ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸುದ್ದಿ, ಸಮಾಚಾರ

ಹೊಸಾಆಆಆಆಆಆಆ ಚರ್ಚೆ ಮಾಡ್ತೀರಾ? ತಾಕತ್ತಿದ್ರೆ!!! ಹೂಹ್ಹಾಹ್ಹಾಹ್ಹಾಆಆಆಆಆಆ!

April 13, 2007 - 10:18pm — ರಘುನಂದನ

ನಾನು ಸಣ್ಣೋನಿರೋವಾಗ ದೆವ್ವಗಳನ್ನ ನೋಡಿದ್ದು ನೆನಪಿದೆ! ನಿಜವಾಗ್ಲೂ. ದೆವ್ವಗಳಿರಬಹುದೆನ್ನುವ ನಂಬಿಕೆಯನ್ನು ಬಲಗೊಳಿಸುವ ಹಲವಾರು ಘಟನೆಗಳಿಗೂ ನಾನು ಸಾಕ್ಷೀ"ಭೂತ"ನಾಗಿದ್ದೇನೆ. ನಿಮ್ಮ ಜೀವನದಲ್ಲೇನಾದ್ರೂ ಈ ತರಹದ ಘಟನೆಗಳು ನಡೆದಿದ್ರೆ ಹೇಳಿ ನೋಡೋಣ! ಆಮೇಲೆ ನಾನೂ ನನ್ನ ಅನುಭವಗಳೊಂದೆರಡನ್ನು ಇಲ್ಲಿ ವಿವರಿಸುವೆ. ದೆವ್ವಗಳಿಲ್ಲವೆನ್ನುವವರೂ "ಅರೆರೆ! ಹೌದಲ್ವಾ!" ಎಂದು ತಮ್ಮ ನಂಬಿಕೆಯ ಮೇಲೆಯೇ ಅಪನಂಬಿಕೆಯನ್ನು ಮೂಡಿಸಿಕೊಳ್ಳದೇ ಇರಲಾರರು. ಹ್ಞೂಂ! ನಿಜವಾಗ್ಲೂ. ಟೈಮು ಸಿಕ್ಕಾಗ ಬರೀತೇನೆ. ಅಂದ ಹಾಗೆ! ಈ ಚರ್ಚೆಯ ದಾರವನ್ನು ಯಾವ ವಿಭಾಗದಲ್ಲಿ ಪೋಣಿಸಲಿ ಎಂಬುದೇ ಗೊತ್ತಾಗಲಿಲ್ಲ. ಕೆಲವೊಮ್ಮೆ ದೆವ್ವದ ಕಥೆಗಳು ಹೈತುಕರಿಗೆ ಹಾಸ್ಯವೆಂದು ಕಾಣಿಸಬಹುದಾದ ಅಂಶವಿರುವುದರಿಂದ ಆ ವರ್ಗಕ್ಕೇ ಸೇರಿಸಿಬಿಟ್ಟರೆ ಹೇಗೆ? ಅನ್ನಿಸಿತು. ಆದರೆ ಎಷ್ಟೇ ಪರಿಣಾಮಕಾರಿಯಾಗಿ ಬರೆದರೂ ಹಾಸ್ಯವೆನ್ನು ಶಿರೋನಾಮೆಯಡಿಯಲ್ಲಿಯೇ ಸೇರಿಸಿರುತ್ತೇನಾದ್ದರಿಂದ ಯಾರೂ ಹೆದರದಿರುವ "ಹೆದರಿಕೆ" ಇರುವುದರಿಂದ ಸುದ್ದಿ ಸಮಾಚಾರವೆನ್ನುವ ವರ್ಗಕ್ಕೆ ಸೇರಿಸಿದ್ದೇನೆ. ಲೇಖನದಲ್ಲಿ(?) ಅದೇನು ಸುದ್ದಿಯಿರಬಹುದೋ ಏನು ಸಮಾಚಾರವೋ? ಆ ಭೂತಗಳಿಗೇ ಗೊತ್ತಾಗಬೇಕು. ನಾಡಿಗರು ದೆವ್ವದ ಕಥೆಗಳಿಗೆ ಅಥವಾ ಭಯಾನಕ ಚರಿತೆಗಳಿಗೊಂದು ಸೆಕ್ಷನ್ನು ಮಾಡಿದರೆ ಅಲ್ಲಿ ಸೇರಿಸಬಹುದೇನೋ. ರಘುನಂದನ ಶ್ರೀ.ಶ.

