ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಕೌಂಟು ಎಂದರೇನು ?

April 17, 2007 - 12:16pm — Sunil Jayaprakash

ನಾನು ನಾಲ್ಕು ವಾರಗಳ ಹಿಂದೆ, ಯಶವಂತ ಸರದೇಶಪಾಂಡೆಯವರು ನಡೆಸಿಕೊಟ್ಟ, ರಾಶಿಚಕ್ರ ಎಂಬ ಪ್ರಯೋಗ ನೋಡಿಬಂದಿದ್ದೆ. ಆ ಕಾರ್ಯಕ್ರಮ ನನಗೇನು ಅಷ್ಟು ಹಿಡಿಸದಿದ್ದರೂ, ಕೊನೆಯಲ್ಲಿ ಏನೋ ಗದ್ದಲವಾದಾಗ, ಸರದೇಶಪಾಂಡೆ "ಕೌಂಟ್ನಾಗಿ ಕಟ್ಟಿ ಇಟ್ಕೊಂಡಗ್ ಇಟ್ಕೋರೀ. ಕೌಂಟು ಅಂದ್ರೆ ಏನು ಅಂತ ನಮ್ ಧಾರಾವಾಡ್ ಮಂದೀನ್ ಕೇಳಿ" ಎಂದಿದ್ದರು. ನನಗೆ ಈ ಕೌಂಟು ಅಂದರೆ ಏನು ತಿಳಿಯಲಿಲ್ಲ. ಆದರೆ ಕಳೆದ ಭಾನುವಾರ, ನಾನು ಮೈಸೂರು ಪ್ರವಾಸಕ್ಕೆ ಹೋಗಿ ಹಾಗು ಅಲ್ಲಿ ಮೃಗಾಲಯಕ್ಕೆ ಭೆಟ್ಟಿ ಕೊಟ್ಟ ಮೇಲೆ ಇದರ "ಓವಿ" ಮರ್ಮ ತಿಳಿಯಲು ಸಾಧ್ಯವಾಯಿತು.

ಮೈಸೂರು ಝೂನ ಕೊನೆಯಲ್ಲಿ ಕಾಣಸಿಗುವದು ಹಾವು, ಎಮು, ಬಾತುಕೋಳಿ, ಆಮೆ, ಮೊಸಳೆ ಮುಂತಾದವು. ಈ ಕೊನ್ಕೊನೆಗೆ ಕೆಲವೆಡೆ ಗಟ್ಟಿಯಾದ ಕಬ್ಬಿಣದ ಚೈನು ಅಂತ ನಾವೇನು ಹೇಳ್ತೀವಿ ಅವುಗಳನ್ನು ನೇತು ಹಾಕಿದ್ದಾರೆ. ಇವುಗಳನ್ನು ಬಳಸಿಕೊಂಡು ನಾವು ಮುನ್ನಡೆಯಬೇಕು. ಝೂನಲ್ಲಿ ನಮ್ಮೊಡನೆ ಹೆಜ್ಜೆಹಾಕುತ್ತಿದ್ದ ಒಬ್ಬರು, "ಅದ್ಯಾಕ್ ಕಬ್ಬಿಣದ ಕೌಂಟ್ ನೇತ್ಹಾಕ್ಯಾರೋ, ನಡೀಲಿಕ್ ಭಾಳ್ ತ್ರಾಸ್ ಆಗ್ತೈತಿ ಎಂದರು. ಆ ಊ ಅತ್ತಿಯ (ಹಿಂದ ಆಂಟಿ, ಅಂಕಲ್ ಇಲ್ಲದಿದ್ದಾಗ ಎಲ್ಲರನ್ನೂ ಅತ್ತಿ ಮಾವ ಎನ್ನುವ ಪರಿಪಾಠವಿತ್ತಂತೆ) ಮಾತು ಕೇಳಿದ ಮೇಲೆ ಕೌಂಟು ಎಂದರೆ ಚೈನು, ಸಲಾಕೆ ಎಂಬರ್ಥ ಇರಬಹುದು ಎಂದೆನಿಸಿತು.

ಸಂಪದದಲ್ಲಿರುವ ಗೆಳೆಯರಿಗೆ ಈ ಕೌಂಟು ಪದದ ಬಗ್ಗೆ ಏನಾದರೂ ಹೆಚ್ಚು ತಿಳಿದಿದೆಯೇ ?

