ರಾಷ್ಟ್ರ ರಾಜಕೀಯದ ಅತ್ಯಂತ ಗಂಭೀರ ಪ್ರಕ್ರಿಯೆಯಾದ ರಾಷ್ಟ್ರಪತಿ ಚುನಾವಣೆ ಸಂಬಂಧದಲ್ಲೇ ರಾಜಕೀಯ ರಾಡಿ ಉಂಟಾಗಿದೆ. ಅದರಲ್ಲೂ ದೊಡ್ಡ ಗಂಟಲು, ರಾಷ್ಟ್ರ ಮಟ್ಟದಲ್ಲಿ ಕ್ಷುಲ್ಲಕವೆನಿಸಬಹುದಾದ ಪ್ರಾದೇಶಿಕ ಪಕ್ಷಗಳದ್ದು! ದೊಡ್ಡ ಪಕ್ಷಗಳು ತಮ್ಮ ನಿರ್ವೀರ್ಯತೆಯಿಂದಾಗಿ ಇವುಗಳನ್ನು ಅನಿವಾರ್ಯ ಮಾಡಿಕೊಂಡಿವೆ! ನಮ್ಮ ಘನತೆವೆತ್ತ ಪ್ರಜಾಸತ್ತೆಗೆ, ಇದರಿಂದಾಗಿ, ಮುಂದೆ ವಿವಾದಿತ ರಾಷ್ಟ್ರಪತಿಯವರೊಬ್ಬರು ದೊರಕಿಕೊಂಡರೂ ಅಚ್ಚರಿಯಿಲ್ಲ!
ರಾಜ್ಯಕ್ಕೆ ರಾಜ್ಯಪಾಲರಿದ್ದಂತೆ, ದೇಶಕ್ಕೆ ರಾಷ್ಟ್ರಪತಿ. ರಾಷ್ಟ್ರಪತಿಯಾದವರು ಒಬ್ಬ ರಾಜ್ಯಪಾಲರಂತೆಯೇ ಆತಿರೇಕಕ್ಕೆ, ಅದು ನ್ಯಾಯಸಮ್ಮತವೇ ಇರಬಹುದು, ಹೋಗುವುದಿಲ್ಲವೆಂಬ ಖಾತರಿಯಾರೂ ಏನು? ಇದು ಆಗಲಾರದ್ದು ಅಲ್ಲ ಎನ್ನುವುದಕ್ಕೆ ಕರ್ನಾಟಕವೇ ಇತ್ತೀಚಿನ ಉದಾಹರಣೆಯಾಗಿದೆ!
ಇಂಥೊಬ್ಬ ರಾಷ್ಟ್ರಪತಿ ಸಂವಿಧಾನ ಮುಖ್ಯರಾಗಿ, ಸಂಸತ್ತಿನ ಬಗ್ಗೆಯೇ ಹಗುರವಾಗಿ ಮಾತನಾಡುವ, ಅದೂ ಸಮರ್ಥನೀಯವೇ ಇರಬಹುದು,' ಅಣ್ಣಾ ತಂಡದ' ಚಿಂತಕರಂಥವರು ಮೇಲುಗೈ ಅದಾಗ, ನಮ್ಮ ಸಂಸದೀಯ ಪ್ರಜಾತಂತ್ರದ ಅವಸ್ಥೆ ಏನಾಗಬಹುದು?
ಹೀಗಾದಿರಲೆಂದು, ಚುನಾವಣಾ ಆಯೋಗಕ್ಕೆ, ನ್ಯಾಯಾಂಗಕ್ಕೆ, ಕಟ್ಟಕಡೆಗೆ ಆ ದೇವರಿಗೆ ಮೊರೆಯಿಡೋಣವೇ?!
ರಾಷ್ಟ್ರಪತಿ ಚುನಾವಣೆ ಮತ್ತು ರಾಜಕೀಯ ಘನತೆ
June 15, 2012 - 11:13am
Forums:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಉ: ರಾಷ್ಟ್ರಪತಿ ಚುನಾವಣೆ ಮತ್ತು ರಾಜಕೀಯ ಘನತೆ
ದಿವಾಕರ್ ಅವ್ರೆ-
ನಿಮ್ಮ ಅನಿಸಿಕೆ ಸತ್ಯ...
ದೇಶದ ಅತ್ಯುನ್ನತ ಪದವಿಗೆ ಅದರದೇ ಆದ ಘನತೆ ,ಗೌರವ ಇದೆ, ಈಗ ಅದನ್ನು ಗ್ರಾಮ ಪಂಚಾಯತಿ ಅದ್ಯಕ್ಷನ ಸ್ಥಾನಕ್ಕೆ ಇಳಿಸಿರುವರು....:((
ನಮ್ಮ ದೇಶದಲ್ಲಿ ರಾಸ್ತ್ರಪತಿಗೆ ಇರುವ ಅಧಿಕಾರ ಆಸ್ಟಕ್ಕಸ್ಟೆ -
ಸರ್ವಸಮ್ಮತ-ಒಮ್ಮತದ ಅಭ್ಯರ್ಥಿ ನಮ್ಮ ದೇಶದಲ್ಲಿ ನಾವ್ ನಿರೀಕ್ಷಿಸದೇ ಇರೋದೇ ಒಳ್ಳೆಯದು...!!
ಸಧ್ಯದ ಬೆಳವಣಿಗೆಗಳು ಹೇಗಿವೆ ಅಂದ್ರೆ- ಬಾಲವೇ .....ಯನ್ನು ಆಡಿಸಿದಂತೆ... :())) (ಪ್ರಾದೇಶಿಕ ಪಕ್ಷಗಳು- ರಾಷ್ಟ್ರೀಯ ಪಕ್ಷಗಳನ್ನು ಕುಣಿಸುವುದು..!!)
ನೀವ್ ಬರೆವ ಬರಹಗಳು ಚಿಕ್ಕವೇ ಆಗಿದ್ದರೂ
ವಿಚಾರ ಪೂರ್ಣ- ಸಕಾಲಿಕ ಆಗಿರುತ್ತವೆ...
ಶುಭವಾಗಲಿ...
\|/
ಉ: ರಾಷ್ಟ್ರಪತಿ ಚುನಾವಣೆ ಮತ್ತು ರಾಜಕೀಯ ಘನತೆ
ತಾವು ಓದಿ, ಅಭಿಪ್ರಾಯವನ್ನು ಅನುಮೋದಿಸಿದ್ದೇ ಒಂದು ದೊಡ್ಡ "ಶುಭ". ನನ್ನ ಬರಹಗಳು ಚಿಕ್ಕವಾಗಿರುವುದು "ಕಸಬುದಾರಿಕೆ". ನಾನೊಬ್ಬ ರೇಡಿಯೋ ಜರ್ನಲಿಸ್ಟ್. ಹೀಗಾಗಿ ಹೆಚ್ಚುವರಿ ಅಕ್ಷರಗಳಿಂದ ಉಸಿರು ವ್ಯರ್ಥ ಮಾಡಿಕೊಳ್ಳುವುದಕ್ಕೆ ಅವಕಾಶವಿರುವುದಿಲ್ಲ. ಇದು ನನ್ನ ವೃತ್ತಿ ಸಂಸ್ಕಾರ. ಇದನ್ನು ಹೀಗಳೆಯುವವರೇ ಹೆಚ್ಚು. ತಾವು ಹಾಗೆ ಮಾಡಲಿಲ್ಲವಾಗಿ ಆಭಾರಗಳು.
ಉ: ರಾಷ್ಟ್ರಪತಿ ಚುನಾವಣೆ ಮತ್ತು ರಾಜಕೀಯ ಘನತೆ
ಮುಂದೆ ಬರುವ ರಾಷ್ಟ್ರಪತಿಗಳಿಗಿಂತ ಈಗ ಇದ್ದವರು ಅದು ಹೇಗೆ ಬಂದರು ಎನ್ನುವುದು ಅಚ್ಚರಿಯ ಸಂಗತಿ ಅವರ ಮೇಲಿದ್ದ ವಂಚನೆ,ಕೊಲೆ ಇತ್ಯಾದಿ ಅಪವಾದ ನೋಡಿದಾಗ!
ಈ ಪದವಿಗೆ ಹೋಗಲು ಅಧಿಕಾರಾರೂಢ ಪಕ್ಷಕ್ಕೆ, ಅದರ ಮುಖ್ಯಸ್ಥರಿಗೆ ಅದೆಷ್ಟು ಕಪ್ಪಕಾಣಿಕೆಗಳನ್ನು ಕೊಟ್ಟರೋ ಏನೋ!
ಇಲ್ಲವಾದಲ್ಲಿ, ಅವರಿಗೆ ನಿವ್ರತ್ತಿಯ ನಂತರ ಪುಣೆಯಲ್ಲಿ ಸೈನಿಕರಿಗೆ ಮೀಸಲಾದ ಎಕರೆಗಟ್ಟಲೆ ಭೂಮಿ ಕೊಡಲು ಮುಂದಾದದ್ದು ಹೇಗೆ ? ಯಾವ ಆಧಾರದ ಮೇಲೆ?
ಉ: ರಾಷ್ಟ್ರಪತಿ ಚುನಾವಣೆ ಮತ್ತು ರಾಜಕೀಯ ಘನತೆ
ಹೇಳಿ-ಕೇಳಿ ಇದೀಗ ಒಂದು ರಾಜಕೀಯ ಹುದ್ದೆ. ಅದಕ್ಕೆ ಮೇಲಾಟ, ಕೋಲಾಟ, ಹಂಚಾಟ ನಡೆದರೆ ವಿಷಾದವೇಕೆ?! ರಾಷ್ಟ್ರಪತಿಗಳೆಲ್ಲಾ ರಾಧಾಕೃಷ್ಣನ್, ಕಲಾಂ ಸಾಹೆಬರೇ ಅಗಿರಬೇಕೆಂದು ಸಭ್ಯರ ಮನಸ್ಸಿನ ಮಂಡಿಗೆಯಷ್ಟೆ!