‹ ಗೂಗಲ್ ನಲ್ಲಿ ಬ್ಲಾಗ್ ಹುಡುಕಾಟ ಕನ್ನಡದಲ್ಲಿ ಅಫಿಡವಿಟ್ ಮಾಡಿಕೊಡುವುದಿಲ್ಲವೇ. ›
  • ಸುದ್ದಿ, ಸಮಾಚಾರ
~.~
  • Login or register to post comments
  • 471 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 14, 2007 - 5:03pm — suresh_k

Re: ಹೂಹ್ಹಾಹ್ಹಾಹ್ಹಾಆಆಆಆಆಆ!

suresh_k's picture

ನನಗೆ ದೆವ್ವಗಳನ್ನು ನೋಡಿದ ನೆನಪಿಲ್ಲ. ಆದರೆ ಒಂದು ಘಟನೆ ನೆನಪಿಗೆ ಬರುತ್ತಿದೆ. ನಾನಾಗ ನನ್ನಜ್ಜನ ಮನೆಯಾದ ಶಿರಸಿಯಲ್ಲಿ ಏಳೋ ಎಂಟನೆಯದೋ ಕ್ಲಾಸಿಗೆ ಹೋಗುತ್ತಿದ್ದೆ. ಒಂದು ದಿನ ನನ್ನ ದೊಡ್ಡ ಮಾವನಿಗೆ- ಅವನನ್ನು ನಾವು ಕರೆಯುವುದು ಮೀಸೆ ಮಾವ ಎಂದು- ಏನೋ ಆಯಿತು. ಏನಾಯಿತು ಎಂದರೆ, ಮನುಷ್ಯ ಸ್ವಲ್ಪ ವಿಚಿತ್ರವಾಗಿ ವರ್ತಿಸಲು ಶುರು ಮಾಡಿದ್ದ. ಜ್ವರವಾಗಲೀ ಮೈಕೈ ನೋವಾಗಲೀ ಅಲ್ಲ, ಆದರೂ ಏನೋ ಒಂಥರಾ ಆಗುತ್ತಿದೆ ಎನ್ನುತ್ತಿದ್ದ. ಆಗೆಲ್ಲಾ ಸುಖಾಸುಮ್ಮನೆ ಇದೆಲ್ಲ ಭೂತ ಪ್ರೇತಗಳ ಕಾಟ ಎಂಬ ತೀರ್ಮಾನಕ್ಕೆ ಬಂದುಬಿಡುತ್ತಿದ್ದ ನನ್ನಜ್ಜ, ಒಂದು ತೆಂಗಿನಕಾಯಿಯನ್ನು ತಂದು ಮೀಸೆ ಮಾವನ ತಲೆಯ ಸುತ್ತ ಮೂರು ಬಾರಿ ಸುಳಿದು `ಛೀ' ಎಂದು ಹೂಂಕರಿಸಿದ. ಆ ಹೊತ್ತಿಗಾಗಲೇ ಮೀಸೆ ಮಾವನ ಕಣ್ಣುಗಳು ಅಗಲವಾಗಿ, ಮೂಗಿನ ಹೊಳ್ಳೆಗಳು ಹಿರಿದಾಗಿ ತೆರೆದುಕೊಂಡು, ಭುಸುಗುಡುತ್ತಾ `ಆ' ಎಂದು ವಿಕಾರವಾಗಿ ಕಿರುಚಿಕೊಂಡ. ಹಾಗೆ ಕಿರುಚಿಕೊಂಡ ಸನ್ನಿವೇಶ ಹೇಗಿತ್ತೆಂದರೆ ಆತನ ಮುಖದ ಮೇಲೆ ನಿಜಕ್ಕೂ ಪ್ರೇತ ಕಳೆ!

ಆವತ್ತೇ ರಾತ್ರಿ ನನ್ನ ಚಿಕ್ಕ ಮಾವನ ಜೊತೆ ನಾನು ಬೇರೆಲ್ಲೋ ಹೋಗಬೇಕಿತ್ತು. ರಾತ್ರಿ ದಾರಿಮಧ್ಯೆ ಈ ಘಟನೆ ನೆನಪಾಗಿ ಹೆದರಿಕೆಯೂ ಶುರುವಾಯಿತು. ನನ್ನ ಚಿಕ್ಕಮಾವ ಆ ಘಟನೆಯನ್ನು ನೋಡಿದ್ದರಿಂದ ಅವನ ಬಳಿ ಕೇಳಿದೆ- `ನಿಜಕ್ಕೂ ಅವನ ಮೈಮೇಲೆ ಭೂತ ಬಂದಿತ್ತಾ?'

ಅವನು ನಗುತ್ತಾ ಹೇಳಿದ- `ಅದೆಲ್ಲಾ ನಾಟಕ!'

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇಂದಿನ ಸುದ್ದಿ...!
  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
  • ನೀಳ್ಗತೆ
  • ಬೈಟೊ ಕಾಫಿ !!! - ೧
  • ಮುಕ್ತಾಯ
Syndicate content

ಲೇಖಕರು

ರಘುನಂದನ's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ಗೂದೆ ಹಣ್ಣು
  • ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ಕನ್ನಡದಲ್ಲಿ ಓಸಿಆರ್‍ ಇದೆಯೇ?
  • ಪೊನ್
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು


ಏನೇನೋ ನಡೆದಿಹವು ವಿಜ್ಞಾನ ಸಂಧಾನ ।
ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ।।
ತಾನೊಡರ್ಚಿದ ಹೊನ್ನರಸವೆ ನರನ ಕೊರಳ್ಗೆ ।
ನೇಣಾಗಿಹುದು ನೋಡು - ಮರಳ ಮುನಿಯ ।।

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator