June 26, 2012 - 4:35pm
ಪ್ರವಾದಿ ಮುಹಮ್ಮದ್ {ಸ} ಹೇಳಿದರು
" ಒಬ್ಬ ಸತ್ಯವಿಶ್ವಾಸಿಯು ಹಸಿದಿರುವ ಇನ್ನೊಬ್ಬ ಸತ್ಯವಿಶ್ವಾಸಿಗೆ ಉಣಬಡಿಸಿದರೆ ಅಲ್ಲಹ್ನು ಪುನರುಥಾನ ದಿನಾಅತನಿಗೆ ಸ್ವರ್ಗದ ಆಹಾರವನ್ನು ಉಣಬಡಿಸುವನು. ಒಬ್ಬ ಸತ್ಯವಿಶ್ವಾಸಿಯು ದಾಹದಿಂದ ನರಳುತ್ತಿರುವ ಓರ್ವ ಸತ್ಯವಿಶ್ವಾಸಿಗೆನೀರು ಕುಡಿಸಿದರೆ
ಅಲ್ಲಾಹ ನು ಪುನರುತ್ಥಾನ ದಿನ , ಆತನಿಗೆ ಮುದ್ರೆ ಹಾಕಿರುವ ಆತ್ತ್ಯುನ್ನತ ಮಟ್ಟದ ಪಾನಿಯವನ್ನು ಕುಡಿಸುವನು. ಓರ್ವ ಸತ್ಯವಿಶ್ವಾಸಿಯು ಉಡಲು ಬಟ್ಟೆ ಇಲ್ಲದ ಒಬ್ಬ ಸತ್ಯವಿಶ್ವಾಸಿಗೆ ಬಟ್ಟೆ ಉಡಿಸಿದರೆ , ಅಲ್ಲಾಹ ನು ಪುನರುತ್ಥಾನದ ದಿನ ಆತನಿಗೆ ಸ್ವರ್ಗದ ಪೋಶಾಕನ್ನು ಉಡಿಸುವ್ಸ್ನು. { ಪ್ರವಾದಿ { ಸ }
Forums:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಉ: ವಚನ
"ಸತ್ಯವಿಶ್ವಾಸಿ"ಯಾದವನು ಇಂತಹ "ಸಾಧಾರಣ" ಸತ್ಕಾರ್ಯಗಳನ್ನು ಮಾಡುವುದು ಅತ್ಯಂತ ಸಹಜ ಪ್ರಕ್ರಿಯೆ. ಇವುಗಳಿಂದ ಶಾಂತಿ, ಸೌಖ್ಯ, ಸಮಾಧಾನಗಳು ಸಿಕ್ಕುವುದು ಇಲ್ಲಿನ, ಇಂದಿನ ಸಾಮಾಜಿಕ ಜೀವನದ ಅನುಭವವೇ ಅಲ್ಲವೇ? ಅದು ಜಗದೀಶ್ವರನ ಕೃಪೆಯೇ! ಸಾಧಾರಣ ಜೀವಾನುಕಂಪದ ಕಾರ್ಯಗಳು ಅಲಾಹನ ಹೆಸರಿಗೆ ಬರೆದ Post dated chequ ಎಂದು ಭಾವಿಸುವ ಅಗತ್ಯವಿರುವುದಿಲ್ಲ, ಅಲ್ಲವೇ?
ಉ: ವಚನ
ಮಾನ್ಯರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ ಗಳು. ಇಲ್ಲಿ ಅಲ್ಲಾಹ್ ನೆಂದರೆ ಸರ್ವವ್ಯಾಪಿ ವಿಭು ವೆಂದು ಅರ್ಥಬರುವುದು.ಪ್ರತಿಯೊಬ್ಬಮನುಷ್ಯನು ಆ ವಿಭುವಿನ ಅನುಗ್ರಹ ಕ್ಕಾಗಿ, ಮತ್ತು ಪರಲೋಕದಲ್ಲಿ ಮೋಕ್ಷಪಡೆಯುವ ನಿಟ್ಟಿನಲ್ಲಿ ತನ್ನ ತನ್ನ ಪ್ರಯತ್ನ ಮಾಡಲೇಬೇಕಾಗುವುದು. ನಾವು ಮಾಡುವ ಸಣ್ಣ ಸಣ್ಣ ಸತ್ಕ್ರಿಯೆಗಳೂ ಅವನ ಅನುಗ್ರಹಕ್ಕೆ ಪಾತ್ರವಾಗವುದು. ಆದರೆ ಮನುಷ್ಯಸತ್ಯವಿಶ್ವಾಸಿ ಆಗಿರಲೇ ಬೇಕು, ವಿಭುವಿನ ಮೇಲೆ ವಿಶ್ವಾಸ ಹೊಂದಿರಲೇಬೇಕು. ಆಗಮಾತ್ರ ಪರಲೋಕದಲ್ಲಿ ಸಫಲತೆ
ದೊರಕುವುದು.
