ, ಈಗ/ಇಲ್ಲಿ, ಊಗ/ಉಲ್ಲಿ, ಏಗ/ಯಾವಗ/ಎಲ್ಲಿ" ಇದ್ದಾನೆ/ಇದ್ದನು ಎಂದು ತೋರುವುದು.

ಇನ್ನು...

ಹೇಗೆ
ಆ + ಪೊತ್ತು = ಅವೊತ್ತು ( ತೆಲುಗು ತ್ರಿಕ ಸಂಧಿ ತೆರ , ಕನ್ನಡದ ಆದೇಶ ಸಂಧಿ ಪವರ್ಗಕ್ಕೆ ವಕಾರಾದೇಶ )
ಈ + ಪೊತ್ತು = ಇವೊತ್ತು

ಆ + ಆಗ = ಅವಾಗ
ಈ + ಆಗ = ಇವಾಗ

ತೆಲಗು ತ್ರಿಕ ಸಂಧಿ( ನನ್ನ ಗೆಳೆಯ ಹೇಳಿದಂತೆ )
ಏ + ಕಡಾ = ಎಕ್ಕಡಾ
ಆ + ಕಡಾ = ಅಕ್ಕಡಾ
ಈ + ಕಡಾ = ಇಕ್ಕಡಾ

ತೆಲುಗಲ್ಲಿ "ಏ ಪನಿ" ಅಂದರೆ "ಯಾವ ಕೆಲಸ" ಅಲ್ವಾ? ಕನ್ನಡದಲ್ಲಿ ಏ ಕೆಲವು ಒರೆಗಳಲ್ಲಿ "ಯಾ/ಯಾವ" ಆಗಿದೆ.
ತಮಿಳು "ಎವನೋ ಒರುವನ್ ವಾಸಕ್ಕಿರಾನ್ " ( 'ಅಲೈಪಾಯುದೇ' Smiling )

ಇಲ್ಲಿ
ಆ - ( ಆಗ, ಆಲ್ಲಿ, ದೂರದಲ್ಲಿ ),
ಈ - ( ಈಗ, ಇಲ್ಲಿ, ಹತ್ತಿರದಲ್ಲಿ ),
ಊ - ( ಊಗ, ಉಲ್ಲಿ, somewhere )
ಏ - ( ಏಗ/ಯಾವಾಗ, ಎಲ್ಲಿ, where )

ಈ ಒರೆಗಳು ಅರ್ತವನ್ನು ಬದಲಿಸುವುವು.

ಹಾಗೆ
ನೋಡ್ + ಪ = ನೋಡ್ಪ => ನೋಡ್ವ => ನೋಡುವ
ನೋಡ್ಪನ್ => ನೋಡ್ವನ್ => ನೋಡುವನು
ನೋಡ್ಪಳ್ => ನೋಡ್ವಳ್ => ನೋಡುವಳು
ನೋಡ್ಪರ್‍ => ನೋಡ್ವರ್‍ => ನೋಡುವರು
ನೋಡ್ಪುದಂ? => ನೋಡ್ವುದು => ನೋಡುವುದು

ಆ + ಪ + ನು = ಅವನು
ಈ + ಪ + ಳು = ಇವಳು
ಊ + ಪ + ರು‍ = ಉವರು
ಏ + ಪ + ರು‍ = ಎವರು‍ ( ತೆಲುಗಲ್ಲಿ ಇದೆ, ಎವರು, ಎದು, ಎಂತ, ಎಂದುಕು; ಕನ್ನಡದಲ್ಲಿ ಬಳಕೆಯಲ್ಲಿಲ್ಲ )

ಈ 'ಪ/ವ' ಒಬ್ಬ human ಅನ್ನು ತೋರಿಸುತ್ತದೆ. ಹಾಗೆ 'ಪು/ವು' non-human ಅನ್ನು ತೋರಿಸುವುದು.