‹ ಬೇಕೇ ಬೇಕು ನ್ಯಾಯ ಬೇಕು - ಅಂಬಿಗನ ಆರ್ತನಾದ ಖಡ್ಗಕ್ಕಿಂತ ಲೇಖನಿ ಹರಿತ ›
  • ಸಾಹಿತ್ಯ, ಭಾಷೆ
~.~
  • Login or register to post comments
  • 643 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 17, 2007 - 1:21pm — ASHOKKUMAR

Re: ಕೌಂಟು :ಒಂದು ಊಹೆ

ASHOKKUMAR's picture

ಇದೊಂದು ಸುಮ್ಮನೆ ಊಹೆ. ಭೂಮಿ ಅಳೆಯಲು ಚೈನು ಬಳಸುವ ಕಾರಣ, ಚೈನಿಗೆ ಎಣಿಸಲು-ಕೌಂಟ್, ಎಂಬುದು ಕೌಂಟು ಆಗಿರಬಹುದೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 7, 2007 - 9:42pm — nandakishore_bhat

ಉ: Re: ಕೌಂಟು :ಒಂದು ಊಹೆ

nandakishore_bhat's picture

ಭೂಮಿಯನ್ನು ಅಳೆಯುವ "ಕುಂಟೆ"ಯೂ ಇದೇ ಮೂಲದ್ದಿರಬಹುದಲ್ಲವೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 7, 2007 - 9:57pm — ASHOKKUMAR

ಉ: Re: ಕೌಂಟು :ಒಂದು ಊಹೆ

ASHOKKUMAR's picture

ಭಟ್ರೇ ಸಂಪದಕ್ಕೆ ಸ್ವಾಗತ!
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 26, 2008 - 10:31am — kannadakanda

ಉ: ಕೌಂಟು ಎಂದರೇನು ?

kannadakanda's picture

ಕೌಂಟು=ಕವುಟು=ಕಮುಟು ಅಂದರೆ ಹಾೞಾದ ಶಿಲೀಂಧ್ರ ಬೆಳೆದ ಕಾಯಿಗೆ ಹೇೞುತ್ತಾರೆ. ನನ್ನ ’ಱ’ ಮತ್ತು "ೞ’ ನಲ್ಲಿ ವಿಚಾರಿಸಿದ ಸಾನುನಾಸಿಕ ಮತ್ತು ನಿರನುನಾಸಿಕ ಯ ರ ಲ ವ ಳ ಱ ೞ ಬಗ್ಗೆ ಓದಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನನ್ನಿಂದ ನನಗಾಗಿ ನನಗೋಸ್ಕರವೇ ಆದ ಒಂದು ವೀಕೆಂಡ್
  • ರಶೀಧರ 'ಬ್ಲಾಗಂಬರಿ'
  • ಕನ್ನಡದಲ್ಲಿನ ಒತ್ತಕ್ಷರಗಳು - ಭಾಗ ಎರಡು (೨)
  • ಶತಾವಧಾನಿ ಆರ್. ಗಣೇಶ್ ರವರ ಅಷ್ಟಾವಧಾವ
  • ಗಣಪನಿಗೇಕೆ ಇಪ್ಪತ್ತೊಂದು
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
  • ಬೆಂಗಳೂರು ಸುಧಾರಿಸಲು ಸಹಾಯ ಮಾಡಿ
  • ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
  • ಮುಕ್ತ...ಮುಕ್ತ...ಸಾಹಿತ್ಯ ಬೇಕು...
  • ಕನ್ನಡ ಕಸ್ತೂರಿ
  • Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
  • ಜಿಮೇಲ್ ಕನ್ನಡ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • karaddishivaraj
    ಉ: ವೈದ್ಯನಾರಾಯಣಕಥೆ
    July 6, 2008 - 9:06pm
  • Narayana
    ಉ: ವೈದ್ಯನಾರಾಯಣಕಥೆ
    July 6, 2008 - 8:48pm
  • yuvapremi
    ಉ: ಕನಸಿನ ಕನ್ಯ
    July 6, 2008 - 8:46pm
  • Narayana
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:38pm
  • ಗಣೇಶ
    ಉ: ವೈದ್ಯನಾರಾಯಣಕಥೆ
    July 6, 2008 - 8:09pm
  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:03pm
  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:01pm
  • ಗಣೇಶ
    ಉ: ಶಾಸಕರ ರಾಜೀನಾಮೆ ರಾಜಕೀಯ
    July 6, 2008 - 7:54pm
  • venkatesh
    ಉ: ಬ್ರಹ್ಮ ಕಮಲ
    July 6, 2008 - 7:44pm
  • Chamaraj
    ಉ: ಕನಸಿನ ಕನ್ಯ
    July 6, 2008 - 5:57pm
ಇನ್ನಷ್ಟು


ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಡೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ -- ಮಂಕುತಿಮ್ಮ ।।

— -ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator