ವರನಟ ರಾಜ್‍ಕುಮಾರ್ ಪುಣ್ಯತಿಥಿ
ಕನ್ನಡ ವರನಟ ರಾಜ್‍ಕುಮಾರ್ ಮೊದಲನೇ ಪುಣ್ಯತಿಥಿ ಇಂದು. ವರನಟನ ನೆನಪಿಗೆ ನಾವು ಇದುವರೆಗೆ ಗಮನೀಯವಾದುದನ್ನು ಮಾಡಿಲ್ಲ. ರಾಜ್ ಸ್ಮಾರಕ ರಚನೆಯಾಗಲಿದೆ ಎನ್ನುವ ಭರವಸೆ ಪದೇ ಪದೇ ಕೇಳಿ ಬರುತ್ತಿದೆ. ಅವರ ಬಗೆಗೆ ಖಾಸಗಿಯಾಗಿ ಪುಸ್ತಕ ಪ್ರಕಟಣಾ ಯೋಜನೆಯೂ ಇದೆ. ವರನಟನ ಸ್ಮಾರಕ ಹೇಗಿರಬೇಕು? ಅವರ ಸ್ಮರಣೆಗೆ ನಿರ್ಮಿಸುವ ಸ್ಮಾರಕ ಹೇಗಿರಬೇಕು ಎಂಬ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಸಾದರ ಪಡಿಸುತ್ತೀರಾ?

- Login or register to post comments
- 665 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಕನ್ನಡಿಗರಿಗೆ ಕನ್ನಡದ ಕತೆ ಹೇಳಿದಾತ
ಇಂದು ಕನ್ನಡದ ಮಕ್ಕಳಿಗೆ ಸಾಲೆಯಲ್ಲಿ ಹೇಳುಕೊಡವ ಇತಿಹಾಸದಲ್ಲಿ ನಮ್ಮ ಕನ್ನಡದರಸರ ಅರಿಮೆ ಬಗ್ಗೆ ಕಡಮೆ ಅಂದರೆ ಕಡಮೆ ಇರುವುದು.
ಕನ್ನಡಿಗರಲ್ಲಿ ಕನ್ನಡದ ನೆಲದ, 'ಮಯೂರ, ಪುಲಿಕೇಶ, ಕೃಷ್ಣದೇವರಾಯ" ಮುಂತಾದವರ ಕತೆಗಳನ್ನು ಆಡಿ, ಅವರ ಮನದಲ್ಲಿ ಇವರ ಹೆಸರಗಳನ್ನು ಮಾಸದಂತೆ ಅಚ್ಚು ಒತ್ತಿದಾತ, ಇವರು.
ಇವರ ಸಿನಿಮಾದಲ್ಲಿ ಕನ್ನಡತನವನ್ನು ಹರಡಿದಂತೆ, ಗೋಕಾಕ್ ಮುಂದಾದ ಚಳುವಳಿಗಳಲ್ಲಿ ಕನ್ನಡನೆಲದ ಎಣ್ದೆಸೆಗಳಿಗೂ ತಾನೇ ಹೋಗಿ, ಕನ್ನಡಿಗರನ್ನು ಎಬ್ಬಿಸಿದಾತ, ಇವರು.
ಇವರ ಕೊಡುಗೆಯನ್ನು ನಾವು ನಲ್ಮೆಯಿಂದ ನೆನೆಯೋಣ!!!
======================================
ಕಾವೇರಿಯನು ಹರಿಯಲು ಬಿಟ್ಟು, ವಿಶ್ವೇಶ್ವರಯ್ಯ ಶ್ರಮಪಡದಿದ್ದರೆ, ಕನ್ನಂಬಾಡಿಯ ಕಟ್ಟದಿದ್ದರೇ....
Re: ರಾಜ್ ಹಾಡು ಗುನುಗುತ್ತಾ ಒರೆಬಂಧ ತುಂಬಿ
ಒರೆಬಂಧ
Re: ರಾಜ್ ಹಾಡು ಗುನುಗುತ್ತಾ ಒರೆಬಂಧ ತುಂಬಿ
ಒರೆಬಂಧ ( ಅರಿಸಮಾಸ
)
ಸಕ್ಕತ್.....
ನೀವು ತುಂಬಾಯ್ತಾ?
ನನಗೆ "ಭಾಗ್ಯದ ಲಕ್‌ಷ್ಮಿ ಬಾರಮ್ಮ" ಮೋವಿಯ
"ಇನ್ನು ಹತ್ತಿರ ಹತ್ತಿರ ಬರುವೆಯಾ...
ಬಳಿ ನೀನು ಬಂದಾಗ, ಕಣ್ಣೋಟ ಕಲೆತಾಗ(ಬೆರೆತಾಗ)
ಹೊಸ ಆಸೆ ನನ್ನದೆಯಲ್ಲಿ ಅರಳಿ ಅರಳಿ ಹೊಸತನವನು ಕಂಡೆ.....
...
ಆ ಚಂದಿರ ಸುರಿಯುವ ಚಂದ್ರಿಕೆ
ಈ ಮನಸನು ಕೆಣಕಿದೇ ಕಾಡಿದೆ...
ಏಕಾಂತ ಬಂದ ಮೇಲೆ ಬಿಡು ಸಂಕೋಚವನ್ನು ನಲ್ಲೇ
ಈ ಮಾತು ಕೇಳಿದಾಗ ಮನ ಮೊಗ್ಗಾಗಿ ಹೋಯಿತಿಲ್ಲೇ...."
ಈ ಹಾಡು ಬಹಳ ಸೇರುವುದು.!!
ಚಿ.ಉ.ಶಂ ಗೆ, ಸಂಗೀತಂ ಶ್ರೀನಿವಾಸ? ಗೆ ನನ್ನಿ!!
ಅಶೋಕ,
ನಿಮಗಾವುದು ಸೇರುವುದು(ಇಷ್ಟ?)?
======================================
Re: ಅರಿಸಮಾಸ
ಮಹೇಶ್‍ಜಿ,
ಒರೆಬಂಧ ಅರಿಸಮಾಸ ದೋಷವೇ?ಯಾಕೆ?
ಕನ್ನಡ ಮತ್ತು ಸಂಸ್ಕೃತ ಮಿಶ್ರವಾಗುತ್ತೆ ಎಂದೇ? ವ್ಯಾಕರಣ ಗೋಕರ್ಣ ನನಗೆ!
ಬಿಸಿ ಬಿಸಿ ಕಜ್ಜಾಯ----ಹಾವಿನ ಹೆಡೆ ಚಿತ್ರದ್ದು ಅನ್ನಿಸುತ್ತೆ--ಚುರುಕಾಗಿ ತಮಾಷೆಯಾಗಿದೆ.
Re: ಅರಿಸಮಾಸ
ಅಶೋಕ ಕುಮಾರ
ಮಹೇಶ್‌ಜಿ, ಬೇಡಪ್ಪ.. ಬಿರಿ ಮಹೇಸ/ಮಹೇಶ ಅಂತ ಕರೆಯ್ರಿ. ( ನನಗೆ ಶ್ರೀ, ಶ್ರೀ ಮಾನ್, ಜೀ ಮುಂತಾದವು ಸೇರದು )...
.
.
.
ಅರಿಸಮಾಸ ಈಗ ದೋಶವಲ್ಲ.....
ಹೃದಯಬೇನೆ, ಬಿಳಿಗಮಲ, ತುಂಬುಕೇಶ ಇವೆಲ್ಲ ಅರಿಸಮಾಸಗಳು( ಹಿಂದೆ ಇವು ದೋಶ, ಈಗಲ್ಲ )
.
..
ಹಾವಿನ ಹೆಡೆಯ
"ಬಿಸಿ ಬಿಸಿ ಕಚ್ಚಾಯ" ನನಗೂ ಬಹಳ ಸೇರುತ್ತೆ. ಅದರಲ್ಲಿ ಬರತನಾಟಿಯದಂತೆ ರಾಜ್ ಕುಣಿದು, ಹೊಡೆದಾಡುವುದು ಬೊಂಬಾಟ್!!
======================================