ಸಂಶೋಧನೆಗೂ ಆವಿಷ್ಕಾರಕ್ಕೂ ವ್ಯತ್ಯಾಸ ಇದೆಯೇ?
ಸಂಶೋಧನೆ ಮತ್ತು ಆವಿಷ್ಕಾರ ಪದಗಳು ಪರ್ಯಾಯವಾಗಿ ಬಳಕೆಯಾಗುತ್ತವೆ. ಆದರೆ ಅವುಗಳ ನಡುವೆ ಸೂಕ್ಷ್ಮ ವ್ಯತ್ಯಾಸ ಇರುವುದು ನಿಮಗೆ ಗೊತ್ತೇ? ಈ ಸಲ ವಿಚಿತ್ರಾನ್ನ ಅಂಕಣದಲ್ಲಿ ಶ್ರೀವತ್ಸ ಜೋಷಿಯವರು ಅದರ ಬಗ್ಗೆ ಬೆಳಕು ಚೆಲ್ಲಿದ್ದಾರೆ. ನಿಮಗೆ ಅದು ಸರಿಯೆನಿಸಿತೇ ಹೇಳುವಿರಾ? ವಿಚಿತ್ರಾನ್ನ

- Login or register to post comments
- 613 hits
- Email this forum





RSS:
Re: ಸಂಶೋಧನೆಗೂ ಆವಿಷ್ಕಾರಕ್ಕೂ ವ್ಯತ್ಯಾಸ ಇದೆಯೇ?
ಸಂಶೋಧನೆ - ಈಗಾಗಲೇ ಸ್ರುಷ್ಟಿಯಾಗಿರುವ ವಸ್ತು/ವಿಷಯದ ಬಗೆಗೆ ಶೋಧಿಸುವುದು/ಅಧ್ಯಯನ ಮಾಡುವುದು.
ಆವಿಷ್ಕಾರ - ಹೊಸ ವಸ್ತು/ವಿಷಯವನ್ನು ಕಂಡು ಹಿಡಿಯುವುದು/ಸ್ರುಷ್ಟಿಸುವುದು.
ಎರಡೂ ಶಬ್ದಗಳಿಗೂ ತುಂಬಾ ವ್ಯತ್ಯಾಸ ಇರುವುದು ...
ಶ್ರೀವತ್ಸ ಜೋಷಿಯವರ ಲೇಖನ ಚೆನ್ನಾಗಿತ್ತು.
ಅವರ ವಿಚಾರಕ್ಕೆ ನಾನು ಕೂಡ ಸಹಮತಿಸುತ್ತೆನೆ.
ವಿಙ್ಞಾನದಲ್ಲಿ ಹೆಚ್ಚಾಗಿ ಸಂಶೋಧನೆಗಳಾಗೊತ್ತೆ ಹೊರತು,
ಆವಿಷ್ಕಾರ ಅಲ್ಲ.
ಇನ್ನೊಂದು ಅರ್ಥದಲ್ಲಿ ಹೇಳೊದಾದರೇ, ಸತತ ಸಂಶೋಧನೆ ಇಂದಾಗಿ ಒಂದು ಆವಿಷ್ಕಾರ ಆಗೊತ್ತೆ.
Re: ಸಂಶೋಧನೆಗೂ ಆವಿಷ್ಕಾರಕ್ಕೂ ವ್ಯತ್ಯಾಸ ಇದೆಯೇ?
ಇನ್ವೆನ್ಷನ್, ಡಿಸ್ಕವರಿ, ರೀಸರ್ಚ್ ಪದಗಳ ವ್ಯತ್ಯಾಸದ ಕುರಿತು ಜಿ.ಟಿ. ನಾರಾಯಣರಾವ್ ಅವರು ಸುಮಾರು 25 ವರ್ಷಗಳಿಂದಲೂ ಹೇಳುತ್ತಲೇ ಬಂದಿದ್ದಾರೆ. "ಸರಳವಾಗಿ ಬರೆಯುವವರು" ಎಲ್ಲವನ್ನೂ "ಕಂಡುಹಿಡಿದು" ತಿಪ್ಪೆ ಸಾರಿಸಿದರೆ "ಸಂಕೀರ್ಣವಾಗಿ ಬರೆಯುವವರು" ಆವಿಷ್ಕರಿಸುವುದಕ್ಕೋ ಸಂಶೋಧಿಸುವುದಕ್ಕೋ ತೃಪ್ತರಾಗುತ್ತಾರೆ. ಉಪಜ್ಞೆ ಎಂಬ ಮತ್ತೊಂದು ಪದವಿರುವುದು ಹೆಚ್ಚಿನವರಿಗೆ ಗೊತ್ತೇ ಇಲ್ಲವೇನೋ. ಇದು ಸಂಸ್ಕೃತ ಶಬ್ದ. ಅದರಲ್ಲಿ ನನ್ನ ತಪ್ಪಿಲ್ಲ!
ಇಸ್ಮಾಯಿಲ್
ನನ್ನ ಬ್ಲಾಗ್: http://ismail.sampada.net
ಕುರಿತುವುಡುಕು, ಹೊಸವಣ್ಮೆ
ಸಂಶೋದನೆ(discovery) = ಇರುವ ಒಂದು ಸಂಗತಿಯನ್ನು ಕುರಿತು ಹುಡುಕುವುದು,
ಕನ್ನಡದಲ್ಲಿ "ಕುರಿತುವುಡುಕು" ಎನ್ನಬಹುದು
ಅವಿಶ್ಕಾರ(invention) = ಒಂದು ಹೊಸ ಸಂಗತಿ/ಸರಕನ್ನು ಪಣ್ಣುವುದು( ಪಣ್ಣು = to produce )
ಕನ್ನಡದಲ್ಲಿ
"ಹೊಸವಣ್ಮೆ, ಹೊಸವಣ್ಣು" ಅನ್ನಬಹುದು.
======================================