======
Smiling

  • Login or register to post comments
  • link
  • Email this ಪ್ರತಿಕ್ರಿಯೆ
April 11, 2007 - 8:14pm — sunaath

Re: `ಓವಿ ' ಪದದ ಅರ್ಥವೇನು?

sunaath's picture

ಸುನಾಥ
ಓವಿ ಇದು ಮರಾಠಿಯಲ್ಲಿ ಪ್ರಯೋಗದಲ್ಲಿದ್ದ ಒಂದು ಪದ್ಯ ಪ್ರಕಾರ. ಕನ್ನಡದಲ್ಲಿ ತ್ರಿಪದಿ, ಚೌಪದಿ ಇತ್ಯಾದಿ ಇದ್ದಂತೆ ಮರಾಠಿಯಲ್ಲಿ ಓವಿ. ಇದನ್ನು ಮಹಾರಾಷ್ಟ್ರದ ಭಕ್ತಸಂತರಲ್ಲಿ ಕೆಲವರು ತಮ್ಮ ಭಕ್ತಿ ಕಾವ್ಯವನ್ನು, ಉದಾಹರಣೆಗೆ ಅಭಂಗಗಳನ್ನು ಓವಿ ರೂಪದಲ್ಲಿ ಬರೆದಿದ್ದಾರೆ.

  • Login or register to post comments
  • link
  • Email this ಪ್ರತಿಕ್ರಿಯೆ
April 11, 2007 - 10:18pm — Sunil Jayaprakash

ನನ್ನಿ: `ಓವಿ ' ಪದದ ಅರ್ಥವೇನು?

Sunil Jayaprakash's picture

ಓವಿ ಇದು ಮರಾಠಿಯಲ್ಲಿ ಪ್ರಯೋಗದಲ್ಲಿದ್ದ ಒಂದು ಪದ್ಯ ಪ್ರಕಾರ

ಈ ಮಾಹಿತಿಯನ್ನು ಹಂಚಿಕೊಂಡದ್ದು ಸವಿನೆರವಾಯಿತು. ಅಂದ ಹಾಗೆ, ಇದರ ಗುಣಲಕ್ಷಣಗಳೇನು ಎಂದು ತಿಳಿಸಲು ಸಾಧ್ಯವೇ. ಈ ಪದ್ಯ ಪ್ರಾಕಾರ ಸಣ್ಣದಾಗಿರುತ್ತವೆಯೇ. ಬಹುಶಃ ಹಿಂದೂಸ್ತಾನಿ ಸಂಗೀತಾಭ್ಯಾಸ ಮಾಡಿದವರಿಗೆ ಹೆಚ್ಚು ತಿಳಿದಿರುತ್ತದೆಯೋ ಏನೋ ?

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೇಮದ ಓಲೆ
  • ತೆರೆದಿದೆ ಮನೆ ಓ ಬಾ ಅತಿಥಿ - ಸಾಹಿತ್ಯ
  • ಪುರದ ಪಾಪಿಗಳು
  • ನಾನು ಯಾವ ಆತ್ಮ
  • ನನ್ನ ಕಾವ್ಯ
Syndicate content

ಲೇಖಕರು

bhcsb's picture

ಪೂರ್ಣ ಹೆಸರು
bhcsb

ಪರಿಚಯ

ನಾನು ಬೆಂಗಳೂರಿನವನು. ಬರವಣಿಗೆ, ಪ್ರವಾಸ, ಫೋಟೋಗ್ರಫಿ, ಮಿತ್ರರು, ಇತ್ಯಾದಿ ನನ್ನ ಆಸಕ್ತಿಗಳು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ನುಡಿಯೊಳು ಹೊಳೆವುದು ನಾಡಿನ ನಡವಳಿ.
ನುಡಿಯೊಳು ಕ೦ಪಿಡುವುದು ಬದುಕು
ನುಡಿಯಿರದವನಿಗೆ ಇಲ್ಲವು ನಾಡೂ
ನುಡಿಯಲಿ ಸಲ್ಲನದಾವುದಕೂ.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator