19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

"ಕುಸ್ಮಾ" ಕೊಬ್ಬಿಗೆ ಕೇಂದ್ರ ನೀತಿಯೇ ಕಾರಣ

July 17, 2012 - 10:12am
ಆರ್ ಕೆ ದಿವಾಕರ

 ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಣಗಳ ಸಂಸ್ಥೆ ಒಕ್ಕೂಟ, ರಾಜ್ಯ ಸರಕಾರದ ಸಕ್ರಿಯ ಪ್ರತಿಭಟನೆ - ಬ್ಲ್ಯಾಕ್‌ಮೇಲ್ - ಕೈಗೊಂಡಿದೆ. ಅದು ಕೊಟ್ಟಿರುವ "ನೆಪ"ವೇನೋ, ಸಮಂಜಸವೇ. ಆದರೆ ಸಮಗ್ರ ದೃಷ್ಟಿಯಿಂದ ಇದು ಶಿಕ್ಷಣ ಷಾರ್ಕ್‌ಗಳ "ಕೊಬ್ಬು".
 ಖಾಸಗಿ ಪ್ರಿ-ನರ‍್ಸರಿ, ನರ್ಸರಿ, ಪ್ರಾಥಮಿಕ ಮತ್ತು ಪ್ರೌಢ ಶಾಲಾ ಸಂಸ್ಥೆಗಳು, ಅದರಲ್ಲೂ ಸರಕಾರದ ಅನುದಾನವನ್ನು ತುಚ್ಛೀಕರಿಸುವವು, ಮಾಲ್‌ಗಳಲ್ಲಿನ ಕುರಕು ತಿಂಡಿ ಮಳಿಗೆಗಳಂತೆ ಇಂಗ್ಲಿಷ್ ಮೀಡಿಯಂ ಮತ್ತು ಕೇಂದ್ರದ ಸಿಬಿಎಸ್‌ಇ, ಐಸಿಎಸ್‌ಇ ಸಿಲಬಸ್ ಎನ್ನುವ ಅಶೈಕ್ಷಣಿಕತೆಯನ್ನು ಮಾರಾಟ ಮಾಡುತ್ತವೆ; ಮೂರ್ಖ, ಅಸಂಸ್ಕೃತ, ಶ್ರೀಮಂತ ತಾಯ್ತಂದೆಯರು, ದುಪ್ಪಟ್ಟು, ಮುಪ್ಪಟ್ಟು ಶುಲ್ಕ ತೆತ್ತು, ಹೆಮ್ಮೆ ಪಡುತ್ತಾರೆ.
 ಶಾಲಾಶಿಕ್ಷಣ ಕಡ್ಡಾಯದಂತೆಯೇ ’ಉಚಿತ’ ಸಹ. ಇದು ರಾಜ್ಯ ಸರಕಾರಗಳಿಗೆ "ವಿಧಿ". ಪ್ರಾಥಮಿಕ ಶಿಕ್ಷಣವೆನ್ನುವುದು ಪ್ರಾದೇಶಿಕ ಪರಿಸರಕ್ಕೆ ಮಕ್ಕಳನ್ನು "ಸಂಸ್ಕೃತೀಕರಿಸುವ" ಹಂತ. ಅದು ಸಂಪೂರ್ಣವಾಗಿ, ರಾಜ್ಯ ಸರಕಾರಗಳ ಕೈವಶದಲ್ಲಿಬೇಕು. ಕೇಂದ್ರ ಬೇಕಾದರೆ, ವಿವಿಧ ರಾಜ್ಯ ಸಿಲಬಸ್‌ಗಳ ನಡುವೆ ಪ್ಯಾರಿಟಿ ಸೂತ್ರ ಕಡ್ಡಾಯ ಮಾಡಬಹುದು. ಆದರೆ ಈಗ, ಕೇಂದ್ರದ ಹಸ್ತಕ್ಷೇಪ ಮತ್ತು ಖಾಸಗಿ ಶಾಲೆಗಳಿಗೆ ನೀಡುವ ಪರೋಕ್ಷ ಕುಮ್ಮಕ್ಕಿನಿಂದಾಗಿ,ರಾಜ್ಯಗಳ ಜವಬ್ದಾರಿ ಎಡವಟ್ಟು.
 ಈ ಸನ್ನಿವೇಶದಿಂದಾಗಿ ಪ್ರಾಥಮಿಕ ಶಿಕ್ಷಣದ ಕಡ್ಡಾಯವೂ, ಭಾಷಾವಾರು ಪ್ರಾಂತ ವಿಂಗಡಣೆ ಘನೋದ್ದೇಶವೂ ವ್ಯರ್ಥವಾಗಿಹೋಗಿದೆ.   
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Submitted by partha1059 on

ಇದೆ ಬರಹ ಪ್ರಜಾವಾಣಿಯ ಈ ದಿನದ ವಾಚಕರವಾಣಿಯಲ್ಲಿ ಓದಿದೆ.
ಕುಸ್ಮಾ ಕೊಬ್ಬಿಗೆ ಕೇಂದ್ರದ ನೀತಿ.
ಕಾಲೇಜು ಸ್ಕೂಲ್ ಗಳ ಎಲ್ಲ ಕೊಬ್ಬಿಗು ಸರ್ಕಾರದ ನೀತಿಯೆ ಕಾರಣ‌
ಸರ್ಕಾರದ ಅ ನೀತಿಗೆ ಕಾರಣ???
ಬಹುತೇಕ ಕಾಲೇಜು ಹಾಗು ಸ್ಕೂಲ್ ಗಳು ರಾಜಕಾರಣಿಗಳ ಒಡೆತನದ್ದು
ಅವರ ಕೈಗೆ ಅವರೆ ಏಕೆ ಕೋಳ ತೊಡಿಸುವರು!
=ಪಾರ್ಥಸಾರಥಿ

