Helvetica ಫಾಂಟಿಗೆ ೫೦ ವರುಷ
ವಿಶ್ವದಲ್ಲಿ ಅತಿ ಹೆಚ್ಚಾಗಿ ಬಳಸಲ್ಪಡುವ ಫಾಂಟುಗಳಲ್ಲೊಂದಾದ ಹೆಲ್ವೆಟಿಕ ಫಾಂಟು ಹೊರಬಂದು ಈ ವರ್ಷಕ್ಕೆ ಸರಿಯಾಗಿ ೫೦ ವರ್ಷಗಳಾಗಲಿದೆಯಂತೆ. ಓದಲು ಬಹಳ ಸುಲಭವಾದ ಈ ಫಾಂಟು ಅಮೇರಿಕದ ಸಬ್-ವೇ ಗಳಿಂದ ಹಿಡಿದು ಬಿ ಎಮ್ ಡಬ್ಲು ನಂತಹ ಕಂಪೆನಿಗಳ ಲೋಗೋಗಳಲ್ಲೂ ಬಳಕೆಯಾಗಿದೆಯಂತೆ.
ಸ್ವಿಟ್ಸರ್ ಲ್ಯಾಂಡಿನಿಂದ ಹೊರಬಂದ ಈ ಸುುಂದರ ಫಾಂಟ್ ಬಗ್ಗೆ ಒಂದು ಡಾಕ್ಯುಮೆಂಟರಿ ಸಿನಿಮಾ ಕೂಡ ಹೊರತಂದುಬಿಟ್ಟಿದ್ದಾರೆ. ೫೦ ವರ್ಷ ಸಂದ ಸಂದರ್ಭದಲ್ಲಿ ಇನ್ಯಾವ ಫಾಂಟಿಗೂ ಇಂತಹ ಗೌರವ ಲಭಿಸಿರಲಿಕ್ಕಿಲ್ಲ.
ಮೈಕ್ರೊಸಾಫ್ಟಿನ ತಂತ್ರಾಂಶಗಳೊಂದಿಗೆ ನೀಡಲಾಗುವ Arial ಇತ್ತೀಚೆಗೆ ಜನಪ್ರಿಯತೆ ಪಡೆದಿರುವ ಫಾಂಟು - ಇದು ಹೆಲ್ವೆಟಿಕ ಹೋಲಿಕೆಯದ್ದೇ ಎಂದು ಹಲವರ ಅಭಿಪ್ರಾಯ. ಇವೆರಡರ ಮಧ್ಯೆ ಇರುವ ಚಿಕ್ಕ ಪುಟ್ಟ ವ್ಯತ್ಯಾಸಗಳ ಪಟ್ಟಿ ಇಲ್ಲಿದೆ.

- Login or register to post comments
- 581 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
Re: Helvetica ಫಾಂಟು
ಸಂಸ್ಕೃತದಲ್ಲಿ ಬರೆದಂತೆ ಕಾಣುವ ಇಂಗ್ಲಿಷ್ ಅಕ್ಷರದ ಹೆಸರೇನು? ಡೌನ್‍ಲೋಡಿಗೆ ಸಿಗುತ್ತದೆಯೇ?
Re: Helvetica ಫಾಂಟು
ಏನ್ ಕೇಳ್ತಾ ಇದೀರ್ರಿ?
Re: ಸಂಸ್ಕೃತದ ಛಾಪು ಇರುವ ಇಂಗ್ಲಿಷ್ ಫಾಂಟು
ನನಗೆ fontನ ಹೆಸರು ಬೇಕಿತ್ತು. ಇತ್ತೀಚಿನ ದಿನಗಳಲ್ಲಿ ಸಂಸ್ಕೃತದಲ್ಲ್ಲಿ ಬರೆದ ಭ್ರಮೆ ಹುಟ್ಟಿಸುವ ಇಂಗ್ಲಿಷ್ font ಬಳಕೆಯಾಗುವುದನ್ನು ಕಾಣಬಹುದು.ಅದು ಯಾವ font ಗೊತ್ತೇ?ಈ ಲಿಂಕ್‍ನ documentನ ಪ್ರಥಮ ಪುಟ ನೋಡಿ.
http://www.nitte.ac.in/spoorthi/02%20sreport.pdf
ಇದು ಫಾಂಟ್ ಅಲ್ಲ
ಇದು ಯಾವುದೆ ಫಾಂಟ್ ಬಳಸಿ ಬರೆಯಲಾದ ಅಕ್ಷರ ಅಲ್ಲ. ಇದು ಒಬ್ಬ ಕಲಾವಿದನ ಕಲ್ಪನೆಯಿಂದ ಬಂದ ಚಿತ್ರ ಮಾತ್ರ. ಬೇಕಾದರೆ ಆ ಫೈಲ್ ಅನ್ನು ಝೂಮ್ ಹೆಚ್ಚಿಸಿ ನೋಡಿ. ಅಕ್ಷರವಿದ್ದರೆ ಸರಿಯಾಗಿ ದುಂಡಾಗಿ ದೊಡ್ಡದಾಗಿ ಕಾಣುವುದು. ಚಿತ್ರವಾದಲ್ಲಿ ದೊಡ್ಡ ಚುಕ್ಕೆಗಳು ಕಾಣುವವು.
Re: Helvetica ಫಾಂಟು
ಸಂಸ್ಕೃತದಲ್ಲಿ ಬರೆದ ಭ್ರಮೆ ಹುಟ್ಟಿಸುವ font ಇದೆಯಲ್ಲಾ,ಅದು ಯಾವುದು?ಈ documentನ ಪ್ರಥಮ ಪುಟ ನೋಡಿ.ಅಲ್ಲಿ ಬಳಕೆಯಾಗಿದೆ.
http://www.nitte.ac.in/spoorthi/02%20sreport.pdf
Re: Helvetica ಫಾಂಟು
ಇಲ್ಲಿದೆ ನೋಡ್ರಿ ನಿಮ್ ಫಾಂಟು. ಸಂಸ್ಕೃತದ ಥರಾನೇ ಕಾಣುತ್ತೆ, ಆದ್ರೆ ಇವ್ರು "ಅರಬ್ಬಿಯಿಂದ ತಮಗೆ ಸ್ಪೂರ್ತಿ ಸಿಕ್ಕಿದೆ" ಅನ್ತಾಯಿದ್ದಾರಪ್ಪ. ಏನಾದ್ರಾಗಲಿ ನಮಗೊಂದು ಫಾಂಟು ಸಿಕ್ತಲ್ಲ ಸಾಕು. ಇನ್ನೂ ಸುಮಾರಷ್ಟು ಫಾಂಟುಗಳು ಶ್ರೀಲಿಪಿ ಮತ್ತೆ ಬಹುಶಃ ಅನು ಅನ್ನೋ ಫಾಂಟ್ ಪ್ಯಾಕೇಜಿನಲ್ಲಿವೆ. ಅಂದ ಹಾಗೆ ಈ ಫಾಂಟಿನ ಹೆಸರು ಸಮರ್ಕನ್ ಡಾಟ್ ಟಿಟಿಯೆಫ್.
http://www.pcworld.com/downloads/file/fid,4368-order,1-page,1-c,alldownl...
ಎನಗಿಂತ ಕಿರಿಯರಿಲ್ಲ