ಉ: ವಚನ
ನೂರಕ್ಕೆ ನೂರು ಸತ್ಯ, ಮನೀರಹಮದ್ ಅವವರೇ. ಆದರೂ ಮತ-ಧರ್ಮದ ಹೆಸರಿನಲ್ಲಿ ಮಾನವ ಸಮಾಜವನ್ನು ಒಡೆಯುವ ಕೆಲಸ, ಅವ್ಯಾಹತವಾಗಿ, ವ್ಯಸ್ಥಿತವಾಗಿ ನಡೆಯುತ್ತಲೇ ಇರುತ್ತದೆ. ಸತ್ಯವಿಶ್ವಾಸಿ "ಮನುಷ್ಯ"ರ ಕೊರತೆ ಇದಕ್ಕೆ ಕಾರಣ. ಮುಂದೆಂದೇ ಕಾಣಿಸಬಹುದಾದ ನರಕವನ್ನು, ಇಂದೇ-ಈಗಲೇ ಮೈಮೇಲೆಲೆದುಕೊಳ್ಳುತ್ತೇವೆ! ’ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯ’ ಎಂದು ಬಸವಣ್ಣನವರೂ ಎಚ್ಚರಿಸಿದ್ದಾರೆ. ಅಲ್ಲಿನದನ್ನು ಅಲ್ಲಾಹ್ ನೋಡಿಕೊಳ್ಳುತ್ತಾನೆ. ಇಲ್ಲಾದರೂ ಮಾನವತಾ ದ್ರೋಹ, ಸಮಾಜ ದ್ರೋಹ, ಆತ್ಮದ್ರೋಹ, ದೈವದ್ರೊಹ ಮಾಡಿಕೊಳ್ಳದೇ ಬದುಕುವ ಅವಕಾಶವನ್ನೂ ಜವಾಬ್ದಾರಿಯನ್ನೂ ಅವನು ನೀಡಿದ್ದಾನಲ್ಲವೇ? ನಾವಾದರೊ ಅದನ್ನು ಮನಗಾಣದೆ, ’ಪದ್ದಂಭಟ್ಟ, ಕೋಳಿ ಸುಟ್ಟ, ಮನೆ-ಮನೆಗೆಲ್ಲಾ ನಾತ ಕೊಟ್ಟ’ ಎಂಬಂತೆ ಅಡ್ಡಕಸಬಿಯಾಗಿ, ಪಾಪವನ್ನೇ ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಿದ್ದೇವಲ್ಲವೇ? ಏನಂತೀರಿ?
ಉ: ವಚನ
ಹೌದು ಸಹೊದರ ದಿವಾಕರ್ ರವರೆ ,ಈ ಇಹದ ದುರಾಸೆ ಮನುಷ್ಯನನ್ನು ಸತ್ಯಮಾರ್ಗದಿಂದ ಅಸತ್ಯದೆಡೆಗೆ ತಗೆದುಕೊಂಡು
ಹೋಗುತ್ತದೆ, ನಿಜವಾದ ವಿಧಾತನಿಂದ ವಿಶ್ವಾಸವನ್ನು ವಿಮುಖಗೊಳಿಸಿ , ಅವನೊಡನೆ ವಿದ್ರೋಹ ವೆಸಗಿಸಿ, ರಕ್ಕಸ ಪ್ರವ್ರುತ್ತಿಯನ್ನು ಅವನ ಜೀವನಮಾರ್ಗವಾಗಿಸಿ ಬಿಡುತ್ತದೆ. ಈ ಶಡ್ಯಂತ್ರಕ್ಕೆ ಬಲಿಯಾದ ಮನುಷ್ಯ ರಾಕ್ಷಸೀಯ ಗುಣಗಳನ್ನು ಱೂಢಿಸಿಕೊಂಡು , ಸಮಾಜವಿರೋಧಿ ನಡುವಳಿಕೆಗಳಿಗೆ ಬಲಿಯಾಗಿ ಸಮಾಜಕಂಟಕನಾಗಿ, ಇಡೀ ಮಾನವಕುಲವನ್ನು ಪೀಡಿಸುತ್ತಾನೆ. ಇದು ಎಲ್ಲಾ ಸಮುದಾಯಗಳಲ್ಲು ನಾವು ನೋಡಬಹುದಾಗಿದೆ. ಅಲ್ಲವೆ ? ಆದರೆ ಧರ್ಮದಮೇಲೆ ನಂಬಿಕೆ ಇಟ್ಟವರು, ಈ ಲೋಕದ ಒಡೆಯನಮೇಲೆ ವಿಶ್ವಾಸವಿಟ್ಟವರು, ಯಾವತ್ತು ಅವನ ಆಜ್ನೆಯ ವಿರುದ್ಧವಾಗಿ ತಮ್ಮ ಜೀವನವನ್ನು ನಡೆಸುವುದಿಲ್ಲ. ಹಾಗು ಈ ಲೋಕದಲ್ಲಿ ಎಷ್ಟುಸಂಕಷ್ಟಗಳು ಬಂದರು ತಾಳ್ಮೆಯಿಂದ ಅವನನ್ನು ಓಲೈಸುವ ಕಾರ್ಯದಲ್ಲಿ ತಮ್ಮನ್ನುತಾವು ತೊಡಗಿಸಿಕೊಳ್ಳುತ್ತಾರೆ. ಸಮ್ಮಾಜ ಕಂಟಕರಾಗಿ ಬದಕುವುದಿಲ್ಲ. ನಾವು ಅವರನ್ನು ಗುರುತಿಸಬೇಕಷ್ಟೆ.