Submitted by ಆರ್ ಕೆ ದಿವಾಕರ on

ಪಾರ್ಥಸಾರಥಿಯವರೇ,
ವಾಚಕರವಾಣಿಯಲ್ಲೂ ಇದನ್ನು ಗಮನಿಸಿದ್ದಕ್ಕೆ ಧನ್ಯವಾದ. ನಮ್ಮ ಸತ್ತಾ ವ್ಯವಸ್ಥೆಯೇ ರಾಜಕಾರಣಿಗಳ ಸರ್ವಸ್ವವಾಗಿದೆ. ವ್ಯವಸ್ಥೆಯ ಎಲ್ಲಾ ಅಷಡ್ಡಾಳಗಳಿಗೂ ಅವರೇ ಕಾರಣ. ಅವರೇ, ಅವರ ಕೈಗೆ ಬೇಡಿ ತೊಡಿಸಿಕೊಳ್ಳಬೇಕು. ಆದರೆ ಅವರು ಎಂದೆಂದಿಗೂ ಅಷ್ಟು ಉದಾರಿಗಳಲ್ಲ. ’ನೈತಿಕ ಹೊಣೆ ಹೊತ್ತು ಪ್ರಾಯಶ್ಚಿತ್ತ ಮಾಡಿಕೊಳ್ಳಿರಿ’ ಒಬ್ಬೊಬ್ಬರೂ ಇನ್ನೊಬ್ಬರನ್ನು ಕೇಳುವವರೇ!
ಕಾಲೇಜು ಶಿಕ್ಷಣ, ವೃತ್ತಿ ಶಿಕ್ಷಣ, ಉನ್ನತ ಶಿಕ್ಷಣದ ಮಾತು ಬೇರೆ; ಮೂಲಭೂತ ಶಿಕ್ಷಣದ ಮಹತ್ವವೇ ಬೇರೆ. ಮಕ್ಕಳನ್ನು ಮನುಷ್ಯರನ್ನಾಗಿ ಮಾಡುವ ’ಅಭ್ಯಾಸ’, ಇದು. ಕುಟುಂಬ, ಸಮಾಜ, ಪ್ರಾಂತ-ರಾಷ್ಟ್ರ ಸಮುದಾಯದ ಸದಸ್ಯರೆಂಬ ಜಾಗೃತಿ, ಮಕ್ಕಳಲ್ಲಿ ಈ ಹಂತದಲ್ಲೇ ಮೂಡಬೇಕಾದ್ದು. ಶಿಕ್ಷಣದಲ್ಲಿ ’ಸಮಾನತೆ’ ಇದ್ದಾಗ ಮಾತ್ರಾ ಇದು ಸಾಧ್ಯವಾದೀತು. ಇಂಗ್ಲಿಷ್ ಮಾಧ್ಯಮ ಮತ್ತು ಕೇಂದ್ರ ಸಿಲಬಸ್ ಎಂಬುದನ್ನು ಸರಕಾರೀ-ಖಾಸಗೀ ಭೇದಲ್ಲಿ ಮೇಲು-ಕೀಳು, ಧನಿಕ-ತಿರುಕ ಭಾವವನ್ನೇ ಶಾಶ್ವತವಾಗಿ ಬಿತ್ತಿ-ಬೆಳೆಸುತ್ತಾ ಹೋಗುವುದು ಶಿಕ್ಷಣವಲ್ಲ, ಅಸಂಸ್ಕೃತಿ - ಅಜ್ಞಾನ ಮತ್ತು ಉಳ್ಳವರ ಧೂರ್ತತನ.

Submitted by mnsrao on

ಶಿಕ್ಷಣದಲ್ಲಿ ಸಮಾನತೆ ಎಂದರೆ ಶಾಲೆಗಳು, ಉಪಾಧ್ಯಾಯರು ಮತ್ತು ವಿದ್ಯಾರ್ಥಿಗಳು ಎಲ್ಲೆಲ್ಲೂ ಸಗುಟಾಗಿ ನಿಗದಿ ಪಡಿಸಿದ ಕನಿಷ್ಟ ಗುಣಮಟ್ಟದಮೇಲಿರಬೇಕು. ಸರ್ಕಾರಿ ಶಾಲೆಗಳು ಕುಖ್ಯಾತಿ ಪಡೆದಿರುವುದನ್ನು ತಪ್ಪಿಸಿ ಅದರ ಗುಣಮಟ್ಟ ಕಾಯ್ದುಕೊಂಡರೆ ಸರ್ಕಾರ ತನ್ನ ಹೊಣೆಯನ್ನು ನಿಭಾಯಿಸಿದಂತೆ ಆಗುತ್ತದೆ.
ಹೀಗಾದರೆ ಅಮೇರಿಕದಲ್ಲಿರುವಂತೆ ಅವರ ಪ್ರದೇಶದಲ್ಲಿರ ಶಾಲೆಗೇ ಮಕ್ಕಳನ್ನು ಸೇರಿಸುವ ನಿಯಮ ತರಬೇಕು. ಹೊರ ಪ್ರದೇಶದ ಶಾಲೆಗೆ ಸೇರಿಸಿದರೆ ಸರ್ಕಾರಕ್ಕೆ ನಿಯಮ ಮೀರಿದ್ದಕ್ಕೆ ದಂಡದಂತೆ ಹಣವನ್ನು ವಸೂಲು ಮಾಡುವ ಹಕ್ಕಿರಬೇಕು. ಹೀಗೆ ಮಾಡಿದರೆ RTE ಏಕೆಬೇಕು?